ಏಸುಕ್ರಿಸ್ತನ ಈ ಪ್ರತಿಮೆ ಬ್ರೆಜಿಲ್ ಜನರ ಕ್ರಿಶ್ಚಿಯನ್ ಧರ್ಮದ ಸಂಕೇತ. ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಬ್ರೆಜಿಲ್ನ ರಿಯೊ ಡಿ ಜನೇರಿಯೋದಲ್ಲಿರುವ ಕೊರ್ಕೊವಾಡೊ ಪರ್ವತದ ಮೇಲೆ ನಿಮರ್ಮಾಣಗೊಂಡಿದೆ. ರಿಡೀಮರ್ ಅಂದರೆ ವಿಮೋಚನೆ ನೀಡುವವನು ಎಂದು ಅರ್ಥ. ವಿಶಾಲವಾದ ತೋಳುಗಳನ್ನು ಅಗಲಿಸಿ ನಿಂತಿರುವ ಈ ಪ್ರತಿಮೆ ಎಲ್ಲರನ್ನೂ ಪ್ರೀತಿಸುವ, ಎಲ್ಲವನ್ನೂ ಸ್ವೀಕರಿಸುವ, ತನ್ನ ಬಳಿ ಬಂದವರನ್ನು ಅಪ್ಪಿಕೊಳ್ಳುವ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಕ್ರಿಶ್ಚಿಯನ್ ಧರ್ಮದ ಕ್ರಾಸ್ ಚಿಹ್ನೆಯಂತೆಯೂ ಇದನ್ನು ಗುರುತಿಸಬಹುದು. ಜಗತ್ತಿನ ಶಾಂತಿಯ ದ್ಯೋತಕವೂ ಹೌದು. ಇದು ಬ್ರೆಜಿಲಿಯನ್ ಜನರ ಪ್ರೀತಿಯ ಲಾಂಛನ. ಕ್ರಿಸ್ಟ್ ದಿ ರಿಡೀಮರ್ ಏಸುವಿನ 5ನೇ ಅತಿದೊಡ್ಡ ಪ್ರತಿಮೆ.
ಪ್ರತಿಮೆ ನಿಮರ್ಮಿಸಿದ್ದು ಏಕೆ?
1850ರಲ್ಲಿ ಬ್ರೆಜಿಲಿಯನ್ನರು ತಮ್ಮದೇ ಆದ ಧಾರ್ಮಿಕ ಪ್ರತಿಮೆಯನ್ನು ರಿಯೊ ಡಿ ಜನೇರಿಯೋದಲ್ಲಿ ಸ್ಥಾಪಿಸುವ ಬಯಕೆಹೊಂದಿದ್ದರು. ಫ್ರಾನ್ಸ್ ಸಂತನೊಬ್ಬ ಏಸುವಿನ ಪ್ರತಿಮೆ ನಿರ್ಮಿಸುವ ಕುರಿತು ಸಲಹೆ ನೀಡಿದ್ದ. ಆದರೆ, ಇದಕ್ಕೆ ಅನುಮತಿ ದೊರೆಯಲಿಲ್ಲ. 60 ವರ್ಷದ ಬಳಿಕ, 1910ರಲ್ಲಿ ನಡೆದ ಆರ್ಚ್ ಬಿಷಪ್ಪರ ಸಭೆಯಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಲಾಯಿತು. ಧಾಮರ್ಿಕ ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯರಿಂದ ಅಪಾರ ಪ್ರಮಾಣದ ಹಣ ಸಂಗ್ರಹಣೆ ಮಾಡಲಾಯಿತು. ಸುದೀರ್ಘ ಚಿಂತನೆಯ ಬಳಿಕ, ಏಸುವಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಯಿತು. ಬ್ರೆಜಿಲ್ ಸ್ವಾತಂತ್ರ್ಯಗಳಿಸಿದ ದಿನವಾದ ಏ.22, 1922ರರಲ್ಲಿ ಪ್ರತಿಮೆ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು. 9 ವರ್ಷದ ಬಳಿಕ ಪ್ರತಿಮೆ ನಿಮರ್ಮಾಣ ಪೂರ್ಣಗೊಂಡಿತು.
ಕ್ರಿಸ್ಟ್ ದಿ ರಿಡೀಮರ್ ವಿಶೇಷತೆ:
.jpg)
ಪುನರುತ್ಥಾನ:
ಪ್ರಖರವಾದ ಬೆಳಕನ್ನು ಹಾಯಿಸಿದ್ದರಿಂದ ಪ್ರತಿಮೆಗೆ ಹಾನಿ ಸಂಭವಿಸಿತ್ತು. ಬಳಿಕ 2008ರಲ್ಲಿ ಪ್ರತಿಮೆಯ ಪುನರುತ್ಥಾನ ಮಾಡಲಾಗಿದೆ. ಪ್ರತಿಮೆಗೆ ಬಳಸಲಾದ ಕಲ್ಲನ್ನು ಸ್ವೀಡನ್ನಿಂದ ತರಲಾಗಿದ್ದು, ಪ್ರತಿಮೆಯ ಪುನರುತ್ಥಾನಕ್ಕೂ ಅದೇ ಮೂಲ ಶಿಲೆಗಳನ್ನೇ ಬಳಸಲಾಗಿದೆ. ಏಸುವಿನ ಬಲಗೈ ದಕ್ಷಿಣ ರಿಯೋ ಡಿ ಜನೇರಿಯೋ ಪಟ್ಟಣವನ್ನು ಮತ್ತು ಎಡಗೈ ಉತ್ತರ ರೊಯೋ ಡಿ ಜನೇರಿಯೋ ಪಟ್ಟಣವನ್ನು ತೋರಿಸುತ್ತದೆ.
No comments:
Post a Comment