ಜೀವನಯಾನ

Thursday, November 14, 2013

ಉದ್ದನೆಯ ಬಾಲದ ಬಾಲದಂಡೆ

ತನ್ನ ಉದ್ದನೆಯ ಬಾಲದಿಂದಲೇ ಗಮನ ಸೆಳೆಯುವ ಸುಂದರ ಹಕ್ಕಿ ಬಾಲದಂಡೆ. ಇದು ಏಷ್ಯಾಖಂಡದ ಪಕ್ಷಿ. ಇದಕ್ಕೆ ಇಂಗ್ಲೀಷ್ನಲ್ಲಿ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಎಂದು ಕರೆಯಲಾಗುತ್ತದೆ. ಟ್ರೆಪ್ಸಿಫೋನ್ ಪ್ಯಾರಡೈಸಿ ಇದರ ವೈಜ್ಞಾನಿಕ ಹೆಸರು. ಈ ಹಕ್ಕಿಯನ್ನು ಸಂಸ್ಕೃತದಲ್ಲಿ ಅರ್ಜುನಕ ಎಂದು ಕರೆಯುತ್ತಾರೆ. ಮೊನಾರ್ಚ್ ಡೇ ಕುಂಟುಂಬಕ್ಕೆ ಸೇರಿವೆ. ಉದ್ದನೆಯ ಬಾಲವೇ ಈ ಹಕ್ಕಿಯ ಪ್ರಮುಖ ಆಕರ್ಷಣೆ. ಹೀಗಾಗಿಯೇ ಇವುಗಳಿಗೆ ಬಾಲದಂಡೆ ಎನ್ನುವ ಅನ್ವರ್ಥಕ ನಾಮ ನೀಡಲಾಗಿದೆ. 



ಬಾಲನೋಡಿ ಮೋಹಗೊಳ್ಳುವ ಹೆಣ್ಣು
ಬರ್ಡ್ ಆಫ್ ಪ್ಯಾರಾಡೈಸ್ ನಂತೆ ಗಂಡು ಹಕ್ಕಿ ಹೆಣ್ಣಿಗಿಂತ ಸುಂದರ. ಗಂಡು ಹಕ್ಕಿಯ ಬಾಲವು ಸುಮಾರು 24 ರಿಂದ 40 ಸೆ.ಮೀ.ನಷ್ಟು ಉದ್ದವಾಗಿರುತ್ತದೆ. ಆದರೆ, ಹೆಣ್ಣು ಹಕ್ಕಿ ಸರ್ವೇ  ಸಾಧಾರಣವಾದ ಚಿಕ್ಕ ಬಾಲ ಹೊಂದಿರುತ್ತದೆ. ಗಂಡು ಹಕ್ಕಿ 2ನೇ ಅಥವಾ ಮೂರನೇ ವರ್ಷದ ಬಳಿಕ ಉದ್ದನೆಯ ಬಾಲವನ್ನು ಪಡೆದುಕೊಳ್ಳುತ್ತದೆ. ಹಾರಾಡುವಾಗ ಉದ್ದನೆಯ ಬಿಳಿಗರಿಗಳು ಗಾಳಿಪಟದ ಬಾಲಂಗೋಚಿಯಂತೆ ಕಾಣುತ್ತವೆ. ಇದರ ಬಾಲ ಉದ್ದವಿದ್ದರೂ ದೇಹ ಗುಬ್ಬಿಯಷ್ಟೇ ಚಿಕ್ಕದಿರುತ್ತದೆ. ಇವುಗಳ ದೇಹ ಕೇವಲ 18ರಿಂದ 21 ಸೆ.ಮೀ.ನಷ್ಟು ಉದ್ದವಿರುತ್ತದೆ. ಗಂಡು ಹಕ್ಕಿಯ ಬಾಲ ಹೆಚ್ಚು ಉದ್ದವಿದ್ದಷ್ಟೂ ಹೆಣ್ಣಿಗೆ ಇಷ್ಟ. ಗಂಡಿನ ಉದ್ದನೆಯ ಬಾಲವನ್ನು ನೋಡಿಯೇ ಹೆಣ್ಣು ಹಕ್ಕಿ ಮೋಹಗೊಳ್ಳುತ್ತದೆ.

ವಲಸಿಗ ಹಕ್ಕಿ:
ಬಾಲದಂಡೆ ಹಕ್ಕಿಗಳಲ್ಲಿ ಪ್ರಮುಖವಾಗಿ 2 ಜಾತಿಗಳಿವೆ. ಒಂದು ಕಡು ನೀಲಿ ತಲೆಯ ನಸುಗೆಂಪು ಬಣ್ಣದ ಹಕ್ಕಿ. ಇನ್ನೊಂದು ಕಪ್ಪು ತಲೆಯ ಸಂಪೂರ್ಣ ಬಿಳಿ  ಮೈಹೊಂದಿರುವ ಹಕ್ಕಿ. ಬಾಲದಂಡೆಯಲ್ಲಿನ ನೀಲಿ ಬಣ್ಣದ ಇನ್ನೊಂದು ಪ್ರಭೇದ ಫಿಲಿಪ್ಪೀನ್ಸ್ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಈ ಹಕ್ಕಿ ರಾಜ ಹಕ್ಕಿ ಎಂದು ಕರೆಸಿಕೊಂಡಿದೆ. ಬಾಲದಂಡೆಗಳಲ್ಲಿ ನಸುಗೆಂಪು ಬಣ್ಣದ ಹಕ್ಕಿ ವಲಸೆಹೋಗುವುದಿಲ್ಲ. ಆದರೆ, ಬಿಳಿ ಬಣ್ಣದ ಪಕ್ಷಿ ಚಳಿಗಾಲದ ಪ್ರಾರಂಭದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ವಲಸೆ ಬರುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಹಿಂತಿರುಗುತ್ತವೆ. ಬಾಲದಂಡೆ ಹಕ್ಕಿಗಳು ಟರ್ಕಿಸ್ತಾನ್, ಮಂಚೂರಿಯಾ, ಶ್ರೀಲಂಕಾ, ಮಲಯಾ, ಕೋರಿಯಾ, ಮಾಲ್ಡೀವ್ಸ್, ಸಿಂಗಾಪುರ ಮತ್ತು ಭಾರತದಾದ್ಯಂತ ಕಂಡುಬರುತ್ತದೆ.


ಏಷ್ಯನ್ ಪ್ಯಾರಡೈಸ್:  ಬರ್ಡ್  ಆಫ್ ಪ್ಯಾರಾಡೈಸ್ ಹಕ್ಕಿಗಳಿಗೂ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ (ಬಾಲದಂಡೆ)ಗಳಿಗೆ ಗುಣ ಮತ್ತು ರೂಪದಲ್ಲಿ ಹಲವಾರು ಸಾಮ್ಯತೆಗಳಿವೆ. ಅವುಗಳಂತೆ ಬಾಲದಂಡೆ ಕೂಡಾ ಆಕರ್ಷಕ ನೃತ್ಯಮಾಡಿ, ಹಾಡನ್ನು ಹಾಡಿ ಹೆಣ್ಣನ್ನು ವಲಿಸಿಕೊಳ್ಳುತ್ತದೆ. ಗೂಡು ಕಟ್ಟುವ ಕ್ರಿಯೆಯಲ್ಲಾಗಲಿ, ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಾಗಲಿ ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳಯತ್ತವೆ.
ಈ ಹಕ್ಕಿಗಳ ಜೋಡಿಯನ್ನು ಹಸಿರು ಕಾಡುಗಳಲ್ಲಿ ಕಾಣಬಹುದು. ಇವು ರೆಂಬೆಗಳ ಕವಲುಗಳ ನಡುವೆ ಹುಲ್ಲುನಾರನ್ನು ಬಳಸಿ ಬಟ್ಟಲಿನಾಕಾರದ ಗೂಡು ಕಟ್ಟುತ್ತವೆ. ಅದರ ಹೊರ ಮೈಗೆ ಜೇಡರ ಬಲೆಯನ್ನು  ಸುತ್ತಿ ಗೂಡನ್ನು ಭದ್ರಪಡಿಸಿಕೊಳ್ಳುತ್ತದೆ. ಫೇಬ್ರವರಿಯಿಂದ ಜುಲೈ ತಿಂಗಳ ಅವಧಿಯಲ್ಲಿ ಕೆಂಪು ಮಿಶ್ರಿತ ಕಂದು ಚುಕ್ಕೆಗಳಿರುವ ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತದೆ.

ಹಾರುವಾಗಲೇ ಬೇಟೆ:
ಬಾಲದಂಡೆ ಹಾರಾಡುವಾಗಲೇ ಹುಳ ಹಪ್ಪಟೆಗಳನ್ನು ಬೇಟೆಯಾಡಿ ಹೊಟ್ಟೆತುಂಬಿಸಿಕೊಳ್ಳುತ್ತದೆ. ಹೀಗಾಗಿ ಇವುಗಳಿಗೆ ಫ್ಲೈಕ್ಯಾಚರ್ ಎನ್ನುವ ಹೆಸರು ಬಂದಿದೆ. ಬಾಲದಂಡೆ ದಿನದಲ್ಲಿ ಹಲವಾರು ಕರೆ, ನದಿಯಲ್ಲಿ ಮುಳುಗಿ ಸ್ನಾನ ಮಾಡಿ ಮೈಯನ್ನು ಕೊಕ್ಕಿನಿಂದ ಸ್ವಚ್ಛಗೊಳಿಸಿಕೊಳ್ಳುತ್ತದೆ. 


 

Thursday, November 7, 2013

ಜೀರುಂಡೆಯ ವಿಶ್ವ ರೂಪ!

ಭೂಮಿಯ ಮೇಲಿನ ಅಸಂಖ್ಯಾತ ಕೀಟಗಳಲ್ಲಿ ಮೂರನೇ ಒಂದರಷ್ಟು ಜೀರುಂಡೆಗಳೇ ತುಂಬಿಕೊಂಡಿದೆ. ಜಗತ್ತಿನ ಸಸ್ಯ ವೈವಿಧ್ಯತೆಗಿಂತ ಹೆಚ್ಚಿನ ವಿಧದ ಜೀರುಂಡೆಗಳಿವೆ ಅಂದರೆ, ಅದರ ಸಂಖ್ಯೆ, ವೈವಿಧ್ಯತೆ, ಬಣ್ಣ, ಆಕಾರ ರೂಪಗಳನ್ನು ಊಹಿಸುವುದೂ ಅಸಾಧ್ಯ. ವಿಜ್ಞಾನಿಗಳು ಗುರುತಿಸದೇ ಇರುವ ಇನ್ನೂ ಲಕ್ಷಾಂತರ ವಿಧದ ಜೀರಂಡೆಗಳು ಭೂಮಿಯ ಮೇಲಿವೆ. ಇವುಗಳಿಗೆ ಹೋಲಿಸಿದರೆ ಭೂಮಿಯ ಮೇಲೆ ಮನುಷ್ಯರ ಸಂಖ್ಯೆ ಏನೇನೂ ಅಲ್ಲ. ನಮ್ಮ ಪರಿಸರವನ್ನು
ಜೀವಂತವಾಗಿರಿಸಲು ಮತ್ತು ಚಲನಶೀಲವಾಗಿರಿಸಲು ಇವುಗಳ ಕೊಡುಗೆ ಅಗಾಧ. ಜೀರುಂಡೆಗಳೆಂದರೆ ಕೇವಲ ಶಬ್ದ ಮಾಡುವ ಕೀಟವೆಂದಲ್ಲ. ಇವು ಹೀಗೆಯೇ ಎಂದು ಹೇಳಲು ಸಾಧ್ಯವೂ ಇಲ್ಲ. ಕಾರಣ ಇವುಗಳ
ಅಗಾಧ ಸಂಖ್ಯೆ ಮತ್ತು ವೈವಿಧ್ಯತೆ.
  




ಕೀಟಗಳ ಸಂಖ್ಯೆಯಲ್ಲಿ ನಂ.1!
ಜೀರುಂಡೆಗಳ 3.5 ಲಕ್ಷ ಪ್ರಭೇದಗಳು ಭೂಮಿಯ ಮೇಲಿದೆ ಎಂದು ಅಂದಾಜಿಸಲಾಗಿದೆ. ಇವು ಕೋಲಿಯೋಪ್ಟೆರಾ ವರ್ಗಕ್ಕೆ ಸೇರಿವೆ. ಇದನ್ನು  ಇಂಗ್ಲೀಷ್ನಲ್ಲಿ ಬಿಟಲ್ ಎಂದು ಕರೆಯುತ್ತಾರೆ. ಆಮೆಗಳಿಗುರುವಂತೆ ಬೆನ್ನಿನ ಮೇಲೆ ಗಟ್ಟಿಯಾದ ಕವಚವಿದೆ. ಏರೋಪ್ಲೇನ್ ಚಿಟ್ಟೆಗಳಿಗಿದ್ದಂತೆ ಇವಕ್ಕೂ ನಾಲ್ಕು ರಕ್ಕೆಗಳಿದ್ದವಂತೆ. ಆದರೆ, ಜೀವವಿಕಾಸದಲ್ಲಿ ಮುಂದಿನ ರೆಕ್ಕೆಗಳು ಕವಚವಾಗಿ ಮಾರ್ಪಟ್ಟಿವೆ. ಈ ಕವಚದ ಕೆಳಗೆ ಇನ್ನೆರಡು ರೆಕ್ಕೆಗಳಿವೆ. ರೆಕ್ಕೆ ಮತ್ತು ಕವಚದ ನಡುವೆ ತಂಪಾದ ಗಾಳಿಯನ್ನು ಸಂಗ್ರಹಿಸಿ ಇಟ್ಟುಕೊಂಡು ಮರುಭೂಮಿಯಲ್ಲಿ ಮತ್ತು ನೀರಿನೊಳಗೆ ಬದುಕುವ ಜೀರುಂಡೆಗಳಿವೆ. ಅನೇಕ ವಿಧದ ಆಹಾರವನ್ನು ರೂಢಿಸಿಕೊಂಡು ಎಲ್ಲ ವಿಧದ ಭೂ ವಾತಾವರಣಕ್ಕೆ ಒಗ್ಗಿಕೊಂಡಿವೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಜೀರುಂಡೆಗಳನ್ನು ಕಾಣಬಹುದು. 
 ಜೀವ ಪರಿಸರದ ಕೊಂಡಿ:
0.25 ಮಿಲಿ ಮೀಟರ್ನಿಂದ 20 ಸೆ.ಮೀ.ವರೆಗಿನಷ್ಟು ಉದ್ದದ ಕಪ್ಪು, ಕೆಂಪು, ಹಳದಿ, ಹೊಳೆಯುವ, ಮಿನುಗುವ ತರಹೇವಾರಿ ಜಾತಿಯ ಜೀರುಂಡೆಗಳಿವೆ. ದೊಡ್ಡ ನೊಣದಂತೆ ಕಾಣುವ ಇವುಗಳ ದೇಹ ತುಂಬಾ ಗಡಸಾಗಿರುತ್ತವೆ. ಚಿಟ್ಟೆಯಂತೆ ಇವುಗಳಲ್ಲೂ ಲಾರ್ವಾವಸ್ಥೆ, ಪೊರೆಹುಳು, ಮತ್ತು ಪ್ರೌಢಾವಸ್ಥೆಯನ್ನು ಕಾಣಬಹುದು. ಪ್ರೌಢಾವಸ್ಥೆ ತಲುಪಿದ ಜೀರುಂಡೆ ಹಾರಲು ಸಮರ್ಥವಾಗಿರುತ್ತದೆ. ಆದರೆ, ಕೆಲವೊಂದು ಜೀರುಂಡೆಗಳು ಹಾರುವ ಸಾಮಥ್ರ್ಯ ಕಳೆದುಕೊಂಡಿರುತ್ತವೆ. ಮೊಟ್ಟೆಯಿಂದ ಹೊರಬಂದ ಲಾರ್ವಾಗಳದ್ದು ತಿನ್ನುವುದಷ್ಟೇ ಕೆಲಸ. ಕೊಳೆತ ಪದಾರ್ಥ ಗಲೀಜು ಇತ್ಯಾದಿಗಳನ್ನು ತಿಂದು ಪರಿಸರಕ್ಕೆ ಉಪಕಾರಿಯಾಗಿವೆ. ಮರ, ಕಾಳು, ಬೆಳೆಗಳನ್ನೆಲ್ಲಾ ತಿನ್ನುವ ಅಪಕಾರಿಗಳೂ ಇವೆ. ಬೆಳೆದು ಜೀರುಂಡೆಗಳಾದ ಬಳಿಕ ಪರಾಗಸ್ಪರ್ಶಕ್ಕೆ ನೆರವಾಗುತ್ತವೆ. ಹಾನಿಕಾರಕ ಕೀಟಗಳನ್ನು ಭಕ್ಷಿಸಿ ರೈತರಿಗೆ ಸಹಕಾರಿಯಾಗಿವೆ.


ಕುತೂಹಲಕಾರಿ ಅಂಶಗಳು:
ಆಸ್ಟ್ರೇಲಿಯಾದಲ್ಲಿ ಜೀರುಂಡೆಗಳ ಸಂಗ್ರಹಾಲಯವಿದೆ. ಅಲ್ಲಿ ಅಂಚೆಚೀಟಿಯಂತೆ ಜೀರುಂಡೆಗಳ ಸಂಗ್ರಹ ಮಾಡುತ್ತಾರೆ. ಅಪರೂಪದನ್ನು ಮಾರುತ್ತಾರೆ. ಕೆಲವೊಂದನ್ನು ಔಷಧಿ ತಯಾರಿಕೆಗೆ ಬಳಸಿದರೆ, ಇನ್ನು ಕೆಲವು ಒಡವೆ ತಯಾರಿಸಲು ಬಳಸಲಾಗುತ್ತದೆ. ಜೀರುಂಡೆಗಳಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ. ಹೀಗಾಗಿಯೇ ಅವು ದೇಹದಿಂದ ಸೃವಿಸುವ ರಾಸಾಯನಿಕಗಳನ್ನು, ಚೀರು ಧ್ವನಿ ಮತ್ತು ಕಂಪನವನ್ನು ಸಂವಹನಕ್ಕಾಗಿ ಬಳಸಿಕೊಳ್ಳುತ್ತವೆ.
ಜೀರುಂಡೆಗಳಲ್ಲಿ ಲೇಡಿಬರ್ಡ್-ಜೀರುಂಡೆ ಅತ್ಯಂತ ಸುಂದರ ಕೀಟ. ಮಿಣುಕುಹುಳುಗಳೂ ಜೀರುಂಡೆಗಳ ಜಾತಿಗೆ ಸೇರಿವೆ.

ಕಾಡಿನಲ್ಲಿ ಸಂಗೀತ ಕಛೇರಿ!
ಸ್ವಲ್ಪ ಕತ್ತಲಾದರೆ, ಮೋಡವಿದ್ದರೆ ಸಾಕು ಜೀರುಂಡೆಗಳು ಕೂಗಲು ಶುರು ಮಾಡುತ್ತವೆ. ತೋಟ, ಕಾಡುಗಳಲ್ಲಿ ಕಿವಿಗಡಚಿಕ್ಕುವಂತೆ ವಿಚಿತ್ರವಾಗಿ ಕೂಗುತ್ತವೆ. ಟಿರಿ..ಟಿರಿ..ಟಿರಿ.. ಎಂದು ಆರಂಭಾವಾಗುವ ಇದರ ಕೂಗು ತಾರಕಕ್ಕೇರಿ ಮತ್ತೆ ನಿಧಾನಗೊಳ್ಳುತ್ತದೆ. ಅನೇಕ ಕೀಟಗಳು ಒಮ್ಮಲೇ ಜುಗಲ್ಬಂದಿ ಸಂಗೀತ ಕಛೇರಿ ನಡೆಸುತ್ತದೆ. ಇವುಗಳ ಕೂಗು ಕೆಲವರಿಗೆ ಕಿರಿಕಿರಿ. ಹೆಚ್ಚುಹೊತ್ತು ಕೇಳುವುದು ಕರ್ಕಶವೆನಿಸುತ್ತದೆ. 




Wednesday, October 30, 2013

ಮರಕ್ಕೆ ರಂಧ್ರ ಕೊರೆಯುವ ಮರಕುಟಿಕ!

ಕಾಡಿನಲ್ಲಿ ಕಟ್ಕಟ್ಕಟ್...ಎನ್ನುವ ಹೊಲಿಗೆಯಂತ್ರದ ಶಬ್ದ ಕೇಳಿಸಿದರೆ, ಅದು ಮರಕುಟಿಕದ್ದೇ ಪಕ್ಕಾ. ಇತರೆಲ್ಲಾ ಹಕ್ಕಿಗಳು ಕಸಕಡ್ಡಿಗಳಗೂಡಿನಲ್ಲಿ ಮರಿಗಳನ್ನು ಇಟ್ಟರೆ, ಮರಕುಟಿಕ ಮರದ ಪೊಟರೆಯಲ್ಲಿ ಮರಿಮಾಡುತ್ತದೆ. ಈ ಕಾರಣಕ್ಕಾಗಿ ಇವು ಮರದಲ್ಲಿ ರಂಧ್ರ ಕೊರೆಯುವುದು. ಮರಕುಟಿಕ ಸೆಕೆಂಡಿಗೆ 20 ಬಾರಿ ಮರಕ್ಕೆ ಕೊಕ್ಕಿನಿಂದ ಹೊಡೆಯಬಲ್ಲದು. ಮರಕುಟಿಕ ರಂಧ್ರಕೊರೆಯುವಾಗ ಗಂಟೆಗೆ 18 ಕಿ.ಮೀ.ವೇಗದಲ್ಲಿ ಕೊಕ್ಕನ್ನು ಬಡಿಯುತ್ತದೆ. ಇವು ಎಷ್ಟೇ ಜೋರಾಗಿ ಕೊಕ್ಕನ್ನು ಕುಟ್ಟಿದರೂ ಅದಕ್ಕೆ ತಲೆನೋವು ಬರುವುದಿಲ್ಲ. ತಲೆಯಲ್ಲಿನ ಗಾಳಿ ಚೀಲಗಳು ಹೊಡೆತದಿಂದ ಮಿದುಳಿಗೆ ಏಟಾಗದಂತೆ ತಡೆಯುತ್ತದೆ.
 ದಿನವೊಂದಕ್ಕೆ 8 ಸಾವಿರದಿಂದ 12 ಸಾವಿರ ಬಾರಿ ಮರಕ್ಕೆ ಕೊಕ್ಕನ್ನು ಬಡಿಯುತ್ತದೆ ಮರಕುಟಿಕ!


ಸತ್ತ ಮರಕ್ಕೆ ಕೊಕ್ಕಿನ ಏಟು!

ಮರಕುಟಿಕ ಒಣಗಿದ ಮರಗಳಲ್ಲಿ ಮಾತ್ರ ಪೊಟರೆ ಕೊರೆಯುತ್ತದೆ. ಇವು ಪೊಟರೆ ಕೊರೆದ ಬಳಿಕವೂ ಅದು ಹೆಣ್ಣಿಗೆ ಇಷ್ಟವಾಗದಿದ್ದರೆ ಮತ್ತೊಂದು ಪೊಟರೆ ಕರೆಯುತ್ತದೆ. ಪೊಟರೆಯಲ್ಲಿ ಮರಿಮಾಡಿ ಅವು ಬೆಳೆದು ದೊಡ್ಡದಾಗುತ್ತಿದ್ದಂತೆ ಸತ್ತ ಮರವನ್ನು ತ್ಯಜಿಸುತ್ತದೆ. ವರ್ಷ ವರ್ಷವೂ ಹೊಸದಾದ ಗೂಡನ್ನು ನಿಮರ್ಿಸುತ್ತವೆ. ಇವು ತ್ಯಜಿಸಿದ ಪೊಟರೆಗಳಲ್ಲಿ ಗೂಬೆ, ಬ್ಲ್ಯೂ ಬರ್ಡ್ಸ್, ವ್ರೆನ್ ಮುಂತಾದ ಪೊಟರೆಯಲ್ಲಿ ವಾಸಿಸುವ ಹಕ್ಕಿಗಳು ಬಂದು ನೆಲೆಸುತ್ತವೆ.

ಜಗತ್ತಿನಾದ್ಯಂತ ವಾಸ:

ಮರಕುಟಿಕಗಳಲ್ಲಿ ಸುಮಾರು 183 ಪ್ರಭೇದಗಳಿವೆ. ಕಪ್ಪು, ಬಿಳಿ, ಕೆಂಪು, ಹಳದಿ ಹೀಗೆ ವೈವಿಧ್ಯಮಯ ಬಣ್ಣಗಳಲ್ಲಿ ಕಂಡುಬರುತ್ತವೆ. ಆಸ್ಟ್ರೇಲಿಯಾವನ್ನು  ಹೊರತುಪಡಿಸಿ ಜಗತ್ತಿನಾದ್ಯಂತ ವಿವಿಧ ಮರಕುಟಿಕ ಸಂತತಿ ಕಂಡುಬರುತ್ತದೆ. ಕನರ್ನಾಟಕದ ಪಶ್ಚಿಮ ಘಟ್ಟದಲ್ಲಿ ಸುವರ್ಣ ಬೆನ್ನಿನ ಮರಕುಟಿಕವನ್ನು ಕಾಣಬಹುದು. 

ಉದ್ದನೆಯ ಬಲಶಾಲಿ ಕೊಕ್ಕು:

ಮರಕುಟಿಕಗಳು ಮರವನ್ನು ಕೊರೆಯಲು ಅನುಕೂಲವಾಗುವ ವಿಶಿಷ್ಟವಾದ ದೇಹ ರಚನೆಯನ್ನು ಹೊಂದಿವೆ. ಮರಕುಟಿಕ ಬಲಶಾಲಿ ಕೊಕ್ಕು ನೇರವವಾಗಿದ್ದು, ತುದಿಯಲ್ಲಿ ಚೂಪಾಗಿದೆ. ಇದರ ಗಟ್ಟಿ ಬಾಲವು ಮರಗಳ ಕಾಂಡವನ್ನು ಆಧಾರಕ್ಕಾಗಿ  ಬಳಸಿಕೊಳ್ಳಲು ಸಹಾಯವಾಗಿದೆ. ಜೋಡಿ ಬೆರಳುಗಳಿರುವ ಪಾದದ ಎರಡು ಬೆರಳು ಹಿಂದಕ್ಕೆ ಮತ್ತು ಎರಡು ಬೆರಳು ಮುಂದಕ್ಕೆ ಇದ್ದು ಮರ ಹತ್ತಲು ಮತ್ತು ಬಿಗಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ಪೊಟರೆ ಕೊರೆಯುವಾಗ ಏಳುವ ಮರದ ಚಕ್ಕೆಗಳನ್ನು ಸ್ವಚ್ಛಗೊಳಿಸಲು ಕೊಕ್ಕಿನ ಮೇಲೆ ವಿಶೇಷ ಗರಿಗಳನ್ನು  ಹೊಂದಿವೆ. ಇವುಗಳ ನಾಲಿಗೆ ಉದ್ದವಾಗಿದ್ದು, ಮರದ ತೊಗಟೆಯ ಮೇಲಿನ ಹುಳಹಪ್ಪಟೆಗಳನ್ನು ಹೆಕ್ಕಿ ತಿನ್ನುತ್ತವೆ. ಹಣ್ಣು ಹಂಪಲುಗಳನ್ನು ಸಹ  ಮರಕುಟಿಕ ಇಷ್ಟಪಡುತ್ತದೆ.

