ಜೀವನಯಾನ

Sunday, March 4, 2012

ಕಾಮನಬಿಲ್ಲಿನ ಗುಟ್ಟಿನ ಕಥೆ


  • ಮೂಡುವುದು ಹೇಗೆ?
 ಇದೊಂದು ಶತಶತಮಾನಗಳ ವಿದ್ಯಮಾನ. ಸೂರ್ಯನ ಬೆಳಕು ಸಣ್ಣ ನೀರಿನ ಹನಿಗಳ ಮೇಲೆ ಬಿದ್ದಾಗ ಬೆಳಕು ಏಳು ಬಣ್ಣಬಳ ಪಟ್ಟಿಯಾಗಿ ಒಡೆಯುತ್ತದೆ. ಇದೇ ಮಳೆಲ್ಲು ಅಥವಾ ಕಾಮನಬಿಲ್ಲು. ಲಕ್ಷಾಂತರ ಸಣ್ಣ ಸಣ್ಣ ನೀರಿನ ಹನಿಗಳ ಪ್ರತಿಫಲನದಿಂದ ಇದು ರೂಪಗೊಳ್ಳುತ್ತದೆ. ನೀರಿನ ಹನಿಗಳು ಬೆಳಕಿನ ಕಿರಣವನ್ನು ಏಳು ಬಣ್ಣದ ಪಟ್ಟಿಯಾಗಿ ಒಡೆಯುವ ಪಟ್ಟಕದಂತೆ ಕಾರ್ಯಮಾಡುತ್ತದೆ. ಇದರಲ್ಲಿ ಕ್ರಮವಾಗಿ ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಉದಾ ನೀಲಿ ಮತ್ತು ನೇರಳೆ ಬಣ್ಣಗಳಿರುತ್ತದೆ. ಕಾಮನಬಿಲ್ಲಿನಲ್ಲಿ  ಏಳು ಬಣ್ಣಗಳು ಅಡಗಿವೆ ಎನ್ನುವುದನ್ನು ಖ್ಯಾತ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಮೊದಲಬಾರಿಗೆ ಕಂಡುಹಿಡಿದ. ಮಳೆಯನ್ನು ಹೊರತು ಪಡಿಸಿ ಮಂಜು, ತುಂತುರುಹನಿ, ಇಬ್ಬನಿಗಳ ಮೇಲೆ ಬೆಳಕು ಬಿದ್ದಾಗಲೂ ಕಾಮನಬಿಲ್ಲು ಕಾಣಿಸುತ್ತದೆ. ಕೃತಕ ವಾತಾವರಣ ನಿರ್ಮಿಸಿ ಸಹ ಕಾಮನಬಿಲ್ಲನ್ನು ಮೂಡಿಸಬಹುದು. ಜಲಪಾತಗಳು ಮತ್ತು ಕಾರಂಜಿಯ ಸಮೀಪದಲ್ಲಿಯೂ ಮಳೆಬಿಲ್ಲಿನ ಪರಿಣಾಮ ಕಾಣಸಿಗುತ್ತದೆ. ಮಳೆ ಸುರಿಯುತ್ತಿರುವಾಗ  ಮೋಡದಿಂದಾಗಿ ಅರ್ಧದಷ್ಟು ಆಕಾಶದಲ್ಲಿ ಕತ್ತಲೆ ಆವರಿಸಿದ್ದರೆ ಇನ್ನರ್ಧ ಆಕಾಶದಲ್ಲಿ ಸೂರ್ಯನ ಬೆಳಕಿದ್ದಾಗ ಮಳೆಬಿಲ್ಲು ನಯನ ಮನೋಹರವಾಗಿ ರೂಪಗೊಳ್ಳೂತ್ತದೆ. ಕಾಮನಬಿಲ್ಲನ್ನು ನೋಡುವಾಗ ಸೂರ್ಯ ನಮ್ಮ ಹಿಂದಿನಿಂದ ಬೆಳಗುತ್ತಿರುತ್ತಾನೆ. ಕಾಮನಬಿಲ್ಲು ಮೂಡಬೇಕೆಂದರೆ ಬಿಸಿಲು ಮತ್ತು ಮಳೆ ಒಟ್ಟಿಗೆ ಸೇರಬೇಕು. ಆಕಾಶದಲ್ಲಿ ಬೃಹದಾಕಾರದ ಬಣ್ಣದ ಕಮಾನು ನಿಲ್ಲಿಸಿದಂತೆ ಭಾಸವಾಗುವ ಕಾಮನಬಿಲ್ಲಿನ ಪೂರ್ಣಭಾಗ ನಮಗೆ ಗೋಚರಿಸುವುಲ್ಲ. ಆದರೆ ವಿಮಾನದಲ್ಲಿ ಹಾರಾಡುತ್ತಿರುವಾಗ ಪೂರ್ಣ ಗೋಳಾಕಾರದ ಕಾಮನಬಿಲ್ಲನ್ನು ವೀಕ್ಷಿಸಲು ಸಾಧ್ಯ. ದಕ್ಷಿಣ ಆಫ್ರಿಕಾ ಮಳೆಬಿಲ್ಲಿನ ದೇಶ ಎಂದೇ ಹೆಸರುವಾಸಿ.


