ಜೀವನಯಾನ

Thursday, June 18, 2015

ಭವ್ಯ ರಾಷ್ಟ್ರಪತಿ ಭವನ!

ಭಾರತದಲ್ಲೇ ಅತ್ಯಂತ ಪ್ರತಿಷ್ಠಿತ ಕಟ್ಟಡವೆಂದರೆ ಅದು ರಷ್ಟ್ರಪತಿ ಭವನ. ಈ ಮಹಾಕಟ್ಟಡವನ್ನು ಯಕ್ಷ ಸೃಷ್ಟಿ ಎಂದೇ ಕರೆಯಬಹುದು. ತನ್ನ ಅತ್ಯದ್ಭುತ ವಾಸ್ತು ಶಿಲ್ಪದಿಂದ ಮಾತ್ರವಲ್ಲದೇ, ಭಾರತದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳ ನಿವಾಸ ಇದಾಗಿದೆ. ಮುಘಲರ ವಾಸ್ತುಶಿಲ್ಪ ಮತ್ತು ಯುರೋಪಿನ ವಾಸ್ತು ಶಿಲ್ಪಗಳ ಸಮ್ಮಿಳನವನ್ನು ಈ ಭವ್ಯ ಕಟ್ಟಡದಲ್ಲಿ ಕಾಣಬಹುದು. ಸುಮಾರು 20 ಸಾವಿರ ಚದರ್ ಅಡಿ ವಿಸ್ತೀರ್ಣವಿರುವ ಈ ಭವನದಲ್ಲಿ 340 ಕೋಣೆಗಳಿವೆ. ವಿಶಾಲ  ಹಜಾರಗಳು, ಎತ್ತರದ ಬೋದಿಗಳು, ಅಮೃತ ಶಿಲೆಯ ನೆಲ, ಕಾಶ್ಮೀರಿ ನೆಲಗಂಬಳಿ, ಅಪರೂಪದ ತೈಲ ಚಿತ್ರಗಳು, ಬರ್ಮಾ ಟೀಕ್ ನ ಪೀಠೋಪಕರಣಗಳು... ಇವೆಲ್ಲಾ ರಾಷ್ಟ್ರಪತಿ ಭವನ ಯಕ್ಷ ಸೃಷ್ಟಿಯೋ ಎಂಬತೆ ಭಾಸಗೊಳಿಸುತ್ತವೆ.


ವೈಸ್ರಾಯ್ ಹೌಸ್ ಆಗಿತ್ತು:
ಇದನ್ನು ಮೂಲತಃ ರಾಷ್ಟ್ರಪತಿಗಳಿಗಾಗಿ ಕಟ್ಟಿದ್ದಲ್ಲ. ಇದು ಬ್ರಿಟಿಷರ ಕಾಲದ ವೈಸ್ರಾಯ್ ಹೌಸ್. ಇಲ್ಲಿ ಗವರ್ನರ್ ಜನರಲ್ ಮತ್ತು ಅವರ ಅಧಿಕಾರಿ ವರ್ಗ ಉಳಿದುಕೊಳ್ಳುತ್ತಿತ್ತು. ನಾವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಬಳಿಕ ಚಕ್ರವತರ್ಿ ರಾಜಗೋಪಾಲಾಚಾರ್ಯ ಅವರು ಈ ಬಂಗಲೆಯಲ್ಲಿ ತಂಗಿದ್ದ ಕೊನೆಯ ಗವರ್ನರ್ ಜನರಲ್ ಆಗಿದ್ದರು. ಭಾರತ ಗಣರಾಜ್ಯಗೊಂಡ ಬಳಿಕ ಇದಕ್ಕೆ ರಾಷ್ಟ್ರತಿ ಭವನ ಎಂದು ಸಂಭೋದಿಸಲಾಯಿತು.

