ಜೀವನಯಾನ

Wednesday, September 9, 2015

ಗೋಲ್ಡನ್ ಗೇಟ್ ಬ್ರಿಡ್ಜ್

ಈ ಸೇತುವೆ 20ನೇ ಶತಮಾನದ ಎಂಜಿನಿಯರಿಂಗ್ ಅದ್ಭುತ ಎಂದೇ ಬಣ್ಣಿಸಲಾಗಿದೆ. ಜಗತ್ತಿನ ಮೊದಲ ತೂಗು ಸೇತುವೆ ಎಂಬ ಖ್ಯಾತಿ ಗೋಲ್ಡನ್ ಗೇಟ್ ಬ್ರಿಡ್ಜ್ ನದ್ದು. 1.7 ಮೈಲಿ ಉದ್ದದ ಈ ಸೇತುವೆ ಸ್ಯಾನ್ಫ್ರಾನ್ಸಿಸ್ಕೋ ಉತ್ತರ ತುದಿಯನ್ನು ಮರೀನ್ ಕೌಂಟಿಯ ಸಸಲಿಟೋದೊಂದಿಗೆ ಸೇರಿಸುತ್ತದೆ. ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡ ಒಂದು. 


ಎರಡು ಗೋಪುರಗಳೇ ಆಧಾರ:
ಈ ಸ್ಯಾನ್ಫ್ರಾಸ್ಸಿಸ್ಕೊ ಕೊಲ್ಲಿಯ ಮೇಲಿರುವ ಈ ತೂಗು ಸೇತುವೆ ಎರಡು ಗೋಪುರಗಳ ಆಧಾರದ ಮೇಲೆ ನಿಂತುಕೊಂಡಿದೆ. ಗೋಪುರದ ತುದಿಯಿಂದ ಇಳಿಬಿಡಲಾದ ಎರಡು ಉಕ್ಕಿನ ಕೇಬಲ್ಗಳು ಸೇತುವೆಯ ಭಾರವನ್ನು ತಡೆದುಕೊಳ್ಳುತ್ತದೆ. ಉಕ್ಕಿನ ಕೇಬಲ್ಗಳ ಒಳಗೆ ಸುಮಾರು 88 ಸಾವಿರ ಮೈಲಿ ಉದ್ದದ ವೈರ್ಗಳನ್ನು ಬಳಸಲಾಗಿದೆ. ಸೇತುವೆಯನ್ನು ಹಿಡಿದಿಟ್ಟುಕೊಂಡಿರುವ ಗೋಪುರಗಳು ನೀರಿನಿಂದ 726  ಅಡಿ ಎತ್ತರವಾಗಿವೆ. ಈ ಎರಡು ಗೋಪುರಗಳ ಮಧ್ಯೆ 4200 ಅಡಿ ಅಂತರವಿದೆ. 
ಈ ಸೇತುವೆಯ ನಿರ್ಮಾಣಕ್ಕೆ 88 ಸಾವಿರ ಟನ್ ಉಕ್ಕನ್ನು ಬಳಕೆಯಾಗಿದೆ. ಅಲ್ಲದೆ ಸಿಮೆಂಟ್ ಕಾಂಕ್ರೀಟ್ಅನ್ನು ಬಳಸಲಾಗಿದೆ. ಸೇತುವೆ ಒಟ್ಟು 887,000 ಟನ್ ಭಾರವಿದೆ. ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿದ್ದು 1933ರಲ್ಲಿ. 4 ವರ್ಷಗಳ ಸತತ ಪರಿಶ್ರಮದ ಬಳಿಕ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಜೋಸೆಫ್ ಬೈರ್ಮನ್ ಸ್ಟ್ರಾಸ್ ಎಂಬಾತ ಸೇತುವೆ ನಿರ್ಮಾಣದ ಮುಖ್ಯ ಎಂಜಿನಿಯರ್ ಆಗಿದ್ದ. ಸೇತುವೆಯ ನಿರ್ಮಾಣದ ವೇಳೆ 11 ಮಂದಿ ಕಾರ್ಮಿಕರು  ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು.

ಪ್ರತಿನಿತ್ಯ 1 ಲಕ್ಷ ವಾಹನ ಸಂಚಾರ:

1937ರ ಮೇ 27ರಂದು ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸಲಾಯಿತು. ಅಂದು 2 ಲಕ್ಷ ಜನರು ಸೇತುವೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಸಂಚರಿಸುವ ಮೂಲಕ ಸೇತುವೆಯನ್ನು ಅದ್ಧೂರಿಯಾಗಿ ಸೇತುವೆ ಉದ್ಘಾಟನೆಗೊಂಡಿತ್ತು. ಸೇತುವೆ 90 ಅಡಿಯಷ್ಟು ಅಗಲವಾಗಿದ್ದು, ಆರು ಪಥದ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಒಳಗೊಂಡಿದೆ. ಪ್ರತಿದಿ ಈ ಸೇತುವೆಯ ಮೇಲೆ 1,10,000 ವಾಹನಗಳು ಸಂಚರಿಸುತ್ತವೆ.
ಅಂದು ಈ ಸೇತುವೆ ನಿಮರ್ಾಣಕ್ಕೆ 210 ಕೋಟಿ ರೂ. (3.5  ಕೋಟಿ ಡಾಲರ್) ವೆಚ್ಚವಾಗಿತ್ತಂತೆ. ಒಂದು ವೇಳೆ ಇಂದು ಈ ಸೇತುವೆಯನ್ನು ನಿರ್ಮಿಸಬೇಕೆಂದರೆ 7,200 ಕೋಟಿ ರೂ. ವೆಚ್ಚವಾಗಲಿದೆ. 

ಗೊಲ್ಡನ್ ಗೇಟ್ ಎಂದು ಏಕೆ ಕರೆಯುತ್ತಾರೆ?
1846ರಲ್ಲೇ ಯುಸ್ಆಮರ್ಿಯ ಲೆಫ್ಟನೆಂಟ್ ಜಾನ್.ಸಿ. ಫ್ರಿಮಾಂಟ್ ಈಗ ಬ್ರಿಡ್ಜ್ ಇರುವ ಜಾಗಕ್ಕೆ ಗೋಲ್ಡನ್ ಗೇಟ್ ಅಂತ ಕರೆದಿದ್ದ. ಪೆಸಿಫಿಕ್ ಸಾಗರದಿಂದ ಸ್ಯಾನ್ಫ್ರಾನ್ಸಿಸ್ಕೋ ಕೊಲ್ಲಿಗೆ ದ್ವಾರದಂತಿದ್ದ ಈ ಕಿರಿದಾದ ಜಲಸಂಧಿಯನ್ನು ನೋಡಿ ಲೆಫ್ಟನೆಂಟ್ ಫ್ರಿಮಾಂಟ್ ಗೋಲ್ಡನ್ ಗೇಟ್ ಎಂದು ಹೆಸರಿಟ್ಟಿದ್ದ. ಆ ಬಳಿಕ ಇಲ್ಲಿ ಸೇತುವೆ ನಿರ್ಮಾಣಗೊಂಡಾಗಲೂ ಗೋಲ್ಡನ್ ಗೇಟ್ ಎಂಬ ಹೆಸರೇ ಉಳಿದುಕೊಂಡಿತು. ಸೇತುವೆಗೆ ಗೋಲ್ಡನ್ ಗೇಟ್ ಎಂಬ ಹೆಸರಿದ್ದರೂ  ಅದಕ್ಕೆ ಕಡು ಕಿತ್ತಳೆ ಬಣ್ಣವನ್ನು ಬಳಿಯಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವವರ ನೆಚ್ಚಿನ ತಾಣ:

ಗೋಲ್ಡನ್ ಗೇಟ್ ಸೇತುವೆ ಆತ್ಮಹತ್ಯೆ ಮಾಡಿಕೊಳ್ಳುವವರ ಇಷ್ಟದ ತಾಣ ಕೂಡ ಹೌದು. ಸಾವಿರಾರು ಮಂದಿ ಸೇತುವೆಯ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ಸೇತುವೆಯನ್ನು ಫೋಟೋಗ್ರಾಫರಗಳ ಸ್ವರ್ಗ ಎನಿಸಿಕೊಂಡಿದೆ.  ಜಗತ್ತಿನ ಅತಿಹೆಚ್ಚು ಫೋಟೊಗಳನ್ನು ಈ ಸೇತುವೆಯ ಮೇಲೆ ನಿಂತು ತೆಗೆಯಲಾಗಿದೆ. ಈಗ ಸೇರತುವೆಯ ಉಸ್ತುವಾರಿಗೆಂದೇ 12 ಜನ ಕಮ್ಮಾರರು 38 ಮಂದಿ ಪೇಂಟರ್ಗಳು ನೇಮಿಸಲಾಗಿದೆ. ಅವರು ವರ್ಷವಿಡೀ ಸೇತುವೆಯ ನಟ್- ಬೋಲ್ಟ್ಗಳ ಕಾಳಜಿ ವಹಿಸುತ್ತಾರೆ.




ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ

ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ ಮೆಡಿಟರೇನಿಯನ್ ಸಮುದ್ರದಲ್ಲಿ ಪುರಾತನ ಕಾಲದ ಎಲ್ಲ ನಾಗರಿಕರಿಗೂ ದಾರಿದೀಪವಾಗಿತ್ತು. ಕ್ರಿಸ್ತಶಕ ಪೂರ್ವ 283ರಲ್ಲಿ ನಿರ್ಮಿಸಲಾದ ಈ ದ್ವೀಪಸ್ತಂಭ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆನಿಸಿತ್ತು. ಸುಮಾರು 2 ಸಾವಿರ ವರ್ಷಗಳ ವರೆಗೆ ನಿಂತಿದ್ದ ಇದು ಭೂಕಂಪದಿಂದ ಅವಸಾನಗೊಂಡಿತ್ತು. ಅಲೆಕ್ಸಾಂಡ್ರಿಯಾ ರಾಜ್ಯದ ಬಾವುಟದಲ್ಲಿ ಮತ್ತು ಅಲೆಕ್ಸಾಂಡ್ರಿಯಾ ವಿಶ್ವವಿದ್ಯಾಲಯದ ಚಿಹ್ನೆಯಲ್ಲಿ ಮಾತ್ರ ಈ ಲೈಟ್ ಹೌಸ್ ಉಳಿದುಕೊಂಡಿದೆ.


ದೀಪಸ್ತಂಭದ ಹಿಂದಿನ ಕಥೆ
ಗ್ರೀಕ್ ಸಾಮ್ರಾಜ್ಯದ ಚಕ್ರವರ್ತಿ ಅಲೆಕ್ಸಾಂಡರ್ ಕ್ರಿ.ಪೂ. 331ರಲ್ಲಿ ಈಜಿಪ್ಟ್ನ ಮೇಲೆ ದಂಡೆತ್ತಿ ಹೋಗಿದ್ದ. ಆ ವೇಳೆ ಗ್ರೀಕ್ ಮತ್ತು ಈಜಿಪ್ಟ್ಗೆ ಸಂಪರ್ಕ ಸೇತುವೆಯಂತೆ ಮೆಡಿಟರೇನಿಯನ್ ತಟದಲ್ಲಿ ತನ್ನ ಹೆಸರಿನ ನಗರವೊಂದನ್ನು ನಿರ್ಮಿಸಲು ತನ್ನ ಸೇನಾನಿ ಮೊದಲನೇ ಟೊಲೆಮಿ ಸೊರ್ಟರ್ಗೆ ಆದೇಶಿಸಿದ್ದ. ಹೀಗಾಗಿ ಅಲೆಕ್ಸಾಂಡರನ ಹೆಸರಿನಿಂದಲೇ ಅಲೆಕ್ಸಾಂಡ್ರಿಯಾ ಎಂಬ ಹೆಸರು ಬಂದಿದೆ. ಅಲೆಕ್ಸಾಂಡರನ ಮರಣದ ಬಳಿಕ ಈ ರಾಜ್ಯಕ್ಕೆ ಟೊಲೆಮಿ ತಾನೇ ರಾಜನೆಂದು ಘೋಷಿಸಿಕೊಂಡ. ಆತ ಫೆರೋಸ್ ದ್ವೀಪದಲ್ಲಿ ಹಡಗುಗಳಿಗೆ ದಾರಿತೋರಲು ಬೃಹತ್ ಲೈಟ್ ಹೌಸ್ ಅನ್ನು ನಿರ್ಮಿಸಿದ್ದ. ಫೆರೋಸ್ ದ್ವೀಪದ ಮೇಲೆ ನಿರ್ಮಾಣಗೊಂಡಿದ್ದರಿಂದ ಲೈಟ್ಹೌಸ್ ಅನ್ನು ಸಹ ಫೆರೋಸ್ ಎಂದು ಕರೆಯಲಾಗುತ್ತಿತ್ತು.
 ಲೈಟ್ಹೌಸ್ ನಿರ್ಮಿಸಿದ ಶಿಲ್ಪಿ  ಗ್ರೀಸ್ನ ಸೊಸ್ಟ್ರಾಟೋಸ್. ಲೈಟ್ಹೌಸ್ನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು 20 ವರ್ಷಗಳು ಬೇಕಾದವು. ದ್ವೀಪಸ್ತಂಭ 450 ಅಡಿ ಎತ್ತರವಿತ್ತು ಎಂದು ಹೇಳಲಾಗಿದೆ. ಅಂದಿನ ಕಾಲಕ್ಕೆ ಅದು ವಿಶ್ವದ ಅತ್ಯಂತ ಎತ್ತರದ ಕಟ್ಟಡವೆನಿಸಿಕೊಂಡಿತ್ತು. ಅಲ್ಲದೆ, ಅಲೆಕ್ಸಾಂಡ್ರಿಯಾದ ದ್ವೀಪಸ್ತಂಭ ಅಂದಿನ ಕಾಲದಲ್ಲೂ ಜನಾಕರ್ಷಣೆಯ ಕೇಂದ್ರವಾಗಿತ್ತು.

