ಜೀವನಯಾನ

Monday, December 15, 2014

ಜಂತರ್ ಮಂತರ್ ಎಂಬ ಪುರಾತನ ತಾರಾಲಯ

ಇಂದಿನ ತಾಂತ್ರಿಕ ಯುಗದಲ್ಲಿ ಬೆರಳಿನ ತುದಿಯಲ್ಲೇ ನಮಗೆ ಬೇಕಾದ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಿದೆ. ಶತಮಾನಗಳ ಹಿಂದೆ ಕಾಲ, ಗ್ರಹಣ ಮತ್ತು ಅನೇಕ ಖಗೋಳ ಶಾಸ್ತ್ರದ ಬಗ್ಗೆ ಬಯಲಿನಲ್ಲಿ ಸ್ಥಾಪಿಸಿರುವ ಕಟ್ಟಡ, ಗೋಪುರ ಮತ್ತು ಗೋಲಾಕಾರದ ರಚನೆಯ ಸಹಾಯದಿಂದ ನಿಖರವಾಗಿ ಅರಿಯುತ್ತಿದ್ದರು. ಜಂತರ್ ಮಂತರ್ ಎನ್ನುವುದು ಈ ವಿಸ್ಮಯಕಾರಿ ಗಡಿಯಾರ ಮಾಪನ ಹೊಂದಿರುವ ಧಾಮ. ಜಂತರ್ ಅಂದರೆ ಯಂತ್ರ ಎಂತಲೂ ಮಂತರ್ ಅಂದರೆ ಸೂತ್ರ ಎಂದೂ  ಅರ್ಥವಿದೆ. ಹೀಗಾಗಿ ಜಂತರ್ ಮಂತರ್ ಅಂದರೆ ಕನ್ನಡದಲ್ಲಿ ಲೆಕ್ಕಾಚಾರ ಯಂತ್ರ ಎಂದು ಅರ್ಥ ಕಲ್ಪಿಸಬಹುದಾಗಿದೆ. ದೇಶದ ಐದು ಅತಿದೊಡ್ಡ ಖಗೋಳ ವೀಕ್ಷಣಾಲಯಗಳಲ್ಲಿ 
ಜಂತರ್ ಮಂತರ್ ಕೂಡಾ ಒಂದು.

ದೇಶದ ಐದು ಕಡೆ ನಿರ್ಮಿಸಲಾಗಿತ್ತು:
ಪ್ರಸ್ತುತ ರಾಜಸ್ಥಾನದ ಜೈಪುರ ಮತ್ತು ದೇಶದ ರಾಜಧಾನಿ ದೆಹಲಿಯಲ್ಲಿ ಜಂತರ್ ಮಂತರ್ ರಚನೆಗಳನ್ನು ಕಾಣಬಹುದು. ಜೈಪುರದಲ್ಲಿರುವ ಜಂತರ್ ಮಂತರ್ ರಚನೆಯಲ್ಲಿ ದೊಡ್ಡದಾಗಿದ್ದು, ಹೆಚ್ಚು ಪ್ರಸಿದ್ಧಿ ಪಡೆದಿದೆ. ರಜಪೂತ ದೊರೆ ಸವಾಯ್ ಜಯಸಿಂಗ್ ಈ ರಚನೆಗಳ ನಿರ್ಮಾಣಕಾರ. ದೇಶದ ಒಟ್ಟು ಐದು ಸ್ಥಳಗಳಲ್ಲಿ ಇಂತಹ ರಚನೆಯನ್ನು ನಿಮರ್ಿಸಲಾಗಿತ್ತು. ದೆಹಲಿ ಮತ್ತು ಜೈಪುರ್ಗಳನ್ನು ಹೊರತುಪಡಿಸಿ ಮಥುರಾ, ವಾರಾಣಸಿ ಹಾಗೂ ಉಜ್ಜಯಿನಿಗಳಲ್ಲಿ ಈ ರಚನೆಯನ್ನು ಜೈಸಿಂಗನು ನಿರ್ಮಿಸಿದ್ದನು. 1724ರಿಂದ 1738ರ ಅವಧಿಯಲ್ಲಿ ಈ ರಚನೆಗಳು ನಿಮರ್ಾಣಗೊಂಡಿವೆ. 1724ರಲ್ಲಿ ದೆಹಲಿ, 1728ರಲ್ಲಿ ಜೈಪುರ, 1734ರಲ್ಲಿ ಉಜ್ಜಯಿನಿ,  1737ರಲ್ಲಿ ವಾರಾಣಸಿ ಹಾಗೂ 1738ರಲ್ಲಿ ಮಥುರಾದಲ್ಲಿ ವೀಕ್ಷಣಾಲಯ ಸ್ಥಾಪಿಸಿದ ಬಗ್ಗೆ ದಾಖಲೆಗಳಿವೆ.

ತಾರಾ ಮಂಡಲ, ಗ್ರಹಣಗಳನ್ನು ತಿಳಿಯಲು ಬಳಕೆ:
ಈ ರಚನೆಗಳ ಹಿಂದಿರುವ ಉದ್ದೇಶವೆಂದರೆ ಖಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸುವುದು. ತಾರಾ ಮಂಡಲದಲ್ಲಾಗುವ ಹಲವು ಬದಲಾವಣೆಗಳು, ಗ್ರಹಣಗಳನ್ನು ತಿಳಿಯುವುದು. ಒಟ್ಟು 14 ಬಗೆಯ ಪ್ರಮುಖ ಜಾಮಿತಿಯ (ರೇಖಾಗಣಿತ) ರಚನೆಯನ್ನು ಜೈಪುರದ ಜಂತರ್ ಮಂತರ್ ವೀಕ್ಷಣಾಲಯದಲ್ಲಿ ಕಾಣಬಹುದು. ವಿವಿಧ ಭಂಗಿ ಹಾಗೂ ಕೋನಗಳಲ್ಲಿ ರಚಿಸಲಾದ ಈ ರಚನೆಯನ್ನು ವಿಶ್ಲೇಷಿಸುವ ಮೂಲಕ ಅಂದಿನ ಕಾಲದಲ್ಲಿ ತಾರೆಗಳ ಭ್ರಮಣೆ, ಗ್ರಹಣ, ಭೂಮಿಯ ಪ್ರದಕ್ಷಿಣೆಗಳ ಕುರಿತು ತಿಳಿಯಲಾಗುತ್ತಿತ್ತು. ಜೈಪುರದಲ್ಲಿರುವ ಜಂತರ್ ಮಂತರ್ನಲ್ಲಿ ಸಾಮ್ರಾಟ್ ಯಂತ್ರ ಎಂಬ ರಚನೆಯು ಎಲ್ಲಕ್ಕಿಂತ  ದೊಡ್ಡದಾಗಿದ್ದು, 90  ಅಡಿಗಳಷ್ಟು ಎತ್ತರವಿದೆ. ಇದರ ಮುಖವು ಜೈಪುರ ನಗರದ ಅಕ್ಷಾಂಶಕ್ಕೆ 27 ಡಿಗ್ರಿಯಷ್ಟು ಕೋನದಲ್ಲಿ ನಿಮರ್ಿಸಲಾಗಿದೆ. ಈ ರಚನೆಯು ದಿನದ ಸಮಯವನ್ನು ತನ್ನ ನೆರಳಿನ ಮೂಲಕ ಕರಾರುವಕ್ಕಾಗಿ ತಿಳಿಸುತ್ತದೆ. ಇಲ್ಲಿನ  ಪ್ರತಿಯೊಂದು ರಚನೆಯು ಅಳತೆ ಮಾಪನವನ್ನು ಒಳಗೊಂಡಿದೆ. ಉತ್ತಮ ಗುಣಮಟ್ಟದ ಮಾರ್ಬಲ್ ಮತ್ತು ಕಲ್ಲುಗಳಿಂದ ಜಂತರ್ ಮಂತರ್  ನಿಮರ್ಿಸಲಾಗಿದೆ. ಅಳತೆಯನ್ನು ಕರಾರುವಕ್ಕಾಗಿ ಮುದ್ರಿಸಲಾಗಿದೆ. 1948ರಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದೆ.  ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೂಲದಲ್ಲಿದ್ದ ಹಿತ್ತಾಳೆಯ ಫಲಕಗಳ ಬದಲು ಅಮೃತ ಶಿಲೆಯ ಫಲಕಗಳನ್ನು ಈಗ ಅಳವಡಿಸಲಾಗಿದೆ.

ಗಡಿಯಾರದಷ್ಟೇ ನಿಖರ ಸಮಯ!
ಸಾಮ್ರಾಟ್ ಯಂತ್ರವು ಎಷ್ಟು ನಿಖರವಾಗಿದೆ ಅಂದರೆ ಜೈಪುರದ ಸಮಯಕ್ಕೆ ಕೇವಲ ಎರಡು ಕ್ಷಣಗಳ ವ್ಯತ್ಯಾಸವಿದೆ. ಸಾಮ್ರಾಟ್ ಯಂತ್ರದ ಸನ್ ಡಯಲ್ (ಸೂರ್ಯನ ಬೆಳಕಿನಿಂದ ಸಮಯ ಹೇಳುವ ಗಡಿಯಾರ)ನ ನೆರಳು ಪ್ರತಿ ಸೆಕೆಂಡಿಗೆ ಒಂದು ಮಿ.ಮೀ.ಗಳಷ್ಟು ದೂರ ಚಲಿಸುತ್ತದೆ. ಇಂದಿಗೂ ಹಲವು ಜ್ಯೋತಿಷಿಗಳಿಂದ ಮದುವೆ ಮುಂಜಿಯಂತಹ ಶುಭ ಕಾರ್ಯಗಳಿಗೆ ಮುಹೂರ್ತವನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಜಂತರ್- ಮಂತರ್ ಉಪಯೋಗಿಸಲ್ಪಡುತ್ತವೆ. 

ಇತರ  ಯಂತ್ರಗಳು: 
ಇಲ್ಲಿರುವ ಇತರ ಪ್ರಮುಖ ಸಲಕರಣೆಗಳೆಂದರೆ, ಧ್ರುವ, ದಕ್ಷಿಣ, ನಾರಿವಾಲಯ, ರಾಶಿವಲ್ಯಗಳು, ಸಣ್ಣ ಸಾಮ್ರಾಟ್, ದೊಡ್ಡ ಸಾಮ್ರಾಟ್, ವೀಕ್ಷಕರ ಸ್ಥಾನ, ದಿಶಾ, ರಾಮ ಯಂತ್ರ, ಕಪಾಲಿ ಯಂತ್ರ, ಚಕ್ರ ಯಂತ್ರ,  ರಾಸಿವಾಲಯ ಯಂತ್ರ,  ಪಾಲ್ಭಾ ಯಂತ್ರ, ಜೈಪ್ರಕಾಶ್ ಯಂತ್ರ ದಿಗಾಂತ ಯಂತ್ರಗಳು.

Thursday, December 11, 2014

ವಿಶ್ವದ ಅತಿದೊಡ್ಡ ಉಪ್ಪಿನ ಮರುಭೂಮಿ!

ಗುಜರಾತಿನ ಕಚ್ ಮರುಭೂಮಿಗೆ ಹೊಂದಿಕೊಂಡಿರುವ ರಣ್ ಪ್ರದೇಶ ಸಂಪೂರ್ಣವಾಗಿ ಉಪ್ಪಿನಿಂದ ಆವೃತ್ತವಾಗಿದೆ. ಇದು ಜಗತ್ತಿನ ಅತಿದೊಡ್ಡ ಉಪ್ಪಿನ ಮರುಭೂಮಿ! ಇಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಬರೀ ಉಪ್ಪು ಮಣ್ಣು. ಬೂದು, ಕಪ್ಪು, ಬಳಿ ಬಣ್ಣದಲ್ಲಿ ಮಿನುಗುವ ಲವಣಗಳೇ ಕಾಣುತ್ತವೆ. 7,505 ಚದರ್ ಕಿ.ಮೀ.ಯಷ್ಟು ವಿಶಾಲ ಪ್ರದೇಶಕ್ಕೆ ಉಪ್ಪಿನ ಮರುಭೂಮಿ ವ್ಯಾಪಿಸಿದೆ. ಕುಟ್ಜಿ ಜನಾಂಗ ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ. ಗ್ರೇಟರ್ ರಣ್ ಮತ್ತು ಲಿಟ್ಲ್ (ಚಿಕ್ಕ) ರಣ್ ಎಂಬುದಾಗಿ ಎರಡು ಭಾಗಗಳಾಗಿ ಮರುಭೂಮಿ ವಿಂಗಡನೆಗೊಂಡಿದೆ. 
 

ನಿರ್ಮಾಣಗೊಂಡಿದ್ದು ಹೇಗೆ?
ಮರುಭೂಮಿಯ ಇನ್ನೊಂದು ಭಾಗದಲ್ಲಿ ಸಮುದ್ರವಿದೆ. ರಣ್ ಮರುಭೂಮಿ ಸಮುದ್ರ ಮಟ್ಟಕ್ಕಿಂತ 15 ಮೀಟರ್ ಎತ್ತರದಲ್ಲಿದೆ. ಮಳೆಗಾಲದಲ್ಲಿ ಸಮುದ್ರದ ನೀರು ಮರುಭೂಮಿಗೆ ನುಗ್ಗುತ್ತದೆ. ಮಳೆಗಾಲ ಮುಗಿದ ಬಳಿಕ ಈ ನೀರೆಲ್ಲಾ ಅಲ್ಲೇ ಇಂಗಿ ಉಪ್ಪಿನ ಅಂಶ ಶೇಖರಣೆಯಾಗುತ್ತದೆ.  ಬೇಸಿಗೆಯಲ್ಲಿ ನೀರು ಬತ್ತಿಹೋದಾಗ ರಣ್ನ ಜವುಗು ಉಪ್ಪಿನ ಪದರಗಳು ಬಿಳಿ ಹಿಮಪಾತದಂತೆ ಕಾಣುತ್ತವೆ. ಹೀಗಾಗಿ ಇದೊಂದು ಉಪ್ಪಿನ ಮರುಭೂಮಿ ಎನಿಸಿಕೊಂಡಿದೆ. ರಣ ಎಂಬ ಶಬ್ದ ಹಿಂದಿಯಿಂದ ಬಂದಿದ್ದು. ಹಿಂದಿಯಲ್ಲಿ ರಣ ಅಂದರೆ ಮರುಭೂಮಿ ಎಂದರ್ಥ.

ಸಿಂಧು ನದಿಯ ಕೆಸರು: 
 
ಶತಶತಮಾನಗಳಿಂದ ಬನಾಸ್, ಲೂನಿ, ಸರಸ್ವತಿ, ರೂಪೆನ್ ನದಿಗಳ ಕೆಸರುಗಳು ರಣ್ ಮರುಭೂಮಿಯನ್ನು ಜವುಗು ಪ್ರದೇಶವನ್ನಾಗಿ ರೂಪಿಸಿವೆ. 1917ರಲ್ಲಿ ಎರಗಿದ ಭೂಕಂಪದಿಂದಾಗಿ ಸಿಂಧು ನದಿ ಪಶ್ಚಿಮದ ಕಡೆ ಹರಿಯಲು ಆರಂಭಿಸಿದ ಪರಿಣಾಮ ರಣ್ ವಿಶಾಲವಾದ ಲವಣಾಂಶಯುಕ್ತ ಮರುಭೂಮಿಯ ನಿಕ್ಷೇಪವಾಯಿತು. ಇಂದು ಇಲ್ಲಿ ಹೇರಳ ಪ್ರಮಾಣದಲ್ಲಿ ಉಪ್ಪನ್ನು ಹೊರತೆಗೆಯಲಾಗುತ್ತಿದೆ. ಇದರಿಂದ ನೈಸಗರ್ಿಕ ಸೌದರ್ಯಕ್ಕೆ ಧಕ್ಕೆ ಉಂಟಾಗಿದೆ. ಇತ್ತೀಚಿನ ಸಂಶೋಧನೆಗಳಲ್ಲಿ ಹರಪ್ಪ ನಾಗರಿಕತೆಯ ಕುರುಹುಗಳು ಇಲ್ಲಿ ಪತ್ತೆಯಾಗಿವೆ.

ಕಾಡು ಕತ್ತೆಗಳ ಅಭಯಾರಣ್ಯ:

ಇದೊಂದು ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ವಿಶೇಷವಾಗಿ ಸಿದ್ಧಪಡಿಸಿದ ಜೀಪಿನಲ್ಲಿ ಮರುಭೂಮಿಯಲ್ಲಿ ಸುತ್ತಾಡಬಹುದು. ಅಲ್ಲದೆ, ಒಂಟೆ ಸಫಾರಿಯನ್ನೂ ಕೈಗೊಳ್ಳಬಹುದು. ಲಿಟ್ಲ್ ರಣ್ ಭಾರತೀಯ ಕಾಡು ಕತ್ತೆಗಳಿಗೆ ಹೆಸರುವಾಸಿಯಾಗಿದೆ. ಎತ್ತರದ ದ್ವೀಪ ಪ್ರದೇಶಗಳಲ್ಲಿ ಕತ್ತೆಗಳು ವಾಸಿಸುತ್ತವೆ. ಲಿಟ್ಲ್ ರಣ್ ಮರುಭೂಮಿಯನ್ನು ಕಾಡುಕತ್ತೆಗಳ ಅಭಯಾರಣ್ಯ ಎಂದು ಗುರುತಿಸಲಾಗಿದೆ.

ಅತೀ ಉಷ್ಣ ಪ್ರದೇಶ:

ಇದು ಭಾರತದ ಅತ್ಯಂತ ಉಷ್ಣ ಪ್ರದೇಶದಲ್ಲಿ ಒಂದು. ಇಲ್ಲಿನ ಸಾಮಾನ್ಯ ಉಷ್ಣಾಂಶವೇ 41 ರಿಂದ  49 ಡಿಗ್ರಿಯ ವರೆಗೆ ಇರುತ್ತದೆ. ಡಿಸೆಂಬರ್ ಮಧ್ಯ ಭಾಗದಲ್ಲಿ ರಣ್ ಉತ್ಸವ ನಡೆಯುತ್ತದೆ. ಉತ್ಸವ ನಡೆಯುವ  ಸಂದರ್ಭ ಈ ಮರುಭೂಮಿ ವೀಕ್ಷಣೆಗೆ ಪ್ರಶಸ್ತವಾದ ಸಮಯ. ಈ ವೇಳೆ ಇಲ್ಲಿ ಸರ್ಕಾರದ ವತಿಯಿಂದ ನೂರಾರು ಟೆಂಟ್ಗಳನ್ನು ಹಾಕಲಾಗುತ್ತದೆ. ಜನರಿಗೆ ಮರುಭೂಮಿ ತೋರಿಸಲು ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತದೆ. ಫೋಟೋಗ್ರಫಿ ಹಾಗೂ ಪಕ್ಷಿ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ತಾಣ. ಗೂಬೆ, ನೆಲಗುಬ್ಬಿಗಳನ್ನು ಇಲ್ಲಿ ಕಾಣಬಹುದು. ರಣ್ ಮರುಭೂಮಿ ಪಾಕಿಸ್ತಾನದ ಗಡಿಗೆ ತೀರಾ ಸಮೀಪವಾಗಿದೆ. ಇಲ್ಲಿ ಭೇಟಿ ನೀಡಲು ಪೊಲೀಸರಿಂದ ಮೊದಲೇ ಅನುಮತಿ ಪಡೆದುಕೊಳ್ಳಬೇಕು!


Wednesday, December 3, 2014

ಜ್ವಾಲಾಮುಖಿಗಳ ತವರು ಹವಾಯಿ ದ್ವೀಪ ಸಮೂಹ

ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖಿಯ ನಿರಂತರ ಆಟದಿಂದ ಉಂಟಾದದ್ದೇ ಈ ಹವಾಯಿ ದ್ವೀಪ ಸಮೂಹ.
ಸನಿಹದಿಂದ ಜ್ವಾಲಾಮುಖಿಗಳನ್ನು ನೋಡಲು ಹವಾಯಿ ಅತ್ಯಂತ ಪ್ರಶಸ್ತವಾದ ಸ್ಥಳ. ಹವಾಯಿ ದ್ವೀಪಗಳು ಸುಮಾರು 137 ಸಣ್ಣ ಸಣ್ಣ ದ್ವೀಪಗಳನ್ನು ಒಳಗೊಂಡ ದ್ವೀಪಮಾಲೆ. ಅಗ್ನಿ ಪರ್ವತಗಳ ಶಿಖರ ವೃಂದವೇ ಇಲ್ಲದೆ.
ಸುಂದರ ಸಮುದ್ರ ತೀರಗಳು, ವರ್ಣರಂಜಿತ ಉಡುಗೆ ತೊಡುಗೆಗಳು, ವಿಶಿಷ್ಟ ಭಾಷೆ ಸಂಗೀತ, ಆಚರಣೆಗಳು, ಹಸಿರು ಕಾನನಗಳು,  ಬೆಂಕಿ ಕಾರುವ ಜ್ವಾಲಾಮುಖಿಗಳು, ಮೋಹಕ ಜಲಪಾತಗಳು ಹೀಗೆ ಎಲ್ಲರೀತಿಯ ಪೃಕೃತಿ ಸೊಗಸನ್ನು ಈ ದ್ವೀಪ ಸಮೂಹಗಳೊಂದರಲ್ಲಿಯೇ ಕಾಣಬಹುದು.



ದ್ವೀಪ ಸಮೂಹ:
ಹವಾಯಿ ದ್ವೀಪ ಸಮೂಹದಲ್ಲಿ ಕ್ವಾಹಿ, ಒಹಹೊ, ಮೊಲಕಯಿ, ಲನೈಯಿ, ಮಾಯಿ, ಬಿಗ್ ಐಲೆಂಡ್ ಎಂಬ 6 ದ್ವೀಪಗಳಿವೆ. ಒಂದೊಂದು ದ್ವೀಪದಲ್ಲೂ ಒಂದೊಂದು ವಿಶಿಷ್ಟತೆ. ಇಲ್ಲಿನ ದ್ವೀಪಗಳಲ್ಲಿ ಬಿಗ್ ಐಲೆಂಡ್ ಅತ್ಯಂತದೊಡ್ಡ ದ್ವೀಪ.
ಜ್ವಾಲಾಮುಖಿಯಿಂದ  ಹರಿದುಬಂದ ಲಾವಾರಸ ತಣ್ಣಗಾಗಿ ಲಾವಾಕ್ ಸೃಷ್ಟಿಯಾಗಿದೆ. ಹೀಗಾಗಿ ಎತ್ತ ಕಣ್ಣು ಹಾಯಿಸಿದರೂ ಕಪ್ಪನೆಯ ಲಾವಾ ಶಿಲೆಗಳೇ ಕಂಡು ಬರುತ್ತವೆ.


ವಾಲ್ಕೆನೋ ನ್ಯಾಷನಲ್ ಪಾರ್ಕ್:
1916ರಲ್ಲಿ ಸ್ಥಾಪನೆಯಾದ ವಾಲ್ಕೆನೋ ನ್ಯಾಷನಲ್ ಪಾಕರ್್ನಲ್ಲಿ ಹವಾಯಿ ಜ್ವಾಲಾಮುಖಿಗಳು ಇಂದಿಗೂ ಜೀವಂತವಾಗಿವೆ.
ಇಲ್ಲಿ ಪ್ರಮುಖವಾಗಿ ಕಿಲಯಿಯಾ ಮತ್ತು ಮೌನಲೂ ಎಂಬ ಎರಡು ಅಗ್ನಿ ಪರ್ವತಗಳಿವೆ. 1984ರಿಂದಲೂ ಕಿಲಯಿಯಾ ಜ್ವಾಲಾಮುಖಿ ನಿರಂತರವಾಗಿ ಸಿಡಿಯುತ್ತಲೇ ಇದೆ.  ಹೀಗಾಗಿ ಕಿಲಯಿಯಾ ಜ್ವಾಲಾಮುಖಿ ವಿಶ್ವದಲ್ಲೇ ಸಕ್ರಿಯ ಜ್ವಾಲಾಮುಕಿ ಎನಿಸಿಕೊಂಡಿದೆ. 330000 ಎಕರೆ ಪ್ರದೇಶಕ್ಕೆ ಶಿಖರ ವ್ಯಾಪಿಸಿದೆ.
ಜ್ವಾಲಾಮುಖಿ ಪಾರ್ಕ್ ನ   ಹೃದಯ ಭಾಗದಲ್ಲಿ ಹಬ್ಬಿರುವುದೇ ಕ್ರೇಟರ್ ರೋಡ್. ಇಲ್ಲಿ ಸಂಚರಿಸುವಾಗ ನೆಲದ ಆಳದಿಂದ ಹೊರಹೊಮ್ಮುವ ಬಿಸಿ ಹವೆ (ಸ್ಟೀಮ್ ಮೆಂಟ್ಸ್) ನಮ್ಮನ್ನು ತುಂಬಿಕೊಳ್ಳುತ್ತವೆ.  ಜ್ವಾಲಾಮುಖಿಗಳ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ಇದರಷ್ಟು ಪ್ರಶಸ್ತ ಸ್ಥಳ ಇನ್ನೊಂದಿಲ್ಲ. ಇಲ್ಲಿನ ಜ್ವಾಲಾಮುಖಿಗಳ ಬಗ್ಗೆ ಅಧ್ಯಯನ ನಡೆಸಲು ವೀಕ್ಷಣಾಲಯ ಆರಂಭಿಸಿದ ವಿಜ್ಞಾನಿ ಥಾಮಸ್ ಜಾಗರ್ ಹೆಸರಿನಲ್ಲಿ ಮ್ಯೂಸಿಯಂ ವೊಂದನ್ನು ಸ್ಥಾಪಿಸಿಲಾಗಿದೆ.