ತನ್ನ ಮರಿಗಳಿಗಾಗಿ ಗೂಡು:

ಸಾಮಾನ್ಯವಾಗಿ ಸಂತಾನೋತ್ಪತ್ತಿಯ ಸಮಯದಲ್ಲಿಯೇ ಮರಕುಟಿಕ ಮರಗಳನ್ನು ಕುಟ್ಟಿ ಗೂಡು ನಿಮರ್ಮಿಸುತ್ತದೆ. ಹುಟ್ಟುವ ಮರಿಗಳಿಗೆ ಅನುಕೂಲವಾಗುವ ಸಲುವಾಗಿ ಹೊಂಡದಂತೆ ಗೂಡನ್ನು ಕೊರೆಯುತ್ತದೆ. ಮರಕ್ಕೆ ರಂಧ್ರಕೊರೆಯಲು ಗಂಡು ಹಕ್ಕಿಗೆ ಹೆಣ್ಣು ಮರಕುಟಿಕವೂ  ನೆರವು ನೀಡುತ್ತದೆ. ಇವುಗಳ ಮೊಟ್ಟೆ ಇಡುವಿಕೆಯನ್ನು  ಹವಾಮಾನಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತದೆ. ಫೆಬ್ರವರಿಯಿಂದ ಜುಲೈ ತಿಂಗಳ ತನಕ ಕಾಡಿನಲ್ಲಿ ಮರಕುಟಿಕದ ಶಬ್ದ ಕೇಳಿಬರುತ್ತದೆ. ಮರಕುಟಿಕ ಜೀವಿತಾವಧಿಯಲ್ಲಿ 10ರಿಂದ 15 ಮರಗಳಿಗೆ ರಂಧ್ರ ತೋಡುತ್ತದೆ.

ಸಂಗಾತಿ ಆಕರ್ಷಿಸಲೂ ಹೌದು!

ಮರಕುಟಿಕ  ಕೇವಲ ಗೂಡು ಕಟ್ಟುವ ಸಲುವಾಗಿ ಮಾತ್ರ ಮರಕುಟ್ಟುವುದಿಲ್ಲ. ಬದಲಾಗಿ  ಸಂವಹನಕ್ಕೂ ಅದೇ ಸಾಧನ. ಪೊಳ್ಳಾದ ಮರಗಳಗನ್ನು ಮತ್ತು ಮರದ ಕೊರಡುಗಳನ್ನು ಕೊಕ್ಕಿನಿಂದ ಕುಟ್ಟಿ ಇನ್ನೊಂದು  ಹಕ್ಕಿಗೆ ಸಂದೇಶ ರವಾನಿಸುತ್ತದೆ. ತನ್ನ ಸಂಗಾತಿಯನ್ನು ಆಕಷರ್ಿಸಲು ಇವು ವಿವಿಧ ವಿಧಾನದಲ್ಲಿ ಮರವನ್ನು ಕುಟ್ಟುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಈ ಕ್ರಿಯೆ ನಡೆಸುತ್ತವೆ. ಮರಕುಟಿಕ ಮರಕುಟ್ಟುವ ಶಬ್ದ ಕಾಡಿನನ ತುಂಬೆಲ್ಲಾ ಕೇಳಿಬರುತ್ತದೆ.
ವಿಪರ್ಯಾಸವೆಂದರೆ,  ಇಂದು ನಗರೀಕರಣದ ಹಾವಳಿಯಿಂದಾಗಿ ಮರಕುಟಿಕಗಳಿಗೆ ಗೂಡು ನಿಮರ್ಮಿಸಲು ಸೂಕ್ತವಾದ ಒಣಗಿದ ಮರಗಳು ಸಿಗುತ್ತಿಲ್ಲ. ಹೀಗಾಗಿ ಸಂತತಿ ಕೊರತೆಯಿಂದ ಮರಕುಟಿಕಗಳ ಸಂಖ್ಯೆ ಕ್ಷೀಣಿಸುತ್ತಿದೆ.

Wednesday, October 23, 2013

ಬರ್ಡ್ಸ್ ಆಫ್ ಪ್ಯಾರಡೈಸ್

 ಸೌಂದರ್ಯಕ್ಕೆ ಇನ್ನೊಂದು ಹೆಸರು ನಂದನವನದ ಪಕ್ಷಿಗಳು. ಇತರ ಎಲ್ಲ ಹಕ್ಕಿಗಿಂತ ಸುಂದರ ಎಂಬ ಖ್ಯಾತಿಗಳಿಸಿವೆ. ಹೀಗಾಗಿ ಇದನ್ನು ಬರ್ಡ್ಸ್ ಆಫ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ. ಇವು ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದ ಪಕ್ಷಿಗಳಾಗಿವೆ. ಗಂಡು ಹಕ್ಕಿಗಳು ಬಣ್ಣ ಬಣ್ಣದ ಗರಿಗಳ ಜೋಡಣೆ ಮತ್ತು ಪುಕ್ಕಗಳ ಗುಚ್ಛಕ್ಕೆ ಹೆಸರುವಾಸಿ. 
ನಸುಗೆಂಪು,  ಹಳದಿ, ಬಿಳಿ, ಹಸಿರು, ನೀಲಿ ಬಣ್ಣದ ಗರಿಗಳಿಂದ ಕಂಗೊಳಿಸುತ್ತವೆ. ಗಂಡು ಹಕ್ಕಿಯ ಬಾಲದಲ್ಲಿ 
ಪತಾಕೆಯಂತಹ ಉದ್ದನೆಯ ಗರಿಗಳಿರುತ್ತವೆ. ಕೆಲವು ಹಕ್ಕಿಗೆ ತಲೆಯ ಮೇಲೂ ಉದ್ದನೆಯ ಜುಟ್ಟು ಇರುತ್ತದೆ. ಆದರೆ, ಹೆಣ್ಣು ಹಕ್ಕಿಗಳ ತಲೆ ಬೋಳಾಗಿದ್ದು, ಆಕರ್ಷಣೀಯವಲ್ಲದ ಬಣ್ಣ ಹೊಂದಿರುತ್ತವೆ.
ಬರ್ಡ್ಸ್ ಆಫ್ ಪ್ಯಾರಡೈಸ್ಗಳಲ್ಲಿ ಹೆಣ್ಣಿಗಿಂತ ಗಂಡೇ ಸುಂದರ! 


  • ಹೆಸರು ಬಂದಿದ್ದು ಹೇಗೆ?

16ನೇ ಶತಮಾನದಲ್ಲಿ ಈ ಹಕ್ಕಿಯನ್ನು ವಿಕ್ಟೋರಿಯಾ ಹಡಗಿನ ಮೂಲಕ ಯೂರೋಪಿಗೆ ತರಲಾಯಿತು. ಈ  ಹಕ್ಕಿಯ ಸೌಂದರ್ಯ ಮತ್ತು ಆಕರ್ಷಕ ಬಣ್ಣಕ್ಕೆ ಮರುಳಾದ ಅಲ್ಲಿನ ಜನರು ಈ  ಹಕ್ಕಿಗೆ ಬರ್ಡ್ಸ್ ಆಫ್ ಪ್ಯಾರಡೈಸ್ ಎನ್ನುವ ಹೆಸರನ್ನಿಟ್ಟರು.
 
  • ಮಳೆ ಕಾಡುಗಳಲ್ಲಿ ವಾಸ:

ಪ್ಯಾರಡೈಸ್ ಸಮೂಹದಲ್ಲಿ ಸುಮಾರು 42 ಪ್ರಭೇದಗಳಿವೆ. ನ್ಯೂಗಿನಿವೊಂದರಲ್ಲಿಯೇ 35 ಪ್ರಭೇದಗಳು ಕಾಣಸಿಗುತ್ತವೆ. ಉಳಿದವು ಪೂರ್ವ ಇಂಡೋನೇಷ್ಯಾ, ಟೋರೆನ್ ಜಲಸಂಧಿಯ ದ್ವೀಪಗಳು, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾದ ವಾಯವ್ಯ ಭಾಗದಲ್ಲಿ ಕಂಡುಬರುತ್ತವೆ. ಇವು 15 ಸೆ.ಮೀಟರ್ನಿಂದ ಒಂದು ಮೀಟರ್ವರೆಗೆ ಉದ್ದವಿರುತ್ತವೆ. ಉಷ್ಣವಲಯದ ಮಳೆ ಕಾಡು ಮತ್ತು ಮಲೆನಾಡಿನ ಗುಡ್ಡಬೆಟ್ಟಗಳಲ್ಲಿ ಮಾತ್ರ ಇವು ಕಾಣಸಿಗುತ್ತವೆ. ಹಣ್ಣನ್ನು ತಿನ್ನಲು ಹೆಚ್ಚು ಇಷ್ಟಪಡುತ್ತವೆ.

  • ಬಣ್ಣದ ಗರಿಗೆ ಭಾರೀ ಬೇಡಿಕೆ:

ನ್ಯೂಗಿನಿ ನಿವಾಸಿಗಳ ಸಾಂಸ್ಕೃತಿಕ ಬದುಕಿನಲ್ಲಿಯೂ ಈ ಹಕ್ಕಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಕಳೆದ 2000 ವರ್ಷಗಳಿಂದ ಪ್ಯಾರಡೈಸ್ ಹಕ್ಕಿಯ ಚರ್ಮ ಮತ್ತು ಗರಿಗಳ ಮಾರಾಟ ನಡೆಯುತ್ತಿದೆ. ಪ್ಯಾರಡೈಸ್ ಹಕ್ಕಿಯ ಸೊಗಸಾದ ಬಣ್ಣದ ಗರಿಗಳನ್ನು ಬಟ್ಟೆ ಮತ್ತು  ವೇಷಭೂಷಣಗಳನ್ನು  ತಯಾರಿಸಲು ಬಳಸುತ್ತಾರೆ. ಹೀಗಾಗಿ ಈ ಹಕ್ಕಿಗಳಿಗೆ ಭಾರಿ ಬೆಲೆ. 
  • ಹೆಣ್ಣನ್ನು ಆಕರ್ಷಿಸಲು ನೃತ್ಯ: 

 ಆಫ್ ಪ್ಯಾರಡೈಸ್ ಹೆಚ್ಚಾಗಿ ಒಬ್ಬೊಂಟಿಯಾಗಿಯೇ ಜೀವನ ಸಾಗಿಸುತ್ತವೆ. ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ಒಂದಾಗುತ್ತವೆ. ಗಂಡು ಹಕ್ಕಿ ತನ್ನ ಆಕರ್ಷಕ ಗರಿಗಳನ್ನು ಪ್ರದರ್ಶಿಸಿ ನೃತ್ಯ ಮಾಡುವ ಮೂಲಕ ಹೆಣ್ಣನ್ನು ವಲಿಸಿಕೊಳ್ಳುತ್ತದೆ. ಕೆಲವೊಮ್ಮೆ ಒಂದು ತಾಸಿಗೂ ಹೆಚ್ಚು ಕಾಲ ನೃತ್ಯಮಾಡುವುದುಂಟು. ಇವುಗಳ ನೃತ್ಯ ಅದ್ಭುತ ನೈಸರ್ಗಿಕ ವಿದ್ಯಮಾನದಲ್ಲೊಂದು. ಹೆಣ್ಣನ್ನು ಆಕರ್ಷಿಸಲು ಗಂಡು ಮಾಡುವ ಚಮತ್ಕಾರಗಳು ಅತ್ಯಂತ ಕುತೂಹಲಕಾರಿ. ಹೆಣ್ಣಿನ ಮುಂದೆನಿಂತು ಅತ್ತಿಂದಿತ್ತ ಕುಪ್ಪಳಿಸುತ್ತ ಗಿರಕಿ ಹೊಡೆಯುತ್ತವೆ. ಬರ್ಡ್ಸ್ ಆಫ್ ಪ್ಯಾರಡೈಸ್ ಎತ್ತರದ ಮರಗಳ ಮೇಲೆ ಗೂಡು ಕಟ್ಟುವ ಬದಲು ನೆಲಮಟ್ಟದ ಗಿಡಗಂಟಿಗಳ ಮೇಲೆ ಮೃದುವಾದ ವಸ್ತುಗಳನ್ನು  ಬಳಸಿ ಗೂಡು ಕಟ್ಟಿ ಮೊಟ್ಟೆಯನ್ನು ಇಡುತ್ತವೆ.

  • ಅಳಿವಿನ ಅಂಚಿನಲ್ಲಿವೆ:

ಬರ್ಡ್ಸ್ ಆಫ್ ಪ್ಯಾರಡೈಸ್ಗೆ ನೈಸರ್ಗಿಕವಾಗಿ ಹೆಚ್ಚಿನ ವೈರಿಗಳಿಲ್ಲ. ಆದರೆ, ಮಾನವರ ನಿರಂತರ ಬೇಟೆ ಮತ್ತು ಅರಣ್ಯ ನಾಶದಿಂದ ಇವು ಕಂಗೆಟ್ಟಿವೆ. ಅತ್ಯಾಕರ್ಷಕ ಗರಿಗಳಿಂದ ಕೂಡಿದ ನಂದನವನದ ಪಕ್ಷಿಗಳ ಹಲವು ಪ್ರಭೇದಗಳು ಇಂದು ಅಳಿವಿನ ಅಂಚಿನಲ್ಲಿವೆ.

 

Wednesday, October 16, 2013

ಚಾತಕ ಪಕ್ಷಿ

ಕವಿ ಸಮಯದಲ್ಲಿ ಹೆಚ್ಚಾಗಿ ವಣರ್ಣಿಸಲ್ಪಡುವ ಚಾತಕ ಪಕ್ಷಿ ಕೇವಲ ಕವಿ ಕಲ್ಪಿತ ಪಕ್ಷಿಯಲ್ಲ. ಲೋಕದಲ್ಲಿ ವಾಸ್ತವಾಗಿಯೇ ಇರುವಂಥವು. ಮಳೆಗಾಲ ಆರಂಭಕ್ಕೆ ಇನ್ನು ಸ್ವಲ್ಪ ಸಮಯ ಇದೆ ಎನ್ನುವಾಗ ಈ ಹಕ್ಕಿಗಳು ಒಮ್ಮಿಂದೊಮ್ಮೆಲೇ ಕಾಣಿಸಿಕೊಳ್ಳುತ್ತವೆ. ಮೇ ತಿಂಗಳ  ಕೊನೆ ಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಚಾತಕ ಪಕ್ಷಿಗಳು ಇದ್ದಕ್ಕಿದ್ದಂತೆ ಕಣ್ಣಿಗೆ ಬೀಳುತ್ತವೆ. ದೊಡ್ಡದಾದ ಧ್ವನಿಯಲ್ಲಿ ಇಂಪಾಗಿ ಹಾಡುತ್ತಾ ಮೊದಲ ಮಳೆಯ ಆಗಮನದ ಸೂಚನೆ ನೀಡುತ್ತದೆ. ಚಾತಕ ಪಕ್ಷಿ ಕಾಣಿಸಿತೆಂದರೆ ಮಳೆಯಾಗುತ್ತದೆ ಎಂದೇ ಅರ್ಥ. ಅಷ್ಟು ನಿಖರವಾಗಿ ಇವು ಮಾನ್ಸೂನನ್ನು ಅಳೆಯ ಬಲ್ಲವು. ಹೀಗಾಗಿ ಇದನ್ನು "ಮಾರುತಗಳ ಮುಂಗಾಮಿ" ಎಂದೂ ಕರೆಯುವುದುಂಟು. ಒಮ್ಮೆ ಕಾಣಿಸಿಕೊಂಡು ಮರೆಯಾಗುವ
 ಈ ಪಕ್ಷಿ ಎಲ್ಲರಿಗೂ ಅಷ್ಟಾಗಿ ಪರಿಚಿತವಿಲ್ಲ.



ಪುರಾಣ ಕಾಲದ ಹಕ್ಕಿ
ಚಾತಕ ಎಂಬ ಪದ ಸಂಸ್ಕೃತದಿಂದ ಬಂದಿದ್ದಾಗಿದೆ. ಚಾತಕ ಅಂದರೆ ಕಾಯುವುದು ಎಂದರ್ಥ. ಜಾನಪದದಲ್ಲಿ, ಪುರಾಣದಲ್ಲಿ ಈ ಹಕ್ಕಿಗೆ ವಿಶೇಷ ಸ್ಥಾನವಿದೆ. ಈ ಹಕ್ಕಿಯ ಬಗ್ಗೆ ವೇದ ಕಾಲದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಮಹಾಕವಿ ಕಾಳಿದಾಸನ ಮೇಘದೂತ ಕಾವ್ಯದಲ್ಲಿಯೂ ಚಾತಕ ಪಕ್ಷಿಯ ವರ್ಣಣೆ ಇದೆ.

ಮಳೆ ನೀರನ್ನು ಮಾತ್ರ ಕುಡಿಯುತ್ತವೆ?
ಚಾತಕ; ಕೋಗಿಲೆ ಜಾತಿಗೆ ಸೇರಿದೆ. ಚಾತಕ ಪಕ್ಷಿಗೆ ಇಂಗ್ಲೀಷ್ನಲ್ಲಿ ಪೀಯ್ಡ್ ಕುಕ್ಕೂ ಅಥವಾ ಜಾಕೊಬಿನ್ ಕುಕ್ಕೂ ಎಂದು ಕರೆಯುತ್ತಾರೆ. ಇದು  ಗಾತ್ರದಲ್ಲಿ ಪಾರಿವಾಳಕ್ಕಿಂತಲೂ ಚಿಕ್ಕವು. ಉದ್ದವಾದ ಪುಕ್ಕವಿದೆ. ಮೈ ಬಣ್ಣ ಕೋಗಿಲೆಯಂತೆಯೇ ಕಪ್ಪು. ಕತ್ತಿನ ಕೆಳಭಾಗದಲ್ಲಿ ಬಿಳಿ ಮತ್ತು ಹಳದಿ  ಬಣ್ಣದ ಮಿಶ್ರಣವಿದೆ. ತಲೆಯ ಮೇಲೆ ಬಿಲ್ಲಿನಾಕಾರದ ಪುಕ್ಕವಿದೆ. ಈ ಪುಕ್ಕದಲ್ಲಿ ಯೇ ಮಳೆಯ ನೀರನ್ನು ಹಿಡಿಟ್ಟುಕೊಂಡು ತನ್ನ ದಾಹವನ್ನು ಇಂಗಿಕೊಳ್ಳುತ್ತದೆ. ಹೀಗಾಗಿ ಮೇಲಿಂದ ಬೀಳುವ ಮಳೆಯ ನೀರೇ ಚಾತಕ ಪಕ್ಷಿಗೆ ಆಧಾರ. ನೀರಿಲ್ಲದೆ  ಎಷ್ಟೋ ದಿನಗಳ ತನಕ ಬದುಕುವ ಶಕ್ತಿಯೂ  ಚಾತಕಗಳಿಗೆ ಇವೆ. ಇದು ಮಳೆಯ ನೀರನ್ನು ಮಾತ್ರವೇ ಕುಡಿಯುತ್ತದೆ ಎನ್ನುವ ಪ್ರತೀತಿ. ಚಾತಕ ಭೂಮಿಯನ್ನು ತಾಕದ ನೀರಿಗಾಗಿ ಕಾತರಿಸುವ ಪಕ್ಷಿ. ಅದಕ್ಕೆ ಬೇಕಾದದ್ದು ಮಣ್ಣಿನ ಮೇಲೆ ಬಿದ್ದ ನೀರಲ್ಲ. ಬದಲಾಗಿ ಶುದ್ಧವಾದ ಅಂಬರ ಲೋಕದ ನೀರು ಎನ್ನುವ ನಂಬಿಕೆ.

ಮಳೆಯೊಂದಿಗೆ ಸಂಚಾರ
ಚಾತಕ ವಲಸಿಗ ಹಕ್ಕಿ ಎಂದೇ ಹೆಸರಾಗಿದೆ. ಇವು ಸದಾ ಮಳೆಯೊಂದಿಗೇ ಸಂಚಾರ ಮಾಡುತ್ತಿರುತ್ತವೆ. ಮುಂಗಾರು ಬೀಸುವ ದಿಕ್ಕನ್ನು ಗ್ರಹಿಸಿ ಆ ದಿಕ್ಕಿನತ್ತ ವಲಸೆಹೋಗುತ್ತವೆ.  ವಲಸೆ ಋತುವಿನಲ್ಲಿ ಈ ಹಕ್ಕಿ ಓಮನ್, ಸೌದಿ ಅರೇಬಿಯಾ, ಸೀಶೆಲ್ಸ್ ಗಳಿಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಹಾದು ಮೇ ಮತ್ತು ಜೂನ್ ನಲ್ಲಿ ಭಾರತಕ್ಕೆ ಆಗಮಿಸುತ್ತವೆ.

ಸಂತಾನಕ್ಕಾಗಿ ಭಾರತಕ್ಕೆ ಆಗಮನ
ಚಾತಕ ಪಕ್ಷಿಗಳಲ್ಲಿ ಪ್ರಮುಖವಾಗಿ ಮೂರು ಉಪ ಪ್ರಭೇದಗಳಿದ್ದು, ಕ್ಲೇಮೇಟರ್ ಜಾಕೋಬೈನಸ್ ಪಿಕಾ ಮತ್ತು ಕ್ಲೇಮೇಟರ್ ಜಾಕೋಬೈನಸ್ ಜಾಕೋಬೈನಸ್ ಎಂಬ ಎರಡು ಪ್ರಭೇದಗಳು ಭಾರತದಲ್ಲಿ ಕಂಡುಬರುತ್ತವೆ. ಸಂತಾನೋತ್ಪತ್ತಿಗಾಗಿ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬರುತ್ತದೆ. ಕೋಗಿಲೆಗಳಂತೆ ಇವು ಸಹ ಬೇರೆ ಪಕ್ಷಿಯ ಗೂಡಿನಲ್ಲಿ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತದೆ. ಟರ್ಡ್ ಯ್ಡೆಸ್ ಪಕ್ಷಿಗಳ ನೀಲಿ ಮೊಟ್ಟೆಯನ್ನು ಎಸೆದು ತನ್ನ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಜೂನ್ ಮತ್ತು ಆಗಸ್ಟ್ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಡುತ್ತವೆ. 

Wednesday, October 9, 2013

ಸಾವಿರ ಕಾಲುಗಳ ಸಹಸ್ರಪದಿ!

ಯಾವುದೇ ಪ್ರಾಣಿಗಳಿದ್ದರೂ ಅವುಗಳಿಗೆ ಎಂಟು ಅಥವಾ ಅದಕ್ಕಿಂತ ಹೆಚ್ಚು ಕಾಲುಗಳಿವುದು ಅಪರೂಪ. ಆದರೆ, ಈ ಜೀವಿಯ ಕಾಲುಗಳು ಎಷ್ಟಿವೆ ಎಂದು ಎಣಿಸುವುದೇ ಕಷ್ಟ. ಮುಟ್ಟಿದರೆ ಮುನಿ ಗಿಡದಂತೆ ಇವು ಕೂಡಾ ಯಾರಾದರೂ ಮುಟ್ಟಿದರೆ, ಚಕ್ಕುಲಿಯಂತೆ ದೇಹವನ್ನು ಸುತ್ತಿಕೊಂಡು ಸತ್ತಂತೆ ನಟಿಸುತ್ತವೆ! ಸಹಸ್ರಪದಿಗಳು ಬಹು ಕಾಲುಗಳುಳ್ಳ ಕೀಟಗಳ ಜಾತಿಗೆ ಸೇರಿವೆ. ಹೀಗಾಗಿ ಸಹಸ್ರಪದಿ ಎನ್ನುವ ಹೆಸರನ್ನು ನೀಡಲಾಗಿದೆ. ನಿಜವಾಗಲೂ ಇವು  ಸಾವಿರ ಕಾಲುಗಳನ್ನು ಹೊಂದಿರುವುದಿಲ್ಲ. ಕೆಲವೊಂದಕ್ಕೆ 400ಕ್ಕೂ ಹೆಚ್ಚು ಕಾಲುಗಳಿರುತ್ತವೆ. ಆದರೆ ಯಾವುದಕ್ಕೂ 750ಕ್ಕಿಂತ ಹೆಚ್ಚಿನ ಕಾಲಿರುದಿಲ್ಲ. ಇದನ್ನು ಆಂಗ್ಲ ಭಾಷೆಯಲ್ಲಿ ಮಿಲ್ಲಿಪೀಡ್ ಎನ್ನುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಚೋರಟೆ ಎಂದು ಕರೆದು ರೂಢಿ.


ಮಳೆಗಾಲದಲ್ಲಿ ಬರುವ ಅತಿಥಿ:

ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಡುಬರುವ  ಚಿತ್ರವಿಚಿತ್ರ ಜೀವಿಗಳಲ್ಲಿ ಸಹಸ್ರಪದಿಯೂ ಒಂದು. ರಸ್ತೆ, ತೋಟ, ಮನೆಯಂಗಳ, ಹೀಗೆ ಎಲ್ಲೆಂದರಲ್ಲಿ ನೂರೆಂಟು ಕಾಲುಳಿಂದ ಓಡಾಡುತ್ತಿರುತ್ತವೆ. ಉದ್ದವಾದ ಮತ್ತು ಕೊಳವೆಯಾಕಾರದ ದೇಹ ರಚನೆ ಹೊಂದಿವೆ. ತಲೆ ಹೊಲೆ ಹೊರತುಪಡಿಸಿ ದೇಹದ ಒಂದೊಂದು ಭಾಗಕ್ಕೂ ಎರಡು ಜತೆ ಕಾಲುಗಳಿರುತ್ತವೆ. ಕಾಲುಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಡಿಗೆ ನಿಧಾನ. ಸಹಸ್ರಪದಿಗಳಲ್ಲಿ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಪ್ರಜಾತಿಗಳಿವೆ. ಭೂಮಿಯ ಮೇಲೆ ಮಾನವರಿಗಿಂತ ನೂರಾರು ಮಿಲಿಯನ್ ವರ್ಷಗಳಿಂದ ಇವು ಬದುಕಿವೆ.

