ಪ್ರಪಂಚದ ಎಲ್ಲ ಕಡೆಗಳಲ್ಲೂ ಮಾನವ ನೆಲೆಸಿದ್ದಾನೆ. ಭೂಮಿಯನ್ನು ತನ್ನ ಕೈವಶ ಮಾಡಿಕೊಂಡಿದ್ದಾನೆ. ಸಮುದ್ರದ ಆಳಕ್ಕೆ ಇಳಿದು ಬಂದಿದ್ದಾನೆ. ಆಕಾಶದಲ್ಲಿ ಹಾರಿ ಚಂದ್ರನನ್ನೂ ಮುಟ್ಟಿ ಬಂದಿದ್ದಾನೆ. ಆದರೆ, ಭೂಮಿಯ ಗರ್ಭಕ್ಕೆ ಇಳಿಯಲು ಸಾಧ್ಯವೇ ಆಗಿಲ್ಲ. ಆಳಕ್ಕೆ ಹೋಗುವುದಿರಲಿ ಅದರ ಸನಿಹಕ್ಕೂ ತಲುಪಿಲ್ಲ. ಏಕೆಂದರೆ...
ಭೂಮಿಯ ಅಗಾಧ ಆಳ!
ಭೂಮಿಯ ಕೇಂದ್ರ ಬಿಂದು 6000 ಕಿ.ಮೀ.ಯಷ್ಟು ಆಳವಾಗಿದೆ. ಭೂಗರ್ಭದ ಹೊರಗಿನ ಭಾಗ ನಮ್ಮ ಕಾಲ ಅಡಿಯಿಂದ ಸುಮಾರು 3000 ಅಡಿ ಆಳದಲ್ಲಿದೆ. ಆದರೆ, ಭೂಮಿಯ ಮೇಲೆ ಮಾನವ ನಿಮರ್ಿಸಿದ ಅತಿ ಆಳದ ಬಾವಿ ಕೇವಲ 12 ಕಿ.ಮೀ. ಮಾತ್ರ. ವೈಜ್ಞಾನಿಕ ಸಂಶೋಧನೆಯೊಂದರ ಸಂಬಂಧ 1994ರಲ್ಲಿ ರಷ್ಯಾದ ಕೊಲಾ ಸೂಪರ್ಡೀಪ್ ಬೋರ್ಹೋಲ್ ಅನ್ನು ನಿಮರ್ಿಸಲಾಯಿತು. ಅದಕ್ಕಿಂತಲೂ ಹೆಚ್ಚಿನ ಆಳವನ್ನು ಕೊರೆಯಲು ಮಾನವನಿಂದ ಸಾಧ್ಯವಾಗಿಲ್ಲ.
ಜ್ವಾಲಾಮುಖಿ, ಭೂಕಂಪ ಮತ್ತಿತರ ಘಟನೆಗಳು ಕೂಡ ಭೂಮಿಯ ಮೇಲ್ಮೈನ ಸಮೀಪವೇ ಜರುಗುತ್ತವೆ. ಜ್ವಾಲಾಮುಖಿ ಕರಗಿ ಬೆಂಕಿಯ ಉಂಡೆಯಾಗಿ ಹೊರಬರುವುದು ಕೆಲವೇ ನೂರಾರು ಕಿ.ಮೀ. ಆಳದಿಂದ. ಅತಿಯಾದ ಒತ್ತಡದ ಅಗತ್ಯವಿರುವ ವಜ್ರಗಳು ರೂಪುಗೊಳ್ಳುವುದು 500 ಕಿ.ಮೀ. ಆಳದಲ್ಲಿರುವ ಕಲ್ಲಿನ ಪದರದಲ್ಲಿ. ಅದಕ್ಕಿಂತಲೂ ಆಳದಲ್ಲಿ ಏನಿದೆ ಎನ್ನುವುದು ಇವತ್ತಿಗೂ ನಿಗೂಢ. ಭೂಮಿಯ ಗರ್ಭದ ಬಗ್ಗೆ ಒಂದೇ ಒಂದು ಕುರುಹು ಲಭ್ಯವಿಲ್ಲದೇ ಹೋದರೂ, ವಿಜ್ಞಾನಿಗಳು ಕೋಟ್ಯಂತರ ವರ್ಷಗಳ ಹಿಂದೆ ಆದ ಭೂರಚನೆಯ ಬಗ್ಗೆ ಒಂದು ಪರಿಕಲ್ಪನೆಯನ್ನು ನೀಡಿದ್ದಾರೆ.
ಭೂಮಿಯ ಆಳದಲ್ಲಿ ಸೂರ್ಯನಷ್ಟೇ ಶಾಖ!
