ನೀವೆಲ್ಲಾ ಚೀನಾ ಮಹಾಗೋಡೆಯ ಬಗ್ಗೆ ಕೇಳಿರುತ್ತೀರಿ. ಆದರೆ, ಭಾರತದಲ್ಲೂ ಇಂಥದ್ದೊಂದು ಗೋಟೆ ಇದೆ ಎನ್ನುವುದು ಗೊತ್ತೇ? ಹೌದು, ರಾಜಸ್ಥಾನದ ಕುಂಭಲಗಢ ಕೋಟೆ ಗ್ರೇಟ್ ವಾಲ್ ಆಪ್ ಇಂಡಿಯಾ ಎಂದೇ ಕರೆಸಿಕೊಂಡಿದೆ.
ಕುಂಭಲಗಢ ಕೋಟೆಯು 15ನೇ ಶತಮಾನದಲ್ಲಿ ರಾಣಾ ಕುಂಭ ನಿಂದ ನಿರ್ಮಿತವಾಗಿದೆ. ರಾಜಸ್ಥಾನದ ಉದೈಪುರದಿಂದ 64 ಕಿ.ಮೀ. ದೂರದಲ್ಲಿ ಈ ಕೋಟೆ ಇದೆ. ಚಿತ್ತೋರಗಢ ಕೋಟೆಯ ಬಳಿಕ ರಾಜಸ್ಥಾನದ ಎರಡನೇ ಮಹತ್ವದ ಕೋಟೆ ಎನಿಸಿಕೊಂಡಿದೆ. ಇದರ ಗೋಡೆಗಳು ಅರಾವಳಿ ಬೆಟ್ಟಗಳ 36 ಕಿ.ಮೀ.ಗಳಷ್ಟು ದೂರಕ್ಕೆ ಚಾಚಿಕೊಂಡಿವೆ. ಚೀನಾ ಗೋಡೆಯ ಬಳಿಕ ಜಗತ್ತಿನ ಎರಡನೇ ಅತಿ ಉದ್ದದ ಗೋಡೆ ಇದಾಗಿದೆ. ಮುಂದಿನ ಗೋಡೆಗಳು 15 ಅಡಿಯಷ್ಟು ದಪ್ಪವಿದ್ದರೆ, ಕೆಲವೊಂದು ಕಡೆಗಳಲ್ಲಿ 15 ಮೀಟರ್ಗಷ್ಟು ದಪ್ಪವಾಗಿವೆ. ಕೋಟೆಯು ಬೃಹದಾಕಾರದ ಏಳು ಹೊರದ್ವಾರಗಳನ್ನು ಹೊಂದಿದೆ. ಅವುಗಳಲ್ಲಿ ರಾಮ್ಪೋಲ್ ದೊಡ್ಡದಾದುದಾಗಿದೆ. ಈ ಗೋಡೆಗಳ ನಿರ್ಮಾಣಕ್ಕೆ ಎಲ್ಲಿಯೂ ಮಣ್ಣಿನ ಇಟ್ಟಿಗೆಗಳನ್ನು ಬಳಸಿಲ್ಲ. ಬದಲು ಭಾರವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಗೋಡೆಯ ಮೇಲ್ಭಾಗದಲ್ಲಿ ಕಲ್ಲಿನ ಅಲಂಕಾರಿಕ ಕೆತ್ತನೆಗಳನ್ನು ಕಾಣಬಹುದು. ಹೀಗಾಗಿ ಈ ಕೋಟೆ ಇನ್ನಷ್ಟು ರಮಣೀಯವಾಗಿ ಗೋಚರಿಸುತ್ತದೆ. ರಜಪೂತರ ಕಾಲದ ವಾಸ್ತುಶಿಲ್ಪಕ್ಕೆ ಈ ಗೋಡೆ ಒಂದು ಉತ್ತಮ ಉದಾಹರಣೆ.ಸುತ್ತುಹಾಕಲು 8 ಗಂಟೆಬೇಕು!
