ಜೀವನಯಾನ

Monday, April 27, 2015

ಗ್ರೇಟ್ ವಾಲ್ ಆಫ್ ಇಂಡಿಯಾ!

ನೀವೆಲ್ಲಾ ಚೀನಾ ಮಹಾಗೋಡೆಯ ಬಗ್ಗೆ ಕೇಳಿರುತ್ತೀರಿ. ಆದರೆ, ಭಾರತದಲ್ಲೂ ಇಂಥದ್ದೊಂದು ಗೋಟೆ ಇದೆ ಎನ್ನುವುದು ಗೊತ್ತೇ? ಹೌದು, ರಾಜಸ್ಥಾನದ ಕುಂಭಲಗಢ ಕೋಟೆ ಗ್ರೇಟ್ ವಾಲ್ ಆಪ್ ಇಂಡಿಯಾ ಎಂದೇ ಕರೆಸಿಕೊಂಡಿದೆ.


 ಕುಂಭಲಗಢ ಕೋಟೆಯು 15ನೇ ಶತಮಾನದಲ್ಲಿ ರಾಣಾ ಕುಂಭ ನಿಂದ ನಿರ್ಮಿತವಾಗಿದೆ. ರಾಜಸ್ಥಾನದ ಉದೈಪುರದಿಂದ 64 ಕಿ.ಮೀ. ದೂರದಲ್ಲಿ ಈ ಕೋಟೆ ಇದೆ. ಚಿತ್ತೋರಗಢ ಕೋಟೆಯ ಬಳಿಕ ರಾಜಸ್ಥಾನದ ಎರಡನೇ ಮಹತ್ವದ ಕೋಟೆ ಎನಿಸಿಕೊಂಡಿದೆ. ಇದರ ಗೋಡೆಗಳು ಅರಾವಳಿ ಬೆಟ್ಟಗಳ 36  ಕಿ.ಮೀ.ಗಳಷ್ಟು ದೂರಕ್ಕೆ ಚಾಚಿಕೊಂಡಿವೆ. ಚೀನಾ ಗೋಡೆಯ ಬಳಿಕ ಜಗತ್ತಿನ ಎರಡನೇ ಅತಿ ಉದ್ದದ ಗೋಡೆ ಇದಾಗಿದೆ. ಮುಂದಿನ ಗೋಡೆಗಳು 15 ಅಡಿಯಷ್ಟು ದಪ್ಪವಿದ್ದರೆ, ಕೆಲವೊಂದು ಕಡೆಗಳಲ್ಲಿ 15 ಮೀಟರ್ಗಷ್ಟು ದಪ್ಪವಾಗಿವೆ.   ಕೋಟೆಯು ಬೃಹದಾಕಾರದ ಏಳು ಹೊರದ್ವಾರಗಳನ್ನು ಹೊಂದಿದೆ. ಅವುಗಳಲ್ಲಿ ರಾಮ್ಪೋಲ್ ದೊಡ್ಡದಾದುದಾಗಿದೆ. ಈ ಗೋಡೆಗಳ ನಿರ್ಮಾಣಕ್ಕೆ ಎಲ್ಲಿಯೂ ಮಣ್ಣಿನ ಇಟ್ಟಿಗೆಗಳನ್ನು ಬಳಸಿಲ್ಲ. ಬದಲು ಭಾರವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗೋಡೆಯ ಮೇಲ್ಭಾಗದಲ್ಲಿ ಕಲ್ಲಿನ ಅಲಂಕಾರಿಕ ಕೆತ್ತನೆಗಳನ್ನು ಕಾಣಬಹುದು. ಹೀಗಾಗಿ ಈ ಕೋಟೆ ಇನ್ನಷ್ಟು ರಮಣೀಯವಾಗಿ ಗೋಚರಿಸುತ್ತದೆ. ರಜಪೂತರ ಕಾಲದ ವಾಸ್ತುಶಿಲ್ಪಕ್ಕೆ ಈ ಗೋಡೆ ಒಂದು ಉತ್ತಮ ಉದಾಹರಣೆ.ಸುತ್ತುಹಾಕಲು 8 ಗಂಟೆಬೇಕು!
ಗೋಡೆಗಳು ತುಂಬಾ ಓರೆಕೋರೆಯಾಗಿರುವುದರಿಂದ ಅದನ್ನು ಒಂದು ಸತ್ತು ಹಾಕಲು ಕಮ್ಮಿ ಅಂದರೂ 8 ಗಂಟೆಯಾದರೂ ಬೇಕು. ಸಮುದ್ರ ಮಟ್ಟದಿಂದ 1914 ಮೀಟರ್ಗಳಷ್ಟು ಎತ್ತರದಲ್ಲಿ ಈ ಕೋಟೆಯನ್ನು ನಿಮರ್ಿಸಲಾಗಿದೆ. 19ನೇ ಶತಮಾನದಲ್ಲಿ ರಾಣಫತೇಹ್ ಸಿಂಗ್ ಈ ಕೋಟೆಯನ್ನು ಪುನರುಜ್ಜೀವನಗೊಳಿಸಿ ಗೋಡೆಗಳನ್ನು ಇನ್ನಷ್ಟು ವಿಸ್ತರಿಸಿದ.

