ಜೀವನಯಾನ

Saturday, January 18, 2014

ಎಮು ಎಂಬ ಬಲಿಷ್ಠ ಪಕ್ಷಿ

ಹಾರಲಾಗದಿದ್ದರೂ ಓಟವೇ ಇದರ ತಾಕತ್ತು!

ಹಾರಲು ಸಾಮಥ್ರ್ಯವಿಲ್ಲದಿದ್ದರೂ, ಜಗತ್ತಿನ ಎರಡನೇ ದೈತ್ಯ ಪಕ್ಷಿ ಎಂದೇ ಕರೆಸಿಕೊಂಡಿದೆ. ಓಟವೇ ಇದರ ಪ್ರಮುಖ ಅಸ್ತ್ರ. ಗಂಟೆಗೆ ಸುಮಾರು 50 ಕಿ.ಮೀ. ದೂರವನ್ನು  ನಿರಾಯಾಸವಾಗಿ ಸಾಗಬಲ್ಲದು. ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಇವು, ಅತಿ ದೊಡ್ಡ ಹಕ್ಕಿ ಎನಿಸಿದ ಉಷ್ಟ್ರಪಕ್ಷಿಯನ್ನೇ ಹೋಲುತ್ತದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಪಕ್ಷಿ ಮತ್ತು ಅಲ್ಲಿನ ಅತಿದೊಡ್ಡ ಪಕ್ಷಿ ಎನಿಸಿದೆ. 



ಬಸ್ಸಿಗಿಂತ ವೇಗದಲ್ಲಿ ಓಟ!

ಡ್ರೊಮೈಯಸ್ ಇದರ ವೈಜ್ಞಾನಿಕ ಹೆಸರು. ಎಲ್ಲ ಹಕ್ಕಿಗಳು ಸಾವಿರಾರು ಮೈಲಿಯನ್ನು ಹಾರಿ ಕ್ರಮಿಸಿದರೆ, ಎಮು ಈ ದೂರವನ್ನು ನಡೆದು ಅಥವಾ ಓಡಿ ಸಾಗುತ್ತದೆ. ಇವು ಓಟಕ್ಕೆ ನಿಂತರೆ ಬಸ್ಗಳನ್ನೂ ಹಿಂದಿಕ್ಕಬಲ್ಲವು! ಏಕೆಂದರೆ, ಗಂಟೆಗೆ ಸುಮಾರು 70 ಕಿ.ಮೀ. ವೇಗದಲ್ಲಿ ಓಡುವ ಸಾಮಥ್ರ್ಯ ಎಮುವಿಗೆ ಇದೆ. ಆಹಾರ ವಿರುವ ಸ್ಥಳಗಳನ್ನು ಅರಸುತ್ತಾ ವರ್ಷದಲ್ಲಿ ಸುಮಾರು 1000 ಕಿ.ಮೀ. ದೂರಕ್ಕೆ ಪ್ರಯಾಣ ಮಾಡುತ್ತದೆ. ಜಗತ್ತಿನ ಎರಡನೇ ಎತ್ತರದ ಪಕ್ಷಿ ಎನಿಸಿದ ಇವು 2 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಸುಮಾರು 60 ಕೆ.ಜಿ.ಯಷ್ಟು ತೂಕವಿರುತ್ತದೆ.

ಸೂಕ್ಷ್ಮ ಜೀವಿ:

ಎಮು ದೈತ್ಯಕಾಯ ಹೊಂದಿದ್ದರೂ ಸೋಮಾರಿಯಲ್ಲ. ಅತ್ಯಂತ ಸೂಕ್ಷ್ಮ ಜೀವಿ. ರಾತ್ರಿಯ ವೇಳೆ ಇವು ಸಂಪೂರ್ಣ ನಿದ್ದೆ ಮಾಡುವುದಿಲ್ಲ. ಕೆಲಕಾಲ ನಿದ್ದೆಮಾಡಿ ಮತ್ತೆ ಎಚ್ಚರವಾಗಿಯೇ ಇರುತ್ತದೆ. ರಾತ್ರಿ ಎಂಟು ಬಾರಿ ಎಚ್ಚರಗೊಂಡು ಸೂಕ್ಷ್ಮವಾಗಿ ಅತ್ತಿತ್ತ ನೋಡಿ ಮತ್ತೆ ನಿದ್ದೆ ಮಾಡುವುದು ಇದರ ಸ್ವಭಾವ. 


ಈಜಾಡಲೂ ಬರುತ್ತದೆ:

ಎಮುವಿಗೆ ಓಡುವುದಷ್ಟೇ ಅಲ್ಲ. ಈಜಾಡುವ ಸಾಮರ್ಥ್ಯವೂ ಇದೆ. ಪ್ರಯಾಣದ ವೇಳೆ ಎದುರಾಗುವ ಸಣ್ಣಪುಟ್ಟ ಕೆರೆ ಸರೋವರಗಳನ್ನು ಈಜಿಕೊಂಡೆ ಮುಂದೆ ಸಾಗುತ್ತದೆ. ಅಷ್ಟೇಅಲ್ಲ ಇವುಗಳ ನೀರಿನ ದಾಹವೂ ಹೆಚ್ಚು. ಓಡುವಾಗ ನೀರು ಸಿಕ್ಕರೆ 10 ನಿಮಿಷಗಳ ಕಾಲ ಹೊಟ್ಟೆ ತುಂಬುವಷ್ಟು ನೀರನ್ನು ಕುಡಿಯುತ್ತದೆ. ಒಮ್ಮೆ ನೀರು ಕುಡಿದರೆ ಅನೇಕ ದಿನ ನೀರಿಲ್ಲದೆ ಬದುಕಬಲ್ಲದು.