ತೇವಾಂಶವಿರುವ ಕಡೆ ವಾಸ:  

ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣ ಹೊಂದಿರುತ್ತವೆ. ಇವುಗಳ ದೇಹದ ನೀರಿನ ಅಂಶ ಕಾಪಾಡಲು ತೇವಾಂಶಯುತ ವಾತಾವರಣ ಬೇಕು. ಆದ್ದರಿಂದ ಮಳೆಗಾಲದಲ್ಲಿ ಮಾತ್ರವೇ ಚಟುವಟಿಕೆಯಿಂದ ಇರುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಕಡೆಯಲ್ಲಿ ಅಡಗುತ್ತವೆ. ಒಣಗಿದ, ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರ. ಕೆಲವೊಂದು ಜಾತಿಯ ಸಹಸ್ರಪದಿಗಳು ಎರೆಹುಳು, ಕೆಲ ಕೀಟಗಳನ್ನೂ ತಿನ್ನುವುದುಂಟು.
ಹೆಣ್ಣು ಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಜಾತಿಗೆ ಅನುಗುಣವಾಗಿ 10ರಿಂದ ಮುನ್ನೂರು ಮೊಟ್ಟೆಗಳನ್ನಿಡುತ್ತವೆ. ಮರಿ ಹುಟ್ಟಿದಾಗ ದೇಹದ ಭಾಗ ಮತ್ತು ಕಾಲುಗಳ ಸಂಖ್ಯೆ ಕಡಿಮೆಯಿರುತ್ತದೆ. ನಂತರ ಎರಡು-ಮೂರು ಬಾರಿ  ಹೊರಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ.
 

 ಸುರುಳಿ ಸುತ್ತುವ ದೇಹ!

ಎಲ್ಲಕ್ಕಿಂತ ವಿಸ್ಮಯವೆಂದರೆ ಸಹಸ್ರಪದಿಗಳ ರಕ್ಷಣಾ ವ್ಯವಸ್ಥೆ. ವೇಗವಾಗಿ ಓಡಲಾರದ, ಕಚ್ಚಲು, ಚುಚ್ಚಲು ಯಾವುದೇ ಅಂಗಗಳಿಲ್ಲದ, ಸಹಸ್ರಪದಿಗಳು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ  ವೈರಿಗಳನ್ನು ಗಲಿಬಿಲಿಗೊಳಿಸಲು ಚಕ್ಕುಲಿಯಾಕಾರದಲ್ಲಿ, ಇನ್ನು ಕೆಲವು ಉಂಡೆಯಾಕಾರದಲ್ಲಿ ದೇಹವನ್ನು ಸುತ್ತಿಕೊಳ್ಳುತ್ತದೆ. ಹೀಗೆ ಸುತ್ತಿಕೊಳ್ಳುವಾಗ ತನ್ನ ನೂರಾರು ಕಾಲುಗಳಿಗೆ ಸ್ವಲ್ಪವೂ ಘಾಸಿಯಾಗದಂತೆ ಅದನ್ನು ಹೊರಗೆಳೆದುಕೊಳ್ಳುತ್ತದೆ. ನಾಯಿಗಳು ಈ ಸಹಸ್ರಪದಿಗಳು ಕಂಡಾಗ ಅವುಗಳನ್ನು ಮುಟ್ಟಿ ಸುತ್ತಿಕೊಳ್ಳುವುದನ್ನು ಮೋಜಿನಿಂದ ನೋಡುತ್ತಿರುತ್ತವೆ.

ರಾಸಾಯನಿಕ ಅಸ್ತ್ರ ಪ್ರಯೋಗ!

ಇವು ತಮ್ಮ ರಕ್ಷಣೆಗೆ ರಾಸಾಯನಿಕ ಅಸ್ತ್ರವನ್ನು ಪ್ರಯೋಗಿಸುತ್ತವೆ. ಕೆಲ ಸಹಸ್ರಪದಿಗಳು ಕೀಟಗಳನ್ನು, ಇರುವೆಗಳನ್ನು ದೂರಮಾಡಲು ಕೆಟ್ಟವಾಸನೆ  ಬೀರುವ, ವೈರಿಗಳ ದೇಹವನ್ನು  ಸುಡಬಲ್ಲ ರಾಸಾಯನಿಕಗಳನ್ನು ಸೃವಿಸುತ್ತವೆ. ಹೀಗಾಗಿ ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟಿದರೆ ಮೈಮೇಲೆ ಕಜ್ಜಿಯಾಗಬಹುದು. ಹೀಗಾಗಿ ಅವುಗನ್ನು ಪುಟ್ಟ ಮಕ್ಕಳು ಬಾಯಿಗೆ ಹಾಕಿಕೊಳ್ಳದಂತೆ ಎಚ್ಚರ ವಹಿಸಬೇಕು. 

ಕಾಣಲು ಅಪರೂಪವಾಗುತ್ತಿವೆ

ಮುಂಚೆ ಎಲ್ಲೆಂದರಲ್ಲಿ ಕಂಡುಬರುತ್ತಿದ್ದ ಇವು ಇತ್ತೀಚೆಗೆ ಮಲೆನಾಡಿನಲ್ಲೂ ಮೊದಲಿನಷ್ಟು ಕಂಡುಬರುತ್ತಿಲ್ಲ.  ಮನೆಯಂಗಳಿಗೆ ಸಿಮೆಂಟ್ ಬಳಕೆ, ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಭೂಮಿ, ಕಡಿಮೆಯಾದ ಮಳೆ ಇವೆಲ್ಲ ಕಾರಣದಿಂದ ಸಹಸ್ರಪದಿಗಳು ನಮ್ಮಿಂದ ನಿಧಾನವಾಗಿ ಕಣ್ಮರೆಯಾಗುತ್ತಿವೆ.  

Thursday, October 3, 2013

ನೀಲಿ ರಕ್ತದ ಹಾರ್ಸ್ ಶೂ ಏಡಿ!

ಮನುಷ್ಯರಂತೆಯೇ ಪ್ರಾಣಿಗಳ ರಕ್ತವೂ ಕೆಂಪಾಗಿರುವುದು ಸಾಮಾನ್ಯ. ಆದರೆ, ಈ ವಿಶಿಷ್ಟ ಪ್ರಾಣಿಯ ರಕ್ತದ ಬಣ್ಣ ಮಾತ್ರ ನೀಲಿ! ಈ ಕಾರಣಕ್ಕಾಗಿಯೇ ಇದನ್ನು ತೀರಾ ಅರೂಪದ ಪ್ರಾಣಿ ಸಂಕುಲ ಎಂದು ಗುರುತಿಸಲಾಗಿದೆ. ಈ ಪ್ರಾಣಿಯ ಹೆಸರು ಹಾರ್ಸ್ ಶೂ ಏಡಿ. ಇಂದು ಹಾರ್ಸ್ ಶೂ ಏಡಿಯ ಕೇವಲ ನಾಲ್ಕು ಪ್ರಕಾರಗಳು ಮಾತ್ರ ಉಳಿದುಕೊಂಡಿದೆ. ಇವುಗಳಲ್ಲಿ ಒಂದು ಪ್ರಕಾರ ಉತ್ತರ  ಅಮೆರಿಕ, ಅಟ್ಲಾಂಟಿಕ್ ಮತ್ತು ಗಲ್ಫ್ ಸಮುದ್ರ ತೀರದಲ್ಲಿ ಕಂಡುಬಂದರೆ, ಇನ್ನುಳಿದ ಮೂರು ಪ್ರಕಾಗಳು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಇವುಗಳಿಗೆ ಏಡಿ ಎನ್ನುವ ಹೆಸರು ಬಂದಿದ್ದರೂ ಸಹ. ಕಡಲೇಡಿ ಅಥವಾ ಸಿಗಡಿಗಳ ಜಾತಿಗೆ ಸೇರಿಲ್ಲ. ಬದಲಾಗಿ ಜೇಡ ಮತ್ತು ಚೇಳಿನ ಸಂತತಿಗೆ ಸೇರಿದ ಅರಾಕ್ನಿಡ್ ಎನ್ನುವ ಪ್ರಜಾತಿಗೆ ಸೇರಿದೆ. 


 ಜೀವಂತ ಪಳೆಯುಳಿಕೆ!
ಇವು ಡೈನೋಸಾರ್ಗಳಿಗಿಂತ 20 ಕೋಟಿ ವರ್ಷಗಳ ಹಿಂದಿನವು. ಅಂದರೆ ಸುಮಾರು 45 ಕೋಟಿ ವರ್ಷಗಳಿಂದ ಭೂಮಿಯ ಮೇಲಿವೆ. ಹೀಗಾಗಿ ಇವುಗಳಿಗೆ "ಜೀವಂತ ಪಳೆಯುಳಿಕೆ" ಎಂದು  ಕರೆಯಲಾಗುತ್ತದೆ. ಭೂಮಿಯ ಮೇಲೆ ಇಷ್ಟೊಂದು ಸುದೀರ್ಘ ಕಾಲದಿಂದ ಬದುಕಿದ್ದರೂ ಸಹ ಹಾರ್ಸ್ಶೂ ಏಡಿಯ ದೇಹ ರಚನೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಮುಂಚೆ ಹೇಗಿತ್ತೋ ಈಗಲೂ ಹಾಗಯೇ ಇದೆ.

ಶಾಂತ ಸ್ವಭಾವದ ಪ್ರಾಣಿ
ಹಾರ್ಸ್ಶೂ ಏಡಿಯ ಮೈಮೇಲೆ ತೆಳುವಾದ ಕವಚವಿದೆ. ಹರಿತವಾದ ಉದ್ದನೆಯ ಬಾಲದಿಂದ ಆಕ್ರಮಣಕಾರಿಯತೆ ಬಿಂಬಿತವಾಗಿದೆ. ಆದರೆ, ಇವು ಯಾರಿಗೂ ಹಾನಿ ಮಾಡುವಂತದ್ದಲ್ಲ. ಉದ್ದನೆಯ ಬಾಲ ಸಮುದ್ರದಲ್ಲಿ ಚಲಿಸುವ ದಿಕ್ಕನ್ನು ಬದಲಿಸಲು ನೆರವಾಗುತ್ತದೆ. ಹೆಣ್ಣು ಹಾರ್ಸ್ಶೂ ಏಡಿ ಸಮುದ್ರದ ದಡದಲ್ಲಿ 60 ರಿಂದ 120 ಸಾವಿರ ಮೊಟ್ಟೆಗಳನ್ನು ಇಡುತ್ತದೆ. ಆದರೆ, ಅದರಲ್ಲಿ ಸಹಸ್ರಾರು ಮೊಟ್ಟೆಗಳು ಸಮುದ್ರ ಪಕ್ಷಿಗಳಿಗೆ ಆಹಾರವಾಗುತ್ತದೆ. ಹೆಚ್ಚಿನ ಸಂಖ್ಯೆಯ ಮರಿಗಳನ್ನು ಬೆಳೆಸುತ್ತವೆ. ಹೀಗಾಗಿಯೇ ಇವು ಸುದೀರ್ಘ ಕಾಲ ಭೂಮಿಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ. ಆದರೆ ಇಂದು ಇವು ಅಳಿವಿನ ಅಂಚಿಗೆ ತಲುಪಿರುವುದರಿಂದ ಹಾರ್ಸ್ಶೂ ಏಡಿಯ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.


ರಕ್ತದ ಬಣ್ಣ ನೀಲಿ ಏಕೆ?
ಹಾರ್ಸ್ಶೂ ಏಡಿಯ ರಕ್ತ ಕೆಂಪಾಗಿರುವ ಬದಲು ನೀಲಿಯಾಗಿದೆ. ಇದಕ್ಕೆ ಕಾರಣ ರಕ್ತದಲ್ಲಿ ಹಿಮೊಗ್ಲೊಬಿನ್ ಅಂಶವೇ ಇಲ್ಲ. ಇದರ ಬದಲಾಗಿ ಆಮ್ಲಜನಕವನ್ನು  ಹೊಂದಿರುವ ಹೊಮೊಸೈನಿಸ್ ಇದೆ. ಹೊಮೊಸೈನಿಸ್ನಲ್ಲಿ ತಾಮ್ರದ ಅಂಶ ಹೆಚ್ಚಾಗಿ  ಇರುವುದರಿಂದ ಹಾರ್ಸ್ಶೂ ಏಡಿಯ ರಕ್ತ ನೀಲಿಯಾಗಿದೆ. ಇವು ರೋಗಕಾರಕದ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿವೆ. ಬ್ಯಾಕ್ಟೀರಿಯಾಗಳ ನಾಶಕ್ಕೆ ರಕ್ತವನ್ನು ಬಳಸಲಾಗುತ್ತದೆ.

ರಕ್ತಕ್ಕೆ ಭಾರೀ ಬೇಡಿಕೆ!
ಹಾರ್ಸ್ಶೂ ಏಡಿಯ ರಕ್ತವನ್ನು ರಾಸಾಯನಿಕಗಳ ಪರೀಕ್ಷೆಗೆ ಉಪಯೋಗಿಸಲಾಗುತ್ತದೆ. ಕಡಿದ ಗಾಯಗಳನ್ನು ಗುಣಪಡಿಸಲು ಹಾರ್ಸ್ಶೂ ಏಡಿಯ ರಕ್ತದ ಜೆಲ್ನ್ನು ಹಚ್ಚಲಾಗುತ್ತದೆ. ಹೀಗಾಗಿ ಹಾರ್ಸ್ಶೂನ ನೀಲಿ ರಕ್ತಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಇದರ ಒಂದು ಬಾಟಲಿ ರಕ್ತಕ್ಕೆ ಸುಮಾರು 9 ಲಕ್ಷ ರೂ. ಬೆಲೆಯಿದೆ. ಸಮುದ್ರದಿಂದ ಹಾರ್ಸ್ಶೂ ಏಡಿಯನ್ನು ಹಿಡಿದು ತಂದು ರಕ್ತ ತೆಗೆದು, ಮತ್ತೆ ಸಮುದ್ರಕ್ಕೆ ಬಿಡಲಾಗುತ್ತದೆ. ದೇಹದಿಂದ ಶೇ.30ರಷ್ಟು ರಕ್ತ ತೆಗೆದರೂ ಇವು ಬದುಕುಳಿಯ ಬಲ್ಲವು. ನಷ್ಟವಾದ ರಕ್ತವನ್ನು 30 ದಿನದಲ್ಲಿ ತುಂಬಿಕೊಳ್ಳುತ್ತವೆ. ಆದರೆ, ಹೆಚ್ಚಿನ ರಕ್ತ ತೆಗೆಯುವುದರಿಂದ ಪ್ರತಿ ವರ್ಷ ಸುಮಾರು 20 ದಿಂದ 35 ಸಾವಿರ ಹಾರ್ಸ್ಶೂ ಏಡಿಗಳು ಸಾವಿಗೀಡಾಗುತ್ತಿವೆ ಎಂದು ಅಧ್ಯನದಿಂದ ತಿಳಿದುಬಂದಿದೆ. ರಕ್ತ ತೆಗೆಯುವುದರಿಂದ ಹಾರ್ಸ್ಶೂ ಸಂತತಿ ಇಂದು ಅಳಿವಿನ ಅಂಚನ್ನು ತಲುಪಿದೆ.

 

Tuesday, September 24, 2013

ನೀರನ್ನೇ ಕುಡಿಯದ ಕಾಂಗರೂ ಇಲಿ!

ಪ್ರಾಣಿಗಳೆಂದರೆ ಅವು ನೀರನ್ನು ಅಗಲಿ ಬದುಕುವುದು ಸಾಧ್ಯವೇ ಇಲ್ಲ. ಆದರೆ, ಜೀವಿತಾವಧಿಯಲ್ಲಿ ಒಮ್ಮೆಯೂ ನೀರನ್ನು ಕುಡಿಯದ ಪ್ರಾಣಿಯೊಂದಿದೆ. ಅದೇ ಕಾಂಗರೂ ಇಲಿ!  ಅಮೆರಿಕದ ಕ್ಯಾಲಿಫೋರ್ನಿಯಾ ಶುಶ್ಕ ಮರುಭೂಮಿಯಲ್ಲಿ ಇವು ಕಂಡುಬರುತ್ತವೆ. ಇದರ ಕಾಲು ಮತ್ತು ಬಾಲ ಆಸ್ಟ್ರೇಲಿಯಾದ ಕಾಂಗರೂಗಳನ್ನು ಹೋಲುತ್ತದೆ. ಅಲ್ಲದೆ ಇದು ಕಾಂಗರೂಗಳಂತೆ ನೆಗೆಯುತ್ತಾ ಓಡುತ್ತದೆ. ಹೀಗಾಗಿಯೇ ಇವುಗಳಿಗೆ ಕಾಂಗರೂ ಇಲಿ ಎನ್ನುವ ಹೆಸರು ಬಂದಿದೆ.


ನೀರನ್ನೇ ಕುಡಿಯುವುದಿಲ್ಲ!
ಕಾಂಗರೂ ಇಲಿಗಳು ಬಿಸಿಲಿನ ಮರುಭೂಮಿಯಲ್ಲಿ ವಾಸಿಸುವುದರಿಂದ ಅಲ್ಲಿನ ವಾತಾವರಣಕ್ಕೆ ಹೊಂದುವ ದೇಹರಚನೆ ಹೊಂದಿವೆ. ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡಿವೆ. ಇವು ಜೀವಿತಾವಧಿಯಲ್ಲಿ ನೀರನ್ನು ಕುಡಿಯದಿದ್ದರೂ ಬದುಕುಳಿಯಬಲ್ಲದು! ಇವುಗಳ ಶ್ರವಣ ಸಾಮರ್ಥ್ಯ  ಅಗಾಧವಾಗಿದೆ. ಗೂಬೆ, ಹಾವುಗಳು ಸದ್ದಿಲ್ಲದೆ ದಾಳಿ ಮಾಡುವುದನ್ನು ಸಹ ತಿಳಿದುಕೊಳ್ಳುತ್ತದೆ. ಹಿಂಗಾಲು ಉದ್ದವಾಗಿದ್ದು, ವೈರಿಗಳಿಂದ ತಪ್ಪಿಸಿಕೊಳ್ಳಲು 9 ಅಡಿ ಉದ್ದದ ವರೆಗೆ ನೆಗೆಯಬಲ್ಲದು.

ನೆಲದೊಳಗೆ ಸುಸಜ್ಜಿತ ಮನೆ!

ಕಾಂಗರೂ ಇಲಿಗಳು  ಹೆಚ್ಚಾಗಿ  ಭೂಮಿಯ ಅಡಿಗಳಲ್ಲೇ ಹೆಚ್ಚಾಗಿ  ಇರುತ್ತವೆ. ಕುರುಚಲು ಪೊದೆ, ಹುಲ್ಲುಗಳಿರುವ ಬಯಲು ಪ್ರದೇಶ, ಮರಳು ಗುಡ್ಡೆ, ಮರದ ಪೊಟರೆ ಮುಂತಾದ ವೈವಿಧ್ಯಮಯ ಗೂಡುಗಳಲ್ಲಿ ವಾಸಿಸುತ್ತವೆ. ಬಿಲವನ್ನು  ನಾವು ವಾಸಿಸುವ ಮನೆಯಂತೆಯೇ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಿಕೊಂಡಿರುತ್ತದೆ. ಬಿಲದಲ್ಲಿ ಪ್ರತ್ಯೇಕ ಭೋಜನ ಕೋಣೆ, ಮಲಗುವ ಕೋಣೆ, ಆಹಾರ ಸಂಗ್ರಹ ಕೋಣೆಗಳನ್ನು ಹೊಂದಿರುತ್ತದೆ. ಸುಡುಬಿಸಿಲಿನ ಹಗಿನ ವೇಳೆಯಲ್ಲಿ ಬಿಲವನ್ನು ತಂಪಾಗಿರಿಸಲು ಬಿಲದ ಬಾಗಿಲನ್ನು ಮಣ್ಣಿನಿಂದ ಮುಚ್ಚಿಡುತ್ತದೆ. ರಾತ್ರಿ ಮರುಭೂಮಿ ತಂಪಾದಾಗ ಬಾಗಿಲನ್ನು  ತೆರೆಯುತ್ತದೆ. ದಿನದ ಬಹುತೇಕ ಸಮಯ ಬಿಲದಲ್ಲಿ ನಿದ್ರಿಸುವುದರಲ್ಲೇ ಕಳೆಯುತ್ತದೆ. ರಾತ್ರಿಯಹೊತ್ತು ವಾತಾವರಣ ತಣ್ಣಗಾದ ಬಳಿಕ ಆಹಾರ ಸೇವನೆಗಾಗಿ ಬಿಲದಿಂದ ಹೊರಗೆ ಬರುತ್ತವೆ. ಹವಾಮಾನ ವೈಪರೀತ್ಯಗಳು ಉಂಟಾದಾಗ ಬಿಲದಲ್ಲಿಯೇ ಇದ್ದುಬಿಡುತ್ತವೆ.

ಮೈ ಬೆವರುವುದೇ ಇಲ್ಲ!
ಕಾಂಗರೂ ಇಲಿ ಬೆವರಿನ ಮೂಲಕ ಬಿಡುಗಡೆಯಾಗುವ ತೇವಾಂಶವನ್ನು ಉಸಿರಿನ ಮೂಲಕ ಪುನಃ ಹೀರಿಕೊಳ್ಳುತ್ತದೆ. ಹೀಗಾಗಿ ಕಾಂಗರೂ ಇಲಿ ಬೆವರುವುದೇ ಇಲ್ಲ. ಅಲ್ಲದೆ ದೇಹದಿಂದ ಹೊರಹೋಗುವ ನೀರಿನ ಅಂಶ ವರ್ಥವಾಗುವುದಿಲ್ಲ. ದೇಹದಷ್ಟೇ ದೊಡ್ಡ ತಲೆ, ಅಗಲವಾದ ಕಣ್ಣು, ಚಿಕ್ಕಕಿವಿ. ಉದ್ದನೆ ಹಿಂಗಲು, ಪುಟ್ಟ ಮುಂಗಾಲು, ಉದ್ದನೆಯ ಬಾಲ ಇವು ಕಾಂಗರೂ ಸ್ಥೂಲ ದೇಹರಚನೆ. ಇದರ ದೇಹದ ಉದ್ದ 3 ರಿಂದ 5 ಇಂಚು. ಬಾಲ ದೇಹಕ್ಕಿಂತಲೂ ದೊಡ್ಡ ಅಂದರೆ, 5ರಿಂದ 6 ಇಂಚು ಉದ್ದವಿರುತ್ತದೆ. ಕಾಂಗರೂ ಇಲಿಯ ಮೈ ಮರಳಿನ ಕಂದು ಬಣ್ಣ ಮತ್ತು ಹೊಟ್ಟೆಯ ಭಾಗ ಬಿಳಿಯಾಗಿದೆ. ಜೀವಿತಾವಧಿ 2 ರಿಂದ 5 ವರ್ಷ. ಕಾಂಗರೂ ಇಲಿಗಳಲ್ಲಿ ಹೆಣ್ಣಿಗಿಂತ ಗಂಡು ಇಲಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಕಾಂಗರೂ ಇಲಿಗೆ ಹಾವು, ಗೂಬೆ, ನರಿ ಸೇರಿದಂತೆ ಸುತ್ತಮುತ್ತ ಹಲವಾರು ಶತ್ರುಗಳಿದ್ದರೂ. ಅವಸಾನದ ಅಂಚಿಗೆ ತಲುಪಿಲ್ಲ ಈಗಲೂ ಇವು ಹೆಚ್ಚಿನ ಸಂಖ್ಯೆಯಲ್ಲಿವೆ.

ಯಾಕೆ ನೀರು ಕುಡಿಯಲ್ಲ?

ಕಾಂಗರೂ ಇಲಿ ಕೂಡಾ ಮರುಭೂಮಿಯ ಪ್ರಾಣಿಯಾಗಿರುವುದರಿಂದ ಅದು ತಿನ್ನುವ ಸಸ್ಯದ ಬೇರು ಮತ್ತು ಬೀಜಗಳಿಂದ ದೇಹಕ್ಕೆ ಬೇಕಾದ ತೇವಾಂಶವನ್ನು ದೊರಕಿಸಿಕೊಳ್ಳುತ್ತದೆ. ಅದರ ಆಹಾರವೇ ಅದಕ್ಕೆ ನೀರು ಒದಗಿಸುವ ಕಾರಣ ಪ್ರತ್ಯೇಕವಾಗಿ ನೀರು ಕುಡಿಯುವ ಅಗತ್ಯವಿಲ್ಲ. ಇವು ಕಾಂಗರೂಗಳಂತಯೇ ಚರ್ಮದ ಚೀಲಗಳನ್ನು ಹೊಂದಿರುತ್ತದೆ. ಆದರೆ, ಅದರಲ್ಲಿ ಮರಿಗಳನ್ನು ಸಾಕುವ ಬದಲು ಆಹಾರದ ಸಂಗ್ರಹಕ್ಕೆ ಬಳಸುತ್ತದೆ.

 

Thursday, September 12, 2013

ಚೀಲದಲ್ಲಿ ಮರಿ ಸಾಕುವ ಕಾಂಗರೂ!

ಕಾಂಗರೂವನ್ನು ನೋಡಿದೊಡನೆ ಕಣ್ಣುಂದೆ ಬರುವುದು, ಹಿಂಗಾಲುಗಳ ಮೇಲೆ ಕುಳಿತ ತಾಯಿ; ಅದರ ಹೊಟ್ಟೆಯ ಮುಂಭಾಗದ ಚೀಲದಲ್ಲಿ ಕುಳಿತ ಮರಿಯ ಚಿತ್ರ. ಹೊಟ್ಟೆಯಲ್ಲಿ ಮರಿ ಸಾಕಣೆಯ ಚೀಲವನ್ನು ಪಡೆದಿದ್ದರಿಂದಲೇ ಕಾಂಗರೂವನ್ನು ಸಂಚಿ ಸ್ತನಿ (ಹೊಟ್ಟೆ ಚೀಲದ ಪ್ರಾಣಿ) ವರ್ಗಕ್ಕೆ ಸೇರಿಸಲಾಗಿದೆ. ಇದು ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾದ ಪ್ರಾಣಿ. ಹೀಗಾಗಿ ಆಸ್ಟ್ರೇಲಿಯಾವನ್ನು ಕಾಂಗರೂಗಳ ನಾಡು ಎಂದು ಕರೆಯಲಾಗುತ್ತದೆ. 


  • ವೈವಿಧ್ಯಮಯ ಪ್ರಭೇದ:
ಹೊಟ್ಟೆಯಲ್ಲಿ ಚೀಲವಿರುವ ಕಾಂಗರೂಗಳ ಸುಮಾರು 40ಕ್ಕೂ ಹೆಚ್ಚು ಪ್ರಭೇದಗಳಿವೆ. ಬೆಕ್ಕಿನಷ್ಟೇ ಗಾತ್ರದಿಂದ ಹಿಡಿದು ಬಹು ವೈವಿಧ್ಯ ಗಾತ್ರದ ಕಾಂಗರೂಗಳಿವೆ. ಇವುಗಳಲ್ಲಿ ಕೆಂಪು ಕಾಂಗರೂ ಅತ್ಯಂತ ದೊಡ್ಡ ಗಾತ್ರದ್ದು. ಇವು ಮನುಷ್ಯನಿಗಿಂತ ಎತ್ತರ ಮತ್ತು 85 ಕೆ.ಜಿ.ಯಷ್ಟು ತೂಕವಿರುತ್ತವೆ. ಹೆಣ್ಣು ಕಾಂಗರೂವನ್ನು ಬೂಮರ್, ಗಂಡನ್ನು ಫ್ಲೈಯರ್ ಮತ್ತು ಮರಿಯನ್ನು ಜೋಯಿ ಎಂದು ಕರೆಯಲಾಗುತ್ತದೆ.

