ನೀರಿನಲ್ಲಿ ಡೈವ್ ಹೊಡೆಯುವ ಡಾಲ್ಫಿನ್ ..!
ಡಾಲ್ಫಿನ್ ತಿಮಿಂಗಿಲದ ಜಾತಿಗೆ ಸೇರಿದ ಸಮುದ್ರದಲ್ಲಿ ವಾಸಿಸುವ ಸಸ್ತನಿ. ಇವೂ ಸಹ ನಮ್ಮಂತೆಯೇ ಗಾಳಿಯನ್ನು ಉಸಿರಾಡಿ ಬದುಕುತ್ತವೆ. ಇವು ನೀರಿನೊಳಗಿದ್ದರೂ ಉಸಿರಾಡಲು ನೀರಿನ ಮೇಲ್ಮೈಗೆ ಬರಲೇ ಬೇಕು. ನೀರಿನಲ್ಲಿ 15 ನಿಮಿಷಗಳ ತನಕ ಉಸಿರನ್ನು ಹಿಡಿದಿಡಬಲ್ಲದು. ಸುಮಾರು 10 ರಿಂದ 15 ದಶಲಕ್ಷ ವರ್ಷಗಳ ಹಿಂದೆ ಆಧುನಿಕ ಡಾಲ್ಫಿನ್ಗಳು ರೂಪಗೊಂಡವು ಎಂದು ಅಂದಾಜಿಸಲಾಗಿದೆ. ವಿಜ್ಞಾನಿಗಳು ಇಂದು ಡಾಲ್ಫಿನ್ನಲ್ಲಿ 32 ವಿಧಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದುದು ಮತ್ತು ಸಂಶೋಧನೆ, ಮನರಂಜನೆ, ಅಧ್ಯಯನದ ಸಲುವಾಗಿ ಅತೀಹೆಚ್ಚು ಸಾಕಲ್ಪಡುತ್ತಿರುವುದು ಬಾಟ್ಲನೋಸ್ ಡಾಲ್ಫಿನ್. ಕಿಲ್ಲರ್ ವೇಲ್ ಅಥವಾ ಓರ್ಕಾ ಡಾಲ್ಫಿನ್ ಗಳಲ್ಲಿ ಅತೀದೊಡ್ಡದು. ಇದು 31 ಅಡಿ ಯದ್ದ ಬೆಳೆಯ ಬಲ್ಲದು. ಡಾಲ್ಫಿನ್ ಗಳಲ್ಲಿ ನಾಲ್ಕು ಸಿಹಿನೀರಿನ ಡಾಲ್ಫಿನ್ಗಳಿದ್ದು ಒಂದು ಪ್ರಭೇಧ ಭಾರತ, ನೇಪಾಳ ಮತ್ತು ಬಾಂಗ್ಲಾದ ಗಂಗಾನದಿಗಳಲ್ಲಿ ಮಾತ್ರ ಕಂಡುಬರುತ್ತದೆ.
ಗಾಳಿಯಲ್ಲಿ ಹಾರಿ ನೀರಿಗೆ ಡೈವ್ ಹೊಡೆಯುತ್ತ ನೀರಿನಲ್ಲಿ ಈಜುವ ನಿಪುಣತೆ ಪಡೆದ ಡಾಲ್ಫಿನ್ ಸಮುದ್ರದಲ್ಲಿ ಗಂಟೆಗೆ 7 ರಿಂದ 30 ಮೈಲಿ ದೂರ ಕ್ರಮಿಸಬಲ್ಲದು. ಡಾಲ್ಫಿನ್ 94 ಹರಿತವಾದ ಚಿಕ್ಕಚಿಕ್ಕ ಹಲ್ಲುಗಳಿರುತ್ತದೆ. ದಿನವೊಂದಕ್ಕೆ 14 ಪೌಂಡಗಳಷ್ಟು ಮೀನು ಮತ್ತು ಜಲಚರಗಳನ್ನು ತಿನ್ನುತ್ತದೆ. ಡಾಲ್ಫಿನ್ ನಿದ್ರಿಸುವಾಗ ಮುಳುಗಿ ಸಾಯದಂತೆ ಪ್ರಕೃತಿಯಲ್ಲಿ ಅವುಗಳಿಗೊಂದು ಸುವ್ಯವಸ್ಥಿತ ವ್ಯವಸ್ಥೆ ಇದೆ. ಇದಕ್ಕೆ ಎರಡು ಮಿದುಳೀದ್ದು ಮಿದುಳಿನ ಒಂದುಭಾಗ ನಿದ್ರಿಸುವಾಗ ಇನ್ನೊಂದು ಭಾಗ ಎಚ್ಚರವಾಗಿರುತ್ತದೆ. ಇದರ ಮಿದುಳು ಮಾನವನ ಮಿದುಳಿಗಿಂತ 5 ಪಟ್ಟು ದೊಡ್ಡದು.

