ಜೇಡ ನೆಯ್ದ ಬಲೆಯ ಕಲೆ !
ಜೇಡ ಜಗತ್ತಿನ ಎಲ್ಲಾ ಭಾಗಗಳಲ್ಲಿ ಕಂಡು ಬರುವ ಕೀಟ ಪ್ರಭೇದ. ಇದರಲ್ಲಿ ತರಹೇವಾರಿ ಜಾತಿಗಳಿವೆ. 350 ಮಿಲಿಯನ್ ವರ್ಷಗಳಿಂದ ಇವು ಭೂಮಿಯಲ್ಲಿ ವಾಸವಾಗಿವೆ. ಜಗತ್ತಿನಲ್ಲಿ 40 ಸಾವಿರ ಜಾತಿಯ ಜೇಡಗಳಿವೆ ಎಂದು ಅಂದಾಜಿಸಲಾಗಿದ್ದು, ಇದುವರೆಗೂ ಭಾರತದಲ್ಲಿ 1500 ಜಾತಿಯ ಜೇಡಗಳನ್ನು ಗುರುತಿಸಲಾಗಿದೆ. ಇದುವರೆಗೂ ಭಾರತದಲ್ಲಿ 1500 ಜಾತಿಯ ಜೇಡಗಳನ್ನು ಗುರುತಿಸಲಾಗಿದೆ. ಜೇಡ ಎಲ್ಲೆಂದರಲ್ಲಿ ಬಲೆ ಕಟ್ಟುತ್ತದೆ. ಮರದ ತೊಗಟೆ, ಕೊಂಬೆ, ಎಲೆ ಗಿಡಗಂಟಿ, ಕಸ ಕಡ್ಡಿ ಹೀಗೆ ಇವು ಗೂಡು ಕಟ್ಟದ ಜಾಗವೇ ಇಲ್ಲ. ಕೊನೆಗೆ ಮನೆಯ ಗೋಡೆಯನ್ನೂ ಬಿಡುವುದಿಲ್ಲ. ಬಲೆ ನೆಯುವುದರಲ್ಲಿ ಹೆಸರುವಾಸಿಯಾದ ಜೇಡ ಪ್ರಕೃತಿಯ ನೇಕಾರ ಎಂದು ಹೆಸರು ಪಡೆದಿದೆ.
ಜೇಡನ ಬಲೆ : ಜೇಡ ತನ್ನ ಎಂಜಲಿನಿಂದ ಸುಂದರವಾದ ಬಲೆ ಹೆಣೆದು ಅದರ ಮಧ್ಯದಲ್ಲಿ ವಾಸಿಸುತ್ತದೆ. ಬಲೆಯಲ್ಲಿ ಸಿಲುಕಿದ ಹುಳಹಪ್ಪಟೆಗಳೆ ಇದರ ಆಹಾರ. ಇದರ ಹೊಟ್ಟೆಯಲ್ಲಿರುವ ರೇಷ್ಮೆಗ್ರಂಥಿಯಂತಹ ದ್ರವ ಗಾಳಿ ತಾಗಿದೊಡನೆ ಗಟ್ಟಿಯಾಗುತ್ತದೆ. ಬಲೆಯ ದಾರ ಕೂದಲಿಗಿಂತ ಸಣ್ಣದಾಗಿದ್ದರೂ, ಅಷ್ಟೇ ಸಣ್ಣದಾದ ಉಕ್ಕಿನ ದಾರದಂತಿರುತ್ತದೆ. ಜೇಡನ ಹುಳು 25 ವರ್ಷ ಜೀವಿತಾವಧಿಯನ್ನು ಹೊಒಂದಿವೆ. ಆದರೆ ಅವು ನೇಯುವ ಬಲೆಗಳು ಸಾವಿರಾರು ವರ್ಷಗಳವರೆಗೂ ಹಾಗೆಯೇ ಇರುತ್ತವೆ. ಎಲ್ಲಾ ಜೇಡಗಳೂ ಬಲೆ ನೇಯುವುದಲ್ಲ. ಕೆಲವು ಜೇಡಗಳು ಬೇಟಯನ್ನೂ ಆಡುತ್ತವೆ. ಮರದಮೇಲೆ ಅಂಟು ರಸವನ್ನು ಸ್ರವಿಸಿ ಬೇಟೆಗಾಗಿ ಹೊಂಚು ಹಾಕುತ್ತದೆ. ಗುಬ್ಬಿ ಚಿಟ್ಟೆ ಮುಂತಾದ ಚಿಕ್ಕಪುಟ್ಟ ಸಸ್ತನಿಗಳು ಇವುಗಳ ಮೇಲೆ ಕೂತಾಗ ಅಂಟು ಕಾಲಿಗೆ ಅಂಟಿ ಅಲ್ಲಿಯೇ ಜೋತು ಬೀಳುತ್ತವೆ ಈ ಸಂದರ್ಭದಲ್ಲಿ ಅವುಗಳನ್ನು ಜೇಡ ಬೇಟೆಯಾಡುತ್ತದೆ. ಅಂತಯೇ ಆತ್ಮ ರಕ್ಷಣೆಗೂ ಬಲೆಗಳು ನೆರವಾಗುತ್ತವೆ.