ವೈಟ್ ಹೌಸ್ಗಿಂತಲೂ ದೊಡ್ಡದು!
1912ರಲ್ಲಿ ರಾಷ್ಟ್ರಪತಿ ಭವನದ ನಿರ್ಮಾಣ ಕಾರ್ಯ ಆರಂಭವಾಯಿತು. ಅದು ಮುಕ್ತಾಯಗೊಂಡಿದ್ದು 1929ರಲ್ಲಿ. ರಾಷ್ಟ್ರಪತಿ ಭವನವನ್ನು ಅಮೆರಿಕದ ಅಧ್ಯಕ್ಷರ ನಿವಾಸ ವೈಟ್ ಹೌಸ್ಗೆ ಹೋಲಿಸಿದರೆ ಅದರ ವಿಸ್ತೀರ್ಣ ಕೇಲವ 18 ಎಕರೆ. ಆದರೆ, ನಮ್ಮ ರಾಷ್ಟ್ರಪತಿ ಭವನ ವಿಶಾಲವಾದ 320 ಎಕರೆ ಪ್ರದೇಶಕ್ಕೆ ಚಾಚಿಕೊಂಡಿದೆ. ವಿಶೇಷ ರೀತಿಯಲ್ಲಿ ನಿರ್ಮಸಿರುವ ಮುಘಲ್ ಗಾರ್ಡನ್ಸ್ ಕೂಡ ಇಲ್ಲಿನ ಮತ್ತೊಂದು ಆಕರ್ಷಣೆ. ರಾಷ್ಟ್ರಪತಿಗಳಾದವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಇದನ್ನು ಬೆಳೆಸಿದ್ದಾರೆ.

ಲೂಟಿನ್ಸ್ ನಿರ್ಮಿಸಿದ ಅರಮನೆ:
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಬಣ್ಣ ಬಣ್ಣದ ಮಾರ್ಬಲ್ಗಳಿಂದ ಶೃಂಗರಿಸಲ್ಪಟ್ಟಿದ್ದು, ಅತ್ಯಂತ ಐಷಾರಾಮಿ ಕೊಠಡಿಯಾಗಿದೆ. ಇಲ್ಲಿ ವಾಸವಿರುವ ರಾಷ್ಟ್ರಪತಿಗಳಿಗಾಗಿ ಒಂದು ಡ್ರಾಯಿಂಗ್ ಹಾಲ್, ಬ್ಲಾಂಕ್ವೆಟ್ ಹಾಲ್, ಟೆನ್ನಿಸ್ ಕೋಟರ್್, ಕ್ರಿಕೆಟ್ ಫೀಲ್ಡ್ ಹಾಗೂ ಮ್ಯೂಸಿಯಂ ಮುಂತಾದ ಸವಲತ್ತುಗಳನ್ನು ಒದಗಿಸಲಾಗಿದೆ.
ರಾಷ್ಟ್ರಪತಿ ಭವನವನ್ನು ವಿನ್ಯಾಸಗೊಳಿಸಿ ನಿಮರ್ಿಸಿದ ವಾಸ್ತುಶಿಲ್ಪಿ ಎಡ್ವರ್ಡ್ ಲೇಂಡ್ಲೀರ್ ಲೂಟಿನ್ಸ್. ಇಟಲಿಯ ಶಿಲ್ಪಶಾಸ್ತ್ರ ಈತನಿಗೆ ಆದರ್ಶ. ಈ ಕಟ್ಟಡದ ನಿಮರ್ಾಣದಲ್ಲಿ ಎಲ್ಲಿಯೂ ಕಬ್ಬಿಣವನ್ನು ಉಪಯೋಗ ಮಾಡಿಲ್ಲ. ಈ ಅರಮನೆಗೆ ಭಾರತೀಯ ದೇವಾಲಯಗಳ ಗಂಟೆಗಳನ್ನು ಕಟ್ಟಡದ ಕಂಬಗಳಲ್ಲಿ ಬಳಸಿರುವುದು ಮತ್ತೊಂದು ವಿಶೇಷ.