 ಮ್ಯೂಸಿಯಂ ಪಕ್ಕದಲ್ಲಿ ಹಲಿಮಮಾವು ಕಂದಕ ಕಾಣಸಿಗುತ್ತದೆ. ಈ ಕಂದಕ ಸುಮಾರು 2000 ಅಡಿಯಷ್ಟು ಅಗಲ ಮತ್ತು 200 ಅಡಿ ಆಳವಾಗಿದೆ. ಹವಾಯಿಯನ್ ಜನರ ಪಾಲಿಗೆ ಇದು ಜ್ವಾಲಾಮುಖಿ ದೇವತೆ  "ಪಲೇ" ವಾಸಿಸುವ ಸ್ಥಳ. 70-80 ವರ್ಷಗಳ ಹಿಂದೆ  ಈ ಕಂದಕದಲ್ಲಿ ಕುದಿಯುವ ಲಾವಾ ಇತ್ತಂತೆ. ಈಗ ಇಲ್ಲಿ ಲಾವಾ ಕಂಡುಬರದಿದ್ದರೂ ಯಾವಾಗಲೂ ಹೊಗೆ ಉಗುಳುತ್ತಿರುತ್ತದೆ. ಇಡೀ ಕ್ರೇಟರ್ ರಿಂಗ್ ರೋಡ್ ಈ ಕಂದಕದ ಸುತ್ತ ಗಿರಕಿಹೊಡೆಯುತ್ತದೆ.
ಜ್ವಾಲಾಮುಖಿ ಪಾರ್ಕ್  ಇನ್ನೊಂದು ಆಕರ್ಷಣೆ ಚೈನ್ ಆಫ್ ಕ್ರೇಟರ್ಸ್.  ದಟ್ಟ ಕಾನನದ ನಡುವೆ ಹುದುಗಿರುವ ಇದು ಲಾವಾ ಹರಿದಾಗ ಆಗಿದ್ದಂತೆ. ಲಾವಾ ಘನೀಕರಿಸಿ ಸೃಷ್ಟಿಯಾಗಿರುವ ಈ ಗುಹೆಯಲ್ಲಿ ಬರೀ ಕತ್ತಲೇ ತುಂಬಿದೆ.
ಹವಾಯಿಯ ಇನ್ನೊಂದು ವಿಶೇಷತೆ 2 ಲೇನ್ ದಾರಿಗಳು. ಅಮೆರಿಕದಲ್ಲಿ ಬೇರೆಡೆ ಇರುವಂತೆ ಇಲ್ಲಿ ವೇಗವಾಗಿ ಸಂಚರಿಸುವಂತಿಲ್ಲ.
 
ವರ್ಣಮಾಲೆಯಲ್ಲಿ 12 ಅಕ್ಷರ!

ಹವಾಯಿ ಅಮೆರಿಕದ ಭಾಗವಾಗಿದ್ದರೂ, ಅಮೆರಿಕದಿಂದ 1500 ಮೈಲಿ ದೂರದಲ್ಲಿದೆ. ಜಗತ್ತಿನ ಏಕಾಂತ ಸ್ಥಳ ಎಂದೂ ಇದನ್ನು ಕರೆಯಲಾಗುತ್ತದೆ. ಹವಾಯಿ ಕೇವಲ 6.423 ಚದರ್ ಮೈಲಿ ವಿಸ್ತಾರವನ್ನು ಹೊಂದಿದೆ. ಹವಾಯಿಯನ್ನು ಅಲೋಹಾ ಸ್ಟೇಟ್ ಎಂಬ್ ನಿಕ್ನೇಮ್ ನಿಂದ ಕರೆಯಲಾಗುತ್ತದೆ. ಹವಾಯಿನ್ ವರ್ಣಮಾಲೆಯಲ್ಲಿ ಕೇಲವ 12 ಅಕ್ಷರಗಳಿವೆ. ಹವಾಯಿಯ ಧ್ವಜವೂ ಅಮೆರಿಕಕ್ಕಿಂತ ಭಿನ್ನ. ಅದರಲ್ಲಿ ಬ್ರಿಟನ್ಗೂ ಸ್ಥಾನ ಕಲ್ಪಿಸಲಾಗಿದೆ! 

Monday, November 24, 2014

ಸ್ಟೋನ್ಹೆಂಜ್

ಆದಿ ಮಾನವನ ಸಾಹಸ ಕತೆ


ಸುಮಾರು 5 ಸಾವಿರ ವರ್ಷಕ್ಕಿಂತಲೂ ಹಳೆಯದಾದ ಈ ಪುರಾತನ ಮಾನವ ನಿರ್ಮಿತ ರಚನೆ ಶತಶತಮಾನಗಳಿಂದ ಅಚ್ಚರಿಯ ಸಂಗತಿಯಾಗಿದೆ. ಸ್ಟೋನ್ಹೆಂಜ್ ಒಬ್ಬ ವ್ಯಕ್ತಿಯ ಅಥವಾ ಸಮುದಾಯದ ಸ್ಮಾರಕವೇ? ಬಲಿ ನೀಡುತ್ತಿದ್ದ ಒಂದು ಆರಾಧನಾ ಸ್ಥಳವೇ?  ಲೋಹದ ಆವಿಷ್ಕಾರವಾಗಿರದ ಸಂದರ್ಭದಲ್ಲಿ ಆದಿ ಮಾನವ ಇಷ್ಟೊಂದು ದೊಡ್ಡ ರಚನೆಯನ್ನು ಹೇಗೆ ನಿರ್ಮಿಸಿದ? ಅವುಗಳ ನಿರ್ಮಾಣಕ್ಕೆ ಬೃಹತ್ ಶಿಲೆಗಳನ್ನು ನೂರಾರು ಮೈಲಿ ದೂರದಿಂದ ಹೇಗೆ ಸಾಗಿಸಿದ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಂದಿಗೂ ನಿಗೂಢ. 

 
  •  ಆಡಿಯೋ ಗೈಡ್:
ದಕ್ಷಿಣ ಇಂಗ್ಲೆಂಡ್ನ ಸ್ಯಾಲಿಸ್ಬರಿ ಬಯಲು ಸೀಮೆಯ ದೊಡ್ಡ ಬಯಲಿನಲ್ಲಿರುವ ಸ್ಟೋನ್ಹೆಂಜ್ ಈಗ ಒಂದು ಇಂಗ್ಲಿಷ್ ಹೆರಿಟೇಜ್. ಅಲ್ಲಿ ಯಾವುದೇ ಶಾಶ್ವತ ಸಿಮೆಂಟ್ ಕಟ್ಟಡಗಳಿಲ್ಲ. ಅಲ್ಲಿನ ಸ್ಥಳ ಮತ್ತು ರಚನೆಯನ್ನು ವಿವರಿಸಲು ಅಥವಾ ಗೈಡ್ ಮಾಡಲು ಯಾರೂ ಬರುವುದಿಲ್ಲ.  ಬದಲಿಗೆ ಎಲ್ಲರಿಗೂ ಉಚಿತವಾಗಿ ಆಡಿಯೋ ಗೈಡ್ಕೊಡುತ್ತಾರೆ.

  • ಇತಿಹಾಸ ಇಂದಿಗೂ ನಿಗೂಢ:
 ಮೊದಲ ನೋಟದಲ್ಲಿ ಸ್ಟೋನ್ಹೆಂಜ್ ಏನೂ ಅನ್ನಿಸುವುದಿಲ್ಲ.  ಯಾವುದೋ ಬಯಲಿನಲ್ಲಿ ಏನೋ ಕಲ್ಲುಗಳನ್ನು ತಂದು ನಿಲ್ಲಿಸಿದ್ದಾರೆ ಅಷ್ಟೆ ಎಂದೆನಿಸುತ್ತದೆ. ಆದರೆ, ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ವ್ಯಾಖ್ಯಾನಗಳನ್ನು ಪಡೆದಿರುವ ಹಾಗೂ ಇನ್ನೂ ಪಡೆಯುತ್ತಿರುವ ಅತ್ಯಂತ ಪ್ರಾಚೀನ ಮಾನವ ನಿರ್ಮಿತ ರಚನೆ ಇದೇ ಆಗಿದ್ದಿರಬಹುದು. ಇಂದಿಗೂ ಇದನ್ನು ನಿರ್ಮಿಸಿದವರು ಯಾರು. ಯಾವುದಕ್ಕಾಗಿ ನಿರ್ಮಿಸಿದರು ಎಂಬುದು ನಮಗೆ ತಿಳಿದಿಲ್ಲ.
ಇಂಗ್ಲಿಷ್ ನಲ್ಲಿ ಹೆಂಜ್ ಅಂದರೆ, ಮಧ್ಯೆ ತಗ್ಗು ಇದ್ದು, ಸುತ್ತಲೂ ಕಾಲುವೆಯಂತಹ ರಚನೆ ಇರುವುದು. ಆ ಅರ್ಥದಲ್ಲಿ ಸ್ಟೋನ್ಹೆಂಜ್ ಒಂದು "ಹೆಂಜ್" ಅಲ್ಲವೇ ಅಲ್ಲ. ಇಲ್ಲಿ ವರ್ತುಲಾಕಾರದಲ್ಲಿ ಸುತ್ತಲೂ ಕಾಲುವೆ ಇದ್ದು, ಉಬ್ಬಿದ ಅಥವಾ ದಿಬ್ಬದಂತಹ ರಚನೆ ಇದೆ.
ಸ್ಟೋನ್ ಹೆಂಜ್ನ ಬೃಹತ್ ಶಿಲೆಗಳನ್ನು 240 ಕಿ.ಮೀ. ದೂರದಲ್ಲಿರುವ ವೇಲ್ಸ್ನ  ಪ್ರೆಸಿಲಿ ಪರ್ವತಗಳ ಕ್ವಾರಿಗಳಿಂದ ಸಾಗಿಸಿ  ತರಲಾಗಿದೆ. ಅವುಗಳಲ್ಲಿ ಕೆಲವು ಶಿಲೆಗಳು 25 ಟನ್ಗಳಿಗೂ ಅಧಿಕ ತೂಕವಿದೆ. ಬ್ರಿಟನ್ನಲ್ಲಿರುವ ವೃತ್ತಾಕಾರದ 900 ಕಲ್ಲಿನ ಸ್ಮಾರಕಗಳಲ್ಲಿ ಸ್ಟೋನ್ಹೆಂಜ್ ಮಾತ್ರವೇ ಹೆಚ್ಚು ಪ್ರಸಿದ್ಧಿಗಳಿಸಿದೆ.
ಶಿಲಾರಚನೆಯ ನಿರ್ಮಾಣಕ್ಕೂ ಮೊದಲು ಅಲ್ಲಿ ಮರದ ರಚನೆ ಇದ್ದ ಗುರುತುಗಳಿವೆ.

30 ಸಾಸರ್ನ್ ಶಿಲೆಗಳು ಹೊರಗಿನ ವೃತ್ತಾಕಾರವನ್ನು ರಚಿಸಿದ್ದವು. ಅವುಗಳಲ್ಲಿ ಇಂದು 17 ಮಾತ್ರ ಉಳಿದಿವೆ. ಆ ಸಾಸರನ್ ಶಿಲೆಗಳ ಮೇಲೆ ಆಯತಾಕಾರದ ಕಲ್ಲುಗಳನ್ನು ಇರಿಸಲಾಗಿದೆ.  ಸ್ಟೋನ್ಹೆಂಜ್ನ ಶಿಲೆಗಳು  ಮಳೆಯಲ್ಲಿ ನೆನೆದು ಬಿಸಿಲಿಗೆ ತಮ್ಮ ಮೈಯೊಡ್ಡಿದಾಗ ನೀಲ ವರ್ಣವಾಗಿ ಹೋಳೆಯುತ್ತವೆ.  5 ಸಾವಿರ ವರ್ಷಗಳ ಹಿಂದೆ ಸ್ಟೋನ್ಹೆಂಜ್ ಆರಂಭವಾದ ಸಂದರ್ಭದಲ್ಲಿ ಅಲ್ಲಿನ ಜನರು ಅಷ್ಟೊತ್ತಿಗಾಗಲೇ, ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿಕೊಂಡಿದ್ದರು. ಅವರಲ್ಲಿ ಸುಸಜ್ಜಿತ ಸಾಮಾಜಿಕ ವ್ಯವಸ್ಥೆ ಇತ್ತು. ಅವರು ಬಾರ್ಲಿ ಮತ್ತು ಗೋಧಿಯನ್ನು ಬೆಳೆಯುತ್ತಿದ್ದ ಪುರಾವೆಗಳಿವೆ.
  • ಬೃಹತ್ ಗಡಿಯಾರವೇ?
ಸ್ಟೋನ್ಹೆಂಜ್ ಅನ್ನು ಒಂದು ಬೃಹತ್ ಗಡಿಯಾರ ಎಂದು ಕರೆಯುವವರೂ ಇದ್ದಾರೆ.  ಕೃಷಿಕರಾಗಿದ್ದ ಅವರಿಗೆ ಬ್ರಿಟನ್ನಿನ ಚಳಿಗಾಲ ಅಂಧಕಾರದಿಂದ ಕೂಡಿರುತ್ತಿತ್ತು. ಬೇಸಿಗೆ ಒಂದು ರೀತಿಯಲ್ಲಿ ಬೆಳಕಿನ ಹಬ್ಬವಾಗಿರುತ್ತಿತ್ತು. ಸ್ಟೋನ್ಹೆಂಜ್ ದಕ್ಷಿಣಾಯಣದ ಸಂಕ್ರಮಣದ ಸೂಯರ್ೋದಯ (ಅತಿ ದೀರ್ಘದಿನ ಜೂ.21) ಉತ್ತರಾಯಣ ಸಂಕ್ರಮಣದ ಸೂಯಾಸ್ತಮಾನ (ಅತಿ ಕಡಿಮೆ ಅವಧಿಯ ದಿನ ಡಿ.21) ಕಕ್ಷೆಗೆ ಹೊಂದಿಕೊಂಡಂತೆ ನಿಮರ್ಿಸಲಾಗಿದೆ. ಹೀಗಾಗಿ ಆಗಿನ ಕಾಲದ ಜನ ವರ್ಷದ ಅತಿ ದೀರ್ಘದಿನದ ಆಚರಣೆಗೆ ಸ್ಟೋನ್ಹೆಂಜ್ ನಿಮರ್ಿಸಿರಬಹುದು ಎಂಬ ವಾದವೂ ಇದೆ.

Wednesday, November 12, 2014

ಥಾರ್ ಮರುಭೂಮಿ

ಮರುಳುಗೊಳಿಸುವ ಮರಳುಗಾಡು!

ರಾಜಸ್ಥಾನದ ಥಾರ್ ಮರುಭೂಮಿ ದ ಗ್ರೇಟ್ ಇಂಡಿಯನ್ ಡೆಸರ್ಟ್ ಎಂದೇ ಕರೆಸಿಕೊಳ್ಳುತ್ತದೆ. ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ ಮರುಭೂಮಿಯನ್ನು ಅಲ್ಲಿ ಚೋಲಿಸ್ತಾನ್ ಎಂದು ಕರೆಯುತ್ತಾರೆ. ಇದೊಂದು ಮರುಳುಗಾಡು! ಇಲ್ಲಿನ ಮರುಳುಗಾಡನ್ನು ನೋಡಲೆಂದೇ ಪ್ರವಾಸಿಗರು ಜೈಸಲ್ಮೇರ್ಗೆ ಆಗಮಿಸುತ್ತಾರೆ. ರಾಜಸ್ಥಾನದ ಜೈಸಲ್ಮೇರ್, ಬಿಕಾನೇರ್, ಜೋಧಪುರ ಮತ್ತು ಜಯಪುರ ಜಿಲ್ಲೆಗಳನ್ನು ಮರುಭೂಮಿ ದಟ್ಟವಾಗಿ ವ್ಯಾಪಿಸಿದೆ. ಥಾರ್ ಮರುಭೂಮಿಯಲ್ಲಿ ಸಂಚರಿಸುವಾಗ ಜನಸಂಖ್ಯೆಯಲ್ಲಿ ಭಾರತ ಎರಡನೇ ಅತಿದೊಡ್ಡ ದೇಶ ಅನಿಸುವುದಿಲ್ಲ. ಮರಳುಗಾಡಿನ ಪ್ರವಾಸಿ ತಾಣ ಜೈಸಲ್ಮೇರ್ನಲ್ಲಿ ಜನವಸತಿ ಒಂದು ಚದರ ಮೈಲಿಗೆ ಕೇವಲ 10. 27000 ಚದರ ಕಿ.ಮೀ. ವಿಸ್ತೀರ್ಣದ ಥಾರ್ ಜಗತ್ತಿನ 9ನೇ ದೊಡ್ಡ ಮರುಭೂಮಿ. ಜಗತ್ತಿನ ವರ್ಣರಂಜಿತ ಮರುಭೂಮಿ ಅಂಥಲೂ ಹೆಸರಾಗಿದೆ. 



ಮರಳು ಸೃಷ್ಟಿಯಾದದ್ದು ಹೇಗೆ?

ಥಾರ್ ಸಿಂಧೂ ನದಿಯ ಬಯಲು ಪ್ರದೇಶವಾಗಿದ್ದು, ಇಲ್ಲಿ ಕೋಟಿಗಟ್ಟಲೆ ವರ್ಷದಿಂದ ಶಿಲಾಪದರದ ಚೂರುಗಳು ಮತ್ತು ಮರಳುಗಳು ಹರಡಿಕೊಂಡಿದೆ. ಥಾರ್ ಎಂಬ ಶಬ್ದಕ್ಕೆ ಮರಳು ದಿಣ್ಣೆ ಎಂಬ ಅರ್ಥವಿದೆ. ಇದರ ಸ್ಪಷ್ಟ ಅನುಭವ ಆಗಬೇಕಾದರೆ ಹಗಲು ಹೊತ್ತು ಮರುಭೂಮಿಯಲ್ಲಿ ಸಂಚರಿಸಬೇಕು. ಬಿಸಿಗಾಳಿ, ಸುಡುವ ಬಿಸಿಲು, ಮೈ ಒಡೆದು ಬಿರುಕುಬಿಡುವಂತಹ ಶುಷ್ಕ ವಾತಾವರಣ, ಒಂಟೆಗಳು... ಎಲ್ಲಾ ಸೇರಿ ಮರುಭೂಮಿಯ ವಿಶಿಷ್ಟ ಅನುಭವವಾಗುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶ 50 ಡಿಗ್ರಿಯನ್ನು ತಲುಪುತ್ತದೆ.

ಮರಳಿನ ಚಂಡಮಾರುತ!
ಬಣ್ಣ ಬಣ್ಣದ ವಸ್ತ್ರ ಧರಿಸಿದ ಕಡುಬಡತನದಲ್ಲಿ ಸೊರಗಿದ ಮನುಷ್ಯರು ಇಲ್ಲಿ ಕಾಣಸಿಗುತ್ತಾರೆ. ಥಾರ್ನಲ್ಲಿ ಮೇ-  ಜೂನ್ ತಿಂಗಳಿನಲ್ಲಿ ಗಂಟೆಗೆ 140ರಿಂದ 150 ಕಿ.ಮೀ. ವೇಗದಲ್ಲಿ ಮರಳು ಕಣದಿಂದ ತುಂಬಿದ ಗಾಳಿ ಬೀಸುತ್ತದೆ. ಇಂತಹ ಚಂಡಮಾರುತಕ್ಕೆ ಬಲಿಯಾಗಿ ಸಾಯುವವರೂ ಇದ್ದಾರೆ. ಮರಗಳು ಇಲ್ಲದ್ದಕ್ಕೋ ಏನೋ ಇದೊಂದು ಪಕ್ಷಿಗಳೇ ಕಾಣದ ಪ್ರದೇಶ. ಹದ್ದನ್ನು ಬಿಟ್ಟರೆ ಇತರ ಪಕ್ಷಿಗಳು ಕಾಣಸಿಗುವುದು ಅಪರೂಪ. ಫ್ರಾಂಕೊಲಿನ್, ಲಾವು ಮುಂತಾದ ವಲಸಿಗ ಹಕ್ಕಿಗಳು ಆಗೊಮ್ಮೆ ಈಗೊಮ್ಮೆ ಕಾಣಿಸುತ್ತವೆ.

ವರ್ಷಗಟ್ಟಲೆ ಮಳೆಯೇ ಇಲ್ಲ.
ಥಾರ್ನಲ್ಲಿ ಸರಾಸರಿ ಮಳೆ 3 ಸೆಂಟಿ ಮೀಟರ್ಗಿಂತಲೂ ಕಡಿಮೆ. ಕೆಲವು ವರ್ಷ ಮಳೆಯೇ ಇಲ್ಲ. ಕೇವಲ 70 ಮಿ.ಮೀಟರ್ ಮಳೆ ಬಿದ್ದರೆ ರೈತರು ಆಸಲದ ಬೆಳೆ ಬೆಳೆದುಕೊಳ್ಳುತ್ತಾರೆ. ಉಳಿದ ಸಮಯ ಪಶುಸಾಕಣೆಯೇ  ಮುಖ್ಯ ಉದ್ಯೋಗ. ಸಸ್ಯದ ಜತೆಗೆ ಪ್ರಾಣಿಗಳೂ ಆಹಾರದ ಆಕರಗಳೇ. ಅದಕ್ಕೆ ಮಾಂಸಾಹಾರ ಇಲ್ಲಿ ತೀರಾ ಸಾಮಾನ್ಯ. ಮರುಭೂಮಿಯ ಹಡಗುಗಳೆಂದು ಪ್ರಸಿದ್ಧವಾದ ಒಂಟೆಗಳು ಇಲ್ಲದಿದ್ದರೆ, ಜನರಿಗೂ ಇಲ್ಲಿ ಬದುಕುವುದು ಸಾಧ್ಯವಿರುತ್ತಿರಲಿಲ್ಲ.

ಒಂಟೆ ಮತ್ತು ಜೀಪ್ ಸಫಾರಿ:
ಮರುಭೂಮಿಯನ್ನು ನೋಡಲು ಬರುವ ಪ್ರವಾಸಿಗರು ಒಂಟೆ ಸವಾರಿಯ ಮಜ ಅನುಭವಿಸಬಹುದು. ಇಲ್ಲಿನ ಜನರಿಗೆ ಒಂಟೆ ಸವಾರಿಯೇ ಆದಾಯದ ಮೂಲ. ಅಲ್ಲದೆ, ಇನ್ನೂ ಸಾಹಸ ಮಾಡಬೇಕು ಎಂದು ಅನಿಸಿದರೆ ಮರಳುಗಾಡಿನಲ್ಲಿ ಜೀಪ್ ಸಫಾರಿ ಕೈಗೊಳ್ಳಬಹುದು.

ಬಣ್ಣವನ್ನು ಇಷ್ಟಪಡುವ ಜನ:
ಥಾರ್ನ ಜನ ಕೆಂಪು, ಹಸಿರು, ಹಳದಿ, ಕಪ್ಪು ಹೀಗೆ ಕಡು ಬಣ್ಣಗಳನ್ನು ತಮ್ಮ ಬಟ್ಟೆಬರೆಗಳಲ್ಲಿ ವಿಪರೀತ ಉಪಯೋಗಿಸುತ್ತಾರೆ. ಅವರ ಮುಂಡಾಸಿನಲ್ಲೇ 15 ಬಣ್ಣಗಳಿದ್ದಾವು.  ಥಾರ್ನಲ್ಲಿ ಗೂಮರ್ ಮತ್ತು ತೇಜ್ ಹಬ್ಬಗಳಂದು ರಾತ್ರಿ ಹೆಂಗಸರು ಗುಂಪಾಗಿ ನೃತ್ಯ ಮಾಡುತ್ತಾರೆ. ಸಂಗೀತ ಅವರ ಬದುಕಿನ ಅವಿಭಾಜ್ಯ ಅಂಗ. ಹೋಳಿ ಹಬ್ಬದ ಹಾಡು, ಕುಣಿತಗಳು, ಹಾವಾಡಿಗರ ನೃತ್ಯ, ಬಂಜಾರ ಹೆಂಗಸರ ಸಾಂಪ್ರದಾಯಿಕ ಚಿನ್ನ, ಬೆಳ್ಳಿಯ ಆಭರಣಗಳು ಮರುಭೂಮಿ ಸತ್ವಹೀನ ಪ್ರದೇಶವೆಂಬ ಕಲ್ಪನೆಯನ್ನು ದೂರ ಮಾಡುತ್ತವೆ. 



Monday, October 27, 2014

ಬೋವರ್ ಹಕ್ಕಿಯ ಮನೆಯ ಸಿಂಗಾರ!

ಈ ಹಕ್ಕಿಯನ್ನು ಪಕ್ಷಿ ಲೋಕದ ಇಂಟೀರಿಯರ್ ಡೆಕೊರೇಟರ್ ಎಂದೇ ಕರೆಯಲಾಗುತ್ತದೆ. ನೆಲದ ಮೇಲೆ ಗುಡಿಸಲಿನ ಹಾಗೆ ಗೂಡು ಕಟ್ಟುವ ಇದು, ತನ್ನ ಗೂಡನ್ನು ಬಣ್ಣ ಬಣ್ಣದ ವಸ್ತುಗಳಿಂದ, ಹೂವುಗಳಿಂದ ಅಲಂಕರಿಸುತ್ತದೆ. ಇದೇ ಬೋವರ್ ಹಕ್ಕಿಯ ವೈಶಿಷ್ಟ್ಯ. ಆಸ್ಟ್ರೇಲಿಯಾ, ನ್ಯೂಗಿಯಾ ಮಳೆಕಾಡುಗಳಲ್ಲಿ ಇವು ವಾಸಿಸುತ್ತವೆ.


ಗುಡಿಸಲಿನಾಕಾರದ ಗೂಡು!