  •  ಪ್ರತಿಫಲನ ಮಳೆಬಿಲ್ಲು ಅಂದರೇನು?
ಕಾಮನಬಿಲ್ಲಿನಲ್ಲಿಯೂ ವೈವಿಧ್ಯತೆ ಇದೆ. ಸಮುದ್ರ ಅಥವಾ ಜಲರಾಶಿಯ ಮೇಲೆ ಕಾಮನಬಿಲ್ಲು ಮೂಡಿದಾಗ ಪ್ರತಿಫಲನ ಮಳೆಬಿಲ್ಲು ಕಾಣಸಿಗುತ್ತದೆ. ಸೂರ್ಯನ ಬೆಳಕು ನೀರಿನ ಹನಿಗಳಿಂದ ಪ್ರತಿಫಲನವಾಗಿ ನಮಗೆ ತಲುಪುವ ಪೂರ್ವದಲ್ಲಿಯೇ ನದಿಯ ಮೇಲೆ ಬಿದ್ದು ಅದರಿಂದ ಪ್ರತಿಫಲನವಾಗಿ ಇನ್ನೊಂದು ಮಳೆಬಿಲ್ಲು ಅದರ ಪಕ್ಕದಲ್ಲಿಯೇ ಕಾಣಿಸಿಕೊಳ್ಳುತ್ತದೆ. ನೋಡುವಾಗ ಎರಡೂ ಬಿಲ್ಲುಗಳು ಒಮ್ಮಲೇ ಮೂಡಿಂದಂತೆ ಭಾಸವಾಗುತ್ತದೆ. ಸಣ್ಣದಾದ ಕೊಳಕು ನೀರಿನ ಹಳ್ಳದಲ್ಲಿಯೂ ಇದು ಗೋಚರಿಸುತ್ತದೆ.
  • ಹೆಚ್ಚುವರಿ ಮಳೆಬಿಲ್ಲು:
ಇದೊಂದು ವಿರಳ ವಿದ್ಯನಾನ. ಪ್ರಧಾನ ಮಳೆಬಿಲ್ಲಿಗೆ ತಾಗಿಕೊಂಡಂತೆ ತಳಭಾಗದಲ್ಲಿ ಹೆಚ್ಚುವರಿಯಾಗಿ ನೀಲಿಬಣ್ಣದ ಇನ್ನೊಂದು ಪಟ್ಟಿ ಮಸುಕಾಗಿ ಕಂಡುಬರುತ್ತದೆ ಇದೇ ಹೆಚ್ಚುವರಿ ಮಳೆಬಿಲ್ಲು.
  • ಕೇವಲ ತಾತ್ಕಾಲಿಕ.
ಮಳೆಬಿಲ್ಲು ಬೆಳಕಿನ ವಕ್ರೀಭವನನದ ಪರಿಣಾಮ. ಭೂಮಿಯಿಂದ 42 ಡಿಗ್ರಿ ಕೋನದಲ್ಲಿ ಕಾಮನಬಿಲ್ಲು ಮೂಡತ್ತದೆ. ಸೂರ್ಯ ಭೂಮಿಗೆ ಹತ್ತಿರವಾಂದಂತೆಲ್ಲಾ ದೊಡ್ಡ ಗಾತ್ರದ ಕಾಮನಬಿಲ್ಲು ಗೋಚರವಾಗುತ್ತದೆ. ಮಧ್ಯಾಹ್ನ ವೇಳೆಯಲ್ಲಿ ಕಾಮನಬಿಲ್ಲು ಮೂಡುವುದಿಲ್ಲ. ಮಳೆಬಿಲ್ಲು ಎಲ್ಲಿ ಹುಟ್ಟಿದೆ ಎಂದು ಗುರುತಿಸುವುದು ಅಸಾಧ್ಯ. ನೋಡುಗನಲ್ಲಿ ಭ್ರಮಾಲೋಕವನ್ನೇ ಇದು ಸೃಷ್ಟಿಸುತ್ತದೆ. ಆದರೂ ಇದೊಂದು ತಾತ್ಕಾಲಿಕ ಪ್ರಕ್ರಿಯೆ. ಬಾನಂಗಳದಲ್ಲಿ ಕೆಲವೇ ನಿಮಿಷಗಳಷ್ಟೇ ಬಣ್ಣವನ್ನು ಚಲ್ಲಿ ಲೀನವಾಗುತ್ತದೆ. ನಮ್ಮ ಕಣ್ಣೆದುರೇ ಕಾಮಬಿಲ್ಲು ರೂಪಗೊಂಡಂತೆ ಭಾಸವಾದರೂ ಮುಂದೆಸಾಗಿದಂತೆ ಇನ್ನೂ ಮುಂದೆ ಸಾಗಿ ಒಮ್ಮಲೇ ಕಣ್ಮರೆಯಾಗುತ್ತದೆ. ಕೆಲವೊಮ್ಮೆ ಪ್ರಕಾಶಮಾನವಾದ ಬೆಳದಿಂಗಳಿನಲ್ಲಿಯೂ ಅಪರೂಪವಾಗಿ ಚಂದ್ರನ ಸುತ್ತ ಕಾಮನಬಿಲ್ಲು ಉಂಟಾಗುತ್ತದೆ. ಅಷ್ಟೇ ಅಲ್ಲ ಅನ್ಯಗ್ರಹಗಳಲ್ಲಿಯೂ ಕಾಮನಬಿಲ್ಲು ಮೂಡುತ್ತದೆ. ಉದಾಹರಣೆಗೆ ಶನಿಗ್ರಹದ ಉಪಗ್ರಹ ಟೈಟನ್ ಮೇಲ್ಮೈ ಒದ್ದೆಯಾದ ಮೋಡಗಳಿದ ತುಂಬಿರುವುದರಿಂದ ಅಲ್ಲಿ ಸೂರ್ಯನ ಬೆಳಕು ಬಿದ್ದಾಗ ಕಾಮನಬಿಲ್ಲು ಉಂಟಾಗುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.




 

No comments:

Post a Comment