ಜೀವನಯಾನ

Sunday, February 3, 2013

ಫೈರ್ ಫಾಕ್ಸ್ ಹೆಸರಿನ ಕೆಂಪು ಪಾಂಡಾ

ನೀವೆಲ್ಲಾ ಇಂಟರ್ ನೆಟ್ ಬ್ರೌಸರ್- ಫೈರ್ ಫಾಕ್ಸ್ ಹೆಸರು ಕೇಳಿರುತ್ತೀರಿ. ಚಿಕ್ಕ ಮಕ್ಕಳ ಕಾರ್ಟೂನ್ ಸೀರಿಯಲ್ ಗಳಲ್ಲಿಯೂ ಫೈರ್ ಫಾಕ್ಸ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಇಂಥದ್ದೊಂದು ಪ್ರಾಣಿ ಇದೆ ಎನ್ನುವುದು ಗೊತ್ತೇ? ಹೀಗೆ ಫೈರ್ ಫಾಕ್ಸ್ ಎಂದು ಹೆಸರು ಪಡೆದಿರುವ ಪ್ರಾಣಿ ಕೆಂಪು ಪಾಂಡಾ! 


ವಿಶಿಷ್ಟ ಜಾತಿಯ ಪ್ರಾಣಿ:
ನೋಡಲು ಬೆಕ್ಕಿನಂತೆ ಕಾಣುವ ಕೆಂಪು ಪಾಂಡಾ, ಬೆಕ್ಕಿನ ಜಾತಿಗೆ ಸೇರಿಲ್ಲ. ಒಂದೇ ಹೆಸರನ್ನು ಹೊಂದಿದ್ದರೂ ನಿಜವಾದ ಪಾಂಡಾ ಸಂತತಿಗೂ ಇವು ಸೇರಿಲ್ಲ. ಬದಲಾಗಿ ರಕೂನ್ ಎನ್ನುವ ವಿಶಿಷ್ಟ ನರಿಯ ಸಂತತಿಗೆ ಇವು ಸೇರಿವೆ. ಮೂಲತಃ ಕೆಂಪು ಪಾಂಡಾ ವೃಕ್ಷದಲ್ಲಿ ವಾಸಿಸುವ ಒಂದು ಸಸ್ತನಿ. ಹಿಮಾಲಯದ ತಪ್ಪಲು ಪ್ರದೇಶ ಮತ್ತು ದಕ್ಷಿಣ ಚೀನಾದಲ್ಲಿ ಮಾತ್ರ ಇವುಗಳ ಸಂತತಿ ಕಂಡು ಬರುತ್ತದೆ. ದೈತ್ಯ ಗಾತ್ರದ ಪಾಂಡಾಗಳಂತೆ ವಿಪರೀತ ಮಳೆ ಬೀಳುವ, ಎತ್ತರದ ಕಾಡುಗಳಲ್ಲಿ ಮಾಡುತ್ತವೆ. ಆದರೆ ಅವುಗಳಿಗಿಂತ ವಿಸ್ತಾರವಾದ ವಾಸಸ್ತಾನವನ್ನು ಇವು ಹೊಂದಿವೆ.

ಕಾಣುವುದೇ ಅಪರೂಪ
ಕೆಂಪು ಪಾಂಡಾಗಳು ಭಾರತ, ಭೂತಾನ್, ಚೀನಾ, ಲಾವೋಸ್, ಮ್ಯಾನ್ಮಾರ್ ಮತ್ತು ನೇಪಾಳದ ಪರ್ವತ ಶ್ರೇಣಿಗಳಲ್ಲಿ ಕಂಡು ಬರುತ್ತವೆ. ಮರಗಳ ಮೇಲೆಯೇ ಇವು ಹೆಚ್ಚಾಗಿ ವಾಸ ಮಾಡುವುದರಿಂದ ಯಾರ ಕಣ್ಣಿಗೂ ಅಷ್ಟಾಗಿ ಕಂಡು ಬರುವುದಿಲ್ಲ. ಇವುಗಳ ತಲೆ ಮತ್ತು ದೇಹ 50 ರಿಂದ 64 ಸೆ.ಮೀ ನಷ್ಟು ದೊಡ್ಡದಾಗಿದ್ದರೆ. ಬಾಲ 30 ರಿಂದ 60 ಮೀಟರ್ ಉದ್ದವಾಗಿರುತ್ತದೆ. ಗಂಡು ಪಾಂಡಾ 4ರಿಂದ 6 ಕೇಜಿಯಷ್ಟು ತೂಕವಿರುತ್ತದೆ. ಇವು ಕೆಂಪು ಬಣ್ಣದ ಮೈಬಣ್ಣದಿಂದ ಮರದಲ್ಲಿ ಅಡಗಿಕೊಳ್ಳಲು ಸಹಕಾರಿಯಾಗಿವೆ. ಕತ್ತಲಿನ ಪ್ರದೇಶಗಳೆಂದರೆ ತುಂಬಾ ಪ್ರೀತಿ. ಹೆಚ್ಚಾಗಿ ತಂಪಾದ ಕಾಡುಗಳಲ್ಲಿ ಏಕಾಂತದಲ್ಲಿ ವಾಸಿಸುವುದೆಂದರೆ ಕೆಂಪು ಪಾಂಡಾಗೆ ಇಷ್ಟ. ರಾತ್ರಿಯ ವೇಳೆ ತುಂಬಾ ಇವು ಸಕ್ರಿಯ. ನರಿಯಂತೆ ಕೀರಲು ಧ್ವನಿಯಲ್ಲಿ ಕೂಗುತ್ತಾ ಸೀಟಿ ಹೊಡೆಯುವುದು ಇದರ ಇನ್ನೊಂದು ಸ್ವಭಾವ. ಇವು ನಿದ್ರಿಸುವಾಗ ಬಾಲದಿಂದ ತಲೆಯನ್ನು ಮುಚ್ಚಿಕೊಂಡಿರುತ್ತವೆ. ಇವು ದಿನದ 13 ಗಂಟೆಗಳನ್ನು ತಿನ್ನುವುದರಲ್ಲಿಯೇ ಕಳೆಯುತ್ತವೆ.



