ಜೀವನಯಾನ

Wednesday, September 9, 2015

ಗೋಲ್ಡನ್ ಗೇಟ್ ಬ್ರಿಡ್ಜ್

ಈ ಸೇತುವೆ 20ನೇ ಶತಮಾನದ ಎಂಜಿನಿಯರಿಂಗ್ ಅದ್ಭುತ ಎಂದೇ ಬಣ್ಣಿಸಲಾಗಿದೆ. ಜಗತ್ತಿನ ಮೊದಲ ತೂಗು ಸೇತುವೆ ಎಂಬ ಖ್ಯಾತಿ ಗೋಲ್ಡನ್ ಗೇಟ್ ಬ್ರಿಡ್ಜ್ ನದ್ದು. 1.7 ಮೈಲಿ ಉದ್ದದ ಈ ಸೇತುವೆ ಸ್ಯಾನ್ಫ್ರಾನ್ಸಿಸ್ಕೋ ಉತ್ತರ ತುದಿಯನ್ನು ಮರೀನ್ ಕೌಂಟಿಯ ಸಸಲಿಟೋದೊಂದಿಗೆ ಸೇರಿಸುತ್ತದೆ. ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡ ಒಂದು. 


ಎರಡು ಗೋಪುರಗಳೇ ಆಧಾರ:
ಈ ಸ್ಯಾನ್ಫ್ರಾಸ್ಸಿಸ್ಕೊ ಕೊಲ್ಲಿಯ ಮೇಲಿರುವ ಈ ತೂಗು ಸೇತುವೆ ಎರಡು ಗೋಪುರಗಳ ಆಧಾರದ ಮೇಲೆ ನಿಂತುಕೊಂಡಿದೆ. ಗೋಪುರದ ತುದಿಯಿಂದ ಇಳಿಬಿಡಲಾದ ಎರಡು ಉಕ್ಕಿನ ಕೇಬಲ್ಗಳು ಸೇತುವೆಯ ಭಾರವನ್ನು ತಡೆದುಕೊಳ್ಳುತ್ತದೆ. ಉಕ್ಕಿನ ಕೇಬಲ್ಗಳ ಒಳಗೆ ಸುಮಾರು 88 ಸಾವಿರ ಮೈಲಿ ಉದ್ದದ ವೈರ್ಗಳನ್ನು ಬಳಸಲಾಗಿದೆ. ಸೇತುವೆಯನ್ನು ಹಿಡಿದಿಟ್ಟುಕೊಂಡಿರುವ ಗೋಪುರಗಳು ನೀರಿನಿಂದ 726  ಅಡಿ ಎತ್ತರವಾಗಿವೆ. ಈ ಎರಡು ಗೋಪುರಗಳ ಮಧ್ಯೆ 4200 ಅಡಿ ಅಂತರವಿದೆ. 
ಈ ಸೇತುವೆಯ ನಿರ್ಮಾಣಕ್ಕೆ 88 ಸಾವಿರ ಟನ್ ಉಕ್ಕನ್ನು ಬಳಕೆಯಾಗಿದೆ. ಅಲ್ಲದೆ ಸಿಮೆಂಟ್ ಕಾಂಕ್ರೀಟ್ಅನ್ನು ಬಳಸಲಾಗಿದೆ. ಸೇತುವೆ ಒಟ್ಟು 887,000 ಟನ್ ಭಾರವಿದೆ. ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿದ್ದು 1933ರಲ್ಲಿ. 4 ವರ್ಷಗಳ ಸತತ ಪರಿಶ್ರಮದ ಬಳಿಕ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಜೋಸೆಫ್ ಬೈರ್ಮನ್ ಸ್ಟ್ರಾಸ್ ಎಂಬಾತ ಸೇತುವೆ ನಿರ್ಮಾಣದ ಮುಖ್ಯ ಎಂಜಿನಿಯರ್ ಆಗಿದ್ದ. ಸೇತುವೆಯ ನಿರ್ಮಾಣದ ವೇಳೆ 11 ಮಂದಿ ಕಾರ್ಮಿಕರು  ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು.

