ಜೀವನಯಾನ

Sunday, March 11, 2012

ಜೇನಿನ ಸಂಜೀವನ


ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಾತಿನ ಅರ್ಥವನ್ನು ಜೇನುಹುಳುಗಳಿಂದ ಕಲಿಯಬೇಕು. ಇವುಗಳದ್ದು ಒಂದು ಅದ್ಭುತ ಪ್ರಪಂಚ. ಮನುಷ್ಯನ ಜೀವನಕ್ಕೆ ಹೋಲುವ ಹಲವಾರು ಸಂಗತಿಗಳನ್ನು ಪ್ರಕೃತಿ ಇವುಗಳಿಗೆ ನೀಡಿದೆ. ಯಂತ್ರಗಳ ಬಳಕೆಯನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಜೇನಿನ ಪ್ರಪಂಚದಲ್ಲಿ ಹಾಸು ಹೊಕ್ಕಾಗಿವೆ.


ಸಾರ್ಮಾಜ್ಯಕ್ಕೆ ಒಬ್ಬಳೇ ರಾಣಿ:
ಜೇನುಹಳು ಹಪೀಸ್ ಎನ್ನುವ ಕೀಟಗಳ ವಂಶಕ್ಕೆ ಸೇರಿದ ನೊಣ. ಇದು ಎಲ್ಲಾ ಋತುವಿನಲ್ಲೂ ತುಪ್ಪವನ್ನು ಸಂಗ್ರಹಿಸುತ್ತವೆ. ಇವು ಜೇನನ್ನು ಸಂಗ್ರಹಿಸುವ ಕ್ರಿಯೆಯೇ ರೋಚಕ. ಒಂದು ಜೇನು ಗೂಡಿನಲ್ಲಿರುವ ಹುಳಗಳು ಒಂದು  ಕಿಲೋ ಜೇನು ಸಂಗ್ರಹಿಸಲು 90 ಸಾವಿರ ಮೈಲಿಯನ್ನು ಕ್ರಮಿಸುತ್ತವೆ. ಅಂದರೆ ಇದು ಭೂಮಿಯ ಪರಿಧಿಯನ್ನು ಮೂರು ಬಾರಿ ಸುತ್ತಿದ್ದಕ್ಕೆ ಸಮ. ಈ ಒಂದು ಉದಾಹರಣೆಯೇ ಜೇನಿನ ಕಾರ್ಯಕ್ಷಮತೆಗೆ ಸಾಕ್ಷಿ. ಒಂದು ಜೇನುಹುಳು ತನ್ನ ಪೂರ್ಣ ಜೀವಿತಾವಧಿಯಲ್ಲಿ ಸರಾಸರಿ ಒಂದು ಚಮಚದ 1/12ರಷ್ಟು ಜೇನು ತುಪ್ಪ ಸಂಗ್ರಹಿಸುತ್ತದೆ. ಒಂದು ಜೇನು ಗೂಡಿನಲ್ಲಿ  20 ರಿಂದ 60 ಸಾವಿರ ಜೇನು ಹುಳಗಳು ವಾಸಮಾಡುತ್ತದೆ. ಈ ಸಾರ್ಮಾಜ್ಯ ಆಳುವುದು ಒಂದೇ ರಾಣಿಜೇನು. ಗೂಡಿನಲ್ಲಿ ಹೆಣ್ಣು ಜೇನು ಮಾತ್ರ ಕೆಲಸಗಾರ ಹುಳಗಳು. ಇವು ಬದುಕಿರುವುದು ಆರು ತಿಂಗಳು ಮಾತ್ರ. 
ಇಷ್ಟರಲ್ಲಿಯೇ ಎಲ್ಲಾ ಕೆಲಸವನ್ನು ಮಾಡುತ್ತವೆ. ಜೇನುಹುಳು ಒಂದು ತೊಟ್ಟು ಜೇನನ್ನು ಸಂಗ್ರಹಿಸಲು 50 ರಿಂದ 100 ಹೂಗಳ ಮಕರಂದ ಸಂಗ್ರಹಿಸುತ್ತದೆ. ಜೇನುಹುಳು 170 ರೀತಿಯ ಹೂವುಗಳ ಮಕರಂದವನ್ನು ಬೇರ್ಪಡಿಸಿ ಸಂಗ್ರಹಿಸಬಲ್ಲವು. ಗಂಡು ಹುಳು ಯಾವುದೇ ಕೆಲಸ ಮಡುವುದಿಲ್ಲ. ಇದು ಹೆಣ್ಣಿಗಿಂತಲೂ ದೊಡ್ಡದಾಗಿರುತ್ತದೆ. ರಾಣಿಯ ಸೇವೆಮಾಡುವುದೇ ಇವುಗಳ ಮುಖ್ಯ ಕೆಲಸ. ರಾಣಿ ಜೇನು 5ವರ್ಷ ಬದುಕಿರುತ್ತದೆ. ಇದು ಬೇಸಿಗೆಯಲ್ಲಿ ತುಂಬಾ ಬ್ಯುಸಿ. ಗೂಡಿನಲ್ಲಿ ಕೆಲಸಗಾರರ ಸಂಖ್ಯೆ ಕಡಿಮೆಯಾದಾಗ ಒಂದೇ ದಿನ 2500 ಮೊಟ್ಟೆಗಳನ್ನು  ಇಡುತ್ತದೆ. ಗುಡಿನಲ್ಲಿ ಸಂತಾನ ಸಾಮಥ್ರ್ಯ ಇರುವುದು ರಾಣಿಗೆ ಮಾತ್ರ. ಗೂಡಿನ ಸದಸ್ಯರನ್ನು ಗುರುತಿಸಲು ಪ್ರತಿ ಗೂಡಿಗೂ ಅದರದೇ ಆದ ವಾಸನೆಯಿರುತ್ತದೆ. ಹೀಗಾಗಿ ಗೂಡಿಗೆ ಬೇರೆ ಯಾರೇ ಬಂದರೂ ಪ್ರವೇಶ ನಿಷಿದ್ಧ.

