ಗೋಸುಂಬೆಯಂತೆ ಮೈ ಬಣ್ಣ ಬದಲಿಸುವ, ತಾನಿರುವ ಸನ್ನಿವೇಷಕ್ಕೆ ತಕ್ಕಂತೆ ಹೊಂದಿಕೊಳ್ಳುವ ಪ್ರಾಣಿ, ಕೀಟಗಳನ್ನು ನೋಡಿದ್ದೇವೆ. ಆದರೆ, ಈ ಕಪ್ಪೆಯ ಮೇಲಿನ ಚರ್ಮ ಗಾಜಿನಂತೆ ಪಾರದರ್ಶಕ. ದೇಹದ ಒಳಗೆ ಏನೆಲ್ಲಾ ಅವಯವಗಳಿವೆ ಎನ್ನುವುದನ್ನು ಹೊರಗಿನಿಂದಲೇ ನೋಡಬಹುದು. ಹೀಗಾಗಿ ಈ ಕಪ್ಪೆಗೆ ಗಾಜಿನ ಕಪ್ಪೆ ಅಥವಾ
ಗ್ಲಾಸ್ ಫ್ರಾಗ್ ಎನ್ನುವ ಹೆಸರು ಬಂದಿದೆ.
ಗ್ಲಾಸ್ ಫ್ರಾಗ್ ಎನ್ನುವ ಹೆಸರು ಬಂದಿದೆ.
ಈ ಕಪ್ಪೆಗಳು ದಕ್ಷಿಣ ಅಮೆರಿಕ, ಮೆಕ್ಸಿಕೊದ ಮಳೆಕಾಡುಗಳಲ್ಲಿ ಕಂಡುಬರುತ್ತವೆ. ಆದರೆ, ಇವು ನೆಲ ಅಥವಾ ನೀರಿನ ಮೇಲೆ ವಾಸಿಸುವುದು ಕಡಿಮೆ ಹೆಚ್ಚಾಗಿ ಮರದ ಮೇಲೆಯೇ ಇರುತ್ತವೆ. ಸಾಮಾನ್ಯವಾಗಿ ತಿಳಿ ಹಸಿರು ಬಣ್ಣ ಹೊಂದಿರುತ್ತವೆ. ಬೆನ್ನಮೇಲೆ ಕಪ್ಪು, ಬಿಳಿ ಮತ್ತು ಹಸಿರಿನ ಮಚ್ಚೆಗಳಿರುತ್ತವೆ. ವೈರಿಗಳಿಂದ ದೇಹವನ್ನು ಮರೆಮಾಚುವ ಸಲುವಾಗಿ ಇವು ಪಾರದರ್ಶಕ ಚರ್ಮ ಹೊಂದಿರುತ್ತವೆ. ಅಲ್ಲದೆ, ಗಾಜಿನ ಕಪ್ಪೆಗಳ ದೇಹವೂ ಹಸಿರು ಬಣ್ಣದಲ್ಲಿರುವುದರಿಂದ ಗುರುತಿಸುವುದು ಕಷ್ಟಸಾಧ್ಯ.
ಹೊರಗಿನಿಂದಲೇ ಕಾಣುತ್ತೆ ದೇಹದ ಭಾಗ!
ಇವು ತೀರಾ ಚಿಕ್ಕ ಗಾತ್ರದವು. 1ರಿಂದ 3 ಇಂಚಿನಷ್ಟು ದೊಡ್ಡದಾಗಿರುತ್ತದೆ. ಕಪ್ಪೆಯ ಚರ್ಮ ಪಾರದರ್ಶಕವಾಗಿರುವುದರಿಂದ ಪಿತ್ತಜನಕಾಂಗ, ಹೃದಯ, ಜೀರ್ಣ ಅಂಗದ ಭಾಗಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಕೆಲವು ಕಪ್ಪೆಗಳಲ್ಲಿ ಮೂಳೆಗಳು ಹಸಿರು ಅಥವಾ ಬಿಳಿ ಬಣ್ಣವಿರುತ್ತದೆ. ಗಾಜಿನ ಕಪ್ಪೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಭೇದಗಳಿವೆ.
ಕೆಲವೊಮ್ಮೆ ಮರದಕಪ್ಪೆ ಮತ್ತು ಗಾಜಿನಕಪ್ಪೆ ಯಾವುದು ಎಂಬ ಗೊಂದಲ ಉಂಟಾಗುತ್ತದೆ. ಗಾಜಿನ ಕಪ್ಪೆಗಳಿಗೆ ಹೊರಚಾಚಿದ ಬಿಳಿಯ ಬಣ್ಣದ ಕಣ್ಣುಗಳಿದ್ದು, ದೊಡ್ಡದಾಗಿರುತ್ತವೆ. ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿದ್ದು, ಬೇಟೆಯನ್ನು ಸುಲಭವಾಗಿ ಪತ್ತೆಮಾಡುತ್ತದೆ. ಅನೇಕ ಬಗೆಯ ಕೀಟಗಳನ್ನು ತಿಂದು ಅವುಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. 1872ರಲ್ಲಿ ಗಾಜಿನ ಕಪ್ಪೆಗಳ ಇರುವಿಕೆಯನ್ನು ಪತ್ತೆ ಮಾಡಲಾಯಿತು. ಇವು ರಾತ್ರಿಯ ವೇಳೆ ಹೆಚ್ಚು ಸಕ್ರಿಯವಾಗಿರುತ್ತವೆ. ಹಗಲಿನಲ್ಲಿ ಕದಲದಂತೆ ಎಲೆಗಳ ಮೇಲೆ ಕೂತಿರುತ್ತವೆ. ಬಹುತೇಕ ಜೀವಿತವನ್ನು ಮರದ ಮೇಲೆಯೇ ಕಳೆಯುತ್ತವೆ. ಮಿಲನಕ್ಕಾಗಿ ಮಾತ್ರವೇ ನೆಲಕ್ಕೆ ಇಳಿಯುತ್ತವೆ. ಮಳೆಗಾಲ ಮುಗಿದ ಬಳಿಕ ನೀರಿನ ಮೇಲಿರುವ ಸಸ್ಯಗಳ ಮೇಲೆ ಇವು ಮೊಟ್ಟೆಗಳನ್ನು ಇಡುತ್ತವೆ. ಮರಿಗಳು ನೀರಿನಲ್ಲಿ ವೃದ್ಧಿಯಾಗುತ್ತವೆ. ಕೆಲವು ಕಪ್ಪೆಗಳು ತಮ್ಮ ಮರಿಗಳನ್ನೇ ತಿಂದರೆ, ಇನ್ನು ಕೆಲವು ಮರಿಗಳ ಪೋಷಣೆ ಮಾಡುತ್ತವೆ.
ಒಂದು ಪ್ರದೇಶಕ್ಕೆ ಸೀಮಿತ:
ಇವು ಒಂದು ಪ್ರದೇಶಕ್ಕಷ್ಟೇ ಸೀಮಿತವಾದ ಜೀವಿಗಳು. ಇತರ ಕಪ್ಪೆಗಳು ತನ್ನ ಪ್ರದೇಶವನ್ನು ಆಕ್ರಮಿಸಿದರೆ, ಗಂಡು ಕಪ್ಪೆ ಕೂಗಿನ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ. ತನ್ನ ಪ್ರದೇಶವನ್ನು ಆಕ್ರಮಿಸಿದ ಕಪ್ಪೆಗಳನ್ನು ಅಲ್ಲಿಂದ ಓಡಿಸುತ್ತದೆ.
ಚಿಕ್ಕಗಾತ್ರದಿಂದಾಗಿ ಇವು ಸುಲಭವಾಗಿ ಬೇಟೆ ಪ್ರಾಣಿಗಳಿಗೆ ಆಹಾರವಾಗುತ್ತವೆ. ಹಾವು, ಸಸ್ತನಿ ಮತ್ತು ಹಕ್ಕಿಗಳು ಇದರ ಪ್ರಮುಖ ವೈರಿಗಳಾಗಿವೆ. ಗಾಜಿನ ಕಪ್ಪೆಗಳ ಜೀವಿತಾವಧಿ 10ರಿಂದ 14 ವರ್ಷ. ಆದರೆ, ಜಾಗತಿಕ ತಾಪಮಾನ ಏರಿಕೆ ಇವುಗಳ ಸಂತತಿಯ ಮೇಲೆ ಪರಿಣಾಮ ಬೀರಿದೆ. ಇವುಗಳ ಸಂತತಿ ನಿಧಾನವಾಗಿ ಕ್ಷೀಣಿಸುತ್ತಿದೆ.
ಚೆನ್ನಾಗಿದೆ ನಿನ್ನ ಲೇಖನಗಳು ಒಳ್ಳೆ ಸಂಗ್ರಹಣೆ ಜೀವಭಟ್
ReplyDeleteThis comment has been removed by the author.
ReplyDeleteಉಪಯುಕ್ತ ಮಾಹಿತಿ ನೀಡಿದ್ದೀರಿ . ಧನ್ಯವಾದಗಳು.
ReplyDeleteಉಷಾಕತ್ತೆಮನೆ.
ಉಪಯುಕ್ತ ಮಾಹಿತಿ ನೀಡಿದ್ದೀರಿ . ಧನ್ಯವಾದಗಳು.
ReplyDelete.
ಉಪಯುಕ್ತ ಮಾಹಿತಿ ನೀಡಿದ್ದೀರಿ . ಧನ್ಯವಾದಗಳು.
ReplyDelete.