ಏಸುಕ್ರಿಸ್ತನ ಈ ಪ್ರತಿಮೆ ಬ್ರೆಜಿಲ್ ಜನರ ಕ್ರಿಶ್ಚಿಯನ್ ಧರ್ಮದ ಸಂಕೇತ. ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ಬ್ರೆಜಿಲ್ನ ರಿಯೊ ಡಿ ಜನೇರಿಯೋದಲ್ಲಿರುವ ಕೊರ್ಕೊವಾಡೊ ಪರ್ವತದ ಮೇಲೆ ನಿಮರ್ಮಾಣಗೊಂಡಿದೆ. ರಿಡೀಮರ್ ಅಂದರೆ ವಿಮೋಚನೆ ನೀಡುವವನು ಎಂದು ಅರ್ಥ. ವಿಶಾಲವಾದ ತೋಳುಗಳನ್ನು ಅಗಲಿಸಿ ನಿಂತಿರುವ ಈ ಪ್ರತಿಮೆ ಎಲ್ಲರನ್ನೂ ಪ್ರೀತಿಸುವ, ಎಲ್ಲವನ್ನೂ ಸ್ವೀಕರಿಸುವ, ತನ್ನ ಬಳಿ ಬಂದವರನ್ನು ಅಪ್ಪಿಕೊಳ್ಳುವ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ. ಕ್ರಿಶ್ಚಿಯನ್ ಧರ್ಮದ ಕ್ರಾಸ್ ಚಿಹ್ನೆಯಂತೆಯೂ ಇದನ್ನು ಗುರುತಿಸಬಹುದು. ಜಗತ್ತಿನ ಶಾಂತಿಯ ದ್ಯೋತಕವೂ ಹೌದು. ಇದು ಬ್ರೆಜಿಲಿಯನ್ ಜನರ ಪ್ರೀತಿಯ ಲಾಂಛನ. ಕ್ರಿಸ್ಟ್ ದಿ ರಿಡೀಮರ್ ಏಸುವಿನ 5ನೇ ಅತಿದೊಡ್ಡ ಪ್ರತಿಮೆ.
ಪ್ರತಿಮೆ ನಿಮರ್ಮಿಸಿದ್ದು ಏಕೆ?
1850ರಲ್ಲಿ ಬ್ರೆಜಿಲಿಯನ್ನರು ತಮ್ಮದೇ ಆದ ಧಾರ್ಮಿಕ ಪ್ರತಿಮೆಯನ್ನು ರಿಯೊ ಡಿ ಜನೇರಿಯೋದಲ್ಲಿ ಸ್ಥಾಪಿಸುವ ಬಯಕೆಹೊಂದಿದ್ದರು. ಫ್ರಾನ್ಸ್ ಸಂತನೊಬ್ಬ ಏಸುವಿನ ಪ್ರತಿಮೆ ನಿರ್ಮಿಸುವ ಕುರಿತು ಸಲಹೆ ನೀಡಿದ್ದ. ಆದರೆ, ಇದಕ್ಕೆ ಅನುಮತಿ ದೊರೆಯಲಿಲ್ಲ. 60 ವರ್ಷದ ಬಳಿಕ, 1910ರಲ್ಲಿ ನಡೆದ ಆರ್ಚ್ ಬಿಷಪ್ಪರ ಸಭೆಯಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಲಾಯಿತು. ಧಾಮರ್ಿಕ ಪ್ರತಿಮೆ ನಿರ್ಮಾಣಕ್ಕೆ ಸ್ಥಳೀಯರಿಂದ ಅಪಾರ ಪ್ರಮಾಣದ ಹಣ ಸಂಗ್ರಹಣೆ ಮಾಡಲಾಯಿತು. ಸುದೀರ್ಘ ಚಿಂತನೆಯ ಬಳಿಕ, ಏಸುವಿನ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಯಿತು. ಬ್ರೆಜಿಲ್ ಸ್ವಾತಂತ್ರ್ಯಗಳಿಸಿದ ದಿನವಾದ ಏ.22, 1922ರರಲ್ಲಿ ಪ್ರತಿಮೆ ಸ್ಥಾಪನೆಗೆ ಅಡಿಪಾಯ ಹಾಕಲಾಯಿತು. 9 ವರ್ಷದ ಬಳಿಕ ಪ್ರತಿಮೆ ನಿಮರ್ಮಾಣ ಪೂರ್ಣಗೊಂಡಿತು.
