ಹೊರಗಿನಿಂದ ನೋಡಿದರೆ ಮರಕ್ಕೆ ಜೋತು ಬಿದ್ದ ಒಂದು ಕಸದ ತುಣುಕು. ಆದರೆ, ಇದರ ಒಳಗೂ ಸಹ ಒಂದು ಪುಟ್ಟ ಜೀವಿ ವಾಸವಾಗಿದೆ. ಒಣಗಿದ ಕಡ್ಡಿಗಳಿಂದ ಅಥವಾ ಎಲೆಗಳನ್ನೇ ದೇಹವಾಗಿ ಹೊಂದಿದ ಚೀಲದ ಹುಳುಗಳಿವು. ಬ್ಯಾಗ್ ವಾರ್ಮ್ಸ್ (bag worms) ಎಂದು ಕರೆಯಲ್ಪಡುವ ಇವುಗಳನ್ನು ಹಳ್ಳಿಗಳಲ್ಲಿ ಕೋಲು ಹುಳು ಎನ್ನುತ್ತಾರೆ.
ಹೊರ ಪ್ರಪಂಚಕ್ಕೆ ಕಾಣದ ಜೀವಿ!
ಇದೊಂದು ಲೆಪಿಡೊಪೆಟ್ರಾ (lepidoptera) ಕುಟುಂಬಕ್ಕೆ ಸೇರಿದ ಒಂದು ಮೋತ್ (ಚಿಟ್ಟೆ) ಕೀಟ. ಆದರೆ, ಹೆಣ್ಣು ಕೀಟಗಳಿಗೆ ಚಿಟ್ಟೆಗಳಂತೆ ರೆಕ್ಕೆ ಬರುವುದಿಲ್ಲ. ಗಂಡು ಕೀಟವು ಹಾರಲು ರೆಕ್ಕೆಗಳನ್ನು ಹೊಂದಿದ್ದು, ನೋಡಲು ಚಿಟ್ಟೆಗಳ ವರ್ಗಕ್ಕೆ ಸೇರಿದಂತೆ ಕಾಣುತ್ತದೆ. ಸದಾ ಹಸಿರಾಗಿರುವ ಮರಕ್ಕೆ ಜೋತು ಹಾಕಿಕೊಂಡು ಜೀವನ ಸಾಗಿಸುತ್ತವೆ. ತನ್ನ ಗೂಡಿನ ಒಳಗೆ ಲಾರ್ವಾ ರೂಪದಲ್ಲಿ ವಾಸವಾಗುತ್ತದೆ. ಇದರ ದೇಹ ಹೊರ ಪ್ರಪಂಚಕ್ಕೆ ಕಾಣುವುದಿಲ್ಲ.ಕಾಣುವುದು ಹೊರಗಿನ ನಿರ್ಜೀವ ಕಸಕಡ್ಡಿಗಳು ಮಾತ್ರ! ನಿರ್ಜೀವ ದೇಹವೇ ಇದರ ಸುರಕ್ಷಾ ಕವಚ.
ಕಸಕಟ್ಟಿಗಳಿಂದ ಮಾಡಿದ ದೇಹ:
ಕಾಡಿನಂಚಿನ ತೋಟಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತದೆ. ಒಣಗಿದ ಎಲೆ ಅಥವಾ ಕಡ್ಡಿಗಳನ್ನು ಬಳಸಿ ತನ್ನ ಮೈಗೆ ತಾಗಿಕೊಂಡೇ ಅಂಟಿನ ಸಹಾಯದಿಂದ ಗೂಡು ನಿರ್ಮಿಸುವ ಚಾಕಚಕ್ಯತೆ ಇರುವುದು ಹೆಣ್ಣು ಮೋತ್ ಕೀಟಗಳಿಗೆ. ಈ ಕೀಟದ ಜೀವನ ಚಕ್ರ ತುಸು ಭಿನ್ನ ಮತ್ತು ಆಸಕ್ತಿಕರ. (ಲಾರ್ವ) ಹುಳದ ರೂಪದಲ್ಲಿ ಗೂಡೊಳಗೆ ಇದ್ದುಕೊಂಡು ಇವು ಬೆಳೆಯುತ್ತದೆ. ಗೂಡನ್ನು ಬಿಟ್ಟು ಎಂದಿಗೂ ಹೊರಗೆ ಬರುವುದಿಲ್ಲ. ಕಸಕಡ್ಡಿಗಳನ್ನು ಬಳಸಿ ವೈವಿಧ್ಯಮಯ ದೇಹ ರಚನೆಯ್ನು ಇವು ಪಡೆದು ಕೊಳ್ಳುತ್ತವೆ. ಇವು ಸುಮಾರು ಒಂದರಿಂದ ಎರಡು ಇಂಚಿನಷ್ಟು ದೊಡ್ಡದಾಗಿರುತ್ತದೆ.
