ಜೀವನಯಾನ

Thursday, June 6, 2013

ಈಜಿಪ್ಟ್ ನ ಭವ್ಯ ಪಿರಮಿಡಗಳು

ಎಲ್ಲರೂ ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ ಗೆ ಅಂಜುತ್ತದೆ ಎನ್ನುವ ಗಾದೆ ಮಾತಿದೆ. ಕಳೆದ ಸುಮಾರು  5000 ವರ್ಷಗಳಿಂದ ಪ್ರಕೃತಿಯ ಎಲ್ಲ ರೀತಿಯ ಪ್ರಕೋಪಗಳನ್ನು ಸಹಿಸಿಕೊಂಡು ನಿಂತಿರುವ ಈ ಭವ್ಯ ಗೋಪುರಗಳು ಅಂದಿನ ಕಾಲದ ಚಕ್ರರ್ತಿಗಳ, ಸಾಮ್ರಾಜ್ಯಶಾಹಿಗಳ ಸಮಾಧಿಗಳಾಗಿವೆ. ಕ್ರಿ.ಪೂ. 2630 ರಿಂದ ಕ್ರಿ.ಪೂ. 1530ರ ಅವಧಿಯಲ್ಲಿ ಈ ಸ್ಮಾರಕಗಳು ನಿಮರ್ಮಾಣಗೊಂಡಿವೆ ಎಂದು ಹೇಳಲಾಗಿದೆ. ಇದರ ಚೌಕಾಕಾರದ ತಳ, ತ್ರಿಕೋಣಾಕಾರದ ಪಾಶ್ರ್ವಗಳು ಮೇಲಕ್ಕೆ ಹೋದಂತೆ ಕಿರಿದಾಗುತ್ತಾಹೋಗಿ ಒಂದುಗೂಡಿ ಪಿರಮಿಡ್ ಗಳಾಗಿವೆ. 



ಈಜಿಪ್ಟ್ ಪಿರಮಿಡ್ ಇತಿಹಾಸ:

ಈಜಿಪ್ಟ್ ಪಿರಮಿಡ್ಗಳ ನಗರ ಎಂದು ಹೆಸರಾಗಿದೆ. ಈಜಿಪ್ಟನಲ್ಲಿ ಸುಮಾರು 138 ಪಿರಮಿಡ್ ಗಳನ್ನು ಸಂಶೊಧಿಸಲಾಗಿದೆ. ಸಕ್ಕಾರದಲ್ಲಿರುವ ಮೆಟ್ಟಿಲಿನ ಪಿರಮಿಡ್ ಅತ್ಯಂತ ಪುರಾತನವೆನಿಸಿದ್ದು, ಕ್ರಿ. ಪೂ.2650ರಲ್ಲಿ ಇದು ನಿಮರ್ಮಾ ಣಗೊಂಡಿರಬಹುದೆಂದು ಹೇಳಲಾಗಿದೆ. ಸಕ್ಕಾರ್ ಪಿರಮಿಡ್ 62 ಮೀ. ಎತ್ತರವಿದೆ. ಎಲ್-ಗಿಜಾ ಎಂಬ ಪ್ರದೇಶದ ಸಮೀಪ ಅತ್ಯಂತ ಪ್ರಸಿದ್ಧವಾದ ಹಾಗೂ ಮೂರು ಪಿರಮಿಡ್ ಗಳಿವೆ. ಗೀಜಾ ಪಿರಮಿಡ್ಗಳು ಈಜಿಪ್ಟಿನ ಫ್ಲಾರೋ ದೊರೆಗಳ ಭವ್ಯತೆ ಮತ್ತು ಶಕ್ತಿ ಸಾಹಸಗಳ ಕುರುಹುಗಳೆಂದು ಪರಿಗಣಿಸಲಾಗಿದೆ. ಕ್ರಿ.ಪೂ. 2590ರಲ್ಲಿ ನಿಮರ್ಮಾಣಗೊಂಡ ಖುಫು ಪಿರಮಿಡ್ ಪುರಾತನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಒಟ್ಟು 12 ಎಕರೆ ವಿಸ್ತೀರ್ಣವಿರುವ ಇದು ನಿರ್ಮಾಣಗೊಂಡಾಗ 147 ಮೀಟರ್ ಎತ್ತರವಿತ್ತು. ಆ ರಾಜನ ತರುವಾಯ ಪಟ್ಟಕ್ಕೆ ಬಂದ ಆತನ ಮಗ ಅದರ ಸಮೀಪದಲ್ಲಿಯೇ ತನಗಾಗಿ ಇನ್ನೊಂದು ಪಿರಮಿಡ್ ನಿರ್ಮಿಸಿಕೊಂಡ. ಅದರ ಎತ್ತರ 136 ಮೀ. ಮುಂದೆ ಪಟ್ಟಕ್ಕೆ ಬಂದ ರಾಜನೂ ಅಲ್ಲಿಯೇ 73 ಮೀ. ಎತ್ತರದ ಇನ್ನೊಂದು ಪಿರಮಿಡ್ ನಿಮರ್ಮಿಸಿಕೊಂಡ.

