ಕಲ್ಲು ಬಂಡೆ ತಾನಾಗಿಯೇ ಚಲಿಸಲು ಸಾಧ್ಯವೇ? ಅಮೆರಿಕದ ಕ್ಯಾಲಿಫೋರ್ನಿಯಾದ ಮೃತ ಕಣಿವೆ ಎಂದೇ ಕರೆಸಿಕೊಳ್ಳುವ ರಾಕ್ ಟ್ರ್ಯಾಕ್ ಪ್ಲಾಯಾ ಇಂಥದ್ದೊಂದು ನಿಗೂಢ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಇದೊಂದು ಬತ್ತಿದ ಸರೋವರವಾಗಿದ್ದು, ಇಲ್ಲಿ ಭಾರೀ ಗಾತ್ರದ ಬಂಡೆಗಳು ತಾವಾಗಿಯೇ ಚಲಿಸುತ್ತದೆ. ಇದಕ್ಕೆ ಸಾಕ್ಷಿ ಎಂಬತೆ ಬಂಡೆಗಳ ಹಿಂಭಾಗದಲ್ಲಿ ದಾರಿಯ ಗುರುತು ಬಿದ್ದಿರುತ್ತದೆ. ಆದರೆ, ಕಲ್ಲು ಚಲಿಸುವುದಕ್ಕೆ ಏನು ಕಾರಣ. ಅದರ ಹಿಂದಿರುವ ಮರ್ಮವೇನು? ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ.
ಸಮುದ್ರ ಮಟ್ಟದಿಂದ 3608 ಅಡಿ ಎತ್ತರದಲ್ಲಿರುವ ರಾಕ್ ಟ್ರ್ಯಾಕ್ ಪ್ಲಾಯಾ ಗಾಜಿನ ಟೇಬಲ್ನಷ್ಟೇ ಸಮತಟ್ಟಾಗಿದೆ. ಇಲ್ಲಿ ಏರು ತಗ್ಗುಗಳನ್ನು ಗುರುತಿಸುವುದೇ ಸಾಧ್ಯವಿಲ್ಲ. ಪ್ಲಾಯಾ 4.3 ಕಿ.ಮೀ ಉದ್ದ ಮತ್ತು 1.3 ಕಿ.ಮೀ. ಅಗಲವಾಗಿದೆ. ಆದೆರೆ, ದಕ್ಷಿಣ ತುದಿಗಿಂತಲೂ ಉತ್ತರ ತುದಿ 4 ಸೆಂ.ಮೀ. ಎತ್ತರವಾಗಿದೆ. ಇದರ ಮೇಲ್ಮೈ ಕೆಸರು ಮತ್ತು ಜಾರುವ ಜೇಡಿ ಮಣ್ಣಿನಿಂದ ತುಂಬಿಕೊಂಡಿದೆ. ಇಲ್ಲಿನ ವಾತಾವರಣ ಶುಷ್ಕವಾಗಿರುತ್ತದೆ. ವರ್ಷದಲ್ಲಿ ಒಂದೆರಡು ಇಂಚು ಮಳೆ ಬೀಳುತ್ತದೆ. ಗುಡ್ಡದ ನೀರೆಲ್ಲಾ ಇಳಿದು ಬಂದು ಸರೋವರದಲ್ಲಿ ಕೆಲವು ಇಂಚುಗಳಷ್ಟು ನೀರು ತುಂಬಿಕೊಳ್ಳುತ್ತದೆ. ಬಳಿಕ ಸರೋವರ ಬತ್ತಲು ಆರಂಭವಾಗುತ್ತದೆ. ಆಗ ರಾಕ್ ಟ್ರ್ಯಾಕ್ ಪ್ಲಾಯಾದ ತಳದಲ್ಲಿರುವ ಮಣ್ಣು ಮೃದು ಮತ್ತು ಜಾರುವ ಕೆಸರಾಗಿ ಮಾರ್ಪಡುತ್ತದೆ.
