- ಬಣ್ಣದ ಚಿಟ್ಟೆಯ ಹುಟ್ಟು ಸಾವು....
ಚಿಟ್ಟೆ ತನ್ನ ಬಣ್ಣಗಳಿಂದಲೇ ಹೆಸರುವಾಸಿ. ನಮ್ಮ ಊಹೆಗೂ ನಿಲುಕದಷ್ಟು ಬಣ್ಣಗಳು ಚಿಟ್ಟೆಯ ಮೈಯನ್ನು ಹೊದ್ದುಕೊಂಡಿದೆ.
ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ಗೆ ಸೇರಿದ ಕೀಟ. ಚಿಟ್ಟೆಗಳಿಗೆ ಹುಟ್ಟುವಾಗಲೇ ರೆಕ್ಕೆಗಳಿರುವುದಿಲ್ಲ. ಚಿಟ್ಟೆಯ ಜೀವನ ಕ್ರಮವೇ ವಿಶೇಷ. ಇದು ನಾಲ್ಕು ರೀತಿಯ ಜೀವನ ಕ್ರಮ ಹೊಂದಿದೆ. ಮೊದಲು ಮೊಟ್ಟೆಯೊಳಗಿನ ಗರ್ಭಾ ವಸ್ಥೆ. ಮೊಟ್ಟೆಯೊಡೆದ ನಂತರದ ಗೂಡುಕಟ್ಟುವ ವರೆಗಿನ ಕೀಟದ ರೂಪ. ಅಂದರೆ ಕಂಬಳಿಹುಳುವಿನ ಆಕಾರದಲ್ಲಿರುತ್ತದೆ. ಇಲ್ಲಿ ನಾಲ್ಕೈದು ವಾರಗಳನ್ನು ಕಳೆದ ನಂತರ ಹುಳುವಿನ ಆಕಾರದಿಂದ ಚಿಟ್ಟೆಯಾಗಿ ಮಾರ್ಪಾಟಾಗುತ್ತದೆ. ಇದನ್ನು ಚಿಟ್ಟೆಗಳ ಯೌವನಾವಸ್ಥೆ ಎನ್ನಬಹದು. ಈ ಸಮಯದಲ್ಲಿ ಚಿಟ್ಟೆ ಹಾರುವ ಶಕ್ತಿ ಪಡೆದುಕೊಳ್ಳುತ್ತದೆ. ಬಹುತೇಕ ಚಿಟ್ಟೆಗಳು ಕ್ರಿಯಾಶೀಲವಾಗಿರುವುದು ಹಗಲಿನಲ್ಲಿ ಮಾತ್ರ.
ಚಿಟ್ಟೆಗಳು ಅತೀ ಕಡಿಮೆ ಜೀವಿತಾವದಿ ಹೊಂದಿದೆ. ಕೀಟದ ಸಾಮರ್ಥ್ಯ ಅವಲಂಬಿಸಿ ಚಿಟ್ಟೆಗಳು ಒಂದು ವಾರದಿಂದ ಒಂದು ವರ್ಷದತನಕವೂ ಬದುಕಬಲ್ಲವವು. ಚಿಟ್ಟೆಗಳು ವರ್ಷದಲ್ಲಿ ಒಂದಕ್ಕಿಂತಲೂ ಹೆಚ್ಚುಬಾರಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳಿಗೆ ವಿಶೆಷ ಕವಚದ ವ್ಯವಸ್ಥೆಯಿರುತ್ತದೆ. ಮೊಟ್ಟೆಗಳು ಚಳಿಗಾಲದಲ್ಲಿ ಮಾತ್ರ ಉಳಿದು ಕೊಳ್ಳುತ್ತವೆ. ಕವಚ ಮೊಟ್ಟೆಯೊಳಗಿನ ಲಾರ್ವಾವನ್ನು ಉಷ್ಣಾಂಶದಿಂದ ರಕ್ಷಿಸುತ್ತದೆ. ಚಟ್ಟೆಗಳ ಮೊಟ್ಟೆಗಳು ಎಲೆಗಳಿಗೆ ಅಂಟಿಕೊಂಡಿರುತ್ತದೆ.

- ಬಣ್ಣ ಬಣ್ಣದ ರೆಕ್ಕೆಗಳು.