- ಭಾವ ಜೀವಿ
ಡಾಲ್ಫಿನ್ಗಳದ್ದು ಒಂದು ಸುಸಜ್ಜಿತ ಸಮಾಜ. ತಾಯಿಯನ್ನು ಕಳೆದುಕೊಂಡ ಇತರ ಡಾಲ್ಫಿನ್ ಮರಿಗಳನ್ನು ದತ್ತು ಪಡೆದು ತಮ್ಮವೆಂಬಂತೆಯೇ ಸಾಕುತ್ತವೆ. ಡಾಲ್ಫಿನ್ಗಳು ತಮ್ಮ ಜೀವನ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ. ಇತರ ಡಾಲ್ಫಿನ್ ಕಷ್ಟದಲ್ಲಿ ಸಿಲುಕಿದರೆ ಒಂದಕ್ಕೊಂದು ನೆರವಾಗುತ್ತದೆ. ಆಹಾರವನ್ನು ಹಂಚಿಕೊಂಡು ತಿನ್ನುತ್ತವೆ. ಮಾನವನೊಂದಿಗೂ ಡಾಲ್ಫಿನ್ಗಳು ಅನ್ಯೋನ್ಯ ಸಂಬಂಧ ಹೊಂದಿದೆ. ಸಾಗರದ ಮಧ್ಯದಲ್ಲಿ ಮನುಷ್ಯನ ಸಂಘವನ್ನು ಅರಸಿಬರುವ ಏಕೈಕ ಪ್ರಾಣಿಯೆಂದರೆ ಡಾಲ್ಫಿನ್ ಮಾತ್ರ. ಅನೇಕಬಾರಿ ಅಪಾಯದಲ್ಲಿ ಸಿಲುಕಿಕೊಂಡ ಮಾನವನನ್ನು ಡಾಲ್ಫಿನ್ಗಳು ದಡಸೇರಿಸಿದ ಉದಾಹರಣೆಗಳಿವೆ.