ಬೋವರ್ ಬರ್ಡ್ 7 ರಿಂದ 8 ಇಂಚಿನಷ್ಟು ದೊಡ್ಡದು. ಆದರೆ, ಅದು ಕಟ್ಟುವ ಗೂಡು ಮಾತ್ರ ಊಹಿಸಲು ಅಸಾಧ್ಯ.
ಇತರ ಎಲ್ಲ ಹಕ್ಕಿಗಳು ಮೊಟ್ಟೆಯನ್ನು ಸಂರಕ್ಷಿಲು ಮರದ ತುದಿಯಲ್ಲೋ, ಯಾರಿಗೂ ಕಾಣದ ರೀತಿಯಲ್ಲೋ ಗೂಡನ್ನು ಕಟ್ಟಿದರೆ, ಬೋವರ್ ಹಕ್ಕಿ ರಾಜಾರೋಷವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತದೆ. ಇದರ ಗೂಡನ್ನು ಒಂದು ಚಿಕ್ಕ ಗುಡಿಸಲಿಗೆ ಹೋಲಿಸಬಹುದು. ಅಷ್ಟೊಂದು ಅಚ್ಚುಕಟ್ಟು.  ಕಸ ಕಡ್ಡಿ, ಹುಲ್ಲುಗಳನ್ನು ಬಳಸಿ ನಿರ್ಮಿಸಿದ ಇದರ ಗೂಡಿನ ಆವರಣ ಸುಮಾರು 15 ಮೀಟರ್ ನಷ್ಟು ವಿಶಾಲವಾಗಿರುತ್ತದೆ. ಕೆಲವೊಮ್ಮೆ 5 ರಿಂದ 6ಅಡಿ ಎತ್ತರದವರೆಗೂ ಗೂಡನ್ನು ಕಟ್ಟಿದ ಉದಾಹರಣೆಗಳಿವೆ. ಗೂಡಿನ ಒಳಗೂ ಮೂರು ಅಡಿಯಷ್ಟು ವಿಶಾಲ ಜಾಗವಿರುತ್ತದೆ. ಚಾವಣಿ ನೆಲಕ್ಕೆ ತಾಗದಂತೆ ಪ್ರವೇಶ ದ್ವಾರದಲ್ಲಿ ಎರಡು ಆಧಾರ ಕಂಬಗಳನ್ನು ನೆಟ್ಟು ಭದ್ರ ಪಡಿಸುತ್ತದೆ.

ಮನೆಯ ಸುತ್ತ ಸಿಂಗಾರ!
ಗೂಡಿನ ಸುರಕ್ಷತೆಗಿಂತ ಹೆಚ್ಚಾಗಿ ಸೌಂದರ್ಯಕ್ಕೆ ಮೊದಲ ಪ್ರಾಶಸ್ತ್ಯ. ಎಲೆಗಳು, ಕೀಟಗಳ ಆಕರ್ಷಕ ಚಿಪ್ಪುಗಳು, ಕಾಯಿ
 ಹಣ್ಣುಗಳು, ಕೊನೆಗೆ ಮಾನವ ನಿರ್ಮಿ ತ ಬಾಟಲ್ ಕ್ಯಾಪ್, ಕ್ಲಿಪ್ ಯಾವುದೇ ಸಿಕ್ಕರೂ ಅಲಂಕಾರಕ್ಕೆ ಬಳಸಿಕೊಳ್ಳುತ್ತದೆ. ಆ ಬಳಿಕ ಆರ್ಚಿಡ್ ಹೂವುಗಳನ್ನು ತಂದು ಇನ್ನಷ್ಟು ಸಿಂಗಾರಗೊಳಿಸುತ್ತದೆ. ಸುಂದರ ವಸ್ತುಗಳನ್ನು ಕಂಡರೆ ಅವುಗಳನ್ನು ತಂದು ಗೂಡಿನ ಮುಂದೆ ರಾಶಿ ಹಾಕುತ್ತದೆ. ಗೂಡಿನ ಒಳಗಡೆ ಮತ್ತು ಹೊರಗೆ ಕೆಂಪು, ನೀಲಿ, ಕಪ್ಪು, ಕೇಸರಿ ಬಣ್ಣದ ವಸ್ತುಗಳನ್ನು ತಂದು ಜೋಡಿಸುತ್ತದೆ. ಇಷ್ಟೆಲ್ಲಾ ಮಾಡಲು ಸಮಯ ಬೇಡವೇ? ಹೀಗಾಗಿ ವರ್ಷದಲ್ಲಿ 9 ತಿಂಗಳು ಮನೆಯನ್ನು ಕಟ್ಟಿ ಅದನ್ನು ನಿರ್ವಹಿಸುವುದಕ್ಕೆ ಮೀಸಲು. ವಿಪರ್ಯಾಸವೆಂದರೆ, ಗಂಡು ಹಕ್ಕಿ ವರ್ಷವಿಡೀ ಕಷ್ಟಪಟ್ಟು ಗೂಡು ನಿರ್ಮಿಸುವುದು ಹೆಣ್ಣನ್ನು ಆಕರ್ಷಿಸಲು ಮಾತ್ರ.

 ಹೆಣ್ಣನ್ನು ಆಕರ್ಷಿಸಲು ಕಸರತ್ತು!
ಹೆಣ್ಣು ಹಕ್ಕಿಯೂ ಅಷ್ಟೇ ಚಾಲಾಕಿ. ಇಂತಹ ಕೆಲ ಮನೆಯನ್ನು ನೋಡಿ, ತನಗೆ ಹೆಚ್ಚು ಇಷ್ಟವಾದ ಮನೆಯ ಗಂಡನ್ನು ತನ್ನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳತ್ತದೆ! ಒಮ್ಮೆ  ಒಂದು ಹೆಣ್ಣು ಒಲಿದು, ಅದರೊಂದಿಗೆ ನಲಿದಾದ ಮೇಲೆ ಹೆಣ್ಣು ಹಕ್ಕಿ ಬೇರೆ ಜಾಗದಲ್ಲಿ ತಾನೇ ಗೂಡು ನಿರ್ಮಿಸಿ ಮೊಟ್ಟೆ ಇಡುತ್ತದೆ. ಕಾವುಕೊಡುವುದು ಮರಿಗಳನ್ನು ಸಾಕುವುದು ಮೊದಲಾದ ಎಲ್ಲ ಕಾರ್ಯವನ್ನು ಹೆಣ್ಣು ಹಕ್ಕಿಯೊಂದೇ ನಿಭಾಯಿಸುತ್ತದೆ. ಹೆಣ್ಣು ಹೀಗೆ ತನ್ನ ಮರಿಗಳನ್ನು ಬೆಳೆಸುವ ಕಾಯಕದಲ್ಲಿರುವಾಗ ಅದರ ಸಂಗಾತಿಯಾಗಿದ್ದ ಗಂಡು ಹಕ್ಕಿ ತನ್ನ ಸುಂದರವಾದ ಗೂಡಿನೊಂದಿಗೆ ಬೇರೊಂದು ಹೆಣ್ಣನ್ನು ಆಕರ್ಷಿಸುವ ಕೆಲಸದಲ್ಲಿರುತ್ತದೆ.

ಸುದೀರ್ಘ ಬದುಕು:

ಬೋವರ್ ಹಕ್ಕಿಗಳು ಸುದೀರ್ಘ ಕಾಲ ಬದುಕು ನಡೆಸುತ್ತದೆ. ಇದರ ಆಯುಸ್ಸು ಸರಾಸರಿ 21 ವರ್ಷಗಳವರೆಗೆ ಬದುಕಿರ ಬಲ್ಲದು ಎಂದು ಅಂದಾಜಿಸಲಾಗಿದೆ. ಈ ಹಕ್ಕಿಯಲ್ಲಿ ಸುಮಾರು 20 ಪ್ರಕಾರಗಳಿವೆ. ಹಣ್ಣುಗಳು ಇದರ ಇಷ್ಟವಾದ ಆಹಾರ.

Thursday, October 23, 2014

ಕಪ್ಪು ಸಮುದ್ರದ ಒಡಲಿನ ರಹಸ್ಯ!

ಕಪ್ಪು ಸಮುದ್ರ ತನ್ನೊಳಗೆ ಏನೇನು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆಯೋ? ಅವು ಇಂದಿಗೂ ಪತ್ತೆಯಾಗುತ್ತಲೇ ಇವೆ! ಈ ಸಮುದ್ರ ಜಗತ್ತಿನ ಇತರ ಸಮುದ್ರಗಳೊಂದಿಗೆ ಬಹುತೇಕ ಸಂಪರ್ಕ ಕಡಿದುಕೊಂಡಿದೆ. ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಬೊಸ್ಟೊರಸ್ ಜಲಸಂಧಿ ಕಪ್ಪು ಸಮುದ್ರದಿಂದ ನೀರು ಹೊರಹೋಗಲು ಇರುವ ಏಕೈಕ ಮಾರ್ಗ. ಇಲ್ಲದಿದ್ದರೆ ಇದೊಂದು ಸರೋವರವಾಗಿರುತ್ತಿತ್ತು! 436,400 ಚದರ್ ಕಿ.ಮೀ. ವಿಸ್ತೀರ್ಣ ಹೊಂದಿರುವ ಇದು, 2,212 ಮೀಟರ್ ಆಳವಿದೆ. ಯುರೋಪ್, ಅನಾಟೋಲಿಯಾ, ಕಾಕಸ್ ಭೂ ಪ್ರದೇಶಗಳ ಆರು ದೇಶಗಳಿಂದ ಸಮುದ್ರ ಸುತ್ತುವರಿದಿದೆ.


ಉಬ್ಬರ ಇಳಿತವಿಲ್ಲದ ಸಮುದ್ರ!
ಕಪ್ಪು ಸಮುದ್ರದ ಆಳದಲ್ಲಿ  ಶತಮಾನಗಳ ಹಿಂದೆ ಮುಳುಗಡೆಯಾದ ಹಡಗುಗಳು, ಕಾಣೆಯಾದ ವಸ್ತುಗಳು, ತಿಮಿಂಗಿಲುಗಳ ಮೂಳೆಗಳು ಮೇಲಕ್ಕೆ ಹೊರಬರುತ್ತಲೇ ಇವೆ. ಕ್ರಿಸ್ತಪೂರ್ವ 3 ಮತ್ತು 5ನೇ ಶತಮಾನದಲ್ಲಿ ಗ್ರೀಸರು ನಿರ್ಮಿಸಿದ ಹಡಗಿನ ಅವಶೇಷಗಳು ಇಂದದಿಗೂ ಪತ್ತೆಯಾಗುತ್ತಿರುವುದು ವಿಶೇಷ. ಈ ಸಮುದ್ರದಲ್ಲಿ ನೀರು ಯಾವಾಗಲೂ ತಟಸ್ಥವಾಗಿರುತ್ತದೆ. ಉಬ್ಬರ ಇಳಿತಗಳಾಗಲೀ ಇಲ್ಲ.  ನೀರಿನ ಪ್ರಮಾಣವೂ ಒಂದೇ ರೀತಿಯಾಗಿರುತ್ತದೆ. ಹೀಗಾಗಿ ಮುಳುಗಿದ ವಸ್ತುಗಳನ್ನು ಸಮುದ್ರವೇ ಕಬಳಿಸಿಬಿಡುತ್ತದೆ. ಕಪ್ಪು ಸಮುದ್ರ ಎಂಬ ಹೆಸರು ಬಂದ ಬಗ್ಗೆಯೂ ಅನೇಕ ವಾದಗಳಿವೆ. ಪ್ರಾರಂಭದಲ್ಲಿ ಈ ಸಮುದ್ರಕ್ಕೆ ಗ್ರಿಕರು ನಿರಾಶ್ರಯ ಸಮುದ್ರ ಎಂದು ಹೆಸರು ನೀಡಿದ್ದರು. ಇಲ್ಲಿ ಸಂಚಾರ ಕೈಗೊಳ್ಳಲು ಹೆದರುತ್ತಿದ್ದರು. ಬಳಿಕ ಟರ್ಕರು ಈ ಸಮುದ್ರದಲ್ಲಿ ಸುಲಭವಾಗಿ ಸಂಚಾರ ಮಾಡಿದರು. ಇದಕ್ಕೆ ಕಪ್ಪು ಸಮುದ್ರ ಎಂಬ ಹೆಸರು ಅವರಿಂದಲೇ ಬಂದಿದೆ.

6 ದೇಶಗಳಿಂದ ಸುತ್ತುವರಿದ ಸಮುದ್ರ: 
ರೊಮಾನಿಯಾ, ಟರ್ಕಿ , ಉಕ್ರೇನ್, ಬಲ್ಗೇರಿಯಾ, ರಷ್ಯಾ, ಜಾರ್ಜಿಯಾದೊಂದಿಗೆ ಕಪ್ಪು ಸಮುದ್ರ ದಂಡೆಗಳನ್ನು ಹಂಚಿಕೊಳ್ಳುತ್ತದೆ. ಅತಿ ಹೆಚ್ಚು ಸಮುದ್ರ ದಂಡೆಯನ್ನು ಟರ್ಕಿ ಒಳಗೊಂಡಿದೆ. ಇಷ್ಟು ದೇಶಗಳಿಂದ ಸುತ್ತುವರಿದ ಮತ್ತೊಂದು ಸಮುದ್ರ ಬೇರೆಲ್ಲಿಯೂ ಇಲ್ಲ.

  • ಕಪ್ಪು ಸಮುದ್ರಕ್ಕಾಗಿ ಯುದ್ಧ! 
ರೋಮನ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾನ್ಸ್ಟಾಂಟಿನೋಪಲ್ ಪತನದ ನಂತರ ಕಪ್ಪು ಸಮುದ್ರ ಟರ್ಕಿ ಸಮಾಜ್ಯದ ವಶವಾಯಿತು. ಆ ಸಮಯದಲ್ಲಿ ಅದನ್ನು ಟರ್ಕಿ ಸರೋರವರ ಎಂದೇ ಕರೆಯಲಾಗುತ್ತಿತ್ತು. ಕಪ್ಪು ಸಮುದ್ರವನ್ನು ವಶಪಡಿಸಿಕೊಳ್ಳುವುದಕ್ಕೋಸ್ಕರ ರಷ್ಯಾ ಮತ್ತು ಟರ್ಕಿಯ ನಡುವೆ ಯುದ್ಧವೂ ನಡೆದಿತ್ತು.
  • ಆಮ್ಲಜನಕ ರಹಿತ ಸಮುದ್ರ:
ಕಪ್ಪು ಸಮುದ್ರದಲ್ಲಿ ತಳದಿಂದ ಮೇಲ್ಮಟ್ಟದವರೆಗೂ ಒಂದೇ ರೀತಿಯಾದ ನೀರಿದೆ. ವಾತಾವರಣದ ಆಮ್ಲಜನಕವನ್ನು ಪಡೆಯುವ ನೀರಿನ ಮೇಲ್ಪದರದ ತೀರಾ ಕಡಿಮೆ. ಶೇ.90ಕ್ಕಿಂತ ಹೆಚ್ಚು ಪ್ರಮಾಣದ ಕಪ್ಪು ಸಮುದ್ರದ ನೀರು ಆಮ್ಲಜನಕ ರಹಿತವಾಗಿದೆ.
  • ಸಮುದ್ರ ತಳದಲ್ಲಿ ಗುಪ್ತಗಾಮಿನಿ:
ಕಪ್ಪು ಸಮುದ್ರದಲ್ಲಿ ಆಳದಲ್ಲಿ ಅತಿದೊಡ್ಡ ನದಿಯೊಂದು ಪ್ರವಹಿಸುತ್ತದೆ. ಈ ಪ್ರವಾಹ ಸಮುದ್ರಕ್ಕೆ ನೀರು ಮತ್ತು ಗಾಳಿಯನ್ನು ಪೂರೈಸುತ್ತದೆ. ಈ ಪ್ರವಾಹ ಇಂದಿಗೂ ಸಕ್ರಿಯ. ಇದರ ಸಹಾಯದಿಂದಲೇ ಸಮುದ್ರದ ತಳದಲ್ಲಿ ಜೀವಿಗಳು ಬದುಕಲು ಸಹಾಯವಾಗಿದೆ ಎಂದು  ವಿಜ್ಞಾನಿಗಳು ಸಂಶೋಧಿಸಿದ್ದಾರೆ.

  • ಪ್ರವಾಸಿಗರ ನೆಚ್ಚಿನ ತಾಣ:
ಕಪ್ಪು ಸಮುದ್ರದಲ್ಲಿ 10 ಚಿಕ್ಕಪುಟ್ಟ ದ್ವೀಪಗಳಿವೆ. ಪ್ರಯೊಂದರಲ್ಲಿಯೂ ಭಿನ್ನವಾದ ಸಸ್ಯ ಮತ್ತು ಜೀವರಾಶಿಗಳಿವೆ. ಈ ವಿಲಕ್ಷಣದ ದ್ವೀಪಗಳಲ್ಲಿ ವಿಹರಿಸಲು ಸಾವಿರಾರು ಪ್ರವಾಸಿಗರು ಕಪ್ಪು ಸಮುದ್ರಕ್ಕೆ  ಭೇಟಿ ನೀಡುತ್ತಾರೆ. ಇಂದು ಕಪ್ಪು ಸಮುದ್ರ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
  • ವಿಷಕಾರಿ ಆಗುತ್ತಿದೆ ಎಚ್ಚರ!
ಕಪ್ಪು ಸಮುದ್ರ ಇಂದು ವಿಷಕಾರಿಯಾಗಿ ಪರಿವತರ್ಿತವಾಗುತ್ತಿವೆ. ಯುರೋಪ್ ದೇಶಗಳು ಸಮುದ್ರಕ್ಕೆ ವಿಷಕಾರಕ ರಾಸಾಯನಿಕ, ತೈಲೋತ್ಪನ್ನ ತ್ಯಾಜ್ಯಗಳನ್ನು ತುಂಬುತ್ತಿವೆ. ಅಲ್ಲದೆ,  ಸಮುದ್ರದಲ್ಲಿ ಅತಿಯಾದ ಮೀನುಗಾರಿಕೆಯಿಂದ 21 ಪ್ರಕಾರದ ಮೀನುಗಳ ಅಳಿವಿಗೆ ಕಾರಣವಾಗಿದೆ.


 


ಐತಿಹಾಸಿಕ ಕೆಂಪು ಕೋಟೆ!

ದೆಹಲಿಯ ಜನಪ್ರಿಯ ಕಿಲ್ಲಾ- ಇ- ಮೊಲ್ಹಾ ಇದರ ಹೊಸ ಹೆಸರೇ ಈಗಿನ ಕೆಂಪು ಕೋಟೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನಾವಾದ 1947ರ ಆಗಸ್ಟ್ 15ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯ ಲಾಹೋರ್ ಗೇಟಿನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಇದರ ಧ್ಯೋತಕವಾಗಿ ಪ್ರತಿ ವರ್ಷ ಆಗಸ್ಟ್- 15 ರಂದು ಭಾರತದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯ ಮೇಲೆ  ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಾರೆ. ಸ್ವಾತಂತ್ರ್ಯ ದೊರೆತ ಬಳಿಕ ಕೆಂಪುಕೋಟೆಯಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗಿದೆ. ಇಂದು ಇದು ಪ್ರಸಿದ್ಧ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ.
 

ಕೆಂಪು ಕೋಟೆಯನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಲ್ಲೇ ಅದ್ಭುತವಾದ ಅರಮನೆಯೊಂದು ಇದರಲ್ಲಿದೆ. 254.67 ಎಕರೆಯಷ್ಟು ವಿಶಾಲವಾದ ಜಾಗವನ್ನು ಕೆಂಪು ಕೋಟೆ ಆವರಿಸಿಕೊಂಡಿದೆ. ಈ ಕೋಟೆಯು ಸುಮಾರು 2.41 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದರ ಎರಡು ಪ್ರಮುಖ ದ್ವಾರಗಳನ್ನು ಲಾಹೋರ್ ಹಾಗೂ ದೆಹಲಿ ಗೇಟ್ ಎಂದು ಹೆಸರಿಸಲಾಗಿದೆ. ಲಾಹೋರ್ ದ್ವಾರವು ಚಚ್ಛಾ ಚೌಕ ಮಾರುಕಟ್ಟೆಗೆ ಕೊಂಡೊಯ್ಯುತ್ತದೆ. ಇಲ್ಲಿ ರೇಷ್ಮೆ ಒಡವೆಗಳು ಹಾಗೂ ಇತರೇ ಬೆಲೆಬಾಳುವ ವಸ್ತುಗಳನ್ನು ರಾಜವಂಶಸ್ಥರಿಗಾಗಿ ಮಾರಾಟ ಮಾಡಲಾಗುತ್ತಿತ್ತು. ದೆಹಲಿ ಗೇಟ್ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂ ಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಇಲ್ಲಿ ಬೀಡುಬಿಟ್ಟಿರುತ್ತದೆ. 

ಕುತೂಹಲಗಳ ಆಗರ!
ಈ ಸುಂದರ ಸ್ಮಾರಕದಲ್ಲಿ ಅನೇಕ ಅದ್ಭುತ ಕಲಾಕೃತಿಗಳಿವೆ. ದಿವಾನ್ ಐ ಆಮ್ ಅವುಗಳಲ್ಲೊಂದು. ಇಲ್ಲೇ ರಾಜನು ಪ್ರಜೆಗಳ ಕಷ್ಟ ಸುಖಗಳನ್ನು ಆಲಿಸುತ್ತಿದ್ದನು. ಕೆಂಪು ಕೋಟೆಯ ಒಳಭಾಗದಲ್ಲಿ ದಿವಾನ್ ಐ ಖಾಸ್ (ಖಾಸ್ ಮಹಲ್) ಇದೆ. ಇಲ್ಲಿ ರಾಜ್ಯದ ಮಂತ್ರಿಮಂಡಲದ ಸದಸ್ಯರು ಮತ್ತು ಅಥಿತಿಗಳೊಂದಿಗೆ ರಾಜರು ಖಾಸಗೀ ಸಭೆಗಳನ್ನು ನಡೆಸುತ್ತಿದ್ದರು. ಇಡೀ ಕೆಂಪುಕೋಟೆ ಅರ್ಧ ಚಂದ್ರಾಕಾರದಲ್ಲಿದ್ದು, ಕೋಟೆಯ ಗೋಡೆಗಳು 21 ಮೀಟರ್ ಎತ್ತರವಾಗಿವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಕೆಂಪು ಕೋಟೆಯಲ್ಲಿರುವ ರಾಗ ಮಹಲ್ಲನ್ನು ಬೇಗಂ ಮಹಲ್ ಎಂದೂ ಕರೆಯುತ್ತಾರೆ. ಇಲ್ಲಿ ಷಹಜಾನನ ಪತ್ನಿ ಮತ್ತು ಉಪಪತ್ನಿಯರು ವಾಸವಿದ್ದರು. ಇಲ್ಲಿರುವ ಮುಮ್ತಾಜ್ ಮಹಲ್ ಮಹಿಳೆಯರ ಸಭಾಂಗಣವಾಗಿದ್ದು, ಇಂದು ವಸ್ತು ಸಂಗ್ರಹಾಲಯವಾಗಿದೆ.

ಕೆಂಪು ಕೋಟೆಯ ಚರಿತ್ರೆ:
5ನೇ ಮುಘಲ್ ದೊರೆ ಷಹಜಹಾನನ ರಾಜಧಾನಿಯಾಗಿ ಕೆಂಪುಕೋಟೆಯನ್ನು 1648ರಲ್ಲಿ ನಿರ್ಮಿಸಲಾಯಿತು. ಷಹಜಹಾನನ ಆಸ್ತಾನದಲ್ಲಿದ್ದ ಉಸ್ತಾದ್ ಅಹಮದ್ ಲಹೌರಿ ಕೆಂಪು ಕೋಟೆಯ ವಾಸ್ತುಶಿಲ್ಪಿ. 1632ರಿಂದ 1648ರ ಅವಧಿಯಲ್ಲಿ ಮುಘಲ್ ವಾಸ್ತುಶಿಲ್ಪದ ಪ್ರಕಾರದಲ್ಲಿ ಕೆಂಪು ಕೋಟೆ ನಿರ್ಮಾಣಗೊಂಡಿದೆ. ತದನಂತರ ಮುಘಲರು ನಿರ್ಮಿಸಿದ ಎಲ್ಲ ಕಟ್ಟಡಗಳಿಗೂ ಕೆಂಪು ಕೋಟೆ ಮಾದರಿ ಎನಿಸಿಕೊಂಡಿತು.
ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೇ ರಾಜರಾಣಿಯರ ಅರಮನೆ ನಿವಾಸವಾಗಿಯೂ ರೂಪತಳೆಯಿತು.  200 ವರ್ಷಗಳ ಕಾಲ ಕೆಂಪು ಕೋಟೆಯಲ್ಲಿ ಮುಘಲ್ ದೊರೆಗಳು ವಾಸವಿದ್ದರು. ಕೆಂಪು ಕೋಟೆಯನ್ನು ಆಳಿದ ಕೊನೆಯ ಮುಘಲ್ ದೊರೆ 2ನೇ ಬಹದ್ದೂರ್ ಶಾ. 1857ರಲ್ಲಿ ನಡೆದ ಮೊದಲ ಸೇನಾ ದಂಗೆಗೆ ಕೆಂಪು ಕೋಟೆ ಸಾಕ್ಷಿಯಾಯಿತು. ಈ ಸಮಯದಲ್ಲಿ 2ನೇ ಬಹದ್ದೂರ್ ಶಾ ತಾನು ಸಂಪೂರ್ಣ ಭಾರದ ಅರಸ ಎಂದು ಘೋಷಿಸಿಕೊಂಡ. ಯುದ್ಧದಲ್ಲಿ ಸೋತಬಳಿಕ ಕೋಟೆಯಿಂದ ಪಲಾಯನಗೈದ. ಯುದ್ಧದ ಬಳಿಕ ಬ್ರಿಟೀಷರು ಕೆಂಪು ಕೋಟೆಯ ಬಹುಭಾಗವನ್ನು ನಾಶಪಡಿಸಿ ಅಲ್ಲಿ ಮಿಲಿಟರಿ ಬ್ಯಾರಕ್ಗಳನ್ನು ನಿಮರ್ಮಿಸಿದ್ದಾರೆ. ಕೋಟೆಯ ಒಳಗಿದ್ದ ಮೂರನೇ ಎರಡರಷ್ಟು ರಚನೆಗಳನ್ನು ನಾಶಪಡಿಸಿದ್ದಾರೆ. 1911ರಲ್ಲಿ ಬ್ರಿಟನ್ ರಾಜ ಮತ್ತು ರಾಣಿ ದೆಹಲಿ ದರ್ಭಾರ್ ಗೆ  ಭೇಟಿ ನೀಡಿದರು. ಈ ಕಾರಣಕ್ಕಾಗಿ ಕೆಲವೊಂದು ಕಟ್ಟಡಗಳನ್ನು ಪುನರ್ನಿರ್ಮಾಣ ಮಾಡಲಾಗಿದೆ. 2007ರಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಿದೆ. 

