ಜೀವನಯಾನ

Monday, February 27, 2012

ಡಾಲ್ಫಿನ್

ನೀರಿನಲ್ಲಿ ಡೈವ್ ಹೊಡೆಯುವ ಡಾಲ್ಫಿನ್ ..!
ಡಾಲ್ಫಿನ್ ತಿಮಿಂಗಿಲದ ಜಾತಿಗೆ ಸೇರಿದ ಸಮುದ್ರದಲ್ಲಿ ವಾಸಿಸುವ ಸಸ್ತನಿ. ಇವೂ ಸಹ ನಮ್ಮಂತೆಯೇ ಗಾಳಿಯನ್ನು ಉಸಿರಾಡಿ ಬದುಕುತ್ತವೆ. ಇವು ನೀರಿನೊಳಗಿದ್ದರೂ ಉಸಿರಾಡಲು ನೀರಿನ ಮೇಲ್ಮೈಗೆ ಬರಲೇ ಬೇಕು. ನೀರಿನಲ್ಲಿ 15 ನಿಮಿಷಗಳ ತನಕ ಉಸಿರನ್ನು ಹಿಡಿದಿಡಬಲ್ಲದು. ಸುಮಾರು 10 ರಿಂದ 15 ದಶಲಕ್ಷ ವರ್ಷಗಳ ಹಿಂದೆ ಆಧುನಿಕ ಡಾಲ್ಫಿನ್ಗಳು ರೂಪಗೊಂಡವು ಎಂದು ಅಂದಾಜಿಸಲಾಗಿದೆ. ವಿಜ್ಞಾನಿಗಳು ಇಂದು ಡಾಲ್ಫಿನ್ನಲ್ಲಿ 32 ವಿಧಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದುದು ಮತ್ತು ಸಂಶೋಧನೆ, ಮನರಂಜನೆ, ಅಧ್ಯಯನದ ಸಲುವಾಗಿ ಅತೀಹೆಚ್ಚು ಸಾಕಲ್ಪಡುತ್ತಿರುವುದು ಬಾಟ್ಲನೋಸ್ ಡಾಲ್ಫಿನ್. ಕಿಲ್ಲರ್ ವೇಲ್ ಅಥವಾ ಓರ್ಕಾ  ಡಾಲ್ಫಿನ್ ಗಳಲ್ಲಿ ಅತೀದೊಡ್ಡದು. ಇದು 31 ಅಡಿ ಯದ್ದ ಬೆಳೆಯ ಬಲ್ಲದು. ಡಾಲ್ಫಿನ್ ಗಳಲ್ಲಿ ನಾಲ್ಕು ಸಿಹಿನೀರಿನ ಡಾಲ್ಫಿನ್ಗಳಿದ್ದು ಒಂದು ಪ್ರಭೇಧ ಭಾರತ, ನೇಪಾಳ ಮತ್ತು ಬಾಂಗ್ಲಾದ ಗಂಗಾನದಿಗಳಲ್ಲಿ ಮಾತ್ರ ಕಂಡುಬರುತ್ತದೆ.
ಗಾಳಿಯಲ್ಲಿ ಹಾರಿ ನೀರಿಗೆ ಡೈವ್ ಹೊಡೆಯುತ್ತ ನೀರಿನಲ್ಲಿ ಈಜುವ ನಿಪುಣತೆ ಪಡೆದ ಡಾಲ್ಫಿನ್ ಸಮುದ್ರದಲ್ಲಿ ಗಂಟೆಗೆ 7 ರಿಂದ 30 ಮೈಲಿ ದೂರ ಕ್ರಮಿಸಬಲ್ಲದು. ಡಾಲ್ಫಿನ್ 94 ಹರಿತವಾದ ಚಿಕ್ಕಚಿಕ್ಕ ಹಲ್ಲುಗಳಿರುತ್ತದೆ. ದಿನವೊಂದಕ್ಕೆ 14 ಪೌಂಡಗಳಷ್ಟು ಮೀನು ಮತ್ತು ಜಲಚರಗಳನ್ನು ತಿನ್ನುತ್ತದೆ. ಡಾಲ್ಫಿನ್ ನಿದ್ರಿಸುವಾಗ ಮುಳುಗಿ ಸಾಯದಂತೆ ಪ್ರಕೃತಿಯಲ್ಲಿ ಅವುಗಳಿಗೊಂದು ಸುವ್ಯವಸ್ಥಿತ ವ್ಯವಸ್ಥೆ ಇದೆ. ಇದಕ್ಕೆ ಎರಡು ಮಿದುಳೀದ್ದು ಮಿದುಳಿನ ಒಂದುಭಾಗ ನಿದ್ರಿಸುವಾಗ ಇನ್ನೊಂದು ಭಾಗ ಎಚ್ಚರವಾಗಿರುತ್ತದೆ. ಇದರ ಮಿದುಳು ಮಾನವನ ಮಿದುಳಿಗಿಂತ 5 ಪಟ್ಟು ದೊಡ್ಡದು.  
  • ಭಾವ ಜೀವಿ
ಡಾಲ್ಫಿನ್ಗಳದ್ದು ಒಂದು ಸುಸಜ್ಜಿತ ಸಮಾಜ. ತಾಯಿಯನ್ನು ಕಳೆದುಕೊಂಡ ಇತರ ಡಾಲ್ಫಿನ್ ಮರಿಗಳನ್ನು ದತ್ತು ಪಡೆದು ತಮ್ಮವೆಂಬಂತೆಯೇ ಸಾಕುತ್ತವೆ. ಡಾಲ್ಫಿನ್ಗಳು ತಮ್ಮ ಜೀವನ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ. ಇತರ ಡಾಲ್ಫಿನ್ ಕಷ್ಟದಲ್ಲಿ ಸಿಲುಕಿದರೆ ಒಂದಕ್ಕೊಂದು ನೆರವಾಗುತ್ತದೆ. ಆಹಾರವನ್ನು ಹಂಚಿಕೊಂಡು ತಿನ್ನುತ್ತವೆ. ಮಾನವನೊಂದಿಗೂ ಡಾಲ್ಫಿನ್ಗಳು ಅನ್ಯೋನ್ಯ ಸಂಬಂಧ ಹೊಂದಿದೆ. ಸಾಗರದ ಮಧ್ಯದಲ್ಲಿ ಮನುಷ್ಯನ ಸಂಘವನ್ನು ಅರಸಿಬರುವ  ಏಕೈಕ ಪ್ರಾಣಿಯೆಂದರೆ ಡಾಲ್ಫಿನ್ ಮಾತ್ರ. ಅನೇಕಬಾರಿ ಅಪಾಯದಲ್ಲಿ ಸಿಲುಕಿಕೊಂಡ ಮಾನವನನ್ನು ಡಾಲ್ಫಿನ್ಗಳು ದಡಸೇರಿಸಿದ ಉದಾಹರಣೆಗಳಿವೆ.
  • ಬುದ್ಧಿವಂತ ಪ್ರಾಣಿ 
ಡಾಲ್ಫನ್ ಮಾನವನಂತೆ ಬುದ್ಧಿಶಕ್ತಿ ಹೊಂದಿದೆ. ಕೇವಲ ಅನುಕರಣೆಯ ಮೂಲಕ ಎಲ್ಲವನ್ನೂ ಕಲಿಯುತ್ತದೆ. ಹೀಗಾಗಿಯೇ ಇದು ಎಂಥಹ ಕೆಸಗಳನ್ನಾದರೂ ಕಲಿತು ಅವುಗಳನ್ನು ಪ್ರದರ್ಶಿಸಬಲ್ಲವು. ಡಾಲ್ಫನ್ ಗೆ ಅದರದೇ ಆದ ಭಾಷೆಯಿದೆ. ತನ್ನ ಒಡನಾಡಿಗಳೊಂದಿಗೆ ತನ್ನದೇ ಆದ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತದೆ. ಇವುಗಳ ಗ್ರಹಿಕೆ, ಪ್ರಜ್ಞೆ ಸಾಮಥ್ರ್ಯ ಮಾನವನಿಗಿಂತಲೂ ಉತ್ತಮ ಮತ್ತು ವಿಭಿನ್ನ. ಇವು ಮನುಷ್ಯರ ಮಾತುಗಳನ್ನು ಸುಲಭವಾಗಿ ಕಲಿಯಬಲ್ಲವು ಮತ್ತು ಉಚ್ಚರಿಸಲೂ ಬಲ್ಲವು. ಆದರೆ ಮಾನವನಿಗೆ ಅವುಗಳ ಮಾತಿನ ಎರಡಕ್ಷರವನ್ನೂ ಕಲಿಯಲಾಗಲಿಲ್ಲ. ಡಾಲ್ಫಿನ್ಗಳು ಶ್ವಾಸರಂದ್ರಗಳಿಂದ ಶಬ್ದಹೊರಡಿಸುತ್ತವೆ. ಆ ಕೀರಲು ಶಬ್ದಗಳಿಂದಲೇ ಮನುಷ್ಯನೊಟ್ಟಿಗೆ ಹಾಗೂ ಪರಸ್ಪರ ಮಾತನಾಡುತ್ತವೆ. ಅಲ್ಲದೇ ತಮ್ಮದೇ ಭಾಷೆಯಲ್ಲಿ ಹಾಡಬಲ್ಲವು.

