ಜೀವನಯಾನ

Saturday, November 12, 2016

ಯೇತಿ ಎಂಬ ಹಿಮಮಾನವ!?

ಮಂಗನಿಂದ ಮಾನವ ರೂಪಗೊಂಡ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಅದೇರೀತಿ ಹಿಮಾಲಯದಲ್ಲಿ ಮನುಷ್ಯನ ರೀತಿಯಲ್ಲೇ ಇರುವ ಮಂಗಮಾನವ ಅಥವಾ ಹಿಮಮಾನವರು ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ. ಅಪರೂಪಕ್ಕೊಮ್ಮೆ ಹಿಮ ಮಾನವ ಕಾಣಿಸಿಕೊಂಡ ಸುದ್ದಿ ಹರಿದಾಡುತ್ತಿರುತ್ತದೆ. ಕ್ರಿ.ಶ.ಪೂರ್ವ 3ನೇ ಶತಮಾನದಿಂದ ಇಂದಿನವರೆಗೂ ದೈತ್ಯ ಹಿಮ ಮಾನವನ ಹುಡುಕಾಟ ನಡೆಯುತ್ತಲೇ ಇದೆ.

 ಯೇತಿ ಅಥವಾ ತುಂಬು ಕೂದಲಿನ ಹಿಮಮಾನವ ಆದಿವಾಸಿ ಪ್ರಾಣಿ ನೇಪಾಳ ಮತ್ತು ಟಿಬೆಟಿನ ಹಿಮಾಲಯ ಪರ್ವತ ಪ್ರದೇಶದಲ್ಲಿ ನೆಲೆಸಿತ್ತು ಎಂದು ಹೇಳಲಾಗಿದೆ. ಮಂಗಮಾನವ ಸ್ವರೂಪ ಹೊಂದಿರುವ ಈ ಪ್ರಾಣಿಯು ಇತಿಹಾಸ ಮತ್ತು ಕಾಲ್ಪನಿಕ ಕತೆಗಳ ಭಾಗವಾಗಿದೆ. ಸ್ಥಳೀಯ ಜನರು ಈ ಪ್ರಾಣಿಯನ್ನು ಯೇತಿ ಮತ್ತು ಮೆಹ್- ತೆಕ್ ಎಂಬ ಹೆಸರಿನಿಂದ ಕರೆಯುತ್ತಾರೆ.  ಆದರೆ, ಇದುವರೆಗೂ ಹಿಮ ಮಾನವನ ಅಸ್ತಿತ್ವದ ಬಗ್ಗೆ ನಿಖರವಾದ ಆಧಾರಗಳು ಲಭಿಸಿಲ್ಲ. ಹೀಗಾಗಿ ಇತಿಹಾಸ ಮತ್ತು ಕಾಲ್ಪನಿಕ ದಂತಕಥೆಯಾಗಿಯೇ ಉಳಿದುಕೊಂಡಿದೆ. ಈ ಕುರಿತಾದ ದಂತೆ ಕಥೆಯೊಂದು ಹೀಗೆ ಹೇಳುತ್ತದೆ...
ಯೇತಿ ಅಥವಾ ಹಿಮ ಮಾನವನ ಹುಡುಕಾಟ ಅಲೆಕ್ಸಾಂಡರ್ ಚಕ್ರವರ್ತಿಯ ಕಾಲದಿಂದಲೇ ಆರಂಭವಾಗಿತ್ತಂತೆ. ಸಿಂಧು ಕಣಿವೆಯನ್ನು ಗೆದ್ದುಕೊಳ್ಳುವ ಸಲುವಾಗಿ ಕ್ರಿ.ಶ.ಪೂರ್ವ 326ರಲ್ಲಿ ಅಲೆಕ್ಸಾಂಡರ್ ಭಾರತದ ಮೇಲೆ ದಂಡಯಾತ್ರೆ ಕೈಗೊಂಡಿದ್ದ. ದೈತ್ಯ ಯೇತಿಯ ಬಗ್ಗೆ ಕೇಳಿದ್ದ ಅಲೆಕ್ಸಾಂಡರ್ ತನಗೊಂದು ಯೇತಿಯನ್ನು ನೀಡುವಂತೆ ಸ್ಥಳೀಯರನ್ನು ಕೇಳಿದ್ದನಂತೆ. ಆದರೆ, ಎತ್ತರದ ಹಿಮ ಪರ್ವತದಲ್ಲಿ ವಾಸಿಸುವ ಅವುಗಳನ್ನು ಕೆಳ ಪ್ರದೇಶಕ್ಕೆ ತಂದರೆ ಸುತ್ತು ಹೋಗುತ್ತವೆ. ಹೀಗಾಗಿ ಯೇತಿಯನ್ನು ತಂದುಕೊಡಲು ಸಾಧ್ಯವಿಲ್ಲ ಎಂದು ಜನರು ಹೇಳಿದ್ದರಂತೆ. 
ಯೇತಿಗಳಿಗೆ ಹಿಮ ಮಾನವ ಎಂಬ ಹೆಸರು ಬಂದಿದ್ದು 1921ರಲ್ಲಿ. ಪತ್ರಕರ್ತ ಹೆನ್ರಿ ನ್ಯೂಮ್ಯಾನ್ ಮೆಹೋಹ್ ಎಂಬ ಶಬ್ದವನ್ನು ಡರ್ಟಿ ಎಂದು ತಪ್ಪಾಗಿ ಅರ್ಥಮಾಡಿಕೊಂಡ. ಕೊನೆಗೆ ಅವುಗಳನ್ನು ಎಬೊಮಿನೆಬಲ್ ಸ್ನೋಮೆನ್ (ಹಿಮದಲ್ಲಿನ ಕೊಳಕು ಪುರುಷರು) ಎಂದು ಕರೆದ. ಯೇತಿ ಎಂಬ ಪದವನ್ನು ಕಲ್ಲು, ಶಿಲೆ  ಅಥವಾ ಬಂಡೆಯ ಜಾಗ ಮತ್ತು ಕಪ್ಪು ಬಣ್ಣದ ಕರಡಿ ಎಂಬ ಪದಗಳ  ಸಂಯೋಗದಿಂದ ಪಡೆಯಲಾಗಿದೆ.

