ಅಮೆರಿಕನ್ನರ ಹೆಮ್ಮೆಯ ಹೆಗ್ಗುರುತು, ಆಶಯದ ಪ್ರತೀಕ ಸ್ವಾತಂತ್ರ್ಯ ಪ್ರತಿಮೆ. ಕಡಲ ಮಾರ್ಗದಲ್ಲಿ ಬಂದವರಿಗೆ ದಾರಿತೋರುವ, ಮಂಕು ಕವಿದ ಮನದಲ್ಲಿಬೆಳಕು ಮೂಡಿಸುವ, ಹೊಸಬಾಳಿನ ಆಸೆ ಚಿಗುರಿಸುವ ಈ ಪ್ರತಿಮೆ ನಾವಿಕರಿಂದ ''ಲೇಡಿ ಲಿಬರ್ಟಿ'' ಅಥವಾ ಸ್ವಾತಂತ್ರ್ಯ ಮಹಿಳೆ ಎಂದು ಕರೆಸಿಕೊಂಡಿದೆ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತ ಎಂತಲೂ ಕರೆಯಲಾಗುತ್ತದೆ.
ಸ್ವಾತಂತ್ರ್ಯದ ಪ್ರತೀಕ
ಅಮೆರಿಕ ಸಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷನೆಯ ಶತಮಾನೋತ್ಸವದ ಅಂಗವಾಗಿ 1886ರ ಅಕ್ಟೊಬರ್ 28ರಂದು ಈ ಪ್ರತಿಮೆ ಅನಾವರಣಗೊಂಡಿತು.
ನ್ಯೂಯಾರ್ಕ ಮತ್ತು ನ್ಯೂಜೆರ್ಸಿ ರಾಜ್ಯಗಳ ಮಧ್ಯದ ಹಡ್ಸನ್ ನದಿಯ ನಡುವೆ ಇರುವ ಪುಟ್ಟ ಲಿಬಟರ್ಿ ದ್ವೀಪದಲ್ಲಿ ಮುಗಿಲೆತ್ತರಕ್ಕೆ ಸ್ವಾತಂತ್ರ್ಯ ಜ್ಯೋತಿಯನ್ನು ಎತ್ತಿಹಿಡಿದಿರುವ ಅಮೆರಿಕದ ಹೆಮ್ಮೆಯ ಹೆಗ್ಗುರುತಾಗಿ ಈ ಪ್ರತಿಮೆ ನಿಮರ್ಾಣಗೊಂಡಿದೆ. ಅಮೆರಿಕ ಸ್ವಾತಂತ್ರ್ಯಗಳಿಸಿದ ಧ್ಯೋತಕವಾಗಿ ಫ್ರಾನ್ಸ್ ಸ್ನೇಹಪೂರ್ವಕವಾಗಿ ಲೋಕ ವಿಖ್ಯಾತ ಕೊಡುಗೆಯೊಂದನ್ನು ನೀಡಲು ಮುಂದಾಯಿತು. ಅದರ ಫಲವೇ ಈ ಜಗತ್ ವಿಖ್ಯಾತ ಕಂಚಿನ ಸ್ವಾತಂತ್ರ್ಯ ಪ್ರತಿಮೆ. ಸ್ವಾತಂತ್ರ್ಯದ ಕಿಡಿಯನ್ನು ಜನರಲ್ಲಿ ಹೊತ್ತಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ಈ ಯೋಜನೆಗೆ ಮೂಹೂರ್ತರೂಪ ಬಂದಿದ್ದು 1871ರಲ್ಲಿ ಫ್ರೆಡರಿಕ್ ಅಗಷ್ಟೆ ಬಾರ್ತೋಲ್ಡಿ ಇದರ ಶಿಲ್ಪಿ. 151 ಅಡಿ ಎತ್ತರದ ಕಂಚಿನ ಪ್ರತಿಮೆ ಇದಾಗಿದ್ದು, ಒಟ್ಟು ಎತ್ತರ 305 ಅಡಿ. ವಿಶ್ವದ ಅತಿ ಎತ್ತರದ ಕಲಾಕೃತಿಗಳಲ್ಲಿ ಇದು ಕೂಡಾ ಒಂದೆನಿಸಿದೆ.
ನಿರ್ಮಾಣಗೊಂಡಿದ್ದು ಹೇಗೆ?
