ಜೀವನಯಾನ

Tuesday, February 26, 2013

ಬಾಲದಿಂದ ಕುಟುಕುವ ಚೇಳು

ಚೇಳು ಅಂದರೆ ಎಲ್ಲರಿಗೂ ಭಯ. ಕೆವೊಮ್ಮೆ ವಿಷ ಸರ್ಪಗಳಿಂಗಿಂತಲೂ ಚೇಳು ಅಪಾಯಕಾರಿ. ಚೇಳು ತುಂಬಾ ಚುರುಕು, ಅಡಗಿ ಕುಳಿತೇ ಕಾರ್ಯ ಕಾರ್ಯ ಸಾಧಿಸುವುದು ಇದರ ಬುದ್ಧಿ. ಇವು ಕ್ಷಣಾರ್ಧದಲ್ಲಿ ಮುಂದಿನ ಕೊಂಡಿಯಿಂದ ಹಿಡಿದು ಹಿಂದಿನ (ಬಾಲದ) ಮುಳ್ಳಿನಿಂದ ಕುಟುಕಿ ವಿಷ ಹರಿಸಿ ಬೇಟೆಯನ್ನು ನಿಷ್ಕ್ರಿಯಗೊಳಿಸುತ್ತದೆ.
 ಇದರ ಕಾಟ ಮಾನವರನ್ನೂ ಬಿಟ್ಟಿಲ್ಲ. 





ದೇಹ ಲಕ್ಷಣ:
ಚೇಳು ಪರಭಕ್ಷಕ ಜಾತಿಗೆ ಸೇರಿದ ಜಂತು. ಜೇಡದ ಸಮೀಪದ ಸಂಬಂಧಿ ಎನಿಸಿವೆ. ಚೇಳಿಗೆ ಎಂಟು ಪಾದಗಳಿವೆ. ಅವುಗಳ ಮುಂದಿರುವ ಇಕ್ಕಳದಂತಹ ವಾಸನೆ ಕಂಡುಹಿಡಿಯುವ ಜೋಡಿ ನಖಗಳು, ಪಟ್ಟಿಗಳುಳ್ಳ ಸಣ್ಣ ಸುರುಳಿ ಆಕಾರದ ಬಾಲ, ಇದರ ತುದಿಯಲ್ಲಿ ಇರುವುದೇ ವಿಷದ ಮುಳ್ಳು. ವಿಭಿನ್ನ ಭೌತಿಕ ಸ್ವರೂಪ, ಜೈವಿಕ ರಾಸಾಯನಿಕ ಮತ್ತು ನೈಸರ್ಗಿಕ ಅಳವಡಿಕೆಯಿಂದಾಗಿ ಇವು ಭೂಮಿಯ ಮೇಲೆ ಅನಾದಿಕಾಲದಿಂದ ಜೀವಿಸಲು ಸಾಧ್ಯವಾಗಿದೆ. 430 ದಶಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆಗಳು ಲಭ್ಯವಾಗಿವೆ.

ಎಲ್ಲೆಡೆಯೂ ವಾಸ:
ಚೇಳುಗಳು ಪ್ರಪಂಚದ ಎಲ್ಲಾ ಖಂಡಗಳಲ್ಲಿಯೂ ವ್ಯಾಪಕವಾಗಿ ಹರಡಿಕೊಂಡಿವೆ. ಆದರೆ, ಅಂಟಾರ್ಟಿಕಾ ಖಂಡದಲ್ಲಿ ಮಾತ್ರ ಇವು ಪತ್ತೆಯಾಗಿಲ್ಲ. ಇದರಲ್ಲಿ ಸುಮಾರು 13 ಕುಟುಂಬ  ವರ್ಗವಿದ್ದು, ಸುಮಾರು  1500 ಪ್ರಭೇದಗಳಿವೆ. ಇದರಲ್ಲಿ 111 ಪ್ರಭೇದ ಅಳಿವಿನ ಅಂಚಿನಲ್ಲಿದೆ. ಇಷ್ಟೊಂದು ವೈವಿಧ್ಯಮಯ ಪ್ರಭೇದಗಳಿರುವ ಚೇಳಿನಲ್ಲಿ ಕೇವಲ 25 ಜಾತಿಯ ಚೇಳು ಮಾತ್ರ ಮಾನವನ್ನು ಬಲಿ ಪಡೆಯುವಷ್ಟು ವಿಷಕಾರಿ. ಇವು  2 ರಿಂದ 10 ವರ್ಷದ ಜೀವತಾವಧಿ ಹೊಂದಿವೆ. ಕೆಲವು ಚೇಳುಗಳು 25 ವರ್ಷ ಕೂಡಾ ಬದುಕಬಲ್ಲವು. ಚೇಳುಗಳು  ನೈಸರ್ಗಿಕವಾಗಿ ಎಲ್ಲಾ ಪರಿಸರ ವ್ಯವಸ್ಥೆಗೆ ಹೊಂದಿಕೊಂಡಿದೆ. ಅತಿ ಎತ್ತರದ ಪರ್ವತ ಶಿಖರಗಳಲ್ಲಿಯೂ ಇವುಗಳನ್ನು ಕಾಣಬಹುದು. ಭೂಮಿಯ ಮೇಲ್ಭಾಗದಲ್ಲಿ, ಮರಗಳ ಮೇಲೆ, ಬಂಡೆಗಳ  ಅಡಿಯಲ್ಲಿ, ಮರಳಿನಲ್ಲಿ ಇರುವುದುದೆಂದರೆ ಅಚ್ಚು ಮೆಚ್ಚು. ಸಾಮಾನ್ಯವಾಗಿ ಇವು ಗಾತ್ರದಲ್ಲಿ 3 - 8 ಇಂಚು ದೊಡ್ಡದಾಗಿರುತ್ತದೆ.