ದೀಪಸ್ತಂಭ ಹೇಗಿತ್ತು ಗೊತ್ತಾ?
ಮೂರು ಹಂತದಲ್ಲಿ ದ್ವೀಪಸ್ತಂಭವನ್ನು ನಿರ್ಮಿಸಲಾಗಿತ್ತು. ಮೊದಲ ಹಂತದಲ್ಲಿ 240 ಅಡಿ ಎತ್ತರ ಮತ್ತು 100 ಚದರ ಅಡಿ ವಿಸ್ತಾರವಾಗಿತ್ತು. ಎರಡನೇ ಹಂತದಲ್ಲಿ 115 ಅಡಿ ಎತ್ತರವಾಗಿತ್ತು. ಕೊನೆಯ ಮೂರನೇ ಹಂತದಲ್ಲಿ 60 ಅಡಿ ಎತ್ತರದ ಕೊಳವೆಯನ್ನು ಹೊಂದಿತ್ತು. ಗೋಪುರದ ತುತ್ತತುದಿಯಲ್ಲಿ ಸಮುದ್ರ ದೇವತೆ ಪೊಸೈಡನ್ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸಾಮಾನ್ಯವಾಗಿ ಈಜಿಪ್ಟ್ ನ ಪ್ರಸಿದ್ಧ ಗೀಜಾ ಪಿರಾಮಿಡ್ಡುಗಳ ಜತೆ ಇದನ್ನು ಹೋಲಿಕೆ ಮಾಡುತ್ತಾರೆ.
ಕೊಳವೆಯ ಮೇಲ್ಭಾಗದಿಂದ ಉರುವಲನ್ನು ತುಂಬಿಸಿ ಬೆಂಕಿಯನ್ನು ಹಚ್ಚಲಾಗುತ್ತಿತ್ತು. ದ್ವೀಪಸ್ತಂಭದಿಂದ ಹೊರಹೊಮ್ಮುತ್ತಿದ್ದ ಬೆಳಕು ಯಾತ್ರಿಕರಿಗೆ ದಾರಿ ದೀಪವಾಗಿತ್ತು. ದ್ವೀಪಸ್ತಂಭದ ಒಳಭಾಗದಲ್ಲಿ ಮೆಟ್ಟಿಲುಗಳಿದ್ದವು. ಇದರಿಂದ ಜನರು ದೀಪದ ಕೋಣೆಗೆ ತೆರಳಲು ಸಾಧ್ಯವಾಗುತ್ತಿತ್ತು. ಅಲ್ಲದೆ ಬೆಂಕಿಯ ಬೆಳಕು ಹೆಚ್ಚಿನ ದೂರಕ್ಕೆ ಪ್ರತಿಫಲಿಸಲಿ ಎಂಬ ಕಾರಣಕ್ಕೆ ಕಲಾಯಿಹಾಕಿದ ತಾಮ್ರದ ಕನ್ನಡಿಯನ್ನು ದೀಪಸ್ತಂಭದ ಒಳಗೆ ಇರಿಸಲಾಗಿತ್ತು ಎಂದು ಹೇಳಲಾಗಿದೆ. ಹೀಗಾಗಿ ದೀಪಸ್ತಂಭದ ಬೆಳಕು ಮತ್ತು ಹೊಗೆ ಸುಮಾರು 10 ಮೈಲಿ ದೂರದವರೆಗೂ ಕಾಣಿಸುತ್ತಿತ್ತು.

ಇನ್ನೊಂದು ಲೈಟ್ ಹೌಸ್ ನಿರ್ಮಾಣ
ಆದರೆ, ಇಂಥದ್ದೊಂದು ಭವ್ಯಕಟ್ಟಡ ಭೂಕಂಪಗಳಿಂದ ತೀರ್ವ ಹಾನಿಗೆ ಒಳಗಾಗಿತ್ತು. ಅಲ್ಲದೆ, ಅದನ್ನು ಯಾರೂ ಬಳಸುತ್ತಿರಲಿಲ್ಲ. ಅದರ ಕೆಲವು ಅವಶೇಷಗಳು ಸಾಗರದಲ್ಲಿ ಹೂತುಹೊಗಿದ್ದವು. 12-14ನೇ ಶತಮಾನದಲ್ಲಿ ಮಾಮ್ಲುಕ್ ಸುಲ್ತಾನ್ ಖಯತ್ ಬೇ ಎಂಬಾತ ಅವುಗಳನ್ನು ತನ್ನ ಕೋಟೆಗಳನ್ನು ನಿರ್ಮಿಸಲು ಬಳಸಿಕೊಂಡಿದ್ದನಂತೆ. ಆ ಕೋಟೆ ಇಂದಿಗೂ ಇದೆ. ಅಲೆಕ್ಸಾಂಡ್ರಿಯ ಮೆಡಿಟರೇನಿಯನ್  ಸಾಗರದಲ್ಲಿ ಪುರಾತನ ಲೈಟ್ ಹೌಸ್ ಇತ್ತು ಎಂದು ಹೇಳಲಾದ ಸ್ಥಳದಲ್ಲಿ ಇಂದು ಒಂದು ಚಿಕ್ಕ ಲೈಟ್ಹೌಸ್ ಅನ್ನು ನಿರ್ಮಿಸಲಾಗಿದೆ.

Thursday, June 18, 2015

ಭವ್ಯ ರಾಷ್ಟ್ರಪತಿ ಭವನ!

ಭಾರತದಲ್ಲೇ ಅತ್ಯಂತ ಪ್ರತಿಷ್ಠಿತ ಕಟ್ಟಡವೆಂದರೆ ಅದು ರಷ್ಟ್ರಪತಿ ಭವನ. ಈ ಮಹಾಕಟ್ಟಡವನ್ನು ಯಕ್ಷ ಸೃಷ್ಟಿ ಎಂದೇ ಕರೆಯಬಹುದು. ತನ್ನ ಅತ್ಯದ್ಭುತ ವಾಸ್ತು ಶಿಲ್ಪದಿಂದ ಮಾತ್ರವಲ್ಲದೇ, ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ನಿವಾಸ ಇದಾಗಿದೆ. ಮುಘಲರ ವಾಸ್ತುಶಿಲ್ಪ ಮತ್ತು ಯುರೋಪಿನ ವಾಸ್ತು ಶಿಲ್ಪಗಳ ಸಮ್ಮಿಳನವನ್ನು ಈ ಭವ್ಯ ಕಟ್ಟಡದಲ್ಲಿ ಕಾಣಬಹುದು. ಸುಮಾರು 20 ಸಾವಿರ ಚದರ್ ಅಡಿ ವಿಸ್ತೀರ್ಣವಿರುವ ಈ ಭವನದಲ್ಲಿ 340 ಕೋಣೆಗಳಿವೆ. ವಿಶಾಲ  ಹಜಾರಗಳು, ಎತ್ತರದ ಬೋದಿಗಳು, ಅಮೃತ ಶಿಲೆಯ ನೆಲ, ಕಾಶ್ಮೀರಿ ನೆಲಗಂಬಳಿ, ಅಪರೂಪದ ತೈಲ ಚಿತ್ರಗಳು, ಬರ್ಮಾ ಟೀಕ್ ನ ಪೀಠೋಪಕರಣಗಳು... ಇವೆಲ್ಲಾ ರಾಷ್ಟ್ರಪತಿ ಭವನ ಯಕ್ಷ ಸೃಷ್ಟಿಯೋ ಎಂಬತೆ ಭಾಸಗೊಳಿಸುತ್ತವೆ.


ವೈಸ್ರಾಯ್ ಹೌಸ್ ಆಗಿತ್ತು:
ಇದನ್ನು ಮೂಲತಃ ರಾಷ್ಟ್ರಪತಿಗಳಿಗಾಗಿ ಕಟ್ಟಿದ್ದಲ್ಲ. ಇದು ಬ್ರಿಟಿಷರ ಕಾಲದ ವೈಸ್ರಾಯ್ ಹೌಸ್. ಇಲ್ಲಿ ಗವರ್ನರ್ ಜನರಲ್ ಮತ್ತು ಅವರ ಅಧಿಕಾರಿ ವರ್ಗ ಉಳಿದುಕೊಳ್ಳುತ್ತಿತ್ತು. ನಾವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಬಳಿಕ ಚಕ್ರವತರ್ಿ ರಾಜಗೋಪಾಲಾಚಾರ್ಯ ಅವರು ಈ ಬಂಗಲೆಯಲ್ಲಿ ತಂಗಿದ್ದ ಕೊನೆಯ ಗವರ್ನರ್ ಜನರಲ್ ಆಗಿದ್ದರು. ಭಾರತ ಗಣರಾಜ್ಯಗೊಂಡ ಬಳಿಕ ಇದಕ್ಕೆ ರಾಷ್ಟ್ರತಿ ಭವನ ಎಂದು ಸಂಭೋದಿಸಲಾಯಿತು.

ವೈಟ್ ಹೌಸ್ಗಿಂತಲೂ ದೊಡ್ಡದು!
1912ರಲ್ಲಿ ರಾಷ್ಟ್ರಪತಿ ಭವನದ ನಿರ್ಮಾಣ ಕಾರ್ಯ ಆರಂಭವಾಯಿತು. ಅದು ಮುಕ್ತಾಯಗೊಂಡಿದ್ದು 1929ರಲ್ಲಿ. ರಾಷ್ಟ್ರಪತಿ ಭವನವನ್ನು ಅಮೆರಿಕದ ಅಧ್ಯಕ್ಷರ ನಿವಾಸ ವೈಟ್ ಹೌಸ್ಗೆ ಹೋಲಿಸಿದರೆ ಅದರ ವಿಸ್ತೀರ್ಣ ಕೇಲವ 18 ಎಕರೆ. ಆದರೆ, ನಮ್ಮ ರಾಷ್ಟ್ರಪತಿ ಭವನ ವಿಶಾಲವಾದ 320 ಎಕರೆ ಪ್ರದೇಶಕ್ಕೆ ಚಾಚಿಕೊಂಡಿದೆ. ವಿಶೇಷ ರೀತಿಯಲ್ಲಿ ನಿರ್ಮಸಿರುವ ಮುಘಲ್ ಗಾರ್ಡನ್ಸ್ ಕೂಡ ಇಲ್ಲಿನ ಮತ್ತೊಂದು ಆಕರ್ಷಣೆ. ರಾಷ್ಟ್ರಪತಿಗಳಾದವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಇದನ್ನು ಬೆಳೆಸಿದ್ದಾರೆ.

ಲೂಟಿನ್ಸ್ ನಿರ್ಮಿಸಿದ ಅರಮನೆ:
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಬಣ್ಣ ಬಣ್ಣದ ಮಾರ್ಬಲ್ಗಳಿಂದ ಶೃಂಗರಿಸಲ್ಪಟ್ಟಿದ್ದು, ಅತ್ಯಂತ ಐಷಾರಾಮಿ ಕೊಠಡಿಯಾಗಿದೆ. ಇಲ್ಲಿ ವಾಸವಿರುವ ರಾಷ್ಟ್ರಪತಿಗಳಿಗಾಗಿ ಒಂದು ಡ್ರಾಯಿಂಗ್ ಹಾಲ್, ಬ್ಲಾಂಕ್ವೆಟ್ ಹಾಲ್, ಟೆನ್ನಿಸ್ ಕೋಟರ್್, ಕ್ರಿಕೆಟ್ ಫೀಲ್ಡ್ ಹಾಗೂ ಮ್ಯೂಸಿಯಂ ಮುಂತಾದ ಸವಲತ್ತುಗಳನ್ನು ಒದಗಿಸಲಾಗಿದೆ.
ರಾಷ್ಟ್ರಪತಿ ಭವನವನ್ನು ವಿನ್ಯಾಸಗೊಳಿಸಿ ನಿಮರ್ಿಸಿದ ವಾಸ್ತುಶಿಲ್ಪಿ ಎಡ್ವರ್ಡ್ ಲೇಂಡ್ಲೀರ್ ಲೂಟಿನ್ಸ್. ಇಟಲಿಯ ಶಿಲ್ಪಶಾಸ್ತ್ರ ಈತನಿಗೆ ಆದರ್ಶ. ಈ ಕಟ್ಟಡದ ನಿಮರ್ಾಣದಲ್ಲಿ ಎಲ್ಲಿಯೂ ಕಬ್ಬಿಣವನ್ನು ಉಪಯೋಗ ಮಾಡಿಲ್ಲ. ಈ ಅರಮನೆಗೆ ಭಾರತೀಯ ದೇವಾಲಯಗಳ ಗಂಟೆಗಳನ್ನು ಕಟ್ಟಡದ ಕಂಬಗಳಲ್ಲಿ ಬಳಸಿರುವುದು ಮತ್ತೊಂದು ವಿಶೇಷ.
ಬೌದ್ಧ ಕಟಾಂಜನಗಳು, ಹಿಂದು ಮತ್ತು ಜೈನ ದೇವಾಲಯದ ಕಲ್ಲುಬಂಡೆಗಳು, ಛತ್ರಿಗಳು, ಮೊಘಲರ  ಕಾಲದ  ಕಲ್ಲಿನ ಜಾಲರಿಗಳು, ಕಲ್ಲು ಚಪ್ಪಡಿಯ ಛಜ್ಜಾಗಳು ಹೀಗೆ ಹುಡುಕುತ್ತ ಹೋದರೆ ರಾಷ್ಟ್ರಪತಿ ಭವನದಲ್ಲಿ ಭಾರತೀಯ ವಾಸ್ತು ಶಿಲ್ಪದ ಪ್ರಭಾವ ತೀರಾ ಕಡಿಮೆ. ಇಷ್ಟು ಮಾತ್ರವಲ್ಲ ಗಾಲ್ಫ್ ಮೈದಾನ, ಈಜುಕೊಳ, ಏಕಕಾಲದಲ್ಲಿ ಸಾವಿರ ಮಂದಿಗೆ ಅಡುಗೆ ಮಾಡಬಹುದಾದ ಅಡುಗೆ ಮನೆ. ಲಾಂಡ್ರಿ, ಕ್ಷೌರಿಕನ ಅಂಗಡಿ, ಅಂಚೇ ಕಚೇರಿ ಕೂಡ ರಾಷ್ಟ್ರಪತಿ ಭವನದಲ್ಲಿದೆ.
ರಾಷ್ಟ್ರಪತಿ ಕಾಯರ್ಾಲಯದ 350 ಸಿಬ್ಬಂದಿ, ಮನೆಯೊಳಗಿನ ಕೆಲಸಕ್ಕೆ 220 ನೌಕರರು, 50 ಸದಸ್ಯರ ಅಡುಗೆ ತಂಡ, ತೋಟದಲ್ಲಿ ಕೆಲಸಮಾಡಲು 165 ಕಾರ್ಮಿಕರು, ಸ್ವಚ್ಛತಾ ಕಾರ್ಯಕ್ಕೇಂದೇ 150 ಕಾಮರ್ಿಕರು ಪ್ರತಿನಿತ್ಯ ಇಲ್ಲಿ ಕೆಲಸ ನಿರ್ವಹಿಸುತ್ತಾರೆ.
ಒಳ ಅಲಂಕಾರಗಳೆಲ್ಲಾ ಬ್ರಿಟಿಷ್ ಪ್ರಭಾವಿತ. ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಲದಲ್ಲಿ ಸೇರ್ಪಡೆಯಾದ ಶೋಕೇಸ್ ಒಂದೇ ಇಲ್ಲ ಹೊಸತು. ಅದರ ಪಕ್ಕದಲ್ಲಿ ಔಪಚಾರಿಕ ಭೇಟಿಯ ಕೋಣೆಗಳಿವೆ. ಉತ್ತರದ ಡ್ರಾಯಿಂಗ್ ರೂಮ್ನಲ್ಲಿ ವಿದೇಶದ ಗಣ್ಯರನ್ನು ರಾಷ್ಟ್ರಪತಿ ಭೇಟಿ ಮಾಡುತ್ತಾರೆ. ಪಕ್ಕದಲ್ಲಿಯೇ ಇರುವ ಇನ್ನೊಂದು ಸಭಾಂಗಣ ರಾಜ್ಯಪಾಲರ ಭೇಟಿಗೆ ಮೀಸಲು.