ರಾಕ್ ಟ್ರ್ಯಾಕ್ ಪ್ಲಾಯಾದಲ್ಲಿ ಬಂಡೆಗಳು ಕೆಲವು ಇಂಚಿನಷ್ಟು ಚಲಿಸಿದ ಉದಾಹರಣೆಗಳಿವೆ. ಬಂಡೆಗಳು 10-20 ಕೆ.ಜಿ. ತೂಕವಿದ್ದರೆ ನಂಬಲು ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ. ಅದರೆ, ಸುಮಾರು 300 ಕೆ.ಜಿ. ಬಂಡೆಗಳೂ ಸ್ಥಾನಪಲ್ಲಟಗೊಳ್ಳುತ್ತವೆ!
- ಮೂರು ವಾದಗಳು!
1. ಗಾಳಿಯಿಂದ ಚಲಿಸುತ್ತಿದೆಯೇ?
ಇಲ್ಲಿ ಗಾಳಿಯ ಬಲದಿಂದ ಬಂಡೆಗಳು ಚಲುಸುತ್ತಿರಬೇಕು. ಬಂಡೆಗಳು ಚಲಿಸಿದ ಪಥದ ಗಾಳಿಯ ಚಲನೆಯ ದಿಕ್ಕನ್ನು ಅನುಸರಿಸಿವೆ ಎಂಬ ಆದವೂ ಇದೆ. ಆದರೆ, ಎಲ್ಲಾ ಬಂಡೆಗಳು ಒಂದೇ ದಿಕ್ಕಿನಲ್ಲಿ ಚಲಿಸಿಲ್ಲಿ. ಕೆಲವು ನೇರವಾಗಿ ಚಲಿಸಿ ಬಳಿಕ ಪಥವನ್ನು ಬದಲಿಸಿವೆ. ಕೆಲವು ಬಂಡೆಗಳು ಸರೋವರದ ಸುತ್ತಲೂ ಓಡಾಡಿವೆ. ಅಲ್ಲದೆ, 300 ಕೆ.ಜಿಯಷ್ಟು ಭಾರದಿಂದ ಬಂಡೆಯನ್ನು ಗಾಳಿಯಿಂದ ನೂಕಲು ಸಾಧ್ಯವೇ ಎನ್ನುವ ಶಂಕೆ ವಿಜ್ಞಾನಿಗಳನ್ನು ಕಾಡುತ್ತಿದೆ.
2.ಮಂಜುಗಡ್ಡೆಯಿಂದ ಜಾರುತ್ತಿದೆಯೇ?
ಇಲ್ಲಿ ಬೇಸಿಗೆಯಲ್ಲಿ 50 ಸೆಲ್ಸಿಯಸ್ನಷ್ಟು ಉಷ್ಣಾಂಶವಿರುತ್ತದೆ. ಆದರೆ, ಚಳಿಗಾಲದಲ್ಲಿ ಅತ್ಯಂತ ತಂಪಾಗಿರುತ್ತವೆ. ಹಿಮಪಾತವೂ ಆಗುತ್ತದೆ. ಸರೋವರದಲ್ಲಿ ಸಮತಲದಲ್ಲಿ ತೆಳುವಾದ ಮಂಜಿನ ಪದರ ಶೇಖರವಾಗಿರುತ್ತದೆ. ಗಾಳಿಯ ವೇಗಕ್ಕೆ ಈ ಮಂಜುಗಡ್ಡೆಗಳು ಚಲಿಸಿದಾಗ, ಅವು ಕರಗುವಾಗ ಬಂಡೆಗಳನ್ನು ಜಾರುವಂತೆ ಮಾಡುತ್ತವೆ ಎನ್ನುವ ಇನ್ನೊಂದು ವಾದವಿದೆ. ಆದರೆ, ಬೇಸಿಗೆಯಲ್ಲೂ ಕಲ್ಲು ಬಂಡೆಗಳು ಚಲಿಸಿದ್ದು ವಿಜ್ಞಾನಿಗಳ ಗಮನಕ್ಕೆ ಬಂದಿದೆ.
3.ಗುರುತ್ವಾಕರ್ಷಣ ಶಕ್ತಿ ಕಾರಣವೇ?