  • ಕುಪ್ಪಳಿಸುತ್ತಾ ಸಾಗುವ ಓಟ!
ಕಾಂಗರೂವಿನದ್ದು ವಿಶಿಷ್ಟ ರೀತಿಯ ಓಟ. ಉದ್ದನೆಯ ಶಕ್ತಿಶಾಲಿ ಹಿಂಗಾಲು. ಬಾಲವೂ ಅಷ್ಟೇ ಬಲಿಷ್ಠ. ಮುಂಗಾಲು ಚಿಕ್ಕವು. ಹೀಗಾಗಿ ಇವುಗಳಿಗೆ ವೇಗವಾಗಿ ಓಡಲು ಸಾಧ್ಯವಿಲ್ಲ. ಆದರೆ, ಬರಿ ಹಿಂಗಾಲಿನ ಮೇಲೆಯೇ ಜಿಗಿದು, ಜಿಗಿದು ಓಡುವುದು ಇದರ ಕ್ರಮ. ಆದರೂ, ಹೀಗೆ ಕುಪ್ಪಳಿಸುತ್ತಾ ಓಡಿದರೂ, ಮಂದಗಾಮಿಯೇನಲ್ಲ. ತಾಸಿಗೆ 60 ಕಿ.ಮಿ. ವೇಗದಲ್ಲಿ ಓಡಬಲ್ಲದು. ಹಾದಿಗೆ ಅಡ್ಡಬರುವ 10 ಅಡಿ ಎತ್ತರದ ಬೇಲಿಯಾಗಲೀ, 20 ಅಡಿ ಅಗಲದ ಹಳ್ಳ ಕೊರಕಲುಗಳಾಗಲೀ ಕಾಂಗರೂಗಳಿಗೆ ಲೆಕ್ಕಕ್ಕೇ ಇಲ್ಲ.

  • 5 ವರ್ಷಕ್ಕೆ ಹೊಸ ದಂತಪಂಕ್ತಿ!
ಕಾಂಗರೂ ಶುದ್ಧ ಸಸ್ಯಾಹಾರಿ. ಹುಲ್ಲು ಎಲೆಗಳೇ ಇದರ ಆಹಾರ. ಹೀಗಾಗಿ ಮಧ್ಯ ಆಸ್ಟ್ರೇಲಿಯಾದ ಹುಲ್ಲು ಬಯಲು ಮತ್ತು ಅರೆ ಮರುಭೂಮಿ ಪ್ರದೇಶದಲ್ಲಿ ಇದರ ಪ್ರಧಾನ ವಾಸ್ತವ್ಯ. ನೀರು ಮೇವು ಇಲ್ಲದೆ ಮೂರು-ನಾಲ್ಕುದಿನ ಇರುವ ಸಾಮಥ್ರ್ಯ ಕೂಡ ಇದಕ್ಕಿದೆ. ಹುಲ್ಲು  ಎಲೆ ಸೊಪ್ಪುಗಳನ್ನು ಕೇವಲ ಮುಂದಿನ ಹಲ್ಲುಗಳಲ್ಲೇ ಜಗಿದು ಜಗಿದು ಆ ಹಲ್ಲುಗಳು ನಾಲ್ಕು-ಐದು  ವರ್ಷಗಳಲ್ಲಿ ಸಂಪೂರ್ಣ ಸವೆದುಹೋಗುತ್ತವೆ. ಹಾಗಾದಾಗ ಅವು  ಬಿದ್ದುಹೋಗಿ ಅಲ್ಲೇ ಹೊಸ ಹಲ್ಲುಗಳು ಹುಟ್ಟಿಕೊಳ್ಳುತ್ತವೆ. ಕಾಂಗರೂಗಳ 20-25 ವರ್ಷಗಳ ಜೀವಿತಾವಧಿಯಲ್ಲಿ ನಾಲ್ಕೈದುಬಾರಿ ದಂತಪಕ್ತಿಗಳು ನವೀಕರಣಗೊಳ್ಳುತ್ತವೆ. 

  • ಚೀಲದಲ್ಲಿ ಮರಿ ಸಾಕುವ ತಾಯಿ!
ಕಾಂಗರೂಗಳ ಸಂತಾನ ವಿಧಾನವೇ ಒಂದು ಸೋಜಿಗ. ಕಾಂಗರೂ ಮರಿ ಗರ್ಭದಿಂದ ಹೊರಬಂದಾಗ ಒಂದು ಚಿಕ್ಕ ಹುಳುವಿನಂತಿರುತ್ತದೆ. ಅದರ ಉದ್ದ ಒಂದಂಗುಲಕ್ಕಿಂತ ಕಡಿಮೆ. ತೂಕವಂತೂ ಒಂದೆರಡೇ ಗ್ರಾಂ!  ಕಣ್ಣುಗಳು ಇಲ್ಲದ ಕೇವಲ ಮೊಳಕೆಯಂತಹ ಹಿಂಗಾಲು, ರೋಮರಹಿತ ಬೋಳು ತಲೆ. ಇನ್ನೂ ಭ್ರೂಣದಲ್ಲೇ ಇರುವ ಶರೀರ ಅದರದು. ತಾಯಿಯನ್ನು ಕಿಂಚಿತ್ತೂ ಹೋಲದ ಸ್ವರೂಪ. ಅಲ್ಲಿಂದ ಅದರ ಮುಂದಿನ ಎಲ್ಲ ಬೆಳವಣಿಗೆಗಳೂ ಚೀಲದ ಒಳಗೇ ಜರುಗುತ್ತದೆ. ತಾಯಿಯ ಹಾಲು ಕುಡಿಯುತ್ತಾ ಅಲ್ಲೇ ಉಳಿದು ಆರು ತಿಂಗಳ ಅವಧಿಯಲ್ಲಿ ಪ್ರೌಢವಾಗಿ ಚೀಲದಿಂದ ಹೊರಕ್ಕೆ ಇಣುಕುತ್ತದೆ. ಒಂದು ಮರಿ ಪ್ರೌಢವಾಗಿ ಚೀಲವನ್ನು ತೊರೆದ ಒಂದೆರಡು ದಿನಗಳಲ್ಲೇ ಇನ್ನೊಂದು ಹೊಸ ಮರಿ  ಪ್ರಸವಗೊಂಡು ಚೀಲಕ್ಕೆ ಬಂದು  ಸೇರುತ್ತದೆ. ಕುಡಲೇ ತಾಯಿ ಮತ್ತೆ ಗರ್ಭಧರಿಸುತ್ತದೆ. ಹೀಗೆ ಚೀಲದಿಂದ ಹೊರಗಿದ್ದು ಹಾಲು ಕುಡಿಯುವ ಒಂದು ಮರಿ, ಗರ್ಭದೊಳಗೊಂದು  ಭ್ರೂಣ, ಚೀಲದೊಳಗೊಂದು ಮರಿ. ಈ ರೀತಿ ನಿರಂತರವಾಗಿ ಬೇರೆ ಬೇರೆ ವಯಸ್ಸಿನ ಮೂರು ಮರಿಗಳನ್ನು ಏಕಕಾಲಕ್ಕೆ ಪೋಷಿಸುವ ಅತಿ ವಿಶಿಷ್ಟ ಮಾತೆ ಕಾಂಗರೂ.

ಆಹಾರಕ್ಕಾಗಿ ನಿರಂತರ ಬೇಟೆ:

ಇಂಥ ಅವಿರತ ಸಂತಾನ ವರ್ಧನಾ ಕ್ರಮದಿಂದಾಗಿ ಕಾಂಗರೂಗಳು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ, ಪ್ರತಿವರ್ಷ ಚರ್ಮಕ್ಕಾಗಿ ಸಾಕು ಪ್ರಾಣಿಗಳ ಆಹಾರಕ್ಕಾಗಿ ಲಕ್ಷಾಂತರ ಕಾಂಗರೂಗಳನ್ನು ಕೊಲ್ಲಲಾಗುತ್ತಿದೆ. ಇದರಿಂದ ಕಾಂಗರೂಗಳ ಕುಬ್ಜ ಪ್ರಭೇದಗಳು ಮನುಷ್ಯರ ಮತ್ತು ಬೇಟೆಪ್ರಾಣಿಗಳ ದುರಾಕ್ರಮಣದಿಂದ ಅಳಿದು ಹೋಗಿವೆ. ಮತ್ತೂ ಕೆಲವು ಪ್ರಭೇದಗಳು ಅತ್ಯಲ್ಪ ಸಂಖ್ಯೆಗೆ ಇಳಿದಿದೆ.
 

Thursday, September 5, 2013

ಲಕ್ಷದ್ವೀಪ ಎಂಬ ಸುಂದರ ಕಡಲ ತೀರ

ಲಕ್ಷದ್ವೀಪ ಎನ್ನುವುದು ಹವಳದ ದಿಬ್ಬಗಳಿಂದ ಕೂಡಿದ ದ್ವೀಪ ಸಮೂಹ. ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗಿರುವ ಪ್ರದೇಶ. ಪ್ರವಾಸಿಗರ ಪಾಲಿಗಂತೂ ಇದು ಭೂಮಿಯ ಮೇಲಿನ ಸ್ವರ್ಗ. ಸೂರ್ಯ ಹಾಗೂ ಮರಳಿನೊಂದಿಗೆ ಕಾಲಕಳೆಯಲು, ಹಾಯಾಗಿ ವಿಹರಿಸಲು  ಬಯಸುವವರಿಗಂತೂ ಇದು ನೆಚ್ಚಿನ ತಾಣ. ನಿಸರ್ಗದತ್ತ  ಸೌಂದರ್ಯ ಹಾಗೂ ಆಕರ್ಷಣೆಯೇ ಇದರ ಮೂಲ ಬಂಡವಾಳ.


39 ದ್ವೀಪಗಳ ಸಮೂಹ: 
ಲಕ್ಷದ್ವೀಪ ಎಂದ ಮಾತ್ರಕ್ಕೆ ಇಲ್ಲಿ ಒಂದು ಲಕ್ಷ ದ್ವೀಪಗಳಿವೆ ಎಂಬರ್ಥವಲ್ಲ. ವಾಸ್ತವವಾಗಿ ಇಲ್ಲಿರುವುದು ಬರೀ 39 ನಡುಗಡ್ಡೆ. ಈ ದ್ವೀಪ ಸಮೂಹದ ಒಟ್ಟೂ ವಿಸ್ತೀರ್ಣ ಕೇವಲ 32 ಚದರ್ ಕಿ.ಮೀ. ಒಂದು ಕಾಲದಲ್ಲಿ ಇದನ್ನು ಲಖದೀವ್, ಮನಿಕೋಯ್ ಮತ್ತು ಅಮಿನ್ ದಿವಿ ದ್ವೀಪಗಳು ಎಂದು ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಬ್ರೀಟಿಷರು ಲಕ್ಷದ್ವೀಪವನ್ನು ಭಾರತದ ಭೂ ಪ್ರದೇಶದೊಂದಿಗೆ ಸಂಯೋಜಿಸಿದರು. ಈ ದ್ವೀಪ ಸಮೂಹವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, 10 ತಾಲೂಕುಗಳಾಗಿ ವಿಂಗಡಿಸಲಾಗಿದೆ. ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿಯೇ ಅತ್ಯಂತ ಚಿಕ್ಕದು. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. ಇಲ್ಲಿ 12 ಹವಳದ ದ್ವೀಪಗಳು, 3 ಹವಳದ ದಿಬ್ಬಗಳು, 5 ಆಳವಿರದ ಸಾಗರ ಪ್ರದೇಶ ಮತ್ತು 11 ಜನ ನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಳೆಂದರೆ, ಅಗಟ್ಟಿ, ಅಮಿನಿ, ಅನ್ಡ್ರೋಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ವೇನಿ, ಕವರಟ್ಟಿ, ಕಿಲ್ತಾನ್ ಮತ್ತು ಮನಿಕಾಯ್. ಪ್ರವಾಸೋದ್ಯಮದ ಜತಗೆ ಮೀನುಗಾರಿಕೆ ಲಕ್ಷದ್ವೀಪದ ಪ್ರಮುಖ ಉದ್ಯಮ. ಈ ದ್ವೀಪಗಳಲ್ಲಿ ಅಗಟ್ಟಿ ಹಾಗೂ ಬಂಗಾರಂ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ.

ಜಲ ಕ್ರೀಡೆಗೆ ಹೆಸರುವಾಸಿ:
ಇಲ್ಲಿನ ಅನೇಕ ಆಕರ್ಷಕ ತಾಣಗಳು ನೋಡುಗರಿಗೆ ಅತ್ಯಂತ ಉತ್ತೇಜನಕಾರಿ. ರಜಾದಿನಗಳನ್ನು ಕಳೆಯಲು ಹೇಳಿಮಾಡಿಸಿದ ತಾಣ. ಮೀನುಗಾರಿಕೆಯ ಸ್ವಅನುಭವವನ್ನು ಪಡೆಯಬಹುದು. ಮನಸ್ಸಸಿನ ಒತ್ತಡವನ್ನು ಕಡಿಮೆಮಾಡಿಕೊಂಡು ನಿರಾಳರಾಗಬಹುದು. ಸ್ಕೂಬಾ ಡೈವಿಂಗ್ ತಾಣ ಕೂಡಾ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಸದಾ ಚಟುವಟಿಕೆಯಿಂದ ಕುಡಿರುವ ತಾಣ. ಅಲ್ಲದೆ ನೀರಿನ ಆಳಕ್ಕೆ ಇಳಿದು ಈಜಲು, ನೀರಿಗೆ ಜಿಗಿಯಲು ಸಾಕಷ್ಟು ತಾಣಗಳು ಸಿಗುತ್ತವೆ.

ನೀಲಿ ಬಣ್ಣದ ಸರೋವರ:

ಸಮುದ್ರದ ನೀರಿನಿಂದ ನಿರ್ಮಾಣವಾದ ಸರೋವರಗಳು ನೀಲಿ ಬಣ್ಣದ್ದಾಗಿವೆ. ಕಡಲ ತೀರ ಕೂಡಾ ಅತ್ಯಂತ ಶುಭ್ರವಾಗಿದ್ದು, ಬಿಳಿ ಬಣ್ಣದಲ್ಲಿ ಸದಾ ಕಂಗೊಳಿಸುತ್ತವೆ.  ತೆಂಗು ಹಾಗೂ ಪಾಮ್ ಮರಗಳು ಸಾಲಾಗಿ ಬೆಳೆದು ನಿಂತಿದ್ದು, ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಜನಪ್ರಿಯ ದ್ವೀಪಗಳು
  • ಕವರಟ್ಟಿ ದ್ವೀಪ
ಲಕ್ಷ ದ್ವೀಪದ ಸಮೂಹದಲ್ಲಿಯೇ ಎಲ್ಲಾ ವಿಧದ ಮೋಜು ಮತ್ತು ಸಾಹಸಕ್ಕೆ ಕರವಟ್ಟಿ ಕೇಂದ್ರ ಸ್ಥಳವಾಗಿದೆ. ಈ ದ್ವೀಪ ಪುಟ್ಟ ಪಟ್ಟಣವಾಗಿದ್ದು, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ರಾಜಧಾನಿಯಾಗಿದೆ. ಅಲ್ಲದೆ ಕೆಲವು ಪಾರಂಪರಿಕ ತಾಣಗಳು ಇಲ್ಲಿವೆ. ಮ್ಯೂಸಿಯಂ ಹಾಗೂ ಮಸೀದಿ ಇವುಗಳಲ್ಲಿ ಪ್ರಮುಖವಾದವು. ಇಲ್ಲಿನ ಬೆಳ್ಳನೆಯ ಮರಳ ತೀರಗಳು ವರ್ಷಕ್ಕೆ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತವೆ.
  • ಅಗಟ್ಟಿ ನಡುಗಡ್ಡೆ.
ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.
 
  • ಬಂಗಾರಂ ದ್ವೀಪ
ಇಲ್ಲಿ ತೆಂಗಿನ ಮರಗಳಿಂದ ಆವೃತ್ತವಾಗಿರುವ ಕಡಲ ತೀರ ಸುಮಾರು 120 ಎಕರೆ ಪ್ರದೇಶವನ್ನು ಆವಸಿದೆ. ಇಲ್ಲಿನ ಪ್ರಸಿದ್ಧ ಐಲ್ಯಾಂಡ್ ರೆಸಾರ್ಟ್ನೀರಿನೊಳಗಿನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಸ್ಕೂಬಾ ಹಾಗೂ ಸ್ಕೋರ್ಕಿಲ್ಲಿಂಗ್ ಅನುಭವ ಪಡೆಯಬಹುದು. ಕಡಲ ತೀರದಲ್ಲಿ ಬಿಳಿ ಬಣ್ಣದ ಅಲೆಗಳು ಮನಸೆಳೆಯುತ್ತವೆ. ತರಹೇವಾರಿ ಜಾತಿಯ ಪಕ್ಷಿಗಳು, ಮೀನುಗಳು, ಮುಳ್ಳಂದಿ, ಗಿಳಿ ಸಂಕುಲಗಳು ಗಮನ ಸೆಳೆಯುತ್ತದೆ.

 

Wednesday, August 28, 2013

ಅಜಂತಾ-ಎಲ್ಲೋರ ಶಿಲ್ಪಕಲೆ

ಅಜಂತಾ ಮತ್ತು ಎಲ್ಲೋರ ಗುಹೆಗಳು ಹಿಂದು, ಬೌಧ್ಧ, ಜೈನ ಧರ್ಮಗಳಿಗೆ ಸಾಕ್ಷಿಯಾಗಿ ನಿಂತಿವೆ. ಇದೊಂದು ಮಹಾರಾಷ್ಟ್ರದ ಔರಂಗಾಬಾದ್ ಹತ್ತಿರವಿರುವ ಐತಿಹಾಸಿಕ ತಾಣ. ಈ ಗುಹೆಗಳು ಯುನೆಸ್ಕೋದಿಂದ ವಿಶ್ವಪಾರಂಪರಿಕ ತಾಣವೆಂದು 1983ರಲ್ಲಿ ಘೋಷಿಸಲ್ಪಟ್ಟಿದೆ. ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 6  ಶತಮಾನದವರೆಗಿನ ಇತಿಹಾಸವನ್ನು ಈ ಗುಹೆಗಳು ಸಾದರ ಪಡಿಸುತ್ತವೆ. ಈ ಗುಹೆಗಳು ಸಂಪೂರ್ಣಗೊಳ್ಳಲು ತೆಗೆದುಕೊಂಡಿದ್ದು, ಅಚ್ಚರಿಪಡುವಂತಹ 800 ವರ್ಷಗಳು ಎಂದು ನಂಬಲಾಗಿದೆ.


1.ಅಜಂತಾ ಗುಹೆಗಳು:

30 ಗುಹೆಗಳ ಗುಂಪಾಗಿರುವ ಅಜಂತಾವು, ಬೌದ್ಧ ಚೈತ್ಯಗಳಿಗೆ ಮತ್ತು ವರ್ಣಚಿತ್ರಗಳಿಗೆ ಹೆಸರುಪಡೆದಿವೆ. ಅಘಾದವಾದ ಕಲ್ಲುಬಂಡೆಗಳನ್ನು ಕೊರೆದು ಇಲ್ಲಿ ಗುಹೆಗಳನ್ನು ನಿರ್ಮಿಸಲಾಗಿದೆ. 

  • ಕಂಡು ಹಿಡಿದಿದ್ದು ಹೇಗೆ?
ಕ್ರಿ.ಪೂ. 2ನೇ ಶತಮಾನದಲ್ಲಿ ಈ ಗುಹೆಗಳು ನಿರ್ಮಾಣಗೊಂಡಿದ್ದರೂ, 19ನೇ ಶತಮಾನಗಳವರೆಗೂ ಇದರ ಪರಿಚಯ ಇರಲಿಲ್ಲ. ಕೆಲವು ಬ್ರಿಟಿಷ್ ಸೈನಿಕರು 1819ರಲ್ಲಿ  ಬೇಟೆಯಾಡಲು ಬಂದ ಸಮಯದಲ್ಲಿ ಕುದುರೆ ಪಾದರಕ್ಷೆಯ ಆಕಾರದ ಕಲ್ಲಿನ ಆಕೃತಿಯನ್ನು ಆಕಸ್ಮಿಕವಾಗಿ ಕಂಡರು. ಇದರಿಂದ ಮನಸ್ಸೋತ ಅವರು, ವನರಾಶಿಯ ಹಿಂದೆ ಅಡಗಿದ್ದ ಮತ್ತಷ್ಟು ಗುಹೆಗಳನ್ನು ಅನ್ವೇಷಿಸಲು ಹೊರಟರು. ಬಳಿಕ ಪುರಾತತ್ವ ಶಾಸ್ತ್ರಜ್ಞರ ತಂಡ ಇಲ್ಲಿ ಉತ್ಖನನ ಕೈಗೊಂಡಾಗ ನಿಬ್ಬೆರಗಾಗುವ ಸಂಗತಿಗಳನ್ನು ಬಯಲಾದವು.

  • ಬುದ್ಧನ ಜೀವನ ಚರಿತ್ರೆ:
    ಉತ್ಖನನದಿಂದ ಬೌದ್ಧ ಸ್ಮಾರಕಗಳ ಹಲವು  ಸ್ತೂಪಗಳು, ದ್ವಾರಪಾಲಗಳು, ವಿಹಾರಗಳು, ಚೈತ್ಯಗಳು, ವರ್ಣಚಿತ್ರಗಳನ್ನು ಹೊರತೆಗೆಯಲಾಯಿತು. ಇಲ್ಲಿ ಒಟ್ಟೂ ಒಟ್ಟೂ 29 ಗುಹೆಗಳಿದ್ದು, ಇವು ಬುದ್ಧನ ಜೀವನಕ್ಕೆ ಸಂಬಂಧಿಸಿದ ಗಮನಾರ್ಹ ಕತೆಗಳನ್ನು ಪ್ರದರ್ಶಿಸುತ್ತವೆ. ಗುಹೆಗಳಲ್ಲಿನ  ವರ್ಣ ಚಿತ್ರಗಳಿಗೆ ಕೆಂಪು, ಹಳದಿ, ಕಾವಿ ಮಣ್ಣು, ತಿಳಿ ಹಸಿರು ಬಣ್ಣ, ಜಿಪ್ಸಮ್, ನೀಲರತ್ನದ ಪುಡಿಗಳನ್ನು ಬಳಸಲಾಗಿದೆ.

 2.ಎಲ್ಲೋರದ ಗುಹೆಗಳು: 

ಔರಂಗಾಬಾದ್ನಿಂದ 30 ಕಿ.ಮೀ ದೂರದಲ್ಲಿರುವ  ರಾಷ್ಟ್ರಕೂಟ ಕನ್ನಡ ಅರಸರಿಂದ ನಿರ್ಮಿಸಲ್ಪಟ್ಟ ಒಂದು ಪುರಾತತ್ವ ಪ್ರದೇಶ. ಕಲ್ಲಿನಿಂದ ಕೆತ್ತಿದ ಬೌದ್ಧ, ಹಿಂದು ಮತ್ತು ಜೈನ ದೇವಸ್ಥಾನ ಮತ್ತು  ಸನ್ಯಾಸಿಗಳ ಮಂದಿರಗಳನ್ನು ಒಳಗೊಂಡ 34 ಗುಹೆಗಳಿವೆ. ಈ ಗುಹೆಗಳನ್ನು 5 ಮತ್ತು ಆರನೇ ಶತಮಾನಗಳ ಮಧ್ಯೆ ನಿರ್ಮಿಸಲಾಗಿದೆ. ಅವುಗಳಲ್ಲಿ 12 ಬೌದ್ಧ ಗುಹೆಗಳು, 17 ಹಿಂದು ಮತ್ತು 5 ಜೈನ ಗುಹೆಗಳಾಗಿವೆ.
  • ವಿಶ್ವಕರ್ಮಗುಹೆ:
ಬೌದ್ಧಗುಹೆಗಳಲ್ಲಿ 10ನೇ ಗುಹೆ ವಿಶ್ವಕರ್ಮವೊಂದೇ ಚೈತ್ಯ ಗೃಹವಾಗಿದೆ. ಇದನ್ನು ಸ್ಥಳೀಯವಾಗಿ ಸುತಾರ್ ಕ ಜೋಪ್ಡ (ಬಡಗಿಯ ಗುಡಿಸಲು) ಎಂದು ಕರೆಯಲಾಗುತ್ತದೆ. 3.30 ಮೀ.ಎತ್ತರದ ವ್ಯಾಖ್ಯಾನ ಮುದ್ರ (ಬೋಧನ ಭಂಗಿ) ಕೆತ್ತಲಾಗಿದೆ. ಬಹು ದೊಡ್ಡದಾದ ಬೋಧಿ ವೃಕ್ಷವನ್ನು ಹಿಂಬದಿಯಲ್ಲಿ ಕೆತ್ತಲಾಗಿದೆ. ಗುಹೆ ಚೈತ್ಯ ಕಮಾನಿನ ಮೇಲು ಛಾವಣಿಯನ್ನು ಹೊದಿದೆ. ಇದರ ಅಡ್ಡಪಟ್ಟಿಗಳನ್ನು ಮರದ ಕೆತ್ತನೆಗಳನ್ನೋಲುವಂತೆ ಕಲ್ಲಿನಲ್ಲಿ ಕೆತ್ತಲಾಗಿದೆ.
  • ದಶಾವತಾರ ಗುಹೆ:
ಇದು 15ನೇ ಗುಹೆಯಾಗಿದ್ದು ಬೌದ್ಧ ಸನ್ಯಾಸಿ ಮಂದಿರವಾಗಿತ್ತು. ಮಧ್ಯಭಾಗದಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಿದ ಮಂಟಪ ಮತ್ತು ಹಿಂಬದಿಯಲ್ಲಿ ಎರಡು ಮಹಡಿಯ ಕೊರೆದ ಮಂದಿರಗಳನ್ನು ಒಳಗೊಂಡಿದೆ.
 