Friday, June 12, 2015

ಗುಲಾಬಿ ನೀರಿನ ಸರೋವರ!

ಈ ಸರೋವರದಲ್ಲಿ ಯಾರೋ ಬಂದು ಗುಲಾಬಿ  ಬಣ್ಣವನ್ನು ಕದಡಿ ಹೋಗಿಲ್ಲ. ಆದರೂ  ಸರೋವರದ ನೀರೆಲ್ಲಾ ಗುಲಾಬಿ ಬಣ್ಣಕ್ಕೆ ತಿರುಗಿದೆ. ಹೌದು. ಪಶ್ಚಿಮ ಆಸ್ಟ್ರೇಲಿಯಾದ ಮಿಡಲ್ ಐಲೆಂಡ್ನಲ್ಲಿರುವ ಲೇಕ್ ಹೀಲಿಯರ್ ಗುಲಾಬಿ ಬಣ್ಣದ ನೀರಿಗೆ ಹೆಸರುವಾಸಿ. ಆಕರ್ಷಕ ಗುಲಾಬಿ ಬಣ್ಣದಿಂದ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಆದರೆ, ಇಲ್ಲಿನ ನೀರು ಏಕೆ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.



10 ಪಟ್ಟು ಅಧಿಕ ಉಪ್ಪಿನ ಪ್ರಮಾಣ
ಈ ಚಿಕ್ಕ ಸರೋವರ 600 ಮೀಟರ್ನಷ್ಟು ಅಗಲ ಮತ್ತು 250 ಮೀಟರ್ನಷ್ಟು ಅಗಲವಾಗಿದೆ. 1802ರಲ್ಲಿ ಈ ಸರೋವರವನ್ನು ಬ್ರಿಟಿಷ್ ಸಮುದ್ರ ಯಾನಿ ಕ್ಯಾಪ್ಟನ್ ಫಿಲಿಂಡರ್ ಎಂಬಾತ ಅನ್ವೇಷಿಸಿದ. ಅಂದಿನಿಂದಲೂ ಇದರ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪಕ್ಕದಲ್ಲೇ ಇರುವ ಸಮುದ್ರದ ಪ್ರಭಾವದಿಂದಾಗಿ ಸರೋವರದ ನೀರು ಕೂಡ ಉಪ್ಪಾಗಿದೆ. ಆಳವಿಲ್ಲದ ಈ ಸರೋವರದ ತುಂಬೆಲ್ಲಾ ಬಿಳಿಯ ಉಪ್ಪುತುಂಬಿಕೊಂಡಿದೆ. ವಿಶೇಷವೆಂದರೆ, ಸಮುದ್ರದ ನೀರಿಗಿಂತಲೂ ಲೇಕ್ ಹೀಲಿಯರ್ನ ನೀರಿನಲ್ಲಿ 10 ಪಟ್ಟು ಅಧಿಕ ಉಪ್ಪಿನ ಪ್ರಮಾಣವಿದೆ. ಸರೋವರದ ಸುತ್ತಲೂ ದಟ್ಟವಾದ ನೀಲಗಿರಿ ಮತ್ತು ಪೆಪರ್ಬಾರ್ಕ್  ಮರಗಳು ಆವರಿಸಿಕೊಂಡಿವೆ. ಆದರೆ, ಸರೋವರದ ನೀರಿನಲ್ಲಿ ಪೌಷ್ಟಿಕಾಂಶದ ಸಾಂದ್ರತೆ ತೀರಾ ಕಡಿಮೆ. ವಿವಿಧ ನಮೂನೆಯ ಬ್ಯಾಕ್ಟೀರಿಯಾ ಮತ್ತು ಪಾಚಿಗಳು ನೀರಿನಲ್ಲಿ ಬೆರೆತುಕೊಂಡಿವೆ. ನೀರಿನಲ್ಲಿ ಅಧಿಕ ಉಪ್ಪಿನ ಪ್ರಮಾಣ ಇರುವುದರಿಂದ ಮತ್ತು ಉಷ್ಣಾಂಶವೂ ಅಧಿಕವಿದ್ದ ಸಂದರ್ಭದಲ್ಲಿ ಪಾಚಿಗಳು ಕೆಂಪು ಬಣ್ಣದ ರಾಸಾಯನಿಕವನ್ನು ಉತ್ಪತ್ತಿಮಾಡುತ್ತದೆ. ಇದೆಲ್ಲದರ ಪರಿಣಾಮವಾಗಿ ನೀರು ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಅಂದಾಜಿಸಲಾಗಿದೆ. ಉಪ್ಪು ಮತ್ತು ಸೋಡಿಯಂ ಬೈಕಾಬ್ರೋನೇಟ್ನ ಪ್ರತಿಕ್ರಿಯೆಯಿಂದಾಗಿ ನೀರು ಗುಲಾಬಿಯಾಗಿರಬಹುದು ಎಂಬ ಮತ್ತೊಂದು ವಾದವೂ ಇದೆ.

ಗ್ಲಾಸಿನಲ್ಲಿ ಹಿಡಿದಿಟ್ಟರೂ ಬಣ್ಣ ಬದಲಾಗಲ್ಲ!
ಇದರ ನೀರು ಕೇವಲ ಸರೋವರದಲ್ಲಿ ಇದ್ದಾಗ ಮಾತ್ರ ನೀರು ಗುಲಾಬಿ ಬಣ್ಣದಲ್ಲಿ ಕಾಣತ್ತದೆ ಎನ್ನುವ ಹಾಗೂ ಇಲ್ಲ. ನೀರನ್ನು ಗ್ಲಾಸಿನಲ್ಲಿ ಹಿಡಿದಿಟ್ಟರೂ ಬಣ್ಣದಲ್ಲಿ ಬದಲಾವಣೆ ಆಗುವುದಿಲ್ಲ! ಅಲ್ಲದೆ, ಈ ಸರೋವರ ಮಾನವನ ಬಳಕೆಗೆ ಅಪಾಯಕಾರಿ ಅಲ್ಲ. ಎಲ್ಲ ಸರೋವರಗಳಂತೆ ಇದರ ನೀರಿನಲ್ಲೂ ಈಜಾಡಬಹದು. ಸರೋವರದಿಂದ ಕೆಲವು ವರ್ಷಗಳ ಕಾಲ ಇಲ್ಲಿ ಉಪ್ಪನ್ನು ಹೊರತೆಯಲಾಗಿತ್ತು. ಆದರೆ, ಇದನ್ನು ಈಗ ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಮೀಸಲಿಡಲಾಗಿದೆ. ಆಕಾಶದಿಂದ ಈ ಸರೋವರವನ್ನು ನೋಡಿದರೆ ಗುಲಾಬಿ ಬಣ್ಣದ ಈಜುಕೊಳದಂತೆ ಗೋಚರಿಸುತ್ತದೆ.

ಜಗತ್ತಿನ ಬೇರೆ ಕಡೆಗಳಲ್ಲೂ ಇದೆ
ಹೀಲಿಯರ್ ಜಗತ್ತಿನ ಏಕೈಕ ಗುಲಾಬಿ ನೀರಿನ ಸರೋವರವೇನೂ ಅಲ್ಲ. ಜಗತ್ತಿನ ಇತರ ಭಾಗದಲ್ಲೂ ಗುಲಾಬಿ ಸರೋವರಗಳನ್ನು ಕಾಣಬಹುದು. ಆಫ್ರಿಕಾದ ರಾಷ್ಟ್ರ ಸೆನೆಗಲ್ನಲ್ಲಿಯೂ ಇಂತಹುದೇ ಗುಲಾಬಿ ಸರೋವರವಿದೆ.  ಅಲ್ಲದೆ, ಕೆನಡಾ, ಸ್ಪೇನ್ ಮತ್ತು ಆಸ್ಟ್ರೇಲಿಯಾದ ಇತರ ಭಾಗದಲ್ಲೂ ಗುಲಾಬಿ ನೀರಿನ ಸರೋವರವನ್ನು ಕಾಣಬಹುದು. ಆದರೆ, ಈ ಎಲ್ಲಾ ಸರೋವರಗಳಿಗಿಂತ ಹೀಲಿಯರ್ರ ನೀರು ಸದಾ ಗುಲಾಬಿ ಬಣ್ಣದಲ್ಲೇ ಇರುತ್ತದೆ ಎನ್ನುವುದು ವಿಶೇಷ.  

 

Tuesday, June 2, 2015

ಸಲಾರ್ ಡಿ ಉಯುನಿ ಎಂಬ ಪ್ರಕೃತಿ ಸೃಷ್ಟಿಸಿದ ಕನ್ನಡಿ!

ನೀವು ಎಂದಾದರೂ ಬೃಹದಾಕಾರದ ಕನ್ನಡಿಯ ಮುಂದೆ ನಿಂತಿದ್ದೀರಾ?  ಅದರ ಮೇಲೆ ನಡೆದಾಡಿದ್ದೀರಾ? ಅಂತಹ ಕನ್ನಡಿಯನ್ನು ಯಾರೂ ತಯಾರಿಸಬೇಕಾಗಿಲ್ಲ. ಮಾನವನಿಂದಲೂ ಸೃಷ್ಟಿಸಲಾಗದಷ್ಟು ಬೃಹದಾಕಾರದ ಕನ್ನಡಿಯನ್ನು ಬೊಲಿವಿಯಾದ ಸಲಾರ್ ಡಿ ಉಯುನಿಯಲ್ಲಿ ಪ್ರಕೃತಿಯೇ ಅದನ್ನು ಸೃಷ್ಟಿಸಿದೆ. ಇದೊಂದು ಜಗತ್ತಿನ ಬೃಹತ್ ಉಪ್ಪಿನ ಸರೋವರ. ಬೇಸಿಗೆಯಲ್ಲಿ ಸರೋವರ ಉಪ್ಪಿನ ಹಾಸಿಗೆಯಾಗಿ ಮಾರ್ಪಡುತ್ತದೆ. ಆಗ ಅದರ ಮೇಲೆ ಕಾರು, ಬೈಕ್ಗಳಳಲ್ಲಿ ಪ್ರಯಾಣಿಸಬಹುದು. ಮಲಗಿ ಆನಂದಿಸಬಹುದು. ಮಳೆಗಾಲದಲ್ಲಿ ಇಲ್ಲಿ ಉಪ್ಪು ನೀರಿನ ಪ್ರವಾಹ ಉಂಟಾಗುತ್ತದೆ. ನೀರು ನೀಲಿ ಬಣ್ಣಕ್ಕೆ ತಿರುಗಿ ಕನ್ನಡಿಯ ತರಹ ಹೊಳೆಯುತ್ತದೆ. ಇಲ್ಲಿ ಎಷ್ಟೇ ಅಗೆದರೂ ಉಪ್ಪು ಖಾಲಿಯಾಯಿತು ಎಂಬ ಮಾತೇ ಇಲ್ಲ.


 ಮೊಗೆದಷ್ಟೂ ಖಾಲಿಯಾಗದ ಉಪ್ಪು!
ಸಮುದ್ರ ಮಟ್ಟದಿಂದ 3656 ಅಡಿಯಷ್ಟು ಎತ್ತರದ ಪ್ರದೇಶದಲ್ಲಿರುವ ಇದು ದಕ್ಷಿಣ ಅಮೆರಿಕ ಖಂಡದ ಬೊಲಿವಿಯಾದ ಪೊಟೋಸಿ ಮತ್ತು ಒರುರೋ ಪ್ರಾಂತ್ಯಕ್ಕೆ ಸೇರಿದೆ. 10,582 ಚದರ ಮೈಲಿಗೆ ವ್ಯಾಪಿಸಿರುವ ಈ ಸರೋವರ 30- 40 ಸಹಸ್ರ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ. ಸ್ಥಳೀಯ ಭಾಷೆಯಲ್ಲಿ ಸಲಾರ್ ಡಿ ಉಯುನಿಗೆ ಆವರಣ ದ್ವೀಪ ಎನ್ನುವ ಅರ್ಥವಿದೆ. ವರ್ಷಕ್ಕೆ ಇಲ್ಲಿ 25 ಸಾವಿರ ಟನ್ ಉಪ್ಪನ್ನು ತೆಗೆಯಲಾಗುತ್ತದೆ. ಹಾಗಿದ್ದರೂ ಉಪ್ಪು ಮಾತ್ರ ಖಾಲಿಯಾಗುವುದಿಲ್ಲ. ಕಾರಣ ಇಲ್ಲಿ 10 ಶತಕೋಟಿ ಟನ್ಗಷ್ಟು ಉಪ್ಪು ಸಂಗ್ರಹವಾಗಿದೆ. ಅಷ್ಟೇ ಅಲ್ಲ 10 ಕೋಟಿ ಟನ್ಗಳಷ್ಟು ಲೀಥಿಯಂ ಕೂಡ ಇಲ್ಲಿದೆ. ಖನಿಜಾಂಶ ಮತ್ತು ಉಪ್ಪು ಹೇರಳವಾಗಿ ಇರುವುದರಿಂದ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಉಪ್ಪಿನ ಪದರದಿಂದಲೇ ಕಲ್ಲುಗಳನ್ನು ಮಾಡಿ ಕಟ್ಟಿದಂತಹ ಹೋಟೆಲ್ಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಉಪ್ಪಿನಲ್ಲೂ ಅರಳುವ ಗುಲಾಬಿ ಹೂ!
ಇಲ್ಲಿರುವುದು ಮಣ್ಣಿನಂತೆ ಕಂಡರೂ ಅದರಲ್ಲಿ ಉಪ್ಪೇ  ಜಾಸ್ತಿ. ಹೀಗಾಗಿ ಕೆಲವೇ ಜಾತಿಯ ಸಸ್ಯಗಳ ಇಲ್ಲಿ ಬೆಳೆಯುತ್ತವೆ. ಒಂದು ಬಗೆಯ ಗುಲಾಬಿ ಗಿಡಗಳು, ಬೃಹದಾಕಾರದ ಪಾಪಸ್ಕಳ್ಳಿಯ ಗಿಡಗಳನ್ನು ಇಲ್ಲಿ ಕಾಣಬಹುದು. 25 ಅಡಿ ಎತ್ತರದ ಈ ಸಸ್ಯಗಳ ಬೆಳವಣಿಗೆ ವರ್ಷಕ್ಕೆ ಒಂದು ಸೆಂಟಿ ಮೀಟರ್ನಷ್ಟು ಮಾತ್ರ. ಆದರೆ, ಅವು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಲ್ಲದೆ, ಇಲ್ಲಿ ಹಿಮಕರಡಿಯನ್ನು ಹೋಲುವ ಆಂಡಿಯನ್ ನರಿ, ಕೊಕ್ಕರೆ, ಹೆಬ್ಬಾತುಗಳನ್ನು ಕಾಣಬಹದು.