ಕೋಟೆಯನ್ನು ಯಾರೂ ಗೆದ್ದಿಲ್ಲ!
ಇನ್ನೊಂದು ವಿಶೇಷವೆಂದರೆ ಈ ಕೋಟೆಯನ್ನು ಯಾರಿಂದಲೂ ಗೆಲ್ಲಲು ಸಾಧ್ಯವಾಗಿಲ್ಲ. ಕೋಟೆಯ ತುತ್ತತಿದಿಯಲ್ಲಿ ಈ ಕೋಟೆಯಲ್ಲಿ  ಮಹಾರಾಣ ಪ್ರತಾಪ್ನಿಂದ ನಿರ್ಮಿತವಾದ ಡೋಮ್ ಆಕಾರದ ಒಂದು ಅರಮನೆಯಿದೆ. ಇದನ್ನು ಬಾದಲ್ ಮಹಲ್ ಎಂದು ಕರೆಯುತ್ತಾರೆ. ಮಹಾರಾಣ ಪ್ರತಾಪ್ ಇಲ್ಲಿ ಅನಭಿಶಕ್ತ ದೊರೆಯಾಗಿ ಆಡಳಿತ ನಡೆಸಿದ್ದ.
ಕೋಟೆಯ ಒಳಗೆ 360 ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ 300 ಪುರಾತನ ಜೈನ ದೇವಾಲಯಗಳಾಗಿದ್ದು, ಉಳಿದವು ಹಿಂದು ದೇವಾಲಯವಾಗಿದೆ. ಇಲ್ಲಿನ ಶಿವದೇವಾಲಯ ಅತ್ಯಂತ ಪ್ರಸಿದ್ಧವಾಗಿದ್ದು, ಬೃಹದಾಕಾರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಅರಮನೆಯ ಮೇಲೆ ನಿಂತರೆ ಅರಾವಳಿ ಬೆಟ್ಟಗಳಸಾಲುಗಳನ್ನು ದೂರದ ವರೆಗೆ ವೀಕ್ಷಿಸಬಹುದು. ಶತ್ರುಗಳ ರಕ್ಷಣೆಗಾಗಿ ವಕ್ರಾಕಾರವಾಗಿ ಎತ್ತರವಾದ ಗೋಡೆಗಳನ್ನು ಕಟ್ಟಲಾಗಿದೆ.

ಕೋಟೆಯ ಇತಿಹಾಸದ ಪರಿಚಯ:
ಇಲ್ಲಿ ಸೂರ್ಯ ಮುಳುಗಿದ ಬಳಿಕ ಕೋಟೆಯ ಇತಿಹಾಸದ ಬಗ್ಗೆ ಪ್ರವಾಸಿಗರಿಗೆ ಧ್ವನಿ ಮತ್ತು ಬೆಳಕಿನ ಸಾಕ್ಷ್ಯಚಿತ್ರವನ್ನು ತೋರಿಸಲಾಗುತ್ತದೆ.  2013ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ  ಘೋಷಿಸಲಾಗಿದೆ. ಇಂದು ಈ ಕೋಟೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ರಾಜಸ್ತಾನದ ಪ್ರಮುಖ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ.


Wednesday, April 22, 2015

ಪುಕ್ತಲ್ ಗೊಂಪಾ

ಬೆಟ್ಟದ ಕಣಿವೆಯಲ್ಲಿ ಸನ್ಯಾಸಿಗಳ ಮನೆಗಳು

ಸನ್ಯಾಸಿಗಳು ಅಧ್ಯಾತ್ಮ ಚಿಂತನೆಗೆ ಹಿಮಾಲಯದ ಗುಹೆಗಳಲ್ಲಿ ಕುಳಿತು ತಪಸ್ಸು ಮಾಡುತ್ತಾರೆ ಎನ್ನುವುದನ್ನು ಕೇಳಿದ್ದೇವೆ. ಅದೇರೀತಿ ಬೆಟ್ಟದ ಕಣಿವೆಯ ಕಡಿದಾದ ಜಾಗದಲ್ಲಿ ಸಮುದಾಯ ಗೃಹಗಳನ್ನು ಬೌದ್ಧ ಸನ್ಯಾಸಿಗಳು ನಿರ್ಮಿಸಿಕೊಂಡಿದ್ದಾರೆ. ಇದನ್ನು ತಲುಪವುದು ಒಂದು ಸಾಹಸದ ಕೆಲಸವೇ ಸರಿ. ಹಿಮಾಲಯದ ಲಡಾಖ್ನ ಝನ್ಸಕರ್ ಕಣಿವೆಯಲ್ಲಿರುವ ಈ ದುರ್ಗಮ ಗುಹೆಗಳೇ ಪುಕ್ತಲ್ ಗೊಂಪಾ. ಇಲ್ಲಿನ ನೈಸರ್ಗಿಕ ಗುಹೆಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ


 2550 ವರ್ಷಗಳ ಹಿಂದೆಯೇ ಇಲ್ಲಿಗೆ ಋಷಿಮುನಿಗಳು ಭೇಟಿನೀಡಿದ್ದರು ಎಂಬ ನಂಬಿಕೆ ಇದೆ. ಗಂಗ್ಸೆಂ ಲಾಮಾ ಎಂಬ ಬೌದ್ಧ ಧರ್ಮಗುರು 12ನೇ ಶತಮಾನದಲ್ಲಿ ಪುಕ್ತಲ್ ಗೊಂಪಾ ಸಮುದಾಯ ಗೃಹಗಳನ್ನು ನಿರ್ಮಿಸಿದ.
ಗೌತಮ ಬುದ್ಧನ 16ನೇ ಅನುಯಾಯಿ ಇಲ್ಲಿನ ಪುಕ್ತಲ್ ಗುಹೆಗಳಲ್ಲಿ  ವಾಸಿಸಿದ ಅತಿ ಹಳೆಯ ವ್ಯಕ್ತಿ. ಆತನ ಭಾವಚಿತ್ರಗಳು ಗುಹೆಯ ಗೋಡೆಗಳ ಮೇಲೆ ಇಂದಿಗೂ ಕಾಣಬಹುದಾಗಿದೆ. ಇವುಳನ್ನು ಮನೆ ಎಂದು ಕರೆಯುವುದಕ್ಕಿಂತ ಮಠಗಳೆಂದು ಕರೆಯುವುದೇ ಹೆಚ್ಚು ಸೂಕ್ತ. ಇಲ್ಲಿ ಬೌದ್ಧ ಸನ್ಯಾಸಿಗಳೇ ವಾಸಿಸುತ್ತಾರೆ. ಇಲ್ಲಿ ಸನ್ಯಾಸಿಗಳ 70 ಮಠಗಳಿವೆ. ಜತಗೆ 4 ಪ್ರಾರ್ಥನಾ ಕೊಠಡಿ ಮತ್ತು ಒಂದು ಗ್ರಂಥಾಲಯವೂ ಇದೆ. ಇವುಗಳನ್ನು ಮಣ್ಣು ಮತ್ತು ಕಟ್ಟಿಗೆಯಿಂದ ನಿಮರ್ಿಸಲಾಗಿದೆ.
ಪುಕ್ತಲ್ ಎನ್ನುವ ಪದಕ್ಕೆ ಗುಹೆಗಳ ಮೂಲಕ ಎನ್ನವ ಅರ್ಥವಿದೆ. ಎರಡು ಅಂತಸ್ತಿನ ಮನೆಗಳನ್ನು ಇಲ್ಲಿ ಕಾಣಬಹುದು. ಮನೆಗಳಿಗೆ ಲಡಾಕ್ನ ಸಂಪ್ರದಾಯಿಕ ಬಣ್ಣವಾದ ಕಪ್ಪು, ಕೆಂಪು ಮತ್ತು ಹಳದಿ ಬಣ್ಣಗಳನ್ನು ಬಳಿಯಲಾಗಿದೆ. ಇಲ್ಲಿ ಮೂರು ದೊಡ್ಡದಾದ ಮತ್ತು ಒಂದು ಸಣ್ಣದಾದ ಪ್ರಾರ್ಥನಾ ಮಂದಿರವಿದೆ. ಮನೆಯ ಗೋಡೆಗಳಿಗೆ ಟೊಳ್ಳಾದ ಕಲ್ಲುಗಳನ್ನು ಬಳಸಲಾಗಿದೆ.
ಪ್ರವಾಸಿ ತಾಣ:
ಟಿಬೇಟಿಯನ್ ಬೌದ್ಧ ಸನ್ಯಾಸಿಗಳಿಗೆ ಪುಕ್ತಲ್ ಗೊಂಪಾ ಪವಿತ್ರವಾದ ಪ್ರವಾಸಿ ಸ್ಥಳವಾಗಿದೆ. 3850 ಮೀಟರ್ಗಳಷ್ಟು ಎತ್ತರದಲ್ಲಿರುವ ಈ ಸ್ಥಳವನ್ನು ಈಗಲೂ ಕಾಲ್ನಡಿಗೆಯಲ್ಲೇ ಸಾಗಬೇಕು. ಕಾರ್ಗಿಲ್ ಮೂಲಕವೂ ಇಲ್ಲಿಗೆ ತಲುಪಬಹುದು. ದುರ್ಗಮವಾದ ಪುನರ್ೆ ಸೇತುವೆಯ ಮೂಲಕ 7 ಕಿ.ಮೀ. ಚಾರಣ ಮಾಡಿದರೆ ಪುಕ್ತಲ್ ಗುಹೆಗಳನ್ನು ತಲುಪಬಹುದು. ಇಲ್ಲಿಗೆ ತಲುಪಲು ಶಾಶ್ವತ ರಸ್ತೆಯೊಂದನ್ನು ನಿಮರ್ಿಸುವ ಕಾರ್ಯ ನಡೆಯುತ್ತಿದೆ.
ಬೆಟ್ಟದ ಕಡಿದಾದ ಕಣಿವೆಯಲ್ಲಿ ಕಟ್ಟಿರುವ ಈ ಮನೆಗಳು ದೂರದಿಂದ ನೋಡುವವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ವರ್ಷಕ್ಕೊಮ್ಮೆ ಉತ್ಸವ: 
ಟಿಬೇಟಿಯನ್  ಕ್ಯಾಲೆಂಡರನ 12ನೇ ತಿಂಗಳ 18 ಮತ್ತು 19ನೇ ದಿನದಂದು ಬೌದ್ಧ ಸನ್ಯಾಸಿಗಳು ಇಲ್ಲಿ ಗುಸ್ಟೋರ್ ಉತ್ಸವವನ್ನು ಅಚರಿಸುತ್ತಾರೆ. ಅಂದು ಸನ್ಯಾಸಿಗಳೆಲ್ಲರೂ ಸೇರಿ ಸಾಂಪ್ರದಾಯಿಕ ಪೂಜೆ ಮತ್ತು ನೃತ್ಯವನ್ನು ನಡೆಸುತ್ತಾರೆ.