ಬೌದ್ಧ ಕಟಾಂಜನಗಳು, ಹಿಂದು ಮತ್ತು ಜೈನ ದೇವಾಲಯದ ಕಲ್ಲುಬಂಡೆಗಳು, ಛತ್ರಿಗಳು, ಮೊಘಲರ  ಕಾಲದ  ಕಲ್ಲಿನ ಜಾಲರಿಗಳು, ಕಲ್ಲು ಚಪ್ಪಡಿಯ ಛಜ್ಜಾಗಳು ಹೀಗೆ ಹುಡುಕುತ್ತ ಹೋದರೆ ರಾಷ್ಟ್ರಪತಿ ಭವನದಲ್ಲಿ ಭಾರತೀಯ ವಾಸ್ತು ಶಿಲ್ಪದ ಪ್ರಭಾವ ತೀರಾ ಕಡಿಮೆ. ಇಷ್ಟು ಮಾತ್ರವಲ್ಲ ಗಾಲ್ಫ್ ಮೈದಾನ, ಈಜುಕೊಳ, ಏಕಕಾಲದಲ್ಲಿ ಸಾವಿರ ಮಂದಿಗೆ ಅಡುಗೆ ಮಾಡಬಹುದಾದ ಅಡುಗೆ ಮನೆ. ಲಾಂಡ್ರಿ, ಕ್ಷೌರಿಕನ ಅಂಗಡಿ, ಅಂಚೇ ಕಚೇರಿ ಕೂಡ ರಾಷ್ಟ್ರಪತಿ ಭವನದಲ್ಲಿದೆ.
ರಾಷ್ಟ್ರಪತಿ ಕಾಯರ್ಾಲಯದ 350 ಸಿಬ್ಬಂದಿ, ಮನೆಯೊಳಗಿನ ಕೆಲಸಕ್ಕೆ 220 ನೌಕರರು, 50 ಸದಸ್ಯರ ಅಡುಗೆ ತಂಡ, ತೋಟದಲ್ಲಿ ಕೆಲಸಮಾಡಲು 165 ಕಾರ್ಮಿಕರು, ಸ್ವಚ್ಛತಾ ಕಾರ್ಯಕ್ಕೇಂದೇ 150 ಕಾಮರ್ಿಕರು ಪ್ರತಿನಿತ್ಯ ಇಲ್ಲಿ ಕೆಲಸ ನಿರ್ವಹಿಸುತ್ತಾರೆ.
ಒಳ ಅಲಂಕಾರಗಳೆಲ್ಲಾ ಬ್ರಿಟಿಷ್ ಪ್ರಭಾವಿತ. ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಲದಲ್ಲಿ ಸೇರ್ಪಡೆಯಾದ ಶೋಕೇಸ್ ಒಂದೇ ಇಲ್ಲ ಹೊಸತು. ಅದರ ಪಕ್ಕದಲ್ಲಿ ಔಪಚಾರಿಕ ಭೇಟಿಯ ಕೋಣೆಗಳಿವೆ. ಉತ್ತರದ ಡ್ರಾಯಿಂಗ್ ರೂಮ್ನಲ್ಲಿ ವಿದೇಶದ ಗಣ್ಯರನ್ನು ರಾಷ್ಟ್ರಪತಿ ಭೇಟಿ ಮಾಡುತ್ತಾರೆ. ಪಕ್ಕದಲ್ಲಿಯೇ ಇರುವ ಇನ್ನೊಂದು ಸಭಾಂಗಣ ರಾಜ್ಯಪಾಲರ ಭೇಟಿಗೆ ಮೀಸಲು.