ಮೈ ಮೇಲೆ ಉಣ್ಣೆಯ ಹೊದಿಕೆಕೆಂಪು ಪಾಂಡಾದ ಮೈ- ನವಿರಾದ ಉಣ್ಣೆಯ ಹೊದಿಕೆಯಿಂದ ಆವೃತ್ತವಾಗಿದೆ. ಹೀಗಾಗಿ ಎಷ್ಟೇ ಪ್ರಮಾಣದ ಚಳಿಯನ್ನೂ ಇವು ತಡೆದುಕೊಳ್ಳಬಲ್ಲವು. ತಲೆಯ ಭಾಗ ಕೆಂಪು ಮತ್ತು ಕಂದು ಬಣ್ಣದ ಗರಿಗಳಿಂದ ಕೂಡಿದೆ. ಮೂಗು, ಕಣ್ಣು ಮತ್ತು ಕಿವಿಯ ಭಾಗ  ಬಿಳುಪಾಗಿದೆ. ಕಾಲು ಮತ್ತು ಒಳಗಿನ ಭಾಗ ಕಪ್ಪಾಗಿರುತ್ತವೆ. ಅಲ್ಲದೇ ಬೆಕ್ಕಿನಂತೆ ಮುಖದ ಮೇಲೆ ಉದ್ದನೆಯ ಮೀಸೆ ಮತ್ತು ನರಿಗಳಂತೆ ಉದ್ದನೆಯ ಬಾಲ ಇವೆ. ಒಟ್ಟಿನಲ್ಲಿ ದೈತ್ಯ ಪಾಂಡಾ ಮತ್ತು ಕೆಂಪು ಪಾಂಡಾಗಳ ನಡುವೆ ಭಾರೀ ವ್ಯತ್ಯಾಸವಿದೆ.  

ಸರ್ವ ಭಕ್ಷಕಗಳು:
 ಇವು ಪಾಂಡಾ ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತದೆ. ಹಣ್ಣು, ಕೀಟ, ಅಣಬೆ, ಬೇರು ಹುಲ್ಲು, ಚಿಕ್ಕಪುಟ್ಟ ಪಕ್ಷಿ, ಬಿದಿರು ಹೀಗೆ ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತವೆ. ಕೆಂಪು ಪಾಂಡಾಗೆ ಬೇಟೆಯಾಡಲು ಬರುವುದಿಲ್ಲ. ಮರದ ಮೇಲೆ ಚುರುಕಿನಿಂದ ಓಡಾಡುವ ಇವು ನೆಲದ ಮೇಲೆ ಅಷ್ಟೇನೂ ಚುರುಕಿನಿಂದ ಇರುವುದಿಲ್ಲ. ಇವು ಬಹುತೇಕ ಜೀವಿತದ ಅವಧಿಯನ್ನು ಮರದ ಮೇಲೆಯೇ ಕಳೆಯುತ್ತವೆ. ಊಟ, ವಸತಿ ನಿದ್ರೆ ಎಲ್ಲವೂ ಮರದಮೇಲೆಯೇ. 
ಕಣ್ಮರೆಯ ಭೀತಿ:
 ಕೆಂಪು ಪಾಂಡಾಗಳು ಅಳಿವಿನ ಅಂಚಿಗೆ ತಲುಪಿದ್ದು, ದಕ್ಷಿಣ ಚೀನಾ, ಬರ್ಮಾ, ನೇಪಾಳ ಮತ್ತು ಭೂತಾನ್ನಲ್ಲಿ ಈಗ ಕೇವಲ 2,500 ಕೆಂಪು ಪಾಂಡಾಗಳು ಮಾತ್ರ ಉಳಿದುಕೊಂಡಿವೆ.  ಉತ್ತಮ ಸ್ವಭಾವದ ಇವು ತಳಿ ನಾಷದಿಂದಾಗಿ ದಿನದಿಂದ ದಿನಕ್ಕೆ ನಮ್ಮಿಂದ ಕಣ್ಮರೆಯಾಗುತ್ತಿರುವುದು ವಿಪರ್ಯಾಸ.


 

No comments:

Post a Comment