Monday, April 13, 2015

ಲೇಕ್ ಪ್ಯಾಲೇಸ್

ಸರೋವರದಲ್ಲೊಂದು ಅರಮನೆ

ಸ್ವಸಂರಕ್ಷಣೆಗಾಗಿ ರಾಜರು ಭಿನ್ನ ವಿಭಿನ್ನ ರೀತಿಯ ಕೋಟೆ, ಸಾಮ್ರಾಜ್ಯಗಳನ್ನು ನಿರ್ಮಿಸಿದ್ದಾರೆ. ತಮ್ಮ ವಾಸಸ್ಥಾನ ಶತ್ರುಗಳಿಗೆ ಸುಲಭ ತುತ್ತಾಗಬಾರದು, ಪ್ರಜೆಗಳು ಕ್ಷೇಮದಿಂದ ಇರಬೇಕು ಎಂಬ  ಕಾರಣಕ್ಕೆ ಚಾಕಚಕ್ಯತೆಯಿಂದ ಅರಮನೆಯನ್ನು ನಿರ್ಮಿಸುತ್ತಿದ್ದರು. ಇದಕ್ಕೊಂದು ಉದಾಹರಣೆ ರಾಜಸ್ಥಾನದ ಉದಯಪರದಲ್ಲಿರುವ ಲೇಕ್ ಪ್ಯಾಲೇಸ್. ಇದನ್ನು ಒಂದು ಕೃತಕ ಸರೋವರದ ಮೇಲೆ ನಿರ್ಮಿಸಲಾಗಿದೆ. ಇದು ಭಾರತ ಮಾತ್ರವಲ್ಲ ವಿಶ್ವದಲ್ಲೇ ಅತ್ಯಂತ ರಮ್ಯವಾದ ಅರಮನೆ ಎಂದೇ ಖ್ಯಾತಿಗಳಿಸಿದೆ. 


ಈಗ ಇದು ಪಂಚತಾರಾ ಹೋಟೆಲ್!
ಲೇಕ್ ಪ್ಯಾಲೇಸ್ ಇರುವುದು ಪಿಚೋಲಾ ಸರೋವರದ ಮಧ್ಯೆ ಇರುವ ಜಗನಿವಾಸ ದ್ವೀಪದಲ್ಲಿ. ಹೀಗಾಗಿ ಇದಕ್ಕೆ ಜಗನಿವಾಸ ಅರಮನೆ ಎಂದು ಹೆಸರು ಬಂದಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಅರಮನೆಗಳಲ್ಲಿ ಇದೂ ಒಂದು. 2ನೇ ಮಹಾರಾಣ ಜಗತ್ಸಿಂಗ್ 1743ರಲ್ಲಿ ಜಗನಿವಾಸ ಅರಮನೆಯನ್ನು ನಿರ್ಮಿಸಿದ. ಇಂದು ಈ ಅರಮನೆಯನ್ನು ಪಂಚತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ತಾಜ್ ಹೋಟೆಲ್ಸ್ ಸಮೂಹ ಇದರ ನಿರ್ವಹಣೆಯನ್ನು ಮಾಡುತ್ತಿದೆ.

ಸುಂದರ ವಾಸ್ತುಶಿಲ್ಪ:
ಈ ಕಟ್ಟಡದ ವಾಸ್ತುಶಿಲ್ಪ ಶೈಲಿ ಅತ್ಯಂತ ಸುಂದರವಾಗಿದೆ. ಸುಂದರವಾಗಿ ನಿರ್ಮಿಸಿದ  ಕಂಬಗಳು, ಅಂಕಣಗಳನ್ನು ಹೊಂದಿರುವ ವರಾಂಡ, ಉದ್ಯಾನವನಗಳು ಮತ್ತು ಕಾರಂಜಿಗಳು ಅರಮನೆಯ ಸೌಂದರ್ಯವನ್ನು ಹೆಚ್ಚಿಸಿದೆ. ಸುಮಾರು ನಾಲ್ಕು ಎಕರೆಯಷ್ಟು ವಿಶಾಲವಾದ ಪ್ರದೇಶಕ್ಕೆ ಅರಮನೆ ವ್ಯಾಪಿಸಿದೆ.  ಅರಮನೆಯ ಕೋಣೆಗಳನ್ನು ಗಾಜುಗಳು, ಕಮಾನುಗಳು ಮತ್ತು ಹಸಿರು ಕಮಲದ ಎಲೆಗಳಿಂದ ಅಲಂಕರಿಸಲಾಗಿದೆ. ಇಲ್ಲಿ ಇನ್ನೂ ಕೆಲವು ವಸತಿಸಮಚ್ಚಯಗಳಿದ್ದು, ಖುಷ್ ಮಹಲ್, ಬಡಾ ಮಹಲ್, ಧೋಲಾ ಮಹಲ್, ಫೂಲ್ ಮಹಲ್ ಮತ್ತು ಅಜ್ಜನ್ ನಿವಾಸ್ ಎಂದು ಗುರುತಿಸಲಾಗಿದೆ. ಬಾರ್, ಈಜುಕೊಳ ಮತ್ತು ಸಭಾಂಗಣ ಈ ಅರಮನೆಯಲ್ಲಿದೆ. ನಗರದಿಂದ ಈ ಅರಮನೆಗೆ ಅತಿಥಿಗಳನ್ನು ದೋಣಿಯ ಮೂಲಕ ಕರೆತರಲಾಗುತ್ತದೆ.
ಪೂರ್ವಾಭಿಮುಖವಾಗಿ ಜಗನಿವಾಸ ಅರಮನೆಯನ್ನು ನಿರ್ಮಿಸಲಾಗಿದೆ. ಅರಮನೆಯ ನಿವಾಸಿಗಳು ಪ್ರತಿನಿತ್ಯ ಸೂರ್ಯನಿಗೆ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಬಂದ ರಾಜರುಗಳು ಈ ಅರಮನೆಯನ್ನು ಬೇಸಿಗೆಯ ಆಶ್ರಯತಾಣವಾಗಿ ಬಳಸಿಕೊಂಡಿದ್ದರು.