Friday, June 12, 2015

ಗುಲಾಬಿ ನೀರಿನ ಸರೋವರ!

ಈ ಸರೋವರದಲ್ಲಿ ಯಾರೋ ಬಂದು ಗುಲಾಬಿ  ಬಣ್ಣವನ್ನು ಕದಡಿ ಹೋಗಿಲ್ಲ. ಆದರೂ  ಸರೋವರದ ನೀರೆಲ್ಲಾ ಗುಲಾಬಿ ಬಣ್ಣಕ್ಕೆ ತಿರುಗಿದೆ. ಹೌದು. ಪಶ್ಚಿಮ ಆಸ್ಟ್ರೇಲಿಯಾದ ಮಿಡಲ್ ಐಲೆಂಡ್ನಲ್ಲಿರುವ ಲೇಕ್ ಹೀಲಿಯರ್ ಗುಲಾಬಿ ಬಣ್ಣದ ನೀರಿಗೆ ಹೆಸರುವಾಸಿ. ಆಕರ್ಷಕ ಗುಲಾಬಿ ಬಣ್ಣದಿಂದ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಆದರೆ, ಇಲ್ಲಿನ ನೀರು ಏಕೆ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.



10 ಪಟ್ಟು ಅಧಿಕ ಉಪ್ಪಿನ ಪ್ರಮಾಣ
ಈ ಚಿಕ್ಕ ಸರೋವರ 600 ಮೀಟರ್ನಷ್ಟು ಅಗಲ ಮತ್ತು 250 ಮೀಟರ್ನಷ್ಟು ಅಗಲವಾಗಿದೆ. 1802ರಲ್ಲಿ ಈ ಸರೋವರವನ್ನು ಬ್ರಿಟಿಷ್ ಸಮುದ್ರ ಯಾನಿ ಕ್ಯಾಪ್ಟನ್ ಫಿಲಿಂಡರ್ ಎಂಬಾತ ಅನ್ವೇಷಿಸಿದ. ಅಂದಿನಿಂದಲೂ ಇದರ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪಕ್ಕದಲ್ಲೇ ಇರುವ ಸಮುದ್ರದ ಪ್ರಭಾವದಿಂದಾಗಿ ಸರೋವರದ ನೀರು ಕೂಡ ಉಪ್ಪಾಗಿದೆ. ಆಳವಿಲ್ಲದ ಈ ಸರೋವರದ ತುಂಬೆಲ್ಲಾ ಬಿಳಿಯ ಉಪ್ಪುತುಂಬಿಕೊಂಡಿದೆ. ವಿಶೇಷವೆಂದರೆ, ಸಮುದ್ರದ ನೀರಿಗಿಂತಲೂ ಲೇಕ್ ಹೀಲಿಯರ್ನ ನೀರಿನಲ್ಲಿ 10 ಪಟ್ಟು ಅಧಿಕ ಉಪ್ಪಿನ ಪ್ರಮಾಣವಿದೆ. ಸರೋವರದ ಸುತ್ತಲೂ ದಟ್ಟವಾದ ನೀಲಗಿರಿ ಮತ್ತು ಪೆಪರ್ಬಾರ್ಕ್  ಮರಗಳು ಆವರಿಸಿಕೊಂಡಿವೆ. ಆದರೆ, ಸರೋವರದ ನೀರಿನಲ್ಲಿ ಪೌಷ್ಟಿಕಾಂಶದ ಸಾಂದ್ರತೆ ತೀರಾ ಕಡಿಮೆ. ವಿವಿಧ ನಮೂನೆಯ ಬ್ಯಾಕ್ಟೀರಿಯಾ ಮತ್ತು ಪಾಚಿಗಳು ನೀರಿನಲ್ಲಿ ಬೆರೆತುಕೊಂಡಿವೆ. ನೀರಿನಲ್ಲಿ ಅಧಿಕ ಉಪ್ಪಿನ ಪ್ರಮಾಣ ಇರುವುದರಿಂದ ಮತ್ತು ಉಷ್ಣಾಂಶವೂ ಅಧಿಕವಿದ್ದ ಸಂದರ್ಭದಲ್ಲಿ ಪಾಚಿಗಳು ಕೆಂಪು ಬಣ್ಣದ ರಾಸಾಯನಿಕವನ್ನು ಉತ್ಪತ್ತಿಮಾಡುತ್ತದೆ. ಇದೆಲ್ಲದರ ಪರಿಣಾಮವಾಗಿ ನೀರು ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಅಂದಾಜಿಸಲಾಗಿದೆ. ಉಪ್ಪು ಮತ್ತು ಸೋಡಿಯಂ ಬೈಕಾಬ್ರೋನೇಟ್ನ ಪ್ರತಿಕ್ರಿಯೆಯಿಂದಾಗಿ ನೀರು ಗುಲಾಬಿಯಾಗಿರಬಹುದು ಎಂಬ ಮತ್ತೊಂದು ವಾದವೂ ಇದೆ.