  • ಹಿಂದು  ಗುಹೆಗಳು:
ಎಲ್ಲೋರದ ಹಿಂದು ಗುಹೆಗಳು ಆರನೇ ಶತಮಾನದ ಅಂತ್ಯದಿಂದ 8ನೇ ಶತಮಾನದ ಕೊನೆಯವರೆಗೆ ನಿರ್ಮಾಣಗೊಂಡವು. 16ನೇ ಗುಹೆ ಕೈಲಾಸ ಅಥವಾ ಕೈಲಾಸನಾಥ ಎಂದು ಪ್ರಸಿದ್ಧವಾಗಿದೆ. ಇದು ಎಲ್ಲೋರದ ಸಾಟಿಯಿಲ್ಲದ ಆಕರ್ಷಣೆಯ ಕೇಂದ್ರಬಿಂದು.
  • ಜೈನ ಗುಹೆ:
ಎಲ್ಲೋರದಲ್ಲಿನ 5 ಜೈನ ಗುಹೆಗಳು 9 ಮತ್ತು 10ನೇ ಶತಮಾನಕ್ಕೆ ಸೇರಿವೆ. ಜೈನ ತತ್ವಜ್ಞಾನದ ಮತ್ತು ಸಂರ್ಪದಾಯದ ಒಂದು ನಿಶ್ಚಿತ ಸ್ವರೂಪವನ್ನು ಜೈನಗುಹೆಗಳು ಹೇಳುತ್ತವೆ.
 

Wednesday, August 21, 2013

ಕಾರ್ನಾಕ್ ಮಂದಿರಗಳ ಸರಪಳಿ

ಕಾರ್ನಾಕ್ ಈಜಿಪ್ಟ್ ನ ದೇವಾಲಯಗಳ ಸಮುಚ್ಚಯ. ಪ್ರಪಂಚದ ಅತ್ಯಂತ ವಿಶಾಲ ಹಾಗೂ ಪುರಾತನ ದೇವಾಲಯ ಎನ್ನುವುದು ಇದರ ಹೆಗ್ಗಳಿಕೆ. ನೈಲ್ನದಿಯ ಪೂರ್ವದಂಡೆಯಲ್ಲಿನ ಲಕ್ಸಾರ್ ಪಟ್ಟಣದಲ್ಲಿ ಕಾರ್ನಾಕ್ ಮಂದಿರ ಸರಪಳಿ ನಿರ್ಮಾಣಗೊಂಡಿದೆ.  ಈ ಮಂದಿರಗಳ ಸರಪಳಿ 60 ಎಕರೆ ಪ್ರದೇಶಕ್ಕೆ ಹರಡಿಕೊಂಡಿದೆ. ದೇವಾಲಯಗಳ ನಗರ
ಎಂತಲೂ ಇದನ್ನು ಕರೆಯುತ್ತಾರೆ.

  • ವಾಸ್ತುಶಿಲ್ಪದ ಅಚ್ಚರಿ:
ಗೀಜಾದ ಬೃಹತ್ ಪಿರಮಿಡ್ಡುಗಳಂತೆಯೇ ಇಲ್ಲಿನ ದೇವಾಲಯದ ಕಂಬಗಳು ಬೃಹದಾಕಾರ ಮತ್ತು ಭವ್ಯತೆಗೆ ಪ್ರಸಿದ್ಧಿ ಪಡೆದಿವೆ. ದೇವಾಲಯ ನಗರಿಯಲ್ಲಿ ಅಮುನ್, ಮುಖ್, ಕೊಂನ್ಸು ಹಾಗೂ ಯುದ್ಧ ದೇವತೆ ಮೊಂಟು ಸೇರಿದಂತೆ ಹಲವಾರು ದೇವರುಗಳ 25 ದೇವಾಲಯಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ದೇವಾಲಯವಿದೆ. ಕಾರ್ನಾಕ್ ದೇವಾಲಯ ಸಮುಚ್ಚಯ ವಾಸ್ತುಶಿಲ್ಪ ಶಾಸ್ತ್ರದ ಅಚ್ಚರಿಯಲ್ಲೊಂದು.

  • ನಿರ್ಮಾಣಗೊಂಡಿದ್ದು ಹೇಗೆ?
ಕ್ರಿ.ಪೂ. 16ನೇ ಶತಮಾನದಲ್ಲಿ ಕಾರ್ನಾಕ್ ದೇವಾಲಯ ಸಮುಚ್ಚಯ ನಿರ್ಮಾಣ ಆರಂಭವಾಯಿತು.  ಈ ಮಂದಿರಗಳ ಸರಪಳಿಯನ್ನು 1500 ವರ್ಷಗಳ ಕಾಲ ನಿರಂತರವಾಗಿ ಕಟ್ಟುತ್ತಾ ಹೋಗಲಾಗಿದೆ. ಸುಮಾರು 50 ಫೆರೋ ದೊರೆಗಳು ಇವುಗಳ ನಿರ್ಮಾಣದಲ್ಲಿ ಕೈಜೋಡಿಸಿದ್ದರು. ತಲೆಮಾರಿನಿಂದ ತಲೆಮಾರಿಗೆ ಈ ನಿರ್ಮಾಣಗಳು ಬೆಳೆಯುತ್ತಾ ಹೋದವು. ಸೂರ್ಯನ ಕಿರಣಗಳು ಒಳ ಪ್ರವೇಶಿಸದಷ್ಟು ದಟ್ಟವಾಗಿ ಒಂದಕ್ಕೊಂದು ತಾಗಿಕೊಂಡಂತೆ ದೇವಾಲಯಗಳನ್ನು ಕಟ್ಟಲಾಗಿದೆ. ಫೆರೋ ದೊರೆಗಳ ವೈಭವ ಮತ್ತು ಆ ಕಾಲದ ಶಿಲ್ಪಿಗಳ ಸೃಜನಶೀಲತೆಯ ಅನಾವರಣವನ್ನು ಇಲ್ಲಿ ಕಾಣಬಹುದುಕ್.

  • ಕರ್ನಾಕ್ ಇತಿಹಾಸ:
ಕಾರ್ನಾಕ್ ಎನ್ನುವುದು ಅರಬರು ಇಟ್ಟ ಹೆಸರು. ಇಜಿಪ್ಟಿಯನ್ನರು ಇದನ್ನು ಇಪೆಟ್ ಇಸೂಟ್ ಎನ್ನುತ್ತಿದ್ದರು. ಅಂದರೆ ಶ್ರೇಷ್ಠವಾದ ಪ್ರದೇಶ ಎಂದರ್ಥ. ಕ್ರಿ.ಪೂ. 1550ರಿಂದ 1069ರವರೆಗೂ ಈಜಿಪ್ಟನ್ ರಾಜಧಾನಿಯಾಗಿ ಕಂಗೊಳಿಸಿದ್ದ ಥೀಬ್ಸ್ (ಈಗಿನ ಲಕ್ಸಾರ್) ನಗರದ ಹೃದಯಭಾಗದಂತೆ ಇದ್ದ ಕಾರ್ನಾಕ್ ಧಾಮರ್ಿಕ, ರಾಜಕೀಯ, ಆಡಳಿತ, ಸಂಪತ್ತಿನ ಸಂಗ್ರಹಣೆಯ ಕೇಂದ್ರವಾಗಿತ್ತು. 1900ರಲ್ಲಿ ನಿರ್ಮಾಣಗೊಂಡ ಅಮುನ್ ದೇಗುಲ ಕಾರ್ನಾಕ್ ಸಮುಚ್ಚಯದಲ್ಲಿ ಪ್ರಸಿದ್ಧವಾದುದು. ಈ ದೇಗುಲ ಒಂದು ಸಾವಿರ ಅಡಿ ಉದ್ದ ಮತ್ತು 300 ಅಡಿ ಅಗಲವಾದ ವಿಸ್ತೀರ್ಣಹೊಂದಿದೆ. ಈ  ದೇವಾಲಯದ ಒಳಗೊಂಡ ಮುಖ್ಯಕಟ್ಟಡಗಳ ಸಮುಚ್ಚಯದಲ್ಲಿ ಹಿಂದೆ 86 ಸಾವಿರ ಮೂರ್ತಿಗಳು ಇದ್ದವಂತೆ.

ಕಂಬಸಾಲಿನ ಹಜಾರ:
ಕಂಬಗಳ ಸಾಲಿನ ಹಜಾರ 50,000 ಚದರ್ ಅಡಿ ವಿಸ್ತಾರವಾಗಿದ್ದು, 134 ಲಂಬ ಸಾಲು ಮತ್ತು 16 ಅಡ್ಡ ಸಾಲುಗಳಲ್ಲಿ ಇದನ್ನು ಹೊಂದಿದೆ. ಕಂಬಗಳು 80ರಿಂದ 85 ಅಡಿ ಎತ್ತರ ಮತ್ತು ಮೂರು ಮೀಟರ್ ಅಗಲ ವಾಗಿವೆ. ಸುಮಾರು 20 ಟನ್ ಭಾರದ ಕಲ್ಲಿನ ಚಪ್ಪಡಿಗಳನ್ನು ಕಂಬಗಳ ಮೇಲೆ ಹಾಸಿರುವುದು ವಿಶೇಷ. ಇದು ಈಗಲೂ ಜಗತ್ತಿನ ಅತ್ಯಂತ ದೊಡ್ಡ ಧಾಮರ್ಿಕ ಹಜಾರ ಎನ್ನುವ ಕೀರ್ತಿಗೆ ಭಾಜನವಾಗಿದೆ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಹೆಬ್ಬಾಗಿಲುಗಳಿವೆ. ನಾಜೂಕು ಕೆತ್ತನೆಗಳನ್ನೂ  ಚಿತ್ತಾರಗಳನ್ನೂ ಒಳಗೊಂಡಿರುವ ವಂಶಾಲಾಂಛನ ಸ್ತಂಭಗಳು ಬೆರಗು ಹುಟ್ಟಿಸುತ್ತವೆ. ಕಂಬಸಾಲಿನ ಹಜಾರಕ್ಕೆ ಹತ್ತಿರದಲ್ಲೇ ಗರುಡಗಂಬದಂತೆ ಚೂಪುತುದಿಯ ಎರಡು ಗರುಡಗಂಬಗಳನ್ನು ನೆಡಲಾಗಿದೆ. ಇದನ್ನು ಆಬ್ಲಿಸ್ಕ್ ಎನ್ನುತ್ತಾರೆ. ಏಕೈಕ ಮಹಿಳಾ ಫೆರೋ ಆಗಿದ್ದ ಹಾಟ್ಷೇಪ್ಸುಟ್ ರಾಣಿ  ನಿಮರ್ಿಸಿರುವ ಈ ಚೂಪು ಕಂಬಗಳ ಮೇಲೆ ಆಕೆಯ ಸಂದೇಶವನ್ನು ಕೆತ್ತಲಾಗಿದೆ.

Thursday, August 15, 2013

ಸಮುದ್ರದ ಒಳಗೊಂದು ಅರಮನೆ

ಐಷಾರಾಮಿ ಹೋಟೆಲ್ ಎಂದಾಕ್ಷಣ ನಮಗೆ ನೆನಪಾಗುವುದು ದುಬೈ. ಅಲ್ಲಿನ ಬುರ್ಜ್ ಅಲ್ ಅರಬ್ ಕಟ್ಟಡ. ಆದರೆ, ಅದನ್ನೂ ಮೀರಿಸುವ ಹೋಟೆಲ್ಗಳು ದುಬೈನಲ್ಲಿ ನಿರ್ಮಾಣವಾಗಿದ್ದು, ಇನ್ನೇನು ಕೆಲ ದಿನದಲ್ಲೇ ಪ್ರವಾಸಿಗರಿಗೆ ತೆರದುಕೊಳ್ಳಲಿದೆ. ಅಂದಹಾಗೆ ಇದು ನೆಲದ ಮೇಲೆ ನಿರ್ಮಿಸಿದ್ದಲ್ಲ. ಸಂಪೂರ್ಣ ನೀರಿನ ಒಳಗೇ ಮುಳುಗಿರುವ ಹೋಟೆಲ್. ಅದೇ, ಹೈಡ್ರೊಪೋಲಿಸ್ ಅಂಡರ್ವಾಟರ್ ಹೋಟೆಲ್. 


 ಕನಸಿನ ಅರಮನೆ
ಪ್ರವಾಸಿಗರು ಸಮುದ್ರದ ಜಲಚರಗಳನ್ನು ಕಣ್ಣಾರೆ ವೀಕ್ಷಿಸುತ್ತಾ, ವಿಶ್ರಾಂತಿ ಪಡೆದುಕೊಳ್ಳುವ ಸಲುವಾಗಿ ಹೋಟೆಲ್ ನಿರ್ಮಾಣ ಮಾಡಲಾಗಿದೆ. ಇದನ್ನು ಕನಸಿನ ಅರಮನೆ ಎಂದೇ ಬಣ್ಣಿಸಲಾಗಿದೆ. ಇಲ್ಲಿ ಕಾಲಿಟ್ಟರೆ ಸಮುದ್ರ ಪ್ರಾಣಿಗಳ ಜತೆಗೆ ನಾವೂ ಜೀವಿಸುತ್ತಿರುವ ಅನುಭವ. ದುಬೈನಲ್ಲಿರುವ ಜಮೆರಿಶ್ ಸಮುದ್ರ ತೀರದ ಪರ್ಷಿಯನ್ ಕೊಲ್ಲಿಯ ವಿಶಾಲವಾದ ಪ್ರದೆಶದಲ್ಲಿ ಹೈಡ್ರೊಪೋಲಿಸ್ ಹೋಟೆಲ್ ಇದೆ. ಇದು ಜಗತ್ತಿನ ಮೊದಲ ಐಶಾರಾಮಿ ಸಮುದ್ರದ ಒಳಗಿನ ಹೋಟೆಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾಲ್ಡೀವಸ್, ಫಿಜಿ, ಮುಂತಾಡೆದೆ ಈಗಾಗಲೇ ಸಮುದ್ರದ ಒಳಗೆ ಹೋಟೆಲ್ ಇದ್ದರೂ. ಇಷ್ಟೊಂದು ವಿಶಾಲವಾದ ಹೋಟೆಲ್ ಇದೇ ಮೊದಲು. ಜೋಕಿಮ್ ಹೌಸರ್ ಎಂಬಾತ ಹೈಡ್ರೊಪೋಲಿಸ್ ಹೋಟೆಲ್ನ ಶಿಲ್ಪಿ.

ಜಗತ್ತಿನ ದುಬಾರಿ ಹೋಟೆಲ್
ಹೈಡ್ರೊಪೋಲಿಸ್ ಹೋಟೆಲ್ ಸಮುದ್ರದ ಒಳಗೆ 260 ಹೆಕ್ಟೇರ್ ವಿಶಾಲವಾದ ಪ್ರದೇಶಕ್ಕೆ ಚಾಚಿಕೊಂಡಿದೆ. ಹೊಟೆಲ್ನ ಒಡೆತನ ದೊರೆ ಶೇಕ್ ಮಹಮ್ಮದ್ಗೆ ಸೇರಿದ್ದಾಗಿದೆ. ಇದಕ್ಕೆ ಆತನೇ ಹಣ ಒದಗಿದ್ದಾನೆ. ಹೋಟೆಲ್ ನಿರ್ಮಾಣ ವೆಚ್ಚ 3 ಸಾವಿರ ಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಇದರ ನಿರ್ಮಾಣ 2006ರಲ್ಲಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಹೈಡ್ರೊಪೊಲೀಸ್ ಹೋಟೆಲ್ ಜಗತ್ತಿನ ಅತ್ಯಂತ ದುಬಾರಿ ಹೋಟೆಲ್ ಎಂದು ಗುರುತಿಸಿಕೊಂಡಿದೆ. 

ಹೋಟೆಲ್ ಹೇಗಿರುತ್ತೆ?

ಸಮುದ್ರ ಮಟ್ಟದಿಂದ 66 ಅಡಿ ಆಳದಲ್ಲಿ ಇದನ್ನು ನಿರ್ಮಿಸಲಾಗಿದೆ. ಹೋಟೆಲ್ಗೆ ಅಳವಡಿಸಾದ ಮೇಲ್ಛಾವಣಿ ಸಂಪೂರ್ಣ ಪಾರದರ್ಶಕ ಗಾಜುಗಳಿಂದ ಕೂಡಿದೆ. ಹೋಟೆಲ್ಗೆ ರೈಲಿನ ಮೂಲಕ ತೆರಳಲು ಸುರಂಗ ವ್ಯವಸ್ಥೆ ಇದೆ. ಪ್ರವಾಸಿಗರು ವಿಶ್ರಾಂತಿ ಪಡೆಯುವ 220 ವಿಶಾಲ ಕೋಣೆಗಳನ್ನು ಹೋಟೆಲ್ ಹೊಂದಿದೆ.  ಕಿಟಕಿಯಲ್ಲಿ ಕತ್ತುಚಾಚುತ್ತಾ, ಅತ್ತಿತ್ತ ಓಡಾಡುವ ಮೀನುಗಳನ್ನು ಆರಾಮವಾಗಿ ಕುಳಿತು ವೀಕ್ಷಿಸುವ ವ್ಯವಸ್ಥೆ ಇದೆ. ಹೋಟೆಲ್ ಒಳಗಿನ ಉಳಿದ ಜಾಗದಲ್ಲಿ ಬಾರ್, ರೆಸ್ಟೋರೆಂಟ್, ಥೀಮ್ ಕೋಣೆಗಳು ಮತ್ತು ಸಭಾಂಗಣ ಕೂಡಾ ಇದೆ.

ಗಾಳಿ ಬೆಳಕು ಹೇಗೆ ಸಿಗುತ್ತೆ? 

ಹೋಟೆಲ್ ಅರ್ಧ ಚಂದ್ರಾಕೃತಿಯ ಮಡಚಿಕೊಳ್ಳುವ ಛಾವಣಿ ಅಳವಡಿಸಲಾಗಿದ್ದು, ತೆರದ ಆಗಸದಲ್ಲಿ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ. ಛಾವಣಿ ತೆರೆದು ಕೊಂಡಾಗ ಹೋಟೆಲ್ಗೆ ಗಾಳಿ ಬೆಳಕಿನ ಪೂರೈಕೆಯಾಗುತ್ತದೆ. ಹೋಟೆಲ್ಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗದ ರೀತಿಯಲ್ಲಿ ಯಾಂತ್ರಿಕ ಉಪಕರಣಗಳನ್ನು ಹೋಟೆಲ್ಗೆ ಅಳವಡಿಲಾಗಿದೆ. ಒಂದು ವೇಳೆ ಹೋಟೆಲ್ಗೆ ಉಗ್ರರ ಭೀತಿ ಎದುರಾದರೆ, ಶತ್ರುಗಳ ವಿರುದ್ಧ ಹೋರಾಡಲು ತನ್ನದೇ ಆದ ಕ್ಷಿಪಣಿ ವ್ಯವಸ್ಥೆಯನ್ನು ಹೋಟೆಲ್ ಹೊಂದಿದೆ.

 

ಕ್ರಿಸ್ಟ್ ದಿ ರಿಡೀಮರ್

ಏಸುಕ್ರಿಸ್ತನ ಈ ಪ್ರತಿಮೆ ಬ್ರೆಜಿಲ್ ಜನರ ಕ್ರಿಶ್ಚಿಯನ್ ಧರ್ಮದ ಸಂಕೇತ. ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಬ್ರೆಜಿಲ್ನ ರಿಯೊ ಡಿ ಜನೇರಿಯೋದಲ್ಲಿರುವ ಕೊರ್ಕೊವಾಡೊ ಪರ್ವತದ ಮೇಲೆ ನಿಮರ್ಮಾಣಗೊಂಡಿದೆ. ರಿಡೀಮರ್ ಅಂದರೆ ವಿಮೋಚನೆ ನೀಡುವವನು ಎಂದು ಅರ್ಥ. ವಿಶಾಲವಾದ ತೋಳುಗಳನ್ನು ಅಗಲಿಸಿ ನಿಂತಿರುವ ಈ ಪ್ರತಿಮೆ ಎಲ್ಲರನ್ನೂ ಪ್ರೀತಿಸುವ, ಎಲ್ಲವನ್ನೂ ಸ್ವೀಕರಿಸುವ, ತನ್ನ ಬಳಿ ಬಂದವರನ್ನು ಅಪ್ಪಿಕೊಳ್ಳುವ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಕ್ರಿಶ್ಚಿಯನ್ ಧರ್ಮದ ಕ್ರಾಸ್ ಚಿಹ್ನೆಯಂತೆಯೂ ಇದನ್ನು ಗುರುತಿಸಬಹುದು. ಜಗತ್ತಿನ ಶಾಂತಿಯ ದ್ಯೋತಕವೂ ಹೌದು. ಇದು ಬ್ರೆಜಿಲಿಯನ್ ಜನರ ಪ್ರೀತಿಯ ಲಾಂಛನ. ಕ್ರಿಸ್ಟ್ ದಿ ರಿಡೀಮರ್ ಏಸುವಿನ 5ನೇ ಅತಿದೊಡ್ಡ ಪ್ರತಿಮೆ.

 


 ಪ್ರತಿಮೆ ನಿಮರ್ಮಿಸಿದ್ದು ಏಕೆ?
1850ರಲ್ಲಿ ಬ್ರೆಜಿಲಿಯನ್ನರು ತಮ್ಮದೇ ಆದ ಧಾರ್ಮಿಕ ಪ್ರತಿಮೆಯನ್ನು ರಿಯೊ ಡಿ ಜನೇರಿಯೋದಲ್ಲಿ ಸ್ಥಾಪಿಸುವ ಬಯಕೆಹೊಂದಿದ್ದರು. ಫ್ರಾನ್ಸ್ ಸಂತನೊಬ್ಬ ಏಸುವಿನ ಪ್ರತಿಮೆ ನಿರ್ಮಿಸುವ ಕುರಿತು ಸಲಹೆ ನೀಡಿದ್ದ. ಆದರೆ, ಇದಕ್ಕೆ ಅನುಮತಿ ದೊರೆಯಲಿಲ್ಲ. 60 ವರ್ಷದ ಬಳಿಕ, 1910ರಲ್ಲಿ ನಡೆದ ಆರ್ಚ್ ಬಿಷಪ್ಪರ ಸಭೆಯಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಲಾಯಿತು. ಧಾಮರ್ಿಕ ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯರಿಂದ ಅಪಾರ ಪ್ರಮಾಣದ ಹಣ ಸಂಗ್ರಹಣೆ ಮಾಡಲಾಯಿತು. ಸುದೀರ್ಘ ಚಿಂತನೆಯ ಬಳಿಕ, ಏಸುವಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಯಿತು. ಬ್ರೆಜಿಲ್ ಸ್ವಾತಂತ್ರ್ಯಗಳಿಸಿದ ದಿನವಾದ ಏ.22, 1922ರರಲ್ಲಿ ಪ್ರತಿಮೆ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು. 9 ವರ್ಷದ ಬಳಿಕ ಪ್ರತಿಮೆ ನಿಮರ್ಮಾಣ ಪೂರ್ಣಗೊಂಡಿತು.

ಕ್ರಿಸ್ಟ್ ದಿ ರಿಡೀಮರ್ ವಿಶೇಷತೆ:
ಸೋಪ್ಸ್ಟೋನ್ ಮತ್ತು ಕಾಂಕ್ರೀಟ್ನಿಂದ ಕ್ರಿಸ್ಟ್ ದಿ ರಿಡೀಮರ್ ಪ್ರತಿಮೆ ನಿರ್ಮಿಸಲಾಗಿದೆ. 2300 ಅಡಿ ಎತ್ತರದ ಕೊರ್ಕೊವಾಡೊ ಬೆಟ್ಟದ ತುತ್ತತುದಿಯಲ್ಲಿ ಇದನ್ನು ಸ್ಥಾಪಿಸಿರುವುದು ವಿಶೇಷ. ಈ ಏಸುವಿನ ಪ್ರತಿಮೆ 98 ಅಡಿ ಎತ್ತರವಾಗಿದೆ. ತೋಳುಗಳು 92 ಅಡಿ ಅಗಲವಾಗಿದೆ. 26 ಅಡಿ ಎತ್ತರದ ಪಾದಪೀಠದ  ಮೇಲೆ ಇದನ್ನು ನಿಮರ್ಿಸಲಾಗಿದೆ. ಪ್ರತಿಮೆಯ ತೂಕ 635 ಟನ್. ಅಕ್ಟೋಬರ್ 12, 1931ರಂದು ಪ್ರತಿಮೆಯ ಉದ್ಘಾಟನೆ ನೆರವೇರಿತು. ಜಗತ್ತಿನ ಅತಿ ಎತ್ತರದ ಪ್ರತಿಮೆಗಳಲ್ಲಿ ಇದು ಕೂಡಾ ಒಂದೆನಿಸಿದೆ.  ಬ್ರೆಜಿಲ್ನ ಹೆಯಿಟರ್ ಡಾ ಸಿಲ್ವಾ ಕೊಸ್ಟಾ ಪ್ರತಿಮೆಯ ವಿನ್ಯಾಸಕಾರ. ಪ್ರತಿಮೆ ನಿರ್ಮಾ ಣಕ್ಕೆ ಅಂದಾಜು 2 ಲಕ್ಷದ 50 ಸಾವಿರ ಡಾಲರ್ ವೆಚ್ಚಮಾಡಲಾಗಿದೆ. ಪ್ರತಿಮೆಯ ಬುಡಕ್ಕೆ ತಲುಪಬೇಕಾದರೆ ಕೊಕರ್ೊವಾಡೊ ಬೆಟ್ಟವನ್ನು ಏರಿದ ಬಳಿಕ ಮತ್ತೆ 220 ಮೆಟ್ಟಿಲುಗಳನ್ನು ಹತ್ತಬೇಕು. 2007ರಲ್ಲಿ ಕ್ರಿಸ್ಟ್ ದಿ ರಿಡೀಮರ್ ಪ್ರತಿಮೆಗೆ ಆಧುನಿಕ ಜಗತ್ತಿನ ಏಳು ಅದ್ಭುತಗಲ್ಲಿ ಒಂದೆಂದು ಮಾನ್ಯತೆ ನೀಡಲಾಯುತು. ರಾತ್ರಿಯ ವೇಳೆ ಪ್ರತಿಮೆಗೆ  ಪ್ರಖರ ಬೆಳಕನ್ನು ಹಾಯಿಸಲಾಗುತ್ತದೆ. ಆ ಸಮಯದಲ್ಲಿ ಪ್ರತಿಮೆ ತೋಳನ್ನು ಅಗಲಿಸಿ ಆಕಾಶದಲ್ಲಿ ತೇಲಿದಂತೆ ಭಾಸವಾಗುತ್ತದೆ. ಜತೆಗ ರಿಯೋ ಪಟ್ಟಣದ ಸೌಂದರ್ಯವನ್ನು ಸಹ ಆನಂದಿಸಬಹುದು.