ಷಹಜಹಾನನಿಗೆ ಪ್ರೇರಣೆ
ಮಹಾರಾಣ ಮೊಗಲ್ ದೊರೆಗಳಿಗೆ ಆಪ್ತನಾಗಿದ್ದ, ಇಲ್ಲಿಗೆ ಭೇಟಿ ನೀಡಿದ್ ಷಹಜಹಾನ್ ತನ್ನ ಆಸ್ತಾನದ ವಾಸ್ತುಶಿಲ್ಪಿಗಳಿಗೆ ಈ ಅರಮನೆಯ ಮಾದರಿಯಲ್ಲೇ ಆಗ್ರಾದಲ್ಲಿ  ಕಟ್ಟಡವನ್ನು ನಿರ್ಮಿಸಲು ಪ್ರೋತ್ಸಾಹಿಸಿದ್ದ. ಇದನ್ನು ಅನುಸರಿಸಿ ಆಗ್ರಾದಲ್ಲಿ ತಾಜ್ ಮಹಲ್ ಮತ್ತು ಆಗ್ರಾಕೋಟೆಯನ್ನು ಷಹಜಹಾನ್ ನಿರ್ಮಿಸಿದ. 


ಸರೋವರಗಳ ನಗರ:
ಉದಯಪುರ ಸರೋವರಗಳ ನಗರ ಎಂದೂ ಪ್ರಸಿದ್ಧವಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಂ ಮತ್ತು ವನ್ಯಧಾಮಗಳನ್ನು ಹೊಂದಿದೆ. ಪಿಚೋಲಾ ಸರೋವರವನ್ನು ಸುಮಾರು 1362ರಲ್ಲಿ ನಿರ್ಮಿಸಲಾಯಿತು. ಆಣೆಕಟ್ಟಿನ ಪರಿಣಾಮವಾಗಿ ಸುತ್ತಲಿನ ಪ್ರದೇಶದ ನೀರಿನ ದಾಹವನ್ನು ನೀಗಿಸಲು ಸಹಾಯಮಾಡಿತು. ಈ ಸರೋವರದ ಸೌಂದರ್ಯವನ್ನು ಗಮನಿಸಿದ ಮಹಾರಾಣ ಉದಯ್ಸಿಂಗ್ ಈ ಸರೋವರದ ದಡದಲ್ಲಿ ನಗರವೊಂದನ್ನು ನಿರ್ಮಿಸಲು ಉದ್ದೇಶಿಸಿದ. ಹೀಗೆ ರೂಪಗೊಂಡಿದ್ದೇ ಉದಯಪರ. ಪತೇಹ್ ಸಗರ ಇಲ್ಲಿನ ಇನ್ನೊಂದು ಇನ್ನೊಂದು ಕೃತಕ ಸರೋವರ. ಇದನ್ನು 1678ರಲ್ಲಿ ಮಹಾರಾಣ ಪತೇಹ್ ಸಿಂಗ್ ನಿರ್ಮಿಸಿದ. ಅಲ್ಲದೆ, ರಾಜ ಸಮಾನಂದ್ ಮತ್ತು ಉದಯಸಾಗರ ಮತ್ತು ಜೈಸಮಂದ್ ಸರೋವರಗಳು ಇಲ್ಲಿನ ಆಕರ್ಷಣೆಗಳಾಗಿವೆ.

Tuesday, April 7, 2015

ಮಣಿಪುರದಲ್ಲೊಂದು ತೇಲುವ ಸರೋವರ!

ಇಲ್ಲಿ ಉದ್ಯಾನವನವೇ ನೀರಿನಮೇಲೆ ತೇಲುತ್ತಿದೆ. ಮಣಿಪುರದ ರಾಜಧಾನಿ ಇಂಫಾಲ್ ಸಮೀಪವಿರುವ ಲೋಕ್ತಾಕ್ ಸರೋವರದಲ್ಲಿ ಫ್ಯೂಮಿಡ್ಗಳೆಂದು ಕರೆಯಲ್ಪಡುವ ಹಲವಾರು ದ್ವೀಪ ಮಾದರಿ ರಚನೆಗಳು ತೇಲುತ್ತಾ ಇರುತ್ತವೆ. ಹೀಗಾಗಿ ತೇಲುವ ಸರೋವರ ಅಂತಲೇ ಇದನ್ನು ಕರೆಯುತ್ತಾರೆ. ಈ ಸರೋವರದ ಒಂದು ಭಾಗವಾಗಿರುವ ಕೈಬುಲ್ ಲಾಮ್ಜಾವೋ ರಾಷ್ಟ್ರೀಯ ಉದ್ಯಾನ ಈ ಸರೋರದ ಮೇಲೆ ನಿಂತಿದೆ. ನೀರಿನ ಮೇಲೆ ತೇಲುವ ಜಗತ್ತಿನ ಏಕೈಕ ರಾಷ್ಟ್ರೀಯ ಉದ್ಯಾನ ಎಂದು ಕರೆಸಿಕೊಂಡಿದೆ. ಇದನ್ನು ತೇಲುವ ಸ್ವರ್ಗ ಅಂತಲೂ ಬಣ್ಣಿಸಲಾಗಿದೆ. 