  • ಮನರಂಜನೆಗೆ ಬಳಕೆ
ಮನರಂಜನೆ ಪಡೆಯುವ ಸಲುವಾಗಿಯೇ ಡಾಲ್ಫಿನ್ಗಳನ್ನು ಸಾಕಿ ಅವುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಮನುಷ್ಯನ ಹಾವಭಾವಗಳನ್ನು ಯಥಾವತ್ತಾಗಿ  ಅನುಸರಿಸುವ  ಡಾಲ್ಫಿನ್ ನಗು ಮುಖ ಎಲ್ಲರಿಗೂ ಮನರಂಜನೆ ನೀಡುತ್ತದೆ. ಇದು ಮಾನವನೊಟ್ಟಿಗೆ ಜಲಕ್ರೀಡೆ ಆಡುವುದರಲ್ಲಿಯೂ ನಿಸ್ಸೀಮ. ನೀರಿನಿಂದ 15ರಿಂದ 30 ಅಡಿ ಎತ್ತರಕ್ಕೆ ಜಿಗಿದು ಕೈಯಿಂದ ಆಹಾರಗಳನ್ನು ಕಸಿದುಕೊಳ್ಳಬಲ್ಲದು. ಚಂಡನ್ನು ಮೂಗಿನ ಮೇಲಿಟ್ಟು ಈಜುತ್ತಾ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸುತ್ತದೆ.

 ಮಾನವನೊಂದಿಗೆ ಅನ್ಯೋನ್ಯಗಿ ಬೆರೆಯುವ ಡಾಲ್ಫಿನ್ಗೂ ಸಂಚಕಾರ ಎದುರಾಗಿದೆ. ಪ್ರತಿವರ್ಷ 3 ಲಕ್ಷಕ್ಕೂ ಹೆಚ್ಚು ಡಾಲ್ಫೀನ್ಗಳು ಬಲಿಯಾಗುತ್ತಿವೆ. ಮಾಂಸಕ್ಕಾಗಿ ಜಪಾನ್ ನಾರ್ವೇ, ಐಸ್ಲ್ಯಾಂಡ್ಗಳಲ್ಲಿ ಅತೀಹೆಚ್ಚಾಗಿ ಡಾಲ್ಫಿನ್ಗಳನ್ನು ಕೊಲ್ಲಲಾಗುತ್ತಿದೆ. ಹೀಗಾಗಿ ಡಾಲ್ಫಿನ್ ಸಂತತಿ ಜಗತ್ತಿನಿಂದ ಮರೆಯಾಗುತ್ತಿದೆ.

 

Friday, February 17, 2012

ಬಿಸಿ ನೀರಿನ ಬುಗ್ಗೆ


ಬಿಸಿ ನೀರಿನ ನೈಸರ್ಗಿಕ ಸ್ನಾನ ಕೊಳ.. ! 

