ಜೀವನಯಾನ

Thursday, February 21, 2013

ಶಾರ್ಕ್ ಗಳ ಅದ್ಭುತ ಜೀವ ಲೋಕ

ಅಕಶೇರುಕಗಳನ್ನು ಕಶೇರುಕಗಳೊಂದಿಗೆ ಜೋಡಿಸುವ ಕೊಂಡಯೇ ಶಾಗಳು. ಇವುಗಗಳನ್ನು ಮೂಳೆ ಇರದೇ ಕೇವಲ ಮಾಂಸವಷ್ಟೇ ಇರುವ ಮೃದ್ವಸ್ತಿಗಳೆಂದು ವಿಂಗಡಿಸಲಾಗಿದೆ. ಜಲಚರಗಳ ವಿಕಸನ ಸರಣಿಯ ಅಮೋಘ ಜೀವಿ ಶಾರ್ಕ್ ಜಾತಿಯ ಜೀವಸಂಕುಲ. ಶಾರ್ಕ್ ನಲ್ಲಿ ರೇ ಮತ್ತು ಸ್ಕೇಟ್ಎನ್ನುವ ಉಪ ಜಾತಿಗಳಿವೆ. ಅಲ್ಲದೇ ಶಾರ್ಕ್ ನಲ್ಲಯೂ ಹಲವು ವಿಧಗಳಿದ್ದು, ಶ್ವೇತ ಶಾರ್ಕ್, ಎಲಿಫೆಂಟ್ ಶಾರ್ಕ್, ಹ್ಯಾಮರ್ ಅಥವಾ ಸುತ್ತಿಗೆ ತಲೆಯ ಶಾರ್ಕ್, ವಾಕಿಂಗ್ ಶಾರ್ಕ್ , ಗರಗಸ ಶಾರ್ಕ್  ಹೀಗೆ 450ಕ್ಕೂ ಹೆಚ್ಚಿನ ಶಾರ್ಕ್  ಪ್ರಭೇದಗಳನ್ನು ಇದುವರೆಗೆ ಪತ್ತೆಹಚ್ಚಲಾಗಿದೆ. ಅವುಳಲ್ಲಿ ವಿಶಿಷ್ಟವೆನಿಸಿದ ಎರಡು ಪ್ರಬೇಧದ ಮಾಹಿತಿ ಇಲ್ಲಿದೆ.

 ನಡೆದಾಡುವ ಶಾರ್ಕ್ !
ಶಾರ್ಕ್ ಎಂದೊಡನೆ ವೇಗವಾಗಿ ಈಜತ್ತಾ, ಮೀನನ್ನು ಕಚ್ಚಿ ಓಡುವ ವೈಟ್ ಶಾರ್ಕ್  ಕಣ್ಣಮುಂದೆ ಬರುತ್ತದೆ. ಆದರೆ, ನಡೆದಾಡುವ ಶಾರ್ಕ್  ಇರಬಹುದೆಂದು ಯಾರೂ ಊಹಿಸಿರಲಿಕ್ಕಿಲ್ಲ. ಈ ಮೀನಿನ ಕಿವಿಸೀಳಿನ ಕೆಳಭಾಗದ ರೆಕ್ಕೆಗಳು ನಡೆಪಾದದಂತೆ ಮಾರ್ಪಾಡು ಗೊಂಡಿರುತ್ತವೆ. ಇದು ತನ್ನ ರೆಕ್ಕೆಯ ಸಹಾಯದಿಂದ ನೀರಿನ ತಳಭಾಗದಲ್ಲಿ ಓಡಾಡುತ್ತದೆ! ಹೀಗೆ ಸಮುದ್ರದ ತಳದಲಲ್ಲಿ ಓಡಾಡುವ ಮೀನಿನ  ಹೆಸರು; ಎಪಾಲುಟರ್ಟ್  ಶಾರ್ಕ್ .  ಇದನ್ನು ವಾಕಿಂಗ್ ಶಾರ್ಕ್  ಎಂದೂ ಕರೆಯುತ್ತಾರೆ. ಇವುಗಳಲ್ಲಿಯೂ ಸುಮಾರು 22 ಪ್ರಜಾತಿಗಳನ್ನು ಗುರುತಿಸಲಾಗಿದೆ.