ರಚನೆ : ಇದರ ದೇಹ ಎರಡು ಭಾಗಗಳನ್ನು ಒಳಗೊಂಡಿದೆ. ಬೆರೆಲ್ಲಾ ಕೀಟಗಳಿಗೆ ಆರು ಕಾಲಿದ್ದರೆ, ಇದಕ್ಕೆ ಎಂಟು ಕಾಲುಗಳು. ಕೀಟಗಳಿಗಿರುಂತಹ ತಲೆಯ ಮೇಲಿನ ಸ್ಪರ್ಶಾಅಂಗ ಜೇಡಕ್ಕಿಲ್ಲ. ಎರಡು ಸಾಲುಗಳಲ್ಲಿರುವ ಎಂಟು ಕಣ್ಣುಗಳು ಇದರ ವೈಶಿಷ್ಟ್ಯ. ಗಂಡಿಗಿಂತ ಹೆಣ್ಣು ಜೇಡವೇ ಗಾತ್ರದಲ್ಲಿ ದೊಡ್ಡದು. ಸಾಮಾನ್ಯವಾಗಿ ಹೆಣ್ಣು ಜೇಡವೇ ಬಲೆ ನೇಯುತ್ತದೆ. ಕೀಟಗಳಿಗೆ ಅಂಟುವ ಜೇಡನ ಬಲೆ ಜೇಡನಿಗೆ ಮಾತ್ರ ಅಂಟದು.
ಜೇಡಗಳ ಪ್ರಣಯವೇ ವಿಶೇಷ.
ಇದರ ಮಿಲನವೆಂದರೆ ಗಂಡು ಜೇಡದ ಮರಣವೆಂದೇ ಅರ್ಥ. ಮಿಲನದ ನಂತರ ಗಂಡು ಜೇಡ ಹೆಣ್ಣಿನಿಂದ ಪಾರಾಗಲು ಓಡುತ್ತದೆ. ಇಲ್ಲದಿದ್ದರೆ ಹೆಣ್ಣು ಜೇಡಕ್ಕೆ ಇದು ಆಹಾರವಾಗಿತ್ತದೆ. ಕೆಲವೊಮ್ಮೆ ಗಂಡು ಹೆಣ್ಣಿಗೆ ಆಹಾರ ತಂದು ಕೊಟ್ಟು ನಂತರ ಸೇರುವುದುಂಟು. ಆದರೂ ಸರಸವೆಂದೆ ಗಂಡಿಗೆ ಸಾವು. ಹೆಣ್ಣು ಜೇಡ ಒಂದು ಬಾರಿಗೆ ನೂರಾರು ಮೊಟ್ಟೆಯಿಡುತ್ತೆ. ಮೊಟ್ಟೆಯಿಡುವ ಸಲುವಾಗಿಯೇ ಇವು ರೇಷ್ಮೆಯ ಚೀಲವನ್ನು ತಾಯಾರಿಸಿ ಕೊಳ್ಳುತ್ತದೆ.
ಜೇಡದಿಂದ ಮಾನವನಿಗೆ ಯಾವುದೇ ಅಪಾವಿಲ್ಲ. ಎಲ್ಲಾ ಜೇಡಗಳಲ್ಲೂ ವಿಷವಿರುತ್ತದೆ. ಆದರೆ, ಮಾನವನ ಚರ್ಮವನ್ನು ಅವುಗಳ ಕೊಂಡಿ ಭೇಧಿಸಲು ಸಾಧ್ಯವಿಲ್ಲ. ಕೆಲವು ದೊಡ್ಡ ಜೇಡಗಳು ಮಾತ್ರ ಮಾನವನಿಗೆ ಅಪಾಯಕಾರಿ, ಜೇಡ ತನ್ನ ಬಲೆಗೆ ಬಿದ್ದ ಕೀಟವನ್ನು ವಿಷಪೂರಿತ ಕೊಂಬಿನಿಂದ ಕಚ್ಚಿ ಸಾಯಿಸುತ್ತದೆ. ಇದರ ಬಾಯಿ ದ್ರವ ಆಹಾರವನ್ನು ಮಾತ್ರ ಸೇವಿಸಲು ಸಮರ್ಥವಾಗಿರುವುದರಿಂದ ಸತ್ತ ಕೀಟದ ಮೈಯೊಳಗಿನ ದ್ರವವನ್ನು ಹೀರಿ ಹೊರಮನ್ನು ಹಾಗೇ ಬಿಡುತ್ತದೆ.

ರೈತನ ಮಿತ್ರ :
ಜೇಡಗಳ ಸ್ಪರ್ಶಜ್ಞಾನಕೂಡ ಅದ್ಭುತವಾದದ್ದು. ಈ ಶಕ್ತಿಯನ್ನೇ ಬಳಸಿಕೊಂಡು ಅವು ಬಲೆಗೆ ಬಿದ್ದ ಆಹಾರವನ್ನು ಕೂಡಲೇ ಆಹಾರ ಪತ್ತೆ ಮಾಡುತ್ತವೆ. ಜೈವಿಕ ಕೀಟ ನಿಯಂತ್ರಣದಲ್ಲಿ ಇವುಗಳ ಕೊಡುಗೆ ಅಪಾರ. ರೈತನ ಮಿತ್ರ ಎನಿಸಿಕೊಂಡ ಜೇಡಗಳು ಬೆಳೆಗಳನ್ನು ಹಾಳುಮಾಡುವ ಕೀಟಗಳನ್ನು ತಿನ್ನುತ್ತವೆ. ಮಲೇರಿಯ ತರಬಲ್ಲ ಸೊಳ್ಳೆಗಳಿಗೆ ಈ ಜೇಡಗಳು ಶತ್ರು. ಕೀಟನಿಯಂತ್ರಣಕ್ಕೆ ಹೊಲಗದ್ದೆಗಳಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾದಂತೆ ಪರಿಸರ ಸ್ನೇಹಿ ಮತ್ತು ಕೀಟ ನಿಂತ್ರಕಗಳಾದ ಜೇಡಗಳು ನಮ್ಮಿಂದ ಕಣ್ಮರೆಯಾಗುತ್ತಿವೆ.