ಪರಾವಲಂಬಿ ಜೀವನ:
ಹೆಣ್ಣು ಹುಳು ಪರಾವಲಂಬಿ. ತಾನಿರುವ ಗಿಡಗಳ ಮೇಲೆ ಸಂಪೂರ್ಣ ಅವಲಂಬಿತವಾಗಿರುತ್ತದೆ. ಆಹಾರ ಸಿಗದಿದ್ದರೆ ಒಂದು ಗೂಡಿನಿಂದ ಇನ್ನೊಂದು ಸಸ್ಯಕ್ಕೆ ನಿಧಾನವಾಗಿ ಚಲಿಸಬಲ್ಲದು. ಚಲಿಸುವಾಗ ರೇಷ್ಮೆ ನೂಲುಗಳ್ನು ಸುತ್ತುತ್ತಾ ಸಾಗುತ್ತದೆ. ಆಹಾರವನ್ನು ಪಡೆಯುವ ಸಲುವಾಗಿ ಗೂಡಿನ ಒಂದು ಬದಿಗಳಲ್ಲಿ ರಂದ್ರಗಳನ್ನು ಬಿಟ್ಟಿರುತ್ತದೆ. ಇದರ ಮೂಲಕ ಆಹಾರಗಳನ್ನು ಪಡೆದುಕೊಳ್ಳುತ್ತದೆ. ಕೆಲ ಸಸ್ಯಗಳಿಗೆ ಇದು ಮಾರಕವಾಗಿದ್ದೂ ಇದೆ. ನಮ್ಮ ದೇಶದ ರೈತರಿಗೆ ಇಂತಹ ಚೀಲದ ಹುಳಗಳ ಉಪಟಳ ಅಷ್ಟಟಾಗಿ ಇಲ್ಲ. ಕೆಲವು ವಿದೇಶಗಳಲ್ಲಿ ಈ ವರ್ಗಕ್ಕೆ ಸೇರಿದ ಕೀಟಗಳು ಉಪಟಳ ನೀಡುವಷ್ಟು ಸಂಖ್ಯೆಯಲ್ಲಿದೆ.

ರೆಕ್ಕೆ ಗಳಿರುವ ಗಂಡು ಮೊತ್ ಹುಳು |
ಗೂಡಿನಲ್ಲೇ ಜೀವನ; ಅಲ್ಲೇ ಸಾವು!
ಹೆಣ್ಣು ಹುಳುಗಳ ಸಂತಾನ ಕ್ರಿಯೆ ಕೂಡಾ ಗೂಡಿನ ರಂದ್ರದ ಮೂಲವೇ ನಡೆಯುತ್ತದೆ. ಫ್ರೌಢಾವಸ್ಥೆಗೆ ತಲುಪಿದ ಗಂಡು ಹುಳುಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ. ರಂದ್ರದ ಮೂಲಕ ಗಂಡು ಕೀಟ ಪಸರಿಸುವ ನೂರಾರು ಬೀಜಾಣುಗಳನ್ನು ಗೂಡಿನಲ್ಲಿರುವ ಹೆಣ್ಣು ಪಡೆದುಕೊಳ್ಳುತ್ತದೆ. ಗರ್ಭಧಾರಣೆ ಆಗಿ ಮೊಟ್ಟೆಗಳ ಹೊರುವ ತಾಯಿ ಕೀಟ ತನ್ನಷ್ಟಕ್ಕೆ ತಾನೇ ಅಲ್ಲಿಯೇ ಮುದುಡಿ ಸಾವನ್ನಪ್ಪುತ್ತದೆ. ಲಾರ್ವಾಗಳ ಬೆಳವಣಿಗೆ ತುಂಬಾ ನಿಧಾನ. ಅನೇಕ ತಿಂಗಳ ಬಳಿಕ ಮೊಟ್ಟೆಗಳು ಬೆಳೆದು ಮರಿಕೀಟಗಳು ಹುಟ್ಟುತ್ತವೆ. ಗಂಡು ಕೀಟಗಳು ರೆಕ್ಕೆ ಮೂಡಿ ಹಸಿರು ಎಲೆಗಳ ಹರಿತ್ತನ್ನು ತಿಂದು ದೊಡ್ಡದಾಗುತ್ತದೆ. ಹೆಣ್ಣು ಲಾರ್ವಾ ಹುಳುಗಳು ಗಾಳಿಯಲ್ಲಿ ತೇಲಿ ಮರ ಗಿಡಗಳ ಮೇಲೆ ಬಂದು ಬೀಳುತ್ತವೆ. ಮತ್ತೆ ಗೂಡುಗಳ ನಿರ್ಮಾಣ ಶುರುವಾಗುತ್ತದೆ.
No comments:
Post a Comment