ಪುನರುತ್ಥಾನ:
ಪ್ರಖರವಾದ ಬೆಳಕನ್ನು ಹಾಯಿಸಿದ್ದರಿಂದ ಪ್ರತಿಮೆಗೆ ಹಾನಿ ಸಂಭವಿಸಿತ್ತು. ಬಳಿಕ 2008ರಲ್ಲಿ ಪ್ರತಿಮೆಯ ಪುನರುತ್ಥಾನ ಮಾಡಲಾಗಿದೆ. ಪ್ರತಿಮೆಗೆ ಬಳಸಲಾದ ಕಲ್ಲನ್ನು ಸ್ವೀಡನ್ನಿಂದ ತರಲಾಗಿದ್ದು, ಪ್ರತಿಮೆಯ ಪುನರುತ್ಥಾನಕ್ಕೂ ಅದೇ ಮೂಲ ಶಿಲೆಗಳನ್ನೇ ಬಳಸಲಾಗಿದೆ. ಏಸುವಿನ ಬಲಗೈ ದಕ್ಷಿಣ ರಿಯೋ ಡಿ ಜನೇರಿಯೋ ಪಟ್ಟಣವನ್ನು  ಮತ್ತು ಎಡಗೈ ಉತ್ತರ ರೊಯೋ ಡಿ ಜನೇರಿಯೋ ಪಟ್ಟಣವನ್ನು ತೋರಿಸುತ್ತದೆ.

 

Wednesday, July 31, 2013

ಗತವೈಭವ ಸಾರುವ ರೋಮನ್ ಕಲೋಸಿಯಂ

ಜಗತ್ತು ಕಂಡ ಶ್ರೇಷ್ಠ ನಾಗರಿಕತೆಯಲ್ಲಿ ರೋಮನ್ ನಾಗರಿಕತೆ ಸಹ ಒಂದು. ಅಂದು ನಿರ್ಮಿಸಿದ ಕಟ್ಟಡಗಳು ಇಂದಿಗೂ ಉಳಿದುಕೊಂಡಿವೆ. ಅವುಗಳಲ್ಲಿ ಒಂದು ಈ ರೋಮನ್ ಕಲೋಸಿಯಂ. ಇದೊಂದು ಹಿಂಸಾತ್ಮಕ ಮಲ್ಲ ಯುದ್ಧ,  ಪ್ರಾಣಿಗಳ ಕದನಗಳು ನಡೆಯುತ್ತಿದ್ದ ಕ್ರೀಡಾಂಗಣ. ಗ್ರೀಕರ ಕಾಲದಲ್ಲಿ ಸಂಗೀತ ನಾಟಕ ಸ್ಪರ್ಧೆ, ಕ್ರೀಡೆ, ಮನೋರಂಜನೆಗಳಿಗೆ, ವಸಂತೋತ್ಸವಗಳಿಗೆ ಬಳಕೆಯಾದ ವರ್ತುಲಾಕಾರದ ರಂಗಮಂದಿರ (ಆಂಫಿಥಿಯೇಟರ್)ಗಳು ರೋಮನ್ನರ ಕಾಲಕ್ಕೆ ಕಲೋಸಿಯಂಗಳಾಗಿ ಬದಲಾದವು. ಗುಲಾಮರನ್ನು ಖಡ್ಗ ಮಲ್ಲರನ್ನೂ ಸ್ಪರ್ಧೆ, ಕ್ರೌರ್ಯ, ಹಿಂಸೆ, ಪೀಡನೆ, ದೌರ್ಜನ್ಯಗಳಿಗೆ ಗುರಿಪಡಿಸುವುದಕ್ಕೆ ಕುಖ್ಯಾತಿಗಳಿಸಿದ್ದವು.

ಖಡ್ಗಮಲ್ಲರ ಕಾದಾಟ:
ಹಿಂಸಾತ್ಮಕ ಮಲ್ಲಯುದ್ಧವನ್ನು ಆಡಿಸುವ ಉದ್ದೇಶಕ್ಕಾಗಿಯೇ 2 ಸಾವಿರ ವರ್ಷಗಳ ಹಿಂದೆ ಕಲೋಸಿಯಂ ನಿರ್ಮಾಣ ಮಾಡಲಾಗಿತ್ತು. ಮರಳಿನ ಅಂಗಳದಲ್ಲಿ ಮಲ್ಲ ಯೋಧರು ಸಾಯುವ ತನಕವೂ ಕಾದಾಡಬೇಕಾಗಿತ್ತು. ಈ ಕಾದಾಟದಲ್ಲಿ ಕೆಲವೇ ಕೆಲವು ಯೋಧರು ಮಾತ್ರ ಬದುಕುಳಿಯುತ್ತಿದ್ದರು. ಉಳಿದವರು ಪ್ರೇಕ್ಷಕರಿಗೆ ಕ್ರೂರ ಮನೋರಂಜನೆಯ ಹಸಿವನ್ನು ನೀಗುವ ಸಲುವಾಗಿ ಪ್ರಾಣಿಗಳಿಗಿಂತಲೂ ಹೀನಾಯವಾದ ಸಾವನ್ನು ಅನುಭವಿಸಬೇಕಾಗಿತ್ತು.

ಕಲೋಸಿಯಂ ವಿಶೇಷತೆ:
  • ರೋಮನ್ ಕಲೋಸಿಯಂ ಇಂದಿನ ಕ್ರಿಕೆಟ್ ಕ್ರೀಡಾಂಗಣದಷ್ಟು ದೊಡ್ಡದಾಗಿತ್ತು. ಇದರಲ್ಲಿ 45 ಸಾವಿರ  ಮಂದಿಗೆ ಆಸನ ವ್ಯವಸ್ಥೆ,  5 ಸಾವಿರ ಬಡ ನಾಗರಿಕರು ನಿಂತು ನೋಡುವ ಸೌಕರ್ಯವಿತ್ತು. 
  • ಇದಲ್ಲದೆ ಕ್ರೀಡೆಯಲ್ಲಿ ಭಾಗವಹಿಸುವವರು ರಂಗ  ಪ್ರವೇಶಿಸುವುದಕ್ಕೆ ಮತ್ತು ಪಂದ್ಯಾಟದಲ್ಲಿ ಪ್ರಾಣತೆತ್ತವರ ಕಳೇಬರವನ್ನು ಕೂಡಲೇ ಸಾಗಿಸುವ ಏರ್ಪಾಡುಗಳೂ ಇದ್ದವು. 
  • ಚಕ್ರವರ್ತಿಯ ಪರಿವಾರಕ್ಕೆ ತೀರಾ ಹತ್ತಿರದಿಂದ ಕ್ರೀಡೆ ನೋಡಿ ಆನಂದಿಸಲು ವಿಶೇಷ ಆಸನಗಳು, ವಿದೇಶಿ ಅತಿಥಿಗಳಿಗೆ, ಸೈನ್ಯಾಧಿಕಾರಿಗಳಿಗೆ, ಗಣ್ಯನಾಗರಿಕರಿಗೆ, ಅವರವರ ಘನತೆಗೆ ತಕ್ಕಂತೆ ಆಸನಗಳು ಇರುತ್ತಿದ್ದವು.
  • ಅಂಡಾಕಾರದಲ್ಲಿರುವ ಕಲೋಸಿಯಂ 189 ಮೀಟರ್ ಉದ್ದ, 156 ಮೀಟರ್ ಅಗಲ ಮತ್ತು  545 ಮೀಟರ್ ಸುತ್ತಳತೆಯದ್ದಾಗಿದೆ. ಕೇಂದ್ರ ರಂಗಸ್ಥಳ ಕೂಡಾ ಅಂಡಾಕಾರವಾಗಿದ್ದು, 87 ಮೀ. ಉದ್ದ ಮತ್ತು 74 ಮೀ. ಅಗಲವಾಗಿದೆ. ಹೊರಭಾಗದ ರಚನೆ ಒಂದು ಕಡೆ ಮಾತ್ರ ಉಳಿದುಕೊಂಡಿದ್ದು, 57 ಮೀ. ಎತ್ತರವಾಗಿದೆ. ಹೊರಗಿನ ಆವರಣ ನಾಲ್ಕು ಅಂತಸ್ತನ್ನು ಹೊಂದಿದ್ದು, ಮೂರನೇ ಮಹಡಿಯವರೆಗೆ ಕಮಾನು ಬಾಗಿಲುಗಳಿವೆ.
ರೋಮನ್ ಗತವೈಭವದ ನೆನಪು:
ಇಟಲಿ ರಾಜಧಾನಿ ರೋಮ್ನ ಮಧ್ಯಭಾದಲ್ಲಿರುವ ಕಲೋಸಿಯಂ ರೋಮನ್ ಸಾಮ್ರಾಜ್ಯದ ಗತವೈಭವನ್ನು ಇಂದಿಗೂ ಸಾರುತ್ತಾ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಆಕಷರ್ಿಸುತ್ತಿದೆ. ಈಗ ಉಳಿದುಕೊಂಡಿರುವ ಕಲೋಸಿಯಂ ನಿಮರ್ಾಣ ಕಾರ್ಯ ಕ್ರಿ.ಶ. 70ರಲ್ಲಿ ಪ್ರಾರಂಭವಾಯಿತು. ಇದಕ್ಕಿಂತಲೂ ಮುಂಚೆ ಇದ್ದ ಕಲೋಸಿಯಮ್ನ್ನು  ಮರದಿಂದ ನಿಮರ್ಿಸಲಾಗಿದ್ದು, ಕ್ರಿ.ಶ. 64ರಲ್ಲಿ ಬೆಂಕಿಯಿಂದ ಸಂಪೂರ್ಣ ನಾಶವಾಗಿದ್ದರಿಂದ ಹೊಸ ಕಲೋಸಿಯಂ ನಿರ್ಮಾಣ ಅಗತ್ಯವಾಯಿತು. 10 ವರ್ಷಗಳ ಕಾಲ ನಡೆದ ನಿರ್ಮಾಣ ಕಾರ್ಯದಲ್ಲಿ ರೋಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತುಶಿಲ್ಪಿಗಳು, ರೋಮಿನ ಕಾರ್ಮಿಕರ ಜತೆ ಸಾವಿರಾರು ಗುಲಾಮರನ್ನು ಬಳಸಿಕೊಳ್ಳಲಾಗಿತ್ತು.

ಹಿಂಸಾತ್ಮಕ ಕ್ರೀಡೆಗೆ ತೆರೆ:
ಕಲೋಸಿಯಂ ಉದ್ಘಾಟನೆಗೆ ಮೊದಲು ನೂರು ದಿನಗಳ ಕಾಲ ಮೋಜಿನ ಕ್ರೀಡೆಗಳ ಸಮಾರಂಭದಲ್ಲಿ ಸಾವಿರಾರು ಗುಲಾಮರ, ಮೃಗಗಳ ಹತ್ಯೆ ನಡೆಯಿತು. ಗುಲಾಮರನ್ನು ಮಾತ್ರವಲ್ಲದೆ, ಅಪರಾಧಿಗಳನ್ನು ಸೈನ್ಯ ಸೇವೆ ತೊರೆದವರನ್ನು ಮತ್ತು  ಇನ್ನು ಹಲವು ಕೈದಿಗಳನ್ನು ಶಿಕ್ಷಿಸುವ ಉಪಾಯವಾಗಿ ಸಹ ಖಡ್ಗಮಲ್ಲರ ಕ್ರೀಡೆ ಆಯೋಜಿಸಲಾಗುತ್ತಿತ್ತು. ಕೆಲವೊಮ್ಮೆ ಕೈದಿಗಳು ತಮ್ಮ ತಮ್ಮಲ್ಲಿಯೇ ಕಾದಾಡುತ್ತಾ, ಮಿತ್ರರನ್ನೇ ಕೊಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಮುಂದೆ ಕ್ರಿ.ಶ. 404ರಲ್ಲಿ ಖಡ್ಗಮಲ್ಲರ ಕ್ರೀಡೆಯನ್ನು ಅಧಿಕೃತವಾಗಿ ರದ್ದು ಮಾಡಲಾಯಿತು. 

Thursday, July 25, 2013

ಮೌಂಟ್ ರಶ್ಮೋರ್ ಕಲ್ಲಿನ ಕೆತ್ತನೆ

 ಮೌಂಟ್ ರಶ್ಮೋರ್ ಒಂದು ಚಿರಸ್ಮರಣೀಯ ಕಲ್ಲಿನ ಶಿಲ್ಪ. ಅಮೆರಿಕದ ದಕ್ಷಿಣ ಡಕೊಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರಶ್ಮೋರ್ ಎಂಬ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಈ ಸ್ಮಾರಕವನ್ನು ಕೆತ್ತಲಾಗಿದೆ. ಈ ಶತಮಾನದಲ್ಲಿ ನಿರ್ಮಿ ತವಾದ ಮೌಂಟ್ ರಶ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ
ಅದ್ಭುತಗಳಲ್ಲಿ ಒಂದೆಂದು ಹೇಳಬಹುದು.

ನಾಲ್ಕು ಅಧ್ಯಕ್ಷರ ಕಲಾಕೃತಿ:
ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರಾದ ಜಾರ್ಜ್ ವಾಷಿಂಗ್ಟನ್,  ಥಾಮಸ್ ಜೆಫರ್ಸನ್, ಥಿಯೋಡರ್ ರೂಸ್ವೆಲ್ಟ್, ಅಬ್ರಹಾಂ ಲಿಂಕನ್ ಇವರ ಆಕೃತಿಯನ್ನು ಇಲ್ಲಿ ಕೆತ್ತಲಾಗಿದೆ. ಅಷ್ಟು ಕಡಿದಾದ ಆ ಹೆಬ್ಬಂಡೆಯ ಪಾಶ್ರ್ವದಲ್ಲಿ ಆ ನಾಲ್ಕು ಮಂದಿ ಮಹಾನ್ ವ್ಯಕ್ತಿಗಳ ತದ್ರೂಪಗಳನ್ನು ಮೂಡಿಸಲು ಶಿಲ್ಪಿಗಳು ಯಾವ ಉಪಾಯ ಮಾಡಿದರು ಎನ್ನುವ ಕಲ್ಪನೆಯೇ ರೋಚಕ.

ಕೆತ್ತನೆಯ ರೋಚಕ ಇತಿಹಾಸ:
ಇತಿಹಾಸಕಾರ ಡೋನ್ ರಾಬಿನ್ ಸನ್ ದಕ್ಷಿಣ ಡಕೋಟದಲ್ಲಿ ಪ್ರವಾಸೋದ್ಯಮವನ್ನು  ಬೆಳೆಸಲು 1923ರಲ್ಲಿ ಮೌಂಟ್ ರಶ್ಮೋರದ ಕಲ್ಪನೆಯನ್ನು  ಗ್ರಹಿಸಿದ. ಮೌಂಟ್ ರಶ್ಮೋರ್ ಸಮುದ್ರ ಮಟ್ಟಕ್ಕಿಂತ 1745 ಮೀಟರ್ ಎತ್ತರದಲ್ಲಿದೆ. ಇಲ್ಲಿ ಕೊರೆಯಲಾದ ಶಿಲ್ಪವೇ 465 ಅಡಿಯಷ್ಟು ಎತ್ತರವಾಗಿದೆ. ಪ್ರತಿಯೊಬ್ಬ ಅಧ್ಯಕ್ಷನ ತಲೆ ಆರು ಮಹಡಿ ಕಟ್ಟಡದಷ್ಟು ದೊಡ್ಡದಾಗಿದೆ. ಅಧ್ಯಕ್ಷರ ಮೂಗು 20 ಅಡಿ ಉದ್ದ, ಬಾಯಿ 18 ಅಡಿ ಅಗಲವಾಗಿದೆ. ಕಣ್ಣುಗಳು ಸುಮಾರು  11 ಅಡಿಯಷ್ಟು ಅಳತೆ ಹೊಂದಿದೆ. ಕಾರ್ಮಿಕರು ಈ ಶಿಲ್ಪವನ್ನು ಕೆತ್ತಲು ಪ್ರತಿದಿನ 5006 ಮೆಟ್ಟಿಲುಗಳನ್ನು ಹತ್ತಿ ಮೌಂಟ್ ರಶ್ಮೋರ್ನ ತುದಿಯನ್ನು  ತಲುಪಬೇಕಾಗಿತ್ತು. ಗುಟ್ಜೋನ್ ಬೋಗ್ರ್ ಲಮ್ ಎಂಬಾತ ಸ್ಮಾರಕವನ್ನು ವಿನ್ಯಾಸಗೊಳಿಸಿದ ಶಿಲ್ಪಿ. ಪ್ರತಿಮೆಯನ್ನು ಕೆತ್ತುವ ಮೇಲ್ವಿಚಾರಣೆಯನ್ನು ಆತನೇ ನೋಡಿಕೊಡಿದ್ದ. ಪ್ರತಿಮೆ ಕೆತ್ತುವ ಕೆಲಸ 1927ರಲ್ಲಿ ಆರಂಭವಾಗಿ ಕುಂಟುತ್ತಾ, ಎಡವುತ್ತಾ 14 ವರ್ಷಗಳ ಕಾಲ ನಡೆಯಿತು. 1941ರಲ್ಲಿ ಸ್ಮಾರಕ ಪೂರ್ಣಗೊಳ್ಳುವ ಮೊದಲೇ ಬೊಗ್ರ್ಲಮ್  ತೀರಿಕೊಂಡ. ಮುಂದೆ ಆತನ ಮಗ ಪ್ರತಿಮೆಯನ್ನು ಪೂರ್ಣಗೊಳಿಸಿದ. ಮಹಾಯುದ್ಧದ ಸಂದರ್ಭದಲ್ಲಿ ಇದರ ಉದ್ಘಾಟನೆ ತೀರಾ ಸಾಧಾರಣ ರೀತಿಯಲ್ಲಿ ನೆರವೇರಿತು. ಅಮೆರಿಕದ ನಾಲ್ಕು ಅಧ್ಯಕ್ಷರ ಮುಖವಿರುವ ಮೌಂಟ್ ರಶ್ಮೋರ್ವನ್ನು ಅಮೆರಿಕದ ರಾಷ್ಟ್ರೀಯ ಸ್ಮಾರಕ ಎಂದು ಪರಿಗಣಿಸಲಾಗಿದೆ. 1966ರಲ್ಲಿ  ಮೌಂಟ್ ರಶ್ಮೋರ್ ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ದಾಖಲೆಗಳಲ್ಲಿ ನಮೂದಿಸಲ್ಪಟ್ಟಿತು. ಇಷ್ಟೊಂದು ದೊಡ್ಡಗಾತ್ರದ ಆಕೃತಿ ಕೆತ್ತುವಾಗ ಯಾವುದೇ ಕೆಲಸಗಾರ ಬಿದ್ದು ಸಾವನ್ನಪ್ಪದೇ ಇರುವುದು ಇದರ ಮತ್ತೊಂದು ವಿಶೇಷತೆ.
 
ದೂರದಿಂದಲೇ ನೋಡಬೇಕು.

ಈ ರಾಷ್ಟ್ರೀಯ ಸ್ಮಾರಕವನ್ನು ತೀರಾ ಸಮೀಪದಿಂದ ನೋಡಿದರೆ, ಅದರ ನಿಜವಾದ ಗಾಂಭೀರ್ಯ ತಿಳಿಯುವುದಿಲ್ಲ. ಹಾಗೆ ನೋಡಲು ಪ್ರಯತ್ನಿಸಿದರೆ, ನಾಲ್ಕು ಮುಖಗಳ ಪೈಕಿ ಒಂದೆರಡನ್ನು ನೋಡಬಹುದು. ಆದುದರಿಂದ ಸ್ಮಾರಕದ ಎದುರಿನ ಬೆಟ್ಟದಲ್ಲಿ ಹಾದು ಹೋಗುವ ದಾರಿಯಲ್ಲಿ ಜನರು ವಾಹನಗಳನ್ನು ನಿಲ್ಲಿಸಿ, ಈ  ಭವ್ಯ ಸ್ಮಾರಕವನ್ನು ದೂರದಿಂದ ನೋಡಿ ಸಂತೋಷಪಡುತ್ತಾರೆ. ಈ ಸ್ಮಾರಕವು ವಾರ್ಷಿಕವಾಗಿ ಸರಿಸುಮಾರು 20 ಲಕ್ಷ ಜನರನ್ನು ಆಕರ್ಷಿಸುತ್ತದೆ.

ಹಿಂಭಾಗದಲ್ಲಿ ದಾಖಲೆ ಭವನ:

ಮುಖಗಳ ಹಿಂಭಾಗದಲ್ಲಿನ ಗುಹೆಗಳಲ್ಲಿ ಕೊಠಡಿಗಳನ್ನು  ಕೊರೆಯಲಾಗಿದ್ದು, ಸ್ವಾತಂತ್ರ್ಯದ ಪ್ರಕಟಣೆ ಮತ್ತು ಸಂವಿಧಾನ, ನಾಲ್ಕು ಅಧ್ಯಕ್ಷರ ಮತ್ತು ಬೊಗ್ರ್ಲಮ್ನ ಜೀವನ ಚರಿತ್ರೆ ಮತ್ತು ಅಮೆರಿದ ಇತಿಹಾಸದ ಉಲ್ಲೇಖವನ್ನು ಒಳಗೊಂಡಿದೆ. ಇದನ್ನು ಯೋಜಿತ ದಾಖಲೆಗಳ ಭವನ ಎಂದು  ಕರೆಯಲಾಗುತ್ತದೆ.
 

Sunday, July 14, 2013

ಅಮರನಾಥ ಗುಹೆಯ ಹಿಮಲಿಂಗ ದರ್ಶನ

ಅಮರನಾಥ ಗುಹೆ ಹಿಂದುಗಳ ಪವಿತ್ರ ಯಾತ್ರಾ ಸ್ಥಳ. ಜಮ್ಮು-ಕಾಶ್ಮೀರದ ಶ್ರೀನಗರದಿಂದ 141 ಕಿ.ಮೀ. ದೂರಲ್ಲಿನ ಪಹಲ್ಗಾಮ್ ಸಮೀಪದಲ್ಲಿದೆ. ಈ ಗುಹೆ ಸಮುದ್ರ ಮಟ್ಟದಿಂದ 3,888 ಮೀ. (12,756 ಅಡಿ) ಎತ್ತರದಲ್ಲಿದೆ. ಶಿವಕ್ಷೇತ್ರಗಲ್ಲಿ ಒಂದಾಗಿರುವ ಅಮರನಾಥ ಗುಹೆಯಲ್ಲಿ ನೈಸರ್ಗಿಕವಾಗಿ  ರೂಪಗೊಳ್ಳುವ ಹಿಮಲಿಂಗ ಪ್ರಮುಖ ಆಕರ್ಷಣೆ. ದಕ್ಷಿಣಕ್ಕೆ ಮುಖಮಾಡಿ ನಿಂತಿರುವ 131 ಅಡಿ ಎತ್ತರದ ಗುಹೆಯ ಒಳಗೆ ಹಿಮಲಿಂಗವಿದೆ.
 ಈ ಗುಹೆ 5000 ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತದೆ.


ಹಿಮಲಿಂಗದ ಉದ್ಭವ ಹೇಗೆ?
ಗುಹೆಯ ಮೇಲ್ಭಾಗ ಮತ್ತು ಕೆಳಭಾಗ ನೀರಿನ ಸೆಲೆ ಇದ್ದು, ಗುಹೆಯ ನೆತ್ತಿಯ ಮೇಲಿನಿಂದ ತೊಟ್ಟಿಕ್ಕುವ ನೀರು ಘನೀಕೃತವಾಗಿ ಶಿವವಲಿಂಗದ ಆಕೃತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ. ಹಿಮಲಿಂಗ ಸುಮಾರು 15 ಅಡಿ ಎತ್ತರ ಬೆಳೆದು ಗುಹೆಯ ಒಳಗಿನ ತುದಿಯನ್ನು ಮುಟ್ಟುತ್ತದೆ. ಇದನ್ನು ಶಿವಲಿಂಗ ಎಂದು ಪರಿಗಣಿಸಲಾಗುತ್ತದೆ. ಮೇನಿಂದ ಆಗಸ್ಟ್ ತಿಂಗಳಿನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಚಂದ್ರನ ಗತಿಗೆ ಅನುಸಾರವಾಗಿ ಬೆಳೆದು ಬಳಿಕ ಕರಗುವುದು ಹಿಮಲಿಂಗದ ವಿಶೇಷ. ಶ್ರಾವಣ ಪೂರ್ಣಿಮೆಯಂದು  ಹಿಮಲಿಂಗ ಪೂರ್ಣ ಪ್ರಮಾಣದ ಎತ್ತರವನ್ನು ತಲುಪುತ್ತದೆ. ಈ ಹಿಮಲಿಂಗನ್ನು ಅಮರೇಶ್, ಅಮರೇಶ್ವರ, ರಾಸ ಲಿಂಗಂ, ಶುದ್ಧಿ ಲಿಂಗಂ ಮುಂತಾದ ಅನೇಕ ಹೆಸರಿನಿಂದ ಕರೆಯಲಾಗುತ್ತದೆ. 

ಹಿಮಲಿಂಗದ ಮಹತ್ವ: 
ಅಮರನಾಥ ಗುಹೆಯಲ್ಲಿ ಶಿವನನ್ನು ಪ್ರತಿನಿಧಿಸುವ ಹಿಮಲಿಂಗದೊಂದಿಗೆ ಎರಡು ಸಣ್ಣ ಹಿಮಲಿಂಗಗಳೂ ಇದ್ದು, ಅದು ಪಾರ್ವತಿ ಮತ್ತು ಗಣೇಶ ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶಿವ ತನ್ನ ಪತ್ನಿ ಪಾರ್ವತಿಗೆ ಜೀವನದ ರಹಸ್ಯವನ್ನು ಹೇಳಿದ ಎನ್ನುವ ಪ್ರತೀತಿ ಇದೆ. 

ಅಮರನಾಥ ಯಾತ್ರೆ:
ಅಮರನಾಥ ಯಾತ್ರೆ ಶ್ರಾವಣ ಮಾಸದಲ್ಲಿ ಅಂದರೆ, ಜೂನ್ ನಿಂದ  ಆಗಸ್ಟ್ ತನಕ ವರ್ಷಂಪ್ರತಿ ಆಯೋಜನೆ ಮಾಡಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಹಿಮಲಿಂಗದ ದರ್ಶನ ಪಡೆಯಲು ಸಾವಿರಾರು ಭಕ್ತರು ಅಮರನಾಥಕ್ಕೆ ಆಗಮಿಸುತ್ತಾರೆ.  ಸಾವಿರಾರು ವರ್ಷಗಳ ಇತಿಹಾಸವಿರುವ ಅಮರನಾಥ ದೇಗುಲ 12ನೇ  ಶತನಾನದ ಬಳಿಕ ಜನಮಾನಸದಿಂದ ಕಳೆದುಹೋಗಿತ್ತು. ಅಮರನಾಥದಲ್ಲಿ ಗುಹಾಂರ್ತಗತ ಹಿಮಲಿಂಗ ಇರುವುದನ್ನು ಮುಸ್ಲಿಂ ದನಗಾಹಿಯೊಬ್ಬ ಪತ್ತೆಹಚ್ಚಿದ. ನಂತರ ಅಮರನಾಥ ಯಾತ್ರೆ ಆರಂಭವಾದಾಗ ಯಾತ್ರಾರ್ಥಿಗಳ  ಕಷ್ಟ ಸುಖವನ್ನು ನೋಡಿಕೊಳ್ಳುತ್ತಿರುವುದು ಸಹ ಮುಸ್ಲಿಮರೇ. 