ಬಿಸಿ ನೀರಿನ ಬುಗ್ಗೆಗಳು ನೈಸರ್ಗಿಕ ಕೊಡುಗೆ. ಭೂಗರ್ಭದಲ್ಲಿನ ಶಾಖಭರಿತ ನೀರು ಭೂಮಿಯ ಮೇಲ್ಪದರದಿಂದ ಹೊರಕ್ಕೆ ಚಿಮ್ಮುವುದರಿಂದ ಇದು ಉಂಟಾಗುತ್ತದೆ. ಜಗತ್ತಿನ ಎಲ್ಲಾ ಕಡೆಗಳಲ್ಲಿ, ನದಿ, ಸಾಗರ ಹಿಮಾಲಯಗಳಲ್ಲಿಯೂ ಬಿಸಿನೀರಿನ ಬುಗ್ಗೆಗಳಿವೆ. ನೈಸರ್ಗಿಕ ನೀರಿನ ಶಾಖ ಗಣನೀಯ ಪ್ರಮಾಣದಲ್ಲಿ ಜಾಸ್ತಿಯಿದ್ದಾಗ ಬಿಸಿನೀರಿನ ಚಿಲುಮೆ ಎನಿಸಿಕೊಳ್ಳುತ್ತದೆ. ಇಂತಹ ಬುಗ್ಗೆಗಳ ಉಷ್ಣತೆ 50 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು.
  • ಏಕೆ ಬಿಸಿಯಾಗಿರುತ್ತದೆ ?
ಬಿಸಿನೀರಿನ ಬುಗ್ಗೆಯ ನೀರು ಶಾಖವನ್ನು ಭೂಗರ್ಭದಲ್ಲಿನ ಶಿಲೆಗಳಿಂದ ಪಡೆದುಕೊಳ್ಳುತ್ತದೆ. ಭೂಮಿಯ ಆಳಕ್ಕೆ ಹೋದಂತೆಲ್ಲ ಶಿಲೆಗಳ ತಾಪಮಾನ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿಗೆ ನೀರು ಇಳಿದಾಗ ಈ ಶಿಲೆಗಳ ಸಂಪರ್ಕದಿಂದ ಬಿಸಿಯಾಗುತ್ತದೆ. ನೀರು ಕುದಿಯುವ ಮಟ್ಟಕ್ಕಿಂತ ಹೆಚ್ಚು ಬಿಸಿಯಾದಾಗ ಆವಿಯಾಗಿ ಪರಿವರ್ತಿತವಾಗುತ್ತದೆ. ಇವು ಅತ್ಯಂತ ಒತ್ತಡದ ಸ್ಥಿತಿಯಲ್ಲಿರುತ್ತದೆ. ಈ ಒತ್ತಡ ಹೆಚ್ಚಿದಾಗ ಭೂಮಿಯ ಪದರ ಛೇದಿಸಿ ಬಲು ಎತ್ತರದವರೆಗೆ ಕಾರಂಜಿಯಾಗಿ ಚಿಮ್ಮುತ್ತದೆ. ಇಂತಹ ಬುಗ್ಗೆಗಳಲ್ಲಿ ಗೀಸರ್, ಫ್ಯುಮರೋಲ್, ಮಡ್ ಫಾರ್ಮ್ ಎಂಬ ಹಲವು ವಿಧಗಳಿವೆ. ಇಂತಹ ಬುಗ್ಗೆ ಅತೀ ಬಿಸಿಯಾಗಿದ್ದು ಇದರ ಸಂಪರ್ಕದಿಂದ ಮೈಮೇಲೆ ಸುಟ್ಟಗಾಯಗಾಗುತ್ತವೆ. ಸಣ್ಣ ಪ್ರಮಾಣದ ಒಸರುವಿಕೆಯಿಂದ ಹಿಡಿದು ದೊಡ್ಡ ಪ್ರಮಾಣದ ನದಿಗಳವರೆಗೆ ಬಿಸಿನೀರಿನ ಬುಗ್ಗೆ ನೀರನ್ನು ಹೊರಚಿಮ್ಮುತ್ತದೆ. ಪ್ರತಿ ಸೆಕೆಂಡಿಗೆ ಒಂದು ಲೀಟರ್ಗಿಂತ ಹೆಚ್ಚು ನೀರನ್ನು ಹೊರಚಿಮ್ಮುವ ಬುಗ್ಗೆಗಳು ಗಣನೀಯ. ಚಿಲುಮೆಯ ಅತೀವ ಶಾಖಭರಿತ ನೀರಿನಲ್ಲಿ ಸಹ ಕೆಲ ಜೀವಿಗಳಿದ್ದು ಮಾನವನಿಗೆ ರೋಗ ಉಂಟು ಮಾಡಬಲ್ಲದು.
  • ನೈಸರ್ಗಿಕ ಸ್ನಾನ ಕೊಳ.   


ಚಿಲುಮೆಯ ನೀರಿನಲ್ಲಿ ಹಲವುಬಗೆಯ ಖನಿಜ ಮತ್ತು ಲವಣಗಳು ಕರಗಿರುತ್ತವೆ. ಈ ನೀರಿನಲ್ಲಿ ಗಂಧಕಗಳು ಹಚ್ಚಾಗಿ ಕರಗಿರುವುದರಿಂದ ಚರ್ಮರೋಗಳನ್ನು ವಾಸಿಮಾಡುವ ಗುಣವಿದೆ ಎಂದು ನಂಬಲಾಗಿದೆ. ಹೀಗಾಗಿ ಬಿಸಿನೀರಿನ ಸ್ನಾನ ಜನಪ್ರಿಯತೆ ಗಳಿಸಿಕೊಂಡಿದೆ. ನೈಸರ್ಗಿಕ ಬಿಸಿನೀರನ್ನು ಸಂಗ್ರಹಿಸಿ ಕೊಳವನ್ನು ನಿರ್ಮಿಸಿ ಸಾರ್ವಜನಿಕ ಸ್ನಾನಕ್ಕೆ ಅವಕಾಶ ಕಲ್ಪಸಿದ ಸ್ಥಳಗಳಿಗೆ ಭಾರೀಬೇಡಿಕೆ. ಜಗತ್ತಿನ ಎಲ್ಲಾಕಡೆ ಬಿಸಿನೀರಿನ ಬುಗ್ಗೆಗಳು ಕಂಡುಬಂದರೂ ಚೀನಾ, ಕೊಸ್ಟರಿಕಾ, ಐಸ್ಲ್ಯಾಂಡ್, ನ್ಯೂಜಿಲ್ಯಾಂಡ್, ಕೆನಡಾ, ಪೆರು, ಟೈವಾನ್ ಮತ್ತು ಜಪಾನ್ ದೇಶಗಳು ಬಿಸಿನೀರಿನ ಚಿಲುಮೆಗೆ ಹೆಸರುವಾಸಿ. ಭಾರತದಲ್ಲಿ ಮಣಿಕರಣ್, ಬದರಿನಾಥ, ಯಮನೋತ್ರಿ ಮುಂತಾದ ತೀರ್ಥಕ್ಷೇತ್ರಗಳಲ್ಲಿ ಬಿಸಿನೀರಿನ ಚಿಲುಮೆಗಳಿವೆ. ಅಷ್ಟೆಅಲ್ಲ ಕರ್ನಾಟಕದ ಪುತ್ತೂರಿನ ಬೆಂದ್ರ ಕ್ಷೇತ್ರದಲ್ಲಿಯೂ ಬಿಸಿನೀರಿನ ಚಿಲುಮೆ ಕಾಣಬಹುದು.
  • ಇಂಧನ ಮೂಲವಾಗಿ ಬಳಕೆ.
ನೈಸರ್ಗಿಕ ಬಿಸಿನೀರನ ಬುಗ್ಗೆಗಳು ಲಭ್ಯವಿರುವ ಜಾಗದಲ್ಲಿ ನೀರಿನ ಶಾಖವನ್ನು ಶಕ್ತಿಯ ಮೂಲವನ್ನಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತದೆ. ವಿಶ್ವಾದ್ಯಂತ ಇರುವ ಭೂಶಾಖದ ಸ್ಥಾವರಗಳು ಸುಮಾರು 10 ಗಿಗಾವ್ಯಾಟ್ನಷ್ಟು ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಬಿಸಿನೀರಿನ ಬುಗ್ಗೆಗಳು ಜಾಗತಿಕ ವಿದ್ಯುತ್ಶಕ್ತಿ ಬೇಡಿಕೆಗೆ  ಶೇ.0.3ರಷ್ಟು ಕೊಡುಗೆ ನೀಡುತ್ತಿವೆ.
  • ವಿಶ್ವದ ಕೆಲವು ಪ್ರಸಿದ್ಧ ಬಿಸಿ ನೀರಿನ ಬುಗ್ಗೆಗಳು
  1. ಐಸ್ ಲ್ಯಾಂಡಿನ ಗೀಸರ್ ಚಿಲುಮೆ. ನೀರು ಬಿಸಿಮಾಡಲು ಬಳಸುವ ಗೀಸರ್ ಎಂಬ ಪದ ಈ ಚಿಲುಮೆಯಿಂದಲೇ ಬಂದಿದೆ.
  2. ಕೊಸ್ಟರಿಕಾದ ರಿಂಕನ್ ಡಿ ಲಾ ವಿಯೇಜಾ ರಾಷ್ಟ್ರೀಯ ಉದ್ಯಾನದಲ್ಲಿನ ಬಿಸಿನೀರಿನ ಬುಗ್ಗೆಗಳು.
  3. ಜರ್ಮನಿಯ ಆಚೆನ್ ಬುಗ್ಗೆ. ಇದು 74 ಡಿಗ್ರಿ ಸೆ. ಉಷ್ಣಾಂಶದ ನೀರನ್ನು ಹೊರಚಿಮ್ಮುತ್ತದೆ.
  4. ಟಿಬೇಟ್ನ ಯಾಂಗ್ಬಾಜಿಂಗ್ ಚಿಲುಮೆ ಹಲವು ಚದರ್ ಕಿ.ಮಿ ಪ್ರದೇಶವನ್ನು ವ್ಯಾಪಿಸಿದೆ.
  5. ಗ್ರೀಸ್ ದೇಶದ ಇಕಾರಿಕಾ ಬಿಸಿನೀರನಿನ ಚಿಲುಮೆ ವಿಕಿರಣಯುಕ್ತ ನೀರನ್ನು ಹೊಂದಿದೆ.
  6. ಐಸ್ಲ್ಯಾಂಡಿನ ಡೆಯಿಲ್ಡ್ ಆಟರ್ುಂಗುವರ್ ಚಿಲುಮೆ 97 ಡಿಗ್ರಿ.ಸೆ.ಶಾಖ ಹೊಂದಿದ್ದು, ಈ ನೀರನ್ನು ಕೊಳವೆಯ ಮೂಲಕ ಹಾಯಿಸಿ ಪಟ್ಟಣವನ್ನು ಬೆಚ್ಚಗಿಡಲು ಉಪಯೋಗಿಸಲಾಗುತ್ತದೆ. 