Tuesday, September 16, 2014

ಅಥೆನ್ಸ್ ಎಂಬ ಪುರಾತನ ನಗರ

ಜಗತ್ತಿನಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಏಕೈಕ ನಗರ ಅಥೆನ್ಸ್. ಈ ನಗರದ ಮೂಲವನ್ನು ಅರಸುತ್ತಾ ಹೊರಟರೆ ಅದು ನಮ್ಮನ್ನು ಕ್ರಿಸ್ತ ಪೂರ್ವ 3000 ವರ್ಷಗಳ ಹಿಂದೆಕ್ಕೆ ಒಯ್ಯುತ್ತದೆ. ಅಥೆನ್ಸ್ ಅನ್ನು ಜಗತ್ತಿನ ನಾಗರಿಕತೆಯ ಉಗಮಸ್ಥಾನ ಎಂತಲೂ ಕರೆಯುತ್ತಾರೆ.


 ಪ್ರಜಾಪ್ರಭುತ್ವ, ಪಾಶ್ಚಾತ್ಯ ತತ್ವಶಾಸ್ತ್ರ, ಒಲಿಂಪಿಕ್ಸ್ ಕ್ರೀಡಾಕೂಟ, ರಾಜ್ಯಶಾಸ್ತ್ರ, ಪಾಶ್ಚಾತ್ಯ ಸಾಹಿತ್ಯ, ಥಿಯೇಟರ್ (ರಂಗಭೂಮಿ) ಇವೆಲ್ಲವೂ ಜನ್ಮತಳೆದಿದ್ದು ಅಥೆನ್ಸ್ ನಲ್ಲಿ. ಸಾಕ್ರೆಟಿಸ್ ಅರಿಸ್ಟಾಟಲ್, ಪ್ಲೆಟೋ, ಪೆರಿಕ್ಲಸ್ ಮುಂತಾದ ತತ್ವಜ್ಞಾನಿಗಳು ಮತ್ತು ಅಲೆಕ್ಸಾಂಡರ್ ದಿ ಗ್ರೇಟ್ ಇದೇ ಭವ್ಯ ಸಾಮ್ರಾಜ್ಯಕ್ಕೆ ಸೇರಿದವರು.

ಅಥೆನಾ ದೇವತೆಯ ಹೆಸರು:

ಅಥೆನಾ ಅಥೆನ್ಸ್ನ ಜ್ಞಾನದ ದೇವತೆಯಾಗಿತ್ತು. ಹೀಗಾಗಿ ಅಥೆನ್ಸ್ಗೆ ಆಕೆಯ ಹೆಸರನ್ನು ಇಡಲಾಗಿದೆ. ಆಕ್ರೋಪೊಲೀಸ್ ಬೆಟ್ಟದ ಮೇಲಿರುವ ಪಾರ್ಥೆನಾನ್ ದೇವಾಲಯ ಅಥೆನಾ ದೇವತೆಯನ್ನು ವರ್ಣಿಸುತ್ತದೆ.  ಅಲೆಕ್ಸಾಂಡ್ರ್ನ ಆಡಳಿತ ಕಾಲದಲ್ಲಿ ಗ್ರೀಕ್ ನಾಗಿರಕತೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆತನ ಸಾಮ್ರಾಜ್ಯ ಯುರೋಪಿನ ಸಂಪೂರ್ಣ ಭಾಗಗಳನ್ನು ಮತ್ತು ಪಶ್ಚಿಮ ಏಷ್ಯಾವನ್ನು ಒಳಗೊಂಡಿತ್ತು. ಅಥೆನ್ಸ್ ಮತ್ತು ಸ್ಪಾರ್ಟಾ ಪುರಾತನ ಗ್ರೀಕ್ ನಾಗರಿಕತೆಯ ಎರಡು ಪ್ರಮುಖ ನಗರ ರಾಜ್ಯಗಳಾಗಿದ್ದು. ಅವೆರಡೂ ಪರಸ್ಪರ ವೈರಿಗಳಾಗಿ ಕಾದಾಡುತ್ತಿದ್ದವು. ಎರಡೂ ರಾಜ್ಯಗಳ ಸಂಸ್ಕೃತಿ ಭಿನ್ನವಾಗಿತ್ತು. ಸ್ಪಾರ್ಟಾ ಸಂಪೂರ್ಣವಾಗಿ ಯುದ್ಧಕ್ಕೆ ಮಹತ್ವ ನೀಡಿದರೆ, ಅಥೆನ್ಸ್ ಕಲೆ ಮತ್ತು ಶಿಕ್ಷಣಕ್ಕೆ  ಪ್ರಾಧಾನ್ಯತೆ ನೀಡಿತ್ತು. 

ನ್ಯಾಯ ವ್ಯವಸ್ಥೆ:
ಸುಮಾರು 4000 ವರ್ಷಗಳ ಹಿಂದೆ (ಕ್ರಿಸ್ತ ಪೂರ್ವ 1600) ಪುರಾತನ ಗ್ರೀಕ್ ನಾಗರಿಕತೆ ಆರಂಭವಾಯಿತು. ಗ್ರೀಕ್ ಸಾಮ್ರಾಜ್ಯ ಗ್ರೀಸ್ನಿಂದ್ ಯುರೋಪ್ವರೆಗೆ ಹಬ್ಬಿಕೊಂಡಿತ್ತು.  ಇಷ್ಟೊಂದು ವಿಶಾಲ ಸಾಮ್ರಾಜ್ಯವನ್ನು ಸಣ್ಣಪುಟ್ಟ ನಗರ-  ರಾಜ್ಯಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ನಗರಗಳು ತನ್ನದೇ ಆದ ಕಾನೂನು ಮತ್ತು ನಿಯಮಗಳನ್ನು ಹೊಂದಿತ್ತು.
ಅಥೆನ್ಸ್ನಲ್ಲಿ ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತಿತ್ತು. 500 ಮಂದಿ ಜ್ಯೂರಿಗಳು ಸೇರಿ ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ತೀಮರ್ಾನಿಸುತ್ತಿದ್ದರು. ಜನರು ತೆರಿಗೆಗಳನ್ನು ಪಾವತಿಸುತ್ತಿದ್ದರು. ಈ ಹಣವನ್ನು ಉತ್ಸವಗಳ ಆಚರಣೆ ಮತ್ತು ನಗರಗಳ ನಿಮರ್ಾಣಕ್ಕೆ ಬಳಸುತ್ತಿದ್ದರು.

ಒಲಿಂಪಿಕ್ ಕ್ರೀಡಾಕೂಟ:
ಕ್ರಿಸ್ತ ಪೂರ್ವ 776ರಲ್ಲಿ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಅಥೆನ್ಸ್ನಲ್ಲಿ ಆಯೋಜಿಸಲಾಗಿತ್ತು. ಕುಸ್ತಿ, ಬಾಕ್ಸಿಂಗ್, ಉದ್ದಜಿಗಿತ, ಭರ್ಚಿ ಎಸೆತ, ಚಕ್ರ ಎಸೆತ, ರಥ ಓಡಿಸುವ ಸ್ಪರ್ಧಿಗಳು ಇದ್ದವು. ಕ್ರೀಡೆಯಲ್ಲಿ ಗೆದ್ದವರಿಗೆ ಆಲೀವ್ ಎಲೆಗಳನ್ನು ನೀಡಿ ಸನ್ಮಾನಿಸಲಾಗುತ್ತಿತ್ತು. ಥಿಯೇಟರ್ಗಳಲ್ಲಿ ಉತ್ತಮ ಆಸನ ವ್ಯವಸ್ಥೆ ಇರುತ್ತಿತ್ತು.


 ಥಿಯೇಟರ್ಗಳು:

ಅಥೆನ್ಸ್ ಥಿಯೇಟರ್ಗಳಿಗೆ ಹೆಸರುವಾಸಿಯಾಗಿತ್ತು. ಅಲ್ಲಿ ಸುಮಾರು 148 ಥಿಯೇಟರ್ಗಳಿದ್ದವು. ಓಡ್ ಆಫ್ ಹಿರೋಡ್ ಅಟ್ಟಿಕಸ್ ಅಥೆನ್ಸ್ನ ಪ್ರಮುಖ ಥಿಯೇಟರ್ ಆಗಿತ್ತು. ಇಲ್ಲಿ ಮೇನಿಂದ ಅಕ್ಟೋಬರ್ ವರೆಗೆ ಉತ್ಸವ ನಡೆಯುತ್ತಿತ್ತು. ಥಿಯೇಟರ್ನಲ್ಲಿ ಪುರುಷರು ಮಾತ್ರ ಮುಖವಾಡ ಧರಿಸಿ ಪಾತ್ರಗಳ ನಿರೂಪಣೆ ಮಾಡುತ್ತಿದ್ದರು.
ಪುರಾತನ ಗ್ರೀಕರು ಉದ್ದನೆಯ ನಿಲುವಂಗಿಯನ್ನು ಧರಿಸುತ್ತಿದ್ದರು. ವಸ್ತ್ರಗಳನ್ನು ಹತ್ತಿಯಿಂದ ಮಾಡಲಾಗುತ್ತಿತ್ತು.
ಗ್ರೀಕರು ಕೆಲವೊಂದು ಆಹಾರದ ಬಗ್ಗೆ ಮೂಢನಂಬಿಕೆಯನ್ನು ತಳೆದಿದ್ದರು. ಕೆಲವರು ಬೀನ್ಸ್ಗಳನ್ನು ತಿನ್ನುತ್ತಿರಲಿಲ್ಲ. ಸಾವನ್ನಪ್ಪಿದವರ ಆತ್ಮಗಳು ಬೀನ್ಸ್ನಲ್ಲಿ ಇರುತ್ತವೆ ಎನ್ನುವ ನಂಬಿಕೆ ಅವರದ್ದಾಗಿತ್ತು.

ಪ್ರವಾಸಿ ತಾಣ:

ಇಂದು ಅಥೆನ್ಸ್ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲ್ಲಗೆ ಪ್ರತಿವರ್ಷ ಸುಮಾರು 1.7 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. 

 

Monday, August 25, 2014

ಅಕ್ಬರ ಕಟ್ಟಿಸಿದ ಫತೇಪುರ್ ಸಿಕ್ರಿ

ಮುಘಲ್ ಸಂಸ್ಕೃತಿ ಮತ್ತು ನಾಗರಿಕತೆಗೆ ಸಾಕ್ಷಿಯಾಗಿ ನಿಂತಿದೆ ಉತ್ತರ ಪ್ರದೇಶದ ಆಗ್ರಾ ಸಮೀಪದಲ್ಲಿರುವ ಈ ಸ್ಮಾರಕ ಪಟ್ಟಣ. ಫತೇಪುರ್ ಸಿಕ್ರಿಯ ಸುತ್ತಮುತ್ತಲಿನ ಜಾಗ ಮೂಲತಃ ರಜಪೂತ ದೊರೆಗಳಿಗೆ ಸೇರಿದ್ದಾಗಿತ್ತು. 12 ನೇ ಶತಮಾನದಲ್ಲಿ ಇಲ್ಲಿ ದೇವಾಲಯಗಳು ಇದ್ದವು. ಬಳಿಕ ಈ ಪ್ರದೇಶ ಬಾಬರನ ಕೈ ವಶವಾಯಿತು. ನಂತರದಲ್ಲಿ ಚಕ್ರವರ್ತಿ  ಅಕ್ಬರ ಇಲ್ಲಿ ತನ್ನ ರಾಜಧಾನಿಯನ್ನು ನಿರ್ಮಿಸಿದ. ಆದರೆ, ಇಲ್ಲಿ ಅಕ್ಬರನ ದರ್ಬಾರ್ ನಡೆದಿದ್ದು 
ಕೆಲವೇ ವರ್ಷಗಳು ಮಾತ್ರ!

 
ಭೂತಗಳ ನಗರ:
ಸಾಂಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸುತ್ತಿದ್ದುದರಿಂದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆ ಇರಲಿಲ್ಲ. 1571ರಲ್ಲಿ ಅಕ್ಬರ ಫತೇಪುರ್ ಸಿಕ್ರಿಯನ್ನು ಕಟ್ಟಿಸಿದ. ಈ ಪಟ್ಟಣವು ಮೂರು ಕಿ.ಮೀ. ಉದ್ದ ಮತ್ತು ಒಂದು ಕಿ.ಮೀ.  ಅಗಲವಾಗಿದೆ. ಅನೇಕ ವರ್ಷಗಳ ಶ್ರಮದಿಂದ ಕಟ್ಟಲ್ಪಟ್ಟಿದ್ದರೂ ಫತೇಪುರ್ ಸಿಕ್ರಿ ಹೆಚ್ಚು ವರ್ಷಗಳ ಕಾಲ ಉಪಯೋಗಿಸಲ್ಪಡಲಿಲ್ಲ. 1585ರಲ್ಲಿ ನೀರಿನ ಕೊರತೆಯಿಂದಾಗಿ ಅಕ್ಬರ ತನ್ನ ದೆಹಲಿಗೆ ರಾಜಧಾನಿಯನ್ನು ವಗರ್ಾಯಿಸಿದ. ಹೀಗಾಗಿ ಇಲ್ಲಿ ಯಾರೂ ವಾಸಿಸದ ಕಾರಣಕ್ಕೆ ಅನೇಕ ಶತಮಾನಗಳ ಕಾಲ ಇದು ಭೂತಗಳ ನಗರ ಎಂದೇ ಕರೆಸಿಕೊಂಡಿತು. ಇಂದು ದೆಹಲಿಯಲ್ಲಿರುವ ಐತಿಹಾಸಿಕ ಸ್ಮಾರಕಗಳಲ್ಲಿ ಒಂದೆನಿಸಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಫತೇಪುರ್ ಸಿಕ್ರಿ ಗುರುತಿಸಲ್ಪಟ್ಟಿದೆ.

ಇಂಡೊ- ಇಸ್ಲಾಮಿಕ್ ವಾಸ್ತು ಶಿಲ್ಪ:
ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿಂದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. 
ಇಲ್ಲಿ ಕಂಡುಬರುವ ಅನೇಕ ಸ್ಮಾರಕಗಳನ್ನು ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಹಿಂದು, ಇಂಡೊ- ಮುಸ್ಲಿಂ ಮತ್ತು ಪಷರ್ಿಯನ್ ಶೈಲಿಯ ವಾಸ್ತುಶಿಲ್ಪವನ್ನು ಬಿಂಬಿಸುತ್ತದೆ. ಇಲ್ಲಿನ ಕಟ್ಟಡಗಳಲ್ಲಿ ದಿವಾನ್ ಇ ಆಮ್,  ಸಾರ್ವಜನಿಕ ಪ್ರೇಕ್ಷಕರ ಸಭಾಂಗಣ, ದಿವಾನ್ ಇ ಖಾಸ್, ಬೀರಬಲ್ಲನ ಅರಮನೆ, ಪಂಚ ಮಹಲ್, ಜೋಧಾಬಾಯಿ ಅರಮನೆ, ಬುಲಂದ್ ದರ್ವಾಜಾ, ಜಾಮಾ ಮಸೀದಿ ಪ್ರಮುಖವಾದವುಗಳು.

  • ಪಂಚ ಮಹಲ್: ಸ್ತಂಬಾಕಾರದ 5 ಅಂತಸ್ತಿನ ರಚನೆಯಾಗಿದೆ. ಇದನ್ನು ರಾಜ ತನ್ನ ವಿರಾಮಕ್ಕಾಗಿ, ಮನೋರಂಜನೆಗಾಗಿ ಬಳಸುತ್ತಿದ್ದನು. ಈ ಅರಮನೆಯು ವಿಶೇಷವಾಗಿ ರಾಣಿಯರು ಮತ್ತು ರಾಜ ಕುಮಾರಿಯರಿಗೆ ಮೀಸಲಾಗಿತ್ತು.
  • ಬೀರ್ಬಲ್ಲನ ಅರಮನೆ: ಅಕ್ಬರನ ಮಂತ್ರಿ ಬೀರಬಲ್ಲನ ಅರಮನೆ ಮುಘಲರ ಮುಖ್ಯ ಅರಮನೆಗಳಲ್ಲಿ ಒಂದಾಗಿತ್ತು. ಈ ಅರಮನೆ ಹಿಂದು ಮತ್ತು ಮುಘಲ್ ಎರಡೂ ವಾಸ್ತುಶಿಲ್ಪವನ್ನು ಹೊಂದಿದೆ.
  • ಬುಲಂದ್ ದರ್ವಾಜಾ: ಜಾಮಾ ಮಸೀದಿಯ ಮುಖ್ಯ ದ್ವಾರಗಳಲ್ಲಿ ಒಂದು. ಹೊರಗಡೆಯಿಂದ ಬೃಹತ್ ಗಾತ್ರ- 55 ಮೀಟರ್ ಎತ್ತರವಾಗಿರುವ ಈ ದ್ವಾರ ಒಳಹೋದಂತೆ ಇನ್ನೊಂದು ಕಡೆಯಲ್ಲಿ ಮಾನವ ಗಾತ್ರಕ್ಕೆ ಇಳಿಯುತ್ತದೆ.
  • ಜೋಧಾಬಾಯಿ ಅರಮನೆ: ಅಕ್ಬರನ ಪಟ್ಟದ ರಾಣಿ ಜೋದಾಬಾಯಿಯ ಅರಮನೆ. ಒಂದು ಪ್ರಾಂಗಣದ ಸುತ್ತ ಕಟ್ಟಲ್ಪಟ್ಟಿರುವ ಈ ಅರಮನೆಯಲ್ಲಿ ಗುಜರಾತಿ ಪ್ರಭಾವವನ್ನು ಕಾಣಬಹುದು.
  • ಸಂತ ಸಲೀಂ ಚಿಸ್ತಿ: ಸಂತ ಶೇಕ್ ಸಲೀಂ ಚಿಸ್ತಿಯು ಅಕ್ಬರನಿಗೆ ಮಗ ಹುಟ್ಟುತ್ತಾನೆ ಎಂದು ಭವಿಷ್ಯ ನುಡಿದಿದ್ದು ಇಲ್ಲಿಯೇ ಎನ್ನವ ಪ್ರತೀತಿ ಇದೆ. ಹೀಗಾಗಿ ಫತೇಪುರ್ ಸಿಕ್ರಿಯಲ್ಲಿ ಆತನ ಸಮಾಧಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಮಕ್ಕಳಿಲ್ಲದ ನೂರಾರು ಮಹಿಳೆಯರಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
  • ಜಾಮಾ ಮಸೀದಿ: ವಿಶ್ವ ಪ್ರಸಿದ್ಧ ಜಾಮಾ ಮಸೀದಿಯೂ ಫತೇಪುರ ಸಿಕ್ರಿಯಲ್ಲಿದೆ. ಇದು ಭಾರತದಲ್ಲಿಯೇ ಅತಿ ದೊಡ್ಡ ಮತ್ತು ವ್ಯವಸ್ಥಿತವಾಗಿ ಕಟ್ಟಲಾದ ಮಸೀದಿಯಾಗಿದೆ.


Thursday, August 21, 2014

ಮಾಚು ಪಿಚು ಎಂಬ ಕಳೆದುಹೋದ ನಗರ!

ಮಾಚು ಪಿಚುವನ್ನು ಇಂಕಾ ಸಾಮ್ರಾಜ್ಯದ ಕಳೆದು ಹೋದ ನಗರ ಎಂದೇ ಕರೆಯಲಾಗುತ್ತದೆ. ಗೋಪುರದ ತುತ್ತತುದಿಗೆ ಇರುವ ಈ ನಗರವನ್ನು 1450ರ ಸುಮಾರಿನಲ್ಲಿ ಕಟ್ಟಲಾಗಿತ್ತು ಎಂದು ಅಂದಾಜಿಸಲಾಗಿದೆ. ಆದರೆ, ಒಂದೇ ಶತಮಾನದಲ್ಲಿ ಅಂದರೆ, 1572ರ ವೇಳೆಗೆ ಈ ಭವ್ಯ ನಾಗರಿಕತೆ ಜನಮಾನಸದಿಂದ ಕಣ್ಮರೆಯಾಗಿತ್ತು. ಮತ್ತೆ ಈ ನಗರದ ಅಸ್ತಿತ್ವ ಪತ್ತೆಯಾದದ್ದು 1911ರಲ್ಲಿ! 


ಮಾಚು ಪಿಚು ಅಂದರೆ ಭಾರತೀಯ ಭಾಷೆಯಲ್ಲಿ ಹಳೆಯ ಬೆಟ್ಟ ಎನ್ನುವ ಅರ್ಥವಿದೆ. 7970 ಅಡಿ ಎತ್ತರದಲ್ಲಿ ಈ ನಗರವಿದೆ. ಪೆರು ದೇಶದ ಆಂಡಿಸ್ ಪರ್ವತದ ಪೂರ್ವ ಪಾಶ್ರ್ವದ ಇಳಿಜಾರಿನಲ್ಲಿ ಈ ತಾಣವಿದೆ. ಮೆಟ್ಟಿಲುಗಳ ರೂಪದಲ್ಲಿ ಈ ನಗರವನ್ನು ನಿಮರ್ಿಸಲಾಗಿದೆ. ಕಲ್ಲಿನಿಂದ ಮಾಡಿದ ಗೋಡೆಗಳು ಮತ್ತು ಮನೆಯ ಮಹಡಿಗಳು ಇಲ್ಲಿ ಕಾಣ ಸಿಗುತ್ತವೆ. ಮನೆ, ಸ್ನಾನಗೃಹ, ದೇವಾಲಯ ಹೀಗೆ ನಾನಾ ರೀತಿಯ 150ಕ್ಕೂ ಹೆಚ್ಚಿನ ಕಟ್ಟಡ ರಚನೆಗಳು ಇಲ್ಲಿವೆ. 32,500 ಹೆಕ್ಟೇರ್ ಜಾಗಕ್ಕೆ ಮಾಚು ಪಿಚು ನಗರ ಆವರಿಸಿಕೊಂಡಿದೆ. ಈ ಜಾಗದಲ್ಲಿ ಆಭರಣ, ಬೆಳ್ಳಿ ಸಾಮಗ್ರಿ, ಪಿಂಗಾಣಿ ಸೇರಿದಂತೆ 40 ಸಾವಿರ ಕಲಾಕ್ರತಿಗಳು ದೊರೆತಿವೆ. ಲ್ಯಾಟಿನ್ ಅಮೆರಿಕದ ಅತ್ಯಂತ ಐತಿಹಾಸಿಕ ಸ್ಥಳ ಎಂದು ಮಾಚು ಪಿಚು ಪರಿಗಣಿಸಲ್ಪಟ್ಟಿದೆ.

ಏಳು ಅದ್ಭುತಗಳಲ್ಲಿ ಒಂದು:
ಪಾಳುಬಿದ್ದಿದ್ದ ಈ ನಗರವನ್ನು 1976ರಲ್ಲಿ ಪುನಃ ಕಟ್ಟಲಾಗಿದೆ. ಶೇ.30ರಷ್ಟು ಮರುನಿಮರ್ಾಣ ಕಾರ್ಯ ಪೂರ್ಣಗೊಂಡಿದ್ದು, ಪುನರುತ್ಥಾನ ಕಾರ್ಯ ಇಂದಿಗೂ ನಡೆಯುತ್ತಿದೆ. 1983ರಲ್ಲಿ ಈ ಸ್ಥಳವನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದ್ದು, 2007ರಲ್ಲಿ ಜಗತ್ತಿನ ಹೊಸ ಏಳು ಅದ್ಭುತಗಳಲ್ಲಿ ಒಂದು ಎಂದು ಹೆಸರಿಸಲಾಗಿದೆ.


 ನಗರ ನಿರ್ಮಿಸಿದ್ದು ಹೇಗೆ?
ವಿಶೇಷವೆಂದರೆ ಈ ನಗರದಲ್ಲಿನ ಕಟ್ಟಡಗಳನ್ನು ಕಲ್ಲಿನಿಂದಲೇ ಕಟ್ಟಲಾಗಿದೆ. ಇಂಕಾಗಳು ಕಲ್ಲಿನ ಕಟ್ಟಡಗಳನ್ನು ನಿಮರ್ಿಸುವುದರಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ನಗರದ ನಿರ್ಮಾಣಕ್ಕೆ ಬಳಸಲಾದ ಕಲ್ಲುಗಳು 22 ಕೆ.ಜಿಯಷ್ಟು ತೂಕವಿದೆ. ಅವುಗಳನ್ನು ಬೆಟ್ಟದ ಮೇಲಕ್ಕೆ ಹೊತ್ತುತರಲು ಚಕ್ರದ ಗಾಡಿಗಳನ್ನಾಗಲಿ, ಪ್ರಾಣಿಗಳನ್ನಾಗಲಿ, ಕಬ್ಬಿಣದ ಸಲಾಕೆಗಳನ್ನಾಗಲಿ ಕೆಸಲಗಾರರು ಬಳಸಿರಲಿಲ್ಲ. ಬದಲಾಗಿ ನೂರಾರು ಮಂದಿ ಒಟ್ಟಿಗೆ ಸೇರಿ ಕಲ್ಲುಗಳನ್ನು ಮೇಲಕ್ಕೆ ಸಾಗಿಸಿದ್ದಾರೆ ಎಂದು ನಂಬಲಾಗಿದೆ. ಕಲ್ಲುಗಳ ಜೋಡಣೆಗೆ ಗಾರೆಗಳನ್ನು ಬಳಸಲಾಗಿಲ್ಲ. ಕಲ್ಲುಗಳನ್ನೇ ಕಡಿದು ಒಂದಕ್ಕೊಂದು ಜೋಡಿಸಲಾಗಿದೆ.
ಮಾಚು ಪಿಚುವನ್ನು ನಗರ ಮತ್ತು ಕೃಷಿ ಪ್ರದೇಶ ಎಂದು ವಿಂಗಡಿಸಲಾಗಿತ್ತು. ಮೇಲಿನ ಪಟ್ಟಣ ಪ್ರದೇಶದಲ್ಲಿ ರಾಜರ ಮನೆಗಳು ಮತ್ತು ದೇವಾಲಯಗಳುದ್ದವು. ಕೆಳಗಿನ ಪ್ರದೇಶದಲ್ಲಿ ಕಾಮರ್ಿಕರ ಮನೆಗಳಿದ್ದವು. ಮಾಚು ಪಿಚು ಸ್ಥಳಕ್ಕೆ ತೆರಳಲು ಇಂಕಾಗಳು ರಸ್ತೆಯೊಂದನ್ನು ನಿರ್ಮಾಣ ಮಾಡಿದ್ದರು. ಇಂದು ಇದೇ ಮಾರ್ಗದಲ್ಲಿ 2ರಿಂದ 5ದಿನ ಚಾರಣಮಾಡಿ ಮಾಚು ಪಿಚುವನ್ನು ತಲುಪಬಹುದು. 

