ಹಿಮಾಲಯ ತನ್ನ ಅಘಾದತೆಯಿಂದ ಗಮನ ಸೆಳೆಯುತ್ತದೆ. ಪೂರ್ವಪಶ್ಚಿಮವಾಗಿ ಭಾರತದ ಈಶಾನ್ಯ ರಾಜ್ಯಗಳ ಗಡಿಯಿಂದ ಅಫ್ಘಾನಿಸ್ಥಾನದ ಅಂಚಿನ ವರೆಗೆ, ದಕ್ಷಿಣೋತ್ತರವಾಗಿ ಭಾರತದ ಪಂಜಾಬ್ನಿಂದ ದಕ್ಷಿಣ ಚೀನಾದ ಟಿಬೇಟ್ವರೆಗೂ ಹಲವು ಶ್ರೇಣಿಗಳಲ್ಲಿ ಹಬ್ಬಿ ನಿಂತಿದೆ. ಇಂತಹ ಹಿಮಾಲಯದ ಮಡಿಲಲ್ಲೇ ಪೌರ್ವಾತ್ಯ ಪರಂಪರೆ ತನ್ನ ಹುಟ್ಟನ್ನು ಪಡೆದುಕೊಂಡಿದ್ದು. ಸುಮಾರು 2,500 ಕಿ.ಮೀ. ವಿಸ್ತಾರ ಹಾಗೂ 29,000 ಅಡಿ
ಎತ್ತರಕ್ಕೆ ಹಿಮಾಲಯ ಚಾಚಿಕೊಂಡಿದೆ.
ಎತ್ತರಕ್ಕೆ ಹಿಮಾಲಯ ಚಾಚಿಕೊಂಡಿದೆ.
ಅನೇಕ ಭೌಗೋಳಿಕ ವೈವಿಧ್ಯವನ್ನು ಹೊಂದಿರುವ ಹಿಮಾಲಯದ ಒಂದು ಭಾಗ ಉತ್ಕಟ ಹಸಿರಿನ ನೆಲೆಯಾದರೆ, ಇನ್ನೊಂದು ಭಾಗ ಹಸಿರಿನ ಹೆಸರೂ ಕಾಣದ ಶೀತಲ ಹಿಮಚ್ಛಾದಿತ ಪ್ರದೇಶ. ಜಗತ್ತಿನ ಆಧ್ಯಾತ್ಮಿಕ ಚಿಂತನೆಗೆ ಭದ್ರ ನೆಲೆಯೆನ್ನಿಸಿದ ಅದ್ವಿತೀಯ ಗಿರಿಶಿಖರಗಳು, ಪಾವಿತ್ರ್ಯದಷ್ಟೇ ತಮ್ಮ ಸೌಂದರ್ಯಕ್ಕೂ ಹೆಸರಾಗಿವೆ.
ಮಾನವ ಇತಿಹಾಸದ ಮೊದಲ ನಾಗರಿಕತೆಗಳಲ್ಲಿ ಒಂದೆನಿಸಿದ ಸಿಂಧೂ ಕಣಿವೆಯ ನಾಗರಿಕತೆ ಹುಟ್ಟಿಬೆಳೆದದ್ದು ಹಿಮಾಲಯದ ತಪ್ಪಲಿನಲ್ಲಿ. ಜಗತ್ತಿನ ಆದಿ ಧರ್ಮವೆನಿಸಿದ ಹಿಂದು, ಬೌದ್ಧ, ಜೈನ ಧರ್ಮಗಳು ಹುಟ್ಟಿಬೆಳೆದದ್ದು ಹಿಮಾಲಯದ ಹಿನ್ನೆಲೆಯಲ್ಲಿ.
ಹಿಮಾಲಯ ಅಂದರೆ...
ಸಂಸ್ಕೃತದಲ್ಲಿ ಹಿಮಾಲಯ ಅಂದರೆ, ಹಿಮದ ಮನೆ (ಹಿಮ+ ಆಲಯ) ಎಂದರ್ಥ. ಹಿಮಾಲಯದಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು.
- ಉಪ ಹಿಮಾಲಯ: ಇದನ್ನು ಭಾರತದಲ್ಲಿ ಶಿವಾಲಿಕ್ಸ್ ಹಿಲ್ಸ್ ಎಂದು ಕರೆಯಲಾಗುತ್ತದೆ. ಇದು ಸರಾಸರಿ 1,200 ಮೀಟರ್ ಎತ್ತರವಾಗಿದೆ.
- ಕೆಳಗಿನ ಹಿಮಾಲಯ: ಸರಾಸರಿ 2000ದಿಂದ 5000 ಮೀಟರ್ ಎತ್ತರವಾಗಿದ್ದು, ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜಿಲಿಂಗ್, ಶಿಮ್ಲಾ ನೈನಿತಾಲ್ ಮುಂತಾದ ಪ್ರಸಿದ್ಧ ಗಿರಿಧಾಮಗಳನ್ನು ಈ ಶ್ರೇಣಿ ಒಳಗೊಂಡಿದೆ.