Sunday, February 12, 2012

ಬಾವಲಿ..

   ಬಾವಲಿ ಮಿತ್ರ ಕಾಣುವುದು ರಾತ್ರಿ ಮಾತ್ರ ..!
ಹಗಲಿನಲ್ಲಿ ಕಣ್ಣು ಕಾಣಿಸದ ನಿಶಾಚರಿ ಬಾವಲಿಗಳು ಮರಗಳ ಮರೆಯಲ್ಲಿ, ಬಾವಿ, ಸುರಂಗ, ಗುಹೆಗಳಲ್ಲಿ ತಲೆ ಕೆಳಗಾಗಿ ಜೋತು ಬಿದ್ದಿರುತ್ತವೆ. ಹಗಲಿನಲ್ಲಿ ತಲೆಕೆಳಗಾಗಿ ನಿದ್ರಿಸುವ ಇವು ರಾತ್ರಿಯಾಗುತ್ತಿದ್ದಂತೆ ಚಟುವಟಿಕೆ ಶುರುಹಚ್ಚಿಕೊಳ್ಳುತ್ತವೆ. ಬಾವಲಿಗಳು ಮಾನವನ ಜೀವನಕ್ಕೂ  ಒಗ್ಗಿಕೊಂಡಿವೆ, ಹಳೆಯ ಕಟ್ಟಡಗಳು, ಯಾರು ವಾಸಿಸದ ಬಂಗಲೆಗಳು, ಸೇತುವೆಗಳ ತಳದಲ್ಲಿ ವಾಸಿಸಬಲ್ಲವು.  
ಅತ್ತ ಪ್ರಾಣಿಯೂ ಅಲ್ಲದ, ಇತ್ತ ಪಕ್ಷಿಯೂ ಅಲ್ಲದ ಸಸ್ತನಿ ಇದು.  ನಾಲ್ಕು ಕಾಲುಗಳಿದ್ದು, ಮೊಟ್ಟೆಯಿಡದೆ ಮರಿಗಳಿಗೆ ಜನ್ಮನೀಡುವ, ಮರಿಗಳಿಗೆ ಮೊಲೆ ಹಾಲುಣಿಸುವ ವರ್ಗಕ್ಕೆ ಸೇರಿದೆ. ಸಸ್ತನಿ ಜಾತಿಯಲ್ಲಿ ಹಾರುವ ಸಾಮರ್ಥ್ಯ  ಇರುವುದು ಬಾವಲಿಗೆ ಮಾತ್ರ. ಆದರೆ ಹಕ್ಕಿಗಳಂತೆ ಬಹಳ ದೂರ ಹಾರಲಾರವು. ಇವು ಎತ್ತರದ ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವಾಗ ರೆಕ್ಕೆ ಬಡಿದುಕೊಳ್ಳುತ್ತವೆ. ಅರಣ್ಯ, ಮರುಭೂಮಿ, ಪಟ್ಟಣ ಹೀಗೆ ಪ್ರಪಂಚದ ಎಲ್ಲಾ ಭಾಗದಲ್ಲಿಯೂ ಕಂಡು ಬರುತ್ತವೆ. ಬಾವಲಿಗಳು ಇರದ ಖಂಡ ಅಂದರೆ ಅಂಟಾರ್ಟಿಕಾ. ಸಾವಿಕ್ಕಿಂತ ಹೆಚ್ಚು ಬಗೆಯ ಬಾವಲಿಯ  ಪ್ರಭೇದ ಪ್ರಪಂಚದಲ್ಲಿದೆ. ರೆಕ್ಕೆ ಉಳ್ಳ ಪಕ್ಷಿಯಂತೆ ಕಾಣುವ ಬಾವಲಿ ಪ್ರಾಣಿಗಳ ಶಾರೀರವನ್ನು ಹೊಂದಿದೆ. ರೆಕ್ಕೆ ಮತ್ತು ಕಾಲಿನಲ್ಲಿ ಮೊನಚಾದ ಮುಳ್ಳಿನಂಥಹ ಉಗುರುಗಳಿರುತ್ತವೆ. ವಿಕಾರವಾಗಿ ಕೇಕೆ ಹಾಕುವ ಬಾವಲಿಯ ಧ್ವನಿ ಮಕ್ಕಳಲ್ಲಿ ಭಯ ಹುಟ್ಟಿಸುತ್ತದೆ. 