ಕಣ್ಮರೆ ಯಾಗಿದ್ದು ಹೇಗೆ?
ಯಾರಿಗೂ ಗೊತ್ತಿರದ ಪ್ರದೇಶದಲ್ಲಿ ಮಾಚು ಪಿಚು ಜನಾಂಗ ವಾಸವಿದ್ದಿತ್ತು. ಅಲ್ಲದೆ, ಸ್ಪ್ಯಾನಿಷ್ ದಾಳಿಗೂ ಮುನ್ನವೇ ಈ ನಗರ ಅವನತಿ ಹೊಂದಿತ್ತು. ಬಹುಶಃ ಯಾರಿಂದಲೋ ತಗುಲಿದ ಸಿಡುಬು ರೋಗಕ್ಕೆ ತುತ್ತಾಗಿ ಮಾಚು ಪಿಚು ಜನಾಂಗ ಅಳಿದಿರಬಹುದು ಎಂದು ಭಾವಿಸಲಾಗಿದೆ. ಆದರೂ ಈ ನಗರ ಕಾಣೆಯಾಗಿದ್ದು ಹೇಗೆ ಎಂಬುದು ಇಂದಿಗೂ ನಿಗೂಢ.

ನಗರ ನಿರ್ಮಿಸಿದ್ದು ಏಕೆ?

ರಾಜವಂಶಸ್ಥರು ವಾಸಿಸುವ ಸಲುವಾಗಿ ಏಕಾಂತ ಪ್ರದೇಶದಲ್ಲಿ ಮಾಚು ಪಿಚು ಎಂಬ ನಗರವನ್ನು ನಿಮರ್ಿಸಲಾಯಿತು ಎನ್ನುವು ಒಂದು ವಾದವಾದರೆ, ಇದೊಂದು ಧಾರ್ಮಿಕ ಸ್ಥಳವಾಗಿದ್ದರಬಹುದು ಅಥವಾ ಇದೊಂದು ಪುರಾತನ ಕೋಟೆಯಾಗಿದ್ದಿರಬಹುದು ಎಂದು ಹೇಳಲಾಗಿದೆ. ಇಂಥದ್ದೊಂದು ಪಟ್ಟಣವನ್ನು  ಏಕೆ ನಿರ್ಮಾಣ ಮಾಡಲಾಯಿತು ಎಂಬ ಬಗ್ಗೆಯೂ ಕಾರಣಗಳಿಲ್ಲ. ಕೊನೆಗೂ ಮಾಚು ಪಿಚು ಖ್ಯಾತಿಯಾಗಿರುವುದು ಕಳೆದುಹೋದ ನಗರ ಎಂದೇ.

Thursday, August 14, 2014

ಚಾಂದ್ ಬಾವರಿ ಎಂಬ ಮೆಟ್ಟಿಲು ಬಾವಿ

ರಾಜಸ್ಥಾನದ ಅಭಾನೇರಿಯಲ್ಲಿರುವ ಚಾಂದ್ ಬಾವರಿ ಭಾರತದಲ್ಲಿ ಕಾಣಸಿಗುವ ಸುಂದರ ಮೆಟ್ಟಿಲುಬಾವಿಗಳಲ್ಲಿ ಒಂದು. ಜಗತ್ತಿನ ಅತಿ ಆಳದ ಮೆಟ್ಟಿಲು ಬಾವಿ ಎಂದೇ ಪ್ರಸಿದ್ಧಿ ಪಡೆದಿದೆ. 9ನೇ ಶತಮಾನದಲ್ಲಿ  ನಿರ್ಮಾಣವಾದ ಬಾವಿ ಇದು. ರಾಜಾ ಚಾಂದ್ ಸಿಂಗ್ ಈ ಬಾವಿಯನ್ನು ನಿರ್ಮಿಸಿದ್ದರಿಂದ ಚಾಂದ್ ಬಾವರಿ ಎಂಬ ಹೆಸರು ಬಂದಿದೆ. ಹರ್ಷತ್ ಮಾತಾ ದೇವಾಲಯದ ಮುಂಭಾಗದಲ್ಲಿ ಈ ಮೆಟ್ಟಿಲಿನ ಬಾವಿಯನ್ನು ನಿರ್ಮಾಣ ಮಾಡಲಾಗಿದೆ. ಈ ಬಾವಿ ನಿರ್ಮಾಣವಾಗಿ 1200 ವರ್ಷಗಳು ಕಳೆದಿದ್ದರೂ ಇಂದಿಗೂ ಸುಭದ್ರ ಸ್ಥಿತಿಯಲ್ಲಿದೆ.


ಬಿಸಿಲಿನಲ್ಲೂ ತಂಪಾದ ಸ್ಥಳ:
ಬಾವಿಯ ಕೆಳಭಾಗದಲ್ಲಿ ಉಷ್ಣಾಂಶ ಮೇಲಿಗಿಂತಲೂ 5 ರಿಂದ 6 ಡಿಗ್ರಿಯಷ್ಟು ಕಡಿಮೆ ಇರುತ್ತದೆ. ರಣಬಿಸಿಲಿನ ವೇಳೆಯಲ್ಲಿ ಇಲ್ಲಿನ ಜನರು ಬಾವಿಯ ಕೆಳಭಾಗಕ್ಕೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. 
ಅಲ್ಲದೆ, ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಕಾರಣ ಮಳೆಯ ನೀರನ್ನು ಇಂಗಿಸಲು ಈ ಬಾವಿಯನ್ನು ಕೊರೆಯಲಾಗಿದೆ ಎಂದೂ ಹೇಳಾಗುತ್ತದೆ.  ಮೆಟ್ಟಿಲುಗಳನ್ನು ನಿರ್ಮಿಸಲು ರಂಧ್ರವಿರುವ ಕಪ್ಪು ಕಲ್ಲುಗಳನ್ನು ಬಳಸಲಾಗಿದೆ. ಇದು ಹೆಚ್ಚು ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಭಾವಿಯ ಕೆಳಭಾಗದಲ್ಲಿರುವ ಪುಷ್ಕರಣಿಯಲ್ಲಿ ಇಂದಿಗೂ ಹಸಿರುಗಟ್ಟಿರುವ ನೀರನ್ನು ನೋಡಬಹುದು. 


ಹಿಂದು- ಮುಸ್ಲಿಂ ವಾಸ್ತುಶಿಲ್ಪ!
ಈ ಬಾವಿ ಹಿಂದು ಮತ್ತು ಮುಸ್ಲಿಂ ಎರಡೂ ಮಾದರಿಯ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಮೇಲಿನ ಭಾಗದಲ್ಲಿ ಮುಸ್ಲಿಂ ಶೈಲಿಯ ವಾಸ್ತುಶಿಲ್ಪವನ್ನು ಮತ್ತು ಕೆಳಭಾಗದಲ್ಲಿ ಹಿಂದು ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಕಾಲ ಕ್ರಮೇಣ ಶಿಥಿಲಗೊಂಡ ಈ ಬಾವಿಯ ಮೇಲಿನ ಭಾಗವನ್ನು ಮುಘಲರು 18ನೇ ಶತಮಾನದಲ್ಲಿ ಮರು ನಿರ್ಮಾಣ ಮಾಡಿದರು. ಬಾವಿಗೆ ತಾಗಿಕೊಂಡು ಕಮಾನಿನ ಮೇಲ್ಚಾವಣಿಯನ್ನು ನಿರ್ಮಿಸಿದರು. ಚಾವಣಿಯ ಮೇಲೆ ನಿಂತು ಹರ್ಷತ್ ಮಾತಾ ದೇವಾಲಯದ ಸಂಪೂರ್ಣ ದೃಶ್ಯವನ್ನು ವೀಕ್ಷಿಸಬಹುದಾಗಿದೆ. 
ಹಾಲಿವುಡ್ ಚಿತ್ರ ನಿರ್ಮಾಣ:
 ಹಾಲಿವುಡ್ ಚಿತ್ರಗಳಾದ ದಿ ಫಾಲ್ ಮತ್ತು ದಿ ಡಾರ್ಕ್ ನೈಟ್ ರೈಸಸ್ ನಲ್ಲಿ ಈ ಬಾವಿಯನ್ನು ಚಿತ್ರೀಕರಿಸಲಾಗಿದೆ.

Wednesday, August 6, 2014

ಅಮೃತಸರದ ಸ್ವರ್ಣ ಮಂದಿರ

ಸಿಖ್ ಧರ್ಮೀಯರಿಗೆ ಇದು ಅತ್ಯಂತ ಪವಿತ್ರ ಮಂದಿರ. ದರ್ಬಾರ್ ಸಾಹೀಬ ಅಥವಾ ಸ್ವರ್ಣಮಂದಿರ ಎಂದು ಕರೆಯಲಾಗುವ ಶ್ರೀ ಹರ್ಮಂದಿರ್ ಸಾಹೀಬ ತನ್ನ ಸ್ವರ್ಣ ಲೇಪನ ಮತ್ತು ಸೌಂದರ್ಯ ಭರಿತ ನೋಟದಿಂದಲೇ ಗಮನ ಸೆಳೆಯುತ್ತದೆ. ಪ್ರತಿಯೊಬ್ಬ ಸಿಖ್ ಕೂಡ ಅಮೃತಸರದಲ್ಲಿರುವ ಈ ದೈವಿಕ ಮಂದಿರವನ್ನು ನೋಡುವ ಅಭಿಲಾಷೆಯನ್ನು ಇಟ್ಟುಕೊಂಡಿರುತ್ತಾನೆ. ಸುಮಾರು 500 ವರ್ಷಗಳ ಇತಿಹಾಸವಿರುವ ಈ ಮಂದಿರ ಭಾರತೀಯ
ಚರಿತ್ರೆಯಲ್ಲಿ ಮೈಲಿಗಲ್ಲನ್ನು ನೆಟ್ಟಿದೆ.


 ಮಂದಿರದ ಇತಿಹಾಸ:
ಸಿಖ್ಖರ ನಾಲ್ಕನೇ ಗುರು ರಾಮದಾಸ್ ಅವರು 1579ರಲ್ಲಿ ಅಮೃತಸರವನ್ನು ಸ್ಥಾಪಿಸಿದರು. ಈ ಜಮೀನಿನಲ್ಲಿ ಒಂದು ಸರೋವರವನ್ನು ನಿರ್ಮಾಣ ಮಾಡಿದ್ದರು. ಅವರ ಪುತ್ರ, ಐದನೇ ಸಿಖ್ ಗುರುವಾದ ಗುರು ಅರ್ಜುನ್ ಸಾಹೀಬ ಅವರು ಸಿಖ್ಖರಿಗೆ ಪೂಜಿಸಲು ಒಂದು ತಾಣಬೇಕು ಎಂದು ಮನಗಂಡರು. ಅವರೇ ಈ ಮಂದಿರ ರೂಪುರೇಷೆ ಸಿದ್ಧಪಡಿಸಿದ್ದರು. 1602ರಲ್ಲಿ ದೇವ ಮಂದಿರವು ಸಂಪೂರ್ಣವಾಯಿತು. ಗುರು ಅರ್ಜುನ್ ಸಾಹೀಬ್ ಅವರು ಗುರು ಗೃಂಥ ಸಾಹೀಬರನ್ನು ಅದರೊಳಗೆ ಪ್ರತಿಷ್ಠಾಪಿಸಿದರು. 18ನೇ ಶತಮಾನದ ಮಧ್ಯಭಾಗದಲ್ಲಿ ಈ ಮಂದಿರ ಅಫ್ಘನ್ನರ ದಾಳಿಗೆ ತುತ್ತಾಯಿತು. 1803ರಲ್ಲಿ ಪಂಜಾಬ್ನ ಅರಸ ರಣಜಿತ್ ಸಿಂಗ್ ಈ ಮಂದಿರದ ಅರ್ಧಭಾಗ ಮಾರ್ಬಲ್ ನಿಂದಲೂ ಇನ್ನರ್ಧಭಾಗವನ್ನು ಶುದ್ಧ ಚಿನ್ನದಿಂದಲೂ ನಿರ್ಮಿಸಿದ. ಅಂದಿನಿಂದ ಅದನ್ನು ಸ್ವರ್ಣ ಮಂದಿರ ಎಂದು ಕರೆಯಲಾಯಿತು. ಮಂದಿರವನ್ನು ಕಲ್ಲಿನಿಂದ ಮೊದಲು ನಿರ್ಮಿಸಿ ಆ ನಂತರ ಚಿನ್ನದ ಲೇಪನವನ್ನು ಮಾಡಲಾಗಿದೆ. ಸರೋವರದ ಮಧ್ಯದಲ್ಲೇ ಇದು ನಿರ್ಮಾಣಗೊಂಡಿದ್ದು, ಮಂದಿರ ಪ್ರತಿಬಿಂಬ ನೀರಿನ ಮೇಲೆ ಬಿದ್ದು ನಯನಮನೋಹರ ದೃಶ್ಯ ನೋಡಲು ಸಿಗುತ್ತದೆ. ಮಂದಿರಕ್ಕೆ ಬಳಸಲಾದ ಚಿನ್ನದ ನಿಖರ ಮಾಹಿತಿ ಇಲ್ಲ. ಗೋಪುರಕ್ಕೆ ಸುಮಾರು 500 ಕೆ.ಜಿ. ಚಿನ್ನವನ್ನು ಬಳಸಲಾಗಿದೆ ಎಂದು ಹೇಳಲಾಗುತ್ತದೆ. ಸ್ವರ್ಣ ಲೇಪನಕ್ಕೆ ಬೇಕಾದ ಚಿನ್ನವನ್ನು ರಾಜ ರಣಜಿತ್ ಸಿಂಗ್ ದೇಣಿಗೆ ರೂಪದಲ್ಲಿ ನೀಡಿದ್ದ.

ಮಂದಿರಕ್ಕೆ ಅದರದೇ ಕಟ್ಟುಪಾಡು:

ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರದಲ್ಲಿ ಸುಮಾರು 40 ಸಾವಿರ ಮಂದಿ ಮಂದಿರವನ್ನು ವೀಕ್ಷಿಸುತ್ತಾರೆ. ದೇವಾಲಯದ ಒಳ ಪ್ರವೇಶಿಸಿಲು ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಲಾಗಿದೆ.
ಮಂದಿರದ ಒಳಗೆ ಯಾವುದೇ ರೀತಿಯ ಪಾದರಕ್ಷೆಗಳನ್ನು ಧರಿಸಿ ತೆರಳುವಂತಿಲ್ಲ. ನೀರಿನ ಒಂದು ಕೊಳದಲ್ಲಿ ಪಾದವನ್ನು ತೊಳೆದೇ ಒಳ ಪ್ರವೇಶಿಸಬೇಕು. ಮಂದಿರದಲ್ಲಿ  ಇರುವವರೆಗೂ ಮದ್ಯಪಾನ ಮಾಡಬಾರದು. ಧೂಮಪಾನ ಇಲ್ಲವೇ ಇತರೇ ಔಷಧಗಳನ್ನು ಸೇವಿಸಬರದು. ಒಳಗಡೆ ಪ್ರವೇಶಿಸುವಾಗ ಶಿರ ಹೊದಿಕೆಯನ್ನು ಧರಿಸುವುದು ಕಡ್ಡಾಯ. ಒಂದುವೇಳೆ ಹೊದಿಕೆ ತರದಿದ್ದರೆ ಮಂದಿರದಲ್ಲಿಯೇ ಅದನ್ನು ನೀಡಲಾಗುತ್ತದೆ.



ಮಂದಿರದಲ್ಲಿ ಉತ್ಸವ:
ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಮಂದಿರದಲ್ಲಿ ವೈಶಾಖಿ ಉತ್ಸವವನ್ನು ಆಚರಿಸಲಾಗುತ್ತದೆ. ಕಲಶ ಸ್ಥಾಪನೆಯ ದಿನವನ್ನಾಗಿ ಸಿಖ್ಖರು ಉತ್ಸವ ಆಚರಿಸುತ್ತಾರೆ. ಗುರುನಾನಕ್ ಜಯಂತಿಯಂದೂ ಸಹ ಇಲ್ಲಿ ಹಬ್ಬವನ್ನು ಆಚಚರಿಸಲಾಗುತ್ತದೆ.

ಬ್ಲ್ಯೂ ಸ್ಟಾರ್ ಕಾರ್ಯಾಚರಣೆ:

ಖಲಿಸ್ತಾನ ಪ್ರತ್ಯೇಕತಾವಾದಿಗಳು ಮಂದಿರವನ್ನು 1984ರಲ್ಲಿ ತಮ್ಮ ವಶಕ್ಕೆ ಪಡೆದುಕೊಂಡಿದ್ದು. ಮಂದಿರದಲ್ಲಿ ಖಲಿಸ್ತಾನ ಉಗ್ರರು ಅಡಗಿ ಕುಳಿತಿದ್ದರು. ಹೀಗಾಗಿ ಉಗ್ರರನ್ನು ಬಗ್ಗುಬಡಿಯಲು ಅಂದಿನ ಪ್ರಧಾನಿ ಇಂದಿರಾಗಾಂಧಿ 1984ರ ಜೂನ್ನಲ್ಲಿ ಮಂದಿರದ ಮೇಲೆ ದಾಳಿ ಮಾಡುವಂತೆ ಆದೇಶಿಸಿದ್ದರು. ಇದು ಆಪರೇಷನ್ ಬ್ಲ್ಯೂ ಸ್ಟಾರ್ ಕಾಯರ್ಾಚರಣೆ ಎಂದೇ ಕುಖ್ಯಾತಿ ಪಡೆದಿದೆ. ಈ ದಾಳಿಯ ಮೂಲಕ ಮಂದಿರದಲ್ಲಿ ಅಡಗಿದ್ದ ಎಲ್ಲ 500 ಉಗ್ರರನ್ನು ಹತ್ಯೆ ಮಾಡಲಾಯಿತು. ಆದರೆ, ದಾಳಿಯಿಂದ ಮಂದಿರಕ್ಕೆ ಹಾನಿಯೂ ಸಂಭವಿಸಿದೆ. ಇದು ಸಿಖ್ಖರ ಮನಸನ್ನು ನೋಯಿಸಿತು. ಹೀಗಾಗಿ ಮಂದಿರಕ್ಕೆ ಸರ್ಕಾರ ಭದ್ರತೆ ನೀಡುವುದನ್ನು ಸಿಖ್ಖರು ಒಪ್ಪುವುದಿಲ್ಲ. ಅಲ್ಲದೆ, ಮಂದಿರದಲ್ಲಿ ಸರ್ಕಾರ ಯಾವುದೇ ದುರಸ್ತಿಕಾರ್ಯ ಕೈಗೊಳ್ಳುವುದಕ್ಕೂ ಅವಕಾಶ ವಿಲ್ಲ. 

Wednesday, July 23, 2014

ಭಯಾನಕ ಕಪ್ಪು ಚಿರತೆ

 ಕಪ್ಪು ಚಿರತೆ ಅಥವಾ ಬ್ಲ್ಯಾಕ್ ಪ್ಯಾಂಥರ್  ಆಕಾರ ಮತ್ತು ರೂಪದಲ್ಲಿ ಚಿರತೆಗಿಂತ ಸ್ವಲ್ಪ ಭಿನ್ನ. ತನ್ನ ಕಪ್ಪು ಬಣ್ಣದ  ದೇಹ ಮತ್ತು ಹಳದಿ ಕಣ್ಣುಗಳಿಂದ ಎಂಟೆದೆಯ ಬಂಟರನ್ನೂ ನಡುಗಿಸ ಬಲ್ಲದು. ಮರದ ಮೇಲೆ ಅಡಗಿ ಕುಳಿತು ಬೇಟೆಯ ಮೇಲೆ ಒಮ್ಮೆಲೇ ದಾಳಿ ಮಾಡುತ್ತದೆ. ಆದರೆ, ಸಾಮಾನ್ಯ ಚಿರತೆ ಮತ್ತು ಬ್ಲ್ಯಾಕ್ ಪ್ಯಾಂಥರ್ ನಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ.



ನಾನಾ ಹೆಸರು:
ಕಾಡು ಬೆಕ್ಕಿನ ಪ್ರಜಾತಿಗೆ ಸೇರಿದವು ಪ್ಯಾಂಥರ್ಗಳು. ಲ್ಯಾಟೀನ್ ಅಮೆರಿಕದಲ್ಲಿ ಬ್ಲ್ಯಾಕ್ ಪ್ಯಾಂಥರ್ ಅನ್ನು ಬ್ಲ್ಯಾಕ್ ಜಾಗ್ವಾರ್ ಎಂದು ಕರೆಯುತ್ತಾರೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಇದನ್ನು ಕಪ್ಪು ಚಿರತೆ ಎಂದು ಕರೆಯುತ್ತಾರೆ. ಉತ್ತರ ಅಮೆರಿಕದಲ್ಲಿ ಇದನ್ನು ಬ್ಲ್ಯಾಕ್ ಕೂಗರ್ ಎಂದು ಕರೆಯಲಾಗುತ್ತದೆ. ಚಿರತೆಯಲ್ಲಿ ಹಳದಿ ಮೈ ಮೇಲೆ ಕಪ್ಪು ಚುಕ್ಕೆಗಳಿದ್ದರೆ, ಬ್ಲ್ಯಾಕ್ ಪ್ಯಾಂಥರ್ ನ ಮೈ ಸಂಪೂರ್ಣ ಕಪ್ಪಾಗಿರುತ್ತದೆ. ಚಿರತೆಗಳಿಗಿಂತ ಪ್ಯಾಂಥರ್ಗಳು ಆಕಾರದಲ್ಲಿ ದೊಡ್ಡದಾಗಿರುತ್ತವೆ. ಕೆಲವೊಮ್ಮೆ ಬಿಳಿಯ ಪ್ಯಾಂಥರ್ಗಳೂ ಕಾಣಸಿಗುತ್ತವೆ. ಸಿಂಹದಂತೆ ಕಾಣುವ ಪೂಮಾಗಳು ಸಹ ಪ್ಯಾಂಥರ್ ಜಾತಿಗೆ ಸೇರಿದೆ. ಪ್ಯಾಂಥರ್ಗಳ ತಲೆ ಚಿರತೆಗಳಿಗಿಂತ ದೊಡ್ಡದಾಗಿರುತ್ತದೆ. ಅಲ್ಲದೆ, ಅಗಲವಾದ ದವಡೆಯನ್ನು ಹೊಂದಿರುತ್ತದೆ. ವಿಪರೀತ ಬೇಟೆ ಮತ್ತು ಸಂತತಿ ನಾಶದಿಂದಾಗಿ ಪ್ಯಾಂಥರ್ಗಳು ಇಂದು ಅಳಿವಿನ ಅಂಚನ್ನು ತಲುಪಿವೆ.
ಒಂದು ಬಲಿತ ಕಪ್ಪು ಚಿರತೆ 7ರಿಂದ 8 ಅಡಿಯಷ್ಟು ಉದ್ದ ಮತ್ತು 50ರಿಂದ 120 ಕೆ.ಜಿ ತೂಕವಿರುತ್ತದೆ.

 ಎಲ್ಲೆಡೆ ವಾಸ:
ಬ್ಲ್ಯಾಕ್ ಪ್ಯಾಂಥರ್ಗಳು ಮಳೆ ಕಾಡು, ಅರಣ್ಯ ಪ್ರದೇಶ, ಗುಡ್ಡಗಾಡು, ಮರುಭೂಮಿ ಹೀಗೆ ನಾನಾ ಪ್ರದೇಶದಲ್ಲಿ ವಾಸಿಸುತ್ತದೆ. ಉಷ್ಣ ಮತ್ತು ಶೀತ ಎರಡೂ ಪ್ರದೇಶಕ್ಕೂ ಹೊಂದಿಕೊಳ್ಳಬಲ್ಲದು. ಇತರ ಬಿಗ್ ಕ್ಯಾಟ್ಗಳಂತಲ್ಲದೇ, ಇವು ಗರ್ಜನೆಯನ್ನೂ ಮಾಡುತ್ತವೆ. ಇವು ತಮ್ಮ ವಾಸಕ್ಕೆ ಜನವಸತಿ ಇರುವ ಸಮೀಪದ ಪ್ರದೇಶವನ್ನೂ ಆಯ್ಕೆ ಮಾಡಿಕೊಳ್ಳಬಲ್ಲದು.