ಕೀಟದ ಅವಸ್ಥೆ ಮುಗಿದ ನಂತರ ಚಿಟ್ಟೆಗಳಿಗೆ ರೆಕ್ಕೆ ಮೊಳಕೆಯೊಡೆಯುತ್ತದೆ. ಚಿಟ್ಟೆಗಳಿಗೆ
ರೆಕ್ಕೆಗಳ ಹಿಂಬಾಗದಲ್ಲಿ ಚಿಕ್ಕದಾದ ಇನ್ನೆರಡು ರೆಕ್ಕೆಗಳಿರುತ್ತದೆ. ಮೈ ಮೇಲೆ ಬಣ್ಣದ
ಚಿತ್ರ ಬಿಡಿಸಿದಂತೆ ಕಾಣುವ ರೆಕ್ಕೆಗಳು ಸೂಕ್ಷ ರಚನೆ ಹೊಂದಿರುತ್ತದೆ. ಈ ಸೂಕ್ಷ
ರಚನೆಗಳು ನನಾ ಬಣ್ಣದಲ್ಲಿ, ಆಕಾರಗಳಲ್ಲಿ ಕಂಡುಬರುತ್ತದೆ. ರೆಕ್ಕೆಗಳು 8ರಿಂದ 10
ಸೆಂಟಿಮೀಟರ್ ದೊಡ್ಡದಾಗಿರುತ್ತದೆ. ರೆಕ್ಕೆಗಳನ್ನು ಅರಳಿಸದೇ ಹಾರುವ ಸಾಮಥ್ರ್ಯ
ಚಿಟ್ಟೆಗಿಲ್ಲ. ಚಿಟ್ಟೆಗಳು ತಮ್ಮ ದೃಷ್ಟಿ ಸಾಮರ್ಥ್ಯದಿಂದ ನೇರಳಾತೀತ ಕಿರಣಗಳನ್ನೂ
ಗುರುತಿಸಬಲ್ಲವು. ಚಿಟ್ಟೆಗಳ ದೇಹವನ್ನು ತಲೆ ಕುತ್ತಿಗೆ, ಮತ್ತು ಹೊಟ್ಟೆ ಹೀಗೆ ಮೂರು
ವಿಧವಾಗಿ ವಿಂಗಡಿಸಬಹುದು. ಅಲ್ಲದೇ ಇವು ಎರಡು ಸ್ಪರ್ಶತಂತುಗಳು, ಎರಡು ಉಬ್ಬಿದ
ಕಣ್ಣುಗಳನ್ನು ಹೊಂದಿರುತ್ತವೆ.
- ಮಕರಂದ ಹೀರುತ್ತವೆ.
ಚಿಟ್ಟೆಗಳ ಪ್ರಾಥಮಿಕ ಆಹಾರ ಹೂವಿನ ಮಕರಂದ. ಕೆಲವು ಚಿಟ್ಟೆಗಳು ಹೂವಿನ ಪರಾಗವನ್ನೂ
ಹೀರುತ್ತವೆ. ಅಲ್ಲದೇ ಸಸ್ಯ ರಸ, ಗಳಿತ ಹಣ್ಣುಗಳು, ಗೊಬ್ಬರ, ಹಳಸಿದ ಮಾಂಸಗಳನ್ನು
ಸೇವಿಸುತ್ತದೆ. ಹೂವಿನ ಪರಾಗಕ್ಕಾಗಿ ವಿಶಾಲ ಪ್ರದೇಶವನ್ನು ಕ್ರಮಿಸಬಲ್ಲವು. ಮುಖದ ಮೇಲಿನ
ಸ್ಪರ್ಶತಂತುಗಳು ಬಹುದೂರದ ಹೂವಿನ ಸುವಾಸನೆ ಗ್ರಹಿಸಬಲ್ಲವು. ಈ ಸ್ಪರ್ಶತಂತುಗಳು ವಿವಿಧ
ಆಕಾರ ದಲ್ಲಿರುತ್ತವೆ. ಚಿಟ್ಟೆಗಳು ಮನುಷ್ಯನಿಗಿಂತ 200 ಪಟ್ಟು ವಾಸನಾ ಸಾಮರ್ಥ್ಯ
ಹೊಂದಿದೆ. ಚಿಟ್ಟೆಗಳ ರಕ್ತ ತಂಪಾಗಿರುತ್ತದೆ. ವತಾವರಣಕ್ಕೆ ತಕ್ಕಂತೆ ದೇಹದ ಉಷ್ಣಾಂಶ
ಬದಲಾಗುತ್ತದೆ. ಹೀಗಾಗಿ ಶೀತ ಪ್ರದೇಶಗಳಲ್ಲಿಯೂ ಇವು ಬದುಕಬಲ್ಲವು.
- ದೂರದ ವಲಸೆ ಹೋಗಬಲ್ಲವು.
ಕೆಲವು ಚಿಟ್ಟೆಗಳು ವಲಸೆ ಸಾಮಥ್ರ್ಯ ಹೊಂದಿದೆ. ಮೊನಾರ್ಚ ಜಾತಿಯ ಚಿಟ್ಟೆಗಳು ಅತೀ
ದೀರ್ಘವಾದ ವಾಷರ್ಿಕ ವಲಸೆಗೆ ಪ್ರಸಿದ್ಧಿ ಪಡೆದಿವೆ. ಉತ್ತರ ಹಾಗೂ ದಕ್ಷಿಣಾಭಿಮುಖವಾಗಿ
ನಿಯಮಿತವಾಗಿ ಸಾವಿರಾರು ಮೈಲಿ ವಲಸೆ ಕೈಗೊಳ್ಳೂವ ಏಕೈಕಜಾತಿಯ ಚಿಟ್ಟೆಯಾಗಿದೆ. ಕಡಿಮೆ
ಜೀವಿತಾವಧಿಯ ಕಾರಣ ಒಂದೇ ಚಿಟ್ಟೆ ಪೂರ್ಣ ವಲಸೆ ಹಾದಿಯನ್ನು ಪೂರೈಸಲಾರದು. ಹೆಣ್ಣು
ಚಿಟ್ಟೆಗಳು ಈ ವಲಸೆಯ ಅವಧಿಯಲ್ಲಿಯೇ ಮೊಟ್ಟೆಯಿಡುತ್ತದೆ. ಒಮ್ಮ ವಲಸೆ ಕೈಗೊಂಡರೆ 3-4ನೇ
ಪೀಳಿಗೆಯ ಚಿಟ್ಟೆಗಳು ತಮ್ಮ ಮೂಲ ಆವಾಸಕ್ಕೆ ಮರಳುತ್ತವೆ.
No comments:
Post a Comment