  • ಗುಂಪಾಗಿಯೇ ಇರುತ್ತವೆ.
ಅತೀ ಉಷ್ಣ ಮತ್ತು ಅತೀ ಶೀತ ಹವೆಯಲ್ಲಿಯೂ ಇವು ಬದುಕ ಬಲ್ಲವು. ಬವಲಿಯ ಜೀವಿತಾವಧಿ 4ರಿಂದ 30 ವರ್ಷಗಳು. ಸಾದಾರಣವಾಗಿ ಬಾವಲಿಗಳು ಗುಂಪಾಗಿ ವಾಸಿಸುತ್ತವೆ. ಬಾವಲಿಯ ರಕ್ತ ಬಿಸಿಯಾಗಿರುತ್ತದೆ. ಇವಕ್ಕೆ ಮಾನವನಂತೆ ಒಂದು ಹೆಬ್ಬೆರಳು ಮತ್ತು ನಾಲ್ಕು ತೋರು ಬೆರಳುಗಳಿರುತ್ತವೆ. ಕೈಬೆರಳುಗಳ ಮಧ್ಯೆ ತೆಳುವಾದ ಚರ್ಮದ ಪೊರೆಯಿರುತ್ತದೆ. ಹೀಗಾಗಿ ಬೆರಳುಗಳು ಗೋಚರಿಸುವುದಿಲ್ಲ. ಬೆರಳುಗಳು ದೇಹಕ್ಕಿಂತಲೂ ಬಹಳ ಉದ್ದವಾಗಿರುತ್ತವೆ. 50 ಮಿಲಿಯನ್ ವರ್ಷಗಳ ಹಿಂದೆಯೇ ಬಾವಲಿಗಳು ಬದುಕಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. 
  
  • ರಕ್ತ ಹೀರುವ ಗುಣ.
ಕೆಲವು ಬಾವಲಿಗಳು ರಾತ್ರಿಯ ಊಟಕ್ಕೆ ಹಸು, ಕುದುರೆ ಮುಂತಾದ ಜಾನುವಾರುಗಳ ಮೈಮೇಲೆ ಕುಳಿತು ಅವುಗಳ ರಕ್ತವನ್ನು ಆಹಾರವಾಗಿ ಸೇವಿಸುತ್ತವೆ.  ಹರಿತವಾದ ಉಗುರಿನಿಂದ ಕಚ್ಚಿ ಪ್ರಾಣಿಗಳ ಮೈಯನ್ನು ಗಾಯ ಗೊಳಿಸುತ್ತವೆ. 70 ಪ್ರತಿಶತ  ಬಾವಲಿಗಳು ಮಂಸಾಹಾರಿಯಾಗಿದ್ದು, ಕಪ್ಪೆ, ಮೀನು, ಕೀಟ ಮುಂತಾದ ಸಣ್ಣಪುಟ್ಟ ಪ್ರಾಣಿಗಳನ್ನು ರಾತ್ರಿಯ ಹೊತ್ತಿನಲ್ಲಿ ಬೇಟೆಯಾಡಿ ತಿನ್ನುತ್ತವೆ. ಒಂದು ಬಾವಲಿ ಒಂದು ಗಂಟೆಯಲ್ಲಿ ಒಂದು  ಸಾವಿರ ಕೀಟಗಳನ್ನು ಭೇಟೆಯಾಡಿ ತಿನ್ನಬಲ್ಲದು. ಕೆಲವು ಸಸ್ಯಾಹಾರಿಗಳು ಕೇವಲ ಹಣ್ಣನ್ನು ಮಾತ್ರ ತಿನ್ನುತ್ತವೆ. ಹಣ್ಣುಗಳನ್ನು ತಿಂದ ನಂತರ ಬೀಜವನ್ನು ಬಿಸಾಡುತ್ತದೆ. ಹೀಗಾಗಿ ಮಳೆ ಕಡುಗಳ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ.  

  • ತನ್ನದೇ ಪ್ರತಿಧ್ವನಿಗೆ ಕಿವಿ.
ಬಾವಲಿಗಳಿಗೆ ಹಗಲಿನಲ್ಲಿ ಕಣ್ಣುಕಾಣುವುದಿಲ್ಲ ಎಂದು ಹೆಚ್ಚಿನ ಜನರಲ್ಲಿ ತಪ್ಪು ನಂಬಿಕೆಯಿದೆ. ಬಾವಲಿಗೆ ಹಗಲಿನಲ್ಲೂ ಕಣ್ಣು ಕಾಣುತ್ತದೆ. ಬಾವಲಿಗಳು ರಾತ್ರಿಯ ಹೊತ್ತು ಸಂಚರಿಸುವಾಗ ಕೇವಲ ಇರುಳುಗಣ್ಣಿನ ಮೇಲೆ ಅವಲಂಬಿತವಾಗುವುದಿಲ್ಲ. ಕೀರು ಧ್ವನಿಯನ್ನು ಹೊರಹಾಕಿ, ಅದರಿಂದ ಉಂಟಾಗುವ ಪ್ರತಿಧ್ವನಿ ಗ್ರಹಿಸಿ ವಸ್ತುವಿನ ದೂರವನ್ನು ಪತ್ತೆಹಚ್ಚುವ ಸಾಮರ್ಥ್ಯ  ಹೊಂದಿವೆ. ಪ್ರತಿಧ್ವನಿಯ ಅಂತರವನ್ನು ಊಹಿಸಿ ಬೇಟೆಯಾಡುತ್ತವೆ. ಮೂಗಿನ ಮೂಲಕ ಪ್ರತಿಧ್ವನಿಯಾಗುವ ರೀತಿಯ ವಿಚಿತ್ರವಾದ ಕೀರಲು ದ್ವನಿಯನನ್ನು ಹೊರಹಾಕುತ್ತವೆ. ಕಿವಿಗಳು ಸೂಕ್ಷ ಶಬ್ದಗಳನ್ನು ಗ್ರಹಿಸ ಬಲ್ಲವು.
  • ಕಾಣಲು ಅಪರೂಪ. 
ಪರಿಸರ ಮತ್ತು ಮಾನವ ಸ್ನೇಹಿಯಾದ ಬಾಲಿಗಳು ಅಳಿವಿನ ಅಂಚಿನಲ್ಲಿದ್ದು, ವಾಸಸ್ಥಾನದ ಕೊರತೆ, ಕಡಿಮೆ ಸಂತಾನೋತ್ಪತ್ತಿ, ಖಾಯಿಲೆಗಳಿಂದಾಗಿ  ಬಾವಲಿಯ ಸಂಖ್ಯೆ ದಿನದಿಂದ  ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ಕಾಣಲು ಅಪರೂಪವಾಗುತ್ತಿದೆ .

Sunday, February 5, 2012

ಚಿಟ್ಟೆ .....