ಏಕಾಂತವಾಗಿರುವದೇ ಇಷ್ಟ:

ಇವು ಹೆಚ್ಚಾಗಿ ಏಕಾಂತವಾಗಿ ಇರುವುದನ್ನೇ ಇಷ್ಟ ಪಡುತ್ತವೆ. ಸಂತಾನೋತ್ಪತ್ತಿಗೆ ಮಾತ್ರವೇ ಹೆಣ್ಣಿನೊಂದಿಗೆ ಕೂಡುತ್ತದೆ.  ಇದರ ಪಂಜುಗಳು ಅಗಲವಾಗಿದ್ದು, ಅತ್ಯಂತ ಬಲಿಷ್ಠವಾಗಿರುತ್ತವೆ. ಹೀಗಾಗಿ ಸಲೀಸಾಗಿ ಮರವನ್ನು ಏರಬಲ್ಲದು. ಬೇಟೆಯನ್ನು ಮರದ ಮೇಲೊಯ್ದು ತಿನ್ನುತ್ತದೆ. ಇವು ಶುದ್ಧ ಮಾಂಸಾಹಾರಿ. ಮರಿಗಳು ಎರಡರಿಂದ ಮೂರು ತಿಂಗಳಿನಲ್ಲಿ ತಾಯಿಯಿಂದ ಬೇಟೆಯಾಡುವುದನ್ನು ಕಲಿತುಕೊಳ್ಳುತ್ತದೆ. ತನ್ನ ಆಹಾರವನ್ನು ತಾನೇ ಬೇಟೆಯಾಡಿ ತಿನ್ನುತ್ತದೆ. ಇವು 20 ಅಡಿ ದೂರದವರಗೆ ಜಿಗಿಯುವ ಸಾಮಥ್ರ್ಯವನ್ನು ಹೊಂದಿದೆ. ಆದರೆ ಓಟದಲ್ಲಿ ಚಿರತೆಗಳಿಗಿಂತ ಸಲ್ಪ ನಿಧಾನ. ಕಪ್ಪು ಚಿರತೆ ಗಂಟೆಗೆ 58 ಕಿ.ಮೀ ವೇಗದಲ್ಲಿ ಓಡುವ ಸಾಮಥ್ರ್ಯವನ್ನು ಹೊಂದಿದೆ. ಅದೇ ಹಳದಿ ಚೀತಾ ಗಂಟೆಗೆ 113 ಕಿ.ಮೀ. ವೇಗದಲ್ಲಿ ಓಡಬಲ್ಲದು. ಬ್ಲ್ಯಾಕ್ ಪ್ಯಾಂಥರ್ ಗಳ ಕಣ್ಣಿನ ದೃಷ್ಟಿ ತೀಕ್ಷ್ಣ ಮತ್ತು ಕಿವಿಗಳು ಸೂಕ್ಷ್ಮ. ಕಪ್ಪು ಚಿರತೆಗಳು 12 ವರ್ಷ ಜೀವಿತಾವಧಿಯನ್ನು ಹೊಂದಿವೆ. ಇದು ಉತ್ತಮ ಈಜುಗಾರ ಕೂಡ ಹೌದು. ಆಗಾಗ್ಗೆ ನೀರಿಗೆ ಹಾರಿ ವಿಶ್ರಾಂತಿ ಪಡೆಯುತ್ತವೆ.

Friday, July 11, 2014

ಬ್ರಹ್ಮ ಕಮಲ

ರಾತ್ರಿ ಅರಳುವ ವಿಸ್ಮಯ

ರಾತ್ರಿ ಅರಳುವ ಹೂವು ಬ್ರಹ್ಮ ಕಮಲ. ಈ ಬ್ರಹ್ಮ ಕಮಲ ರಾತ್ರಿ 11 ಗಂಟೆಯ ಬಳಿಕ ಅರಳಿ ಬೆಳಗಾಗುವುದರ ಒಳಗೆ  ಕಮರಿಹೋಗುತ್ತದೆ. ರಾತ್ರಿ ರಾಣಿ ಎನ್ನುವ ಹೂವಿನ ಗಿಡದ ಎಲೆ ಇದು. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ. ಸೌಂದರ್ಯಕ್ಕಿಂತಲೂ ಧಾರ್ಮಿಕ  ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು.


 ಎಲೆಯಿಂದಲೇ ಬೆಳೆಯುತ್ತದೆ:
ಎಲ್ಲ ಗಿಡಗಳು ಬೇರು, ಕಾಂಡ ಅಥವಾ ಬೀಜದಿಂದ ಬೆಳೆದರೆ ಬ್ರಹ್ಮ ಕಮಲ ಎಲೆಯಿಂದಲೇ ದೊಡ್ಡದಾಗುತ್ತದೆ. ಗಿಡದ ಎಲೆಯನ್ನು ನೆಟ್ಟರೆ ಗಿಡವಾಗಿ ಬೆಳೆಯುತ್ತದೆ! ಒಂದೂವರೆ ವರ್ಷದಲ್ಲಿ ಹೂವು ಬಿಡಲು ಆರಂಭವಾಗುತ್ತದೆ.
ಬ್ರಹ್ಮ ಕಮಲ ಹೂವು ಬಿಡುವುದು ಜೂನ್- ಜುಲೈ ತಿಂಗಳಿನಲ್ಲಿ. ಕೇವಲ ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಒಮ್ಮಲೆ ಹತ್ತು ಹದಿನೈದು ಮೊಗ್ಗುಗಳು ಹೂವಾಗಿ ಅರಳುವುದೇ ವಿಸ್ಮಯ.
ಹಿಮಾಲಯದ ಆಸುಪಾಸಿನಲ್ಲಿ ಈ ಗಿಡ ಹೆಚ್ಚಾಗಿ ಬೆಳೆಯುತ್ತದೆ. ಇದು ಪೊದೆಯಂತೆ ಎತ್ತರಕ್ಕೆ ಹೋದಂತೆ ಕಾಂಡ ಕೂಡ ದಪ್ಪದಾಗುತ್ತಾ ಹೋಗುತ್ತದೆ. ಬೆಳ್ಳನೆಯ ಹೂವಿನ ದಳಗಳು ದಪ್ಪವಾಗಿರುತ್ತವೆ. ಅದೇರೀತಿ ಗಿಡದ ಎಲೆಗಳು ದಪ್ಪದಾಗಿದ್ದು, ಹಸಿರಾಗಿ ಎರಡರಿಂದ ಮೂರು ಅಡಿ ಉದ್ದಕ್ಕೆ ಬೆಳೆಯುತ್ತವೆ.
ಇದರ ಎಲೆ, ಹೂವು, ಕಾಂಡ ಬೇರು ಎಲ್ಲವೂ ಆಯುರ್ವೇದದ ಔಷಧಗಳಲ್ಲಿ ಬಳಕೆಯಾಗುತ್ತವೆ. ಬೇರನ್ನು ತೇಯುವ ಮೂಲಕ ಗಾಯಗಳಿಗೆ ಲೇಪನ ಮಾಡಿದರೆ, ಬೇಗ ಗುಣವಾಗುತ್ತದೆಯಂತೆ. ಪುಷ್ಪದ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ. 


ರಾತ್ರಿ ರಾಣಿ:
ಈ ಹೂವಿನ ಸೌಂದರ್ಯ ಒಂದು ರಾತ್ರಿಗೆ ಮಾತ್ರ ಸೀಮಿತ. ಆದರೆ, ಅಪರಿಮಿತ ಪರಿಮಳವನ್ನು ಸುತ್ತಮುತ್ತಲೂ ಪಸರಿಸುತ್ತದೆ. ಈ ಹೂವಿನ ಸೌಂದರ್ಯ ಸವಿಯಬೇಕಾದರೆ, ಹೂವುಬಿಟ್ಟು ನಾಲ್ಕೈದು ದಿನಗಳವರೆಗೆ ಕಾದು ಜಾಗರಣೆ ಮಾಡಬೇಕು. ರಾತ್ರಿ ಅರಳುವುದರಿಂದ ಇದನ್ನು ರಾತ್ರಿ ರಾಣಿ ಎಂತಲೂ ಕರೆಯುತ್ತಾರೆ.

ಮನೆಮಂದಿಯೆಲ್ಲಾ ಸೇರಿ ಪೂಜೆ

ಮಹಿಳೆಯರಿಗೆ ಈ ಹೂವು ಪೂಜ್ಯನೀಯ. ರಾತ್ರಿಯವೇಳೆ ಈ ಹೂವುಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುತ್ತಾರೆ. ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆ ಇದೆ.

ಹೆಸರು ಬಂದಿದ್ದು ಏಕೆ?
ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ "ಕಮಲಭವ" ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮ ಕಮಲ ಎನ್ನುವ ಹೆಸರು ಬಂದಿದೆ.

Thursday, July 3, 2014

ಗಾಜಿನ ದೇಹದ ಕಪ್ಪೆಗಳು!

ಗೋಸುಂಬೆಯಂತೆ ಮೈ ಬಣ್ಣ ಬದಲಿಸುವ, ತಾನಿರುವ ಸನ್ನಿವೇಷಕ್ಕೆ ತಕ್ಕಂತೆ ಹೊಂದಿಕೊಳ್ಳುವ ಪ್ರಾಣಿ, ಕೀಟಗಳನ್ನು ನೋಡಿದ್ದೇವೆ. ಆದರೆ, ಈ ಕಪ್ಪೆಯ ಮೇಲಿನ ಚರ್ಮ ಗಾಜಿನಂತೆ ಪಾರದರ್ಶಕ. ದೇಹದ ಒಳಗೆ ಏನೆಲ್ಲಾ ಅವಯವಗಳಿವೆ ಎನ್ನುವುದನ್ನು ಹೊರಗಿನಿಂದಲೇ ನೋಡಬಹುದು. ಹೀಗಾಗಿ ಈ ಕಪ್ಪೆಗೆ ಗಾಜಿನ ಕಪ್ಪೆ ಅಥವಾ
ಗ್ಲಾಸ್ ಫ್ರಾಗ್ ಎನ್ನುವ ಹೆಸರು ಬಂದಿದೆ.


ಪಾರದರ್ಶಕ ಚರ್ಮ!
ಈ ಕಪ್ಪೆಗಳು ದಕ್ಷಿಣ ಅಮೆರಿಕ, ಮೆಕ್ಸಿಕೊದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಆದರೆ, ಇವು ನೆಲ ಅಥವಾ ನೀರಿನ ಮೇಲೆ ವಾಸಿಸುವುದು ಕಡಿಮೆ ಹೆಚ್ಚಾಗಿ ಮರದ ಮೇಲೆಯೇ ಇರುತ್ತವೆ. ಸಾಮಾನ್ಯವಾಗಿ ತಿಳಿ ಹಸಿರು ಬಣ್ಣ ಹೊಂದಿರುತ್ತವೆ. ಬೆನ್ನಮೇಲೆ ಕಪ್ಪು, ಬಿಳಿ ಮತ್ತು ಹಸಿರಿನ ಮಚ್ಚೆಗಳಿರುತ್ತವೆ. ವೈರಿಗಳಿಂದ ದೇಹವನ್ನು ಮರೆಮಾಚುವ ಸಲುವಾಗಿ ಇವು ಪಾರದರ್ಶಕ ಚರ್ಮ ಹೊಂದಿರುತ್ತವೆ. ಅಲ್ಲದೆ, ಗಾಜಿನ ಕಪ್ಪೆಗಳ ದೇಹವೂ ಹಸಿರು ಬಣ್ಣದಲ್ಲಿರುವುದರಿಂದ ಗುರುತಿಸುವುದು ಕಷ್ಟಸಾಧ್ಯ.

ಹೊರಗಿನಿಂದಲೇ ಕಾಣುತ್ತೆ ದೇಹದ ಭಾಗ!
ಇವು ತೀರಾ ಚಿಕ್ಕ ಗಾತ್ರದವು. 1ರಿಂದ 3 ಇಂಚಿನಷ್ಟು ದೊಡ್ಡದಾಗಿರುತ್ತದೆ. ಕಪ್ಪೆಯ ಚರ್ಮ ಪಾರದರ್ಶಕವಾಗಿರುವುದರಿಂದ ಪಿತ್ತಜನಕಾಂಗ, ಹೃದಯ, ಜೀರ್ಣ ಅಂಗದ ಭಾಗಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಕೆಲವು ಕಪ್ಪೆಗಳಲ್ಲಿ ಮೂಳೆಗಳು ಹಸಿರು ಅಥವಾ ಬಿಳಿ ಬಣ್ಣವಿರುತ್ತದೆ. ಗಾಜಿನ ಕಪ್ಪೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಭೇದಗಳಿವೆ.
ಕೆಲವೊಮ್ಮೆ ಮರದಕಪ್ಪೆ ಮತ್ತು ಗಾಜಿನಕಪ್ಪೆ ಯಾವುದು ಎಂಬ  ಗೊಂದಲ ಉಂಟಾಗುತ್ತದೆ. ಗಾಜಿನ ಕಪ್ಪೆಗಳಿಗೆ ಹೊರಚಾಚಿದ ಬಿಳಿಯ ಬಣ್ಣದ ಕಣ್ಣುಗಳಿದ್ದು, ದೊಡ್ಡದಾಗಿರುತ್ತವೆ. ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿದ್ದು, ಬೇಟೆಯನ್ನು ಸುಲಭವಾಗಿ ಪತ್ತೆಮಾಡುತ್ತದೆ. ಅನೇಕ ಬಗೆಯ ಕೀಟಗಳನ್ನು ತಿಂದು ಅವುಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. 1872ರಲ್ಲಿ ಗಾಜಿನ ಕಪ್ಪೆಗಳ ಇರುವಿಕೆಯನ್ನು ಪತ್ತೆ ಮಾಡಲಾಯಿತು. ಇವು ರಾತ್ರಿಯ ವೇಳೆ ಹೆಚ್ಚು ಸಕ್ರಿಯವಾಗಿರುತ್ತವೆ. ಹಗಲಿನಲ್ಲಿ ಕದಲದಂತೆ ಎಲೆಗಳ ಮೇಲೆ ಕೂತಿರುತ್ತವೆ. ಬಹುತೇಕ ಜೀವಿತವನ್ನು ಮರದ ಮೇಲೆಯೇ ಕಳೆಯುತ್ತವೆ. ಮಿಲನಕ್ಕಾಗಿ ಮಾತ್ರವೇ ನೆಲಕ್ಕೆ ಇಳಿಯುತ್ತವೆ. ಮಳೆಗಾಲ ಮುಗಿದ ಬಳಿಕ ನೀರಿನ ಮೇಲಿರುವ ಸಸ್ಯಗಳ ಮೇಲೆ ಇವು ಮೊಟ್ಟೆಗಳನ್ನು ಇಡುತ್ತವೆ. ಮರಿಗಳು ನೀರಿನಲ್ಲಿ ವೃದ್ಧಿಯಾಗುತ್ತವೆ. ಕೆಲವು ಕಪ್ಪೆಗಳು ತಮ್ಮ ಮರಿಗಳನ್ನೇ ತಿಂದರೆ, ಇನ್ನು ಕೆಲವು ಮರಿಗಳ ಪೋಷಣೆ ಮಾಡುತ್ತವೆ.

ಒಂದು ಪ್ರದೇಶಕ್ಕೆ ಸೀಮಿತ:
ಇವು ಒಂದು ಪ್ರದೇಶಕ್ಕಷ್ಟೇ ಸೀಮಿತವಾದ ಜೀವಿಗಳು. ಇತರ ಕಪ್ಪೆಗಳು ತನ್ನ ಪ್ರದೇಶವನ್ನು ಆಕ್ರಮಿಸಿದರೆ, ಗಂಡು ಕಪ್ಪೆ ಕೂಗಿನ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ. ತನ್ನ ಪ್ರದೇಶವನ್ನು ಆಕ್ರಮಿಸಿದ ಕಪ್ಪೆಗಳನ್ನು ಅಲ್ಲಿಂದ ಓಡಿಸುತ್ತದೆ.
ಚಿಕ್ಕಗಾತ್ರದಿಂದಾಗಿ ಇವು ಸುಲಭವಾಗಿ ಬೇಟೆ ಪ್ರಾಣಿಗಳಿಗೆ ಆಹಾರವಾಗುತ್ತವೆ. ಹಾವು, ಸಸ್ತನಿ ಮತ್ತು ಹಕ್ಕಿಗಳು ಇದರ ಪ್ರಮುಖ ವೈರಿಗಳಾಗಿವೆ. ಗಾಜಿನ ಕಪ್ಪೆಗಳ ಜೀವಿತಾವಧಿ 10ರಿಂದ 14 ವರ್ಷ. ಆದರೆ, ಜಾಗತಿಕ ತಾಪಮಾನ ಏರಿಕೆ ಇವುಗಳ ಸಂತತಿಯ ಮೇಲೆ ಪರಿಣಾಮ ಬೀರಿದೆ. ಇವುಗಳ ಸಂತತಿ ನಿಧಾನವಾಗಿ ಕ್ಷೀಣಿಸುತ್ತಿದೆ.
 

Thursday, June 26, 2014

ಮೀಸೆ ಹೊತ್ತ ಟಮಾರಿನ್ ಮಂಗ!

ಬೆಕ್ಕಿನ ಮೀಸೆ ಎಲ್ಲರಿಗೂ ಚಿರಪರಿಚಿತ. ಅದೇ ರೀತಿ, ಟಮಾರಿನ್ ಮಂಗಕ್ಕೆ ಮುಖದ ಮೇಲೆ ಭರ್ಜರಿಯಾದ ಮೀಸೆ ಇದೆ. ಬೆಳ್ಳಗಿನ ಕೂದಲಿನ ಉದ್ದನೆಯ ಮೀಸೆಗೆ ಇದು ಫೇಮಸ್. ಇದರ ಮೀಸೆ ಜರ್ಮನ್ ದೊರೆ ಎರಡನೇ ವಿಲಿಯಂ  ಅವರನ್ನು ನೆನಪಿಸುವುದರಿಂದ ಎಂಪರರ್ ಟಮಾರಿನ್ ಎಂದೇ ಈ ಮಂಗವನ್ನು ಕರೆಯುತ್ತಾರೆ.


ಮುಖಕ್ಕೆ  ಮೀಸೆಯೇ ಅಂದ!
ಪಶ್ಚಿಮ ಅಮೇಜಾನ್ ಕಾಡುಗಳಲ್ಲಿ ಎಂಪರರ್ ಟಮಾರಿನ್ಗಳು ಕಂಡುಬರುತ್ತವೆ. ಬ್ರೆಜಿಲ್ನ ಮಳೆ ಕಾಡು, ಪೆರು ಮತ್ತು ಬೊಲಿವಿಯಾಗಳಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿವೆ. ಇವು ಇತರ ಗಾತ್ರದಲ್ಲಿ ಚಿಕ್ಕದಾಗಿವೆ. ಇವುಗಳ ದೇಹ 9ರಿಂದ 10  ಇಂಚು ಉದ್ದವಿದ್ದು, ಬಾಲ 15 ಇಂಚು ಉದ್ದವಿರುತ್ತದೆ. 450 ಗ್ರಾಂ ತೂಕವಿರುತ್ತದೆ. ಕಾಲಿನಲ್ಲಿ ಪಂಜು ಇದ್ದು, ಉದ್ದನೆಯ ಉಗುರುಗಳಿವೆ. 
ಇವು ಹೆಚ್ಚಾಗಿ ಬೂದು ಬಣ್ಣದಲ್ಲಿ ಕಂಡುಬರುತ್ತವೆ. ಎದೆಯ ಮೇಲೆ ಹಳದಿ ಬಣ್ಣದ ಮಚ್ಚೆಗಳಿವೆ. ಕೈ ಮತ್ತು ಪಾದಗಳು ಕಪ್ಪು ಬಣ್ಣದಲ್ಲಿದ್ದು,  ಬಾಲ ಕಂದು ಬಣ್ಣವಿರುತ್ತದೆ. ಇದೆಕ್ಕೆಲ್ಲಕ್ಕಿಂತ ಎದ್ದು ಕಾಣುವುದು ಅದರ ಬೆಳ್ಳನೆಯ ಮೀಸೆ. ಎರಡೂ ಭುಜದಿಂದ ಹೊರಚಾಚಿದ ಅವುಗಳನ್ನು ನೋಡುವುದೇ ಚೆಂದ. ಕೇವಲ ಗಂಡು ಮಂಗಕ್ಕೆ ಮಾತ್ರವಲ್ಲ ಹೆಣ್ಣು ಮಂಗಕ್ಕೂ ಮೀಸೆ ಇರುತ್ತದೆ.

ಸುಗಂಧ ದ್ರವ್ಯ ಸೂಸುತ್ತವೆ:
ಇವು ಕುಟುಂಬದೊಂದಿಗೆ ಒಂದು ಸೀಮಿತ ಪ್ರದೇಶದಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ 75ರಿಂದ 100 ಎಕರೆ ಪ್ರದೇಶಕ್ಕೆ ಇವು ಸೀಮಿತವಾಗಿರುತ್ತವೆ. ಎದೆ ಮತ್ತು ಜನನಾಂಗದಲ್ಲಿರುವ ಗ್ರಂಥಿಯ ಮೂಲಕ ಸುಗಂಧ ದ್ರವ್ಯವನ್ನು ಹೊರ ಸೂಸುತ್ತವೆ. ಸುಗಂಧ ದ್ರವ್ಯ ಬಳಸಿ ಗಡಿಗಳನ್ನು ಗುರುತಿಸಿಕೊಳ್ಳುತ್ತವೆ.

ಕೂಗಿನ ಮೂಲಕ ಎಚ್ಚರಿಕೆ:
ಟಮಾರಿನ್ ಧ್ವನಿ ಭಾಷೆಯನ್ನು ಹೆಚ್ಚಾಗಿ ಬಳಸುತ್ತದೆ. ದಟ್ಟವಾದ ಕಾಡಿನಲ್ಲಿ ಇನ್ನೊಂದು ಮೂಲೆಯಲ್ಲಿರುವ ತನ್ನ ಕುಟುಂಬ ಸದಸ್ಯರನ್ನು ಕೀರಲು ಧ್ವನಿಯಿಂದ ಕೂಗಿ ಕರೆಯುತ್ತದೆ. ಅಪಾಯ ಎದುರಾದರೆ ವಿವಿಧ ರೀತಿಯ ಕೂಗಿನ ಮೂಲಕ ಎಚ್ಚರಿಕೆಯ ಸಂದೇಶ ನೀಡುತ್ತದೆ.
ಒಂದು ಕುಟುಂಬದಲ್ಲಿ 2 ರಿಂದ 10 ಸದಸ್ಯರಿದ್ದು, ಹಿರಿಯ ಹೆಣ್ಣುಮಂಗ ಕುಟುಂಬವನ್ನು ಮುನ್ನಡೆಸುತ್ತದೆ. 
ಅವಳಿ ಮರಿಗಳಿಗೆ ಜನನ:
ಇವು ರಾತ್ರಿಯಲ್ಲಿ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ನಿದ್ರಿಸುತ್ತವೆ. ಹಗಲಿನಲ್ಲಿ ಆಹಾರ ಅರಸಿ ಮರದಿಂದ ಮರಕ್ಕೆ ಅಲೆಯುತ್ತವೆ. ಹಣ್ಣು, ಹೂವಿನ ಮಕರಂದ, ಪಕ್ಷಿ, ಹಲ್ಲಿ, ಮೊಟ್ಟೆಗಳು ಇವುಗಳ ಪ್ರಮುಖ ಆಹಾರ. 145 ದಿನಗಳ ಗರ್ಭಧಾರಣೆಯ ಬಳಿಕ ಹೆಣ್ಣು ಅವಳಿ ಮರಿಗಳಿಗೆ ಜನ್ಮನೀಡುತ್ತದೆ. ಗುಂಪಿನ ಎಲ್ಲ ಸದಸ್ಯರೂ ಮರಿಗಳ ಕಾಳಜಿ ವಹಿಸುತ್ತವೆಮರಿಗಳನ್ನು ಬೆನ್ನಮೇಲೆ ಹೊತ್ತುಕೊಂಡು ಕಾಡೆಲ್ಲಾ ಸುತ್ತುತ್ತದೆ. ಸಮಯಸಿಕ್ಕಾಗಲೆಲ್ಲಾ ಮರಿಗಳೊಂದಿಗೆ ಆಟವಾಡುವುದರಲ್ಲಿ ಕಳೆಯುತ್ತದೆ.
ಅಳಿವಿನ ಅಂಚು:
ಸಾಮಾನ್ಯವಾಗಿ ಇವುಗಳ ಜೀವಿತಾವಧಿ 15 ವರ್ಷ. 20 ವರ್ಷ ಬದುಕಿದ ಉದಾಹರಣೆಯೂ ಇದೆ. ಸಂತಾನ ನಾಶದಿಂದಾಗಿ ಇಂದು ಟಮಾರಿನ್ಗಳ ಸಂತತಿ ತೀವ್ರವಾಗಿ ಕ್ಷೀಣಿಸುತ್ತಿದೆ. ಪೇಗನ್ಟನ್ ಪ್ರಾಣಿಸಂಗ್ರಹಾಲಯ ಇವುಗಳನ್ನು ಸಂರಕ್ಷಣೆ ಮಾಡುತ್ತಿದೆ.

Monday, June 23, 2014

ಫುಟ್ಬಾಲ್ ಆಗುವ ಅರ್ಮಡಿಲ್ಲೋ

ಅಪಾಯ ಬಂದಾಗ ಫುಟ್ಬಾಲ್ನಂತೆ ಸುರುಳಿಸುತ್ತಿಕೊಳ್ಳುವ ಅರ್ಮಡಿಲ್ಲೋ ಈಗ ವಿಶ್ವದ ಆಕರ್ಷಣೆಯ ಕೇಂದ್ರ ಬಿಂದು. ಏಕೆಂದರೆ, ಈ ಬಾರಿ ಬ್ರೆಜಿಲ್ ವಿಶ್ವಕಪ್ ಫುಟ್ಬಾಲ್ ಲಾಂಛನದಲ್ಲಿ ಅರ್ಮಡಿಲ್ಲೋ ಸ್ಥಾನಗಿಟ್ಟಿಸಿಕೊಂಡಿದೆ. ವಿಶ್ವಕಪ್ ಲಾಂಛನವನ್ನು ಅಳಿವಿನ ಅಂಚಿನಲ್ಲಿರುವ ಈ ಪ್ರಾಣಿಯ ರೂಪದಲ್ಲೇ ಬ್ರೆಜಿಲ್ ವಿನ್ಯಾಸಗೊಳಿಸಿದೆ. ಇದಕ್ಕೆ ಫುಲೆಕೊ ಎಂದು ಹೆಸರಿಡಲಾಗಿದೆ. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಈ ಪ್ರಾಣಿ ಬ್ರೆಜಿಲ್ನ ಗೌರವದ ಸಂಕೇತವಾಗಿದೆ. ಅಳಿವಿನ ಅಂಚಿನಲ್ಲಿರುವ ಈ  ಪ್ರಾಣಿಯ ರಕ್ಷಣೆಗೆ ಸಂಕಲ್ಪಿಸಲಾಗಿದೆ.  