ಪ್ರತಿನಿತ್ಯ 1 ಲಕ್ಷ ವಾಹನ ಸಂಚಾರ:

1937ರ ಮೇ 27ರಂದು ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸಲಾಯಿತು. ಅಂದು 2 ಲಕ್ಷ ಜನರು ಸೇತುವೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಸಂಚರಿಸುವ ಮೂಲಕ ಸೇತುವೆಯನ್ನು ಅದ್ಧೂರಿಯಾಗಿ ಸೇತುವೆ ಉದ್ಘಾಟನೆಗೊಂಡಿತ್ತು. ಸೇತುವೆ 90 ಅಡಿಯಷ್ಟು ಅಗಲವಾಗಿದ್ದು, ಆರು ಪಥದ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಒಳಗೊಂಡಿದೆ. ಪ್ರತಿದಿ ಈ ಸೇತುವೆಯ ಮೇಲೆ 1,10,000 ವಾಹನಗಳು ಸಂಚರಿಸುತ್ತವೆ.
ಅಂದು ಈ ಸೇತುವೆ ನಿಮರ್ಾಣಕ್ಕೆ 210 ಕೋಟಿ ರೂ. (3.5  ಕೋಟಿ ಡಾಲರ್) ವೆಚ್ಚವಾಗಿತ್ತಂತೆ. ಒಂದು ವೇಳೆ ಇಂದು ಈ ಸೇತುವೆಯನ್ನು ನಿರ್ಮಿಸಬೇಕೆಂದರೆ 7,200 ಕೋಟಿ ರೂ. ವೆಚ್ಚವಾಗಲಿದೆ. 

ಗೊಲ್ಡನ್ ಗೇಟ್ ಎಂದು ಏಕೆ ಕರೆಯುತ್ತಾರೆ?
1846ರಲ್ಲೇ ಯುಸ್ಆಮರ್ಿಯ ಲೆಫ್ಟನೆಂಟ್ ಜಾನ್.ಸಿ. ಫ್ರಿಮಾಂಟ್ ಈಗ ಬ್ರಿಡ್ಜ್ ಇರುವ ಜಾಗಕ್ಕೆ ಗೋಲ್ಡನ್ ಗೇಟ್ ಅಂತ ಕರೆದಿದ್ದ. ಪೆಸಿಫಿಕ್ ಸಾಗರದಿಂದ ಸ್ಯಾನ್ಫ್ರಾನ್ಸಿಸ್ಕೋ ಕೊಲ್ಲಿಗೆ ದ್ವಾರದಂತಿದ್ದ ಈ ಕಿರಿದಾದ ಜಲಸಂಧಿಯನ್ನು ನೋಡಿ ಲೆಫ್ಟನೆಂಟ್ ಫ್ರಿಮಾಂಟ್ ಗೋಲ್ಡನ್ ಗೇಟ್ ಎಂದು ಹೆಸರಿಟ್ಟಿದ್ದ. ಆ ಬಳಿಕ ಇಲ್ಲಿ ಸೇತುವೆ ನಿರ್ಮಾಣಗೊಂಡಾಗಲೂ ಗೋಲ್ಡನ್ ಗೇಟ್ ಎಂಬ ಹೆಸರೇ ಉಳಿದುಕೊಂಡಿತು. ಸೇತುವೆಗೆ ಗೋಲ್ಡನ್ ಗೇಟ್ ಎಂಬ ಹೆಸರಿದ್ದರೂ  ಅದಕ್ಕೆ ಕಡು ಕಿತ್ತಳೆ ಬಣ್ಣವನ್ನು ಬಳಿಯಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವವರ ನೆಚ್ಚಿನ ತಾಣ:

ಗೋಲ್ಡನ್ ಗೇಟ್ ಸೇತುವೆ ಆತ್ಮಹತ್ಯೆ ಮಾಡಿಕೊಳ್ಳುವವರ ಇಷ್ಟದ ತಾಣ ಕೂಡ ಹೌದು. ಸಾವಿರಾರು ಮಂದಿ ಸೇತುವೆಯ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ಸೇತುವೆಯನ್ನು ಫೋಟೋಗ್ರಾಫರಗಳ ಸ್ವರ್ಗ ಎನಿಸಿಕೊಂಡಿದೆ.  ಜಗತ್ತಿನ ಅತಿಹೆಚ್ಚು ಫೋಟೊಗಳನ್ನು ಈ ಸೇತುವೆಯ ಮೇಲೆ ನಿಂತು ತೆಗೆಯಲಾಗಿದೆ. ಈಗ ಸೇರತುವೆಯ ಉಸ್ತುವಾರಿಗೆಂದೇ 12 ಜನ ಕಮ್ಮಾರರು 38 ಮಂದಿ ಪೇಂಟರ್ಗಳು ನೇಮಿಸಲಾಗಿದೆ. ಅವರು ವರ್ಷವಿಡೀ ಸೇತುವೆಯ ನಟ್- ಬೋಲ್ಟ್ಗಳ ಕಾಳಜಿ ವಹಿಸುತ್ತಾರೆ.




ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ

ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ ಮೆಡಿಟರೇನಿಯನ್ ಸಮುದ್ರದಲ್ಲಿ ಪುರಾತನ ಕಾಲದ ಎಲ್ಲ ನಾಗರಿಕರಿಗೂ ದಾರಿದೀಪವಾಗಿತ್ತು. ಕ್ರಿಸ್ತಶಕ ಪೂರ್ವ 283ರಲ್ಲಿ ನಿರ್ಮಿಸಲಾದ ಈ ದ್ವೀಪಸ್ತಂಭ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆನಿಸಿತ್ತು. ಸುಮಾರು 2 ಸಾವಿರ ವರ್ಷಗಳ ವರೆಗೆ ನಿಂತಿದ್ದ ಇದು ಭೂಕಂಪದಿಂದ ಅವಸಾನಗೊಂಡಿತ್ತು. ಅಲೆಕ್ಸಾಂಡ್ರಿಯಾ ರಾಜ್ಯದ ಬಾವುಟದಲ್ಲಿ ಮತ್ತು ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದ ಚಿಹ್ನೆಯಲ್ಲಿ ಮಾತ್ರ ಈ ಲೈಟ್ ಹೌಸ್ ಉಳಿದುಕೊಂಡಿದೆ.


