ಐಷಾರಾಮಿ ಹೋಟೆಲ್ ಎಂದಾಕ್ಷಣ ನಮಗೆ
ನೆನಪಾಗುವುದು ದುಬೈ. ಅಲ್ಲಿನ ಬುರ್ಜ್ ಅಲ್ ಅರಬ್ ಕಟ್ಟಡ. ಆದರೆ, ಅದನ್ನೂ ಮೀರಿಸುವ
ಹೋಟೆಲ್ಗಳು ದುಬೈನಲ್ಲಿ ನಿರ್ಮಾಣವಾಗಿದ್ದು, ಇನ್ನೇನು ಕೆಲ ದಿನದಲ್ಲೇ ಪ್ರವಾಸಿಗರಿಗೆ
ತೆರದುಕೊಳ್ಳಲಿದೆ. ಅಂದಹಾಗೆ ಇದು ನೆಲದ ಮೇಲೆ ನಿರ್ಮಿಸಿದ್ದಲ್ಲ. ಸಂಪೂರ್ಣ ನೀರಿನ ಒಳಗೇ
ಮುಳುಗಿರುವ ಹೋಟೆಲ್. ಅದೇ, ಹೈಡ್ರೊಪೋಲಿಸ್ ಅಂಡರ್ವಾಟರ್ ಹೋಟೆಲ್.
ಕನಸಿನ ಅರಮನೆ
ಪ್ರವಾಸಿಗರು ಸಮುದ್ರದ ಜಲಚರಗಳನ್ನು ಕಣ್ಣಾರೆ ವೀಕ್ಷಿಸುತ್ತಾ, ವಿಶ್ರಾಂತಿ ಪಡೆದುಕೊಳ್ಳುವ ಸಲುವಾಗಿ ಹೋಟೆಲ್ ನಿರ್ಮಾಣ ಮಾಡಲಾಗಿದೆ. ಇದನ್ನು ಕನಸಿನ ಅರಮನೆ ಎಂದೇ ಬಣ್ಣಿಸಲಾಗಿದೆ. ಇಲ್ಲಿ ಕಾಲಿಟ್ಟರೆ ಸಮುದ್ರ ಪ್ರಾಣಿಗಳ ಜತೆಗೆ ನಾವೂ ಜೀವಿಸುತ್ತಿರುವ ಅನುಭವ. ದುಬೈನಲ್ಲಿರುವ ಜಮೆರಿಶ್ ಸಮುದ್ರ ತೀರದ ಪರ್ಷಿಯನ್ ಕೊಲ್ಲಿಯ ವಿಶಾಲವಾದ ಪ್ರದೆಶದಲ್ಲಿ ಹೈಡ್ರೊಪೋಲಿಸ್ ಹೋಟೆಲ್ ಇದೆ. ಇದು ಜಗತ್ತಿನ ಮೊದಲ ಐಶಾರಾಮಿ ಸಮುದ್ರದ ಒಳಗಿನ ಹೋಟೆಲ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾಲ್ಡೀವಸ್, ಫಿಜಿ, ಮುಂತಾಡೆದೆ ಈಗಾಗಲೇ ಸಮುದ್ರದ ಒಳಗೆ ಹೋಟೆಲ್ ಇದ್ದರೂ. ಇಷ್ಟೊಂದು ವಿಶಾಲವಾದ ಹೋಟೆಲ್ ಇದೇ ಮೊದಲು. ಜೋಕಿಮ್ ಹೌಸರ್ ಎಂಬಾತ ಹೈಡ್ರೊಪೋಲಿಸ್ ಹೋಟೆಲ್ನ ಶಿಲ್ಪಿ.