ಯೇತಿಗಾಗಿ ಹುಡುಕಾಟ:
ಹಿಮಾಲಯದ ವನ್ಯ ಮೃಗಗಳ ತಪ್ಪು ಗ್ರಹಿಸುವಿಕೆಯಿಂದ ಯೇತಿಯ ಬಗೆಗಿನ ವಿವರಣೆಗೆ ಅವಕಾಶ ಮಾಡಿಕೊಟ್ಟಿತು. 21ನೇ ಶತಮಾದ ಆರಂಭದಲ್ಲಿ ಪಶ್ಚಿಮಾತ್ಯರು ಹಿಮಾಲಯ ಪರ್ವತಗಳಲ್ಲಿ ಅಲೆಯಲು ಶುರುಮಾಡಿದರು. ಅಪರಿಚಿತ ಮಾರ್ಗದಲ್ಲಿ ಒಮ್ಮೊಮ್ಮೆ ವಿಚಿತ್ರವಾದ  ಪ್ರಾಣಿಗಳನ್ನು ನೋಡಿದಾಗ ಯೇತಿಗಳ ಇರುವಿಕೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಕೆಲವರು ಸೂಚಿಸಿದಂತೆ ಯೇತಿ ಒಂದು ಮಾನವ ಲಕ್ಷಣದ ಒಬ್ಬೊಂಟಿಗ. 1986ರಲ್ಲಿ ದಕ್ಷಿಣ ಟೈರೋಲಿಯನ್ ಪರ್ವತಾರೋಹಿ ರೈನ್ಹೋಲ್ಡ್ ಮೆಸ್ನರ್ ಎಂಬಾತ ತಾನು ಯೇತಿಯನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದಾನೆ. "ಮೈ ಕ್ವೆಸ್ಟ್ ಫಾರ್ದ ಯೇತಿ" ಎಂಬ ಪುಸ್ತಕದಲ್ಲಿ ಯೇತಿಯ ಬಗ್ಗೆ ವಿವರಣೆ ನೀಡಿದ್ದಾನೆ. ಆತನ ಪ್ರಕಾರ ಯೇತಿ ಅಂದರೆ ಅಳಿವನ ಅಂಚಿನಲ್ಲಿರು ಹಿಮಾಲಯದ ಒಂದು ಕೆಂಪುಬಣ್ಣದ ಕರಡಿ. ಇದು ನೇರವಾಗಿ ಅಥವಾ ನಾಲ್ಕು ಕಾಲುಗಳ ಮೇಲೆ ನಡೆಯುತ್ತದೆ. ಮೌಂಟ್ ಎವರೆಸ್ಟ್ ಶಿಖರಾರೋಹಿಗಳು 20000 ಅಡಿ ಎತ್ತದಲ್ಲಿ ಯೇತಿಗಳು ಓಡಾಡಿದ್ದು ಎನ್ನಲಾದ ಹೆಜ್ಜೆಗುರುತನ್ನು ಪತ್ತೆಹಚ್ಚಿದ್ದರು. ಆದರೆ, ಅದನ್ನು ಅನುಸರಿಸಿ ಹೋದಾಗ ಅವರಿಗೆ ಯೇತಿ ಪತ್ತೆಯಾಗಿರಲಿಲ್ಲ.

ಹಾಲಿವುಡ್ ಚಿತ್ರ:

ಯೇತಿಯ ಬಗ್ಗೆ ಹಾಲಿವುಡ್ ಚಿತ್ರಗಳಲ್ಲಿಯೂ ಉಲ್ಲೇಖಿಸಲಾಗಿದೆ. ದ ಸ್ನೋಕ್ರೀಚರ್, ದ ಎಬೊಮಿನೆಬಲ್ ಸ್ನೋಮ್ಯಾನ್, ಮ್ಯಾನ್ಸ್ಟರ್ ಮುಂತಾದ ಚಿತ್ರದಲ್ಲಿ ಯೇತಿ ಬಗ್ಗೆ ತೋರಿಸಲಾಗಿದೆ.
 

No comments:

Post a Comment