ದೀಪಸ್ತಂಭದ ಹಿಂದಿನ ಕಥೆ
ಗ್ರೀಕ್ ಸಾಮ್ರಾಜ್ಯದ ಚಕ್ರವರ್ತಿ ಅಲೆಕ್ಸಾಂಡರ್ ಕ್ರಿ.ಪೂ. 331ರಲ್ಲಿ ಈಜಿಪ್ಟ್ನ ಮೇಲೆ ದಂಡೆತ್ತಿ ಹೋಗಿದ್ದ. ಆ ವೇಳೆ ಗ್ರೀಕ್ ಮತ್ತು ಈಜಿಪ್ಟ್ಗೆ ಸಂಪರ್ಕ ಸೇತುವೆಯಂತೆ ಮೆಡಿಟರೇನಿಯನ್ ತಟದಲ್ಲಿ ತನ್ನ ಹೆಸರಿನ ನಗರವೊಂದನ್ನು ನಿರ್ಮಿಸಲು ತನ್ನ ಸೇನಾನಿ ಮೊದಲನೇ ಟೊಲೆಮಿ ಸೊರ್ಟರ್ಗೆ ಆದೇಶಿಸಿದ್ದ. ಹೀಗಾಗಿ ಅಲೆಕ್ಸಾಂಡರನ ಹೆಸರಿನಿಂದಲೇ ಅಲೆಕ್ಸಾಂಡ್ರಿಯಾ ಎಂಬ ಹೆಸರು ಬಂದಿದೆ. ಅಲೆಕ್ಸಾಂಡರನ ಮರಣದ ಬಳಿಕ ಈ ರಾಜ್ಯಕ್ಕೆ ಟೊಲೆಮಿ ತಾನೇ ರಾಜನೆಂದು ಘೋಷಿಸಿಕೊಂಡ. ಆತ ಫೆರೋಸ್ ದ್ವೀಪದಲ್ಲಿ ಹಡಗುಗಳಿಗೆ ದಾರಿತೋರಲು ಬೃಹತ್ ಲೈಟ್ ಹೌಸ್ ಅನ್ನು ನಿರ್ಮಿಸಿದ್ದ. ಫೆರೋಸ್ ದ್ವೀಪದ ಮೇಲೆ ನಿರ್ಮಾಣಗೊಂಡಿದ್ದರಿಂದ ಲೈಟ್ಹೌಸ್ ಅನ್ನು ಸಹ ಫೆರೋಸ್ ಎಂದು ಕರೆಯಲಾಗುತ್ತಿತ್ತು.
 ಲೈಟ್ಹೌಸ್ ನಿರ್ಮಿಸಿದ ಶಿಲ್ಪಿ  ಗ್ರೀಸ್ನ ಸೊಸ್ಟ್ರಾಟೋಸ್. ಲೈಟ್ಹೌಸ್ನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು 20 ವರ್ಷಗಳು ಬೇಕಾದವು. ದ್ವೀಪಸ್ತಂಭ 450 ಅಡಿ ಎತ್ತರವಿತ್ತು ಎಂದು ಹೇಳಲಾಗಿದೆ. ಅಂದಿನ ಕಾಲಕ್ಕೆ ಅದು ವಿಶ್ವದ ಅತ್ಯಂತ ಎತ್ತರದ ಕಟ್ಟಡವೆನಿಸಿಕೊಂಡಿತ್ತು. ಅಲ್ಲದೆ, ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ ಅಂದಿನ ಕಾಲದಲ್ಲೂ ಜನಾಕರ್ಷಣೆಯ ಕೇಂದ್ರವಾಗಿತ್ತು.