ಹವಳದ ದಂಡೆಯಲ್ಲಿ ವಾಸ:
ಆಸ್ಟ್ರೇಲಿಯಾದ ಸಮುದ್ರದ ಹವಳದ ದಂಡೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಮೀನು ಹೆಚ್ಚು ಆಳದ ನೀರಿಗೆ ಹೋಗುವುದಿಲ್ಲ. ಇದು ಗಾತ್ರದಲ್ಲಿ ಮಾಮೂಲಿ ಮೀನಿನಂತೆ ಕಂಡಬರುತ್ತದೆ. ವಯಸ್ಕ ಶಾರ್ಕ್  ಸುಮಾರು 30ರಿಂದ 80 ಸೆಂ.ಮೀಗೂ ಮೀರಿರುವುದಿಲ್ಲ. ಹೀಗಾಗಿ ಇದು ಇತರೇ ದೊಡ್ಡ ಮೀನಿಗೆ ಅಥವಾ ಇತರೇ ಶಾರ್ಕ್ ಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ಎಪಾಲುರ್ಟ್  ಶಾರ್ಕ್  ಅದ್ಭುತ ದೇಹ ವರ್ಣಮಾರ್ಪಾಡಿನ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಮೈ ಮೇಲಿನ ಮಚ್ಚೆಗಳು ಹಾಗೂ ವರ್ಣ ವಿನ್ಯಾಸವನ್ನು ಪರಿಸರದ ಹಿನ್ನೆಲೆಯಲ್ಲಿ ಬದಲಿಸಿಕೊಂಡು ತನ್ನನ್ನು ಕಬಳಿಸಲು ಹೊಂಚುಹಾಕುವ ಮೀನುಗಳಿಂದ ಪಾರಾಗುತ್ತದೆ. ಇವು  ಮೊಟ್ಟೆ ಇಡುವ ಶಾರ್ಕ್ ಗಿದ್ದು ಒಮ್ಮೆಲೇ ಎರಡರಂತೆ ವರ್ಷಕ್ಕೆ 30ರಿಂದ 40 ಮೊಟ್ಟೆ  ಇಡುತ್ತವೆ.
ಇವು ನಿಷಾಚರಿಗಳಾಗಿದ್ದು ಚಿಕ್ಕ ಮೀನು, ಸಿಗಡಿ ಇತ್ಯಾದಿಗಳನ್ನು ತಿಂದು ಬದುಕುತ್ತದೆ. ಇವುಗಳ ಇನ್ನೊಂದು ವಿಶೇಷವೆಂದರೆ, ಅತಿ ಕಡಿಮೆ ಕರಗಿದ ಆಮ್ಲಜನಕವಿರುವ ನೀರಿನಲ್ಲೂ ನಾಲ್ಕೈದು ಗಂಟೆ ಆರಾಮವಾಗಿ ಓಡಾಡಬಲ್ಲವು. ಆಮ್ಲಜನಕವೇ ಇಲ್ಲದೇ ಒಂದು ಗಂಟೆಗಳ ಕಾಲ ಜೀವಿಸಿದ ನಿದರ್ಶನವೂ ಇದೆ. ಈ ಮೀನು  ಕಶೇರಿಕಗಳ ಮೊದಲ ಕೊಂಡಿಯಾಗಿರುವುದರಿಂದ ವೈದ್ಯಶಾಸ್ತ್ರದ ಪ್ರಮುಖ ಅಧ್ಯಯನ ವಿಷಯವಾಗಿದೆ.

ಎಲಿಫೆಂಟ್ ಶಾರ್ಕ್ !
ಗಜಮುಖದ ಶಾರ್ಕ್ , ಭೂತ ಮೀನು ಅಥವಾ ಖಮಿರಾ ಎಂದು ಕರೆಯಲ್ಪಡುತ್ತದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸಮುದ್ರಗಳಲ್ಲಿ ಸುಮಾರು 200 ರಿಂದ 500 ಮೀಟರ್ ಆಳದಲ್ಲಿ ಕಂಡುಬರುತ್ತದೆ. ಇದು ಹೆಚ್ಚೆಂದರೆ 1 ರಿಂದ 1.2 ಮೀಟರ್ ಉದ್ದ ಬೆಳೆಯುತ್ತದೆ. ಮುಖದ ಮುಂಭಾದಲಲ್ಲಿ ಸೊಂಡಿಲನ್ನು ಹೊಂದಿಇದ್ದರಿಂದ ಇದಕ್ಕೆ ಗಜಮುಖ ಶಾರ್ಕ್  ಅಥವಾ ಎಲಿಫೆಂಟ್ ಶಾರ್ಕ್   ಎನ್ನುವ ಹೆಸರು ಬಂದಿದೆ. ಇವು ಸುಮಾರು  430 ದಶ ಲಕ್ಷ ವರ್ಷಗಳ ಹಿಂದೆಯೇ ಇವುವಿಕಾಸಹೊಂದಿವೆ ಎಂದು ಅಂದಾಜಿಸಲಾಗಿದೆ. ಜೀವವಾಹಿನಯ ವಿಕಸನದ ಕೊಂಡಿ ಎಂದೇ ಎಲಿಫೆಂಟ್ ಶಾರ್ಕ್ ಗುರುತಿಸಿಕೊಂಡಿದೆ.


 

No comments:

Post a Comment