ಕ್ಯಾನ್ಸರ್ಗೆ ರಾಮಬಾಣ:
ಚೇಳಿನ ವಿಷದಲ್ಲಿ ಪ್ರೊಟೀನ್ ಅಂಶ ಅಧಿಕವಾಗಿದ್ದು, ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ವಿಷ ಚರ್ಮರೋಗ ವಿಜ್ಞಾನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ ವಿಷದಲ್ಲಿರುವ ಕ್ಲೊರೊಟಾಕ್ಸಿನ್ ಮೆದುಳಿನ ಕ್ಯಾನ್ಸ್ರ್ನಿಂದ ಹಾಳಾದ ಕೋಶಳಗಳನ್ನು ಸರಿ ಪಡಿಸುತ್ತದೆ. ಕೀಲು ನೋವು, ಕಣ್ಣಿನ ಪೊರೆ ನಿವಾರಣೆ  ಮತ್ತು  ಶಕ್ತಿವರ್ಧಕವಾಗಿಯೂ ಚೇಳಿನ ವಿಷ ಬಳಕೆಯಾಗುತ್ತದೆ.

ಸಾಸ್ಕೃತಿ ರಾಯಭಾರಿ:
ಚೇಳನ್ನು ಕೆಲವು ದೇಶಗಳ ಸಂಸ್ಕೃತಿಯಲ್ಲಿಯೂ ಬಳಸಲಾಗುತ್ತದೆ. ಹಿಂದು ಪಂಚಾಂಗದಲ್ಲಿ ವೃಶ್ಚಿಕ (ಚೇಳು) 12 ರಾಶಿಚಕ್ರದ ಭವಿಷ್ಯದಲ್ಲಿ ಅಳವಡಿಸಲಾಗಿದೆ. ಪ್ರಾಚಿನ ಈಜಿಪ್ತ ದೇಶದ ದೆವತೆಯನ್ನು ವೃಶ್ಚಿಕಕ್ಕೆ ಹೋಲಿಕೆ ಮಾಡಲಾಗಿದೆ. ಇಸ್ಲಾಮಿಕ್ಕಲೆಗಳಲ್ಲಿಯೂ ಚೇಳು ಸ್ಥಾನ ಪಡೆದಿದೆ.


 ಚೇಳಿನ  ಕುತೂಹಲಕಾರಿ ಅಂಶಗಳು

  • ಕೆಲವು  ಜಾತಿಯ ಚೇಳುಗಳು ಆಹಾರ ನೀರು ಸೇವಿಸದೇ ಒಂದು ವರ್ಷ ಬದುಕಬಲ್ಲವು.
  • ಮ್ಯಾಕ್ಸಿಕೊದಲ್ಲಿ ಚೇಳಿನ ಕಡಿತದಿಂದ ಪ್ರತಿವರ್ಷ  ಸಾವಿರಾರು ಜನ  ಸಾವನ್ನಪ್ಪುತ್ತಾರೆ.
  • ಇವು ಸ್ವಜಾತಿಯನ್ನೆ ತಿನ್ನುವುದರಿಂದ ಬಹುತೇಕ  ಏಕಾಂಗಿಯಾಗಿ  ಜೀವನಸಾಗಿಸತ್ತವೆ.
  • ಇವುಗಳಿಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ಆದರೆ ಕೆಲವು ಚೇಳುಗಳಿಗೆ 10 ಕಣ್ಣುಗಳಿರುತ್ತವೆ.
  • ಚೇಳು ಉತ್ತಮ ವಾಸನೆ ಗ್ರಹಿಸುವ ಸಾಮರ್ಥ್ಯ  ಹೊಂದಿವೆ. ಆಹಾರ ಹುಡುಕಲು ಇವು ನೆರವಾಗುತ್ತವೆ.
  • ಸುತ್ತಮುತ್ತಲಿನ ಪರಿಸರ ತಿಳಿಯಲು ಭೂಮಿಯ ಕಂಪನದ ಮೇಲೆ ಅವಲಂಬಬಿತವಾಗಿವೆ.
  • ಇವು ಕೇವಲ ದ್ರವ ಪದಾರ್ಥಗಳನ್ನಷ್ಟೆ ಸೇವಿಸಿ, ಬೇಟೆಯನ್ನು  ಹಾಗೆಯೇ ಬಿಡುತ್ತದೆ.
  • ಅರಿಜೋನಾದಲ್ಲಿ ಕಂಡುಬರುವ ಪಟ್ಟೆ ಚೇಳು ಅತ್ಯಂತ ವಿಷಕಾರಿ ಎನಿಸಿಕೊಂಡಿದೆ.

No comments:

Post a Comment