  •  ಬಣ್ಣದ ಚಿಟ್ಟೆಯ ಹುಟ್ಟು ಸಾವು....
ಚಿಟ್ಟೆ ತನ್ನ ಬಣ್ಣಗಳಿಂದಲೇ ಹೆಸರುವಾಸಿ. ನಮ್ಮ ಊಹೆಗೂ ನಿಲುಕದಷ್ಟು ಬಣ್ಣಗಳು ಚಿಟ್ಟೆಯ ಮೈಯನ್ನು ಹೊದ್ದುಕೊಂಡಿದೆ.
ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ಗೆ ಸೇರಿದ ಕೀಟ.  ಚಿಟ್ಟೆಗಳಿಗೆ ಹುಟ್ಟುವಾಗಲೇ ರೆಕ್ಕೆಗಳಿರುವುದಿಲ್ಲ. ಚಿಟ್ಟೆಯ ಜೀವನ ಕ್ರಮವೇ ವಿಶೇಷ. ಇದು ನಾಲ್ಕು ರೀತಿಯ ಜೀವನ ಕ್ರಮ ಹೊಂದಿದೆ. ಮೊದಲು ಮೊಟ್ಟೆಯೊಳಗಿನ ಗರ್ಭಾ ವಸ್ಥೆ. ಮೊಟ್ಟೆಯೊಡೆದ ನಂತರದ ಗೂಡುಕಟ್ಟುವ ವರೆಗಿನ ಕೀಟದ ರೂಪ. ಅಂದರೆ ಕಂಬಳಿಹುಳುವಿನ ಆಕಾರದಲ್ಲಿರುತ್ತದೆ. ಇಲ್ಲಿ ನಾಲ್ಕೈದು ವಾರಗಳನ್ನು ಕಳೆದ ನಂತರ ಹುಳುವಿನ ಆಕಾರದಿಂದ ಚಿಟ್ಟೆಯಾಗಿ ಮಾರ್ಪಾಟಾಗುತ್ತದೆ. ಇದನ್ನು ಚಿಟ್ಟೆಗಳ ಯೌವನಾವಸ್ಥೆ ಎನ್ನಬಹದು. ಈ ಸಮಯದಲ್ಲಿ ಚಿಟ್ಟೆ ಹಾರುವ ಶಕ್ತಿ  ಪಡೆದುಕೊಳ್ಳುತ್ತದೆ. ಬಹುತೇಕ ಚಿಟ್ಟೆಗಳು ಕ್ರಿಯಾಶೀಲವಾಗಿರುವುದು ಹಗಲಿನಲ್ಲಿ ಮಾತ್ರ.
 ಚಿಟ್ಟೆಗಳು ಅತೀ ಕಡಿಮೆ ಜೀವಿತಾವದಿ ಹೊಂದಿದೆ. ಕೀಟದ ಸಾಮರ್ಥ್ಯ  ಅವಲಂಬಿಸಿ ಚಿಟ್ಟೆಗಳು ಒಂದು ವಾರದಿಂದ ಒಂದು ವರ್ಷದತನಕವೂ ಬದುಕಬಲ್ಲವವು. ಚಿಟ್ಟೆಗಳು ವರ್ಷದಲ್ಲಿ ಒಂದಕ್ಕಿಂತಲೂ ಹೆಚ್ಚುಬಾರಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳಿಗೆ ವಿಶೆಷ ಕವಚದ ವ್ಯವಸ್ಥೆಯಿರುತ್ತದೆ. ಮೊಟ್ಟೆಗಳು ಚಳಿಗಾಲದಲ್ಲಿ ಮಾತ್ರ  ಉಳಿದು ಕೊಳ್ಳುತ್ತವೆ. ಕವಚ ಮೊಟ್ಟೆಯೊಳಗಿನ ಲಾರ್ವಾವನ್ನು ಉಷ್ಣಾಂಶದಿಂದ ರಕ್ಷಿಸುತ್ತದೆ. ಚಟ್ಟೆಗಳ ಮೊಟ್ಟೆಗಳು ಎಲೆಗಳಿಗೆ ಅಂಟಿಕೊಂಡಿರುತ್ತದೆ.
 
  •  ಬಣ್ಣ ಬಣ್ಣದ ರೆಕ್ಕೆಗಳು.
ಕೀಟದ ಅವಸ್ಥೆ ಮುಗಿದ ನಂತರ ಚಿಟ್ಟೆಗಳಿಗೆ ರೆಕ್ಕೆ ಮೊಳಕೆಯೊಡೆಯುತ್ತದೆ. ಚಿಟ್ಟೆಗಳಿಗೆ ರೆಕ್ಕೆಗಳ ಹಿಂಬಾಗದಲ್ಲಿ ಚಿಕ್ಕದಾದ ಇನ್ನೆರಡು ರೆಕ್ಕೆಗಳಿರುತ್ತದೆ. ಮೈ ಮೇಲೆ ಬಣ್ಣದ ಚಿತ್ರ ಬಿಡಿಸಿದಂತೆ ಕಾಣುವ ರೆಕ್ಕೆಗಳು ಸೂಕ್ಷ ರಚನೆ ಹೊಂದಿರುತ್ತದೆ. ಈ  ಸೂಕ್ಷ ರಚನೆಗಳು ನನಾ ಬಣ್ಣದಲ್ಲಿ, ಆಕಾರಗಳಲ್ಲಿ ಕಂಡುಬರುತ್ತದೆ. ರೆಕ್ಕೆಗಳು 8ರಿಂದ 10 ಸೆಂಟಿಮೀಟರ್ ದೊಡ್ಡದಾಗಿರುತ್ತದೆ. ರೆಕ್ಕೆಗಳನ್ನು ಅರಳಿಸದೇ ಹಾರುವ ಸಾಮಥ್ರ್ಯ ಚಿಟ್ಟೆಗಿಲ್ಲ. ಚಿಟ್ಟೆಗಳು ತಮ್ಮ ದೃಷ್ಟಿ ಸಾಮರ್ಥ್ಯದಿಂದ ನೇರಳಾತೀತ ಕಿರಣಗಳನ್ನೂ ಗುರುತಿಸಬಲ್ಲವು. ಚಿಟ್ಟೆಗಳ ದೇಹವನ್ನು ತಲೆ ಕುತ್ತಿಗೆ, ಮತ್ತು ಹೊಟ್ಟೆ ಹೀಗೆ ಮೂರು ವಿಧವಾಗಿ ವಿಂಗಡಿಸಬಹುದು. ಅಲ್ಲದೇ ಇವು ಎರಡು ಸ್ಪರ್ಶತಂತುಗಳು, ಎರಡು ಉಬ್ಬಿದ ಕಣ್ಣುಗಳನ್ನು ಹೊಂದಿರುತ್ತವೆ.
 
