ಸಮುದ್ರದ ಜೀವಿಗಳಲ್ಲಿಯೇ ಅತ್ಯಂತ ಆಕರ್ಶಕ ಜೀವಿಯೆಂದರೆ ಅವು ನಕ್ಷತ್ರ ಮೀನುಗಳು. ನಕ್ಷತ್ರ ಮೀನುಗಳನ್ನು ಸಾಗರದಲ್ಲಿನ ನಕ್ಷತ್ರ-ಸೀ ಸ್ಟಾರ್ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇವು ನೋಡಲು ನಕ್ಷತ್ರಗಳಂತೆಯೇ ಕಾಣಿಸುತ್ತವೆ. ದ್ರುವ ಸಮುದ್ರ ಸೇರಿದಂತೆ ಜಗತ್ತಿನ ಎಲ್ಲಾ ಸಮುದ್ರಗಳಲ್ಲಿಯೂ ನಕ್ಷತ್ರ ಮೀನುಗಳು ಇವೆ. ಇವುಗಳಲ್ಲಿ ಸುಮಾರು 2 ಸಾವಿರ ಜಾತಿಗಳಿವೆ. ನಕ್ಷತ್ರ ಮೀನುಗಳು ಉಪ್ಪು ನೀರಿನಲ್ಲಿ ಮಾತ್ರ ವಾಸಿಸುತ್ತವೆ. ಹೀಗಾಗಿ ಸಿಹಿನೀರಿನ ನದಿ, ಕೊಳಗಳಲ್ಲಿ ಕಾಣಸಿಗುವುದಿಲ್ಲ. ತೀರಪ್ರದೇಶ, ಹವಳದ ದಿಬ್ಬಗಳು ಮತ್ತು ಆಳವಿಲ್ಲದ ನೀರಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ನಕ್ಷತ್ರ ಮೀನುಗಳಿಗೆ ಬೆನ್ನಿನ ಮೂಳೆ ಇರುವುದಿಲ್ಲ. ಬದಲಾಗಿ ಬೆನ್ನಿನ ಮೇಲೊಂದು
ಮುಳ್ಳಿನ ಕವಚವಿರುತ್ತದೆ. ಹರಿತವಾದ ಚಿಕ್ಕ ಚಿಕ್ಕ ಮೂಳೆಗಳಿಂದ ಮಾಡಲ್ಪಟ್ಟ ಇವು
ಶತ್ರುಗಳಿಂದ ರಕ್ಷಣೆ ನೀಡುತ್ತದೆ. ದೇಹದ ಮೇಲ್ಮೈ ಕ್ಯಾಲ್ಶಿಯಂ ಕಾರ್ಬೋನೇಟ್
ಪ್ಲೇಟ್ಗಳಿಂದ ನಿರ್ಮಾಣವಾಗಿರುತ್ತವೆ. ವೈವಿಧ್ಯಮಯ ಬಣ್ಣದ, ತರಹೇವಾರಿ ನಮೂನೆಯ ನಕ್ಷತ್ರ
ಮೀನುಗಳು ಇವೆ.
ನಕ್ಷತ್ರ ಮೀನು ಹುಟ್ಟುವುದು ಹೇಗೆ?
ನಕ್ಷತ್ರಮೀನುಗಳ ಸರಾಸರಿ ಬೆಳವಣಿಗೆ 8 ಇಂಚು. ಕೆಲವು ಮೀನುಗಳು 3 ಮೀಟರ್ ಉದ್ದ ಬೆಳೆದ ಉದಾಹರಣೆಗಳಿವೆ. ಹೆಣ್ಣು ನಕ್ಷತ್ರ ಮೀನು 20 ಲಕ್ಷ ಮೊಟ್ಟೆಗಳನ್ನು ಇಡಬಲ್ಲದು. ಆದರೆ ಎಲ್ಲಾ ಮೊಟ್ಟೆಗಳೂ ಜೀವತಾಳುವುದಿಲ್ಲ. ಹೆಚ್ಚಿನವು ಇತರ ಮೀನುಗಳಿಗೆ ಆಹಾರವಾಗುತ್ತವೆ. ಲಾವ್ರಾ ಸ್ಥಿತಿಯಲ್ಲರುವ ಮೊಟ್ಟಗಳನ್ನು ಗಂಡು ಮೀನುಗಳು ಅಭಿವೃದ್ಧಿಪಡಿಸಿ ನಕ್ಷತ್ರದ ಆಕಾರ ಪಡೆಯುವಂತೆ ಮಾಡುತ್ತವೆ.
