ಬೆಟ್ಟ ಅಂದರೆ ಎಲ್ಲರಿಗೂ ಆಕರ್ಷಣೆ. ಆದರೆ, ಇಲ್ಲೊಂದು ಬೆಟ್ಟಕ್ಕೆ ವಾಹನಗಳನ್ನು ತನ್ನತ್ತ ಆಕರ್ಷಿಸುವ ಚುಂಬಕದ ಶಕ್ತಿ ಇದೆ. ಈ ಬೆಟ್ಟದ ಮುಂದಿರುವ ರಸ್ತೆಯಲ್ಲಿ ವಾಹನಗಳು ಇಂಜಿನ್ ಆಫ್ ಆಗಿದ್ದರೂ ಗಂಟೆಗೆ 20 ಕಿ.ಮೀ. ವೇಗದಲ್ಲಿ ಏರನ್ನು ಹತ್ತುತ್ತವೆ! ಈ ಅಚ್ಚರಿಯ ವಿದ್ಯಮಾನ ನಡೆಯುವುದು ಲಡಾಖ್ನ ಆಯಸ್ಕಾಂತೀಯ ಗುಡ್ಡದಲ್ಲಿ. ಇದೊಂದು ಭ್ರಮೆಯೋ ಅಥವಾ ನಿಜವಾಗಿಯೂ ಬೆಟ್ಟಕ್ಕೆ ಚುಂಬಕದ ಶಕ್ತಿ ಇದೆಯೇ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ.
ಲೇಹ್ ನ ಕಾರ್ಗಿಲ್- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಸ್ಕಾಂತೀಯ ಗುಡ್ಡ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 11 ಸಾವಿರ ಅಡಿ ಎತ್ತರದಲ್ಲಿದೆ. ಇಲ್ಲಿಗೆ ಕಾರಿನಲ್ಲಿ ಬರುವ ಪ್ರವಾಸಿಗರಿಗೆ ಆಯಸ್ಕಾಂತಿಯ ಗುಡ್ಡ ಪ್ರಸಿದ್ಧ ನಿಲುಗಡೆ ಸ್ಥಳ. ಲೇಹ್ನಿಂದ ಕಾಗರ್ಗಿಲ್ ಗೆ ತೆರಳುವ 30 ಕಿ.ಮಿ. ಉದ್ದದ ರಸ್ತೆಯಲ್ಲಿನ ಒಂದು ನಿರ್ದಿಷ್ಟ ಜಾಗದಲ್ಲಿ ಇಂಥದ್ದೊಂದು ಅನುಭವ ಆಗುತ್ತದೆ. ರಸ್ತೆಯ ಪಕ್ಕದಲ್ಲಿ ಆಯಸ್ಕಾಂತೀಯ ಗುಡ್ಡ ಆರಂಭವಾಗುತ್ತಿದೆ ಎಂಬುದನ್ನು ತೋರಿಸುವ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಸೂಚನಾ ಫಲಕದ ಪಕ್ಕದಲ್ಲಿ ಒಂದು ಚೌಕಾಕಾರದ ಗುರುತನ್ನು ಹಾಕಲಾಗಿದೆ. ಅಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ ಇಂಜಿನ್ ಆಫ್ ಮಾಡಬೇಕು. ತಕ್ಷಣವೇ ಕಾರು ತನ್ನಿಂದ ತಾನಾಗಿ ಗಂಟೆಗೆ ಸುಮಾರು 20 ಕಿ.