ಸೋರವರದ ತಳ ಒಂದು ಭಾಗದಲ್ಲಿ ಸ್ವಲ್ಪಮಟ್ಟಿಗೆ ಗುರುತಿಸಲಾಗದಷ್ಟು ಇಳಿಜಾರಾಗಿದ್ದು, ಬಂಡೆಗಳು ಗುರುತ್ವಾಕರ್ಷಣೆಯ ಬಲದಿಂದ ಚಲಿಸುತ್ತಿರಬಹುದು ಎಂದು ಈ ಮೊದಲು ಊಹಿಸಲಾಗಿತ್ತು. ಆದರೆ, ಕೆಲವು ಬಂಡೆಗಳು ಅವುಗಳ ವಿರುದ್ಧ ದಕ್ಕಿಗೂ ಚಲಿಸಿದ ಉದಾಹರಣೆಗಳಿವೆ. ಅಲ್ಲಿಗೆ ಈ ಮೂರು ಉದಾಹರಣೆಗಳು ಅಪೂರ್ಣ ಎನಿಸಿಕೊಳ್ಳುತ್ತವೆ.
ಬಗೆಹರಿಯದ ರಹಸ್ಯ!
ಬಂಡೆಗಳ ಬಗ್ಗೆ ರಾಕ್ ಟ್ರ್ಯಾಕ್ ಪ್ಲಾಯಾದಲ್ಲಿ ವಿಜ್ಞಾನಿಗಳು 1990ರಿಂದಲೂ ಸಂಶೋಧನೆಯ್ನು ಕೈಗೊಂಡಿದ್ದಾರೆ. ಬಂಡೆಗಳ ಚಲನೆ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಕೆಲವೇ ನಿಮಷಗಳಲ್ಲಿ ಅವುಗಳ ಚಲನೆ ಕೊನೆಗೊಳ್ಳುತ್ತದೆ. ಹೀಗಾಗಿ ಒಮ್ಮೆಯೂ ಬಂಡೆಗಳು ಚಲಿಸಿದ್ದನ್ನು ಕಣ್ಣಾರೆ ಯಾರೂ ಕಂಡಿಲ್ಲ. ಅದರ ವಿಡಿಯೋ ಚಿತ್ರೀಕರಣವೂ ಸಾಧ್ಯವಾಗಿಲ್ಲ. ಹೀಗಾಗಿ ಕಲ್ಲು ಬಂಡೆಗಳ ಚಲನೆಯ ಹಿಂದಿನ ಸತ್ಯ ಇಂದಿಗೂ ರಹಸ್ಯವಾಗಿಯೇ ಉಳಿದುಕೊಂಡಿದೆ.
ಬಂಡೆಗಳ ಬಗ್ಗೆ ರಾಕ್ ಟ್ರ್ಯಾಕ್ ಪ್ಲಾಯಾದಲ್ಲಿ ವಿಜ್ಞಾನಿಗಳು 1990ರಿಂದಲೂ ಸಂಶೋಧನೆಯ್ನು ಕೈಗೊಂಡಿದ್ದಾರೆ. ಬಂಡೆಗಳ ಚಲನೆ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಕೆಲವೇ ನಿಮಷಗಳಲ್ಲಿ ಅವುಗಳ ಚಲನೆ ಕೊನೆಗೊಳ್ಳುತ್ತದೆ. ಹೀಗಾಗಿ ಒಮ್ಮೆಯೂ ಬಂಡೆಗಳು ಚಲಿಸಿದ್ದನ್ನು ಕಣ್ಣಾರೆ ಯಾರೂ ಕಂಡಿಲ್ಲ. ಅದರ ವಿಡಿಯೋ ಚಿತ್ರೀಕರಣವೂ ಸಾಧ್ಯವಾಗಿಲ್ಲ. ಹೀಗಾಗಿ ಕಲ್ಲು ಬಂಡೆಗಳ ಚಲನೆಯ ಹಿಂದಿನ ಸತ್ಯ ಇಂದಿಗೂ ರಹಸ್ಯವಾಗಿಯೇ ಉಳಿದುಕೊಂಡಿದೆ.