ಕೈಗಳನ್ನು ಪುನಃ ಪಡೆಯುತ್ತದೆ
ಬಹುತೇಕ ನಕ್ಷತ್ರ ಮೀನುಗಳಿಗೆ ಐದು ಕೈಗಳು ಇರುತ್ತವೆ. ಈ ಕೈಗಳು ಮಧ್ಯದ ತಟ್ಟೆಯಾಕೃತಿಯ ದೇಹದಿಂದ ಹೊರಚಾಚಿ ಕೊಳ್ಳುತ್ತವೆ. ಕೆಲವು ಜಾತಿಯ ನಕ್ಷತ್ರ ಮೀನುಗಳಿಗೆ ಆರು ಅಥವಾ ಅದಕ್ಕಿಂತ ಹೆಚ್ಚಿನ ಕೈಗಳಿರುತ್ತವೆ. ಸೊಲಾಸ್ಟರಿಡೇ ನಕ್ಷತ್ರ ಮೀನಿಗೆ 10-15 ಕೈಗಳಿದ್ದರೆ, ಸನ್ಸ್ಟಾರ್ ಎಂಬ ನಕ್ಷತ್ರ ಮೀನಿಗೆ 40 ಕೈಗಳಿವೆ! ವೈರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೈಗಳನ್ನು ಕಡಿದುಕೊಳ್ಳತ್ತದೆ. ಆದರೆ ಕಡಿದುಕೊಂಡ ಕೈಗಳನ್ನು ಪುನಃ ಪಡೆದುಕೊಳ್ಳುವುದೇ ನಕ್ಷತ್ರ ಮೀನಿನ ವಿಶೇಷತೆ. ಕೈಗಳನ್ನು ಮರಳಿ ಪಡೆಯಲು ಒಂದು ವರ್ಷ ಬೇಕಾಗುತ್ತದೆ. ಕತ್ತರಿಸಿದ ಕೈಗಳಿಂದ ಇನ್ನೊಂದು ನಕ್ಷತ್ರ ಮೀನೇ ಬೆಳೆಯುತ್ತದೆ.
ಈಜಲು ಬರುವುದಿಲ್ಲ
ನೀರಿನಲ್ಲೇ ಇದ್ದರೂ ನಕ್ಷತ್ರ ಮೀನಿಗೆ ಈಜಲು ಬರುವುದಿಲ್ಲ. ಕೈಗಳ ಸಹಾಯದಿಂದ ನೀರಿನಲ್ಲಿ ಚಲಿಸುತ್ತದೆ. ಪ್ರತಿಯೊಂದು ಕೈಯ ಕೊನೆಯಲ್ಲಿ ಪುಟ್ಟ ಕಣ್ಣು ಇದ್ದು ಅವುಗಳ ಮೂಲಕ ಕತ್ತಲು ಮತ್ತು ಬೆಳಕನ್ನು ಗುರುತಿಸುತ್ತದೆ. ದೇಹದ ತುಂಬೆಲ್ಲಾ ಇರುವ ಕೋಶಗಳ ಮೂಲಕ ಗಾಳಿಯಲ್ಲಿ ಉಸಿರಾಡುತ್ತದೆ. ತನ್ನ ದೇಹದ ಮಧ್ಯ ಭಾಗದಲ್ಲಿರುವ ಬಾಯಿಯ ಮೂಲಕ ಆಹಾರ ತಿನ್ನುತ್ತದೆ. ಆಹಾರ ತಿನ್ನುವುದು ಕೈಗಳಿಂದಲೇ. ಇದಕ್ಕೆ ಎರಡು ಹೊಟ್ಟೆಗಳಿದ್ದು, ದೊಡ್ಡ ಹೊಟ್ಟೆಯನ್ನು ಹೊರ ಚಾಚಿ ತನಗಿಂತಲೂ ದೊಡ್ಡ ಜೀವಿಗಳನ್ನು ಬೇಟೆಯಾಡಿ ತಿನ್ನಬಲ್ಲದು. ರಕ್ತದ ಬದಲಾಗಿ ಇವು ನೀರಿನ ನರಮಂಡಲ ವ್ಯವಸ್ಥೆ ಹೊಂದಿವೆ. ಕಾಲಿನ ಕೆಳ ಭಾಗದಲ್ಲಿರುವ ಕೊಳವೆಯ ಮೂಲಕ ನೀರನ್ನು ಹೀರಿ ನರಗಳಿಗೆ ಕಳುಹಿಸುತ್ತದೆ. ಕೊಳವೆಯ ಮುಖಾಂತವೇ ನೀರನ್ನು ಹೊರಹಾಕುತ್ತದೆ.

ಹೆಕ್ಸಾಕ್ಟಿಸ್ ಎಂಬ ಮೀನು 10 ವರ್ಷ ಜೀವಿಸಿದರೆ ಒಕ್ರೇಶಿಯಸ್ ಎಂಬ ದೊಡ್ಡಗಾತ್ರದ ಮೀನು 35 ವರ್ಷಗಳ ಕಾಲ ಬದುಕುತ್ತದೆ. ವಿವಿಧ ಬಗೆಯ ಆಹಾರವನ್ನು ನಕ್ಷತ್ರ ಮೀನು ತಿನ್ನುತ್ತದೆ. ದಕ್ಷಿಣ ಏಷ್ಯಾದ ಒಂದು ಮೀನು ಹವಳವನ್ನು ಮಾತ್ರ ತಿನ್ನುತ್ತದೆ. ಕೆಲವು ಮೀನುಗಳು ಶುದ್ಧ ಸಸ್ಯಾಹಾರಿಯಾಗಿರುತ್ತವೆ. ಪಿಸಾಸ್ಟರ್ ಎಂಬ ನಕ್ಷತ್ರಮೀನು ಕೈಗಳಿಂದ ಕಡಲ ಚಿಪ್ಪುಗಳನ್ನು ಅಗಲಿಸಿ ನಂತರ ತನ್ನ ಹೊಟ್ಟೆಯನ್ನು ಚಿಪ್ಪಿನೊಳಗೆ ಇಳಿಸಿ ತಿನ್ನುತ್ತದೆ. ನಕ್ಷತ್ರ ಮೀನುಗಳಲ್ಲಿ ಔಷಧಿಯ ಗುಣಗಳಿವೆ ಎಂದು ವಿಜ್ಞಾನಿಗಳು ಸಂಶೋಧಿಸಿದ್ದಾರೆ.
No comments:
Post a Comment