ನಿಮರ್ಮಾಣಗೊಂಡಿದ್ದು ಯಾಕೆ?

ರಾಜ ಅಥವಾ ರಾಣಿ ಸಾವಿಗೀಡಾದರೆ ಅವರ ದೇಹವನ್ನು  ಕೆಡದಂತೆ ಸಂರಕ್ಷಿಸುವುದು ಈಜಿಪ್ಟ್ನ ಸಂಪ್ರದಾಯವಾಗಿತ್ತು. ರಾಜ ಮತ್ತು ರಾಣಿಯರ ಮೃತದೇಹಗಳನ್ನು ಇಡುವ ಸಮಾಧಿಯಾಗಿ ಈ ಪಿರಮಿಡ್ಗಳನ್ನು  ನಿರ್ಮಿಸಲಾಗಿದೆ. ಮೃತ ಸಾಮ್ರಾಜ್ಯಶಾಹಿಗಳ ಆತ್ಮವನ್ನು ಪೋಷಿಸುವ ಸಲುವಾಗಿ ಪೂಜಾರಿಗಳು ಕ್ರಿಯಾವಿಧಿಗಳನ್ನು ಪೂರೈಸುತ್ತಿದ್ದರು. ಹೀಗೆ ಮಾಡುವುದರಿಂದ ಆತ್ಮ ದೇಹವನ್ನು ಬಿಟ್ಟುಹೋಗುವುದಿಲ್ಲ ಎಂದು ನಂಬಲಾಗಿತ್ತು. 


ಪಿರಮಿಡ್ ಕಟ್ಟಿದ್ದು ಹೇಗೆ?
ರಾಜರು ದೃಢಕಾಯರಾಗಿದ್ದಾಗಲೇ ಅವರಿಗಾಗಿ ಪಿರಮಿಡ್ ನಿರ್ಮಾಣ ಪ್ರಾರಂಭವಾಗುತ್ತಿತ್ತು. ಪಿರಮಿಡ್ ಗಳಿಗೆ ಬಳಸಲಾಗಿರುವ ಸಣ್ಣಕಲ್ಲು ಮತ್ತು ಬೆಣಚುಕಲ್ಲಿನ ದಿಂಡುಗಳು ಪ್ರತಿಯೊಂದು ಮೂರರಿಂದ 15 ಟನ್ ಭಾರದವು. ಇಷ್ಟು ಭಾರದ ದಿಂಡುಕಲ್ಲುಗಳನ್ನು ಬಹಳ ದೂರದ ಕಲ್ಲುಗಣಿಯಿಂದ ನೈಲ್ ನದಿಯಲ್ಲಿ ಸಾಗಿಸಿತಂದು ಪಿರಮಿಡ್ ನಿರ್ಮಾಣ ಸ್ಥಳಕ್ಕೆ ಗಾಡಿಗಳ ಮೂಲಕ ಸಾಗಿಸಿರಬಹುದೆಂದು ಹೇಳಲಾಗಿದೆ. ಈ ಬ್ರಹತ್ ಪಿರಮಿಡ್ ಗಳನ್ನು ನಿರ್ಮಿಸಲು ಎಷ್ಟು ವರ್ಷ  ತೆಗೆದುಕೊಂಡಿರಬಹುದು. ಅಷ್ಟೊಂದು ಭಾರದ ಕಲ್ಲುಗಳನ್ನು ಹೇಗೆ ಮೇಲಕ್ಕೆ ಎತ್ತಿದರು ಎನ್ನುವುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ಪಿರಮಿಡ್ ನ ಒಳರಚನೆ: 