ಗೋಡೆಗಳು ತುಂಬಾ ಓರೆಕೋರೆಯಾಗಿರುವುದರಿಂದ ಅದನ್ನು ಒಂದು ಸತ್ತು ಹಾಕಲು ಕಮ್ಮಿ ಅಂದರೂ 8 ಗಂಟೆಯಾದರೂ ಬೇಕು. ಸಮುದ್ರ ಮಟ್ಟದಿಂದ 1914 ಮೀಟರ್ಗಳಷ್ಟು ಎತ್ತರದಲ್ಲಿ ಈ ಕೋಟೆಯನ್ನು ನಿಮರ್ಿಸಲಾಗಿದೆ. 19ನೇ ಶತಮಾನದಲ್ಲಿ ರಾಣಫತೇಹ್ ಸಿಂಗ್ ಈ ಕೋಟೆಯನ್ನು ಪುನರುಜ್ಜೀವನಗೊಳಿಸಿ ಗೋಡೆಗಳನ್ನು ಇನ್ನಷ್ಟು ವಿಸ್ತರಿಸಿದ.
ಕೋಟೆಯನ್ನು ಯಾರೂ ಗೆದ್ದಿಲ್ಲ!
ಇನ್ನೊಂದು ವಿಶೇಷವೆಂದರೆ ಈ ಕೋಟೆಯನ್ನು ಯಾರಿಂದಲೂ ಗೆಲ್ಲಲು ಸಾಧ್ಯವಾಗಿಲ್ಲ. ಕೋಟೆಯ ತುತ್ತತಿದಿಯಲ್ಲಿ ಈ ಕೋಟೆಯಲ್ಲಿ ಮಹಾರಾಣ ಪ್ರತಾಪ್ನಿಂದ ನಿರ್ಮಿತವಾದ ಡೋಮ್ ಆಕಾರದ ಒಂದು ಅರಮನೆಯಿದೆ. ಇದನ್ನು ಬಾದಲ್ ಮಹಲ್ ಎಂದು ಕರೆಯುತ್ತಾರೆ. ಮಹಾರಾಣ ಪ್ರತಾಪ್ ಇಲ್ಲಿ ಅನಭಿಶಕ್ತ ದೊರೆಯಾಗಿ ಆಡಳಿತ ನಡೆಸಿದ್ದ.
ಕೋಟೆಯ ಒಳಗೆ 360 ದೇವಾಲಯಗಳನ್ನು ಕಾಣಬಹುದು. ಅವುಗಳಲ್ಲಿ 300 ಪುರಾತನ ಜೈನ ದೇವಾಲಯಗಳಾಗಿದ್ದು, ಉಳಿದವು ಹಿಂದು ದೇವಾಲಯವಾಗಿದೆ. ಇಲ್ಲಿನ ಶಿವದೇವಾಲಯ ಅತ್ಯಂತ ಪ್ರಸಿದ್ಧವಾಗಿದ್ದು, ಬೃಹದಾಕಾರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಅರಮನೆಯ ಮೇಲೆ ನಿಂತರೆ ಅರಾವಳಿ ಬೆಟ್ಟಗಳಸಾಲುಗಳನ್ನು ದೂರದ ವರೆಗೆ ವೀಕ್ಷಿಸಬಹುದು. ಶತ್ರುಗಳ ರಕ್ಷಣೆಗಾಗಿ ವಕ್ರಾಕಾರವಾಗಿ ಎತ್ತರವಾದ ಗೋಡೆಗಳನ್ನು ಕಟ್ಟಲಾಗಿದೆ.
ಕೋಟೆಯ ಇತಿಹಾಸದ ಪರಿಚಯ:
ಇಲ್ಲಿ ಸೂರ್ಯ ಮುಳುಗಿದ ಬಳಿಕ ಕೋಟೆಯ ಇತಿಹಾಸದ ಬಗ್ಗೆ ಪ್ರವಾಸಿಗರಿಗೆ ಧ್ವನಿ ಮತ್ತು ಬೆಳಕಿನ ಸಾಕ್ಷ್ಯಚಿತ್ರವನ್ನು ತೋರಿಸಲಾಗುತ್ತದೆ. 2013ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗಿದೆ. ಇಂದು ಈ ಕೋಟೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ರಾಜಸ್ತಾನದ ಪ್ರಮುಖ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ.