ಜೀವನಯಾನ

Saturday, November 12, 2016

ಮೊಸಳೆಗಳೇಕೆ ಮನುಷ್ಯನ ಮೇಲೆ ದಾಳಿ ಮಾಡುತ್ತವೆ?

ಒಮ್ಮೆ ಮೊಸಳೆಯ ಬಾಯಿಗೆ ಸಿಕ್ಕಿದರೆ ಮುಗಿಯಿತು. ತಪ್ಪಿಸಿಕೊಂಡು ಬರುವ ಮಾತೇ ಇಲ್ಲ. ಅದರ ಬಲಿಷ್ಠ ದವಡೆಗಳು ನಿಮ್ಮ ಮೂಳೆಗಳನ್ನು ಕೋಲು ಮುರಿದಂತೆ ತುಂಡು ತುಂಡು ಮಾಡಿ ಬಿಡುತ್ತವೆ. ಆದರೆ, ಜಗತ್ತಿನ ವಿವಿಧೆಡೆ ಸಾವಿರಾರು ಮಂದಿ ಪ್ರತಿನಿತ್ಯವೂ ಮೊಸಳೆಗಳ ಬಾಯಿಗೆ ಸಿಲುಕುವ ಅಪಾಯವನ್ನು ಎದುರುಗೊಳ್ಳುತ್ತಲೇ ಇರುತ್ತಾರೆ. ಶಾರ್ಕ್ಗಳಿಗಿಂತಲೂ ಮೊಸಳೆ ದಾಳಿಗಳಿಂದೇ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ!  
 

ಆದರೆ, ಮಸಳೆಗಳು ಮಾನವರ ಮೇಲೆಯೇ ದಾಳಿ ಮಾಡಬೇಕು ಎಂದು ಕಾದು ಕುಳಿತಿರುವುದಿಲ್ಲ. ಬೇಟೆಯಾಡಿ ತಿನ್ನುವ ಪ್ರಾಣಿಗಳಿಗಾಗಿ ನೀರಿನಲ್ಲಿ ಮುಳುಗಿಕೊಂಡು ಕಾದುಕುಳಿತಿರುತ್ತವೆ. ಯಾವುದೇ ಪ್ರಾಣಿ ನೀರು ಕುಡಿಯಲು ನದಿಯ ದಂಡೆಗೆ ಬಂದರೆ, ಅದರ ಕೆಲಸ ಅರ್ಧ ಮುಗಿದಂತೆ. ಬೇಟೆಯನ್ನು ಪಡೆಯಲು ನೆಲದ ಮೇಲೂ ಅವು ಎಗರಿ ಆಕ್ರಮಣ ನಡೆಸಬಲ್ಲವು. ಒಂದುವೇಳೆ ಬೇಟೆ ದುರಾದೃಷ್ಟಕ್ಕೆ ಮನುಷ್ಯನೇ ಆಗಿದ್ದರೆ ಅವು ಕಿಂತಿತ್ತೂ ಕರುಣೆ ತೋರುವುದಿಲ್ಲ. ವರದಿಯೊಂದರೆ  ಪ್ರಕಾರ ಆಫ್ರಿಕಾವೊಂದರಲ್ಲಿಯೇ ಮೊಸಳೆಗಳ ದಾಳಿಗೆ ಪ್ರತಿವರ್ಷ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಸಣ್ಣ ಸಮುದಾಯ ಇರುವ ದುರ್ಗಮಪ್ರದೇಶಗಳಲ್ಲಿ ಮೊಸಳೆಗಳ ಆಕ್ರಮಣ ನಡೆದರೆ ಅವು ಹೆಚ್ಚಿನ ಜನರಿಗೆ ತಿಳಿಯುವುದೇ ಇಲ್ಲ. ಮೂರರಲ್ಲಿ ಒಂದು ಅಥವಾ ಅರ್ಧದಷ್ಟು ದಾಳಿಗಳು ಸಾವಿನಲ್ಲಿ ಅಂತ್ಯಗೊಳ್ಳುತ್ತವೆ. ಆದರೆ, ಆಗೊಮ್ಮೆ ಈಗೊಮ್ಮೆ ನಡೆಯುವ ಶಾಕರ್್ ದಾಳಿಗಳೇ ಮಾಧ್ಯಮಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದುಕೊಳ್ಳತ್ತವೆ.