ದೀಪಸ್ತಂಭ ಹೇಗಿತ್ತು ಗೊತ್ತಾ?
ಮೂರು ಹಂತದಲ್ಲಿ ದ್ವೀಪಸ್ತಂಭವನ್ನು ನಿರ್ಮಿಸಲಾಗಿತ್ತು. ಮೊದಲ ಹಂತದಲ್ಲಿ 240 ಅಡಿ ಎತ್ತರ ಮತ್ತು 100 ಚದರ ಅಡಿ ವಿಸ್ತಾರವಾಗಿತ್ತು. ಎರಡನೇ ಹಂತದಲ್ಲಿ 115 ಅಡಿ ಎತ್ತರವಾಗಿತ್ತು. ಕೊನೆಯ ಮೂರನೇ ಹಂತದಲ್ಲಿ 60 ಅಡಿ ಎತ್ತರದ ಕೊಳವೆಯನ್ನು ಹೊಂದಿತ್ತು. ಗೋಪುರದ ತುತ್ತತುದಿಯಲ್ಲಿ ಸಮುದ್ರ ದೇವತೆ ಪೊಸೈಡನ್ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸಾಮಾನ್ಯವಾಗಿ ಈಜಿಪ್ಟ್ ನ ಪ್ರಸಿದ್ಧ ಗೀಜಾ ಪಿರಾಮಿಡ್ಡುಗಳ ಜತೆ ಇದನ್ನು ಹೋಲಿಕೆ ಮಾಡುತ್ತಾರೆ.
ಕೊಳವೆಯ ಮೇಲ್ಭಾಗದಿಂದ ಉರುವಲನ್ನು ತುಂಬಿಸಿ ಬೆಂಕಿಯನ್ನು ಹಚ್ಚಲಾಗುತ್ತಿತ್ತು. ದ್ವೀಪಸ್ತಂಭದಿಂದ ಹೊರಹೊಮ್ಮುತ್ತಿದ್ದ ಬೆಳಕು ಯಾತ್ರಿಕರಿಗೆ ದಾರಿ ದೀಪವಾಗಿತ್ತು. ದ್ವೀಪಸ್ತಂಭದ ಒಳಭಾಗದಲ್ಲಿ ಮೆಟ್ಟಿಲುಗಳಿದ್ದವು. ಇದರಿಂದ ಜನರು ದೀಪದ ಕೋಣೆಗೆ ತೆರಳಲು ಸಾಧ್ಯವಾಗುತ್ತಿತ್ತು. ಅಲ್ಲದೆ ಬೆಂಕಿಯ ಬೆಳಕು ಹೆಚ್ಚಿನ ದೂರಕ್ಕೆ ಪ್ರತಿಫಲಿಸಲಿ ಎಂಬ ಕಾರಣಕ್ಕೆ ಕಲಾಯಿಹಾಕಿದ ತಾಮ್ರದ ಕನ್ನಡಿಯನ್ನು ದೀಪಸ್ತಂಭದ ಒಳಗೆ ಇರಿಸಲಾಗಿತ್ತು ಎಂದು ಹೇಳಲಾಗಿದೆ. ಹೀಗಾಗಿ ದೀಪಸ್ತಂಭದ ಬೆಳಕು ಮತ್ತು ಹೊಗೆ ಸುಮಾರು 10 ಮೈಲಿ ದೂರದವರೆಗೂ ಕಾಣಿಸುತ್ತಿತ್ತು.

ಇನ್ನೊಂದು ಲೈಟ್ ಹೌಸ್ ನಿರ್ಮಾಣ
ಆದರೆ, ಇಂಥದ್ದೊಂದು ಭವ್ಯಕಟ್ಟಡ ಭೂಕಂಪಗಳಿಂದ ತೀರ್ವ ಹಾನಿಗೆ ಒಳಗಾಗಿತ್ತು. ಅಲ್ಲದೆ, ಅದನ್ನು ಯಾರೂ ಬಳಸುತ್ತಿರಲಿಲ್ಲ. ಅದರ ಕೆಲವು ಅವಶೇಷಗಳು ಸಾಗರದಲ್ಲಿ ಹೂತುಹೊಗಿದ್ದವು. 12-14ನೇ ಶತಮಾನದಲ್ಲಿ ಮಾಮ್ಲುಕ್ ಸುಲ್ತಾನ್ ಖಯತ್ ಬೇ ಎಂಬಾತ ಅವುಗಳನ್ನು ತನ್ನ ಕೋಟೆಗಳನ್ನು ನಿರ್ಮಿಸಲು ಬಳಸಿಕೊಂಡಿದ್ದನಂತೆ. ಆ ಕೋಟೆ ಇಂದಿಗೂ ಇದೆ. ಅಲೆಕ್ಸಾಂಡ್ರಿಯ ಮೆಡಿಟರೇನಿಯನ್  ಸಾಗರದಲ್ಲಿ ಪುರಾತನ ಲೈಟ್ ಹೌಸ್ ಇತ್ತು ಎಂದು ಹೇಳಲಾದ ಸ್ಥಳದಲ್ಲಿ ಇಂದು ಒಂದು ಚಿಕ್ಕ ಲೈಟ್ಹೌಸ್ ಅನ್ನು ನಿರ್ಮಿಸಲಾಗಿದೆ.