ಗುಡ್ಡ, ಪರ್ವತಗಳ ಚಾರಣ:
ಅಮರನಾಥ ಗುಹೆಗೆ ತೆರಳಲು ಯಾವುದೇ ವಾಹನದ ವ್ಯವಸ್ಥೆಯಿಲ್ಲ. ಭಕ್ತರು 24 ಕಿ.ಮೀ. ಹಾದಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕು. ಇದು ಪರ್ವತ ಚಾರನವನ್ನು ಹೊಂದಿರುವ ಪ್ರಯಾಸದ ಹಾದಿ. ನಡೆಯಲು ಸಾಧ್ಯವಾಗದವರಿಗೆ ಕುದುರೆ ಸವಾರಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯಾತ್ರೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿ ಅನೇಕ ಭಕ್ತರು ಸಾವನ್ನಪ್ಪುತ್ತಾರೆ. ಇತ್ತಿಚೆಗೆ ಉಗ್ರರ ಬೆದರಿಕೆಯಿಂದಾಗಿ ಯಾತ್ರೆಯುದ್ದಕ್ಕೂ ಮಿಲಿಟರಿ ಭದ್ರತೆ ಒದಗಿಸಲಾಗುತ್ತಿದೆ. ಯಾತ್ರೆಗೂ ಮುನ್ನ ಭಕ್ತರು ಹೆಸರು ನೋಂದಾಯಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 

ಮೂಲ ಸ್ವರೂಪಕ್ಕೆ ಧಕ್ಕೆ:
ಅಮರನಾಥದ ಸರಾಸರಿ ಉಷ್ಣಾಂಶ ಬೇಸಿಗೆಯಲ್ಲಿ 15 ಡಿಗ್ರಿ ಸೆಲ್ಸಿಯಸ್. ಚಳಿಗಾಲದಲ್ಲಿ ಅತ್ಯಂತ ಕಡು ಚಳಿಯಿದ್ದು, -5  ಡಿಗ್ರಿಗೆ ಕುಸಿಯುತ್ತದೆ. ಸಾಧಾರಣವಾಗಿ ನವೆಂಬರ್ನಿಂದ ಏಪ್ರಿಲ್ ತನಕ ಅಮರನಾಥ ಹಿಮಚ್ಛಾದಿತವಾಗಿರುತ್ತದೆ. ಬೇಸಿಗೆಯ ಮೂರು ತಿಂಗಳು ಮಾತ್ರ ಯಾತ್ರಾರ್ಥಿಗಳಿಗೆ   ತೆರೆದಿರುತ್ತದೆ. ಆದರೆ, ತಾಪಮಾನ ಏರಿಕೆಯ ಬಿಸಿ ಅಮರನಾಥಕ್ಕೂ ತಟ್ಟಿದ್ದು, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿ ಳು ಭೇಟಿ ನೀಡುತ್ತಿರುವುದರಿಂದ ಹಿಮಲಿಂಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಲಾರಂಭಿಸಿದೆ.

Wednesday, July 10, 2013

ಓಹೋ.... ಹಿಮಾಲಯ!

ಹಿಮಾಲಯ ತನ್ನ ಅಘಾದತೆಯಿಂದ ಗಮನ ಸೆಳೆಯುತ್ತದೆ. ಪೂರ್ವಪಶ್ಚಿಮವಾಗಿ ಭಾರತದ ಈಶಾನ್ಯ ರಾಜ್ಯಗಳ ಗಡಿಯಿಂದ ಅಫ್ಘಾನಿಸ್ಥಾನದ ಅಂಚಿನ ವರೆಗೆ, ದಕ್ಷಿಣೋತ್ತರವಾಗಿ ಭಾರತದ ಪಂಜಾಬ್ನಿಂದ ದಕ್ಷಿಣ ಚೀನಾದ ಟಿಬೇಟ್ವರೆಗೂ ಹಲವು ಶ್ರೇಣಿಗಳಲ್ಲಿ ಹಬ್ಬಿ ನಿಂತಿದೆ. ಇಂತಹ ಹಿಮಾಲಯದ ಮಡಿಲಲ್ಲೇ ಪೌರ್ವಾತ್ಯ ಪರಂಪರೆ ತನ್ನ ಹುಟ್ಟನ್ನು ಪಡೆದುಕೊಂಡಿದ್ದು. ಸುಮಾರು 2,500 ಕಿ.ಮೀ. ವಿಸ್ತಾರ ಹಾಗೂ 29,000 ಅಡಿ
ಎತ್ತರಕ್ಕೆ ಹಿಮಾಲಯ ಚಾಚಿಕೊಂಡಿದೆ.

ಆಧ್ಯಾತ್ಮಿಕ ನೆಲೆ:
ಅನೇಕ ಭೌಗೋಳಿಕ ವೈವಿಧ್ಯವನ್ನು ಹೊಂದಿರುವ ಹಿಮಾಲಯದ ಒಂದು ಭಾಗ ಉತ್ಕಟ ಹಸಿರಿನ ನೆಲೆಯಾದರೆ, ಇನ್ನೊಂದು ಭಾಗ ಹಸಿರಿನ ಹೆಸರೂ ಕಾಣದ ಶೀತಲ ಹಿಮಚ್ಛಾದಿತ ಪ್ರದೇಶ. ಜಗತ್ತಿನ ಆಧ್ಯಾತ್ಮಿಕ ಚಿಂತನೆಗೆ ಭದ್ರ ನೆಲೆಯೆನ್ನಿಸಿದ ಅದ್ವಿತೀಯ ಗಿರಿಶಿಖರಗಳು, ಪಾವಿತ್ರ್ಯದಷ್ಟೇ ತಮ್ಮ ಸೌಂದರ್ಯಕ್ಕೂ ಹೆಸರಾಗಿವೆ.
ಮಾನವ ಇತಿಹಾಸದ ಮೊದಲ ನಾಗರಿಕತೆಗಳಲ್ಲಿ ಒಂದೆನಿಸಿದ ಸಿಂಧೂ ಕಣಿವೆಯ ನಾಗರಿಕತೆ ಹುಟ್ಟಿಬೆಳೆದದ್ದು ಹಿಮಾಲಯದ ತಪ್ಪಲಿನಲ್ಲಿ. ಜಗತ್ತಿನ ಆದಿ ಧರ್ಮವೆನಿಸಿದ ಹಿಂದು, ಬೌದ್ಧ, ಜೈನ ಧರ್ಮಗಳು ಹುಟ್ಟಿಬೆಳೆದದ್ದು ಹಿಮಾಲಯದ ಹಿನ್ನೆಲೆಯಲ್ಲಿ.

ಹಿಮಾಲಯ ಅಂದರೆ...

ಸಂಸ್ಕೃತದಲ್ಲಿ ಹಿಮಾಲಯ ಅಂದರೆ, ಹಿಮದ ಮನೆ (ಹಿಮ+ ಆಲಯ) ಎಂದರ್ಥ. ಹಿಮಾಲಯದಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು.

  • ಉಪ ಹಿಮಾಲಯ: ಇದನ್ನು ಭಾರತದಲ್ಲಿ ಶಿವಾಲಿಕ್ಸ್ ಹಿಲ್ಸ್ ಎಂದು ಕರೆಯಲಾಗುತ್ತದೆ. ಇದು ಸರಾಸರಿ  1,200 ಮೀಟರ್ ಎತ್ತರವಾಗಿದೆ.
  • ಕೆಳಗಿನ ಹಿಮಾಲಯ: ಸರಾಸರಿ 2000ದಿಂದ 5000 ಮೀಟರ್ ಎತ್ತರವಾಗಿದ್ದು, ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜಿಲಿಂಗ್, ಶಿಮ್ಲಾ ನೈನಿತಾಲ್ ಮುಂತಾದ ಪ್ರಸಿದ್ಧ ಗಿರಿಧಾಮಗಳನ್ನು ಈ ಶ್ರೇಣಿ ಒಳಗೊಂಡಿದೆ.
  • ಮೇಲಿನ ಹಿಮಾಲಯ: ಈ ಶ್ರೇಣಿ ಎಲ್ಲಕ್ಕಿಂತ ಎತ್ತರದಲ್ಲಿದ್ದು, ನೇಪಾಳದ ಉತ್ತರಭಾಗಗಳು ಮತ್ತು ಟಿಬೇಟ್ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. 6000 ಮೀಟರ್ ಗಿಂತ ಹೆಚ್ಚಿನ ಎತ್ತರವಾಗಿದ್ದು, ಜಗತ್ತಿನ ಅತಿ ಎತ್ತರದ ಮೂರು ಶಿಖರಗಳಾದ ಮೌಂಟ್ ಎವರೆಸ್ಟ್, ಕೆ-2, ಕಾಂಚನಜುಂಗಾ ಶಿಖರವನ್ನು ಹೊಂದಿದೆ.
ಬೃಹತ್ ತಡೆಗೋಡೆ!
ಹಿಮಾಲಯದ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಸಿಂಧೂ, ಅಲಕನಂದಾ, ಬ್ರಹ್ಮಪುತ್ರಾ, ಯಮುನಾ ಮುಂತಾದ ನದಿಗಳಿಗೆ ತವರುಮನೆಯಾಗಿದೆ.
ಚಳಿಗಾಲದಲ್ಲಿ ಪಶ್ಚಿಮದ ಇರಾನ್ ಕಡೆಯಿಂದ ಉಂಟಾಗುವ ಹವಾಮಾನ ಪ್ರಕ್ಷುಬ್ಧತೆ ಭಾರತದತ್ತ ಮುನ್ನುಗ್ಗದ್ದಂತೆ ಹಿಮಾಲಯ ಪರ್ವತ ಶ್ರೇಣಿಗಳು ತಡೆಯತ್ತದೆ. ಈರೀತಿ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವಾಗುತ್ತದೆ ಮತ್ತು ಉತ್ತಭಾರ ಮತ್ತು ಪಂಜಾಬ್ ಭಾಗಗಳಲ್ಲಿ ಮಳೆ ಬೀಳುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವಭಾಗದಲ್ಲಿ ಮಳೆಯಾಗುವಂತೆ ಮಾಡುತ್ತದೆ. ಹಿಮಾಲಯ ಶ್ರೇಣಿಯು ಜನರ ಚಲನವಲನಗಳಿಗೆ ಸ್ವಾಭಾವಿಕವಾಗಿಯೇ ಅಡಚಣೆ ಉಂಟುಮಾಡಿದೆ. ಇದಕ್ಕೆ ಕಾರಣ, ಹಿಮಾಲಯದ ದೊಡ್ಡಗಾತ್ರ. ಎತ್ತರ ಮತ್ತು ವೈಶಾಲ್ಯತೆ. ಹೀಗಾಗಿ ಭಾರತೀಯರು ಚೀನಾ ಮತ್ತು ಮಂಗೋಲಿಯಾದ ಜನರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ.

ಜಗತ್ತಿನ ಎತ್ತದ ಶಿಖರ:

ಹಿಮಾಲಯದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 18000 ಅಡಿ. ಮೌಂಟ್ ಎವರೆಸ್ಟ್ ಸೇರಿದಂತೆ ಜಗತ್ತಿನ ಮೊದಲ 10 ಅತ್ಯುನ್ನತ ಪರ್ವತ ಶಿಖರಗಳ ಪೈಕಿ 9 ಶಿಖರಗಳು ಹಿಮಾಲಯದಲ್ಲಿಯೇ ಇವೆ. ಅವುಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಮೌಂಟ್ ಎವರೆಸ್ಟ್ 29,000 ಅಡಿ ಮತ್ತು 2ನೇ ಸ್ಥನದಲ್ಲಿರುವ ಕೆ-2 ಪರ್ವತ 28250 ಅಡಿ ಎತ್ತರವವಾಗಿದೆ. ಹಿಮಾಲಯ ಶ್ರೇಣಿಯಲ್ಲಿ ಅನೇಕ ಹಿಮನದಿಗಳನ್ನು ಕಾಣಬಹುದು. ದ್ರುವ ಪ್ರದೇಶವನ್ನು ಬಿಟ್ಟರೆ, ಪ್ರಪಂಚದ ಅತಿದೊಡ್ಡ ಹಿಮನದಿಯಾದ ಸಿಯಾಚೆನ್ ಇರುವುದು ಹಿಮಾಲಯದಲ್ಲಿಯೇ.

ಕರಗುತ್ತಿದೆ ಹಿಮ ಮುಕುಟ:
ಇವೆಲ್ಲದರ ನಡುವೆ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಮಾನವನ ಹಸ್ತಕ್ಷೇಪದಿಂದಾಗಿ ಹಿಮಾಲಯ ಕರಗುವ ಭೀತಿ ಎದುರಾಗಿದೆ. ಜಗತ್ತಿನ ಬೆರೆಲ್ಲಾ ಭಾಗದ ಹಿಮ ಪರ್ವತಗಳಿಗಿಂತ ಭಾರತದ ಮುಕುಟವಾಗಿರುವ ಹಿಮಾಲಯ ಕರಗುತ್ತಿದೆ. ಇದು ಹೀಗೆಯೇ ಮುಂದುವರಿದರೆ, 2035ರ ಹೊತ್ತಿಗೆ ಅಥವಾ ಅದಕ್ಕೂ ಮೊದಲೇ ಹಿಮಾಲಯ ಬೋಳುಗುಡ್ಡವಾದರೂ ಆಶ್ಚರ್ಯಪಡಬೇಕಿಲ್ಲ.


 

Wednesday, July 3, 2013

ಮುಂಗಾರು ಮಾರುತ

ಈಗಾಗಲೇ ಮುಂಗಾರಿನ ಆಗಮನವಾಗಿದೆ. ಭಾರತದ ಮಟ್ಟಿಗೆ ಮಾನ್ಸೂನ್ ಅಥವಾ ಮುಂಗಾರು ಎನ್ನುವುದು ಮಹತ್ವದ ವಿದ್ಯಮಾನ. ಭಾರತದ ಆರ್ಥಿಕತೆ ಮತ್ತು ಕೃಷಿಯೊಂದಿಗೆ ಮುಂಗಾರು ಅವಿನಾಭಾವವಾಗಿ ಬೆರತುಕೊಂಡಿದೆ. ಏನು ಈ ಮುಂಗಾರು, ಅದು ಹೇಗೆ ಹುಟ್ಟುತ್ತದೆ? ಹೇಗೆ ಮಳೆ ಸುರಿಸುತ್ತದೆ?
ಎನ್ನುವುದೇ ಅಚ್ಚರಿಯ ಸಂಗತಿ.


ಮಳೆ ಸುರಿಯುವುದು ಹೇಗೆ?
ಮಾನ್ಸೂನ್ ಪದದ ಮೂಲ ಅರಬ್ಬಿಯ "ಮಾಸಿಮ್" ಅಥವಾ "ಮೋಸಮ್", ಅಂದರೆ ಋತು ಎಂದರ್ಥ. ಮುಂಗಾರು ಅಂದರೆ ದೊಡ್ಡ ಪ್ರಮಾಣದಲ್ಲಿ ಬೀಸುವ ಗಾಳಿ. ಹಗಲಿನಲ್ಲಿ ಬಿಸಿಯಾದ ಭೂಮಿಯ ಮೇಲಿನ ಗಾಳಿ ಹಗುರಾಗಿ ಮೆಲೇರಿದಾಗ ಕಡಿಮೆ ಒತ್ತಡ ಸೃಷ್ಟಿಯಾಗುತ್ತದೆ. ಹೀಗೆ ಕಡಿಮೆ ಒತ್ತಡದ ಪ್ರದೇಶಕ್ಕೆ ಹೆಚ್ಚು  ಒತ್ತಡದಿಂದ ಕೂಡಿದ ಸಮುದ್ರದ ಮೇಲಿನ ತಣ್ಣಗಿನ ಗಾಳಿ  ನುಗ್ಗುತ್ತದೆ. ಹೀಗಾದಾಗ ಮಳೆ ಸುರಿಯಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆ ಒಂದಲ್ಲಾ ಒಂದು ಕಡೆ ನಡೆಯುತ್ತಲೇ ಇರುತ್ತದೆ.

ಜಗತ್ತಿನ ಎಲ್ಲೆಡೆಯೂ ಇದೆ:

ಮುಂಗಾರು ಮಾರುತ ಭಾರತ ಮಾತ್ರವಲ್ಲದೇ ಜಗತ್ತಿನ ಎಲ್ಲ ಕಡೆ ಬೀಸುತ್ತದೆ. ನಮ್ಮಲ್ಲಿ ಮುಂಗಾರು ಯಾವಾಗಲೂ ನೈಋತ್ಯ ದಿಕ್ಕಿನಿಂದ ಬೀಸುತ್ತದೆ. ಅಲ್ಲದೆ ಉತ್ತರ ಅಮೆರಿಕ ಮುಂಗಾರು, ಪಶ್ಚಿಮ ಆಫ್ರಿಕಾ ಮುಂಗಾರು, ಏಷಿಯಾ ಆಸ್ಟ್ರೇಲಿಯಾ ಮುಂಗಾರು ಮುಖ್ಯಮಾರುತಗಳು. ಇದರ ವ್ಯವಸ್ಥಿತ ಅಧ್ಯಯನ ಸುಮಾರು ಮುನ್ನೂರು ವರ್ಷಗಳ ಹಿಂದೆ ಆರಂಭವಾಯಿತು. ಮಾನ್ಸೂನನ್ನು ಪ್ರಥಮವಾಗಿ ಗುರುತಿಸಿದವರು ಅರಬ್ಬೀ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾವಿಕರು.

ಇತರ ಮಾರುತಗಳ ಪ್ರಭಾವ:
ಭಾರತದ ಮುಂಗಾರು ಕ್ಲಿಷ್ಟ ಹವಾಮಾನ ವ್ಯವಸ್ಥೆ. ಭೂಮಿಯ ಮೇಲಿನ ಇತರ ಪ್ರದೇಶದ ಹವಾಮಾನವೂ ನಮ್ಮ ಮುಂಗಾರಿನ ಮೇಲೆ ಪ್ರಭಾವ ಬೀರುತ್ತದೆ. ಪೆಸಿಫಿಕ್ ಸಮುದ್ರದಲ್ಲಿ "ಎಲ್ ನಿನೊ" ಮಾರುತ ಉಂಟಾದ ಸಂದರ್ಭದಲ್ಲಿ ನಮ್ಮ ಮುಂಗಾರು ಕ್ಷೀಣವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ "ಲಾ ನಿನೋ" ಮಾರುತ ಹೆಚ್ಚು ಮಳೆ ಸುರಿಸುತ್ತದೆ. ಭಾರತದಲ್ಲಿ ಮುಂಗಾರು ಮಹತ್ವ ಪಡೆಯಲು ಅದರ ವಿಶಿಷ್ಟ ಭೌಗೋಳಿಕ ರಚನೆಯೇ ಕಾರಣ. ಒಂದುಕಡೆ ವಿಶಾಲವಾದ ನೆಲ. ಇನ್ನೊಂದೆಡೆ ಹೆಚ್ಚು ಬಿಸಿಯಾಗುವ ಥಾರ್ ಮರುಭೂಮಿ. ಉತ್ತರದಿಕ್ಕಿಗೆ ಗೋಡೆಯಂತಿರುವ ಹಿಮಾಲಯ, ಉಳಿದ ಕಡೆ ಸುತ್ತಲೂ ಸಮುದ್ರ, ದಖ್ಖನ್ ಪ್ರಸ್ಥಭೂಮಿಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟ ಮಳೆ ಸುರಿಸುವಲ್ಲಿ ಕೊಡುಗೆ ನೀಡುತ್ತಿದೆ.

ಮುಂಗಾರು ಅಂದರೆ ಏನು?
ದೈನಂದಿಕ ಸಾಗರ ಮಾರುತ ಬರೀ ಗಾಳಿ ಬೀಸಿದರೆ, ನೈಋತ್ಯ ಮರುತ ಅಂದರೆ ಮಾನ್ಸೂನ್ ಆವಿಯಾದ ಸಮುದ್ರದ ನೀರನ್ನು ಹೊತ್ತುತಂದು ಮಳೆ ಸುರಿಸುತ್ತದೆ. ಇದೇ ಮುಂಗಾರು ಮಳೆ. ಇದನ್ನು ಬೇಸಿಗೆ ಮುಂಗಾರು ಅಂತಲೂ ಕರೆಯುತ್ತಾರೆ. ಜೂನ್ನಿಂದ ಆರಂಭವಾದ ಮುಂಗಾರು ಒಂದು, ಒಂದುವರೆ  ತಿಂಗಳಿನಲ್ಲಿ ಸಂಪೂರ್ಣ ದೇಶವನ್ನು ಆವರಿಸಿಕೊಳ್ಳುತ್ತದೆ. ಭಾರತದಲ್ಲಿ ನೈಋತ್ಯ ಮಾನ್ಸೂನ್ ಮತ್ತು ಈಶಾನ್ಯ  ಮುಂಗಾರು ಎಂದು ವಿಧವಾಗಿ ವಿಂಗಡಿಸಲಾಗಿದೆ.

ನೈಋತ್ಯ ಮುಂಗಾರು:
ನೈಋತ್ಯ ಮುಂಗಾರು ಜೂನ್ನಿಂದ ಸೆಪ್ಟೆಂಬರ್ವರೆಗೆ ಮಳೆ ಸುರಿಸುತ್ತದೆ. ಇದರಲ್ಲಿ ಮತ್ತೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಬೀಸುವ ಮಾರುತ ಎನ್ನುವ ಎರಡು ವಿಧಗಳನ್ನು ಗುರುತಿಸಬಹುದು. ಅರಬ್ಬೀ ಸಮುದ್ರವಾಗಿ ಬೀಸುವ ಮಾರುತ ಜೂನ್ ಒಂದರಂದು ಕೇರಳ ಮೂಲಕ ಭಾರತವನ್ನು  ಪ್ರವೇಶಿಸುತ್ತದೆ. ಮುಂದೆ ಅದು ಪಶ್ಚಿಮ ಘಟ್ಟದ ಮೇಲೆ ಸಾಗುತ್ತಾ ಮಲೆನಾಡು, ಕನರ್ನಾಟಕ, ಗೋವಾ, ಮಹಾರಾಷ್ಟ್ರದ ಕೊಂಕಣ ಕರಾವಳಿಯ ಮೇಲೆ ಮಳೆಸುರಿಸುತ್ತದೆ. ಘಟ್ಟದ ತಪ್ಪಲಿನಲ್ಲಿ ಕಡಿಮೆ ಮಳೆ ಸುರಿಸುತ್ತದೆ. ಬಂಗಾಳ ಕೊಲ್ಲಿಯಭಾಗದಲ್ಲಿಯೂ ಸರಿಸುಮಾರು ಅದೇ ಸಮಯದಲ್ಲಿಯೇ ಮಳೆ ಆರಂಭವಾಗುತ್ತದೆ. ಮೊದಲು ಅಂಡಮಾನ್ನಲ್ಲಿ ಮಳೆ ಸುರಿಸುತ್ತದೆ. ಬಳಿಕ ಅದು ಪೂರ್ವಭಾಗದತ್ತ ಸಾಗುತ್ತದೆ. ಈ ಮಾರುತ ಹಿಮಾಲಯದ ವರೆಗೂ ಮಳೆಯನ್ನು ಸುರಿಸುತ್ತದೆ. ಮೇಘಾಲಯದ ಚಿರಾಪುಂಜಿ ಮತ್ತು ಮಾಸಿನ್ರಾಮ್ನಲ್ಲಿ ಜಗತ್ತಿನಲ್ಲಿಯೇ ಅತಿಹೆಚ್ಚು ಮಳೆ ಸುರಿಸುತ್ತದೆ.

ಈಶಾನ್ಯ ಮಾರುತ (ಹಿಂಗಾರು ಮಳೆ):
ಇದು ಸೆಪ್ಟೆಂಬರ್ ನಿಂದ ಆರಂಭವಾಗುತ್ತದೆ. ಇದನ್ನು  ಚಳಿಗಾಲದ ಮಳೆ ಎನ್ನುತ್ತಾರೆ. ಇದು ನೈರುತ್ಯ ಮುಂಗಾರಿನ ವಿರುದ್ಧ ದಿಕ್ಕಿನಲ್ಲಿ  ಉಂಟಾಗುವಂಥದ್ದು. ಮುಂಗಾರು ಮಾರುತ ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಮಾಡಿದರೆ, ಹೀಗಾರು ಮಾರುತ ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣ ಮಾಡುತ್ತದೆ. ಬಂಗಾಳ ಕೊಲ್ಲಿಯ ಮೇಲೆ ಬೀಸುವ ಹೀಗಾರು ಮಾರುತ ತೇವಾಂಶವನ್ನು ಹೀರಿ ಮಳೆ ಸುರಿತ್ತದೆ. ಹೀಗಾಗಿ ತಮಿಳುನಾಡಿನಲ್ಲಿ ಚಳಿಗಾಲದಲ್ಲಿ ಮಳೆಯಾಗುತ್ತದೆ. ಒಡಿಶಾ, ಆಂಧ್ರ, ಕನರ್ನಾಟಕದ ಪೂರ್ವಭಾಗ ಹಿಂಗಾರು ಮಳೆ ಸುರಿಯುತ್ತದೆ. ಮುಂಗಾರಿಗೆ ಹೋಲಿಸಿದರೆ ಹಿಂಗಾರಿನ ಮಳೆಯ ಆರ್ಭಟ ಕಡಿಮೆ.

Friday, June 28, 2013

ಜೀವ ವೈವಿಧ್ಯದ ಪಶ್ಚಿಮ ಘಟ್ಟ

ಜಗತ್ತಿನ ಅತಿದೊಡ್ಡ ಪರ್ವತ ಶ್ರೇಣಿ ಸಹ್ಯಾದ್ರಿಯ ಪಶ್ಚಿಮ ಘಟ್ಟಗಳು. ದಕ್ಷಿಣ ಭಾರತದ ಉತ್ತರ-ದಕ್ಷಿಣವಾಗಿ 1600 ಕಿ.ಮೀ. ಹಬ್ಬಿರುವ ಭವ್ಯ ಹಾಗೂ ವಿಹಂಗಮ ಪರ್ವತ ಶ್ರೇಣಿ. ದಖ್ಖನ್ ಫೀಠಭೂಮಿಯ ಪಶ್ಚಿಮ ಅಂಚಿನ ಉದ್ದಕ್ಕೂ ಹಬ್ಬಿರುವ ಇವು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡನ್ನು ವ್ಯಾಪಿಸಿಕೊಂಡಿವೆ. ಒಟ್ಟು ಪರ್ವತ ಶ್ರೇಣಿಯ ಅರ್ಧಕ್ಕಿಂತಲೂ ಹೆಚ್ಚುಭಾಗ ಕರ್ನಾಟಕದಲ್ಲಿಯೇ ಇದೆ ಎನ್ನುವುದು ವಿಶೇಷ.



