ಇಲ್ಲೊಂದು ಅರಣ್ಯ ಸಂಪೂರ್ಣ ಕಲ್ಲಿನಿಂದಲೇ ನಿಮರ್ಮಾಣಗೊಂಡಿದೆ. ಒಂದರ ಪಕ್ಕ ಒಂದು ಸಾಲಾಗಿ ನಿಂತಿರುವ ಕಲ್ಲಿನ ಆಕೃತಿಗಳು ಅರಣ್ಯದಂತೆಯೇ ಭಾಸವಾಗುತ್ತದೆ. ಹೀಗಾಗಿ ಇದು ಕಲ್ಲಿನ ಅರಣ್ಯ (ಸ್ಟೋನ್ ಫಾರೆಸ್ಟ್) ಎಂದು ಪ್ರಸಿದ್ಧಿ ಪಡೆದಿದೆ. ಈ ಅರಣ್ಯ ಇರುವುದು ಚೀನಾದ ನೈಋತ್ಯ ಭಾದಲ್ಲಿರುವ ಲುನಾನ್ ಯು ಸ್ವಾಯತ್ತ ಪ್ರಾಂತದ ಯುನಾನ್ ಪ್ರದೇಶದಲ್ಲಿ. ಇಲ್ಲಿನ 350 ಚದರ್ ಕಿ.ಮೀವರೆಗೆ ಅರಣ್ಯ ವಿಸ್ತರಿಸಿಕೊಂಡಿದೆ. ಅಂದರೆ 96 ಸಾವಿರ ಎಕರೆಯಷ್ಟು ಜಾಗದಲ್ಲಿ ಕೇವಲ ಕಲ್ಲಿನ ಅರಣ್ಯವೇ ತುಂಬಿಕೊಂಡಿದೆ!
ಜಗತ್ತಿನ ಮೊದಲ ಅದ್ಭುತ
ಈ ರಚನೆಯನ್ನು ಹಳೆಯ ಪ್ರಪಂಚದ ಅದ್ಭುತಗಳಲ್ಲಿ ಮೊದಲನೆಯದಾಗಿ ಗುರುತಿಸಾಲಾಗಿದೆ. ಸದ್ಯ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿ ಸಂರಕ್ಷಿಸಲಾಗುತ್ತದೆ. ಸ್ಟೋನ್ ಫಾರೆಸ್ಟ್ ಎಂದೇ ಪ್ರಸಿದ್ಧಿ ಪಡೆದಿರುವ ಈ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 1600 ಅಡಿಯಿಂದ 1900 ಅಡಿಯ ಎತ್ತರದಲ್ಲಿದೆ. ಸುಮಾರು 5 ರಿಂದ 30 ಮೀಟರ್ ತನಕ ಎತ್ತರವಾಗಿರುವ ಕಲ್ಲಿನ ರಚನೆಗಳು ಒಂದರ ಪಕ್ಕ ಒಂದು ನಿರ್ಮಾಣಗೊಂಡಿವೆ. ಪ್ರತಿಯೊಂದು ರಚನೆಯು ಭಿನ್ನವಾಗಿದ್ದು, ಅವುಗಳಲ್ಲಿ ಅನೇಕ ಮರಗಳ ಆಕಾರ, ಮನುಷ್ಯನ ಆಕಾರ, ಪ್ರಾಣಿಗಳ ಆಕಾರದಲ್ಲಿವೆ. ಸುಮಾರು 270 ದಶ ಲಕ್ಷ ವರ್ಷಗಳ ಹಿಂದೆ ಸುಣ್ಣದ ಕಲ್ಲಿನಿಂದ ಈ ಅರಣ್ಯ ನಿರ್ಮಾಣಗೊಂಡಿದೆ ಎಂದು ಹೇಳಲಾಗಿದೆ.
ಸಾಂಪ್ರದಾಯಿಕ ಆಚರಣೆ:
ಇಂತಹ ಕಲ್ಲಿನ ಅರಣ್ಯ ಇರುವುದು ಜಗತ್ತಿಗೆ ಗೊತ್ತಾಗಿದ್ದು 13 ರಿಂದ 16ನೇ ಶತಮಾನದವರೆಗೆ ಚೀನಾವನ್ನು ಆಳಿದ ಮಿಂಗ್ ಸಾಮರ್ಾಜ್ಯದ ಅವಧಿಯಲ್ಲಿ. ಇಲ್ಲಿನ ಸ್ಥಳೀಯ ಸಾನಿ ಜನಾಂಗ ಪ್ರತಿ ವರ್ಷ ಜೂನ್ 24ರಂದು ದೀಪಗಳನ್ನು ಬೆಳಗುವ ಮೂಲಕ ಸ್ಟೋನ್ ಫೆಸ್ಟಿವಲ್ ಆಚರಿಸುವ ಸಂಪ್ರದಾಯ ರೂಢಿಯಲ್ಲಿದೆ. ಆ ದಿನ ವಿವಿಧ ಸಾಂಪ್ರದಾಯಿಕ ಕ್ರೀಡೆಗಳನ್ನು ಆಡಲಾಗುತ್ತದೆ. ಅಲ್ಲದೇ ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಕಲ್ಲಿನ ಸೌಂದರ್ಯಕ್ಕೆ ಬೆರಗಾಗುತ್ತಾರೆ.