  • ಮಕರಂದ ಹೀರುತ್ತವೆ.
ಚಿಟ್ಟೆಗಳ ಪ್ರಾಥಮಿಕ ಆಹಾರ ಹೂವಿನ ಮಕರಂದ. ಕೆಲವು ಚಿಟ್ಟೆಗಳು ಹೂವಿನ ಪರಾಗವನ್ನೂ ಹೀರುತ್ತವೆ. ಅಲ್ಲದೇ ಸಸ್ಯ ರಸ, ಗಳಿತ ಹಣ್ಣುಗಳು, ಗೊಬ್ಬರ, ಹಳಸಿದ ಮಾಂಸಗಳನ್ನು ಸೇವಿಸುತ್ತದೆ. ಹೂವಿನ ಪರಾಗಕ್ಕಾಗಿ ವಿಶಾಲ ಪ್ರದೇಶವನ್ನು ಕ್ರಮಿಸಬಲ್ಲವು. ಮುಖದ ಮೇಲಿನ ಸ್ಪರ್ಶತಂತುಗಳು ಬಹುದೂರದ ಹೂವಿನ ಸುವಾಸನೆ ಗ್ರಹಿಸಬಲ್ಲವು. ಈ ಸ್ಪರ್ಶತಂತುಗಳು ವಿವಿಧ ಆಕಾರ ದಲ್ಲಿರುತ್ತವೆ. ಚಿಟ್ಟೆಗಳು ಮನುಷ್ಯನಿಗಿಂತ 200 ಪಟ್ಟು ವಾಸನಾ ಸಾಮರ್ಥ್ಯ  ಹೊಂದಿದೆ. ಚಿಟ್ಟೆಗಳ ರಕ್ತ ತಂಪಾಗಿರುತ್ತದೆ. ವತಾವರಣಕ್ಕೆ ತಕ್ಕಂತೆ ದೇಹದ ಉಷ್ಣಾಂಶ ಬದಲಾಗುತ್ತದೆ. ಹೀಗಾಗಿ ಶೀತ ಪ್ರದೇಶಗಳಲ್ಲಿಯೂ ಇವು ಬದುಕಬಲ್ಲವು.

  • ದೂರದ ವಲಸೆ ಹೋಗಬಲ್ಲವು.
 ಕೆಲವು ಚಿಟ್ಟೆಗಳು ವಲಸೆ ಸಾಮಥ್ರ್ಯ ಹೊಂದಿದೆ. ಮೊನಾರ್ಚ ಜಾತಿಯ ಚಿಟ್ಟೆಗಳು ಅತೀ ದೀರ್ಘವಾದ ವಾಷರ್ಿಕ ವಲಸೆಗೆ ಪ್ರಸಿದ್ಧಿ ಪಡೆದಿವೆ. ಉತ್ತರ ಹಾಗೂ ದಕ್ಷಿಣಾಭಿಮುಖವಾಗಿ ನಿಯಮಿತವಾಗಿ ಸಾವಿರಾರು ಮೈಲಿ ವಲಸೆ ಕೈಗೊಳ್ಳೂವ ಏಕೈಕಜಾತಿಯ ಚಿಟ್ಟೆಯಾಗಿದೆ. ಕಡಿಮೆ ಜೀವಿತಾವಧಿಯ ಕಾರಣ ಒಂದೇ ಚಿಟ್ಟೆ ಪೂರ್ಣ ವಲಸೆ ಹಾದಿಯನ್ನು ಪೂರೈಸಲಾರದು. ಹೆಣ್ಣು ಚಿಟ್ಟೆಗಳು ಈ ವಲಸೆಯ ಅವಧಿಯಲ್ಲಿಯೇ ಮೊಟ್ಟೆಯಿಡುತ್ತದೆ. ಒಮ್ಮ ವಲಸೆ ಕೈಗೊಂಡರೆ 3-4ನೇ ಪೀಳಿಗೆಯ ಚಿಟ್ಟೆಗಳು ತಮ್ಮ ಮೂಲ ಆವಾಸಕ್ಕೆ ಮರಳುತ್ತವೆ.
 

ಅಣಬೆ..

ಅರಳಿ ಮರೆಯಾಗುವ ಬಣ್ಣದ ಕೊಡೆಗಳು

ಅರಣ್ಯದ ಮಧ್ಯೆ ಚಿಕ್ಕದಾದ ಬಣ್ಣದ ಕೊಡೆ ಅರಳೀಸಿದಂತೆ ಕಾಣುವ ಅಣಬೆಗಳು ಶಿಲೀಂಧ್ರ ಜಾತಿಗೆ ಸೇರಿವೆ. ಇವು ಸಸ್ಯ, ಪ್ರಾಣಿ, ಬ್ಯಾಕ್ಟೀರಿಯಾಗಳಿಂದ ಭಿನ್ನವಾಗಿರುತ್ತವೆ. ಜಗತ್ತಿನಾದ್ಯಂತ ಹೇರಳವಾಗಿರುವ ಶಿಲೀಂಧ್ರಗಳು ರಹಸ್ಯ ಜೀವನ ಶೈಲಿಯಿಂದಾಗಿ ಬರಿಗಣ್ಣಿಗೆ ಗೋಚರಿಸದೇ ನಿರ್ಜೀವ ವಸ್ತುಗಳು, ಪ್ರಾಣಿ, ಸಸ್ಯಗಳಲ್ಲಿ ಅಡಗಿರುತ್ತದೆ. ಮೊಳಕೆಯೊಡೆಯುವ ಸಮಯದಲ್ಲಿ ಅಣಬೆಗಳಾಗಿ ( ಮಶ್ರೂಮ್ ) ರೂಪಾಂತರ ಹೊಂದುತ್ತದೆ. ಭೂಮಿಯ ಮೇಲೆ ಸಸ್ಯಗಳು ಹುಟ್ಟುವ ಮೊದಲೆ ಶಿಲೀಂಧ್ರಗಳು ವಾಸವಾಗಿವೆ. ಅಲ್ಲದೇ ದೀರ್ಘಕಾಲ ದಿಂದಲೂ ನೇರವಾದ ಆಹಾರದ ಮೂಲವಾಗಿ ಬಳಕೆಯಲ್ಲಿವೆ.

ಗುರುತಿಸುವುದು ಹೇಗೆ ?

ಅಣಬೆಗಳು ಬರಿಗಣ್ಣಿಗೆ ಕಾಣುವ ರೀತಿಯ ಸ್ಥೂಲ ರಚನೆ ಹೊಂದಿರುತ್ತವೆ. ಇದರ ಮೈಮೇಲೆ ಚೆಲ್ಲಿಕೊಂಡಿರುವ, ಕೈಗೆ ಅಂಟುವ ಪುಡಿಗಳು ಅಣಬೆಯನ್ನು ಗುತಿಸಲು ಸಹಾಯಕ. ಇವು ಕಪ್ಪು, ಕಂದು, ಹಳದಿ, ನಸುಗೆಂಪು ಹೀಗೆ ನಾನಾ ಬಣ್ಣದಲ್ಲಿ ಕಂಡುಬರುತ್ತವೆ. ಎಲ್ಲಾ ಅಣಬೆಯಲ್ಲಿಯೂ ಬಿಳಿ ಬಣ್ಣ ಸಾಮಾನ್ಯ. ಆದರೆ ಎಲ್ಲಿಯೂ ಕೆಂಪು, ನೀಲಿ ಅಥವಾ ಹಸಿರು ಬಣ್ಣದಲ್ಲಿ ಇವು ಗೋಚರಿಸುವುದಿಲ್ಲ. ಮೃದುವಾದ ಸುಲಭವಾಗಿ ತುಂಡಾಗುವ ಇದರ ಕೋಶಗಳು ತೀರಾ ಹಗುರವಾಗಿರುತ್ತದೆ.