ಗ್ಲಾಸಿನಲ್ಲಿ ಹಿಡಿದಿಟ್ಟರೂ ಬಣ್ಣ ಬದಲಾಗಲ್ಲ!
ಇದರ ನೀರು ಕೇವಲ ಸರೋವರದಲ್ಲಿ ಇದ್ದಾಗ ಮಾತ್ರ ನೀರು ಗುಲಾಬಿ ಬಣ್ಣದಲ್ಲಿ ಕಾಣತ್ತದೆ ಎನ್ನುವ ಹಾಗೂ ಇಲ್ಲ. ನೀರನ್ನು ಗ್ಲಾಸಿನಲ್ಲಿ ಹಿಡಿದಿಟ್ಟರೂ ಬಣ್ಣದಲ್ಲಿ ಬದಲಾವಣೆ ಆಗುವುದಿಲ್ಲ! ಅಲ್ಲದೆ, ಈ ಸರೋವರ ಮಾನವನ ಬಳಕೆಗೆ ಅಪಾಯಕಾರಿ ಅಲ್ಲ. ಎಲ್ಲ ಸರೋವರಗಳಂತೆ ಇದರ ನೀರಿನಲ್ಲೂ ಈಜಾಡಬಹದು. ಸರೋವರದಿಂದ ಕೆಲವು ವರ್ಷಗಳ ಕಾಲ ಇಲ್ಲಿ ಉಪ್ಪನ್ನು ಹೊರತೆಯಲಾಗಿತ್ತು. ಆದರೆ, ಇದನ್ನು ಈಗ ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಮೀಸಲಿಡಲಾಗಿದೆ. ಆಕಾಶದಿಂದ ಈ ಸರೋವರವನ್ನು ನೋಡಿದರೆ ಗುಲಾಬಿ ಬಣ್ಣದ ಈಜುಕೊಳದಂತೆ ಗೋಚರಿಸುತ್ತದೆ.

ಜಗತ್ತಿನ ಬೇರೆ ಕಡೆಗಳಲ್ಲೂ ಇದೆ
ಹೀಲಿಯರ್ ಜಗತ್ತಿನ ಏಕೈಕ ಗುಲಾಬಿ ನೀರಿನ ಸರೋವರವೇನೂ ಅಲ್ಲ. ಜಗತ್ತಿನ ಇತರ ಭಾಗದಲ್ಲೂ ಗುಲಾಬಿ ಸರೋವರಗಳನ್ನು ಕಾಣಬಹುದು. ಆಫ್ರಿಕಾದ ರಾಷ್ಟ್ರ ಸೆನೆಗಲ್ನಲ್ಲಿಯೂ ಇಂತಹುದೇ ಗುಲಾಬಿ ಸರೋವರವಿದೆ.  ಅಲ್ಲದೆ, ಕೆನಡಾ, ಸ್ಪೇನ್ ಮತ್ತು ಆಸ್ಟ್ರೇಲಿಯಾದ ಇತರ ಭಾಗದಲ್ಲೂ ಗುಲಾಬಿ ನೀರಿನ ಸರೋವರವನ್ನು ಕಾಣಬಹುದು. ಆದರೆ, ಈ ಎಲ್ಲಾ ಸರೋವರಗಳಿಗಿಂತ ಹೀಲಿಯರ್ರ ನೀರು ಸದಾ ಗುಲಾಬಿ ಬಣ್ಣದಲ್ಲೇ ಇರುತ್ತದೆ ಎನ್ನುವುದು ವಿಶೇಷ.  

 

Tuesday, June 2, 2015

ಸಲಾರ್ ಡಿ ಉಯುನಿ ಎಂಬ ಪ್ರಕೃತಿ ಸೃಷ್ಟಿಸಿದ ಕನ್ನಡಿ!