ಇವುಗಳ ಒಳರಚನೆ ಅತ್ಯಂತ ಸಂಕೀರ್ಣವಾಗಿದೆ. ಪಿರಮಿಡ್ ನ ಉತ್ತರ ದಿಕ್ಕಿನ ಮಧ್ಯಭಾಗದಲ್ಲಿ ಪ್ರವೇಶದ್ವಾರವಿರುತ್ತದೆ. ಅಲ್ಲಿಂದ ಒಳಗೆ ಹೋಗಲು ಅನೇಕ ದಾರಿಗಳಿದ್ದು, ಒಂದು ದಾರಿ ರಾಜನ ಪ್ರಧಾನ ಸಮಾಧಿ ಕೋಣೆಗೆ ಸಂಪರ್ಕ ಕಲ್ಪಿಸುತ್ತದೆ. ರಾಜನ ಸಮಾಧಿಕೋಣೆ ಪಿರಮಿಡ್ ನ ಕೇಂದ್ರ ಬಿಂದುವಿನ ತಳಭಾಗದಲ್ಲಿ ನಿರ್ಮಾಣಗೊಂಡಿರುತ್ತದೆ. ಇದಲ್ಲದೆ ಪಿರಮಿಡ್ ರಾಣಿಯ ಸಮಾಧಿ ಮತ್ತು ಪೂಜಾ ಸಾಮಗ್ರಿಗಳನ್ನು ಇರಿಸುವ ಕೋಣೆ, ವಿಶಾಲವಾದ ಮಂಟಪಗಳನ್ನು ಒಳಗೊಂಡಿದ್ದು, ಇವುಗಳನ್ನು  ತಲುಪಲು ಪ್ರತ್ಯೇಕ ದಾರಿಗಳಿವೆ. ಕೋಣೆಗಳ ಒಳಗೆ ಸ್ಥಂಬಗಳು, ಗೋಡೆಗಳ ಮೇಲೆ ವರ್ಣ  ಚಿತ್ರಗಳು ಪುರಾತನ ಚಿತ್ರಲಿಪಿಯಲ್ಲಿರುವ ಸೂಚನೆ ಸಂಕೇತಗಳು, ಭವ್ಯ ವಿಗ್ರಹಗಳನ್ನು ಇರಿಸಲಾಗಿದೆ. ಇಲ್ಲಿನ ವಸ್ತುಗಳನ್ನು ಯಾರೂ ಕದಿಯದಂತೆ ಮಾರ್ಗದ ಮಧ್ಯೆ ತಡೆಗಳನ್ನು  ಇರಿಸಲಾಗಿದೆ. ಪಿರಮಿಡ್ ಇಷ್ಟೊಂದು ಸುರಕ್ಷಿತವಾಗಿದ್ದರೂ, ಕಳ್ಳರು ಇಲ್ಲಿನ ಅಮೂಲ್ಯ ವಸ್ತುಗಳನ್ನು ಹೊತ್ತೊಯ್ದಿದ್ದಾರೆ.
 

No comments:

Post a Comment