ಫುಟ್ಬಾಲ್ ಆಗುವ ದೇಹ!
ಬ್ರೆಜಿಲ್ನ ಕಾಟಿಂಗಾ ಅರಣ್ಯದಲ್ಲಿ ಕಾಣಸಿಗುವ ಇಲಿ ಆಕಾರದ ಪ್ರಾಣಿ ಅರ್ಮಡಿಲ್ಲೋ. ಮೈ ಮೇಲೆ ಎಲುಬಿನಿಂದ ಮಾಡಿದ ಕವಚ ಇದಕ್ಕಿದೆ. ಕವಚ ಹೊಂದಿರುವ ಏಕೈಕ ಸಸ್ತನಿ ಇದು. ಸ್ಪಾನಿಶ್ ಭಾಷೆಯಲ್ಲಿ ಅರ್ಮಡಿಲ್ಲೋ ಅಂದರೆ, ಕವಚವಿರುವ ಸಣ್ಣ ಜೀವಿ. ಇವುಗಳ ತಲೆ, ಬೆನ್ನು, ಕಾಲುಗಳು ಮತ್ತು ಬಾಲಕ್ಕೆ ಕವಚವಿದ್ದು ನೋಡಲು ಸುಂದರ ವಿರುವುದಿಲ್ಲ. ಅಪಾಯದ ಕ್ಷಣ ಎದುರಾದಾಗ ಚಿಪ್ಪನ್ನು ಮದುಡಿಕೊಂಡು ಫುಟ್ಬಾಲ್ ಚೆಂಡಿನಂತಾಗುತ್ತದೆ. ರಕ್ಷಣಾ ಕವಚದಲ್ಲಿ ದೇಹವನ್ನು ಹುದುಗಿಸಿಕೊಳ್ಳುವ ಈ ಪ್ರಾಣಿಗಳು ಸರಾಸರಿ 5ರಿಂದ 59 ಇಂಚುಗಳಷ್ಟು ಉದ್ದ ಬೆಳೆಯುತ್ತವೆ. 2ರಿಂದ 60 ಕೆ.ಜಿ.ಯಷ್ಟು ತೂಕವಿರುತ್ತದೆ. ಕಪ್ಪು, ಕೆಂಪು, ಕಂದು ಬಣ್ಣಗಳಲ್ಲಿ ಕಾಣಿಸುತ್ತವೆ. ಚೂಪನೆಯ ಮೂತಿ ಮತ್ತು ಸಣ್ಣಗಾತ್ರದ ಕಣ್ಣುಗಳನ್ನು ಹೊಂದಿವೆ. ಇವುಗಳಲ್ಲಿ 20 ಪ್ರಭೇದಗಳಿದ್ದು, ಒಂದೇ ಒಂದು ಜಾತಿಯ ಅರ್ಮಡಿಲ್ಲೋ ಮಾತ್ರ ಉತ್ತರ ಅಮೆರಿಕದಲ್ಲಿ ಕಾಣಸಿಗುತ್ತದೆ. ಉಳಿದ 19 ಪ್ರಭೇದಗಳು ದಕ್ಷಿಣ ಅಮೆರಿಕದಲ್ಲಿವೆ. ಇವುಗಳ 11ಕ್ಕೂ ಹೆಚ್ಚು ಪ್ರಭೇದ ಬ್ರೆಜಿಲ್ವೊಂದರಲ್ಲಿಯೇ ಇದೆ. ಸುಮಾರು 15 ವರ್ಷ ಇದರ ಜೀವಿತಾವಧಿ. ಸ್ಥಳೀಯವಾಗಿ ಈ ಪ್ರಾಣಿಯನ್ನು ಟಾಟು ಬೋಲಾ ಎಂದು ಕರೆಯಲಾಗುತ್ತದೆ. ಬ್ರೆಜಿಲ್ನ ಈಶಾನ್ಯ ಭಾಗದಲ್ಲಿರುವ ಕಾಟಿಂಕಾ ಒಣ ಅರಣ್ಯ ಪ್ರದೇಶದಲ್ಲಿ ಅರ್ಮಡಿಲ್ಲೋ ಕಾಣಸಿಗುತ್ತದೆ.

ಕವಚದಿಂದ ವಾದ್ಯ ತಯಾರಿ
ಈ ಪ್ರಾಣಿಯ ಚಿಪ್ಪಿನಿಂದ ಚರಂಗೋ ಎಂಬ ವಾದ್ಯ ಸಲಕರಣೆಯನ್ನು ತಯಾರಿಸುತ್ತಾರೆ. ಅರ್ಮಡಿಲ್ಲೋ ವರ್ಷಕ್ಕೆ ಒಂದೇ ಮರಿಗೆ ಜನ್ಮ ನೀಡುತ್ತದೆ. ವಿಪರೀತ ಭೇಟೆಯಿಂದಾಗಿ ಇವುಗಳ ಸಂತತಿ ಕ್ಷೀಣಿಸುತ್ತಿದೆ. ಮೂರು ಹಂತದ ಕವಚ ಹೊಂದಿರುವ ಅರ್ಮಡಿಲ್ಲೋ ಮಾತ್ರ ತನ್ನ ರಕ್ಷಣೆಗೆ ಚೆಂಡಿನಂತೆ ಮುದುಡಿಕೊಳ್ಳುತ್ತದೆ. ಆದರೆ, ಇತರ ಪ್ರಭೇದಗಳು ಅಪಾಯ ಎದುರಾದರೆ ಮಣ್ಣಿನಲ್ಲಿ ಕುಳಿಯನ್ನು ತೋಡಿ ಅದರೊಳಗೆ ಅಡಗಿ ಕೂರುತ್ತವೆ. ಇವು ಮಣ್ಣನ್ನು ಬಗೆಯಲು ಉದ್ದನೆಯ ಕಾಲು ಮತ್ತು ಉಗುರುಗಳನ್ನು ಹೊಂದಿವೆ. ನೆಲದ ಒಳಗೆ  ಸುರಂಗದ ಸಂಪರ್ಕ ಜಾಲವನ್ನೇ ನಿರ್ಮಿಸಿಕೊಂಡಿರುತ್ತವೆ. ಆಹಾರವನ್ನು ಹುಡುಕುವ ಸಲುವಾಗಿಯೂ ಇವು ನೆಲವನ್ನು ಬಗೆಯುತ್ತವೆ. ಚಿಕ್ಕ ಸಸ್ತನಿಗಳು, ಹಕ್ಕಿಯ ಮರಿ,  ಮೊಟ್ಟೆಗಳು ಇದರ ಆಹಾರ. ದಿನದಲ್ಲಿ 16ರಿಂದ 18  ತಾಸು ಬಿಲದಲ್ಲಿ ನಿದ್ರೆ ಮಾಡುವುದರಲ್ಲಿಯೇ ಕಳೆಯುತ್ತವೆ. ಇವುಗಳ ದೃಷ್ಟಿ ಅಷ್ಟೇನೂ ಚುರುಕಾಗಿಲ್ಲ. ಆದರೆ, ವಾಸನೆಯ ಮೂಲಕವೇ ಬೇಟೆಯನ್ನು ಪತ್ತೆಮಾಡುತ್ತದೆ. ಇವುಗಳಿಗೆ ಲೀಲಾಜಾಲವಾಗಿ ಈಜಲೂ ಬರುತ್ತದೆ. ನೀರಿನಲ್ಲಿ ಮುಳುಗಿದಾಗ 6 ನಿಮಿಷಗಳ ಕಾಲ ಉಸಿರಾಡದೇ ಇರಬಲ್ಲದು. ಇವುಗಳಿಗೆ ಮರ ಹತ್ತಲೂ ಬರುತ್ತದೆ. ನೆಲದಲ್ಲಿ ಬಿಲ ತೋಡಲು ಸಾಧ್ಯವಾಗದಿದ್ದರೆ, ಮರ ಏರಿ ರಕ್ಷಣೆ ಪಡೆಯುತ್ತದೆ.

Friday, June 13, 2014

ನೀರನ್ನು ಬಿಟ್ಟು ಹಾರುವ ಮೀನು

ಮೀನು ನೀರಿನಲ್ಲಿ ನಾನಾ ರೀತಿಯ ಕಸರತ್ತು ಮಾಡುವುದರಲ್ಲಿ ಆಶ್ಚರ್ಯ ಏನೂ ಅನಿಸುವುದಿಲ್ಲ. ಆದರೆ, ಎಂದೂ ನೀರನ್ನೇ ಬಿಟ್ಟಿರದ ಅದು ನೀರನ್ನು ಬಿಟ್ಟು ಹಾರಿದರೆ ಹೇಗಿರುತ್ತೆ? ಹೌದು, ನೀರನ್ನು ಬಿಟ್ಟು ಹಾರಬಲ್ಲ ಮೀನುಗಳೂ ಇವೆ. ಪಕ್ಷಿಗಳ ರಚನೆಯಂತಹುದೇ ರೆಕ್ಕೆಯನ್ನು ಹೊಂದಿರುವ ಹಾರುವ ಮೀನು ಅವುಗಳಂತೆಯೇ ಹಾರಲೂಬಲ್ಲದು! ಇಂಗ್ಲಿಷ್ ನಲ್ಲಿ ಇದಕ್ಕೆ ಫ್ಲೈಯಿಂಗ್ ಫಿಶ್ ಎನ್ನಲಾಗುತ್ತದೆ. ಈ ಮೀನುಗಳ ಕುಟುಂಬಕ್ಕೆ ಶಾಸ್ತ್ರೀಯವಾಗಿ ಎಕ್ಸೋಕೋಟಿಡೇ ಎಂಬ ಹೆಸರು. ಉಷ್ಣವಲಯದ ಸಮುದ್ರಗಳಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತವೆ.

ಇದಕ್ಕಿದೆ ಹಕ್ಕಿಯಂತೆಯೇ ರೆಕ್ಕೆ

 ಹಾರಾಟದ ಬಗೆ ಹೇಗೆ?
ಶತ್ರುಗಳು ಆಕ್ರಮಣ ಮಾಡಿದಾಗ ಈ ಮೀನುಗಳು ರೆಕ್ಕೆಯ ಸಹಾಯದಿಂದ 50 ಮೀಟರ್ ದೂರದವರೆಗೂ ಹಾರಬಲ್ಲವು. ಸಮುದ್ರದಲ್ಲಿ ದೊಡ್ಡ ಅಲೆಗಳು ಎದ್ದಾಗ ಉಂಟಾಗುವ ಗಾಳಿಯ ಒತ್ತಡವನ್ನು ಬಳಸಿ 400 ಮೀಟರ್ವರೆಗೆ ನೀರಿನ ಮೇಲೆ ತೇಲಿಕೊಂಡು ಹೋಗಬಲ್ಲದು.
ನೀರಿನಿಂದ ಹಾರುವುದಕ್ಕೂ ಮುನ್ನ ನೀರಿನ ಒಳಗಡೆ ಈಜುವ ವೇಗವನ್ನು ವೃದ್ಧಿಸಿಕೊಳ್ಳತ್ತದೆ. ಬಳಿಕ ಬಾಲವನ್ನು ಬಡಿಯುತ್ತಾ ನೀರಿನ ಮೇಲೆ ಜಾರಿಕೊಂಡು ಸಾಗಿ ಮೇಲಕ್ಕೆ ಜಿಗಿಯುತ್ತದೆ. ಸಾಧ್ಯವಾದಷ್ಟು ದೂರ ಹಾರಿದ ಮೇಲೆ ಮತ್ತೆ ಪುನಃ ಇದೇ ಪ್ರಕ್ರಿಯೆಯನ್ನು ಮುಂದುವರಿಸಿ ಮುಂದಕ್ಕೆ ಹೋಗುತ್ತದೆ. ನೀರಿನ ಒಳಕ್ಕೆ ಇಳಿಯದೇ ಮೇಲಿಂದ ಮೇಲೆಯೇ ಸುಮಾರು 400 ಮೀಟರ್ ದೂರಕ್ಕೆ ಸಾಗಬಲ್ಲದು. ಹಾರಿದಾಗ 4 ರಿಂದ 20 ಅಡಿ ಎತ್ತರವನ್ನು ತಲುಪುತ್ತದೆ. ಕೆಲವೊಮ್ಮೆ ಹಡಗಿನ ಮೇಲೆ ಇಳಿದ ಉದಾಹರಣೆಗಳೂ ಇವೆ.
 ಫ್ಲೈಯಿಂಗ್ ಫಿಶ್ಗಳು ಗಂಟೆಗೆ 60 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತವೆ. ಈ ಮೀನಿಗೆ ನಾಲ್ಕು ರೆಕ್ಕೆಗಳಿವೆ. ಮುಂದಿನ ಎರಡು ರೆಕ್ಕೆಗಳು ದೊಡ್ಡದಾರೆ, ಹಿಂದಿನ ಎರಡು ಚಿಕ್ಕವು. ನೀರಿನಿಂದ ಮೇಲೆ ಹೋದಂತೆ ರೆಕ್ಕೆಗಳು ಬಿಚ್ಚಿಕೊಳ್ಳುತ್ತವೆ. ರೆಕ್ಕೆಗಳು ತಂತಾನೇ ಬಡಿದು ಮೀನು ಮುಂದಕ್ಕೆ ಹೋಗುತ್ತದೆ. ಮತ್ತೆ ನೀರಿಗೆ ಮರಳಿದ ಬಳಿಕ ರೆಕ್ಕೆಗಳು ಮಡಿಸಿಕೊಳ್ಳುತ್ತವೆ. ನೀರಿನ ಮೇಲ್ಮುಖವಾಗಿ ಜಾರುವಾಗ ಅದರ ಬಾಲ ಸೆಕೆಂಡಿಗೆ 70 ಬಾರಿ ಚಲಿಸುತ್ತದೆ. ಹಕ್ಕಿಯ ಹಾಗೆ ರೆಕ್ಕೆಯನ್ನು ಬಾಗಿಸಿ ತನಗೆ ಬೇಕಾದ ದಿಕ್ಕಿನತ್ತ ದೇಹವನ್ನು ಹೊರಳಿಸುತ್ತದೆ.

ಹಕ್ಕಿಗಳಿಗೆ ಆಹಾರ:
ಇವು ಹೆಚ್ಚಾಗಿ ಸಮುದ್ರದ ಮೇಲ್ಭಾಗದಲ್ಲೇ ವಾಸಿಸುತ್ತವೆ. ಹಾರುವ ಮೀನುಗಳಲ್ಲಿ ಸುಮಾರು 40 ತಳಿಗಳಿವೆ. ದೇಹ 7ರಿಂದ 12 ಇಂಚು ಉದ್ದವಿರುತ್ತವೆ. ಇವು ಹಾರುವುದು ಸಮುದ್ರದಲ್ಲಿನ ದೊಡ್ಡ ದೊಡ್ಡ ಮೀನುಗಳಿಂದ ರಕ್ಷಣೆಗಾದರೂ, ನೀರಿನ ಮೇಲಿದ್ದಾಗ ಹಕ್ಕಿಗಳಿಗೆ ಆಹಾರವಾಗುವುದೂ ಇದೆ. ಅಲ್ಲದೆ ಮೀನುಗಾರರು ಇವುಗಳನ್ನು ಸುಲಭವಾಗಿ ಹಿಡಿಯುತ್ತಾರೆ. ಬೆಳಕಿಗೆ ಆಕರ್ಷಿತವಾಗುವ ಇವು ಹುಣ್ಣಿಮೆ ಚಂದ್ರನನ್ನು ಕಂಡು ಮೇಲಕ್ಕೆ ಜಿಗಿಯುತ್ತವಂತೆ. 
2008ರ ಮೇನಲ್ಲಿ ಒಂದು ಹಾರುವ ಮೀನು 45 ಸೆಕೆಂಡುಗಳ ಕಾಲ ಗಾಳಿಯಲ್ಲಿ ತೇಲಿಕೊಂಡು ಸಾಗಿದ್ದನ್ನು ಚಿತ್ರೀಕರಿಸಲಾಯಿತು ಸದ್ಯಕ್ಕೆ ಇದು ದಾಖಲೆ ಎನಿಸಿದೆ.   

ಗರಗಸ ಮೀನು!

ಈ ಮೀನಿನ ಚುಂಚು ಉದ್ದವಾಗಿ ಅದಕ್ಕೆ ಗರಗಸದಂತೆ ಹಲ್ಲು ಇರುವುದರಿಂದ ಗರಗಸ ಮೀನು ಎನ್ನುತ್ತಾರೆ. ಇದರ ಸಹಾಯದಿಂದ ತನ್ನ ವೈರಿಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲ, ಬೇರೆ ಮೀನುಗಳನ್ನು ಬೇಟಿಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಅಳಿವಿನ ಅಂಚಿನಲ್ಲಿರುವ ಸಾಗರದ ಜೀವಿಗಳ ಪಟ್ಟಿಗೆ ಸೇರಿರುವ ಈ ಮೀನಿನ ವೈಜ್ಞಾನಿಕ ಹೆಸರು ಪ್ರಿಸ್ಟಸ್.  ಶಾರ್ಕ್ ಗಳ ಜಾತಿಗೆ ಸೇರಿದೆ. ಇಂಗ್ಲಿಷ್ನಲ್ಲಿ ಸಾ- ಫಿಶ್ ಎನ್ನುತ್ತಾರೆ. ಸಮಶೀತೋಷ್ಣ ವಲಯದಲ್ಲಿ ಗರಗಸ ಮೀನುಗಳು ಹೆಚ್ಚಾಗಿ ಕಂಡುಬರುತ್ತವೆ. ಇವು ಸುಮಾರು 30 ವರ್ಷಗಳ ಕಾಲ ಬದುಕುವ
ಸಾಮರ್ಥ್ಯ ಹೊಂದಿವೆ. 


ಬೇಟೆ ಆಡುವ ಗರಗಸ:
ಇದರ ಮೂತಿಯಲ್ಲಿರುವ ಗರಗಸಕ್ಕೆ ಎರಡೂ ಪಕ್ಕದಲ್ಲಿ ತಲಾ 20 ಹಲ್ಲುಗಳು ಇರುತ್ತವೆ. ಆದರೆ, ಅವು ನಿಜವಾದ ಹಲ್ಲುಗಳಲ್ಲ. ಮೀನಿನ ಕೆಳಭಾಗದಲ್ಲಿರುವ ಬಾಯಿಯಲ್ಲಿ ಅದರ ನಿಜವಾದ ಹಲ್ಲುಗಳು ಇರುತ್ತದೆ. ಈ ಹಲ್ಲುಗಳು ಚಿಕ್ಕದಾಗಿರುತ್ತವೆ.
ಗರಗಸವನ್ನು ಬೇಟೆ ಆಡಲು ಮಾತ್ರ ಬಳಸುತ್ತದೆ. ಅಲ್ಲದೆ ಬೇಟೆ ಪ್ರಾಣಿಗಳು ಹಾದುಹೋದಾಗ ಅವು ರವಾನಿಸುವ ವಿದ್ಯುತ್ಕಾಂತೀಯ ಸಂಜ್ಞೆಗಳನ್ನು ಗ್ರಹಿಸುತ್ತದೆ.
ಗರಗಸ ಮೀನಿನ ದೇಹದ ಕಾಲು ಭಾಗದಷ್ಟು ಉದ್ದವಿರುತ್ತದೆ. ಗಸಗಸ ಮೀನು 18ರಿಂದ 25 ಅಡಿಯಷ್ಟು ಉದ್ದ ಬೆಳೆಯುತ್ತದೆ. ಅದರ ಗರಗಸ ಮೂತಿ  ಮೂರರಿಂದ ನಾಲ್ಕು ಅಡಿಯಷ್ಟು ಉದ್ದವಿರುತ್ತದೆ. ಬಲಿತ ಮೀನು ಸುಮಾರು 300 ಕೆ.ಜಿ. ಭಾರವಿರುತ್ತದೆ. ಆಳವಿಲ್ಲದ ಸಮುದ್ರ ಕರಾವಳಿ ನೀರಿನಲ್ಲಿ, ನದಿಗಳು ಮರಳಿನ ತಳವಿರುವ ನದಿ ಮತ್ತು ತೊರೆಗಳಲ್ಲಿ ಇವು ಕಂಡುಬರುತ್ತವೆ. ಶಾರ್ಕ್ ಗಳಂತೆಯೇ ಅಗಲವಾದ ರೆಕ್ಕೆಗಳನ್ನು ಹೊಂದಿದೆ. ಅಲ್ಲದೆ ಅದರಂತೆಯೇ ಬಾಲವನ್ನು ಹೊಂದಿದೆ. ಮೀನಿನ ಮೇಲ್ಮೈ ಮಣ್ಣನ್ನು ಹೋಲುವ ಕಂದುಬಣ್ಣವಿರುತ್ತದೆ.

ಬಲೆಗೆ ಸಿಲುಕುವ ಮೂತಿ:
ಇದು ಸದಾ ಮಣ್ಣಿನಲ್ಲಿ ಅಡಗಿ ಕುಳಿತು ವೈರಿಗಳ ಮೇಲೆ ಗರಗಸದ ಮೂತಿಯಿಂದ ದಾಳಿ ಮಾಡುತ್ತದೆ. ಒಂದುವೇಳೆ ದಾಳಿ ಮಾಡುವಾಗ ಹಲ್ಲುಗಳು ಮುರಿದುಹೋದರೆ, ಅವುಗಳನ್ನು ಮತ್ತೆ ಪುನಃ ಪಡೆದುಕೊಳ್ಳುತ್ತವೆ. ಆದರೆ, ಗರಗಸದಂತಹ ಚುಂಚೇ ಈ ಮೀನಿನ ಪ್ರಾಣಕ್ಕೆ ಎರವಾಗಿದೆ. ದೇಹದ ಯಾವುದೇ ಭಾಗ ಬಲೆಯಲ್ಲಿ ಸಿಕ್ಕಿಹಾಕಿಕೊಂಡರೆ ಅದನ್ನು ಹರಿದು ತುಂಡು ಮಾಡುವ ಸಾಮರ್ಥ್ಯ ಈ ಮೀನಿಗೆ ಇದೆ.  ಆದರೆ, ಮೀನಿನ ಚುಂಚು ಬಲೆಗಳಿಗೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಮೀನಿಗೆ ವೇಗವಾಗಿ ಈಜಲು ಬರುವುದಿಲ್ಲ. ಅತಿಯಾದ ಮೀನುಗಾರಿಕೆ ಮತ್ತು ಸಂತಾನ ನಷ್ಟದಿಂದಾಗಿ ಈ ಮೀನು ಅಳಿವಿನ ಅಂಚಿಗೆ ತಲುಪಿದೆ.

ಬಾಲಕ್ಕೆ ಭಾರಿ ಬೇಡಿಕೆ:
ಶಾರ್ಕ್  ಮೀನಿನಷ್ಟೇ ಬೆಲೆಯಿರುವ ಇದರ ಬಾಲವನ್ನು ಹೊರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಚೀನಾದಲ್ಲಿ ಈ ಮೀನಿನ ಬಾಲದ ಸೂಪಿಗೆ ಅತಿ ಬೇಡಿಕೆ ಇದೆ. ಈ ಮೀನಿನ ಮೇಲೆ ನಾಮ ಇರುವ ಗುರುತು ಕಂಡುಬಂದರೆ, ದೇವರ ಮೀನು ಎನ್ನುವ ನಂಬಿಕೆ ಮೀನುಗಾರರಲ್ಲಿದೆ. ಅವು ಸಿಕ್ಕರೆ, ಮರಳಿ ಸಮುದ್ರಕ್ಕೆ ಬಿಟ್ಟು, ತಮ್ಮ ವೃತ್ತಿಯಲ್ಲಿ ಯಾವುದೇ ತೊಂದರೆ ಆಗದೇ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರಂತೆ. 

 

ಗುಲಗಂಜಿ

ವಿಷತುಂಬಿದ ಸೌಂದರ್ಯ!

ಗುಲಗಂಜಿಯೊಂದಿಗೆ ಮಕ್ಕಳು ಆಟವಾಡುತ್ತಾರೆ. ಹಿರಿಯರು ಅದರ ಬಗ್ಗೆ ನಾನಾ ಕತೆಗಳನ್ನು ಹೇಳುತ್ತಾರೆ. ಅಕ್ಕಸಾಲಿಗರು ಅದನ್ನು ಸಾಲಾಗಿ ಪೋಣಿಸಿ ಹಾರಕಟ್ಟುತ್ತಾರೆ. ನೋಡಲು ಕೃತಕ ವಸ್ತುವಿನಂತೆ ಕಂಡರೂ, ಇದೊಂದು ಪ್ರಕೃತಿದತ್ತವಾಗಿ ಬಂದ ಸಂಪತ್ತು. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಟೋಪಿಯಿರುವ ಈ ಸಣ್ಣ ಬೀಜ ಎಷ್ಟು ಸುಂದವೋ, ಅಷ್ಟೇ ಭಯಾನಕ ವಿಷವನ್ನು ತನ್ನೊಳಗೆ ತುಂಬಿಕೊಂಡಿದೆ! 


ಗುಲಗಂಜಿ ದ್ವಿದಳ ಸಸ್ಯಗಳಲ್ಲಿ ಬಿಡುವ ಒಂದು ಬೀಜ. ಇವುಗಳಲ್ಲಿ ಬಿಳಿ, ಕೆಂಪು ಮತ್ತು ಕಪ್ಪು ಹೀಗೆ ಮೂರು ಪ್ರಕಾರಗಳಿವೆ. ಗುಲಗಂಜಿ ಮನಮೋಹಕ ಬಣ್ಣವುಳ್ಳದ್ದಾಗಿದ್ದು, ಇದರ ಗಾತ್ರ ತೊಗರಿ/ಹಲಸಂದೆ ಕಾಳಿನಷ್ಟಿರುತ್ತದೆ. ಕಡುಕೆಂಪಿನ ತುದಿಯಲ್ಲಿ ಕಪ್ಪು ಚುಕ್ಕೆ ಇರುವ ಇದರ ಸೌಂದರ್ಯಕ್ಕೆ ಮನಸೋಲದ ಮಕ್ಕಳಿಲ್ಲ. ಆದರೆ, ಇದು ನೋಡಲು ಎಷ್ಟು ಸುಂದರವೋ ಅಷ್ಟೇ ವಿಷಕಾರಿ ಕೂಡ! ಗುಲಗಂಜಿಯಲ್ಲಿ ಅಬ್ರಿನ್ ಎನ್ನುವ ಅಪಾಯಕಾರಿಯಾದ ಅಂಶವಿದೆ. ಇದು ನಾಗರಹಾವಿನ ವಿಷಕ್ಕಿಂತಲೂ ತೀಕ್ಷ್ಣವಾಗಿದೆ! ಏಬ್ರಸ್ ಪ್ರಿಕಟೋರಿಯಸ್- ಗುಲಗಂಜಿಯ ಸಸ್ಯ ಶಾಸ್ತ್ರೀಯ ಹೆಸರು. ಇಂಗ್ಲಿಷ್ ನಲ್ಲಿ ಇದಕ್ಕೆ ಇಂಡಿಯನ್ ಲಿಕೋರಿಸ್ ಎನ್ನುತ್ತಾರೆ.