ಕ್ರಿಸ್ಟ್ ದಿ ರಿಡೀಮರ್ ವಿಶೇಷತೆ:
ಸೋಪ್ಸ್ಟೋನ್ ಮತ್ತು ಕಾಂಕ್ರೀಟ್ನಿಂದ ಕ್ರಿಸ್ಟ್ ದಿ ರಿಡೀಮರ್ ಪ್ರತಿಮೆ ನಿರ್ಮಿಸಲಾಗಿದೆ. 2300 ಅಡಿ ಎತ್ತರದ ಕೊರ್ಕೊವಾಡೊ ಬೆಟ್ಟದ ತುತ್ತತುದಿಯಲ್ಲಿ ಇದನ್ನು ಸ್ಥಾಪಿಸಿರುವುದು ವಿಶೇಷ. ಈ ಏಸುವಿನ ಪ್ರತಿಮೆ 98 ಅಡಿ ಎತ್ತರವಾಗಿದೆ. ತೋಳುಗಳು 92 ಅಡಿ ಅಗಲವಾಗಿದೆ. 26 ಅಡಿ ಎತ್ತರದ ಪಾದಪೀಠದ ಮೇಲೆ ಇದನ್ನು ನಿಮರ್ಿಸಲಾಗಿದೆ. ಪ್ರತಿಮೆಯ ತೂಕ 635 ಟನ್. ಅಕ್ಟೋಬರ್ 12, 1931ರಂದು ಪ್ರತಿಮೆಯ ಉದ್ಘಾಟನೆ ನೆರವೇರಿತು. ಜಗತ್ತಿನ ಅತಿ ಎತ್ತರದ ಪ್ರತಿಮೆಗಳಲ್ಲಿ ಇದು ಕೂಡಾ ಒಂದೆನಿಸಿದೆ. ಬ್ರೆಜಿಲ್ನ ಹೆಯಿಟರ್ ಡಾ ಸಿಲ್ವಾ ಕೊಸ್ಟಾ ಪ್ರತಿಮೆಯ ವಿನ್ಯಾಸಕಾರ. ಪ್ರತಿಮೆ ನಿರ್ಮಾ ಣಕ್ಕೆ ಅಂದಾಜು 2 ಲಕ್ಷದ 50 ಸಾವಿರ ಡಾಲರ್ ವೆಚ್ಚಮಾಡಲಾಗಿದೆ. ಪ್ರತಿಮೆಯ ಬುಡಕ್ಕೆ ತಲುಪಬೇಕಾದರೆ ಕೊಕರ್ೊವಾಡೊ ಬೆಟ್ಟವನ್ನು ಏರಿದ ಬಳಿಕ ಮತ್ತೆ 220 ಮೆಟ್ಟಿಲುಗಳನ್ನು ಹತ್ತಬೇಕು. 2007ರಲ್ಲಿ ಕ್ರಿಸ್ಟ್ ದಿ ರಿಡೀಮರ್ ಪ್ರತಿಮೆಗೆ ಆಧುನಿಕ ಜಗತ್ತಿನ ಏಳು ಅದ್ಭುತಗಲ್ಲಿ ಒಂದೆಂದು ಮಾನ್ಯತೆ ನೀಡಲಾಯುತು. ರಾತ್ರಿಯ ವೇಳೆ ಪ್ರತಿಮೆಗೆ ಪ್ರಖರ ಬೆಳಕನ್ನು ಹಾಯಿಸಲಾಗುತ್ತದೆ. ಆ ಸಮಯದಲ್ಲಿ ಪ್ರತಿಮೆ ತೋಳನ್ನು ಅಗಲಿಸಿ ಆಕಾಶದಲ್ಲಿ ತೇಲಿದಂತೆ ಭಾಸವಾಗುತ್ತದೆ. ಜತೆಗ ರಿಯೋ ಪಟ್ಟಣದ ಸೌಂದರ್ಯವನ್ನು ಸಹ ಆನಂದಿಸಬಹುದು.
ಪುನರುತ್ಥಾನ:
ಪ್ರಖರವಾದ ಬೆಳಕನ್ನು ಹಾಯಿಸಿದ್ದರಿಂದ ಪ್ರತಿಮೆಗೆ ಹಾನಿ ಸಂಭವಿಸಿತ್ತು. ಬಳಿಕ 2008ರಲ್ಲಿ ಪ್ರತಿಮೆಯ ಪುನರುತ್ಥಾನ ಮಾಡಲಾಗಿದೆ. ಪ್ರತಿಮೆಗೆ ಬಳಸಲಾದ ಕಲ್ಲನ್ನು ಸ್ವೀಡನ್ನಿಂದ ತರಲಾಗಿದ್ದು, ಪ್ರತಿಮೆಯ ಪುನರುತ್ಥಾನಕ್ಕೂ ಅದೇ ಮೂಲ ಶಿಲೆಗಳನ್ನೇ ಬಳಸಲಾಗಿದೆ. ಏಸುವಿನ ಬಲಗೈ ದಕ್ಷಿಣ ರಿಯೋ ಡಿ ಜನೇರಿಯೋ ಪಟ್ಟಣವನ್ನು ಮತ್ತು ಎಡಗೈ ಉತ್ತರ ರೊಯೋ ಡಿ ಜನೇರಿಯೋ ಪಟ್ಟಣವನ್ನು ತೋರಿಸುತ್ತದೆ.
ಪುನರುತ್ಥಾನ:
ಪ್ರಖರವಾದ ಬೆಳಕನ್ನು ಹಾಯಿಸಿದ್ದರಿಂದ ಪ್ರತಿಮೆಗೆ ಹಾನಿ ಸಂಭವಿಸಿತ್ತು. ಬಳಿಕ 2008ರಲ್ಲಿ ಪ್ರತಿಮೆಯ ಪುನರುತ್ಥಾನ ಮಾಡಲಾಗಿದೆ. ಪ್ರತಿಮೆಗೆ ಬಳಸಲಾದ ಕಲ್ಲನ್ನು ಸ್ವೀಡನ್ನಿಂದ ತರಲಾಗಿದ್ದು, ಪ್ರತಿಮೆಯ ಪುನರುತ್ಥಾನಕ್ಕೂ ಅದೇ ಮೂಲ ಶಿಲೆಗಳನ್ನೇ ಬಳಸಲಾಗಿದೆ. ಏಸುವಿನ ಬಲಗೈ ದಕ್ಷಿಣ ರಿಯೋ ಡಿ ಜನೇರಿಯೋ ಪಟ್ಟಣವನ್ನು ಮತ್ತು ಎಡಗೈ ಉತ್ತರ ರೊಯೋ ಡಿ ಜನೇರಿಯೋ ಪಟ್ಟಣವನ್ನು ತೋರಿಸುತ್ತದೆ.
No comments:
Post a Comment