ಅತಿದೊಡ್ಡ ಸಿಹಿ ನೀರಿನ ಸರೋವರ:
ಲೋಕ್ತಾಕ್ ಸರೋವರದ ನೀರು ಸದಾ ಹಸಿರಾಗಿ ಗೋಚರಿಸುತ್ತದೆ. ಇದಕ್ಕೆ ಮುಖ್ಯಕಾರಣ ಸರೋವರದಲ್ಲಿ ಬೆಳೆಯುತ್ತಿರುವ ಹಸಿರು ಪಾಚಿ ಸಸ್ಯಗಳು ಮತ್ತು ನೀರಿನಲ್ಲಿ ಹಲವಾರು ಸಸ್ಯವರ್ಗ. ಆದರೂ ಇದರ ನೀರು ಸಿಹಿಯಾಗಿರುತ್ತದೆ. ಉತ್ತರ ಭಾರತದ ಅತ್ಯಂತದೊಡ್ಡ ಸಿಹಿ ನೀರಿನ ಸರೋವರ ಎಂಬ ಖ್ಯಾತಿಯೂ ಲೋಕ್ತಾಕ್ ಸರೋವರಕ್ಕೆ ಇದೆ. ಸರೋವರದ ಮೇಲೆ ತೇಲುವ ದ್ವೀಪಗಳು ಸುತ್ತಮುತ್ತಲಿನ ಮೀನುಗಾರರಿಗೆ ತಂಗುದಾಣವೂ ಹೌದು. ಅವುಗಳಲ್ಲಿ ಕೆಲವು ನೈಸರ್ಗಿಕ ರಚನೆಯಾಗಿದ್ದರೆ ಇನ್ನು ಕೆಲವು ದ್ವೀಪಗಳನ್ನು ಮೀನುಗಾರಿಕೆಯ ದೃಷ್ಟಿಯಿಂದ ಕೃತಕವಾಗಿ ಸೃಷ್ಟಿಸಲಾಗಿದೆ. ಇಲ್ಲಿ ಪ್ರತಿವರ್ಷ  1500 ಟನ್ಗಳಷ್ಟು ಮೀನುಗಳ ಸಾಕಣೆ ಮಾಡಲಾಗುತ್ತದೆ. ಅಂದಹಾಗೆ ಇದು ಮಣಿಪುರ ರಾಜಧಾನಿ ಇಂಫಾಲ್ನಿಂದ ಕೇವಲ 48 ಕಿ.ಮೀ. ದೂರದಲ್ಲಿದೆ.

ಇಂಫಾಲ್ ಜನರ ಜೀವನಾಡಿ:

ಇದು ಇಲ್ಲಿನ ಜನರಿಗೆ ಕೇವಲ ಸರೋವರವಾಗಿ ಉಳಿದಿಲ್ಲ. ಇದುವೇ ಜನರ ಜೀವನಾಧಾರ. ಮಣಿಪುರದ ಆಥರ್ಿಕತೆಯ ಮೇಲೂ ಸರೋವರ ಪ್ರಮುಖ ಪ್ರಭಾವ ಬೀರುತ್ತಿದೆ. ಈ ಸರೋವರದ ಜಲಾನಯನ ಪ್ರದೇಶ ಒಟ್ಟು 980 ಚದರ್ ಕಿ.ಮೀ. ಇದರಲ್ಲಿ 430 ಚದರ್ ಕಿ.ಮೀ. ವ್ಯಾಪ್ತಿಯಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಆದರೆ, 1971ರಲ್ಲಿ 491 ಚದರ್ ಕಿ.ಮೀ.ಯಷ್ಟಿದ್ದ ಸರೋವರದ ವ್ಯಾಪ್ತಿ ಈಗ 236 ಚದರ್ ಕಿ.ಮೀ. ಪ್ರದೇಶಕ್ಕೆ ಕುಗ್ಗಿದೆ. ಇದೊಂದು ಪ್ರವಾಸಿತಾಣವಾಗಿ ಕೂಡ ಪ್ರಸಿದ್ಧಿ ಪಡೆದಿದೆ. ಬೋಟಿಂಗ್ ಸೇರಿದಂತೆ ಹಲವಾರು ಜಲಕ್ರೀಡೆಗಳು ಪ್ರವಾಸಿಗರಿಗೆ ಮನರಂಜನೆ ಒದಗಿಸುತ್ತವೆ. ಸೆಂಡ್ರಾ ದ್ವೀಪ ಇಲ್ಲಿನ ಪ್ರಮುಖ ಆಕರ್ಷಣೆ. ಈ ಸರೋವರ ಅನೇಕ ಪ್ರಾಣಿ ಪಕ್ಷಿಗಳಿಗೂ ಆಶ್ರಯತಾಣವಾಗಿದೆ. 57 ಬಗೆಯ ಜಲಚರ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಅಳಿವಿನಂಚಿನಲ್ಲಿರುವ ಸಂಗಾಯ್ ಪ್ರಜಾತಿಯ ಜಿಂಕೆಗಳು ಕಾಣಸಿಗುತ್ತವೆ.