ಮಳೆ ಸುರಿಸುವ ಕಾಡು:

ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟಗಳೂ ಒಂದು. ಪಶ್ಚಿಮ ಘಟ್ಟದ ಕಾಡುಗಳು ದಕ್ಷಿಣ ಭಾರತಕ್ಕೆ ಮಳೆ ನೀಡುವ ಕಾಡು ಎಂದೇ ಪರಿಗಣಿಸಲ್ಪಟ್ಟಿದೆ. ಜೂನ್ನಿಂದ ಸೆಪ್ಟೆಂಬರ್ವರೆಗಿನ ಮಳೆಗಾಲದಲ್ಲಿ 3000ದಿಂದ 4000 ಮಿಲಿಮೀಟರ್ ಸರಾಸರಿ ಮಳೆ ಬೀಳುತ್ತದೆ. 1200 ಮೀಟರ್ ಎತ್ತರದ ಪಶ್ಚಿಮ ಘಟ್ಟವು ಮಳೆ ಉಂಟುಮಾಡುವ ಮಾರುತಗಳನ್ನು ತಡೆಯುವುದರಿಂದ ಈ ಪ್ರದೇಶವು ಸಹಜವಾಗಿಯೇ ಹೆಚ್ಚು ಮಳೆ ಪಡೆಯುವ ಪ್ರದೇಶವೆನಿಸಿದೆ. ನೈಋತ್ಯ ಮುಂಗಾರು ಘಟ್ಟಗಳು ಮತ್ತು ಅವುಗಳ ಪಶ್ಚಿಮ ಅಂಚಿನ ಪ್ರದೇಶದಲ್ಲಿ ಭಾರೀ ಮಳೆ ಸುರಿಸುತ್ತದೆ. ಈ ಪ್ರಕ್ರಿಯೆಯಿಂದಾಗಿ ಪಶ್ಚಿಮಘಟ್ಟ ಸದಾ ಹಸಿರಿನಿಂದ ಕೂಡಿರುತ್ತದೆ. ದೇಶದ ಹವಾಮಾನವನ್ನು ಸುಸ್ಥಿತಿಯಲ್ಲಿಡಲು ಪಶ್ಚಿಮ ಘಟ್ಟ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅನೇಕ ಗಿಡ ಮೂಲಿಕೆ ಮತ್ತು ಔಷಧಿಯ ಸಸ್ಯಗಳಿಗೂ ಪಶ್ಚಿಮ ಘಟ್ಟ ಹೆಸರುವಾಸಿ.  


ಕೊಂಕಣ, ಕೆನರಾ, ಮಲಬಾರ್:
ಅರಬ್ಬೀ ಸಮುದ್ರಕ್ಕೆ ಚಾಚಿಕೊಂಡಿರುವ ಕರಾವಳಿಯ ಉತ್ತರ ಭಾಗದ ಗೋವಾ ಮತ್ತು ಕಾರವಾರ ಕೊಂಕಣ ಪ್ರದೇಶವೆಂದು ಪ್ರಸಿದ್ಧಿ ಪಡೆದಿದೆ. ಮಧ್ಯದಭಾಗ ಕೆನರಾ ಮತ್ತು ದಕ್ಷಿಣ ಭಾಗವು ಮಲಬಾರ್ ಪ್ರಾಂತವೆಂದು ಕರೆಯಲ್ಪಟ್ಟಿದೆ.

ನದಿ, ಜಲಪಾತಗಳ ಆಗರ:
ಕಾವೇರಿ, ಕೃಷ್ಣಾ, ಗೋದಾವರಿ, ತಾಮ್ರಪರ್ಣಿ ದೊಡ್ಡ ನದಿಗಳೆನಿಸಿದ್ದು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ.  ಪಶ್ಚಿಮಕ್ಕೆ ಹರಿಯುವ ನದಿಗಳು ಉದ್ದದಲ್ಲಿ ಕಡಿಮೆಯಾಗಿದ್ದು, ರಭಸವಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಶರಾವತಿ, ನೇತ್ರಾವತಿ, ಮಾಂಡವಿ, ಜುವಾರಿ, ಅಘನಾಶಿನಿ ಇತ್ಯಾದಿ. ಈ ನದಿಗಳು ವಿದ್ಯುತ್ ಯೋಜನೆಗಳಿಗೆ ನೆಲೆಯಾಗಿವೆ. ಇವುಗಳಿಗೆ ಅಡ್ಡವಾಗಿ ಕೊಯ್ನಾ, ಲಿಂಗನಮಕ್ಕಿ, ಪರಂಬಿಕುಲಂ, ಕೊಪೋಲಿ ಅಣೇಕಟ್ಟುಗಳನ್ನು ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಸುರಿಯುವ ಭಾರೀ ಮಳೆಯು ಜೋಗ, ಶಿವನ ಸಮುದ್ರ, ಉಂಚಳ್ಳಿ ಕುಂಚಿಕಲ್ ಮುಂತಾದ ವಿಶ್ವಪ್ರಸಿದ್ಧಿ ಜಲಪಾತಗಳನ್ನು ಸೃಷ್ಟಿಸಿವೆ.

ಗಿರಿ ಕಂದರಗಳ ಒಡಲು:

ಕೆಮ್ಮಣ್ಣುಗುಂಡಿ,  ಕೊಡಚಾದ್ರಿ, ಕುದುರೆಮುಖ, ಮಹಾಬಲೇಶ್ವರ, ಸೋನ್ ಸಾಗರ್, ಮುಳ್ಳಯ್ಯನಗಿರಿ, ಆನೈಮುಡಿ ಮುಂತಾದ ಗಿರಿಶಿಖರಗಳನ್ನು ಪಶ್ಚಿಮ ಘಟ್ಟ ತನ್ನ ಸೌಂದರ್ಯದ ಒಡಲಲ್ಲಿ ತುಂಬಿಕೊಂಡಿದೆ. ಊಟಿ, ಕೊಡೈಕೆನಾಲ್, ಬೆರಿಜಂ ಮುಂತಾದ ತಂಪನೆಯ ಪ್ರದೇಶಗಳಿಗೆ ಹೆಸರು ಪಡೆದಿದೆ.

ಅಪರೂಪದ ಪ್ರಾಣಿ ಸಂಕುಲ:

ಪಶ್ಚಿಮ ಘಟ್ಟ ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು, ಜಾಗತಿಕವಾಗಿ ವಿನಾಶದ ಅಂಚಿನಲ್ಲಿರುವ 325 ತಳಿಯ ಪ್ರಾಣಿಗಳನ್ನು ಹೊಂದಿದೆ. 120 ಪ್ರಜಾತಿಗಳಿಗೆ ಸೇರಿದ ಸ್ತನಿ ಪ್ರಾಣಿಗಳಿಗೆ ಪಶ್ಚಿಮ ಘಟ್ಟ ತವರು. ಅವುಗಳಲ್ಲಿ 14 ಪ್ರಾಣಿಗಳು ಕೇವಲ ಇಲ್ಲಿ ಮಾತ್ರವೇ ಕಂಡುಬರುತ್ತದೆ. ಸಲೀಂ ಅಲಿ ಹಣ್ಣುಗಳ ಬಾವಲಿ,  ವ್ರಾಟನ್ಸ್ ಫ್ರೀ ಟೇಲ್ಡ್ ಬಾವಲಿ, ಸಿಂಹ ಬಾಲದ ಸಿಂಗಳೀಕ, ಕಪ್ಪು ಮುಖದ ಲಂಗೂರ, ಮಲಬಾರ್ ಪುನುಗು ಬೆಕ್ಕು, ರಂಜಿನಿ ಹೆಗ್ಗಣ, ಮಲಬಾರ್ ಬಕ, ಮಡ್ರಾಸ್ ಹೆಡ್ಗೆಹಾಗ್ ಉದಾಹರಣೆ ನೀಡಬಹುದಾದ ಕೆಲ ಪ್ರಜಾತಿಗಳು.

ವಿಶ್ವ ಪರಂಪರೆಯ ತಾಣ:
ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಪ್ರಾಣಿಗಳು ಅರಣ್ಯನಾಶದಿಂದಾಗಿ ಮತ್ತು ಮಳೆಯ ಕೊರತೆಯಿಂದಾಗಿ ವಿನಾಶದ ಅಂಚು ತಲುಪಿವೆ.  ಒಂದು ಕಾಲದಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಪ್ರಾಣಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಕುಸಿಯುತ್ತಿದೆ. ಇದನ್ನು ತಪ್ಪಿಸುವ ಸಂಬಂಧ. ಜುಲೈ 1, 2012ರಂದು ಈ  ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೊ ಘೋಷಣೆ ಮಾಡಿದೆ. 



 

Tuesday, June 18, 2013

ಮಾನಸ ಸರೋವರ

ಮಾನಸ ಸರೋವರ ಭಾರತ-ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಈ ಪ್ರದೇಶ ಚೀನಾದ ಸ್ವಾಯತ್ತ ಟಿಬೇಟ್ನ ಹಿಡಿತಕ್ಕೆ ಒಳಪಟ್ಟಿದೆ. ಇದು ಸಮುದ್ರ ಮಟ್ಟದಿಂದ 14950 ಅಡಿ ಉತ್ತರದಲ್ಲಿದೆ. ಜಗತ್ತಿನಲ್ಲಿಯೇ ಅತ್ಯಂತ ಶುದ್ಧ ನೀರಿಗೆ ಮಾನಸ ಸರೋವರ ವಿಖ್ಯಾತಿ ಪಡೆದಿದೆ. ಮಾನಸ ಸರೊವರ ಹಿಂದುಗಳ ಪವಿತ್ರ ನದಿ. ಇಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬುದು ನಂಬಿಕೆ. ಪುರಾಣಕ್ಕಿಂತಲೂ ಹೆಚ್ಚಾಗಿ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಮಾನಸ ಸರೋವರ ಪ್ರಸಿದ್ಧಿ.
 


ಯಾತ್ರಾರ್ಥಿಗಳ ಸ್ವರ್ಗ!
ಬ್ರಹ್ಮಪುತ್ರ, ಸಿಂಧು, ಗಂಗಾ, ಸಟ್ಲೆಜ್ ಈ ನಾಲ್ಕು ನದಿಗಳ ಉಗಮ ಸ್ಥಾನವೆನಿಸಿಕೊಂಡಿರುವುದು ಈ ಸರೋವರದ ಹೆಗ್ಗಳಿಕೆ. ಅಲ್ಲದೆ ಇದೊಂದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಪ್ರತಿವರ್ಷ ಲಕ್ಷಾಂತರ ಚಾರಣಿಗರು, ಸಾಹಸಿಗರು, ಧಾರ್ಮಿಕ ವ್ಯಕ್ತಿಗಳು ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಾರೆ. ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮತ್ತು ನೀರನ್ನು ಕುಡಿಯುವುದರಿಂದ ನಮ್ಮ ಪಾಪವೆಲ್ಲವೂ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ. ಯಾತ್ರಾಥರ್ಿಗಳ ಸ್ವರ್ಗ ಎಂದೇ ಇದನ್ನು ಕರೆಯಲಾಗುತ್ತದೆ.

ಸರೋವರದ ವಿಶೇಷತೆ:

ಈ ಸರೋವರ ಸುಮಾರು 88 ಕಿ.ಮೀ. ಸುತ್ತಳತೆ ಮತ್ತು 90 ಮೀಟರ್  ಆಳವಾಗಿದೆ.  ಚಳಿಗಾಲದಲ್ಲಿ ಇದರ ಮೇಲೈ ಸಂಪೂರ್ಣವಾಗಿ ಹೆಪ್ಪು ಗಟ್ಟಿರುತ್ತದೆ. ಹಿಂದು ಪುರಾಣಗಳ ಪ್ರಕಾರ ಮಾನಸ ಸರೋವರ ಶಿವನ ಆವಾಸ ಸ್ಥಾನ ಎನ್ನುವ ಪ್ರತೀತಿ ಇದೆ. ಅಲ್ಲದೆ ಬೌದ್ಧ ಧರ್ಮೀಯರೂ ಮಾನಸ ಸರೋವರದೊಂದಿಗೆ ಪವಿತ್ರ ಸಂಬಂಧ ಹೊಂದಿದ್ದಾರೆ.

 ಕೈಲಾಸ ಮಾನಸ ಸರೋವರ ಯಾತ್ರೆ:
ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ (ಹಿಮ ಕಡಿಮೆ  ಇರುವ ತಿಂಗಳನ್ನು ಪರಿಗಣಿಸಿ) ಭಾರತ ಸರ್ಕಾರ "ಕೈಲಾಸ ಮಾನಸ ಸರೋವರ ಯಾತ್ರೆ"  ಆಯೋಜಿಸುತ್ತದೆ. ಇದು ನಾವಿಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತ ವಿದೇಶಾಂಗ ಸಚಿವಾಲಯ "ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್" (ಐ.ಟಿ.ಬಿ.ಪಿ.) ನೇತೃತ್ವದಲ್ಲಿ ಈ ಯಾತ್ರೆ ನೆರವೇರಿಸಲಾಗುತ್ತದೆ. ಯಾತ್ರೆ ಕೈಗೊಳ್ಳುವವರು ಐ.ಟಿ.ಬಿ.ಪಿ. ಯಿಂದ ಪರೀಕ್ಷೆ ಎದುರಿಸಬೇಕು. ಯಾತ್ರಿಕರ ದೈಹಿಕ ಮಾನಸಿಕ ದೃಢತೆ ಮತ್ತು ಸಾಮಥ್ರ್ಯವನ್ನು ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ 38 ದಿನಗಳು. ಯಾತ್ರೆಗೆ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದೊಂದಿಗೆ ಯಾತ್ರಾಥರ್ಿಗಳ ಜತೆ ಭದ್ರತಾ ಸಿಬ್ಬಂದಿ ನುರಿತ ವೈದ್ಯರು ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎನ್ನುವ ವಿವರವನ್ನು ಕನಿಷ್ಠ 6 ತಿಂಗಳ ಮೊದಲೇ ತಿಳಿಸಲಾಗುತ್ತದೆ. ಯಾತ್ರೆಗೆ ಉಣ್ಣೆಯ ಕವಚ, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ವಾಟರ್ ಪ್ರೂಫ್ ಶೂ, ಆಕ್ಸಿಜನ್ ಸಿಲಿಂಡರ್, ನಾಡಿ ಮಿಡಿತ ಪರೀಕ್ಷಿಸುವ ಪಲ್ಸ್ ಮೀಟರ್ ಮುಂತಾದ ಅವಶ್ಯಕ ಸಾಮಗ್ರಿಗಳನ್ನು ಹೊತ್ತೊಯ್ಯಬೇಕು.

ಚೀನಾ ತಕರಾರು: 
ಚೀನಾದ ಸೈನ್ಯ ಟಿಬೇಟನ್ನು ಆಕ್ರಮಿಸಿಸಿಕೊಂಡಿದ್ದರ ಪರಿಣಾಮವಾಗಿ 1949ರಿಂದ 1980ರವರೆಗೆ ವಿದೇಶಿ ಪ್ರವಾಸಿಗರು ಮಾನಸ ಸರೋವರಕ್ಕೆ ಭೇಟಿ ನೀಡುವುದಕ್ಕೆ ನಿಷೇಧ ಹೇರಲಾಗಿತ್ತು. ಬಳಿಕ ಭಾರತೀಯ ಪ್ರವಾಸಿಗರಿಗೆ ಮಾನಸ ಸರೋವರಕ್ಕೆ ತೆರಳಲು ಮುಕ್ತ ಅವಕಾಶ ಕಲ್ಪಿಸಲಾಯಿತು. ಈಗಲೂ ಭಾರತೀಯ ಯಾತ್ರಿಕರಿಗೆ ಚೀನಾದ ತಕರಾರು ಇದ್ದಿದ್ದೇ.

ದುರ್ಗಮ ಹಾದಿ:

ಮಾನಸ ಸರೋವರಕ್ಕೆ ತಲುಪಬೇಕೆಂದರೆ 52 ಕೀ. ಕೈಲಾಸ ಪರ್ವತದ ದುರ್ಗಮ ದಾರಿ ಕ್ರಮಿಸಬೇಕು. ಈ ಯಾತ್ರೆ ಉಳಿದ ಯಾತ್ರೆಯಷ್ಟು ಸುಲಭವಲ್ಲ. ದಿನಕ್ಕೆ ಕನಿಷ್ಠ 10 ಕಿ.ಮೀ. ನಡೆಯುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಇಷ್ಟೆಲ್ಲಾ ಸಾಹಸದ ಬಳಿಕ  ಮಾನಸ ಸರೋವರ ತಲುಪಿದ ಬಳಿಕ ಸ್ವರ್ಗವನ್ನೇ ಮುಟ್ಟಿದ ಹಿತಾನುಭವವಾಗುತ್ತದೆ. 2 ರಿಂದ 3ದಿನ ಇಲ್ಲಿ ಉಳಿಯಲು ಅವಕಾಶ ನೀಡಲಾಗತ್ತದೆ. ಸರೋವರದ ಎದುರಿನಲ್ಲಿ ಹಿಮದಿಂದ ಆವೃತವಾದ ಕೈಲಾಸ ಪರ್ವತದ ದರ್ಶನವಾಗುತ್ತದೆ. ತೀರದ ಸುತ್ತಲೂ ಅನೇಕ ದೇವಾಲಯಗಳಿವೆ. 

  



 

Sunday, June 9, 2013

ಪ್ಯಾರಿಸ್ ನ ಐಫೆಲ್ ಗೋಪುರ

ಪ್ಯಾರಿಸ್ ನಗರದ ಹೆಗ್ಗುರುತಾಗಿ ಕಳೆದ ನೂರಾರು ವರ್ಷಗಳಿಂದ ಐಫೆಲ್ ಗೋಪುರ ತಲೆಎತ್ತಿ ನಿಂತಿದೆ. 1889ರಲ್ಲಿ ಪ್ಯಾರಿಸಿನಲ್ಲಿ ನಡೆದ ಜಾಗತಿಕ ಮೇಳಕ್ಕಾಗಿ ಐಫೆಲ್ ಗೋಪುರ ನಿರ್ಮಾಣ ಮಾಡಲಾಗಿದೆ. ಇದು ಯುರೋಪಿನ ಕೈಗಾರಿಕಾ ಕ್ರಾಂತಿಯ ಸಂಕೇತವೂ ಹೌದು. ನಗರದ ಮಧ್ಯೆ ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಿರುವ ಈ ಗೋಪುರ ಪ್ಯಾರಿಸ್ನ ಎಲ್ಲೇ ನಿಂತು ನೋಡಿದರೂ ಕಾಣಸಿಗುತ್ತದೆ. ಸಂಪೂರ್ಣ ಕಬ್ಬಿಣದಿಂದಲೇ ಮಾಡಲ್ಪಟ್ಟಿರುವುದು
ಈ ಗೋಪುರದ ವಿಶೇಷತೆ.
 

ಶತಮಾನೋತ್ಸವ:
ಫ್ರಾನ್ಸ್ ಮಹಾಕ್ರಾಂತಿಯ ಶತಮಾನೋತ್ಸವದ ಸಂಭ್ರಮಾಚರಣೆಗಾಗಿ ನಡೆದ ವಸ್ತುವಿನ್ಯಾಸ ಸ್ಪರ್ಧೆಯಲ್ಲಿ ಅಲೆಕ್ಸಾಡರ್ ಗುಸ್ತಾವ್ ಐಫೆಲ್ ನಿರ್ಮಿಸಿದ ವಿನ್ಯಾಸದ ಮಾದರಿ ಬಹುಮಾನ ಗಳಿಸಿತ್ತು. ಹೀಗಾಗಿ ವಿನ್ಯಾಸಕರ್ತ ಗುಸ್ತಾವ್ ಐಪೆಲ್ ಗೌರವಾರ್ಥ ಇದನ್ನು ಐಫೆಲ್ ಗೋಪುರ ಎಂದು ಹೆಸರಿಸಲಾಗಿದೆ. ನ್ಯೂಯಾರ್ಕ್ ನಲ್ಲಿರುವ ಲಿಬರ್ಟಿ ಪ್ರತಿಮೆಯ ನಿಮಾತೃನೂ  ಈತನೇ ಆಗಿದ್ದಾನೆ. ಇವೆರಡೂ ಶತಮಾನೋತ್ಸವ ಆಚರಿಸಿವೆ.
ಐಫೆಲ್ ಗೋಪುರ 324 ಮೀಟರ್ (1064 ಅಡಿ) ಎತ್ತರವಿದೆ. ಗೋಪುರದ ಮೇಲೆ 20.25 ಮೀಟರ್ ಉದ್ದದ ಟೀವಿ ಟ್ರಾನ್ಸ್ ಮೀಟರ್ ಅಳವಡಿಸಲಾಗಿದೆ. ಅಂದರೆ ಈ ಗೋಪುರ 81 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿ ನಿಲ್ಲುತ್ತದೆ. ಇದರ ಒಟ್ಟು ತೂಕ 10 ಸಾವಿರ ಟನ್ನಷ್ಟಿದ್ದು, 7,500 ಟನ್ ಕಬ್ಬಿಣ ಬಳಕೆ ಮಾಡಲಾಗಿದೆ. 1887 ಜನವರಿ 26ರಂದು ಐಫೆಲ್ ಗೋಪುರ ನಿರ್ಮಾಣ ಕಾರ್ಯ ಆರಂಭವಾಯಿತು. ಇದನ್ನು ಕಟ್ಟಿ ಮುಗಿಸಲು 2 ವರ್ಷ ಆರು ತಿಂಗಳು ಬೇಕಾಯಿತು. ಅನೇಕ ವರ್ಷಗಳ ಕಾಲ ಇದು  ಜಗತ್ತಿನ ಅತ್ಯಂತ ಎತ್ತರದ ಗೋಪುರವಾಗಿತ್ತು.

ಮೂರು ವೀಕ್ಷಣಾ ಅಂತಸ್ತು:
ನಾಲ್ಕು ಕಡೆ ಭಾರೀ ಕಮಾನಿನಾಕಾರದ ಅಸ್ತಿಭಾರದ ಮೇಲೆ ಈ ಗೋಪುರ ನಿಂತಿದೆ. ನಾಲ್ಕುಕಡೆ ಜನರು ನಿಂತು ಪ್ಯಾರಿಸ್ ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ. ನೆಲದಿಂದ 57 ಮೀಟರ್ ಎತ್ತರದಲ್ಲಿ ಮೊದಲ ಅಂತಸ್ತಿದೆ. 115 ಮೀ. ಎತ್ತರದಲ್ಲಿ ಎರಡನೇ ಅಂತಸ್ತು ಮತ್ತು 247 ಮೀಟರ್ ಎತ್ತರದಲ್ಲಿ ಮೂರನೇ ವೀಕ್ಷಣಾ ಅಟ್ಟಣೆಯನ್ನು ನಿರ್ಮಿಸಲಾಗಿದೆ. ಮೇಲೆರುತ್ತಾ ಹೋದಂತೆ ಚೌಕಟ್ಟು ಕಿರಿದಾಗುತ್ತಾ ಹೋಗುತ್ತದೆ. ಮೇಲೇರಲು ಒಮ್ಮೆಲೆ 63 ಜನರನ್ನು ಒಯ್ಯಬಲ್ಲ ಮೂರು ಲಿಫ್ಟುಗಳಿವೆ. ಹತ್ತುಹೋಗಬೇಕೆಂದರೆ 1269 ಮೆಟ್ಟಿಲುಗಳನ್ನು ಹತ್ತಬೇಕು. ನಿರ್ಮಾಣ ಸಮಯದಲ್ಲಿ 20 ವರ್ಷಗಳ ನಂತರ ಗೋಪುರವನ್ನು ಕಳಚಿಹಾಕಲು ಉದ್ದೇಶಿಸಲಾಗಿತ್ತು. ಈ ಮಧ್ಯೆ ಮೊದಲನೇ ಮಹಾಯುದ್ಧ ಆರಂಭವಾಯಿತು. ಇದರಿಂದ ಐಫೆಲ್ ಗೋಪುರ ಮಿಲಿಟರಿ ಸಂಪರ್ಕ ಕೇಂದ್ರವಾಗಿ ಸಹಾಯಕವಾಯಿತು ಹೀಗಾಗಿ ಅದನ್ನು ಕಳಚಿಹಾಕುವ ಪ್ರಶ್ನೆಯೇ ಬರಲಿಲ್ಲ. ಬಳಿಕ ನೂರಕ್ಕೂ ಹೆಚ್ಚು ವರ್ಷಗಳ ಕಾಲ ತಲೆಎತ್ತಿನಿಂತ ಹೆಗ್ಗಳಿಕೆಗೆ ಪಾತ್ರವಾಯಿತು.


ರಾಷ್ಟ್ರೀಯ ಸ್ಮಾರಕ:
1967ರಲ್ಲಿ ಐಫೆಲ್ ಗೋಪುರವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ. ಫ್ರೆಂಚರಿಗೆ ಐಫೆಲ್ ಗೋಪುರದ ಬಗ್ಗೆ ಅಪಾರ ಅಭಿಮಾನ. ಪ್ಯಾರಿಸ್ನಲ್ಲಿ ನಡೆಯುವ ಉತ್ಸವಗಳ ಸಮಯದಲ್ಲಿ ಐಫೆಲ್ ಗೋಪುರಕ್ಕೆ ದೀಪಾಲಂಕಾರ ಮಾಡಲಾಗುತ್ತದೆ. ದೀಪಾಲಂಕಾರಗೊಂಡ ರಾತ್ರಿ ಸುಮಾರು 40 ಕಿ.ಮೀ.ಆಚೆಗೂ ಇದರ ಬೆಳಕು ಪಸರಿಸುತ್ತಾ ಚಿನ್ನದ ಆಕಾರದಲ್ಲಿ ಹೊಳೆಯುತ್ತದೆ. ಪ್ರತಿ 7 ವರ್ಷಕ್ಕೊಮ್ಮೆ ಗೋಪುರಕ್ಕೆ ಬಣ್ಣ ಬಳಿಯಲಾಗುತ್ತದೆ. ಇದಕ್ಕಾಗಿ 50 ಟನ್ ಬಣ್ಣ ಬೇಕಾಗುತ್ತದೆ.

ಪ್ರಸಿದ್ಧ ಪ್ರವಾಸಿತಾಣ: 
ಐಫೆಲ್ ಗೋಪುರ ವಿಶ್ವದಲ್ಲಿಯೇ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ  ಒಂದೆನಿಸಿದೆ. ಲಕ್ಷಾಂತರ ಪ್ರವಾಸಿಗರು ಇದರ ವೀಕ್ಷಣೆಗೆ ಆಗಮಿಸುತ್ತಾರೆ. ಇದುವರೆಗೆ ಸುಮಾರು ಒಂದು ಕೋಟಿಗೂ ಅಧಿಕ ಪ್ರವಾಸಿಗರು ಈ ಗೋಪುರವನ್ನು ವೀಕ್ಷಿಸಿದ್ದಾರೆ.