ಜೀವನಯಾನ

Thursday, June 18, 2015

ಭವ್ಯ ರಾಷ್ಟ್ರಪತಿ ಭವನ!

ಭಾರತದಲ್ಲೇ ಅತ್ಯಂತ ಪ್ರತಿಷ್ಠಿತ ಕಟ್ಟಡವೆಂದರೆ ಅದು ರಷ್ಟ್ರಪತಿ ಭವನ. ಈ ಮಹಾಕಟ್ಟಡವನ್ನು ಯಕ್ಷ ಸೃಷ್ಟಿ ಎಂದೇ ಕರೆಯಬಹುದು. ತನ್ನ ಅತ್ಯದ್ಭುತ ವಾಸ್ತು ಶಿಲ್ಪದಿಂದ ಮಾತ್ರವಲ್ಲದೇ, ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ನಿವಾಸ ಇದಾಗಿದೆ. ಮುಘಲರ ವಾಸ್ತುಶಿಲ್ಪ ಮತ್ತು ಯುರೋಪಿನ ವಾಸ್ತು ಶಿಲ್ಪಗಳ ಸಮ್ಮಿಳನವನ್ನು ಈ ಭವ್ಯ ಕಟ್ಟಡದಲ್ಲಿ ಕಾಣಬಹುದು. ಸುಮಾರು 20 ಸಾವಿರ ಚದರ್ ಅಡಿ ವಿಸ್ತೀರ್ಣವಿರುವ ಈ ಭವನದಲ್ಲಿ 340 ಕೋಣೆಗಳಿವೆ. ವಿಶಾಲ  ಹಜಾರಗಳು, ಎತ್ತರದ ಬೋದಿಗಳು, ಅಮೃತ ಶಿಲೆಯ ನೆಲ, ಕಾಶ್ಮೀರಿ ನೆಲಗಂಬಳಿ, ಅಪರೂಪದ ತೈಲ ಚಿತ್ರಗಳು, ಬರ್ಮಾ ಟೀಕ್ ನ ಪೀಠೋಪಕರಣಗಳು... ಇವೆಲ್ಲಾ ರಾಷ್ಟ್ರಪತಿ ಭವನ ಯಕ್ಷ ಸೃಷ್ಟಿಯೋ ಎಂಬತೆ ಭಾಸಗೊಳಿಸುತ್ತವೆ.


ವೈಸ್ರಾಯ್ ಹೌಸ್ ಆಗಿತ್ತು:
ಇದನ್ನು ಮೂಲತಃ ರಾಷ್ಟ್ರಪತಿಗಳಿಗಾಗಿ ಕಟ್ಟಿದ್ದಲ್ಲ. ಇದು ಬ್ರಿಟಿಷರ ಕಾಲದ ವೈಸ್ರಾಯ್ ಹೌಸ್. ಇಲ್ಲಿ ಗವರ್ನರ್ ಜನರಲ್ ಮತ್ತು ಅವರ ಅಧಿಕಾರಿ ವರ್ಗ ಉಳಿದುಕೊಳ್ಳುತ್ತಿತ್ತು. ನಾವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಬಳಿಕ ಚಕ್ರವತರ್ಿ ರಾಜಗೋಪಾಲಾಚಾರ್ಯ ಅವರು ಈ ಬಂಗಲೆಯಲ್ಲಿ ತಂಗಿದ್ದ ಕೊನೆಯ ಗವರ್ನರ್ ಜನರಲ್ ಆಗಿದ್ದರು. ಭಾರತ ಗಣರಾಜ್ಯಗೊಂಡ ಬಳಿಕ ಇದಕ್ಕೆ ರಾಷ್ಟ್ರತಿ ಭವನ ಎಂದು ಸಂಭೋದಿಸಲಾಯಿತು.

ವೈಟ್ ಹೌಸ್ಗಿಂತಲೂ ದೊಡ್ಡದು!
1912ರಲ್ಲಿ ರಾಷ್ಟ್ರಪತಿ ಭವನದ ನಿರ್ಮಾಣ ಕಾರ್ಯ ಆರಂಭವಾಯಿತು. ಅದು ಮುಕ್ತಾಯಗೊಂಡಿದ್ದು 1929ರಲ್ಲಿ. ರಾಷ್ಟ್ರಪತಿ ಭವನವನ್ನು ಅಮೆರಿಕದ ಅಧ್ಯಕ್ಷರ ನಿವಾಸ ವೈಟ್ ಹೌಸ್ಗೆ ಹೋಲಿಸಿದರೆ ಅದರ ವಿಸ್ತೀರ್ಣ ಕೇಲವ 18 ಎಕರೆ. ಆದರೆ, ನಮ್ಮ ರಾಷ್ಟ್ರಪತಿ ಭವನ ವಿಶಾಲವಾದ 320 ಎಕರೆ ಪ್ರದೇಶಕ್ಕೆ ಚಾಚಿಕೊಂಡಿದೆ. ವಿಶೇಷ ರೀತಿಯಲ್ಲಿ ನಿರ್ಮಸಿರುವ ಮುಘಲ್ ಗಾರ್ಡನ್ಸ್ ಕೂಡ ಇಲ್ಲಿನ ಮತ್ತೊಂದು ಆಕರ್ಷಣೆ. ರಾಷ್ಟ್ರಪತಿಗಳಾದವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಇದನ್ನು ಬೆಳೆಸಿದ್ದಾರೆ.

