ಜೀವನಯಾನ

Saturday, November 12, 2016

ಕಣ್ಮನ ಸೆಳೆಯುವ ಚಾಕೊಲೇಟ್ ಗುಡ್ಡಗಳು

ಮಕ್ಕಳಿಗೆ ಚಾಕೊಲೇಟ್ ಅಂದರಂತೂ ಪಂಚಪ್ರಾಣ. ಇನ್ನು ಚಾಕೊಲೇಟ್ನಿಂದ ಮಾಡಿದ ಗುಡ್ಡವೇ ಇದ್ದರೆ ಏನಾದೀತು! ಆಶ್ಚರ್ಯವಾಗಬೇಡಿ ಈ ಗುಡ್ಡವನ್ನು ಚಾಕೊಲೇಟ್ನಿಂದ ಮಾಡಿಲ್ಲ. ಗುಡ್ಡಗಳು ಚಾಕೊಲೇಟ್ ರೀತಿಯಲ್ಲೇ ಗುಂಡಗೆ, ಗೋಳಾಕಾರವಾಗಿ ನಿರ್ಮಾಣಗೊಂಡಿದ್ದರಿಂದ ಇವುಗಳಿಗೆ ಚಾಕೊಲೇಟ್ ಗುಡ್ಡಗಳು ಎಂದು ಹೆಸರು ಬಂದಿದೆ. ಈ ಗುಡ್ಡಗಳು ಇರುವುದು ಫಿಲಿಪ್ಪೀನ್ಸ್ನ ಬೊಹೊಲ್ ದ್ವೀಪದಲ್ಲಿ. ಅಲ್ಲಿ ನೂರಾರು ಚಾಕೊಲೇಟ್ ಗುಡ್ಡಗಳು ಕಾಣಸಿಗುತ್ತವೆ. ಈ ಗುಡ್ಡಗಳು ನೈಸಗರ್ಗಿಕವಾಗಿ ರೂಪಗೊಂಡಿವೆ. ಮಾನವನಿರ್ಮಿತ ಅಲ್ಲ ಎಂದು ನಂಬುವುದೇ ಕಷ್ಟ. 



ಹೆಸರು ಬಂದಿದ್ದು ಹೇಗೆ?
ಈ ಗುಡ್ಡಗಳು ವಿಶೇಷ ಮತ್ತು ಬೊಹೊಲ್ ದ್ವೀಪದಲ್ಲಿ ಅಸಾಮಾನ್ಯವಾದ ಭೂರಚನೆಯನ್ನು ಹೊಂದಿವೆ. ಸುಮಾರು 50 ಚದರ ಕಿ.ಮೀ. ವ್ಯಾಪ್ತಿಯಲ್ಲಿ  1268ರಿಂದ 1776 ಗೋಲಾಕಾರದ ಚಾಕೊಲೇಟ್ ಗುಡ್ಡಗಳನ್ನು ನೋಡಬಹುದಾಗಿದೆ. ಈ ಗುಡ್ಡಗಳು ವರ್ಷದ ಬಹುತೇಕ ಸಮಯ ಹಸುರಿನಿಂದ ಕೂಡಿರುತ್ತವೆ. ಆದರೆ, ಬೇಸಿಗೆಯ ವೇಳೆ ಗುಡ್ಡದ ಮೇಲಿನ ಹುಲ್ಲುಗಳು ಒಣಗಿ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತವೆ. ದೂರದಿಂದ ನೋಡಿದರೆ ಯಾರೋ ಚಾಕೊಲೇಟ್ಗಳನ್ನು ಗುಡ್ಡೆಹಾಕಿಟ್ಟಂತೆ ಕಾಣಿಸುತ್ತದೆ. ಹೀಗಾಗಿ ಇವುಗಳನ್ನು ಚಾಕೊಲೇಟ್ ಗುಡ್ಡಗಳು ಎಂದು ಕರೆಯಲಾಯಿತು.

ಗುಡ್ಡಗಳು ನಿಮರ್ಮಾಣವಾಗಿದ್ದು ಹೇಗೆ?

ಈ ಗುಡ್ಡಗಳು ಅಷ್ಟೇನೂ ಎತ್ತರವಾಗಿಲ್ಲ. ಅವುಗಳ ಎತ್ತರ 150ರಿಂದ 400 ಅಡಿಗಳು. ಗುಡ್ಡಗಳ ಎತ್ತರದಲ್ಲಿ 98ರಿಂದ 160 ಅಡಿಗಳಷ್ಟು ವ್ಯತ್ಯಾಸವಿದೆ. ದೂರದಿಂದ ನೋಡಲು ಒಂದೇ ರೀತಿಯಲ್ಲಿ ಕಾಣುತ್ತವೆ. ಬೊಹೊಲ್ ದ್ವೀಪದಲ್ಲಿರುವ ಸಗಬಯನ್, ಕಮರ್ೆನ್, ಬಟುವಾನ್ ಪಟ್ಟಣಗಳ ಮಧ್ಯೆ ಚಾಕೊಲೇಟ್ ಗುಡ್ಡಗಳು ವ್ಯಾಪಿಸಿಕೊಂಡಿವೆ. ಅತಿ ಎತ್ತರದ ಗುಡ್ಡ 390 ಅಡಿಗಷ್ಟು ಎತ್ತರವಾಗಿದೆ. ಭೂಗೋಳ ಶಾಸ್ತ್ರದ ಪ್ರಕಾರ ಈ ಗಡ್ಡಕ್ಕೆ ಮೊಗೊಟೆ (ಗೋಳಾಕಾರದ ರಚನೆ)ಗಳು ಎಂದು ಹೆಸರಿಸಲಾಗುತ್ತದೆ. ಈ ರೀತಿಯ ಗುಡ್ಡಗಳು ನಿಮರ್ಮಾಣವಾಗುವುದಕ್ಕೆ ಕಾರಣವೇನೆಂಬುದರ ಬಗ್ಗೆ ಭೂ ವಿಜ್ಞಾನಿಗಳು ಸತತವಾಗಿ ಅಧ್ಯಯನವನ್ನು ನಡೆಸುತ್ತಿದ್ದಾರೆ. ಹೆಚ್ಚಿನ ವಿಶ್ಲೇಷಕರು ಹೇಳುವುದೇನೆಂದರೆ: ಹವಳದ ದಂಡೆಗಳು ಸಮುದ್ರ ಮಟ್ಟದಿಂದ ಎತ್ತರದಲ್ಲಿ ಸಂಗ್ರಹವಾದಾಗ ಭೂಮಿಯ ಮೇಲ್ಪದರದ ಸ್ಥಳಾಂತರದಿಂದಾಗಿ ಗುಡ್ಡಗಳು ರೂಪಗೊಂಡವು. ಸಾವಿರಾರು ವರ್ಷಳಿಂದ ಗಾಳಿಯ ರಭಸ ಮತ್ತು ಸವೆತಕ್ಕೆ ಸಿಕ್ಕಿ ಗುಡ್ಡಗಳು ಗೋಳಾಕಾರದ ರಚನೆಯನ್ನು ಪಡೆದುವು. ಪ್ರತಿಯೊಂದು ಚಾಕೊಲೇಟ್ ಗುಡ್ಡಗಳನ್ನು ಕಸರ್ಟ್ ಎಂದು ಕರೆಯಲಾಗುತ್ತದೆ. ಇವು ಸುಣ್ಣಕಲ್ಲುಗಳಿಂದ ಮಾಡಲ್ಪಟ್ಟಿವೆ. ಮೇಲ್ಭಾಗದಲ್ಲಿ ಕಂದು ಮಿಶ್ರಿತ ಮಣ್ಣು ಮತ್ತು ಹುಲ್ಲಿನಿಂದ ಆವರಿಸಲ್ಪಟ್ಟಿದೆ. ಸುತ್ತಮುತ್ತಲಿನ ಕೃಷಿ ಭೂಮಿಯ ಸವೆತದಿಂದ ವಿಶಿಷ್ಟವಾದ ರಚನೆಯ ಗುಡ್ಡಗಳು ನಿಮರ್ಾಣಗೊಂಡಿವೆ ಎನ್ನುವ ಇನ್ನೊಂದು ವಾದವೂ ಇದೆ. ಜ್ವಾಲಾಮುಖಿಗಳಿಂದಾಗಿ ಈ ಗುಡ್ಡಗಳು ನಿಮರ್ಾಣಗೊಂಡಿವೆ ಎಂಬ ಸಿದ್ಧಾಂತವೂ ಇದೆ.

ದಂತೆಕತೆಗೂ ಹೆಸರುವಾಸಿ
ಚಾಕೊಲೇಟ್ ಗುಡ್ಡಗಳು ಉಗಮವಾದ ಬಗ್ಗೆ ಸ್ಥಳೀಯವಾಗಿ ಹಲವಾರು ದಂತ ಕತೆಗಳಿವೆ. ಅದರಲ್ಲೊಂದು ಕತೆ ಹೀಗೆ ಹೇಳುತ್ತದೆ. ಆರ್ಗೋ ಹೆಸರಿನ ಅಸುರನೊಬ್ಬ, ಮನುಷ್ಯ ಮಹಿಳೆಯನ್ನು ಪ್ರೀತಿಸುತ್ತಾನೆ. ಆಕೆ ಸಾವಿನ ಬಳಿಕ ಆತ ಸುರಿಸಿದ ಕಣ್ಣೀರು ಎಲ್ಲೆಲ್ಲಿ ಬಿದ್ದಿದೆಯೋ ಅಲ್ಲೆಲ್ಲಾ ಒಂದೊಂದು ಚಾಕೊಲೇಟ್ ಗುಡ್ಡ ಸೃಷ್ಟಿಯಾಯಿತಂತೆ.

ಪ್ರವಾಸಿ ತಾಣ
ಚಾಕೊಲೇಟ್ ಹಿಲ್ಸ್ ಫಿಲಿಪ್ಪೀನ್ನ ಪ್ರಮುಖ ಪ್ರವಾಸಿ ತಾಣವಾಗಿದ್ದು, ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಬೇಸಿಗೆಯಲ್ಲಿ ಭೇಟಿ ನೀಡಿದರೆ ಚಾಕೊಲೇಟ್ ಗುಡ್ಡಗಳ ಆನಂದವನ್ನು ಅನುಭವಿಸಬಹುದು.

No comments:

Post a Comment