ನೀವು ಎಂದಾದರೂ ಬೃಹದಾಕಾರದ ಕನ್ನಡಿಯ ಮುಂದೆ ನಿಂತಿದ್ದೀರಾ?  ಅದರ ಮೇಲೆ ನಡೆದಾಡಿದ್ದೀರಾ? ಅಂತಹ ಕನ್ನಡಿಯನ್ನು ಯಾರೂ ತಯಾರಿಸಬೇಕಾಗಿಲ್ಲ. ಮಾನವನಿಂದಲೂ ಸೃಷ್ಟಿಸಲಾಗದಷ್ಟು ಬೃಹದಾಕಾರದ ಕನ್ನಡಿಯನ್ನು ಬೊಲಿವಿಯಾದ ಸಲಾರ್ ಡಿ ಉಯುನಿಯಲ್ಲಿ ಪ್ರಕೃತಿಯೇ ಅದನ್ನು ಸೃಷ್ಟಿಸಿದೆ. ಇದೊಂದು ಜಗತ್ತಿನ ಬೃಹತ್ ಉಪ್ಪಿನ ಸರೋವರ. ಬೇಸಿಗೆಯಲ್ಲಿ ಸರೋವರ ಉಪ್ಪಿನ ಹಾಸಿಗೆಯಾಗಿ ಮಾರ್ಪಡುತ್ತದೆ. ಆಗ ಅದರ ಮೇಲೆ ಕಾರು, ಬೈಕ್ಗಳಳಲ್ಲಿ ಪ್ರಯಾಣಿಸಬಹುದು. ಮಲಗಿ ಆನಂದಿಸಬಹುದು. ಮಳೆಗಾಲದಲ್ಲಿ ಇಲ್ಲಿ ಉಪ್ಪು ನೀರಿನ ಪ್ರವಾಹ ಉಂಟಾಗುತ್ತದೆ. ನೀರು ನೀಲಿ ಬಣ್ಣಕ್ಕೆ ತಿರುಗಿ ಕನ್ನಡಿಯ ತರಹ ಹೊಳೆಯುತ್ತದೆ. ಇಲ್ಲಿ ಎಷ್ಟೇ ಅಗೆದರೂ ಉಪ್ಪು ಖಾಲಿಯಾಯಿತು ಎಂಬ ಮಾತೇ ಇಲ್ಲ.


 ಮೊಗೆದಷ್ಟೂ ಖಾಲಿಯಾಗದ ಉಪ್ಪು!
ಸಮುದ್ರ ಮಟ್ಟದಿಂದ 3656 ಅಡಿಯಷ್ಟು ಎತ್ತರದ ಪ್ರದೇಶದಲ್ಲಿರುವ ಇದು ದಕ್ಷಿಣ ಅಮೆರಿಕ ಖಂಡದ ಬೊಲಿವಿಯಾದ ಪೊಟೋಸಿ ಮತ್ತು ಒರುರೋ ಪ್ರಾಂತ್ಯಕ್ಕೆ ಸೇರಿದೆ. 10,582 ಚದರ ಮೈಲಿಗೆ ವ್ಯಾಪಿಸಿರುವ ಈ ಸರೋವರ 30- 40 ಸಹಸ್ರ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ. ಸ್ಥಳೀಯ ಭಾಷೆಯಲ್ಲಿ ಸಲಾರ್ ಡಿ ಉಯುನಿಗೆ ಆವರಣ ದ್ವೀಪ ಎನ್ನುವ ಅರ್ಥವಿದೆ. ವರ್ಷಕ್ಕೆ ಇಲ್ಲಿ 25 ಸಾವಿರ ಟನ್ ಉಪ್ಪನ್ನು ತೆಗೆಯಲಾಗುತ್ತದೆ. ಹಾಗಿದ್ದರೂ ಉಪ್ಪು ಮಾತ್ರ ಖಾಲಿಯಾಗುವುದಿಲ್ಲ. ಕಾರಣ ಇಲ್ಲಿ 10 ಶತಕೋಟಿ ಟನ್ಗಷ್ಟು ಉಪ್ಪು ಸಂಗ್ರಹವಾಗಿದೆ. ಅಷ್ಟೇ ಅಲ್ಲ 10 ಕೋಟಿ ಟನ್ಗಳಷ್ಟು ಲೀಥಿಯಂ ಕೂಡ ಇಲ್ಲಿದೆ. ಖನಿಜಾಂಶ ಮತ್ತು ಉಪ್ಪು ಹೇರಳವಾಗಿ ಇರುವುದರಿಂದ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಉಪ್ಪಿನ ಪದರದಿಂದಲೇ ಕಲ್ಲುಗಳನ್ನು ಮಾಡಿ ಕಟ್ಟಿದಂತಹ ಹೋಟೆಲ್ಗಳು ಇಲ್ಲಿನ ಪ್ರಮುಖ ಆಕರ್ಷಣೆ.