ಮೀ. ವೇಗದಲ್ಲಿ ಏರು ಮುಖವಾಗಿ ಚಲಿಸಲು ಆರಂಭಿಸುತ್ತದೆ. ಮುಂದೆ ಕಾಣುವ ಬೆಟ್ಟದ ಪ್ರಭಾವದಿಂದಲೇ ಕಾರು ಮುಂದೆ ಚಲಿಸುತ್ತಿದೆ ಎಂಬ ಅನುಭವಕ್ಕೆ ಚಾಲಕರು ಒಳಗಾಗುತ್ತಾರೆ. ಒಂದು ವೇಳೆ ಕಾರನ್ನು ಹಿಮ್ಮುಖವಾಗಿ ನಿಲ್ಲಿಸಿರೂ ಅದೇ ದಿಕ್ಕಿಗೆ ಚಲಿಸಲು ಆರಂಭಿಸುತ್ತದೆ. ಆದರೆ, ಕ್ರಿಯೆಗೆ ಏನು ಕಾರಣ ಎಂಬುದು ಮಾತ್ರ ನಿಗೂಢ. ಇಲ್ಲಿ ವಾಹನವಷ್ಟೇ ಅಲ್ಲ, ಈ ಪ್ರದೇಶದ ಮೇಲೆ ಚಲಿಸುವ ವಿಮಾನಗಳ ಮೇಲೂ ಈ ಗುಡ್ಡ ತನ್ನ ಪ್ರಭಾವ ಹೊಂದಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಮೇಲ್ಮಟ್ಟದಲ್ಲಿ ವಿಮಾನ ಹಾರಾಟ ಕೈಗೊಳ್ಳಲಾಗುತ್ತದೆ. ಹೀಗಾಗಿ ಆಯಸ್ಕಾಂತೀಯ ಗುಡ್ಡ ಭೂಮಿಯ ಗುರುತ್ವಾಕರ್ಷಣೆಗೆ ಕ್ರಿಯೆಗೂ ಇದು ಸಾವಾಲಾಗಿದೆ.
ಇದೊಂದು ಕೇವಲ ಭ್ರಮೆ?
ಈ ರಸ್ತೆಯಲ್ಲಿ ಸಣ್ಣ ಇಳಿಜಾರಿದೆ. ಆದರೆ, ಮುಂದೆ ನೋಡಿದರೆ ಘಟ್ಟವನ್ನು ಹತ್ತುತ್ತಿದ್ದಂತೆ ಭಾಸವಾಗುತ್ತದೆ. ಹೀಗಾಗಿ ಇದನ್ನು ಬರಿಗಣ್ಣಿಗೆ ಗೋಚರಿಸುವ ಭ್ರಮೆ ಎಂದು ಹೇಳುವವರಿದ್ದಾರೆ. ಹಿಂಬದಿಯಿಂದ ಬೀಸುವ ಗಾಳಿ ಪ್ರಭಾವದಿಂದ ವಾಹನ ಮುಂದೆ ಚಲಿಸುತ್ತದೆ ಎಂದು ವಾದಿಸುಸುವವರೂ ಇದ್ದಾರೆ. ಒಂದು ವೇಳೆ ಅಲ್ಲಿನ ಸ್ಥಳೀಯರನ್ನು ಮಾತನಾಡಿಸರೆ ಅವರು ನೀಡುವ ಉತ್ತರವೇ ಬೇರೆ. ಅವರ ಪ್ರಕಾರ ಈ ಪ್ರದೇಶ ಅಲೌಕಿಕ ಶಕ್ತಿಯಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಹೇಳುತ್ತಾರೆ.
ಪ್ರಸಿದ್ಧ ಪ್ರವಾಸಿ ತಾಣ
ನೈಸಗರಕ ಗುಡ್ಡ ಬೆಟ್ಟಗಳಿಂದ ಕೂಡಿರುವ ಲಡಾಖ್ ಒಂದು ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಬೈಕ್ ಸವಾರರಿಗೆ ಮತ್ತು ಚಾರಣಿಗರಿಗೆ ಇದು ಹೇಳಿ ಮಾಡಿಸಿದ ಸ್ಥಳ. ಅಲಚಿ, ನೋಬ್ರಾ ಕಣಿವೆ, ಹೇಮಿಸ್, ಲಮ್ಯಾರು, ಜನ್ಸ್ಕರ ಕಣಿವೆಗಳು ಕಣ್ಮನ ಸೆಳೆಯುತ್ತವೆ.
No comments:
Post a Comment