ಆಹಾರಕ್ಕಾಗಿ ಜೇನು ಸಂಗ್ರಹಣೆ:
ಜೇನುಹುಳುವಿನ ರೆಕ್ಕೆಗಳು ಬಲಿಷ್ಠ ಮತ್ತು ವೇಗವಾಗಿರುತ್ತದೆ. ಇದಕ್ಕೆ ಸಾಮಾನ್ಯ ಹುಳುವಿನಂತೆ ಆರು ಕಾಲು ಆದರೆ ಐದು ಕಣ್ಣು ಮತ್ತು ಎರಡು ಜೊತೆ ರೆಕ್ಕೆಗಳಿರುತ್ತದೆ.  ಈ ರೆಕ್ಕೆಗಳು ಒಂದು ಸೆಕೆಂಡಿಗೆ 200 ಬಾರಿ ಕಂಪಿಸುವುದರಿಂದ ಬಜ್..... ಎನ್ನುವ ಶಬ್ದಹೊರಡುತ್ತದೆ. ಇವು ಒಂದು ಗಂಟೆಗೆ 15 ಮೈಲಿದೂರ ಹಾರಬಲ್ಲದು. ವಿಶೇಷವೆಂದರೆ ಜೇನು ಹುಳು ಎಂದಿಗೂ ನಿದ್ದೆ ಮಾಡುವುದಿಲ್ಲ. ಜೇನುಹುಳು ಮರಿಗಳಿಗಾಗಿ ಆಹಾರಕ್ಕಾಗಿ ಜೇನನ್ನು ಸಂಗ್ರಹಿಸುತ್ತದೆ. ಚಳಿಗಾಲದಲ್ಲಿ ಹೂವಿನ ಮಕರಂದ ಸಿಗದ ಕರಣ ಈ ಋತುವಿನಲ್ಲಿ ಮಾತ್ರ ತಾನು ಸಂಗ್ರಹಿಸಿದ ಜೇನನ್ನು ಕುಡಿಯುತ್ತದೆ.
 