ಪ್ರತಿಮೆ ನಿರ್ಮಾಣಕ್ಕಾಗಿ ಪ್ರಾನ್ಸ್ ಮತ್ತು ಅಮೆರಿಕನ್ ಸಮಿತಿಯೊಂದನ್ನು ರಚಿಸಲಾಯಿತು. ಮೊದಲ ಹೆಜ್ಜೆಯಾಗಿ ಪ್ರಖ್ಯಾತ ಶಿಲ್ಪಿ ಫ್ರೆಡರಿಕ್ ಅಗಸ್ಟೆ ಬಾತರ್ತೋಡಿಯನ್ನು ಅಮೆರಿಕಕ್ಕೆ ಕಳುಹಿಸಿಕೊಡಲಾಯಿತು. ಆತ ನ್ಯೂಯಾರ್ಕ್ ನಲ್ಲಿನ ಕಲಾವಿದರು, ಲೇಖಕರು ರಾಜಕಾರಣಿಗಳ ಜತೆ ಸಮಾಲೋಚನೆ ನಡೆಸಿದ. ಶತಮಾನೋತ್ಸವದ ನೆನಪಿಗಾಗಿ ಪ್ರತಿಮೆ ಸ್ಥಾಪಿಸುವ ಯೋಜನೆ ಎಲ್ಲರ ಗಮನ ಸೆಳೆಯಿತು. ಫ್ರೆಂಚರು ಪ್ರತಿಮೆಯ ನಿರ್ಮಾಣ ವೆಚ್ಚವನ್ನು ಮತ್ತು ಅದರ ಪೀಠದ ಖರ್ಚನ್ನು ಅಮೆರಿಕನ್ನರು ನೀಡಬೇಕೆಂದು ತೀರ್ಮಾನ ಮಾಡಲಾಯಿತು. 10 ಲಕ್ಷ ಡಾಲರ್ ಸಂಗ್ರಹಿಸಿ 151 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಗೊಂಡಿತು. ಸ್ಟೀಲ್ ಮತ್ತು ತಾಮ್ರದಿಂದ ನಿರ್ಮಾಣವಾದ ಈ ಪ್ರತಿಮೆಯ ತೂಕ 225 ಟನ್. ಪ್ರತಿಮೆಯನ್ನು 250 ತುಂಡುಗಳನ್ನಾಗಿ ಮಾಡಿ 200 ಕಟ್ಟಿಗೆ ಪೆಟ್ಟಿಗೆಯಲ್ಲಿ ಹಡಗಿನ ಮೂಲಕ ಅಮೆರಿಕಕ್ಕೆ ಸಾಗಿಸಲಾಯಿತು. ನಂತರ ಪ್ರತಿಮೆಯನ್ನು ಮರು ಜೋಡಿಸಲಾಯಿತು. 151 ಅಡಿ ಎತ್ತರದ ಪ್ರತಿಮೆಯನ್ನು 154 ಅಡಿ ಎತ್ತರದ ನಕ್ಷತ್ರಾಕಾರ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ.
ಪ್ರತಿಮೆ ಸಾರುವ ಸಂದೇಶ
- ಪ್ರತಿಮೆ ಬಲಗೈಯಲ್ಲಿ ಪಂಜಿನ ಮಾದರಿಯ ದೀಪವನ್ನು ಎತ್ತಿಹಿಡಿದು ಪೂರ್ವಾಭಿಮುಖವಾಗಿ ನಿಂತಿದೆ.
- ಎಡಗೈಯಲ್ಲಿ ಪುಸ್ತಕವಿದೆ. ಅದರ ಮೇಲೆ ಜೂ.4, 1776 ಎನ್ನುವ ಬರಹವಿದೆ. ಅದು ಅಮೆರಿಕ ಸ್ವತಂತ್ರವಾದ ದಿನ.
- ತಲೆಯ ಮೇಲಿನ ಸ್ಟೋಲಾ ಎಂಬ ಹೊಳಪಿನ ಕಿರೀಟದಲ್ಲಿ ಏಳು ಕಿರಣಗಳಿವೆ. ಇವು ಏಳು ಖಂಡಗಳನ್ನು ಪ್ರತಿನಿಧಿಸುತ್ತವೆ.
- ಕಾಲಬುಡದಲ್ಲಿ ತುಂಡರಿಸಿದ ಸರಪಳಿ ಗುಲಾಮಗಿರಿಯ ನಿಮರ್ಮೂಲನೆಯ ಸಂಕೇತ.
ಪ್ರಮುಖ ಪ್ರವಾಸಿ ತಾಣ:
ಸುಮಾರು ಒಂದು ಕೋಟಿಯಷ್ಟು ಜನ ಈ ಪ್ರತಿಮೆಯತ್ತ ನಿತ್ಯ ಕಣ್ಣು ಹಾಯಿಸುತ್ತಾರೆ. ವಿಶ್ವ ಪಾರಂಪರಿಕ ಸ್ಮಾರಕವಾಗಿಯೂ ಗುರುತಿಸಲಾಗಿದೆ. ಲಿಬರ್ಟಿ ಪ್ರತಿಮೆ ರಾಷ್ಟ್ರ ಲಾಂಛನದಷ್ಟೇ ಪ್ರಖ್ಯಾತ. ಅದರ ಸ್ಮರಣಾರ್ಥ ಅಂಚೆ ಚೀಟಿಗಳು, ನಾಣ್ಯಗಳು, ಕರೆನ್ಸಿ ನೋಟುಗಳನ್ನು ಹೊರತರಲಾಗಿದೆ. ಈ ಸ್ಥಳ ವರ್ಷದ 365ದಿನವೂ ಪ್ರವಾಸಿಗರ ವೀಕ್ಷಣೆಗೆ ಮುಕ್ತ. 1984ರಲ್ಲಿ ಶಿಥಿಲಗೊಂಡಿದ್ದ ಪ್ರತಿಮೆಯನ್ನು ಲಕ್ಷಾಂತರ ರೂ. ಖರ್ಚುಮಾಡಿ ಪುನರುತ್ಥಾನ ಮಾಡಲಾಯಿತು. ಬಳಿಕ ನೆಲದಿಂದ ಪೀಠದ ಮೇಲಿನ ವರೆಗೆ ಲಿಫ್ಟ ಅಳವಡಿಸಲಾಗಿದೆ. ಅಲ್ಲಿಂದ 344 ಮೆಟ್ಟಿಲುಗಳನ್ನು ಏರಿದರೆ ಪ್ರತಿಮೆಯ ಶಿರೋಭಾಗ ತಲುಪಬಹದು.
No comments:
Post a Comment