ಜಗತ್ತಿನ ದುಬಾರಿ ಹೋಟೆಲ್
ಹೈಡ್ರೊಪೋಲಿಸ್ ಹೋಟೆಲ್ ಸಮುದ್ರದ ಒಳಗೆ 260 ಹೆಕ್ಟೇರ್ ವಿಶಾಲವಾದ ಪ್ರದೇಶಕ್ಕೆ ಚಾಚಿಕೊಂಡಿದೆ. ಹೊಟೆಲ್ನ ಒಡೆತನ ದೊರೆ ಶೇಕ್ ಮಹಮ್ಮದ್ಗೆ ಸೇರಿದ್ದಾಗಿದೆ. ಇದಕ್ಕೆ ಆತನೇ ಹಣ ಒದಗಿದ್ದಾನೆ. ಹೋಟೆಲ್ ನಿರ್ಮಾಣ ವೆಚ್ಚ 3 ಸಾವಿರ ಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಇದರ ನಿರ್ಮಾಣ 2006ರಲ್ಲಿ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಹೈಡ್ರೊಪೊಲೀಸ್ ಹೋಟೆಲ್ ಜಗತ್ತಿನ ಅತ್ಯಂತ ದುಬಾರಿ ಹೋಟೆಲ್ ಎಂದು ಗುರುತಿಸಿಕೊಂಡಿದೆ.
ಹೋಟೆಲ್ ಹೇಗಿರುತ್ತೆ?
ಸಮುದ್ರ ಮಟ್ಟದಿಂದ 66 ಅಡಿ ಆಳದಲ್ಲಿ ಇದನ್ನು ನಿರ್ಮಿಸಲಾಗಿದೆ. ಹೋಟೆಲ್ಗೆ ಅಳವಡಿಸಾದ ಮೇಲ್ಛಾವಣಿ ಸಂಪೂರ್ಣ ಪಾರದರ್ಶಕ ಗಾಜುಗಳಿಂದ ಕೂಡಿದೆ. ಹೋಟೆಲ್ಗೆ ರೈಲಿನ ಮೂಲಕ ತೆರಳಲು ಸುರಂಗ ವ್ಯವಸ್ಥೆ ಇದೆ. ಪ್ರವಾಸಿಗರು ವಿಶ್ರಾಂತಿ ಪಡೆಯುವ 220 ವಿಶಾಲ ಕೋಣೆಗಳನ್ನು ಹೋಟೆಲ್ ಹೊಂದಿದೆ. ಕಿಟಕಿಯಲ್ಲಿ ಕತ್ತುಚಾಚುತ್ತಾ, ಅತ್ತಿತ್ತ ಓಡಾಡುವ ಮೀನುಗಳನ್ನು ಆರಾಮವಾಗಿ ಕುಳಿತು ವೀಕ್ಷಿಸುವ ವ್ಯವಸ್ಥೆ ಇದೆ. ಹೋಟೆಲ್ ಒಳಗಿನ ಉಳಿದ ಜಾಗದಲ್ಲಿ ಬಾರ್, ರೆಸ್ಟೋರೆಂಟ್, ಥೀಮ್ ಕೋಣೆಗಳು ಮತ್ತು ಸಭಾಂಗಣ ಕೂಡಾ ಇದೆ.
ಗಾಳಿ ಬೆಳಕು ಹೇಗೆ ಸಿಗುತ್ತೆ?
ಹೋಟೆಲ್ ಅರ್ಧ ಚಂದ್ರಾಕೃತಿಯ ಮಡಚಿಕೊಳ್ಳುವ ಛಾವಣಿ ಅಳವಡಿಸಲಾಗಿದ್ದು, ತೆರದ ಆಗಸದಲ್ಲಿ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ. ಛಾವಣಿ ತೆರೆದು ಕೊಂಡಾಗ ಹೋಟೆಲ್ಗೆ ಗಾಳಿ ಬೆಳಕಿನ ಪೂರೈಕೆಯಾಗುತ್ತದೆ. ಹೋಟೆಲ್ಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗದ ರೀತಿಯಲ್ಲಿ ಯಾಂತ್ರಿಕ ಉಪಕರಣಗಳನ್ನು ಹೋಟೆಲ್ಗೆ ಅಳವಡಿಲಾಗಿದೆ. ಒಂದು ವೇಳೆ ಹೋಟೆಲ್ಗೆ ಉಗ್ರರ ಭೀತಿ ಎದುರಾದರೆ, ಶತ್ರುಗಳ ವಿರುದ್ಧ ಹೋರಾಡಲು ತನ್ನದೇ ಆದ ಕ್ಷಿಪಣಿ ವ್ಯವಸ್ಥೆಯನ್ನು ಹೋಟೆಲ್ ಹೊಂದಿದೆ.
No comments:
Post a Comment