ಮೋಡ ಆಕಾಶದ ಪ್ರತಿಬಿಂಬ!
ಮಳೆ ಸುರಿದಾಗ ಸಲಾರ್ನ ಉಪ್ಪು ಭರಿತ ಭೂಮಿಯ ಮೇಲೆ ತೆಳುವಾದ ನೀರಿನ ಹೊದಿಕೆ ಸೃಷ್ಟಿಯಾಗುತ್ತದೆ. ಅದು ನೋಡುಗರನ್ನು ಮಂತ್ರಮುಗ್ಧವಾಗಿಸುತ್ತದೆ. ಈ ಸನ್ನಿವೇಶದಲ್ಲಿ ಸೂರ್ಯ, ಮೋಡ, ಆಕಾಶ ಹಾಗೂ ಇತರ ಪ್ರತಿಬಿಂಬಗಳು ಪ್ರತಿಫಲಿಸಲ್ಪಡುತ್ತದೆ. ಅದರ ಮೇಲೆ ನಡೆದಾಡುವುದು ಯಾವುದೂ ಅನ್ಯಗ್ರಹದ ಮೇಲೆ ನಿಂತ ಅನುಭವನ್ನು ನೀಡುತ್ತದೆ. ಪ್ರವಾಸಿಗರು ಇಲ್ಲಿ ಸುತ್ತುವರಿದಿರುವ ಬಂಡೆಗಳನ್ನು ನೋಡಲು ಜೀಪ್ ಸವಾರಿ ಮಾಡುತ್ತಾರೆ. ಬಿಸಿ ನೀರಿನ ಬುಗ್ಗೆಗಳು, ಸಣ್ಣಪ್ರಮಾಣದ ಜ್ವಾಲಾಮುಖಿಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು.   

ರೈಲ್ವೆ ಇಂಜಿನ್ಗಳ ಸ್ಮಶಾನ!
ಬ್ರಿಟಿಷರು 19ನೇ ಶತಮಾನದಲ್ಲಿ ಇಲ್ಲಿನ ಉಪ್ಪುಗಳನ್ನು ತಮ್ಮ ದೇಶಕ್ಕೆ ರಫ್ತು ಮಾಡುವ ಸಲುವಾಗಿ ರೈಲ್ವೆ ಹಳಿಯನ್ನು ನಿಮರ್ಿಸಿದ್ದರು. ಅದೀಗ ಪಳೆಯುಳಿಕೆಯಾಗಿ ಇಂದಿಗೂ ಉಳಿದುಕೊಂಡಿದೆ. ಸ್ಥಳೀಯರು ರೈಲ್ವೆಯ ಸ್ಮಶಾನವೆಂದು ಕರೆಯುವ ನೂರಾರು ರೈಲ್ವೆ ಇಂಜಿನ್ಗಳು, ಬೋಗಿಗಳು ಪ್ರವಾಸಿಗರನ್ನು ಸೆಳೆಯುತ್ತವೆ

Wednesday, May 27, 2015

ಬತ್ತಿದ ಸರೋವರದಲ್ಲಿ ಕಲ್ಲುಬಂಡೆಗಳ ಚಲನೆ!

ಕಲ್ಲು ಬಂಡೆ ತಾನಾಗಿಯೇ ಚಲಿಸಲು ಸಾಧ್ಯವೇ?  ಅಮೆರಿಕದ ಕ್ಯಾಲಿಫೋರ್ನಿಯಾದ ಮೃತ ಕಣಿವೆ ಎಂದೇ ಕರೆಸಿಕೊಳ್ಳುವ ರಾಕ್ ಟ್ರ್ಯಾಕ್ ಪ್ಲಾಯಾ ಇಂಥದ್ದೊಂದು ನಿಗೂಢ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಇದೊಂದು ಬತ್ತಿದ ಸರೋವರವಾಗಿದ್ದು, ಇಲ್ಲಿ ಭಾರೀ ಗಾತ್ರದ ಬಂಡೆಗಳು ತಾವಾಗಿಯೇ ಚಲಿಸುತ್ತದೆ. ಇದಕ್ಕೆ ಸಾಕ್ಷಿ ಎಂಬತೆ ಬಂಡೆಗಳ ಹಿಂಭಾಗದಲ್ಲಿ ದಾರಿಯ ಗುರುತು ಬಿದ್ದಿರುತ್ತದೆ. ಆದರೆ, ಕಲ್ಲು ಚಲಿಸುವುದಕ್ಕೆ ಏನು ಕಾರಣ.  ಅದರ ಹಿಂದಿರುವ ಮರ್ಮವೇನು? ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ.


ಸಮುದ್ರ ಮಟ್ಟದಿಂದ 3608 ಅಡಿ ಎತ್ತರದಲ್ಲಿರುವ ರಾಕ್ ಟ್ರ್ಯಾಕ್ ಪ್ಲಾಯಾ ಗಾಜಿನ ಟೇಬಲ್ನಷ್ಟೇ ಸಮತಟ್ಟಾಗಿದೆ. ಇಲ್ಲಿ ಏರು ತಗ್ಗುಗಳನ್ನು ಗುರುತಿಸುವುದೇ ಸಾಧ್ಯವಿಲ್ಲ.  ಪ್ಲಾಯಾ 4.3 ಕಿ.ಮೀ ಉದ್ದ ಮತ್ತು 1.3 ಕಿ.ಮೀ. ಅಗಲವಾಗಿದೆ. ಆದೆರೆ, ದಕ್ಷಿಣ ತುದಿಗಿಂತಲೂ ಉತ್ತರ ತುದಿ 4 ಸೆಂ.ಮೀ. ಎತ್ತರವಾಗಿದೆ. ಇದರ ಮೇಲ್ಮೈ ಕೆಸರು ಮತ್ತು ಜಾರುವ ಜೇಡಿ ಮಣ್ಣಿನಿಂದ ತುಂಬಿಕೊಂಡಿದೆ. ಇಲ್ಲಿನ ವಾತಾವರಣ ಶುಷ್ಕವಾಗಿರುತ್ತದೆ. ವರ್ಷದಲ್ಲಿ ಒಂದೆರಡು  ಇಂಚು ಮಳೆ ಬೀಳುತ್ತದೆ. ಗುಡ್ಡದ ನೀರೆಲ್ಲಾ ಇಳಿದು ಬಂದು ಸರೋವರದಲ್ಲಿ ಕೆಲವು ಇಂಚುಗಳಷ್ಟು ನೀರು ತುಂಬಿಕೊಳ್ಳುತ್ತದೆ. ಬಳಿಕ ಸರೋವರ ಬತ್ತಲು ಆರಂಭವಾಗುತ್ತದೆ. ಆಗ ರಾಕ್ ಟ್ರ್ಯಾಕ್ ಪ್ಲಾಯಾದ ತಳದಲ್ಲಿರುವ ಮಣ್ಣು ಮೃದು ಮತ್ತು ಜಾರುವ ಕೆಸರಾಗಿ ಮಾರ್ಪಡುತ್ತದೆ.
ರಾಕ್ ಟ್ರ್ಯಾಕ್ ಪ್ಲಾಯಾದಲ್ಲಿ ಬಂಡೆಗಳು ಕೆಲವು ಇಂಚಿನಷ್ಟು ಚಲಿಸಿದ ಉದಾಹರಣೆಗಳಿವೆ. ಬಂಡೆಗಳು 10-20 ಕೆ.ಜಿ. ತೂಕವಿದ್ದರೆ ನಂಬಲು ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. ಅದರೆ, ಸುಮಾರು 300 ಕೆ.ಜಿ.  ಬಂಡೆಗಳೂ ಸ್ಥಾನಪಲ್ಲಟಗೊಳ್ಳುತ್ತವೆ!


  • ಮೂರು ವಾದಗಳು!

1. ಗಾಳಿಯಿಂದ ಚಲಿಸುತ್ತಿದೆಯೇ?

ಇಲ್ಲಿ ಗಾಳಿಯ ಬಲದಿಂದ ಬಂಡೆಗಳು ಚಲುಸುತ್ತಿರಬೇಕು. ಬಂಡೆಗಳು ಚಲಿಸಿದ ಪಥದ ಗಾಳಿಯ ಚಲನೆಯ ದಿಕ್ಕನ್ನು ಅನುಸರಿಸಿವೆ ಎಂಬ ಆದವೂ ಇದೆ. ಆದರೆ, ಎಲ್ಲಾ ಬಂಡೆಗಳು ಒಂದೇ ದಿಕ್ಕಿನಲ್ಲಿ ಚಲಿಸಿಲ್ಲಿ. ಕೆಲವು ನೇರವಾಗಿ ಚಲಿಸಿ ಬಳಿಕ ಪಥವನ್ನು ಬದಲಿಸಿವೆ. ಕೆಲವು  ಬಂಡೆಗಳು ಸರೋವರದ ಸುತ್ತಲೂ ಓಡಾಡಿವೆ. ಅಲ್ಲದೆ, 300 ಕೆ.ಜಿಯಷ್ಟು ಭಾರದಿಂದ ಬಂಡೆಯನ್ನು ಗಾಳಿಯಿಂದ ನೂಕಲು ಸಾಧ್ಯವೇ ಎನ್ನುವ ಶಂಕೆ ವಿಜ್ಞಾನಿಗಳನ್ನು ಕಾಡುತ್ತಿದೆ.

2.ಮಂಜುಗಡ್ಡೆಯಿಂದ ಜಾರುತ್ತಿದೆಯೇ?

ಇಲ್ಲಿ ಬೇಸಿಗೆಯಲ್ಲಿ 50 ಸೆಲ್ಸಿಯಸ್ನಷ್ಟು ಉಷ್ಣಾಂಶವಿರುತ್ತದೆ. ಆದರೆ, ಚಳಿಗಾಲದಲ್ಲಿ ಅತ್ಯಂತ ತಂಪಾಗಿರುತ್ತವೆ. ಹಿಮಪಾತವೂ ಆಗುತ್ತದೆ. ಸರೋವರದಲ್ಲಿ ಸಮತಲದಲ್ಲಿ ತೆಳುವಾದ ಮಂಜಿನ ಪದರ ಶೇಖರವಾಗಿರುತ್ತದೆ. ಗಾಳಿಯ ವೇಗಕ್ಕೆ ಈ ಮಂಜುಗಡ್ಡೆಗಳು ಚಲಿಸಿದಾಗ, ಅವು ಕರಗುವಾಗ ಬಂಡೆಗಳನ್ನು ಜಾರುವಂತೆ ಮಾಡುತ್ತವೆ ಎನ್ನುವ ಇನ್ನೊಂದು ವಾದವಿದೆ. ಆದರೆ, ಬೇಸಿಗೆಯಲ್ಲೂ ಕಲ್ಲು ಬಂಡೆಗಳು ಚಲಿಸಿದ್ದು ವಿಜ್ಞಾನಿಗಳ ಗಮನಕ್ಕೆ ಬಂದಿದೆ.

3.ಗುರುತ್ವಾಕರ್ಷಣ ಶಕ್ತಿ ಕಾರಣವೇ?

ಸೋರವರದ ತಳ ಒಂದು ಭಾಗದಲ್ಲಿ ಸ್ವಲ್ಪಮಟ್ಟಿಗೆ ಗುರುತಿಸಲಾಗದಷ್ಟು ಇಳಿಜಾರಾಗಿದ್ದು, ಬಂಡೆಗಳು ಗುರುತ್ವಾಕರ್ಷಣೆಯ ಬಲದಿಂದ ಚಲಿಸುತ್ತಿರಬಹುದು ಎಂದು ಈ ಮೊದಲು ಊಹಿಸಲಾಗಿತ್ತು. ಆದರೆ, ಕೆಲವು ಬಂಡೆಗಳು ಅವುಗಳ ವಿರುದ್ಧ ದಕ್ಕಿಗೂ ಚಲಿಸಿದ ಉದಾಹರಣೆಗಳಿವೆ. ಅಲ್ಲಿಗೆ ಈ ಮೂರು ಉದಾಹರಣೆಗಳು ಅಪೂರ್ಣ ಎನಿಸಿಕೊಳ್ಳುತ್ತವೆ. 

ಬಗೆಹರಿಯದ ರಹಸ್ಯ!
ಬಂಡೆಗಳ ಬಗ್ಗೆ ರಾಕ್ ಟ್ರ್ಯಾಕ್ ಪ್ಲಾಯಾದಲ್ಲಿ ವಿಜ್ಞಾನಿಗಳು 1990ರಿಂದಲೂ ಸಂಶೋಧನೆಯ್ನು ಕೈಗೊಂಡಿದ್ದಾರೆ. ಬಂಡೆಗಳ ಚಲನೆ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಕೆಲವೇ ನಿಮಷಗಳಲ್ಲಿ ಅವುಗಳ ಚಲನೆ ಕೊನೆಗೊಳ್ಳುತ್ತದೆ. ಹೀಗಾಗಿ ಒಮ್ಮೆಯೂ ಬಂಡೆಗಳು ಚಲಿಸಿದ್ದನ್ನು ಕಣ್ಣಾರೆ ಯಾರೂ ಕಂಡಿಲ್ಲ. ಅದರ ವಿಡಿಯೋ ಚಿತ್ರೀಕರಣವೂ ಸಾಧ್ಯವಾಗಿಲ್ಲ. ಹೀಗಾಗಿ ಕಲ್ಲು ಬಂಡೆಗಳ ಚಲನೆಯ ಹಿಂದಿನ ಸತ್ಯ ಇಂದಿಗೂ ರಹಸ್ಯವಾಗಿಯೇ ಉಳಿದುಕೊಂಡಿದೆ.




Wednesday, May 6, 2015

ಬಟ್ಟಲಿನಾಕಾರದ ದೈತ್ಯ ತಾವರೆ ಎಲೆಗಳು!

ನೀರಿನಲ್ಲಿ ತೇಲಿಬಿಟ್ಟ ಬಟ್ಟಲಿನಂತೆ ಕಾಣುವ ಇವು ತಾವರೆ ಗಿಡದ ಎಲೆಗಳು! ಒಂದೊಂದು ಎಲೆಯೂ ಸುಮಾರು 2.5 ಮೀಟರ್ಗಳಷ್ಟು ಅಗಲವಾಗಿ ಬೆಳೆಯುತ್ತದೆ. ಈ ಎಲೆಯ ಸುತ್ತಲೂ 2ರಿಂದ 4 ಇಂಚು ಗಾತ್ರದ ಮಡಚಿದ ಅಂಚುಗಳಿರುತ್ತವೆ. ಈ ಎಲೆಗಳು ಎಷ್ಟು ಬಲಿಷ್ಟವೆಂದರೆ ಅದರ ಮೇಲೆ ಪುಟ್ಟ ಮಕ್ಕಳನ್ನು ಕೂರಿಸಿ ಫೋಟೊ ತೆಗೆಯಬಹುದು. ವಿಕ್ಟೋರಿಯಾ ಅಮೇಝೋನಿಕಾ ಹೆಸರಿನ ಈ ತಾವರೆಗಿಡ ತನ್ನ ದೈತ್ಯ ಹಸಿರು ಎಲೆಗಳ ಜತೆ ಸುಗಂಧ ಭರಿತ ಹೂವುಗಳಿಗೂ ಪ್ರಸಿದ್ಧಿ.


 ಬೆಳೆಯುವುದು ಶುದ್ಧ ನೀರಿನಲ್ಲಿ ಮಾತ್ರ 
ದಕ್ಷಿಣ ಅಮೆರಿಕದ ಅಮೆಝಾನ್ ನದಿಯ ದಂಡೆಗಳ ಮೇಲೆ ದೈತ್ಯ ತಾವರೆ ಎಲೆಯ ಗಿಡಗಳು ಕಂಡುಬರುತ್ತವೆ. ಒಂದು ಗಿಡದಲ್ಲಿ ಈ ರೀತಿಯ ಸುಮಾರು 40 ರಿಂದ 50 ಎಲೆಗಳು ಇರುತ್ತವೆ. ಇವು ನೀರಿನ ಮೇಲೆ ತೇಲುತ್ತಿದ್ದ ಹಾಗೆ ಕಂಡರೂ ಅದರ ಬೇರುಗಳು ಭೂಮಿಯ ಆಳಕ್ಕೆ ಇಳಿದಿರುತ್ತವೆ. ಈ ಎಲೆಗಳು ಹೊರಗಿನಿಂದ ನೋಡಲು ಎಷ್ಟು ಸೌಮ್ಯವೋ ಹಿಂಭಾಗದಲ್ಲಿ ಅಷ್ಟೇ ಹರಿತವಾದ ಮುಳ್ಳುಗಳನ್ನು ಹೊಂದಿರುತ್ತದೆ. ಹೀಗಾಗಿ ಎಲೆಗಳನ್ನು ಮೀನು ಅಥವಾ ಇನ್ನಿತರ ಪ್ರಾಣಿಗಳಿಂದ ತಿನ್ನಲು ಅಸಾಧ್ಯ. ಈ ಗಿಡಗಳಿರುವ ನೀರಿನಲ್ಲಿ ಈಜುವುದು ಕೂಡ ಅಷ್ಟೇ ಅಪಾಯ. ಸಾಮಾನ್ಯವಾಗಿ ತಾವರೆ ಹೂವು ಕೆಸರಿನಲ್ಲಿ ಅರಳಿದರೆ, ವಿಕ್ಟೋರಿಯಾ ಅಮೇಝೋನಿಕಾ  ಶುದ್ಧವಾದ ನೀರಿನಲ್ಲಿ ಮಾತ್ರ ಬೆಳೆಯುತ್ತದೆ.

ಹೂವಿನ ಮೂರು ದಿನದ ಬಾಳು
ಎಲೆಗಳ ತುದಿಯಲ್ಲಿ ಬಿಳಿಯ ತಾವರೆ ಹೂವು ಬಿಡುತ್ತದೆ. ಈ ತಾವರೆ ಹೂವುಗಳು ರಾತ್ರಿಯಲ್ಲಷ್ಟೇ ಅರಳುತ್ತವೆ. ಇದರ ಆಯುಷ್ಯ ಕೇವಲ ಮೂರು ದಿನ. ಎಲೆಯಂತೆಯೇ ಇವುಗಳ ಗಾತ್ರವೂ ಹಿರಿದು. ಇದರ ತಾವರೆ ಹೂವುಗಳು 9ರಿಂದ 12 ಇಂಚುಗಳಷ್ಟು ದೊಡ್ಡದಾಗಿರುತ್ತವೆ. ಇವು ಶುಷ್ಕ ವಾತಾವರಣದಲ್ಲಿ ಮಾತ್ರ ಅರಳುತ್ತವೆ. ರಾತ್ರಿಯ ವೇಳೆ ಅರಳುವ ಇವು ಗಾಢವಾದ ಸುಗಂಧ ಹೊರಸೂಸುತ್ತವೆ. ಇವುಗಳಿಂದ ಆಕರ್ಷಿತವಾಗುವ ದುಂಬಿ ಹೂವಿನ ಒಳಕ್ಕೆ ಇಳಿದು ಮಕರಂಧವನ್ನು ಹೀರಲು ತೊಡಗುತ್ತವೆ. ಮುಂಜಾನೆಯಾಗುತ್ತಲೇ ಹೂವು ಮದುಡಿಕೊಳ್ಳುತ್ತವೆ. ಮಕರಂದ ಹೀರಲು ಬಂದ ದುಂಬಿಯೂ ಅದರೊಳಗೆ ಬಂದಿಯಾಗುತ್ತದೆ. ಈ ಹೂವಿನ ವಿಶೇಷತೆಯೆಂದರೆ, ರಾತ್ರಿಯಲ್ಲಿ ಹೆಣ್ಣಾಗಿ ವರ್ತಿಸುವ ಇವು ಹಗಲಿನಲ್ಲಿ ಗಂಡಾಗಿ ಪರಿವರ್ತನೆಯಾಗುತ್ತದೆ. ಎರಡನೇ ದಿನ ಈ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಆಗ ಹೂವಿನ ಒಡಲಿಂದ ಹೊರಬರುವ ದುಂಬಿ ಪರಾಗಸ್ಪರ್ಶದಲ್ಲಿ ತೊಡಗಿಕೊಳ್ಳುತ್ತದೆ. ಈ ಕ್ರಿಯೆ ಪೂರ್ಣಗೊಂಡ ಬಳಿಕ ಮೂರನೇ ದಿನ ಹೂವು ಕೆಂಪು ಬಣ್ಣಕ್ಕೆ ತಿರುಗಿ ತನ್ನ ಬಾಳನ್ನು ಅಂತ್ಯಗೊಳಿಸುತ್ತದೆ.

ಕ್ವೀನ್ ಆಫ್ ಗಾರ್ಡನ್
ದೈತ್ಯ ಎಲೆಗಳು ಬಟ್ಟಲಿನ ಆಕಾರದಲ್ಲಿ ಇದ್ದರೂ ಇದರಲ್ಲಿ ನೀರು ತುಂಬಿಕೊಳ್ಳುವುದಿಲ್ಲ. ಎಲೆ ಸುತ್ತಲೂ ಮಡಚಿಕೊಂಡಿದ್ದರೂ ನೀರು ಹೊರಹೋಗಲು ಒಂದು ಬದಿಯಲ್ಲಿ ಬೇರ್ಪಟ್ಟಿದೆ. ಇದರ ಮೂಲಕ ನೀರು ಇಳಿದುಹೋಗುವುದರಿಂದ ಎಲೆ ಸದಾ ತೇಲುತ್ತಲೇ ಇರುತ್ತದೆ. ಎಲೆಯ ಮೇಲೆ ಹಕ್ಕಿಗಳು ಓಡಾಡುತ್ತಾ ಆಹಾರವನ್ನು ಹೆಕ್ಕಿ ತಿನ್ನುತ್ತವೆ. ಇಂದು ದೈತ್ಯ ಎಲೆಯ ತಾವರೆಗಿಡಗಳನ್ನು ಕೊಳಗಳಲ್ಲಿ ಕೃತಕವಾಗಿ ಬೆಳೆಸಲಾಗುತ್ತದೆ. ದೈತ್ಯ ತಾವರೆಗಿಡಕ್ಕೆ ಕ್ವೀನ್ ಆಫ್ ಗಾಡರ್್ನ್ ಎಂಬ ಬಿರುದು ಕೂಡ ಪ್ರಾಪ್ತವಾಗಿದೆ.

Monday, April 27, 2015

ಗ್ರೇಟ್ ವಾಲ್ ಆಫ್ ಇಂಡಿಯಾ!

ನೀವೆಲ್ಲಾ ಚೀನಾ ಮಹಾಗೋಡೆಯ ಬಗ್ಗೆ ಕೇಳಿರುತ್ತೀರಿ. ಆದರೆ, ಭಾರತದಲ್ಲೂ ಇಂಥದ್ದೊಂದು ಗೋಟೆ ಇದೆ ಎನ್ನುವುದು ಗೊತ್ತೇ? ಹೌದು, ರಾಜಸ್ಥಾನದ ಕುಂಭಲಗಢ ಕೋಟೆ ಗ್ರೇಟ್ ವಾಲ್ ಆಪ್ ಇಂಡಿಯಾ ಎಂದೇ ಕರೆಸಿಕೊಂಡಿದೆ.


 ಕುಂಭಲಗಢ ಕೋಟೆಯು 15ನೇ ಶತಮಾನದಲ್ಲಿ ರಾಣಾ ಕುಂಭ ನಿಂದ ನಿರ್ಮಿತವಾಗಿದೆ. ರಾಜಸ್ಥಾನದ ಉದೈಪುರದಿಂದ 64 ಕಿ.ಮೀ. ದೂರದಲ್ಲಿ ಈ ಕೋಟೆ ಇದೆ. ಚಿತ್ತೋರಗಢ ಕೋಟೆಯ ಬಳಿಕ ರಾಜಸ್ಥಾನದ ಎರಡನೇ ಮಹತ್ವದ ಕೋಟೆ ಎನಿಸಿಕೊಂಡಿದೆ. ಇದರ ಗೋಡೆಗಳು ಅರಾವಳಿ ಬೆಟ್ಟಗಳ 36  ಕಿ.ಮೀ.ಗಳಷ್ಟು ದೂರಕ್ಕೆ ಚಾಚಿಕೊಂಡಿವೆ. ಚೀನಾ ಗೋಡೆಯ ಬಳಿಕ ಜಗತ್ತಿನ ಎರಡನೇ ಅತಿ ಉದ್ದದ ಗೋಡೆ ಇದಾಗಿದೆ. ಮುಂದಿನ ಗೋಡೆಗಳು 15 ಅಡಿಯಷ್ಟು ದಪ್ಪವಿದ್ದರೆ, ಕೆಲವೊಂದು ಕಡೆಗಳಲ್ಲಿ 15 ಮೀಟರ್ಗಷ್ಟು ದಪ್ಪವಾಗಿವೆ.   ಕೋಟೆಯು ಬೃಹದಾಕಾರದ ಏಳು ಹೊರದ್ವಾರಗಳನ್ನು ಹೊಂದಿದೆ. ಅವುಗಳಲ್ಲಿ ರಾಮ್ಪೋಲ್ ದೊಡ್ಡದಾದುದಾಗಿದೆ. ಈ ಗೋಡೆಗಳ ನಿರ್ಮಾಣಕ್ಕೆ ಎಲ್ಲಿಯೂ ಮಣ್ಣಿನ ಇಟ್ಟಿಗೆಗಳನ್ನು ಬಳಸಿಲ್ಲ. ಬದಲು ಭಾರವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗೋಡೆಯ ಮೇಲ್ಭಾಗದಲ್ಲಿ ಕಲ್ಲಿನ ಅಲಂಕಾರಿಕ ಕೆತ್ತನೆಗಳನ್ನು ಕಾಣಬಹುದು. ಹೀಗಾಗಿ ಈ ಕೋಟೆ ಇನ್ನಷ್ಟು ರಮಣೀಯವಾಗಿ ಗೋಚರಿಸುತ್ತದೆ. ರಜಪೂತರ ಕಾಲದ ವಾಸ್ತುಶಿಲ್ಪಕ್ಕೆ ಈ ಗೋಡೆ ಒಂದು ಉತ್ತಮ ಉದಾಹರಣೆ.ಸುತ್ತುಹಾಕಲು 8 ಗಂಟೆಬೇಕು!
ಗೋಡೆಗಳು ತುಂಬಾ ಓರೆಕೋರೆಯಾಗಿರುವುದರಿಂದ ಅದನ್ನು ಒಂದು ಸತ್ತು ಹಾಕಲು ಕಮ್ಮಿ ಅಂದರೂ 8 ಗಂಟೆಯಾದರೂ ಬೇಕು. ಸಮುದ್ರ ಮಟ್ಟದಿಂದ 1914 ಮೀಟರ್ಗಳಷ್ಟು ಎತ್ತರದಲ್ಲಿ ಈ ಕೋಟೆಯನ್ನು ನಿಮರ್ಿಸಲಾಗಿದೆ. 19ನೇ ಶತಮಾನದಲ್ಲಿ ರಾಣಫತೇಹ್ ಸಿಂಗ್ ಈ ಕೋಟೆಯನ್ನು ಪುನರುಜ್ಜೀವನಗೊಳಿಸಿ ಗೋಡೆಗಳನ್ನು ಇನ್ನಷ್ಟು ವಿಸ್ತರಿಸಿದ.

ಕೋಟೆಯನ್ನು ಯಾರೂ ಗೆದ್ದಿಲ್ಲ!
ಇನ್ನೊಂದು ವಿಶೇಷವೆಂದರೆ ಈ ಕೋಟೆಯನ್ನು ಯಾರಿಂದಲೂ ಗೆಲ್ಲಲು ಸಾಧ್ಯವಾಗಿಲ್ಲ. ಕೋಟೆಯ ತುತ್ತತಿದಿಯಲ್ಲಿ ಈ ಕೋಟೆಯಲ್ಲಿ  ಮಹಾರಾಣ ಪ್ರತಾಪ್ನಿಂದ ನಿರ್ಮಿತವಾದ ಡೋಮ್ ಆಕಾರದ ಒಂದು ಅರಮನೆಯಿದೆ. ಇದನ್ನು ಬಾದಲ್ ಮಹಲ್ ಎಂದು ಕರೆಯುತ್ತಾರೆ. ಮಹಾರಾಣ ಪ್ರತಾಪ್ ಇಲ್ಲಿ ಅನಭಿಶಕ್ತ ದೊರೆಯಾಗಿ ಆಡಳಿತ ನಡೆಸಿದ್ದ.
ಕೋಟೆಯ ಒಳಗೆ 360 ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ 300 ಪುರಾತನ ಜೈನ ದೇವಾಲಯಗಳಾಗಿದ್ದು, ಉಳಿದವು ಹಿಂದು ದೇವಾಲಯವಾಗಿದೆ. ಇಲ್ಲಿನ ಶಿವದೇವಾಲಯ ಅತ್ಯಂತ ಪ್ರಸಿದ್ಧವಾಗಿದ್ದು, ಬೃಹದಾಕಾರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಅರಮನೆಯ ಮೇಲೆ ನಿಂತರೆ ಅರಾವಳಿ ಬೆಟ್ಟಗಳಸಾಲುಗಳನ್ನು ದೂರದ ವರೆಗೆ ವೀಕ್ಷಿಸಬಹುದು. ಶತ್ರುಗಳ ರಕ್ಷಣೆಗಾಗಿ ವಕ್ರಾಕಾರವಾಗಿ ಎತ್ತರವಾದ ಗೋಡೆಗಳನ್ನು ಕಟ್ಟಲಾಗಿದೆ.

ಕೋಟೆಯ ಇತಿಹಾಸದ ಪರಿಚಯ:
ಇಲ್ಲಿ ಸೂರ್ಯ ಮುಳುಗಿದ ಬಳಿಕ ಕೋಟೆಯ ಇತಿಹಾಸದ ಬಗ್ಗೆ ಪ್ರವಾಸಿಗರಿಗೆ ಧ್ವನಿ ಮತ್ತು ಬೆಳಕಿನ ಸಾಕ್ಷ್ಯಚಿತ್ರವನ್ನು ತೋರಿಸಲಾಗುತ್ತದೆ.  2013ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ  ಘೋಷಿಸಲಾಗಿದೆ. ಇಂದು ಈ ಕೋಟೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ರಾಜಸ್ತಾನದ ಪ್ರಮುಖ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ.


Wednesday, April 22, 2015

ಪುಕ್ತಲ್ ಗೊಂಪಾ

ಬೆಟ್ಟದ ಕಣಿವೆಯಲ್ಲಿ ಸನ್ಯಾಸಿಗಳ ಮನೆಗಳು

ಸನ್ಯಾಸಿಗಳು ಅಧ್ಯಾತ್ಮ ಚಿಂತನೆಗೆ ಹಿಮಾಲಯದ ಗುಹೆಗಳಲ್ಲಿ ಕುಳಿತು ತಪಸ್ಸು ಮಾಡುತ್ತಾರೆ ಎನ್ನುವುದನ್ನು ಕೇಳಿದ್ದೇವೆ. ಅದೇರೀತಿ ಬೆಟ್ಟದ ಕಣಿವೆಯ ಕಡಿದಾದ ಜಾಗದಲ್ಲಿ ಸಮುದಾಯ ಗೃಹಗಳನ್ನು ಬೌದ್ಧ ಸನ್ಯಾಸಿಗಳು ನಿರ್ಮಿಸಿಕೊಂಡಿದ್ದಾರೆ. ಇದನ್ನು ತಲುಪವುದು ಒಂದು ಸಾಹಸದ ಕೆಲಸವೇ ಸರಿ. ಹಿಮಾಲಯದ ಲಡಾಖ್ನ ಝನ್ಸಕರ್ ಕಣಿವೆಯಲ್ಲಿರುವ ಈ ದುರ್ಗಮ ಗುಹೆಗಳೇ ಪುಕ್ತಲ್ ಗೊಂಪಾ. ಇಲ್ಲಿನ ನೈಸರ್ಗಿಕ ಗುಹೆಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ


 2550 ವರ್ಷಗಳ ಹಿಂದೆಯೇ ಇಲ್ಲಿಗೆ ಋಷಿಮುನಿಗಳು ಭೇಟಿನೀಡಿದ್ದರು ಎಂಬ ನಂಬಿಕೆ ಇದೆ. ಗಂಗ್ಸೆಂ ಲಾಮಾ ಎಂಬ ಬೌದ್ಧ ಧರ್ಮಗುರು 12ನೇ ಶತಮಾನದಲ್ಲಿ ಪುಕ್ತಲ್ ಗೊಂಪಾ ಸಮುದಾಯ ಗೃಹಗಳನ್ನು ನಿರ್ಮಿಸಿದ.
ಗೌತಮ ಬುದ್ಧನ 16ನೇ ಅನುಯಾಯಿ ಇಲ್ಲಿನ ಪುಕ್ತಲ್ ಗುಹೆಗಳಲ್ಲಿ  ವಾಸಿಸಿದ ಅತಿ ಹಳೆಯ ವ್ಯಕ್ತಿ. ಆತನ ಭಾವಚಿತ್ರಗಳು ಗುಹೆಯ ಗೋಡೆಗಳ ಮೇಲೆ ಇಂದಿಗೂ ಕಾಣಬಹುದಾಗಿದೆ. ಇವುಳನ್ನು ಮನೆ ಎಂದು ಕರೆಯುವುದಕ್ಕಿಂತ ಮಠಗಳೆಂದು ಕರೆಯುವುದೇ ಹೆಚ್ಚು ಸೂಕ್ತ. ಇಲ್ಲಿ ಬೌದ್ಧ ಸನ್ಯಾಸಿಗಳೇ ವಾಸಿಸುತ್ತಾರೆ. ಇಲ್ಲಿ ಸನ್ಯಾಸಿಗಳ 70 ಮಠಗಳಿವೆ. ಜತಗೆ 4 ಪ್ರಾರ್ಥನಾ ಕೊಠಡಿ ಮತ್ತು ಒಂದು ಗ್ರಂಥಾಲಯವೂ ಇದೆ. ಇವುಗಳನ್ನು ಮಣ್ಣು ಮತ್ತು ಕಟ್ಟಿಗೆಯಿಂದ ನಿಮರ್ಿಸಲಾಗಿದೆ.
ಪುಕ್ತಲ್ ಎನ್ನುವ ಪದಕ್ಕೆ ಗುಹೆಗಳ ಮೂಲಕ ಎನ್ನವ ಅರ್ಥವಿದೆ. ಎರಡು ಅಂತಸ್ತಿನ ಮನೆಗಳನ್ನು ಇಲ್ಲಿ ಕಾಣಬಹುದು. ಮನೆಗಳಿಗೆ ಲಡಾಕ್ನ ಸಂಪ್ರದಾಯಿಕ ಬಣ್ಣವಾದ ಕಪ್ಪು, ಕೆಂಪು ಮತ್ತು ಹಳದಿ ಬಣ್ಣಗಳನ್ನು ಬಳಿಯಲಾಗಿದೆ. ಇಲ್ಲಿ ಮೂರು ದೊಡ್ಡದಾದ ಮತ್ತು ಒಂದು ಸಣ್ಣದಾದ ಪ್ರಾರ್ಥನಾ ಮಂದಿರವಿದೆ. ಮನೆಯ ಗೋಡೆಗಳಿಗೆ ಟೊಳ್ಳಾದ ಕಲ್ಲುಗಳನ್ನು ಬಳಸಲಾಗಿದೆ.
ಪ್ರವಾಸಿ ತಾಣ:
ಟಿಬೇಟಿಯನ್ ಬೌದ್ಧ ಸನ್ಯಾಸಿಗಳಿಗೆ ಪುಕ್ತಲ್ ಗೊಂಪಾ ಪವಿತ್ರವಾದ ಪ್ರವಾಸಿ ಸ್ಥಳವಾಗಿದೆ. 3850 ಮೀಟರ್ಗಳಷ್ಟು ಎತ್ತರದಲ್ಲಿರುವ ಈ ಸ್ಥಳವನ್ನು ಈಗಲೂ ಕಾಲ್ನಡಿಗೆಯಲ್ಲೇ ಸಾಗಬೇಕು. ಕಾರ್ಗಿಲ್ ಮೂಲಕವೂ ಇಲ್ಲಿಗೆ ತಲುಪಬಹುದು. ದುರ್ಗಮವಾದ ಪುನರ್ೆ ಸೇತುವೆಯ ಮೂಲಕ 7 ಕಿ.ಮೀ. ಚಾರಣ ಮಾಡಿದರೆ ಪುಕ್ತಲ್ ಗುಹೆಗಳನ್ನು ತಲುಪಬಹುದು. ಇಲ್ಲಿಗೆ ತಲುಪಲು ಶಾಶ್ವತ ರಸ್ತೆಯೊಂದನ್ನು ನಿಮರ್ಿಸುವ ಕಾರ್ಯ ನಡೆಯುತ್ತಿದೆ.
ಬೆಟ್ಟದ ಕಡಿದಾದ ಕಣಿವೆಯಲ್ಲಿ ಕಟ್ಟಿರುವ ಈ ಮನೆಗಳು ದೂರದಿಂದ ನೋಡುವವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ವರ್ಷಕ್ಕೊಮ್ಮೆ ಉತ್ಸವ: 
ಟಿಬೇಟಿಯನ್  ಕ್ಯಾಲೆಂಡರನ 12ನೇ ತಿಂಗಳ 18 ಮತ್ತು 19ನೇ ದಿನದಂದು ಬೌದ್ಧ ಸನ್ಯಾಸಿಗಳು ಇಲ್ಲಿ ಗುಸ್ಟೋರ್ ಉತ್ಸವವನ್ನು ಅಚರಿಸುತ್ತಾರೆ. ಅಂದು ಸನ್ಯಾಸಿಗಳೆಲ್ಲರೂ ಸೇರಿ ಸಾಂಪ್ರದಾಯಿಕ ಪೂಜೆ ಮತ್ತು ನೃತ್ಯವನ್ನು ನಡೆಸುತ್ತಾರೆ.

Monday, April 13, 2015

ಲೇಕ್ ಪ್ಯಾಲೇಸ್

ಸರೋವರದಲ್ಲೊಂದು ಅರಮನೆ

ಸ್ವಸಂರಕ್ಷಣೆಗಾಗಿ ರಾಜರು ಭಿನ್ನ ವಿಭಿನ್ನ ರೀತಿಯ ಕೋಟೆ, ಸಾಮ್ರಾಜ್ಯಗಳನ್ನು ನಿರ್ಮಿಸಿದ್ದಾರೆ. ತಮ್ಮ ವಾಸಸ್ಥಾನ ಶತ್ರುಗಳಿಗೆ ಸುಲಭ ತುತ್ತಾಗಬಾರದು, ಪ್ರಜೆಗಳು ಕ್ಷೇಮದಿಂದ ಇರಬೇಕು ಎಂಬ  ಕಾರಣಕ್ಕೆ ಚಾಕಚಕ್ಯತೆಯಿಂದ ಅರಮನೆಯನ್ನು ನಿರ್ಮಿಸುತ್ತಿದ್ದರು. ಇದಕ್ಕೊಂದು ಉದಾಹರಣೆ ರಾಜಸ್ಥಾನದ ಉದಯಪರದಲ್ಲಿರುವ ಲೇಕ್ ಪ್ಯಾಲೇಸ್. ಇದನ್ನು ಒಂದು ಕೃತಕ ಸರೋವರದ ಮೇಲೆ ನಿರ್ಮಿಸಲಾಗಿದೆ. ಇದು ಭಾರತ ಮಾತ್ರವಲ್ಲ ವಿಶ್ವದಲ್ಲೇ ಅತ್ಯಂತ ರಮ್ಯವಾದ ಅರಮನೆ ಎಂದೇ ಖ್ಯಾತಿಗಳಿಸಿದೆ. 


ಈಗ ಇದು ಪಂಚತಾರಾ ಹೋಟೆಲ್!
ಲೇಕ್ ಪ್ಯಾಲೇಸ್ ಇರುವುದು ಪಿಚೋಲಾ ಸರೋವರದ ಮಧ್ಯೆ ಇರುವ ಜಗನಿವಾಸ ದ್ವೀಪದಲ್ಲಿ. ಹೀಗಾಗಿ ಇದಕ್ಕೆ ಜಗನಿವಾಸ ಅರಮನೆ ಎಂದು ಹೆಸರು ಬಂದಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಅರಮನೆಗಳಲ್ಲಿ ಇದೂ ಒಂದು. 2ನೇ ಮಹಾರಾಣ ಜಗತ್ಸಿಂಗ್ 1743ರಲ್ಲಿ ಜಗನಿವಾಸ ಅರಮನೆಯನ್ನು ನಿರ್ಮಿಸಿದ. ಇಂದು ಈ ಅರಮನೆಯನ್ನು ಪಂಚತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ತಾಜ್ ಹೋಟೆಲ್ಸ್ ಸಮೂಹ ಇದರ ನಿರ್ವಹಣೆಯನ್ನು ಮಾಡುತ್ತಿದೆ.

ಸುಂದರ ವಾಸ್ತುಶಿಲ್ಪ:
ಈ ಕಟ್ಟಡದ ವಾಸ್ತುಶಿಲ್ಪ ಶೈಲಿ ಅತ್ಯಂತ ಸುಂದರವಾಗಿದೆ. ಸುಂದರವಾಗಿ ನಿರ್ಮಿಸಿದ  ಕಂಬಗಳು, ಅಂಕಣಗಳನ್ನು ಹೊಂದಿರುವ ವರಾಂಡ, ಉದ್ಯಾನವನಗಳು ಮತ್ತು ಕಾರಂಜಿಗಳು ಅರಮನೆಯ ಸೌಂದರ್ಯವನ್ನು ಹೆಚ್ಚಿಸಿದೆ. ಸುಮಾರು ನಾಲ್ಕು ಎಕರೆಯಷ್ಟು ವಿಶಾಲವಾದ ಪ್ರದೇಶಕ್ಕೆ ಅರಮನೆ ವ್ಯಾಪಿಸಿದೆ.  ಅರಮನೆಯ ಕೋಣೆಗಳನ್ನು ಗಾಜುಗಳು, ಕಮಾನುಗಳು ಮತ್ತು ಹಸಿರು ಕಮಲದ ಎಲೆಗಳಿಂದ ಅಲಂಕರಿಸಲಾಗಿದೆ. ಇಲ್ಲಿ ಇನ್ನೂ ಕೆಲವು ವಸತಿಸಮಚ್ಚಯಗಳಿದ್ದು, ಖುಷ್ ಮಹಲ್, ಬಡಾ ಮಹಲ್, ಧೋಲಾ ಮಹಲ್, ಫೂಲ್ ಮಹಲ್ ಮತ್ತು ಅಜ್ಜನ್ ನಿವಾಸ್ ಎಂದು ಗುರುತಿಸಲಾಗಿದೆ. ಬಾರ್, ಈಜುಕೊಳ ಮತ್ತು ಸಭಾಂಗಣ ಈ ಅರಮನೆಯಲ್ಲಿದೆ. ನಗರದಿಂದ ಈ ಅರಮನೆಗೆ ಅತಿಥಿಗಳನ್ನು ದೋಣಿಯ ಮೂಲಕ ಕರೆತರಲಾಗುತ್ತದೆ.
ಪೂರ್ವಾಭಿಮುಖವಾಗಿ ಜಗನಿವಾಸ ಅರಮನೆಯನ್ನು ನಿರ್ಮಿಸಲಾಗಿದೆ. ಅರಮನೆಯ ನಿವಾಸಿಗಳು ಪ್ರತಿನಿತ್ಯ ಸೂರ್ಯನಿಗೆ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಬಂದ ರಾಜರುಗಳು ಈ ಅರಮನೆಯನ್ನು ಬೇಸಿಗೆಯ ಆಶ್ರಯತಾಣವಾಗಿ ಬಳಸಿಕೊಂಡಿದ್ದರು.

ಷಹಜಹಾನನಿಗೆ ಪ್ರೇರಣೆ
ಮಹಾರಾಣ ಮೊಗಲ್ ದೊರೆಗಳಿಗೆ ಆಪ್ತನಾಗಿದ್ದ, ಇಲ್ಲಿಗೆ ಭೇಟಿ ನೀಡಿದ್ ಷಹಜಹಾನ್ ತನ್ನ ಆಸ್ತಾನದ ವಾಸ್ತುಶಿಲ್ಪಿಗಳಿಗೆ ಈ ಅರಮನೆಯ ಮಾದರಿಯಲ್ಲೇ ಆಗ್ರಾದಲ್ಲಿ  ಕಟ್ಟಡವನ್ನು ನಿರ್ಮಿಸಲು ಪ್ರೋತ್ಸಾಹಿಸಿದ್ದ. ಇದನ್ನು ಅನುಸರಿಸಿ ಆಗ್ರಾದಲ್ಲಿ ತಾಜ್ ಮಹಲ್ ಮತ್ತು ಆಗ್ರಾಕೋಟೆಯನ್ನು ಷಹಜಹಾನ್ ನಿರ್ಮಿಸಿದ. 