ಇದರ ಗುಣಲಕ್ಷಣಗಳೆನು ?
  •  ಹಲವಾರು ಸಸ್ಯ, ಪ್ರಾಣಿ ಮತ್ತು ಇತರ ಶಿಲೀಂಧ್ರಗಳ ಮೆಲೆ ಅವಲಂಬಿತವಾಗಿರುವ ಪರಾವಲಂಬಿಗಳಗಿವೆ.  
  • ಸಕ್ಕೆರೆ, ಆಲ್ಕೊಹಾಲ್, ಡೈಸಕರೈಡ್, ಪಾಲಿಸಕರೈಡ್ ಮುಂತಾದ ನೀರಿನಲ್ಲಿ ಕರಗಬಲ್ಲ ಕಾಬೋಹೈಡ್ರೇಡ್ ಹೊಂದಿದೆ.
  • ಕ್ಲೋರೋಪ್ಲಾಸ್ಟಗಳ ಕೊರತೆ ಹೊಂದಿರುತ್ತವೆ ಮತ್ತು ಕರ್ಯನಿರ್ವಹಿಸಲ್ಪಟ್ಟ ಜೀವಿಗಳ ಮಿಶ್ರಣವನ್ನು ಶಕ್ತಿಮೂಲವಾಗಿ ಬಳಸಿಕೊಳ್ಳುತ್ತದೆ.
  • ಇವು ಲೈಂಗಿಕ ಮತ್ತು ಅಲೈಂಗಿಕ ಎರಡೂ ವಿಧಾನದಿಂದ ಸಂತಾನೋತ್ಪತ್ತಿ ಮಾಡುತ್ತವೆ.
  •  ಕೆಲವು ಶಿಲೀಧ್ರಗಳು ತದ್ರೂಪಿ ವಿದಳನದ ಮೂಲಕ ಪುನರುತ್ಪತ್ತಿಯಾಗುವ ಏಕಕೋಶೀಯ ಯೀಷ್ಟಗಳ ರೂಪದಲ್ಲಿರುತ್ತವೆ.
ಪೌಷ್ಟಿಕ ಆಹಾರ : ಅಣಬೆಗಳು ಹೇರವಾದ ಬಿ. ವಿಟಾಮಿನ್ ಹೊಂದಿರುತ್ತದೆ. ಇದು ಕಡಿಮೆ ಕ್ಯಾಲರಿ ಇರುವ ಆಹಾರವಾಗಿದ್ದು, ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ಇದನ್ನು ಸಸ್ಯ ಲೋಕದ ಮಾಂಸ ಎಂದು ಪರಿಗಣಿಸಲಾಗುತ್ತದೆ. ಅಣಬೆ ತಯಾರಿಕೆ ಹಾಗೂ ಸಂಗ್ರಹಣೆ ಹಲವು ದೇಶಗಳಲ್ಲಿ ಉದ್ಯಮವಾಗಿದೆ. ಜಗತ್ತಿನಲ್ಲಿ ಚೀನಾ ಅತೀಹೆಚ್ಚು ಅಣಬೆ ಉತ್ಪಾದಿಸುವ ದೇಶವಾಗಿದೆ. ಇತ್ತೀಚಿನ ದಿಗಳಲ್ಲಿ ಅಣಬೆಗೆ ಭಾರೀ ಬೇಡಿಕೆ ಬಂದಿರುವುದರಿಂದ ವ್ಯಪಾರಿ ಉದ್ದೇಶಕ್ಕಾಗಿ ಇದನ್ನು ಕೃತಕವಾಗಿ  ಬೆಳೆಸಲಾಗುತ್ತಿದೆ. ಕೆಲವು ಕೀಟಗಳು ಸಹ ಶಿಲೀಂಧ್ರಗಳ ಜತೆ ಪರಸ್ಪರ ಸಂಬಂಧ ಹೊಂದಿವೆ. ಇರುವೆಗಳ ಹಲವಾರು ಗುಂಪುಗಳು ತಮ್ಮ ಪಾಥಮಿಕ ಆಹಾರದ ಮೂಲವಾಗಿ ಶಿಲೀಂಧ್ರಗಳನ್ನು ವಿಕಾಸಗೊಳಿಸುತ್ತವೆ. ಕೆಲವು ಜಾತಿಯ ಅಣಬೆಗಳು ಮಾನವನಲ್ಲಿ ಅಪಾಯಕಾರಿ ರೋಗಗಳನ್ನು ಉಂಟುಮಾಡ ಬಲ್ಲವು.  ಇವುಗಳಲ್ಲಿ ಕೆಲವು ರೋಗಗಳಿಗೆ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗುವ ಅಪಾಯವಿದೆ.

ವೈವಿಧ್ಯತೆ : ಶಿಲೀಂದ್ರ ಸಸ್ಯಗಳು ಎಂತಹ ವಿಪರೀತ ಸನ್ನಿವೇಶದಲ್ಲೂ  ಬೆಳೆಯಬಲ್ಲವು . ವ್ಯತಿರಿಕ್ತ ವಾತಾವರಣಗಳಾದ ಮರುಭೂಮಿ, ವಿಕಿರಣ ಪ್ರದೇಶ, ಆಳ ಸಮುದ್ರಗಳಲ್ಲಿಯೂ ತಲೆ ಎತ್ತಬಲ್ಲವು. ಸುಮಾರು ಒಂದು ಲಕ್ಷಜಾತಿಯ ಶಿಲೀಂಧ್ರಗಳ ವರ್ಗೀಕರಣ  ಮಾಡಲಾಗಿದೆ.

ಹುಟ್ಟಿದ ದಿನವೇ ಸಾವು.

ಬಹುತೇಕ ಅಣಬೆಗಳು ರಾತ್ರೋರಾತ್ರಿ ಸುರಿಯುವ ಮಳೆಗೆ ಜನ್ಮತಾಳಿ ಮರುದಿನ ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದಂತೆ ನಮ್ಮಿಂದ ಕಣ್ಮರೆಯಾಗುತ್ತವೆ. ಅಣಬೆ ಒಂದೇ ದಿನದಲ್ಲಿ ಮರೆಯಾದರೂ ಅದರ ಸಂತತಿ ಮಾತ್ರ ಬಹುದಿನಗಳವರೆಗೆ ಅಲ್ಲಿಯೇ ಇರುತ್ತದೆ. ಮುಂದಿನ  ವರ್ಷ ಮತ್ತೆ ಮಳೆ ಸುರಿದಾಗ ದಿಢೀರ್ ಪ್ರತ್ಯಕ್ಷವಾಗುತ್ತದೆ. ಶಿಲೀಧ್ರಗಳು ಸತ್ತ ಮರಗಳು, ವಸ್ತುಗಳಲ್ಲಿ ಕಣ್ಣಿಗೆ ಕಾಣದಂತೆ ಅಡಗಿಕೊಂಡಿರುತ್ತದೆ. ಇವುಗಳ ಇರುವಿಕೆ ಗೋಚರಿಸುವುದು ಇವು ಅರಳಿ ನಿಂತಾಗಲೆ.