ಅಂಕು ಡೊಂಕು ನಡಿಗೆ!

ಎಮು ಒಂದು ಕುತೂಹಲಕಾರಿ ಹಕ್ಕಿ. ಉಳಿದ ಪ್ರಾಣಿಗಳನ್ನು  ಕೆಣಕಿ ಅವುಗಳಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತದೆ. ಒಂದುವೇಳೆ ಅವು ತಿರುಗಿ ಬಿದ್ದಾಗ ಓಡಿಹೋಗಿ ಮರೆಯಲ್ಲಿ ಅವಿತುಕೊಳ್ಳುತ್ತವೆ. ದಾರಿಯಲ್ಲಿ ಸಿಗುವ ಮನುಷ್ಯರನ್ನೂ ಅಣಕಿದೇ ಬಿಡುವುದಿಲ್ಲ. ಎಮು ಆಕ್ರಮಣಕಾರಿ ಹಕ್ಕಿಯಾಗಿದ್ದು ಮನುಷ್ಯರ ಮೇಲೆರಗಲೂ ಹಿಂದೆಮುಂದೆ ನೋಡುವುದಿಲ್ಲ. ಅಪಾಯ ಎದುರಾದಾಗ ಇವು ವೈರಿಯಿಂದ ತಪ್ಪಿಸಿಕೊಳ್ಳಲು ಅಂಕುಡೊಂಕಾದ ಹೆಜ್ಜೆಹಾಕುತ್ತಾ ಓಡುತ್ತದೆ.

ಕಲ್ಲುಗಳನ್ನೂ ತಿನ್ನುತ್ತದೆ!

ಹೊಟ್ಟೆಯಲ್ಲಿನ ಹುಲ್ಲು ಮತ್ತು ಸಸ್ಯ ಪದಾರ್ಥಗಳನ್ನು ಪಚನಗೊಳಿಸಲು ಕಲ್ಲುಗಳನ್ನೂ ತಿನ್ನುತ್ತದೆ. ಅಲ್ಲದೆ, ಸಣ್ಣಪುಟ್ಟ ಕಲ್ಲಿನ ಚೂರು, ಗ್ಲಾಸು, ಕಬ್ಬಿಣದ ನಟ್- ಬೋಲ್ಟ್ಗಳನ್ನು ಜೀಣರ್ಣಿಸಿಕೊಳ್ಳಬಲ್ಲದು.


ದೊಡ್ಡ ಮೊಟ್ಟೆ:
ಎಮು ಉಷ್ಟ್ರಪಕ್ಷಿಯಂತೆಯೇ ದೊಡ್ಡದಾದ ಮೊಟ್ಟೆ ಇಡುತ್ತದೆ. ಮೊಟ್ಟೆಯ ಕವಚ ದಪ್ಪವಾಗಿದ್ದು, ಕಡುಹಸಿರುಬಣ್ಣದ್ದಾಗಿದೆ. ಇದನ್ನು ಕಲಾಕೃತಿ ನಿಮರ್ಮಾಣ ಮತ್ತು ಅಲಂಕಾರಕ್ಕೆ ಬಳಸುತ್ತಾರೆ. 

ಬಲಿಷ್ಠ ಕಾಲು:
ಎಮುವಿನ ಕಾಲು ಇತರೆಲ್ಲ ಪ್ರಾಣಿಗಳ ಕಾಲಿಗಿಂತ ಅತ್ಯಂತ ಬಲಿಷ್ಠ. ತಂತಿ ಬೇಲಿಗಳನ್ನು ಕೂಡ ಕಾಲಿನಿಂದ ಕಿತ್ತೆಸೆದು ಮುಂದೆ ಹೋಗುತ್ತದೆ.
ಎಮು ಯುದ್ದ:
1992ರಲ್ಲಿ ಆಸ್ಟ್ರೇಲಿಯಾ ಸರ್ಕಾರ ಎಮುವಿನ ಉಪಟಳ ನಿಯಂತ್ರಿಸಲು ಅವುಗಳ ವಿರುದ್ಧ ಯುದ್ಧ ಸಾರಿತ್ತು! ಎಮುವನ್ನು ಕೊಲ್ಲಲು ಸೇನೆ ಬಳಸಿಕೊಳ್ಳಲಾಗಿತ್ತು. ಇದು ಎಮು ಯುದ್ಧ ಎಂದೇ ಕರೆಸಿಕೊಂಡಿದೆ.

ಎಮು ಸಾಕಣೆ:

ಎಮುವನ್ನು ಅವುಗಳ ಮಾಂಸ, ಚರ್ಮ ಮತ್ತು ಎಣ್ಣೆಗಾಗಿ ಸಾಕಲಾಗುತ್ತದೆ. ಎಮು ಸಾಕಣೆ ಇಂದು ಒಂದು ಬೃಹತ್ ಉದ್ಯಮ. ಆಸ್ಟ್ರೇಲಿಯಾದ ಆಚೆಗೂ ಎಮು ಸಾಕಣೆ ವಿಸ್ತರಿಸಿದೆ. ಅಮೆರಿಕ ಮತ್ತು ಚೀನಾದಲ್ಲಿ ಸುಮಾರು 10 ಲಕ್ಷ  ಎಮುವನ್ನು ಸಾಕಲಾಗುತ್ತಿದೆ. ಭಾರತದ ಹಲವು ಭಾಗದಲ್ಲಿಯೂ ಎಮು ಸಾಕಣೆ ಮಾಡಲಾಗುತ್ತಿದೆ.

 

No comments:

Post a Comment