ಸರೋವರಗಳ ನಗರ:
ಉದಯಪುರ ಸರೋವರಗಳ ನಗರ ಎಂದೂ ಪ್ರಸಿದ್ಧವಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಂ ಮತ್ತು ವನ್ಯಧಾಮಗಳನ್ನು ಹೊಂದಿದೆ. ಪಿಚೋಲಾ ಸರೋವರವನ್ನು ಸುಮಾರು 1362ರಲ್ಲಿ ನಿರ್ಮಿಸಲಾಯಿತು. ಆಣೆಕಟ್ಟಿನ ಪರಿಣಾಮವಾಗಿ ಸುತ್ತಲಿನ ಪ್ರದೇಶದ ನೀರಿನ ದಾಹವನ್ನು ನೀಗಿಸಲು ಸಹಾಯಮಾಡಿತು. ಈ ಸರೋವರದ ಸೌಂದರ್ಯವನ್ನು ಗಮನಿಸಿದ ಮಹಾರಾಣ ಉದಯ್ಸಿಂಗ್ ಈ ಸರೋವರದ ದಡದಲ್ಲಿ ನಗರವೊಂದನ್ನು ನಿರ್ಮಿಸಲು ಉದ್ದೇಶಿಸಿದ. ಹೀಗೆ ರೂಪಗೊಂಡಿದ್ದೇ ಉದಯಪರ. ಪತೇಹ್ ಸಗರ ಇಲ್ಲಿನ ಇನ್ನೊಂದು ಇನ್ನೊಂದು ಕೃತಕ ಸರೋವರ. ಇದನ್ನು 1678ರಲ್ಲಿ ಮಹಾರಾಣ ಪತೇಹ್ ಸಿಂಗ್ ನಿರ್ಮಿಸಿದ. ಅಲ್ಲದೆ, ರಾಜ ಸಮಾನಂದ್ ಮತ್ತು ಉದಯಸಾಗರ ಮತ್ತು ಜೈಸಮಂದ್ ಸರೋವರಗಳು ಇಲ್ಲಿನ ಆಕರ್ಷಣೆಗಳಾಗಿವೆ.

Tuesday, April 7, 2015

ಮಣಿಪುರದಲ್ಲೊಂದು ತೇಲುವ ಸರೋವರ!

ಇಲ್ಲಿ ಉದ್ಯಾನವನವೇ ನೀರಿನಮೇಲೆ ತೇಲುತ್ತಿದೆ. ಮಣಿಪುರದ ರಾಜಧಾನಿ ಇಂಫಾಲ್ ಸಮೀಪವಿರುವ ಲೋಕ್ತಾಕ್ ಸರೋವರದಲ್ಲಿ ಫ್ಯೂಮಿಡ್ಗಳೆಂದು ಕರೆಯಲ್ಪಡುವ ಹಲವಾರು ದ್ವೀಪ ಮಾದರಿ ರಚನೆಗಳು ತೇಲುತ್ತಾ ಇರುತ್ತವೆ. ಹೀಗಾಗಿ ತೇಲುವ ಸರೋವರ ಅಂತಲೇ ಇದನ್ನು ಕರೆಯುತ್ತಾರೆ. ಈ ಸರೋವರದ ಒಂದು ಭಾಗವಾಗಿರುವ ಕೈಬುಲ್ ಲಾಮ್ಜಾವೋ ರಾಷ್ಟ್ರೀಯ ಉದ್ಯಾನ ಈ ಸರೋರದ ಮೇಲೆ ನಿಂತಿದೆ. ನೀರಿನ ಮೇಲೆ ತೇಲುವ ಜಗತ್ತಿನ ಏಕೈಕ ರಾಷ್ಟ್ರೀಯ ಉದ್ಯಾನ ಎಂದು ಕರೆಸಿಕೊಂಡಿದೆ. ಇದನ್ನು ತೇಲುವ ಸ್ವರ್ಗ ಅಂತಲೂ ಬಣ್ಣಿಸಲಾಗಿದೆ. 

ಅತಿದೊಡ್ಡ ಸಿಹಿ ನೀರಿನ ಸರೋವರ:
ಲೋಕ್ತಾಕ್ ಸರೋವರದ ನೀರು ಸದಾ ಹಸಿರಾಗಿ ಗೋಚರಿಸುತ್ತದೆ. ಇದಕ್ಕೆ ಮುಖ್ಯಕಾರಣ ಸರೋವರದಲ್ಲಿ ಬೆಳೆಯುತ್ತಿರುವ ಹಸಿರು ಪಾಚಿ ಸಸ್ಯಗಳು ಮತ್ತು ನೀರಿನಲ್ಲಿ ಹಲವಾರು ಸಸ್ಯವರ್ಗ. ಆದರೂ ಇದರ ನೀರು ಸಿಹಿಯಾಗಿರುತ್ತದೆ. ಉತ್ತರ ಭಾರತದ ಅತ್ಯಂತದೊಡ್ಡ ಸಿಹಿ ನೀರಿನ ಸರೋವರ ಎಂಬ ಖ್ಯಾತಿಯೂ ಲೋಕ್ತಾಕ್ ಸರೋವರಕ್ಕೆ ಇದೆ. ಸರೋವರದ ಮೇಲೆ ತೇಲುವ ದ್ವೀಪಗಳು ಸುತ್ತಮುತ್ತಲಿನ ಮೀನುಗಾರರಿಗೆ ತಂಗುದಾಣವೂ ಹೌದು. ಅವುಗಳಲ್ಲಿ ಕೆಲವು ನೈಸರ್ಗಿಕ ರಚನೆಯಾಗಿದ್ದರೆ ಇನ್ನು ಕೆಲವು ದ್ವೀಪಗಳನ್ನು ಮೀನುಗಾರಿಕೆಯ ದೃಷ್ಟಿಯಿಂದ ಕೃತಕವಾಗಿ ಸೃಷ್ಟಿಸಲಾಗಿದೆ. ಇಲ್ಲಿ ಪ್ರತಿವರ್ಷ  1500 ಟನ್ಗಳಷ್ಟು ಮೀನುಗಳ ಸಾಕಣೆ ಮಾಡಲಾಗುತ್ತದೆ. ಅಂದಹಾಗೆ ಇದು ಮಣಿಪುರ ರಾಜಧಾನಿ ಇಂಫಾಲ್ನಿಂದ ಕೇವಲ 48 ಕಿ.ಮೀ. ದೂರದಲ್ಲಿದೆ.

ಇಂಫಾಲ್ ಜನರ ಜೀವನಾಡಿ:

ಇದು ಇಲ್ಲಿನ ಜನರಿಗೆ ಕೇವಲ ಸರೋವರವಾಗಿ ಉಳಿದಿಲ್ಲ. ಇದುವೇ ಜನರ ಜೀವನಾಧಾರ. ಮಣಿಪುರದ ಆಥರ್ಿಕತೆಯ ಮೇಲೂ ಸರೋವರ ಪ್ರಮುಖ ಪ್ರಭಾವ ಬೀರುತ್ತಿದೆ. ಈ ಸರೋವರದ ಜಲಾನಯನ ಪ್ರದೇಶ ಒಟ್ಟು 980 ಚದರ್ ಕಿ.ಮೀ. ಇದರಲ್ಲಿ 430 ಚದರ್ ಕಿ.ಮೀ. ವ್ಯಾಪ್ತಿಯಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಆದರೆ, 1971ರಲ್ಲಿ 491 ಚದರ್ ಕಿ.ಮೀ.ಯಷ್ಟಿದ್ದ ಸರೋವರದ ವ್ಯಾಪ್ತಿ ಈಗ 236 ಚದರ್ ಕಿ.ಮೀ. ಪ್ರದೇಶಕ್ಕೆ ಕುಗ್ಗಿದೆ. ಇದೊಂದು ಪ್ರವಾಸಿತಾಣವಾಗಿ ಕೂಡ ಪ್ರಸಿದ್ಧಿ ಪಡೆದಿದೆ. ಬೋಟಿಂಗ್ ಸೇರಿದಂತೆ ಹಲವಾರು ಜಲಕ್ರೀಡೆಗಳು ಪ್ರವಾಸಿಗರಿಗೆ ಮನರಂಜನೆ ಒದಗಿಸುತ್ತವೆ. ಸೆಂಡ್ರಾ ದ್ವೀಪ ಇಲ್ಲಿನ ಪ್ರಮುಖ ಆಕರ್ಷಣೆ. ಈ ಸರೋವರ ಅನೇಕ ಪ್ರಾಣಿ ಪಕ್ಷಿಗಳಿಗೂ ಆಶ್ರಯತಾಣವಾಗಿದೆ. 57 ಬಗೆಯ ಜಲಚರ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಅಳಿವಿನಂಚಿನಲ್ಲಿರುವ ಸಂಗಾಯ್ ಪ್ರಜಾತಿಯ ಜಿಂಕೆಗಳು ಕಾಣಸಿಗುತ್ತವೆ.

ಆಪತ್ತು ಎದುರಾಗಿದೆ:
ಇತ್ತೀಚಿನ ದಿನಗಳಲ್ಲಿ ಸರೋವರದ ಸುತ್ತಮುತ್ತಲಿನ ಹಸಿರು ಪ್ರದೇಶ ನಾಶವಾಗುತ್ತಿದೆ. ಬ್ಯಾರೇಜ್ಗಳ ನಿರ್ಮಾಣ, ಅರಣ್ಯ ನಾಶದಿಂದ ಸರೋವರದಲ್ಲಿ ಪ್ರತಿವರ್ಷ ಹೆಚ್ಚೆಚ್ಚು ಹೂಳು ಸಂಗ್ರವಾಗುತ್ತಿದೆ. ಈ ಸರೋವರದಲ್ಲಿ ಜಲವಿದ್ಯುತ್ ಯೋಜನೆಯ ಮೂಲಕ ಇಂಫಾಲ್ ನಗರಕ್ಕೆ ವಿದ್ಯುತ್ ನೀಡಲಾಗುತ್ತಿದೆ. ಅಲ್ಲದೆ, ಇಂಫಾಲ್ ನಗರದ ಚರಂಡಿ ನೀರನ್ನು ಈ ಸರೋವರಕ್ಕೆ ಬಿಡಲಾಗುತ್ತಿದೆ. ಇದರಿಂದ ನದಿಯ ಸೌಂದರ್ಯ ಹಾಳಾಗಿದೆ. ಅಲ್ಲದೆ, ಸರೋವರದ ಮೇಲೆ ತೇಲುವ ಹಸಿರು ಪಾಚಿಗಳ ಗಾತ್ರಕೂಡ ಕಿರಿದಾಗುತ್ತಿದೆ.

Wednesday, April 1, 2015

ಪುಷ್ಪಕಣಿವೆ!

ಮನೆಯಮುಂದೊಂದು ಪುಟ್ಟ ಹೂದೋಟವಿದ್ದರೂ ಎಷ್ಟೊಂದು ಖುಷಿ. ಹೀಗಿರುವಾಗ ಬೆಟ್ಟದ ತುಂಬೆಲ್ಲಾ ಬರೀ
 ಹೂಗಿಡಗಳೇ ತುಂಬಿಕೊಂಡಿದ್ದರೆ?  ಹೌದು. ಹಿಮಾಲಯದ ತಪ್ಪಲಿನಲ್ಲೊಂದು ಹೂವಿನ ಕಣಿವೆಯಿದೆ. ಉತ್ತರಾಖಂಡದಲ್ಲಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ನೂರಾರು ಬಗೆಯ ಹೂವುಗಳ ಬೃಹತ್ ನೈಕ ಸರ್ಗಿಕ ತೋಟ. ವಿಶ್ವದ ಏಕೈಕ ಪುಷ್ಪಕಣಿವೆ ಎಂದು ಗುರುತಿಸಲ್ಪಟ್ಟಿದೆ. 82.50 ಚದರ್ ಕಿ.ಮೀ. ಪ್ರದೇಶಕ್ಕೆ ವ್ಯಾಪಿಸಿರುವ ಪುಷ್ಪಕಣಿವೆ ವಿಶ್ವ ಪಾರಂಪರಿಕ ತಾಣವಾಗಿ ಮಾನ್ಯತೆ ಪಡೆದಿದೆ. 


ಎಲ್ಲಿ ನೋಡಿದರೂ ಹೂಗಳ ರಾಶಿ!
ಇಲ್ಲಿನ ಹೂವುಗಳು ಆಲ್ಪೈನ್ ತಳಿಗಳಿಗೆ ಸೇರಿದ್ದಾಗಿದ್ದು, ಆರ್ಕೆಡ್, ಪ್ಲೈಮ್ಯೂಲಾ, ಮೇರಿಗೋಲ್ಡ್, ಡೈಸಿಗಳು, ಹಿಮಾಲಯನ್ ಬೆಲ್ ಫ್ಲಾವರ್, ಚಂಪನುಲಾ ಲತಿಫೊಲಿಯಾ, ಹಳದಿ ಹೂ ಮತ್ತಿತರ ನೂರಾರು ಬಗೆಯ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು. ಈ ಕಣಿವೆಯ 3800 ಮೀಟರ್ ಎತ್ತರದಲ್ಲಿ ಬ್ರಹ್ಮ ಕಮಲ ಹೂವು ಅರಳುತ್ತದೆ. ಬಣ್ಣಬಣ್ಣದ ಹೂವುಗಳಿಂದ ಕೂಡಿದ ಕಣಿವೆಯ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸಿದಾಗ ಸೃಷ್ಟಿಯಾಗುವ ಸನ್ನಿವೇಶವೇ ರಮಣೀಯ. ಇಲ್ಲಿ ಸಿಗುವಷ್ಟು ಔಷಧ ಗಿಡಮೂಲಿಕೆಗಳು ಹಿಮಾಲಯದ ಇತರ ಯಾವುದೇ ಕಡೆಗಳಲ್ಲಿ ಸಿಗುವುದಿಲ್ಲ. ಹಿಮಾಲಯದ ಗರುಡ,  ಗ್ರಿಫಾನ್ ಹದ್ದು, ಹಿಮ ಕೋಳಿ, ಮೋಲಾನ್ ಹಿಮ ಪಾರಿವಾಳ ಮುಂತಾದ ಪಕ್ಷಿಗಳು ಇಲ್ಲಿ ವಾಸಿಸುತ್ತವೆ.