- ಮೇಲಿನ ಹಿಮಾಲಯ: ಈ ಶ್ರೇಣಿ ಎಲ್ಲಕ್ಕಿಂತ ಎತ್ತರದಲ್ಲಿದ್ದು, ನೇಪಾಳದ ಉತ್ತರಭಾಗಗಳು ಮತ್ತು ಟಿಬೇಟ್ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. 6000 ಮೀಟರ್ ಗಿಂತ ಹೆಚ್ಚಿನ ಎತ್ತರವಾಗಿದ್ದು, ಜಗತ್ತಿನ ಅತಿ ಎತ್ತರದ ಮೂರು ಶಿಖರಗಳಾದ ಮೌಂಟ್ ಎವರೆಸ್ಟ್, ಕೆ-2, ಕಾಂಚನಜುಂಗಾ ಶಿಖರವನ್ನು ಹೊಂದಿದೆ.
ಬೃಹತ್ ತಡೆಗೋಡೆ!
ಹಿಮಾಲಯದ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಸಿಂಧೂ, ಅಲಕನಂದಾ, ಬ್ರಹ್ಮಪುತ್ರಾ, ಯಮುನಾ ಮುಂತಾದ ನದಿಗಳಿಗೆ ತವರುಮನೆಯಾಗಿದೆ.
ಚಳಿಗಾಲದಲ್ಲಿ ಪಶ್ಚಿಮದ ಇರಾನ್ ಕಡೆಯಿಂದ ಉಂಟಾಗುವ ಹವಾಮಾನ ಪ್ರಕ್ಷುಬ್ಧತೆ ಭಾರತದತ್ತ ಮುನ್ನುಗ್ಗದ್ದಂತೆ ಹಿಮಾಲಯ ಪರ್ವತ ಶ್ರೇಣಿಗಳು ತಡೆಯತ್ತದೆ. ಈರೀತಿ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವಾಗುತ್ತದೆ ಮತ್ತು ಉತ್ತಭಾರ ಮತ್ತು ಪಂಜಾಬ್ ಭಾಗಗಳಲ್ಲಿ ಮಳೆ ಬೀಳುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವಭಾಗದಲ್ಲಿ ಮಳೆಯಾಗುವಂತೆ ಮಾಡುತ್ತದೆ. ಹಿಮಾಲಯ ಶ್ರೇಣಿಯು ಜನರ ಚಲನವಲನಗಳಿಗೆ ಸ್ವಾಭಾವಿಕವಾಗಿಯೇ ಅಡಚಣೆ ಉಂಟುಮಾಡಿದೆ. ಇದಕ್ಕೆ ಕಾರಣ, ಹಿಮಾಲಯದ ದೊಡ್ಡಗಾತ್ರ. ಎತ್ತರ ಮತ್ತು ವೈಶಾಲ್ಯತೆ. ಹೀಗಾಗಿ ಭಾರತೀಯರು ಚೀನಾ ಮತ್ತು ಮಂಗೋಲಿಯಾದ ಜನರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ.
ಜಗತ್ತಿನ ಎತ್ತದ ಶಿಖರ:
ಹಿಮಾಲಯದ ಸರಾಸರಿ ಎತ್ತರ ಸಮುದ್ರಮಟ್ಟದಿಂದ 18000 ಅಡಿ. ಮೌಂಟ್ ಎವರೆಸ್ಟ್ ಸೇರಿದಂತೆ ಜಗತ್ತಿನ ಮೊದಲ 10 ಅತ್ಯುನ್ನತ ಪರ್ವತ ಶಿಖರಗಳ ಪೈಕಿ 9 ಶಿಖರಗಳು ಹಿಮಾಲಯದಲ್ಲಿಯೇ ಇವೆ. ಅವುಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಮೌಂಟ್ ಎವರೆಸ್ಟ್ 29,000 ಅಡಿ ಮತ್ತು 2ನೇ ಸ್ಥನದಲ್ಲಿರುವ ಕೆ-2 ಪರ್ವತ 28250 ಅಡಿ ಎತ್ತರವವಾಗಿದೆ. ಹಿಮಾಲಯ ಶ್ರೇಣಿಯಲ್ಲಿ ಅನೇಕ ಹಿಮನದಿಗಳನ್ನು ಕಾಣಬಹುದು. ದ್ರುವ ಪ್ರದೇಶವನ್ನು ಬಿಟ್ಟರೆ, ಪ್ರಪಂಚದ ಅತಿದೊಡ್ಡ ಹಿಮನದಿಯಾದ ಸಿಯಾಚೆನ್ ಇರುವುದು ಹಿಮಾಲಯದಲ್ಲಿಯೇ.
ಕರಗುತ್ತಿದೆ ಹಿಮ ಮುಕುಟ:
ಇವೆಲ್ಲದರ ನಡುವೆ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಮಾನವನ ಹಸ್ತಕ್ಷೇಪದಿಂದಾಗಿ ಹಿಮಾಲಯ ಕರಗುವ ಭೀತಿ ಎದುರಾಗಿದೆ. ಜಗತ್ತಿನ ಬೆರೆಲ್ಲಾ ಭಾಗದ ಹಿಮ ಪರ್ವತಗಳಿಗಿಂತ ಭಾರತದ ಮುಕುಟವಾಗಿರುವ ಹಿಮಾಲಯ ಕರಗುತ್ತಿದೆ. ಇದು ಹೀಗೆಯೇ ಮುಂದುವರಿದರೆ, 2035ರ ಹೊತ್ತಿಗೆ ಅಥವಾ ಅದಕ್ಕೂ ಮೊದಲೇ ಹಿಮಾಲಯ ಬೋಳುಗುಡ್ಡವಾದರೂ ಆಶ್ಚರ್ಯಪಡಬೇಕಿಲ್ಲ.

No comments:
Post a Comment