ಆಪತ್ತು ಎದುರಾಗಿದೆ:
ಇತ್ತೀಚಿನ ದಿನಗಳಲ್ಲಿ ಸರೋವರದ ಸುತ್ತಮುತ್ತಲಿನ ಹಸಿರು ಪ್ರದೇಶ ನಾಶವಾಗುತ್ತಿದೆ. ಬ್ಯಾರೇಜ್ಗಳ ನಿರ್ಮಾಣ, ಅರಣ್ಯ ನಾಶದಿಂದ ಸರೋವರದಲ್ಲಿ ಪ್ರತಿವರ್ಷ ಹೆಚ್ಚೆಚ್ಚು ಹೂಳು ಸಂಗ್ರವಾಗುತ್ತಿದೆ. ಈ ಸರೋವರದಲ್ಲಿ ಜಲವಿದ್ಯುತ್ ಯೋಜನೆಯ ಮೂಲಕ ಇಂಫಾಲ್ ನಗರಕ್ಕೆ ವಿದ್ಯುತ್ ನೀಡಲಾಗುತ್ತಿದೆ. ಅಲ್ಲದೆ, ಇಂಫಾಲ್ ನಗರದ ಚರಂಡಿ ನೀರನ್ನು ಈ ಸರೋವರಕ್ಕೆ ಬಿಡಲಾಗುತ್ತಿದೆ. ಇದರಿಂದ ನದಿಯ ಸೌಂದರ್ಯ ಹಾಳಾಗಿದೆ. ಅಲ್ಲದೆ, ಸರೋವರದ ಮೇಲೆ ತೇಲುವ ಹಸಿರು ಪಾಚಿಗಳ ಗಾತ್ರಕೂಡ ಕಿರಿದಾಗುತ್ತಿದೆ.

Wednesday, April 1, 2015

ಪುಷ್ಪಕಣಿವೆ!

ಮನೆಯಮುಂದೊಂದು ಪುಟ್ಟ ಹೂದೋಟವಿದ್ದರೂ ಎಷ್ಟೊಂದು ಖುಷಿ. ಹೀಗಿರುವಾಗ ಬೆಟ್ಟದ ತುಂಬೆಲ್ಲಾ ಬರೀ
 ಹೂಗಿಡಗಳೇ ತುಂಬಿಕೊಂಡಿದ್ದರೆ?  ಹೌದು. ಹಿಮಾಲಯದ ತಪ್ಪಲಿನಲ್ಲೊಂದು ಹೂವಿನ ಕಣಿವೆಯಿದೆ. ಉತ್ತರಾಖಂಡದಲ್ಲಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ನೂರಾರು ಬಗೆಯ ಹೂವುಗಳ ಬೃಹತ್ ನೈಕ ಸರ್ಗಿಕ ತೋಟ. ವಿಶ್ವದ ಏಕೈಕ ಪುಷ್ಪಕಣಿವೆ ಎಂದು ಗುರುತಿಸಲ್ಪಟ್ಟಿದೆ. 82.50 ಚದರ್ ಕಿ.ಮೀ. ಪ್ರದೇಶಕ್ಕೆ ವ್ಯಾಪಿಸಿರುವ ಪುಷ್ಪಕಣಿವೆ ವಿಶ್ವ ಪಾರಂಪರಿಕ ತಾಣವಾಗಿ ಮಾನ್ಯತೆ ಪಡೆದಿದೆ. 


ಎಲ್ಲಿ ನೋಡಿದರೂ ಹೂಗಳ ರಾಶಿ!
ಇಲ್ಲಿನ ಹೂವುಗಳು ಆಲ್ಪೈನ್ ತಳಿಗಳಿಗೆ ಸೇರಿದ್ದಾಗಿದ್ದು, ಆರ್ಕೆಡ್, ಪ್ಲೈಮ್ಯೂಲಾ, ಮೇರಿಗೋಲ್ಡ್, ಡೈಸಿಗಳು, ಹಿಮಾಲಯನ್ ಬೆಲ್ ಫ್ಲಾವರ್, ಚಂಪನುಲಾ ಲತಿಫೊಲಿಯಾ, ಹಳದಿ ಹೂ ಮತ್ತಿತರ ನೂರಾರು ಬಗೆಯ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು. ಈ ಕಣಿವೆಯ 3800 ಮೀಟರ್ ಎತ್ತರದಲ್ಲಿ ಬ್ರಹ್ಮ ಕಮಲ ಹೂವು ಅರಳುತ್ತದೆ. ಬಣ್ಣಬಣ್ಣದ ಹೂವುಗಳಿಂದ ಕೂಡಿದ ಕಣಿವೆಯ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸಿದಾಗ ಸೃಷ್ಟಿಯಾಗುವ ಸನ್ನಿವೇಶವೇ ರಮಣೀಯ. ಇಲ್ಲಿ ಸಿಗುವಷ್ಟು ಔಷಧ ಗಿಡಮೂಲಿಕೆಗಳು ಹಿಮಾಲಯದ ಇತರ ಯಾವುದೇ ಕಡೆಗಳಲ್ಲಿ ಸಿಗುವುದಿಲ್ಲ. ಹಿಮಾಲಯದ ಗರುಡ,  ಗ್ರಿಫಾನ್ ಹದ್ದು, ಹಿಮ ಕೋಳಿ, ಮೋಲಾನ್ ಹಿಮ ಪಾರಿವಾಳ ಮುಂತಾದ ಪಕ್ಷಿಗಳು ಇಲ್ಲಿ ವಾಸಿಸುತ್ತವೆ.