 ಜೀವಾಮೃತ : 

ಜೇನು ಒಂದು ಜೀವಾಮೃತ. ಮಾನವನಿಗಾಗಿ ಆಹಾರ ನೀಡುವ ಕೆಲವೇ ಕೆಲವು ಕೀಟಗಳಲ್ಲಿ ಜೇನು ಸಹ ಒಂದು. ಇದರಲ್ಲಿರುವ ಔಷಧಿಯ ಗುಣಗಳು ಅಗಾಧ. ಜೇನು ತುಪ್ಪ ಸಕ್ಕರೆಗಿಂತ ಸಿಹಿ. ಇದರಲ್ಲಿ ಅನೇಕ ರಾಸಾಯನಿಕಗಳು ಇರುವುದರಿಂದ ವರ್ಷಗಟ್ಟಲೆ ಇಟ್ಟರೂ ಕೆಡುವುದಿಲ್ಲ. ಜೇನಿನಲ್ಲಿ ಪ್ರೋಟೀನ್, ವಿಟಮಿನ್, ಎಂಜೈಮ್ ಮತ್ತು ನೀರು ಮಿಳಿತವಾಗಿರುತ್ತದೆ. ಕೆಲಸಗಾರ ಹುಳಗಳು ಪರಾಗ ಚೀಲದಲ್ಲಿ ಸಂಗ್ರಹಿಸಿ ತಂದ ಹೂವಿನ ಮಕರಂದವನ್ನು ತೆರೆದ ಹುಟ್ಟಿನ ಕವಾಟದಲ್ಲಿ ಸಂಗ್ರಹಿಸುತ್ತದೆ. ರೆಕ್ಕೆಗಳ ಗಾಳಿಗೆ ಇದರಲ್ಲಿನ ನೀರಿನ ಅಂಶ ಆವಿಯಾಗಿ ಗಟ್ಟಿಯಾದ ಜೇನು ಸಿದ್ಧಗೊಳ್ಳುತ್ತದೆ. ಜೇನು ಹೂವಿನ ಮಕರಂದವನ್ನು ಹೀರುವಾಗ ಪರಾಗ ಸ್ಪರ್ಶದ ಮೂಲಕ ಸಸ್ಯಗಳ ಅಭಿವೃದ್ಧಿಗೆ ನೆರವಾಗುತ್ತದೆ. ಬಹುತೇಕ ಹೂವಿನ ಸಸ್ಯಗಳು ಜೇನುಹುಳದ ಪರಾಗ ಸ್ಪರ್ಶದಿಂದಲೇ ಬೆಳವಣಿಗೆಯಾಗುತ್ತದೆ.


ಹೆಜ್ಜೇನು ಅಥವಾ ಕಾಡು ಜೇನು. 
 ಈ ಪ್ರಭೇಧ ಸಾಮಾನ್ಯವಾಗಿ ಭಾರತ, ಶ್ರೀಲಂಕ, ಪಾಕಿಸ್ತಾನ, ಇಂಡೋನೇಷಿಯಾ, ಥೈಲ್ಯಾಂಡ್, ಮಲೇಷಿಯ ಮುಂತಾದ ದೇಶಗಳ ಕಾಡುಗಳಲ್ಲಿ ಕಂಡುಬರುತ್ತದೆ.  ಇವು ಹೆಚ್ಚಾಗಿ ಎತ್ತರವಾದ ಮರಗಳ ಬೀಸು ಕೊಂಬೆಗಳ ಮೇಲೆ, ಕಟ್ಟಡಗಳು, ಕಲ್ಲು ಬಂಡೆಗಳು ನೀರಿ ಟ್ಯಾಂಕ್ಗಳ ಮೇಲೆ ಗೂಡುಕಟ್ಟುತ್ತದೆ. ಜೇನು ಹುಳು ಕಚ್ಚಿದರೆ ಅದು ತನ್ನ ಮಕರಂದ ಹೀರುವ ಅಂಬನ್ನು ಮೈಗೆ ಚುಚ್ಚಿ ಹೊರಟು ಹೋಗುತ್ತದೆ. ಹೀಗಾಗಿ ಕಚ್ಚಿದ ಕೆಲವೇ ನಿಮಿಷದಲ್ಲಿ ಜೇನುಹುಳು ಪ್ರಾಣ ಬಿಡುತ್ತದೆ. 


 

No comments:

Post a Comment