ಜೀವನಯಾನ

Wednesday, April 22, 2015

ಪುಕ್ತಲ್ ಗೊಂಪಾ

ಬೆಟ್ಟದ ಕಣಿವೆಯಲ್ಲಿ ಸನ್ಯಾಸಿಗಳ ಮನೆಗಳು

ಸನ್ಯಾಸಿಗಳು ಅಧ್ಯಾತ್ಮ ಚಿಂತನೆಗೆ ಹಿಮಾಲಯದ ಗುಹೆಗಳಲ್ಲಿ ಕುಳಿತು ತಪಸ್ಸು ಮಾಡುತ್ತಾರೆ ಎನ್ನುವುದನ್ನು ಕೇಳಿದ್ದೇವೆ. ಅದೇರೀತಿ ಬೆಟ್ಟದ ಕಣಿವೆಯ ಕಡಿದಾದ ಜಾಗದಲ್ಲಿ ಸಮುದಾಯ ಗೃಹಗಳನ್ನು ಬೌದ್ಧ ಸನ್ಯಾಸಿಗಳು ನಿರ್ಮಿಸಿಕೊಂಡಿದ್ದಾರೆ. ಇದನ್ನು ತಲುಪವುದು ಒಂದು ಸಾಹಸದ ಕೆಲಸವೇ ಸರಿ. ಹಿಮಾಲಯದ ಲಡಾಖ್ನ ಝನ್ಸಕರ್ ಕಣಿವೆಯಲ್ಲಿರುವ ಈ ದುರ್ಗಮ ಗುಹೆಗಳೇ ಪುಕ್ತಲ್ ಗೊಂಪಾ. ಇಲ್ಲಿನ ನೈಸರ್ಗಿಕ ಗುಹೆಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ


 2550 ವರ್ಷಗಳ ಹಿಂದೆಯೇ ಇಲ್ಲಿಗೆ ಋಷಿಮುನಿಗಳು ಭೇಟಿನೀಡಿದ್ದರು ಎಂಬ ನಂಬಿಕೆ ಇದೆ. ಗಂಗ್ಸೆಂ ಲಾಮಾ ಎಂಬ ಬೌದ್ಧ ಧರ್ಮಗುರು 12ನೇ ಶತಮಾನದಲ್ಲಿ ಪುಕ್ತಲ್ ಗೊಂಪಾ ಸಮುದಾಯ ಗೃಹಗಳನ್ನು ನಿರ್ಮಿಸಿದ.
ಗೌತಮ ಬುದ್ಧನ 16ನೇ ಅನುಯಾಯಿ ಇಲ್ಲಿನ ಪುಕ್ತಲ್ ಗುಹೆಗಳಲ್ಲಿ  ವಾಸಿಸಿದ ಅತಿ ಹಳೆಯ ವ್ಯಕ್ತಿ. ಆತನ ಭಾವಚಿತ್ರಗಳು ಗುಹೆಯ ಗೋಡೆಗಳ ಮೇಲೆ ಇಂದಿಗೂ ಕಾಣಬಹುದಾಗಿದೆ. ಇವುಳನ್ನು ಮನೆ ಎಂದು ಕರೆಯುವುದಕ್ಕಿಂತ ಮಠಗಳೆಂದು ಕರೆಯುವುದೇ ಹೆಚ್ಚು ಸೂಕ್ತ. ಇಲ್ಲಿ ಬೌದ್ಧ ಸನ್ಯಾಸಿಗಳೇ ವಾಸಿಸುತ್ತಾರೆ. ಇಲ್ಲಿ ಸನ್ಯಾಸಿಗಳ 70 ಮಠಗಳಿವೆ. ಜತಗೆ 4 ಪ್ರಾರ್ಥನಾ ಕೊಠಡಿ ಮತ್ತು ಒಂದು ಗ್ರಂಥಾಲಯವೂ ಇದೆ. ಇವುಗಳನ್ನು ಮಣ್ಣು ಮತ್ತು ಕಟ್ಟಿಗೆಯಿಂದ ನಿಮರ್ಿಸಲಾಗಿದೆ.
ಪುಕ್ತಲ್ ಎನ್ನುವ ಪದಕ್ಕೆ ಗುಹೆಗಳ ಮೂಲಕ ಎನ್ನವ ಅರ್ಥವಿದೆ. ಎರಡು ಅಂತಸ್ತಿನ ಮನೆಗಳನ್ನು ಇಲ್ಲಿ ಕಾಣಬಹುದು. ಮನೆಗಳಿಗೆ ಲಡಾಕ್ನ ಸಂಪ್ರದಾಯಿಕ ಬಣ್ಣವಾದ ಕಪ್ಪು, ಕೆಂಪು ಮತ್ತು ಹಳದಿ ಬಣ್ಣಗಳನ್ನು ಬಳಿಯಲಾಗಿದೆ. ಇಲ್ಲಿ ಮೂರು ದೊಡ್ಡದಾದ ಮತ್ತು ಒಂದು ಸಣ್ಣದಾದ ಪ್ರಾರ್ಥನಾ ಮಂದಿರವಿದೆ. ಮನೆಯ ಗೋಡೆಗಳಿಗೆ ಟೊಳ್ಳಾದ ಕಲ್ಲುಗಳನ್ನು ಬಳಸಲಾಗಿದೆ.
ಪ್ರವಾಸಿ ತಾಣ:
ಟಿಬೇಟಿಯನ್ ಬೌದ್ಧ ಸನ್ಯಾಸಿಗಳಿಗೆ ಪುಕ್ತಲ್ ಗೊಂಪಾ ಪವಿತ್ರವಾದ ಪ್ರವಾಸಿ ಸ್ಥಳವಾಗಿದೆ. 3850 ಮೀಟರ್ಗಳಷ್ಟು ಎತ್ತರದಲ್ಲಿರುವ ಈ ಸ್ಥಳವನ್ನು ಈಗಲೂ ಕಾಲ್ನಡಿಗೆಯಲ್ಲೇ ಸಾಗಬೇಕು. ಕಾರ್ಗಿಲ್ ಮೂಲಕವೂ ಇಲ್ಲಿಗೆ ತಲುಪಬಹುದು. ದುರ್ಗಮವಾದ ಪುನರ್ೆ ಸೇತುವೆಯ ಮೂಲಕ 7 ಕಿ.ಮೀ. ಚಾರಣ ಮಾಡಿದರೆ ಪುಕ್ತಲ್ ಗುಹೆಗಳನ್ನು ತಲುಪಬಹುದು. ಇಲ್ಲಿಗೆ ತಲುಪಲು ಶಾಶ್ವತ ರಸ್ತೆಯೊಂದನ್ನು ನಿಮರ್ಿಸುವ ಕಾರ್ಯ ನಡೆಯುತ್ತಿದೆ.
ಬೆಟ್ಟದ ಕಡಿದಾದ ಕಣಿವೆಯಲ್ಲಿ ಕಟ್ಟಿರುವ ಈ ಮನೆಗಳು ದೂರದಿಂದ ನೋಡುವವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ವರ್ಷಕ್ಕೊಮ್ಮೆ ಉತ್ಸವ: 
ಟಿಬೇಟಿಯನ್  ಕ್ಯಾಲೆಂಡರನ 12ನೇ ತಿಂಗಳ 18 ಮತ್ತು 19ನೇ ದಿನದಂದು ಬೌದ್ಧ ಸನ್ಯಾಸಿಗಳು ಇಲ್ಲಿ ಗುಸ್ಟೋರ್ ಉತ್ಸವವನ್ನು ಅಚರಿಸುತ್ತಾರೆ. ಅಂದು ಸನ್ಯಾಸಿಗಳೆಲ್ಲರೂ ಸೇರಿ ಸಾಂಪ್ರದಾಯಿಕ ಪೂಜೆ ಮತ್ತು ನೃತ್ಯವನ್ನು ನಡೆಸುತ್ತಾರೆ.

No comments:

Post a Comment