ಭೂಮಿ ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಭೂಮಿ ನಿಮರ್ಾಣಗೊಂಡಿತು ಎಂಬ ವಾದವಿದೆ. ಭೂಮಿಯ ದ್ರವ್ಯರಾಶಿಯ ಹೆಚ್ಚಿನ ಭಾಗ ಭೂಕೇಂದ್ರ ಸುತ್ತವೆ ನೆಲೆಸಿದೆ. ಹೀಗೆ ಭೂಮಿ ರಚನೆಗೊಳ್ಳುವ ಸಂದರ್ಭದಲ್ಲಿ ಯತೇಚ್ಛ ಪ್ರಮಾಣದ ಕಬ್ಬಿಣ ಭೂಮಿಯ ಮಧ್ಯಭಾಗವನ್ನು ಸೇರಿಕೊಂಡಿತು. ಹೀಗಾಗಿ ಭೂಮಿಯ ಗರ್ಭದಲ್ಲಿ ಶೇ.80ರಷ್ಟು ಕಬ್ಬಿಣವೇ ತುಂಬಿಕೊಂಡಿದೆ. ಆದರೆ, ನಿಖರವಾದ ಪ್ರಮಾಣದ ಬಗ್ಗೆ ಈಗಲೂ ಚರ್ಚೆಗಳು ನಡೆಯುತ್ತಿವೆ. ನಮ್ಮ ಸುತ್ತಲಿನ ಬ್ರಹ್ಮಾಂಡದಲ್ಲಿ ಭಾರೀ ಪ್ರಮಾಣದ ಕಬ್ಬಿಣದ ಅದಿರು ಶೇಖರಣೆಗೊಂಡಿರುವುದು ಇದಕ್ಕೊಂದು ಉದಾಹರಣೆ. 5000 ಅಡಿ ಆಳದಿಂದ ಆರಂಭವಾಗುವ ಭೂಗರ್ಭ ಗಟ್ಟಿಯಾದ ಕಬ್ಬಿಣದಿಂದ ಕೂಡಿದೆ. ಭೂಮಿಯ ತಿರುಳು 1,220 ಕಿ.ಮೀ.ವ್ಯಾಸವಿದೆ. ಅದರ ಹೊರ ಮೈನಲ್ಲಿ ಕಬ್ಬಿಣ ದ್ರವರೂಪದಲ್ಲಿದೆ. ಹೊರಮೈನಲ್ಲಿರುವ 6,230 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಬ್ಬಿಣವನ್ನು ಕರಗುವಂತೆ ಮಾಡಿದೆ. ಅಂದರೆ, ಸೂರ್ಯನ ಹೊರ ಮೇಲ್ಮೈನಲ್ಲಿರುವಷ್ಟೇ ಉಷ್ಣಾಂಶ ಭೂಮಿಯ ಕೇಂದ್ರದಲ್ಲಿಯೂ ಇದೆ. ಶತಕೋಟಿ ವರ್ಷಗಳಿಗೊಮ್ಮೆ ಭೂಗರ್ಭದ ಉಷ್ಣಾಂಶ 100 ಡಿಗ್ರಿಯಷ್ಟು ಮಾತ್ರ ಇಳಿಕೆಯಾಗುತ್ತದೆ. ಹೀಗಾಗಿ ಭೂಗರ್ಭ ಸದಾ ಬೆಂಕಿಉಂಡೆಯಾಗಿಯೇ ಇರುತ್ತದೆ. ದ್ರವರೂಪದ ಕಬ್ಬಣ ಮುಗಿದ ಬಳಿಕ ಭೂಮಿಯ ಮೇಲೈನ ವರೆಗೂ ವಿವಿಧ ಶಿಲಾಪದರಗಳು ಆವರಿಸಿಕೊಂಡಿವೆ.
ಬಯಲಾಗದ ರಹಸ್ಯ
ಭೂಮಿಯ ಒಡಲಿನಲ್ಲಿರುವ ರಹಸ್ಯಗಳು ಇನ್ನೂ ಸಾಕಷ್ಟು ತಿಳಿದುಬರಬೇಕಿದೆ. ಭೂಮಿಯ ಒಡಲಿನಲ್ಲಿ ಎಷ್ಟು ಶಾಖವನ್ನು ಹಿಡಿದಿಟ್ಟುಕೊಂಡಿದೆ ಎನ್ನುವುದನ್ನು ಕಣ್ಣಾರೆ ನೋಡಲು ಎಂದಿಗೂ ಸಾಧ್ಯವಿಲ್ಲ. ಭೂಗ್ರಹದ ರಚನೆಯಾದಾಗಿನಿಂದಲೂ ಭೂಗರ್ಭ ಕುದಿಯುತ್ತಿರುವ ಬೆಂಕಿಯ ಉಂಡೆಯಂತೆಯೇ ಇದೆ. ಆದರೆ, ಭೂಮಿಯ ಮೇಲೆ ನೆಲೆ ಸಿರುವ ಜೀವ ಸಂಕುಲಕ್ಕೆ ಭೂಮಿಯ ಆಳದಲ್ಲಿನ ಕಾವು ಕಿಂಚಿತ್ತೂ ತಟ್ಟುವುದಿಲ್ಲ ಎನ್ನುವುದೇ ಸೋಜಿಗ!
No comments:
Post a Comment