ಅಪರೂಪದ ಪ್ರಾಣಿಗಳಿಗೂ ಆಶ್ರಯ:

ಇದೊಂದು ಜೀವ ವೈವಿಧ್ಯದ ನೆಲೆ. ಇಲ್ಲಿ ಹೂವುಗಳನ್ನು ಮಾತ್ರವಲ್ಲ. ಕಪ್ಪು ಕರಡಿ, ಹಿಮ ಚಿರತೆ, ಕಸ್ತೂರಿ ಮೃಗ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ಅಪರೂಪದ ವನ್ಯ ಜೀವಿಗಳು ಕಾಣಸಿಗುತ್ತವೆ. ಈ ಉದ್ಯಾನದಲ್ಲಿ 750ಕ್ಕೂ ಹೆಚ್ಚಿನ ತಳಿಯ ಹೂವುಗಳಿವೆ. ಅಲ್ಪೈನ್ ಸಸ್ಯ ರಾಶಿಯಿಂದಾಗಿ ಈ ಕಣಿವೆಗೆ ಅಂತಾರಾಷ್ಟ್ರೀ ಮಟ್ಟದಲ್ಲಿ ಪ್ರಾಮುಖ್ಯ ಹೊಂದಿದೆ. ಇಲ್ಲಿಯ ಜೀವವೈವಿಧ್ಯದ ಹಲವು ತಳಿಗಳು ಜಾಗತಿಕವಾಗಿ ಅಳಿವಿನ ಅಂಚಿನಲ್ಲಿವೆ. ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಬೆಸೆದುಕೊಂಡಿರುವ ಪುಷ್ಪಕಣಿವೆ ಕಿರಿದಾಗಿರದೇ ವಿಶಾಲವಾಗಿದೆ. ಕಣಿವೆಯ ಮೂಲಕ ಪುಷ್ಪವತಿ ನದಿ ಹರಿದುಹೋಗುತ್ತದೆ. 


ಬಹುತೇಕ ಸಮಯ ಹಿಮದಿಂದ ಆವೃತ:
ಅಂದಹಾಗೆ ಇದು ನೋಡುಲು ಎಷ್ಟು ಸುಂದರವೋ ಇದನ್ನು  ತಲುಪುವುದು ಕೂಡ ಅಷ್ಟೇ ಕಷ್ಟ. ಸಮುದ್ರ ಮಟ್ಟದಿಂದ 3250 ಮೀಟರ್ನಿಂದ 6750 ಮೀಟರ್ ಎತ್ತರದಲ್ಲಿ ಕಣಿವೆ ನೆಲೆಸಿದೆ. ಹಿಮಾಲಯದ ಝಂಸ್ಕಾರ್ ಶ್ರೇಣಿಯಲ್ಲಿರುವ 6,719 ಮೀಟರ್ ಎತ್ತರದ ಗೌರಿಶಿಖರ ಪುಷ್ಪಕಣಿವೆ ರಾಷ್ಟೀಯ ಉದ್ಯಾನದ ತುತ್ತತುದಿ. ಉತ್ತರಾಖಂಡದ ಗಢ್ವಾಲ್ ಪ್ರದೇಶದಲ್ಲಿರವ ಈ ಕಣಿವೆಯನ್ನು ವರ್ಷದ ಹೆಚ್ಚಿನ ಸಮಯದಲ್ಲಿ ತಲುಪುವುದು ಅಸಾಧ್ಯ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಜೂನ್ನಿಂದ ಅಕ್ಟೋಬರ್ ವರೆಗೆ ಮಾತ್ರ ತೆರೆದಿರುವ ಈ ಉದ್ಯಾನ ಉಳಿದ ಸಮಯದಲ್ಲಿ ಹಿಮದಿಂದ ಮುಚ್ಚಿರುತ್ತದೆ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವನ್ನು ತಲುಪಲು 17 ಕಿ.ಮೀ.ಗಳಷ್ಟು ದೂರನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಗುತ್ತದೆ. ಇದಕ್ಕೆ ಸಮೀಪದ ದೊಡ್ಡ ಪಟ್ಟಣವೆಂದರೆ ಜೋಷಿ ಮಠ.

ಇದ್ದಿದ್ದು ಗೊತ್ತೇ ಇರಲಿಲ್ಲ!

1931ರ ವರೆಗೂ ಹೊರ ಜಗತ್ತಿಗೆ ಈ ಕಣಿವೆಯ ಕುರಿತು ತಿಳಿದಿರಲಿಲ್ಲ. ಪರ್ವತಾ ರೋಹಿ ಫ್ರಾಂಕ್ ಸ್ಮಿತ್ ಎಂಬಾತ ಹಿಮಾಲಯ ಪರ್ವತವನ್ನು ಏರುವಾಗ ದಾರಿತಪ್ಪಿ ಈ ಕಣಿವೆಗೆ ಭೇಟಿ ನೀಡುತ್ತಾನೆ. ಇಲ್ಲಿನ ಹೂವುಗಳ ಸೌಂದರ್ಯವನ್ನು ಕಂಡು ಬರೆಗಾದ ಆತ "ವ್ಯಾಲಿ ಆಫ್  ಫ್ಲವರ್ಸ್" ಎಂಬ ಪುಸ್ತಕವನ್ನು ಹೊರತರುತ್ತಾನೆ. ಆ ಬಳಿಕ ಇದು ಹೆಚ್ಚು ಪ್ರಸಿದ್ಧಿಗೆ ಬಂತು.  ಪುಷ್ಪಕಣಿವೆಯನ್ನು 1982 ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.


Wednesday, January 14, 2015

ಸಾಂಚಿ ಸ್ತೂಪ ಭಾರತದ ಪುರಾತನ ಅವಶೇಷ

ಸಾಂಚಿ ಸ್ತೂಪ ಭಾರತದ ಅತ್ಯಂತ ಪುರಾತನ ಕಲ್ಲಿನ ರಚನೆ ಎನಿಸಿಕೊಂಡಿವೆ. ಇದು ಗುಮ್ಮಟದ ಆಕಾರದಲ್ಲಿದೆ. ಇದರ ಕೇಂದ್ರ ಬಿಂದುವಿನಲ್ಲಿ ಇಟ್ಟಂಗಿಯಿಂದ ಮಾಡಲಾದ ಬುದ್ಧನ ಸ್ಮಾರಕವಿದೆ. ಸಾಮ್ರಾಟ ಅಶೋಕ ಚಕ್ರವತರ್ಿ ಕ್ರಿ.ಶ. ಪೂರ್ವ 3ನೇ ಶತಮಾನದಲ್ಲಿ ನಿರ್ಮಿಸಿದ ಎಂಬ ಪ್ರತೀತಿ ಇದೆ.  ಗುಮ್ಮಟದ ಸುತ್ತಲೂ ಓಡಾಡಲು ಮಾರ್ಗವಿದ್ದು, ಮೇಲಕ್ಕೆ ತೆರಳಲು ಮೆಟ್ಟುಲುಗಳನ್ನು ಕೊರೆಯಲಾಗಿದೆ. ಬುದ್ಧನ ಅವಶೇಷಗಳನ್ನು ಇಡಲಾದ ಹಲವು ಕೋಣೆಗಳು ಸ್ತೂಪದಲ್ಲಿದೆ. ಸ್ತೂಪ 54 ಅಡಿ ಎತ್ತರವಿದೆ. ಬೌದ್ಧರ ಕಾಲದಲ್ಲಿ ನಿಮರ್ಮಾಣಗೊಂಡ ಕಟ್ಟಡಗಳಲ್ಲಿ ಸಾಂಚಿ ಸ್ತೂಪ ಅತಿ ಹಳೆಯ ಅವಶೇಷವಾಗಿ ಇಂದಿಗೂ ಉಳಿದುಕೊಂಡಿದೆ.



ಹಲವು ಶತಮಾನಗಳ ರಚನೆ:
ಸಾಂಚಿಯ ಬೌದ್ಧ ಸ್ಮಾರಕಗಳು ಮಧ್ಯಪ್ರದೇಶದ ರಾಯ್ಸೇನ್ ಜಿಲ್ಲೆಯಲ್ಲಿವೆ. ಸಾಂಚಿ ಎಂಬುದು ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಒಂದು ಹಳ್ಳಿ. ಸಾಂಚಿ ಹಲವಾರು ಬೌದ್ಧ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಕ್ರಿ.ಪೂ. ಮೂರನೇ ಶತಮಾನದಿಂದ 4ನೇ ಶತಮಾನದರೆಗಿನ ಸ್ತೂಪಗಳು, ಗುಡಿಗಳು, ಮಠಗಳು ಹಾಗೂ ಸ್ಥಂಬಳನ್ನು ಇಲ್ಲಿ ನಿರ್ಮಿಸಲಾಗಿದೆ. ಇದು ಇದು ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.    

600 ವರ್ಷ ಅಜ್ಞಾತ ವಾಸ:
ಆದರೆ, ಭಾರತದಲ್ಲಿ ಬೌದ್ಧ ಧರ್ಮ ಅವನತಿಯತ್ತ ಸಾಗಿದ ಬಳಿಕ ಈ ಸ್ತೂಪಗಳು ನಿಧಾನವಾಗಿ ಜನರ ಮನಸ್ಸಿನಿಂದ ಮರೆಯಾದವು. 1818ರಲ್ಲಿ ಜನರಲ್ಲಿ ಟೇಲರ್ ಎಂಬ ಬ್ರಿಟಿಷ್ ಅಧಿಕಾರಿ ಸಾಂಚಿಯಲ್ಲಿ ಬೌದ್ಧ ಸ್ತೂಪಗಳ ಇರುವಿಕೆಯನ್ನು ಪತ್ತೆ ಮಾಡಿದ. ಬಳಿಕ ಇಲ್ಲಿ ಉತ್ಖನನಗಳು ಆರಂಭವಾದವು. ಮಧ್ಯಕಾಲಿನ ಇತಿಹಾದಲ್ಲಿ ಭಾರತದ ಮೇಲೆ ಹಲವಾರು ದಾಳಿಗಳು ನಡೆದಿದ್ದರೂ, ಬೌದ್ಧ ಸ್ತೂಪಗಳು ಯಾವುದೇ  ಹಾನಿಗೆ  ಒಳಗಾಗದೇ ಇದ್ದ ಸ್ಥಿತಿಯಲ್ಲೇ ಇದ್ದವು. 600 ವರ್ಷಗಳ ಕಾಲ ಇಲ್ಲಿನ ಸ್ಮಾರಕಗಳು ಅಜ್ಞಾತವಾಗಿ ಇದ್ದಿದ್ದವು.

ಸ್ತೂಪದ ವಿಶೇಷತೆಗಳು:
ಗೋಪುರದ ಮಧ್ಯದಲ್ಲಿ ಮೂರು ಪದರದ ಕೊಡೆಯನ್ನು ಇಡಲಾಗಿದ್ದು ಇದನ್ನು ಛತ್ರ ಎಂದು ಕರೆಯಲಾಗಿದೆ. ಗುಮ್ಮಟ ಧರ್ಮದ ಸಂಕೇತವಾಗಿದೆ.  ಇಲ್ಲಿನ ರಚನೆಗಳಿಗೆ ಮೌರ್ಯರ ಕಾಲದ ಬಣ್ಣವನ್ನು ಬಳಿಯಲಾಗಿದ್ದು, ಅವರು ಅಂದಿನ ಕಾಲದಲ್ಲಿ ಇವು ಗಾಜಿನಂತೆ ಹೊಳೆಯುತ್ತಿದ್ದವು. ಇದಕ್ಕೆ ಬಳಿಯಲಾದ ಕೆಂಪು ಬಣ್ಣಗಳು ಇಂದಿಗೂ ಕಾಣಬಹುದು. ಕ್ರಿ.ಶ 450ನೇ ಇಸವಿಯಲ್ಲಿ ಇಲ್ಲಿ ಕೊನೆಯ ಸ್ತೂಪವನ್ನು ನಿಮರ್ಾಣಮಾಡಲಾಗಿದೆ.  ಸ್ತೂಪದ ಇನ್ನೊಂದು ವಿಶೇಷತೆ ಅಶೋಕ ಸ್ಥಂಭ. ಇದರಲ್ಲಿರುವ ನಾಲ್ಕುಮುಖದ ಸಿಂಹದ ಗುರುತನ್ನು ರಾಷ್ಟ್ರೀಯ ಲಾಂಛನವನ್ನಾಗಿ ಸ್ವೀಕರಿಸಲಾಗಿದೆ.

ನಾಲ್ಕು ದಿಕ್ಕಿಗೆ ಹೆಬ್ಬಾಗಿಲು:
ಸ್ತೂಪದ ನಾಲ್ಕೂ ಹೆಬ್ಬಾಗಿಲುಗಳಲ್ಲಿ ಪ್ರತಿ ಸ್ಥಂಬದ ಮೇಲೂ ನಾಲ್ಕು ಜೊತೆ ಸಿಂಹಗಳಿವೆ.  ಆನೆಗಳು ಅವುಗಳನ್ನು ಹೊತ್ತುನಿಂತ ರೀತಿಯಲ್ಲಿ ಕೆತ್ತಲಾಗಿದೆ. ಸಂಚಿಯ ನಾಲ್ಕೂ ಪ್ರವೇಶದ್ವಾರಗಳು ಕ್ರಿ.ಪೂ. 1ನೇ ಶತಮಾನಕ್ಕೆ ಸೇರಿವೆ. ದಕ್ಷಿಣ ದ್ವಾರವು ಪ್ರಧಾನವಾಗಿದ್ದು, ಇದನ್ನು ಮೊದಲು ಕಟ್ಟಲಾಯಿತು. ತದನಂತರ ಉತ್ತರ ಪಶ್ಚಿಮ ಹಾಗೂ ಪೂರ್ವ ಬಾಗಿಲನ್ನು ನಿರ್ಮಾಣ ಮಾಡಲಾಗಿದೆ. ದಕ್ಷಿಣ ದ್ವಾರದಲ್ಲಿ ಗೌತಮ ಬುದ್ಧನ ಜನನ ಮತ್ತು ಬೌದ್ಧ ಧಮರ್ೀಯನಾದ ಸಾಮ್ರಾಟ್ ಅಶೋಕನ ಜೀವನವನ್ನು  ಕೆತ್ತಲಾಗಿದೆ.  ಅಲ್ಲದೆ, ಕಲಾತ್ಮಕ ಕೆತ್ತನೆಗಳನ್ನು ಕಾಣಬಹುದು. ಇಲ್ಲಿ ಪ್ರತಿಯೊಂದು ರಚನೆಗಳಿಗೂ ಒಂದೊಂದು ಅರ್ಥವಿದೆ.

ಗುಪ್ತರ ದೇವಸ್ಥಾನ:
ಸಾಂಚಿಯಲ್ಲಿರುವ ಪ್ರಮುಖವಾದ ಇನ್ನೊಂದು ಸ್ಥಳ ಗುಪ್ತರ ದೇವಸ್ಥಾನ. ಗುಪ್ತರ ವಾಸ್ತುಶಿಲ್ಪಕ್ಕೆ ಇದೊಂದು ಉದಾಹರಣೆಯಾಗಿ ನಿಂತಿದೆ. ಸಾಂಚಿ ಬೆಟ್ಟದ ಮಧ್ಯ ಭಾಗದಲ್ಲಿರುವ ಇದು ಕ್ರಿ.ಶ 5ನೇ ಶತಮಾದಲ್ಲಿ ನಿಮರ್ಾಣಗೊಂಡಿದೆ ಎನ್ನಲಾಗಿದೆ.