ಉಪ್ಪಿನಲ್ಲೂ ಅರಳುವ ಗುಲಾಬಿ ಹೂ!
ಇಲ್ಲಿರುವುದು ಮಣ್ಣಿನಂತೆ ಕಂಡರೂ ಅದರಲ್ಲಿ ಉಪ್ಪೇ  ಜಾಸ್ತಿ. ಹೀಗಾಗಿ ಕೆಲವೇ ಜಾತಿಯ ಸಸ್ಯಗಳ ಇಲ್ಲಿ ಬೆಳೆಯುತ್ತವೆ. ಒಂದು ಬಗೆಯ ಗುಲಾಬಿ ಗಿಡಗಳು, ಬೃಹದಾಕಾರದ ಪಾಪಸ್ಕಳ್ಳಿಯ ಗಿಡಗಳನ್ನು ಇಲ್ಲಿ ಕಾಣಬಹುದು. 25 ಅಡಿ ಎತ್ತರದ ಈ ಸಸ್ಯಗಳ ಬೆಳವಣಿಗೆ ವರ್ಷಕ್ಕೆ ಒಂದು ಸೆಂಟಿ ಮೀಟರ್ನಷ್ಟು ಮಾತ್ರ. ಆದರೆ, ಅವು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಲ್ಲದೆ, ಇಲ್ಲಿ ಹಿಮಕರಡಿಯನ್ನು ಹೋಲುವ ಆಂಡಿಯನ್ ನರಿ, ಕೊಕ್ಕರೆ, ಹೆಬ್ಬಾತುಗಳನ್ನು ಕಾಣಬಹದು.

ಮೋಡ ಆಕಾಶದ ಪ್ರತಿಬಿಂಬ!
ಮಳೆ ಸುರಿದಾಗ ಸಲಾರ್ನ ಉಪ್ಪು ಭರಿತ ಭೂಮಿಯ ಮೇಲೆ ತೆಳುವಾದ ನೀರಿನ ಹೊದಿಕೆ ಸೃಷ್ಟಿಯಾಗುತ್ತದೆ. ಅದು ನೋಡುಗರನ್ನು ಮಂತ್ರಮುಗ್ಧವಾಗಿಸುತ್ತದೆ. ಈ ಸನ್ನಿವೇಶದಲ್ಲಿ ಸೂರ್ಯ, ಮೋಡ, ಆಕಾಶ ಹಾಗೂ ಇತರ ಪ್ರತಿಬಿಂಬಗಳು ಪ್ರತಿಫಲಿಸಲ್ಪಡುತ್ತದೆ. ಅದರ ಮೇಲೆ ನಡೆದಾಡುವುದು ಯಾವುದೂ ಅನ್ಯಗ್ರಹದ ಮೇಲೆ ನಿಂತ ಅನುಭವನ್ನು ನೀಡುತ್ತದೆ. ಪ್ರವಾಸಿಗರು ಇಲ್ಲಿ ಸುತ್ತುವರಿದಿರುವ ಬಂಡೆಗಳನ್ನು ನೋಡಲು ಜೀಪ್ ಸವಾರಿ ಮಾಡುತ್ತಾರೆ. ಬಿಸಿ ನೀರಿನ ಬುಗ್ಗೆಗಳು, ಸಣ್ಣಪ್ರಮಾಣದ ಜ್ವಾಲಾಮುಖಿಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು.   

ರೈಲ್ವೆ ಇಂಜಿನ್ಗಳ ಸ್ಮಶಾನ!
ಬ್ರಿಟಿಷರು 19ನೇ ಶತಮಾನದಲ್ಲಿ ಇಲ್ಲಿನ ಉಪ್ಪುಗಳನ್ನು ತಮ್ಮ ದೇಶಕ್ಕೆ ರಫ್ತು ಮಾಡುವ ಸಲುವಾಗಿ ರೈಲ್ವೆ ಹಳಿಯನ್ನು ನಿಮರ್ಿಸಿದ್ದರು. ಅದೀಗ ಪಳೆಯುಳಿಕೆಯಾಗಿ ಇಂದಿಗೂ ಉಳಿದುಕೊಂಡಿದೆ. ಸ್ಥಳೀಯರು ರೈಲ್ವೆಯ ಸ್ಮಶಾನವೆಂದು ಕರೆಯುವ ನೂರಾರು ರೈಲ್ವೆ ಇಂಜಿನ್ಗಳು, ಬೋಗಿಗಳು ಪ್ರವಾಸಿಗರನ್ನು ಸೆಳೆಯುತ್ತವೆ