ಲೂಟಿನ್ಸ್ ನಿರ್ಮಿಸಿದ ಅರಮನೆ:
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಬಣ್ಣ ಬಣ್ಣದ ಮಾರ್ಬಲ್ಗಳಿಂದ ಶೃಂಗರಿಸಲ್ಪಟ್ಟಿದ್ದು, ಅತ್ಯಂತ ಐಷಾರಾಮಿ ಕೊಠಡಿಯಾಗಿದೆ. ಇಲ್ಲಿ ವಾಸವಿರುವ ರಾಷ್ಟ್ರಪತಿಗಳಿಗಾಗಿ ಒಂದು ಡ್ರಾಯಿಂಗ್ ಹಾಲ್, ಬ್ಲಾಂಕ್ವೆಟ್ ಹಾಲ್, ಟೆನ್ನಿಸ್ ಕೋಟರ್್, ಕ್ರಿಕೆಟ್ ಫೀಲ್ಡ್ ಹಾಗೂ ಮ್ಯೂಸಿಯಂ ಮುಂತಾದ ಸವಲತ್ತುಗಳನ್ನು ಒದಗಿಸಲಾಗಿದೆ.
ರಾಷ್ಟ್ರಪತಿ ಭವನವನ್ನು ವಿನ್ಯಾಸಗೊಳಿಸಿ ನಿಮರ್ಿಸಿದ ವಾಸ್ತುಶಿಲ್ಪಿ ಎಡ್ವರ್ಡ್ ಲೇಂಡ್ಲೀರ್ ಲೂಟಿನ್ಸ್. ಇಟಲಿಯ ಶಿಲ್ಪಶಾಸ್ತ್ರ ಈತನಿಗೆ ಆದರ್ಶ. ಈ ಕಟ್ಟಡದ ನಿಮರ್ಾಣದಲ್ಲಿ ಎಲ್ಲಿಯೂ ಕಬ್ಬಿಣವನ್ನು ಉಪಯೋಗ ಮಾಡಿಲ್ಲ. ಈ ಅರಮನೆಗೆ ಭಾರತೀಯ ದೇವಾಲಯಗಳ ಗಂಟೆಗಳನ್ನು ಕಟ್ಟಡದ ಕಂಬಗಳಲ್ಲಿ ಬಳಸಿರುವುದು ಮತ್ತೊಂದು ವಿಶೇಷ.
ಬೌದ್ಧ ಕಟಾಂಜನಗಳು, ಹಿಂದು ಮತ್ತು ಜೈನ ದೇವಾಲಯದ ಕಲ್ಲುಬಂಡೆಗಳು, ಛತ್ರಿಗಳು, ಮೊಘಲರ  ಕಾಲದ  ಕಲ್ಲಿನ ಜಾಲರಿಗಳು, ಕಲ್ಲು ಚಪ್ಪಡಿಯ ಛಜ್ಜಾಗಳು ಹೀಗೆ ಹುಡುಕುತ್ತ ಹೋದರೆ ರಾಷ್ಟ್ರಪತಿ ಭವನದಲ್ಲಿ ಭಾರತೀಯ ವಾಸ್ತು ಶಿಲ್ಪದ ಪ್ರಭಾವ ತೀರಾ ಕಡಿಮೆ. ಇಷ್ಟು ಮಾತ್ರವಲ್ಲ ಗಾಲ್ಫ್ ಮೈದಾನ, ಈಜುಕೊಳ, ಏಕಕಾಲದಲ್ಲಿ ಸಾವಿರ ಮಂದಿಗೆ ಅಡುಗೆ ಮಾಡಬಹುದಾದ ಅಡುಗೆ ಮನೆ. ಲಾಂಡ್ರಿ, ಕ್ಷೌರಿಕನ ಅಂಗಡಿ, ಅಂಚೇ ಕಚೇರಿ ಕೂಡ ರಾಷ್ಟ್ರಪತಿ ಭವನದಲ್ಲಿದೆ.
ರಾಷ್ಟ್ರಪತಿ ಕಾಯರ್ಾಲಯದ 350 ಸಿಬ್ಬಂದಿ, ಮನೆಯೊಳಗಿನ ಕೆಲಸಕ್ಕೆ 220 ನೌಕರರು, 50 ಸದಸ್ಯರ ಅಡುಗೆ ತಂಡ, ತೋಟದಲ್ಲಿ ಕೆಲಸಮಾಡಲು 165 ಕಾರ್ಮಿಕರು, ಸ್ವಚ್ಛತಾ ಕಾರ್ಯಕ್ಕೇಂದೇ 150 ಕಾಮರ್ಿಕರು ಪ್ರತಿನಿತ್ಯ ಇಲ್ಲಿ ಕೆಲಸ ನಿರ್ವಹಿಸುತ್ತಾರೆ.
ಒಳ ಅಲಂಕಾರಗಳೆಲ್ಲಾ ಬ್ರಿಟಿಷ್ ಪ್ರಭಾವಿತ. ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಲದಲ್ಲಿ ಸೇರ್ಪಡೆಯಾದ ಶೋಕೇಸ್ ಒಂದೇ ಇಲ್ಲ ಹೊಸತು. ಅದರ ಪಕ್ಕದಲ್ಲಿ ಔಪಚಾರಿಕ ಭೇಟಿಯ ಕೋಣೆಗಳಿವೆ. ಉತ್ತರದ ಡ್ರಾಯಿಂಗ್ ರೂಮ್ನಲ್ಲಿ ವಿದೇಶದ ಗಣ್ಯರನ್ನು ರಾಷ್ಟ್ರಪತಿ ಭೇಟಿ ಮಾಡುತ್ತಾರೆ. ಪಕ್ಕದಲ್ಲಿಯೇ ಇರುವ ಇನ್ನೊಂದು ಸಭಾಂಗಣ ರಾಜ್ಯಪಾಲರ ಭೇಟಿಗೆ ಮೀಸಲು.



No comments:

Post a Comment