ಕಲ್ಲಿನ ಅರಣ್ಯದ ವಿಶೇಷತೆ
- ನೆಲದಡಿಯಲ್ಲಿ ಜಲಪಾತ
ಈ ಅರಣ್ಯದ ವಿಶೇಷತೆಯೆಂದರೆ, ಮಳೆಯ ರಭಸಕ್ಕೆ ಕಲ್ಲುಗಳು ಕರಗಿ ನೆಲದ ಅಡಿಯಲ್ಲಿ ಅನೇಕ ಸುರಂಗಗಳು, ಕೆರೆಗಳು, ಜಲಪಾತ, ಜಲಾಶಯಗಳು ನಿರ್ಮಾಣವಾಗಿದೆ.
- ಗುಪ್ತ ಸರೋವರ
ಗುಪ್ತಗಾಮಿನಿಯಾಗಿ ಹರಿಯುವ 5 ನದಿಗಳನ್ನು ಈ ಅರಣ್ಯ ಹೊಂದಿದೆ. ಲೆಕ್ಕವಿಲ್ಲದಷ್ಟು ಕಲ್ಲಿನ ಕಂಬ, ಕಲ್ಲಿನ ಮೊಗಸಾಲೆ ( ಕಿರು ದಾರಿ)ಗಳನ್ನು ಅರಣ್ಯದಲ್ಲಿ ಕಾಣಬಹುದು.ಚಿಕ್ಕ ಚಿಕ್ಕ ದ್ವೀಪ
ಇಲ್ಲಿ ನಿರ್ಮಾಣಗೊಂಡಿರುವ ಸರೋವರಗಳು ಒಟ್ಟು 50 ದಶಲಕ್ಷ ಘನ ಮೀಟರ್ನಷ್ಟು ಶುದ್ಧ ನೀರನ್ನು ಹಿಡಿದಿಟ್ಟುಕೊಂಡಿದೆ. ಈ ಅರಣ್ಯ 96 ಸಾವಿರ ಎಕರೆಯಷ್ಟು ವಿಸ್ತಾರವಾಗಿದೆ. ನೀರಿನ ಮಧ್ಯೆಯೇ ಕಲ್ಲಿನ ಅರಣ್ಯ ತಲೆ ಎತ್ತಿರುವುದರಿಂದ ಅವು ಚಿಕ್ಕ ಚಿಕ್ಕ ದ್ವೀಪಗಳಂತೆ ಕಂಡುಬರುತ್ತದೆ.
ಇಲ್ಲಿ ನಿರ್ಮಾಣಗೊಂಡಿರುವ ಸರೋವರಗಳು ಒಟ್ಟು 50 ದಶಲಕ್ಷ ಘನ ಮೀಟರ್ನಷ್ಟು ಶುದ್ಧ ನೀರನ್ನು ಹಿಡಿದಿಟ್ಟುಕೊಂಡಿದೆ. ಈ ಅರಣ್ಯ 96 ಸಾವಿರ ಎಕರೆಯಷ್ಟು ವಿಸ್ತಾರವಾಗಿದೆ. ನೀರಿನ ಮಧ್ಯೆಯೇ ಕಲ್ಲಿನ ಅರಣ್ಯ ತಲೆ ಎತ್ತಿರುವುದರಿಂದ ಅವು ಚಿಕ್ಕ ಚಿಕ್ಕ ದ್ವೀಪಗಳಂತೆ ಕಂಡುಬರುತ್ತದೆ.
- ಮುಳುಗುವ ಸುರಂಗ
ಇಲ್ಲಿ ಎರಡು ನಿಮಿಷ ಮಳೆ ಬಿದ್ದರೂ ಅಂತರ್ಗತವಾಗಿರುವ ಸುರಂಗಗಳು ಕಾಲ ಸಂಪೂರ್ಣ ಮುಚ್ಚಿಬಿಡುತ್ತದೆ. ಮತ್ತೆ ಸುರಂಗ ತೆರೆದುಕೊಳ್ಳಲು 30 ನಿಮಿಷ ಹಿಡಿಯುತ್ತದೆ.
- ಕಲ್ಲಿನ ಪ್ರತಿಬಿಂಬ
ಪ್ರವಾಸಿಗರಿಗೆ ಈ ಅರಣ್ಯದಲ್ಲಿ 2 ತಾಸು ಮಾತ್ರ ಸುತ್ತಾಡಲು ಅವಕಾಶ. ನದಿಗಳ ಮೇಲೆ ಬೀಳುವ ಕಲ್ಲಿನ ಕಂಬಗಳ ಪ್ರತಿಬಿಂಬ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
- ವಾಲಿನಿಂತಿರುವ ಕಲ್ಲು
No comments:
Post a Comment