ರಕ್ತ ಬಿಸಿಯಾದಂತೆ ಹೆಚ್ಚು ಆಕ್ರಮಣಕಾರಿ!
ಮೊಸಳೆಗಳು ಕೆಲವೊಂದು ಋತುಗಳಲ್ಲಿ ಹೆಚ್ಚು ಸಕ್ರಿಯವಾಗಿ ದಾಳಿ ನಡೆಸುತ್ತವೆ. ಮಳೆಗಾಲದ ಸಮಯ, ಉಷ್ಣಾಂಶ ಏರಿಕೆಯಾದಾಗ, ಮರಿ ಮಾಡುವ ಸಮಯದಲ್ಲಿ ಮೊಸಳೆ ದಾಳಿಗಳು ಸಾಮಾನ್ಯ. ಅಕ್ಟೋಬರ್ ಮತ್ತು ಮಾಚರ್್ನಲ್ಲಿ ದಾಳಿ ಹೆಚ್ಚು. ಮೊಸಳೆಗಳು ತಂಪು ರಕ್ತದ ಪ್ರಾಣಿಗಳಾಗಿದ್ದು, ಬಿಸಿಲು ನೆತ್ತಿಗೆ ಏರುತ್ತಿದ್ದಂತೆ ಆಕ್ರಮಣ ಶೀಲವಾಗಿರುತ್ತವೆ. ಸೂರ್ಯ ಮುಳುಗುತ್ತಿದ್ದಂತೆ ಅವು ಅಷ್ಟೊಂದು ಸಕ್ರಿಯವಾಗಿರುವುದಿಲ್ಲ. ಆದರೆ, ಮೊಸಳೆಗಳಿಗೆ ರಾತ್ರಿಯ ವೇಳೆಯಲ್ಲಿಯೂ ನೋಡುವ ಸಾಮಥ್ರ್ಯವಿದೆ.

ಮಕ್ಕಳ ಮೇಲೆ ಆಕ್ರಮಣ ಜಾಸ್ತಿ
ನದಿಯಲ್ಲಿ ಈಜಾಡಲು ತೆರಳಿದ್ದಾಗ ವಯಸ್ಕರಿಗಿಂತ ಚಿಕ್ಕ ಮಕ್ಕಳು ಅಥವಾ ಬಾಲಕರನ್ನು ಗುರಿಯಾಗಿಸಿಕೊಂಡು ಮೊಸಳೆಗಳು ಆಕ್ರಮಣ ನಡೆಸುತ್ತವೆ. ಬೇಟೆ ಚಿಕ್ಕದಾದಷ್ಟು ಹಿಡಿದುತಿನ್ನಲು ಅದಕ್ಕೆ ಸುಲಭವಾಗುತ್ತದೆ. ಮೀನು ಹಿಡಿಯುತ್ತಿರುವ ವೇಳೆ ಪುರುಷರು ಮೊಸಳೆಗಳ ದಾಳಿಗೆ ತುತ್ತಾಗುತ್ತಾರೆ. ನದಿಗಳನ್ನು ದಾಟುವಾಗ, ನೀರನ್ನು ತುಂಬಿಕೊಳ್ಳಲೆಂದು ನದಿಗೆ ಇಳಿದಾಗ ಮಹಿಳೆಯರ ಮೇಲೆ ಮೊಸಳೆಗಳು ಆಕ್ರಮಣ ನಡೆಸುತ್ತವೆ.

ಪಾರಾಗುವುದು ಹೇಗೆ?
ಮೊಸಳೆಗಳ ಗಮನಕ್ಕೆ ಬರದಂತೆ ಎಚ್ಚರವಾಗಿದ್ದರೆ,  ದಾಳಿಯಿಂದ ಪಾರಾಗಬಹುದು. ಆದರೆ, ಸದ್ದು-ಗದ್ದಲ ಮಾಡಿ ಮೊಸಳೆಗಳನ್ನು ಹೆದರಿಸಲು ಜನರು ಪದೇ  ಪದೇ ಪ್ರಯತ್ನಿಸುತ್ತಾರೆ. ಈ ರೀತಿ ಮಾಡುವುದರಿಂದ ಮೊಸಳೆಗಳು ಹದರುವುದಕ್ಕಿಂತ ಹೆಚ್ಚಾಗಿ ಅವು ಆಕ್ರಮಣ ನಡೆಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಒಂದುವೇಳೆ ಮೊಸಳೆಗಳು ಬಾಯಿಹಾಕಿದರೆ ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತೇ ಸರಿ. ಸಮಯ ಪ್ರಜ್ಞೆಯಿಂದ ಮೊಸಳೆಗಳ ಕಿವಿಗಳಲ್ಲಿ ಕೈ ಬೆರಳನ್ನು ಹಾಕಿದರೆ ಅಥವಾ ಮೂಗಿನ ಮೇಲೆ ಗುದ್ದಿದರೆ ಎನಾದರೂ ಪ್ರಯೋಜನವಾಗಬಹುದು. ಒಂದು ವೇಳೆ ಮೊಸಳೆಯ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಿರಿ ಎಂದಾದರೆ ಅವು ನಿಮ್ಮನ್ನು ಬಿಟ್ಟು ಬಿಡುತ್ತವೆ.

ಜನರಿಂದ ಮೊಸಳೆಗಳ ಹತ್ಯೆ:
ಕಳವಳದ ಸಂಗತಿ ಏನೆಂದರೆ ಇಂದು ಮೊಸಳೆಗಳ ಅನೇಕ ಜಾತಿಗಳು ಅಳಿವಿನ ಅಂಚಿನಲ್ಲಿವೆ. ಕಾಣೆಯಾದ ಮಕ್ಕಳನ್ನು ಮೊಸಳೆಗಳೇ ತಿಂದಿವೆ ಎಂದು ಭಾವಿಸಿ ಜನರು ಮೊಸಳೆಗಳನ್ನು ಕೊಂದು ಅವುಗಳ ಹೊಟ್ಟೆಯನ್ನು ಬಗೆಯುತ್ತಿದ್ದಾರೆ.

No comments:

Post a Comment