- ಬುದ್ಧಿವಂತ ಪ್ರಾಣಿ
ಡಾಲ್ಫನ್ ಮಾನವನಂತೆ ಬುದ್ಧಿಶಕ್ತಿ ಹೊಂದಿದೆ. ಕೇವಲ ಅನುಕರಣೆಯ ಮೂಲಕ ಎಲ್ಲವನ್ನೂ ಕಲಿಯುತ್ತದೆ. ಹೀಗಾಗಿಯೇ ಇದು ಎಂಥಹ ಕೆಸಗಳನ್ನಾದರೂ ಕಲಿತು ಅವುಗಳನ್ನು ಪ್ರದರ್ಶಿಸಬಲ್ಲವು. ಡಾಲ್ಫನ್ ಗೆ ಅದರದೇ ಆದ ಭಾಷೆಯಿದೆ. ತನ್ನ ಒಡನಾಡಿಗಳೊಂದಿಗೆ ತನ್ನದೇ ಆದ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತದೆ. ಇವುಗಳ ಗ್ರಹಿಕೆ, ಪ್ರಜ್ಞೆ ಸಾಮಥ್ರ್ಯ ಮಾನವನಿಗಿಂತಲೂ ಉತ್ತಮ ಮತ್ತು ವಿಭಿನ್ನ. ಇವು ಮನುಷ್ಯರ ಮಾತುಗಳನ್ನು ಸುಲಭವಾಗಿ ಕಲಿಯಬಲ್ಲವು ಮತ್ತು ಉಚ್ಚರಿಸಲೂ ಬಲ್ಲವು. ಆದರೆ ಮಾನವನಿಗೆ ಅವುಗಳ ಮಾತಿನ ಎರಡಕ್ಷರವನ್ನೂ ಕಲಿಯಲಾಗಲಿಲ್ಲ. ಡಾಲ್ಫಿನ್ಗಳು ಶ್ವಾಸರಂದ್ರಗಳಿಂದ ಶಬ್ದಹೊರಡಿಸುತ್ತವೆ. ಆ ಕೀರಲು ಶಬ್ದಗಳಿಂದಲೇ ಮನುಷ್ಯನೊಟ್ಟಿಗೆ ಹಾಗೂ ಪರಸ್ಪರ ಮಾತನಾಡುತ್ತವೆ. ಅಲ್ಲದೇ ತಮ್ಮದೇ ಭಾಷೆಯಲ್ಲಿ ಹಾಡಬಲ್ಲವು.
- ಮನರಂಜನೆಗೆ ಬಳಕೆ
ಮನರಂಜನೆ ಪಡೆಯುವ ಸಲುವಾಗಿಯೇ ಡಾಲ್ಫಿನ್ಗಳನ್ನು ಸಾಕಿ ಅವುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಮನುಷ್ಯನ ಹಾವಭಾವಗಳನ್ನು ಯಥಾವತ್ತಾಗಿ ಅನುಸರಿಸುವ ಡಾಲ್ಫಿನ್ ನಗು ಮುಖ ಎಲ್ಲರಿಗೂ ಮನರಂಜನೆ ನೀಡುತ್ತದೆ. ಇದು ಮಾನವನೊಟ್ಟಿಗೆ ಜಲಕ್ರೀಡೆ ಆಡುವುದರಲ್ಲಿಯೂ ನಿಸ್ಸೀಮ. ನೀರಿನಿಂದ 15ರಿಂದ 30 ಅಡಿ ಎತ್ತರಕ್ಕೆ ಜಿಗಿದು ಕೈಯಿಂದ ಆಹಾರಗಳನ್ನು ಕಸಿದುಕೊಳ್ಳಬಲ್ಲದು. ಚಂಡನ್ನು ಮೂಗಿನ ಮೇಲಿಟ್ಟು ಈಜುತ್ತಾ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸುತ್ತದೆ.
ಮಾನವನೊಂದಿಗೆ ಅನ್ಯೋನ್ಯಗಿ ಬೆರೆಯುವ ಡಾಲ್ಫಿನ್ಗೂ ಸಂಚಕಾರ ಎದುರಾಗಿದೆ. ಪ್ರತಿವರ್ಷ 3 ಲಕ್ಷಕ್ಕೂ ಹೆಚ್ಚು ಡಾಲ್ಫೀನ್ಗಳು ಬಲಿಯಾಗುತ್ತಿವೆ. ಮಾಂಸಕ್ಕಾಗಿ ಜಪಾನ್ ನಾರ್ವೇ, ಐಸ್ಲ್ಯಾಂಡ್ಗಳಲ್ಲಿ ಅತೀಹೆಚ್ಚಾಗಿ ಡಾಲ್ಫಿನ್ಗಳನ್ನು ಕೊಲ್ಲಲಾಗುತ್ತಿದೆ. ಹೀಗಾಗಿ ಡಾಲ್ಫಿನ್ ಸಂತತಿ ಜಗತ್ತಿನಿಂದ ಮರೆಯಾಗುತ್ತಿದೆ.