ಅಪರೂಪದ ಪ್ರಾಣಿಗಳಿಗೂ ಆಶ್ರಯ:

ಇದೊಂದು ಜೀವ ವೈವಿಧ್ಯದ ನೆಲೆ. ಇಲ್ಲಿ ಹೂವುಗಳನ್ನು ಮಾತ್ರವಲ್ಲ. ಕಪ್ಪು ಕರಡಿ, ಹಿಮ ಚಿರತೆ, ಕಸ್ತೂರಿ ಮೃಗ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ಅಪರೂಪದ ವನ್ಯ ಜೀವಿಗಳು ಕಾಣಸಿಗುತ್ತವೆ. ಈ ಉದ್ಯಾನದಲ್ಲಿ 750ಕ್ಕೂ ಹೆಚ್ಚಿನ ತಳಿಯ ಹೂವುಗಳಿವೆ. ಅಲ್ಪೈನ್ ಸಸ್ಯ ರಾಶಿಯಿಂದಾಗಿ ಈ ಕಣಿವೆಗೆ ಅಂತಾರಾಷ್ಟ್ರೀ ಮಟ್ಟದಲ್ಲಿ ಪ್ರಾಮುಖ್ಯ ಹೊಂದಿದೆ. ಇಲ್ಲಿಯ ಜೀವವೈವಿಧ್ಯದ ಹಲವು ತಳಿಗಳು ಜಾಗತಿಕವಾಗಿ ಅಳಿವಿನ ಅಂಚಿನಲ್ಲಿವೆ. ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಬೆಸೆದುಕೊಂಡಿರುವ ಪುಷ್ಪಕಣಿವೆ ಕಿರಿದಾಗಿರದೇ ವಿಶಾಲವಾಗಿದೆ. ಕಣಿವೆಯ ಮೂಲಕ ಪುಷ್ಪವತಿ ನದಿ ಹರಿದುಹೋಗುತ್ತದೆ. 


ಬಹುತೇಕ ಸಮಯ ಹಿಮದಿಂದ ಆವೃತ:
ಅಂದಹಾಗೆ ಇದು ನೋಡುಲು ಎಷ್ಟು ಸುಂದರವೋ ಇದನ್ನು  ತಲುಪುವುದು ಕೂಡ ಅಷ್ಟೇ ಕಷ್ಟ. ಸಮುದ್ರ ಮಟ್ಟದಿಂದ 3250 ಮೀಟರ್ನಿಂದ 6750 ಮೀಟರ್ ಎತ್ತರದಲ್ಲಿ ಕಣಿವೆ ನೆಲೆಸಿದೆ. ಹಿಮಾಲಯದ ಝಂಸ್ಕಾರ್ ಶ್ರೇಣಿಯಲ್ಲಿರುವ 6,719 ಮೀಟರ್ ಎತ್ತರದ ಗೌರಿಶಿಖರ ಪುಷ್ಪಕಣಿವೆ ರಾಷ್ಟೀಯ ಉದ್ಯಾನದ ತುತ್ತತುದಿ. ಉತ್ತರಾಖಂಡದ ಗಢ್ವಾಲ್ ಪ್ರದೇಶದಲ್ಲಿರವ ಈ ಕಣಿವೆಯನ್ನು ವರ್ಷದ ಹೆಚ್ಚಿನ ಸಮಯದಲ್ಲಿ ತಲುಪುವುದು ಅಸಾಧ್ಯ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಜೂನ್ನಿಂದ ಅಕ್ಟೋಬರ್ ವರೆಗೆ ಮಾತ್ರ ತೆರೆದಿರುವ ಈ ಉದ್ಯಾನ ಉಳಿದ ಸಮಯದಲ್ಲಿ ಹಿಮದಿಂದ ಮುಚ್ಚಿರುತ್ತದೆ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವನ್ನು ತಲುಪಲು 17 ಕಿ.ಮೀ.ಗಳಷ್ಟು ದೂರನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಗುತ್ತದೆ. ಇದಕ್ಕೆ ಸಮೀಪದ ದೊಡ್ಡ ಪಟ್ಟಣವೆಂದರೆ ಜೋಷಿ ಮಠ.

ಇದ್ದಿದ್ದು ಗೊತ್ತೇ ಇರಲಿಲ್ಲ!

1931ರ ವರೆಗೂ ಹೊರ ಜಗತ್ತಿಗೆ ಈ ಕಣಿವೆಯ ಕುರಿತು ತಿಳಿದಿರಲಿಲ್ಲ. ಪರ್ವತಾ ರೋಹಿ ಫ್ರಾಂಕ್ ಸ್ಮಿತ್ ಎಂಬಾತ ಹಿಮಾಲಯ ಪರ್ವತವನ್ನು ಏರುವಾಗ ದಾರಿತಪ್ಪಿ ಈ ಕಣಿವೆಗೆ ಭೇಟಿ ನೀಡುತ್ತಾನೆ. ಇಲ್ಲಿನ ಹೂವುಗಳ ಸೌಂದರ್ಯವನ್ನು ಕಂಡು ಬರೆಗಾದ ಆತ "ವ್ಯಾಲಿ ಆಫ್  ಫ್ಲವರ್ಸ್" ಎಂಬ ಪುಸ್ತಕವನ್ನು ಹೊರತರುತ್ತಾನೆ. ಆ ಬಳಿಕ ಇದು ಹೆಚ್ಚು ಪ್ರಸಿದ್ಧಿಗೆ ಬಂತು.  ಪುಷ್ಪಕಣಿವೆಯನ್ನು 1982 ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.