 ಚೀನಿಯರ ಪ್ರೇಮದ ಸಂಕೇತ.
ಭಾರತ, ಮಲೇಷ್ಯಾ, ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು. ಚೀನಾದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತವಾಗಿದೆ. ಅಕ್ಕಸಾಲಿಗರು ಹಿಂದಿನ ಕಾಲದಲ್ಲಿ ಬಂಗಾರವನ್ನು ತೂಕಮಾಡಲು ಗುಲಗಂಜಿಯ ಬೀಜವನ್ನು ಬಳಸುತ್ತಿದ್ದರು. ವಿಶೇಷವೆಂದರೆ, ಗುಲಗಂಜಿಯ ಬೀಜದಲ್ಲಿ ಮಾತ್ರ ವಿಷವಿದ್ದು, ಕಾಂಡ ಎಲೆಗಳಲ್ಲಿ ವಿಷವಿರುವುದಿಲ್ಲ. ಗುಲಗಂಜಿಯನ್ನು ಕಡಿಯದೇ ಹಾಗೆಯೇ ನುಂಗಿದರೆ, ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಮಲವಿಸರ್ಜನೆಯ ಮೂಲಕ ದೇಹದಿಂದ ಹೊರಹೋಗುತ್ತದೆ. ಜಗಿದು ಇಲ್ಲವೇ ಪುಡಿಮಾಡಿ ತಿಂದರೆ,  ಅಪಾಯ ತಪ್ಪಿದ್ದಲ್ಲ. ಇದರ 3 ಮೈಕ್ರೋಗ್ರಾಂ ವಿಷ ಪ್ರಾಣಿಗಳನ್ನು ಬಲಿಪಡೆಯಬಲ್ಲದು. ವಿಶ್ವಯುದ್ಧದ ಸಂದರ್ಭದಲ್ಲಿ ಗುಲಗಂಜಿ ಬೀಜಗಳನ್ನು ಶತ್ರು ಸೈನಿಕರನ್ನು ಕೊಲ್ಲಲು ಬಳಸುತ್ತಿದ್ದರು ಎಂಬ ಬಗ್ಗೆ ದಾಖಲೆಗಳಿವೆ.
ಗುಲಗಂಜಿಯ ವಿಷಭಾದೆಯನ್ನು ಪತ್ತೆಹಚ್ಚುವುದು ಸ್ವಲ್ಪ ಕಷ್ಟ. ಅದನ್ನು ತಿಂದ ಬಳಿಕ ಕಂಡುಬರುವ ಲಕ್ಷಣಗಳು ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ವಿಷದ ನಿಖರತೆಯನ್ನು ಪತ್ತೆಮಾಡಬಹುದು. ಇದಕ್ಕೆ ನಿಖರ ಚಿಕಿತ್ಸೆ ಇಲ್ಲ. ಆದರೂ, ಕೂಡಲೇ ವಾಂತಿ ಅಥವಾ ಭೇದಿ ಮಾಡಿಸುವ ಮೂಲಕ ವಿಷ ಏರುವ ಪ್ರಮಾಣವನ್ನು ಕಡಿಮೆ ಮಾಡಬಹುದು.


ಪ್ರಾಣಿಗಳ ಮೇಲೆ ಪರಿಣಾಮ:
ಜಾನುವಾರುಗಳು ಗುಲಗಂಜಿಯನ್ನು ತಿಂದ ತಕ್ಷಣ ಸಾಯುವುದಿಲ್ಲ. ಮೇವನ್ನು ತಿಂದು ಮೆಲಕುಹಾಕುವ ಸಂದರ್ಭದಲ್ಲಿ ವಿಷ ನಿಧಾನವಾಗಿ ದೇಹವನ್ನು ಪಸರಿಸುತ್ತದೆ. ಬಾಯಲ್ಲಿ ಜೊಲ್ಲು ಹೆಚ್ಚುತ್ತದೆ. ಮೂಗಿನಲ್ಲಿ ಅತಿಯಾದ ಸಿಂಬಳ, ರಕ್ಷ ಮಿಶ್ರಿತ ಭೇದಿ, ಬಾಯಲ್ಲಿ ಹುಣ್ಣು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು. ಬಾಯಾರಿಕೆ, ನಿತ್ರಾಣ ಮತ್ತಿತರ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಕಂಡುಬಂದರೆ ರಾಸುಗಳಿಗೆ ನಡೆದಾಡಲೂ ಆಗುವುದಿಲ್ಲ. ಪಾಶ್ರ್ವವಾಯುವುಗೆ ತುತ್ತಾಗುತ್ತವೆ. ಅಂತಿಮವಾಗಿ ಸಾವಿನದವಡೆಯತ್ತ ಸಾಗುತ್ತವೆ.

ವಿಷವಾಗಿದ್ದು ಹೇಗೆ?
ಗುಲಗಂಜಿ ಕಾಡಿನಲ್ಲಿ ಬೆಳೆಯುವ ಸಾಮಾನ್ಯ ಕಳೆ ಸಸ್ಯ. 10 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಗುಲಗಂಜಿ ಗಿಡ ಹಳದಿ ಬಣ್ಣದ್ದಾಗಿದ್ದು, ಕೆಂಪು ಹೂವುಗಳನ್ನು ಬಿಡುತ್ತದೆ. ಹೂವು ಮೂರರಿಂದ ಐದು ಸತ್ತು ಬೀಜಗಳನ್ನು ಬಿಡುತ್ತದೆ. ಈ ಸಸ್ಯಗಳು ನೀರು, ಗಾಳಿ ಮತ್ತು ಮಣ್ಣಿನಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೀರಿ ಬೆಳೆಯುತ್ತದೆ. ಹೀಗಾಗಿ ಗುಲಗಂಜಿ ಬೀಜದಲ್ಲಿ ಬರಿ ವಿಷವೇ ತುಂಬಿಕೊಂಡಿದೆ.

ಜಾನಪದ ಕತೆ:

ಗುರಗಂಜಿಯ ಕುರಿತು ಅನೇಕ ಜಾನಪದ ಕತೆಗಳು ಹುಟ್ಟಿಕೊಂಡಿವೆ. ಗುಲಗಂಜಿ ಬೀಜವನ್ನು ಒಂದನ್ನೊಂದು ಪೋಣಿಸಿ ಆಭರಣಗಳನ್ನು ತಯಾರಿಸುತ್ತಿದ್ದರು.

Wednesday, May 21, 2014

ಮಲಬಾರ್ ಅಳಿಲು ಕಾಣಲು ಬಲು ಅಪರೂಪ!

ಭಾರತದ ದೈತ್ಯ ಅಳಿಲು ಅಥವಾ ಮಲಬಾರ್ ಅಳಿಲು ಕಾಣಿಸಿಕೊಳ್ಳುವುದೇ ಅಪರೂಪ. ಕಣ್ಣಲ್ಲಿ ಕಣ್ಣಿಟ್ಟು ಕಾದುಕುಂತರೂ, ಇದ್ದಕಡೆ ಇರಲ್ಲ. ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಾಣಸಿಗುವ ಈ ಸಸ್ಯಾಹಾರಿ ಅಳಿಲು ಕರ್ನಾಟಕದ  ಭದ್ರಾ ಅರಣ್ಯ, ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತದೆ. ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಇದಕ್ಕೆ ಕೆಂದಳಿಲು ಎಂದು ಕರೆಯುವುದುಂಟು.


ಆಕರ್ಷಕ ಮೈಬಣ್ಣ:
ಪರಿಸರ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಇವುಗಳ ಬಣ್ಣದಲ್ಲಿ ವ್ಯತ್ಯಾಸವಿದೆ. ಕರಾವಳಿ ಮತ್ತು ಸೌಪರ್ಣಿಕ ಅರಣ್ಯದಲ್ಲಿ ಅತಿ ಕೆಂಪು ಮತ್ತು ಕಂದು ಬಣ್ಣದ  ಅಳಿಲು ಕಂಡುಬಂದರೆ, ಒಣ ಹವೆ ಇರುವಂತಹ ಅರಣ್ಯಗಳಲ್ಲಿ ತಿಳಿಗೆಂಪು ಜತೆಗೆ ಮುಖ, ಪಾದ, ಹೊಟ್ಟೆ, ಎದೆಯ ಮೇಲೆ ಕಂದು ಮತ್ತು ಬಿಳಿಯ ಮಿಶ್ರಣವಿರುವ ಅಳಿಲುಗಳಿವೆ. ಹೂಗಳ ಕೇಸರ ಶಲಾಕೆಯ ಗೊಂಚಲಿನಂತೆ ಕಾಣುವ ಬಾಲ. ರೇಷಿಮೆ ನುಣುಪಿನ ಚರ್ಮ, ದೊಡ್ಡದಾದ ಪಿಳಿಪಿಳಿ ಕಣ್ಣುಗಳು ಇದಕ್ಕಿವೆ. ಈ ಅಳಿಲುಗಳಿಗೆ ದೃಷ್ಟಿ ವಿಪರೀತ ಚುರುಕು.
ತಲೆ ಮತ್ತು ಶರೀರ 35 ರಿಂದ 45 ಸೆ.ಮೀ. ಇದ್ದರೆ, ಬಾಲಮಾತ್ರ ದೇಹದ ಒಂದೂವರೆ ಪಟ್ಟು ಉದ್ದವಿರುತ್ತದೆ. ಬಾಲ ಸುಮಾರು ಎರಡು ಅಡಿಯಷ್ಟು ಉದ್ದವಿದ್ದು, ಎರಡು ಕೆ.ಜಿ. ತೂಕವಿರುತ್ತದೆ. ಮಲಬಾರ್ ಅಳಿಲುಗಳಿಗೆ ಹಿಂಭಾಗದಲ್ಲಿರುವ ಕಾಲುಗಳು ಮುಂಭಾಗದಲ್ಲಿರುವ ಕಾಲುಗಳಿಗಿಂತ ಉದ್ದ. ಪ್ರತಿಪಾದಲ್ಲಿ ನಾಲ್ಕು ಅಥವಾ ಐದು ಬೆರಳುಗಳಿರುತ್ತವೆ.
ಮಲಬಾರ್ ಅಳಿಲುಗಳು ಮರದಿಂದ ಮರಕ್ಕೆ ಸುಮಾರು 20 ಅಡಿಗಳಷ್ಟು ಹಾರಬಲ್ಲವು. ಎದ್ದು ಕಾಣುವ ಮೈಬಣ್ಣವಿದ್ದರೂ, ಕ್ಷಣಾರ್ಧದಲ್ಲಿ ಶತ್ರುಗಳ ಕಣ್ಣು ತಪ್ಪಿಸಿಕೊಳ್ಳಬಲ್ಲವು.

ಎತ್ತರದ ಮರದಲ್ಲಿ ಒಂಟಿ ಜೀವನ:
ಇವುಗಳು ಮಾನವನ ಚಟುವಟಿಕೆ ಕಡಿಮೆ ಇರುವ ಅರಣ್ಯದೊಳಗಿನ ಎತ್ತರವಾದ ದೊಡ್ಡ ಮರಗಳಲ್ಲಿ ಜೀವಿಸುತ್ತವೆ. ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಅನೇಕ ಮರಗಳ ಮೇಲೆ ಗೂಡು ನಿರ್ಮಿಸಿ ದಾರಿ ತಪ್ಪಿಸುವ ಜಾಣತನ ಮೆರೆಯುತ್ತವೆ.
ಸಸ್ಯಾಹಾರಿಯಾದ ಇವು ಕಾಡುಮರಗಳ ಹಣ್ಣು ತಿಂದು ಜೀವಿಸುತ್ತವೆ. ಹೆಣ್ಣು ಅಳಿಲು ಎತ್ತರವಾದ ಮರಗಳ ಮೇಲೆ ಕವಲುಗಳ ನಡುವೆ ಪೊಟರೆ ಮಾಡಿಕೊಂಡು ಮಾರ್ಚ್ ನಲ್ಲಿ ಮರಿಹಾಕುತ್ತದೆ. ಜೀವಿತಾವಧಿಯಲ್ಲಿ ಏಳೆಂಟುಬಾರಿ ಮರಿಹಾಕುವ ಇವು. ಪ್ರತಿ ಬಾರಿ ಗೂಡುಕಟ್ಟುವಾಗಲೂ ಕಿ.ಮೀ.ಗಟ್ಟಲೆ ಅಂತರ ಕಾಯ್ದುಕೊಳ್ಳುತ್ತವೆ. ಇವುಗಳು ಗುಂಪಾಗಿ ಕಾಣಿಸಿಕೊಳ್ಳುವುದು ಬಹಳ ವಿರಳ. ಏಕೆಂದರೆ ಇವು ಒಂಟಿತನವನ್ನೇ ಇಷ್ಟಪಡುತ್ತವೆ.
ಇದು ಮರಬಿಟ್ಟು ನೆಲದ ಮೇಲೆ ಇಳಿಯುವುದು ಬಹಳ ಕಡಿಮೆ. ಇಶೇಷ ಗುಣವೆಂದರೆ, ಮುಂಜಾನೆ ಮತ್ತು ಸಂಜೆ ಮಾತ್ರ ಆಹಾರ ಅರಸುತ್ತವೆ. ಬಿಸಿಲೇರಿದಂತೆ ವಿಶ್ರಾಂತಿಗೆ ಜಾರುತ್ತವೆ. ಅಚ್ಚರಿ ಎಂದರೆ, ಕೆಂದಳಿಲು ಇರುವ ಜಾಗದಲ್ಲಿ ಹಾರುವ ಬೆಕ್ಕು ಜೀವಿಸುತ್ತದೆ. ಬೆಳಗ್ಗೆ ಕೆಂದಳಿಲು ಕಾಣಿಸಿಕೊಂಡ ಮರದಲ್ಲೇ ಸಂಜೆ ಹಾರುವ ಬೆಕ್ಕು ಕಾಣಿಸಿಕೊಳ್ಳುವುದು ಕಾಡಿನ ಅಚ್ಚರಿಯಲ್ಲೊಂದು.

ನಶಿಸುತ್ತಿರುವ ಸಂಕುಲ:
ಇದರ ಪಾದದ ಕೆಳಗೆ ಮೆತ್ತನೆಯ ಗೊರಸು ಇದೆ. ಕಾಲುಗಳಲ್ಲಿ ಗಟ್ಟಿಮುಟ್ಟಾದ ಉಗುರುಗಳು ಇರುವುದರಿಂದ ಮರಹತ್ತುವುದು ಇವುಗಳಿಗೆ ಸಲೀಸು. ಇವುಗಳ ಬಾಚಿ ಹಲ್ಲುಗಳು ಜೀವನ ಪರ್ಯಂತ ಬೆಳೆಯುತ್ತಲೇ ಇರುತ್ತವಂತೆ.
ಅರಣ್ಯದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪ, ಸ್ಥಳೀಯರ ಬಾಯಿ ಚಪಲ ಮತ್ತು ಶ್ರೀಮಂತರ ವಿಲಾಸಿ ಚರ್ಮ ಉತ್ಪನ್ನಗಳ ತಯಾರಿಕೆಗೆ ಬಲಿಯಾಗಿ ನಶಿಸಿಹೋಗುವ ಪ್ರಾಣಿಗಳ ಪಟ್ಟಿಗೆ ಮಲಬಾರ್ ಅಳಿಲು ಕೂಡ ಸೇರಿದೆ.
ನಾಲ್ಕರಿಂದ ಐದು ಕೆ.ಜಿ. ತೂಗುವ ಇವುಗಳನ್ನು ಮಲೆನಾಡಿಗರು ಮತ್ತು ಗಿರಿಜನರು ತಿನ್ನುತ್ತಾರೆ. ರಾತ್ರಿಯವೇಳೆ ಮರದ ಟೊಂಗೆಗಳನ್ನು ಬಿಗಿದಪ್ಪಿ ಮಲಗುವ ಕೆಂದಳಿಲುಗಳನ್ನು ಬ್ಯಾಟರಿ ಬೆಳಕು ಬಿಟ್ಟು ಕದಲದಂತೆ ಮಾಡಿ ಬೇಟೆ ಆಡುತ್ತಾರೆ. ಅವುಗಳ ತುಪ್ಪಳ ಮತ್ತು ಚರ್ಮದ ಮಾರಾಟಕ್ಕಾಗಿ ಮರಗಳಲ್ಲಿ ಬಲೆಬೀಸಿ ಹಿಡಿಯುತ್ತಾರೆ.
   

Wednesday, May 14, 2014

ಕೀಟ ಲೋಕದ ಕುಂಬಾರ!

ಕಣಜದ ಮಣ್ಣಿನ ಗೂಡು

ಗೆದ್ದಲು ಹುಳು ಮಣ್ಣಿನ ಹುತ್ತವನ್ನು ನಿರ್ಮಿಸುವುದನ್ನು ನೋಡಿದ್ದೀರಿ. ಅದೇರೀತಿಯಲ್ಲಿ ಕಣಜ ಕೀಟಗಳು ಸಹ ಮಣ್ಣಿನ ಮನೆಯನ್ನು ನಿರ್ಮಿಸುತ್ತವೆ. ಒಂದು ಬಹುಮಹಡಿ ಕಟ್ಟಡ ಕಟ್ಟಬೇಕೆಂದರೆ ವಿನ್ಯಾಸಕಾರ, ಎಂಜಿನೀಯರ್, ಕೂಲಿ ಕಾರ್ಮಿಕರು ಹೀಗೆ ಹಲವು ಮಂದಿ ಪ್ರಯಾಸಪಡಬೇಕು. ಆದರೆ, ಕಣಜ ಯಾರ ಸಹಾಯವೂ ಇಲ್ಲದೆ ಏಳು ಅಂತಸ್ತಿನ ಮನೆಯನ್ನು ಒಬ್ಬೊಂಟಿಯಾಗಿ ಕಟ್ಟಿಕೊಳ್ಳುತ್ತದೆ. ಮನೆಯ ಗೋಡೆಗಳಿಗೆ, ರಂದ್ರವಿರುವ ಜಾಗಗಳಿಗೆ, ಮರದ ಕೊಂಬೆಗಳಿಗೆ ಮಣ್ಣನ್ನು ಮೆತ್ತಿ ಗೂಡನ್ನು ನಿರ್ಮಿಸುತ್ತದೆ. ಕುಂಬಾರನ ಮಡಿಕೆಯಂತಹ ಆಕಾರದ ಗೂಡು ಕಟ್ಟುವುದರಿಂದ ಈ ಕಣಜಗಳಿಗೆ ಕೀಟಲೋಕದ ಕುಂಬಾರ ಎನ್ನುವ ಹೆಸರು ಬಂದಿದೆ. 


ಮನೆ ನಿರ್ಮಾಣ ಹೇಗೆ?
ಎಲ್ಲರೂ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡರೆ, ಕಣಜವು ತನ್ನ ಸಂತಾನ ರಕ್ಷಣೆಗಾಗಿ ಗೂಡನ್ನು ನಿರ್ಮಿಸುತ್ತದೆ. ಪುಟ್ಟದಾದ ಗೂಡನ್ನು ಕಟ್ಟಿಕೊಳ್ಳಲು ಸೂಕ್ತವಾದ ಮಣ್ಣನ್ನು ಆಯ್ದುಕೊಳ್ಳುವ ಕಣಜ, ತನ್ನ ಜೊಲ್ಲಿನಿಂದ ಅದನ್ನು ಮೆದುಗೊಳಿಸುತ್ತದೆ. ಬಳಿಕ ಉಂಡೆಯ ರೂಪದಲ್ಲಿ ಕಟ್ಟಿ ಹೊತ್ತುತಂದು ನಿದಿಷ್ಟ ಸ್ಥಳವೊಂದರಲ್ಲಿ ಗೂಡನ್ನು ಕಟ್ಟುತ್ತದೆ. ಮನೆಯ ಒಳಗೆ ಆರೇಳು ಅಂತಸ್ತುಗಳಿದ್ದು, ಮರಿಗಳನ್ನು  ಇರಿಸಲು ಪ್ರತ್ಯೇಕವಾದ ಕೋಣೆಗಳಿರುತ್ತವೆ. ಹೆಣ್ಣು ಕೀಟ ಮನೆ ಕಟ್ಟುವುದರಲ್ಲಿ ನಿಷ್ಣಾತ. ಒಂದುದಿನದ ಒಳಗಾಗಿಯೇ ಅದು ತನ್ನ ಮನೆಯನ್ನು ಕಟ್ಟಿ ಮುಗಿಸುತ್ತದೆ.

ಒಂದಕ್ಕಿಂತಲೂ ಹೆಚ್ಚು ಗೂಡು
ಮನೆ ಪೂರ್ಣಗೊಂಡ ಬಳಿಕ ಅದರ ಒಳಗೆ ಮೊಟ್ಟೆಗಳನ್ನು ಇಡುತ್ತದೆ. ಬಳಿಕ ಕಂಬಳಿ ಹುಳಗಳನ್ನು ಬೇಟೆ ಆಡುತ್ತದೆ. ಕಂಬಳಿಹುಳಗಳನ್ನು ಸಾಯಿಸದೇ ಅವುಗಳ ಎಚ್ಚರ ತಪ್ಪಿಸಿ ಎರಡು ಮೂರು ಹುಳಗಳನ್ನು ಗೂಡಿನ ಒಳಕ್ಕೆ ಇರಿಸಿ, ದೂಡಿನ ಬಾಗಿಲನ್ನು ಮಣ್ಣಿನಿಂದ ಮುಚ್ಚುತ್ತದೆ. ಕಣಜದ ಮರಿಗಳು ಮೊಟ್ಟೆಯಿಂದ ಹೊರ ಬರುವ ವೇಳೆಗೆ ಸಿದ್ಧ ಆಹಾರದ ರೂಪದಲ್ಲಿ ಕಂಬಳಿ ಹುಳುಗಳನ್ನು ನೀಡುತ್ತವೆ. ಕಂಬಳಿ ಹುಳುಗಳನ್ನು ತಿಂದು ಇಂಥ ಪ್ರಕ್ರಿಯೆ ಕೀಟ ಜಗತ್ತಿನಲ್ಲಿ  ಅಪರೂಪದ ಸಂಗತಿ.
ಕಣಜ ತನ್ನ ಮರಿಗಳಿಗಾಗಿ ಒಂದಕ್ಕಿಂತಲೂ ಹೆಚ್ಚು ಗೂಡುಗಳನ್ನು ನಿರ್ಮಿಸುತ್ತದೆ.
ಕೆಲವೊಮ್ಮೆ ಅವು ನೆಲದ ಒಳಗೂ ಗೂಡನ್ನು ಕಟ್ಟುವುದೂ ಇದೆ. ಆದರೆ, ಬಹುತೇಕ ಸಮಯದಲ್ಲಿ ಗೋಡೆ ಅಥವಾ ಮರದ ಕೊಂಬೆಗಳಿಗೆ ಗೂಡು ಕಟ್ಟಿದ್ದನ್ನು ಕಾಣಬಹುದು.

ಆಕರ್ಷಕ ರೂಪ:
ಆಕರ್ಷಕ ಗುಣಗಳನ್ನು ಹೊಂದಿರುವ ಕಣಜ ಹುಳು ಅಷ್ಟೇ ಅಪಾಯಕಾರಿಯೂ ಹೌದು. ಚೂಪಾದ ಸೂಜಿಯಂತೆಯೇ ಚುಚ್ಚುವ ಮುಳ್ಳುಗಳನ್ನು ಹೊಂದಿರುವ ಅವು ಶಿಸ್ತು, ಸಂಯಮ ಮತ್ತು ಬದ್ಧತೆಯನ್ನೂ ಮೈಗೂಡಿಸಿಕೊಂಡಿರುತ್ತವೆ.
ಸುಂದರವಾದ ಸಣ್ಣ ನಡುವಿನ ಈ ಕೀಟ ನೋಡಲು ಜೇನು ಹುಳುವಿನಂತೆಯೇ ಕಾಣುತ್ತದೆ. ಆದರೆ, ಕಣಜದ ಮುಳ್ಳು ಜೇನಿಗಿಂತ ವಿಷಕಾರಿ. ಕಣಜ ಚುಚ್ಚಿದ ಜಾಗದಲ್ಲಿ ಉರಿ, ನೋವು ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಇವು ಕಪ್ಪು ಬಣ್ಣದಲ್ಲಿ ಕಂಡುಬರುತ್ತದೆ. ಹೊಟ್ಟೆ ಮತ್ತು ದೇಹದ ತುಂಬ ಹಳದಿ ಮತ್ತು ಕೆಂಪು ಬಣ್ಣದ ಪಟ್ಟಿಗಳಿರುತ್ತವೆ. ದೇಹ 9ರಿಂದ 20 ಮಿಲಿ ಮೀಟರ್ನಷ್ಟು ಉದ್ದವಿರುತ್ತದೆ. ಇವುಗಳಲ್ಲಿ ಹಲವಾರು ಉಪ ಪ್ರಭೇದಗಳಿದ್ದು, 3200ಕ್ಕೂ ಹೆಚ್ಚು ವಿಧಗಳಿವೆ.

ರೈತನಿಗೆ ಉಪಕಾರಿ:

ಬೆಳೆದ ಕೀಟವು ಹೂವಿನ ಮಕರಂದವನ್ನು ಹೀರುತ್ತದೆ. ಹೆಚ್ಚಾಗಿ ಒಂಟಿಯಾಗಿಯೇ ವಾಸಿಸುತ್ತದೆ. ಬೆಳೆಗಳನ್ನು ನಾಶಮಾಡುವ ಕಂಬಳಿಹುಳುಗಳನ್ನು ತಿನ್ನುವುದರಿಂದ ಮತ್ತು ಪರಾಗಸ್ಪರ್ಶಕ್ಕೆ ನೆರವಾಗುವುದರಿಂದ ಈ ಕೀಟವು ರೈತನಿಗೆ ಉಪಕಾರಿಯಾಗಿದೆ.