ಸೌಂದರ್ಯಕ್ಕೆ ಇನ್ನೊಂದು ಹೆಸರು ನಂದನವನದ ಪಕ್ಷಿಗಳು. ಇತರ ಎಲ್ಲ ಹಕ್ಕಿಗಿಂತ ಸುಂದರ ಎಂಬ ಖ್ಯಾತಿಗಳಿಸಿವೆ. ಹೀಗಾಗಿ ಇದನ್ನು ಬರ್ಡ್ಸ್ ಆಫ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ. ಇವು ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದ ಪಕ್ಷಿಗಳಾಗಿವೆ. ಗಂಡು ಹಕ್ಕಿಗಳು ಬಣ್ಣ ಬಣ್ಣದ ಗರಿಗಳ ಜೋಡಣೆ ಮತ್ತು ಪುಕ್ಕಗಳ ಗುಚ್ಛಕ್ಕೆ ಹೆಸರುವಾಸಿ.
ನಸುಗೆಂಪು, ಹಳದಿ, ಬಿಳಿ, ಹಸಿರು, ನೀಲಿ ಬಣ್ಣದ ಗರಿಗಳಿಂದ ಕಂಗೊಳಿಸುತ್ತವೆ. ಗಂಡು ಹಕ್ಕಿಯ ಬಾಲದಲ್ಲಿ
ಪತಾಕೆಯಂತಹ ಉದ್ದನೆಯ ಗರಿಗಳಿರುತ್ತವೆ. ಕೆಲವು ಹಕ್ಕಿಗೆ ತಲೆಯ ಮೇಲೂ ಉದ್ದನೆಯ ಜುಟ್ಟು ಇರುತ್ತದೆ. ಆದರೆ, ಹೆಣ್ಣು ಹಕ್ಕಿಗಳ ತಲೆ ಬೋಳಾಗಿದ್ದು, ಆಕರ್ಷಣೀಯವಲ್ಲದ ಬಣ್ಣ ಹೊಂದಿರುತ್ತವೆ.
ಬರ್ಡ್ಸ್ ಆಫ್ ಪ್ಯಾರಡೈಸ್ಗಳಲ್ಲಿ ಹೆಣ್ಣಿಗಿಂತ ಗಂಡೇ ಸುಂದರ!
ಬರ್ಡ್ಸ್ ಆಫ್ ಪ್ಯಾರಡೈಸ್ಗಳಲ್ಲಿ ಹೆಣ್ಣಿಗಿಂತ ಗಂಡೇ ಸುಂದರ!
ಹೆಸರು ಬಂದಿದ್ದು ಹೇಗೆ?
16ನೇ ಶತಮಾನದಲ್ಲಿ ಈ ಹಕ್ಕಿಯನ್ನು ವಿಕ್ಟೋರಿಯಾ ಹಡಗಿನ ಮೂಲಕ ಯೂರೋಪಿಗೆ ತರಲಾಯಿತು. ಈ ಹಕ್ಕಿಯ ಸೌಂದರ್ಯ ಮತ್ತು ಆಕರ್ಷಕ ಬಣ್ಣಕ್ಕೆ ಮರುಳಾದ ಅಲ್ಲಿನ ಜನರು ಈ ಹಕ್ಕಿಗೆ ಬರ್ಡ್ಸ್ ಆಫ್ ಪ್ಯಾರಡೈಸ್ ಎನ್ನುವ ಹೆಸರನ್ನಿಟ್ಟರು.
ಮಳೆ ಕಾಡುಗಳಲ್ಲಿ ವಾಸ:
ಪ್ಯಾರಡೈಸ್ ಸಮೂಹದಲ್ಲಿ ಸುಮಾರು 42 ಪ್ರಭೇದಗಳಿವೆ. ನ್ಯೂಗಿನಿವೊಂದರಲ್ಲಿಯೇ 35 ಪ್ರಭೇದಗಳು ಕಾಣಸಿಗುತ್ತವೆ. ಉಳಿದವು ಪೂರ್ವ ಇಂಡೋನೇಷ್ಯಾ, ಟೋರೆನ್ ಜಲಸಂಧಿಯ ದ್ವೀಪಗಳು, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾದ ವಾಯವ್ಯ ಭಾಗದಲ್ಲಿ ಕಂಡುಬರುತ್ತವೆ. ಇವು 15 ಸೆ.ಮೀಟರ್ನಿಂದ ಒಂದು ಮೀಟರ್ವರೆಗೆ ಉದ್ದವಿರುತ್ತವೆ. ಉಷ್ಣವಲಯದ ಮಳೆ ಕಾಡು ಮತ್ತು ಮಲೆನಾಡಿನ ಗುಡ್ಡಬೆಟ್ಟಗಳಲ್ಲಿ ಮಾತ್ರ ಇವು ಕಾಣಸಿಗುತ್ತವೆ. ಹಣ್ಣನ್ನು ತಿನ್ನಲು ಹೆಚ್ಚು ಇಷ್ಟಪಡುತ್ತವೆ.
ಬಣ್ಣದ ಗರಿಗೆ ಭಾರೀ ಬೇಡಿಕೆ:
ನ್ಯೂಗಿನಿ ನಿವಾಸಿಗಳ ಸಾಂಸ್ಕೃತಿಕ ಬದುಕಿನಲ್ಲಿಯೂ ಈ ಹಕ್ಕಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಕಳೆದ 2000 ವರ್ಷಗಳಿಂದ ಪ್ಯಾರಡೈಸ್ ಹಕ್ಕಿಯ ಚರ್ಮ ಮತ್ತು ಗರಿಗಳ ಮಾರಾಟ ನಡೆಯುತ್ತಿದೆ. ಪ್ಯಾರಡೈಸ್ ಹಕ್ಕಿಯ ಸೊಗಸಾದ ಬಣ್ಣದ ಗರಿಗಳನ್ನು ಬಟ್ಟೆ ಮತ್ತು ವೇಷಭೂಷಣಗಳನ್ನು ತಯಾರಿಸಲು ಬಳಸುತ್ತಾರೆ. ಹೀಗಾಗಿ ಈ ಹಕ್ಕಿಗಳಿಗೆ ಭಾರಿ ಬೆಲೆ.
ಹೆಣ್ಣನ್ನು ಆಕರ್ಷಿಸಲು ನೃತ್ಯ:

ಅಳಿವಿನ ಅಂಚಿನಲ್ಲಿವೆ:
ಬರ್ಡ್ಸ್ ಆಫ್ ಪ್ಯಾರಡೈಸ್ಗೆ ನೈಸರ್ಗಿಕವಾಗಿ ಹೆಚ್ಚಿನ ವೈರಿಗಳಿಲ್ಲ. ಆದರೆ, ಮಾನವರ ನಿರಂತರ ಬೇಟೆ ಮತ್ತು ಅರಣ್ಯ ನಾಶದಿಂದ ಇವು ಕಂಗೆಟ್ಟಿವೆ. ಅತ್ಯಾಕರ್ಷಕ ಗರಿಗಳಿಂದ ಕೂಡಿದ ನಂದನವನದ ಪಕ್ಷಿಗಳ ಹಲವು ಪ್ರಭೇದಗಳು ಇಂದು ಅಳಿವಿನ ಅಂಚಿನಲ್ಲಿವೆ.
No comments:
Post a Comment