ಗಣಪತಿ ಜಾಗತಿಕ ವಾಗಿ ಪೂಜಿಸಲ್ಪಡುವ ದೇವತೆ. ಹೀಗಾಗಿಯೇ ಜಗತ್ತಿನ ಮೂಲೆ ಮೂಲೆಯಲ್ಲಿಯೂ ಗಣೇಶನಿಗೊಂದು ಸ್ಥಾನವಿದೆ. ಮಧ್ಯಯುಗದ ಸಮಯದಲ್ಲಿ ದೂರದ ದೇಶಗಳಾದ ದಕ್ಷಿಣ ಮತ್ತು ಮಧ್ಯ ಅಮೆರಿಕ, ಮ್ಯಾಕ್ಸಿಕೊ, ಕಾಂಬೊಡಿಯಾ, ಜಪಾನ್ ಮತ್ತು ಇರಾನ್ಗಳಲ್ಲಿ ಗಣೇಶ ದೇವಾಲಯಗಳನ್ನು ನಿರ್ಮಾಣಮಾಡಲಾಗಿತ್ತು. ಅಲ್ಲದೇ ಹಿಂದೂ ಧರ್ಮದ ಪ್ರಭಾವ ಉತ್ತುಂಗದಲ್ಲಿದ್ದ ಕಾಲದಲ್ಲಿ ಶ್ರೀಲಂಕಾ, ತೈಲ್ಯಾಂಡ್, ಇಂಡೋನೇಶಿಯಾ, ಚೀನಾದಲ್ಲಿಯೂ ಹಲವಾರು ಗಣೇಶ ದೇವಾಲಯಗಳು ಸ್ಥಾಪನೆಯಾಗಿದ್ದವು. ಆಧುನಿಕ 21ನೇ ಶತಮಾನದಲ್ಲಿ ಬ್ರಿಟನ್, ಕೆನಡಾ ಆಸ್ಟ್ರೇಲಿಯಾ, ಪ್ರಾನ್ಸ್, ಜರ್ಮನಿ ಮತ್ತು ಅಮೆರಿಕದಲ್ಲಿ ಬ್ರಹದಾಕಾರದ ಗಣೇಶ ದೇವಾಲಯಗಳು ನಿರ್ಮಾಣ ಗೊಂಡಿವೆ.
ಭಾರತದಲ್ಲಿ ಕೇವಲ ಹಿಂದುಗಳಷ್ಟೇ ಅಲ್ಲ ಸರ್ವ ಜನಾಂಗದವರೂ ಗಣೇಶನ ಚತುರ್ಥಿಯ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಗಣೇಶೋತ್ಸವ ಸಾರ್ವತ್ರಿಕ ಉತ್ಸವದ ರೂಪ ಪಡೆಯುತ್ತದೆ. ಬಹುತೇಕ ಭಾರತೀಯರಿಗೆ ಗಣೇಶ ದೈವತ್ವದ ಸಂಕೇತ. ವಿದೇಶಗಳಲ್ಲಿ ನೆಲೆಸಿದವರಿಂದ ಭಾರತೀಯತೆಯ ಗುರುತಾಗಿ ಗಣೇಶ ಆರಾಧಿಸಲ್ಪಡುತ್ತಾನೆ.
- ವಿದೇಶಗಳಲ್ಲಿನ ಗಣೇಶ ದೇವಾಲಯ
ಅಕ್ಕ ಪಕ್ಕದ ದೇಶಗಳಲ್ಲಿ
ಭಾರತದ ಪಕ್ಕದ ದೇಶ ಶ್ರೀಲಂಕಾದಲ್ಲಿ 14 ಪುರಾತನ ಗಣೇಶ ದೇವಾಲಯಗಳಿವೆ. ಕೊಲಂಬೊಗೆ ಹತ್ತಿರದಲ್ಲರುವ ಕೆಲನಿಯಾ ಬೌದ್ಧ ದೇವಾಲಯದದಲ್ಲಿ ಗಣೇಶನ ಶಿಲ್ಪ ಕಲಲಾಕೃತಿಗಳನ್ನು ನೋಡಬಹುದು. ಅದೇರೀತಿ ನೇಪಾಳ, ಬಾಂಗ್ಲಾ ದೇಶದಲ್ಲಿಯೂ ಗಣೇಶ ದೇವಾಲಯವಿದೆ.
ಪೂರ್ವಾತ್ಯ ರಾಷ್ಟ್ರಗಳಲ್ಲಿ
ಭಾರತದ ಪೂರ್ವಕ್ಕಿರುವ ಬರ್ಮಾ ಕಾಂಬೊಡಿಯಾ, ಸಿಯಾಂ, ಇಂಡೋನೇಶಿಯಾ, ಮಲಯಾ ಪೆನೆಸುಲಾ ದೇಶಗಳ ಪ್ರಾಚೀನ ನಾಗರಿಕತೆಯ ಪಾರಂಪರಿಕ ತಾಣಗಳಲ್ಲಿ 12ನೇ ಶತಮಾನದ ಅಪರೂಪದ ಗಣೇಶದೇವಾಲಯ ಮತ್ತು ಶಿಲ್ಪಕಲಾಕೃತಿಗಳು ಲಭ್ಯವಾಗಿವೆ. ಬರ್ಮಾವನ್ನು ಆಳುತ್ತಿದ್ದ ಬಗನ್ ಸಾಮಾಜ್ಯದ ದೊರೆಗಳು ಅಂದು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಚೋಳ ದೊರೆಗಳಿಂದ ಪ್ರಭಾವಿತರಾಗಿ ಸಾವಿರಾರು ಹಿಂದು ದೇವಾಲಯಗಳನ್ನು ನಿರ್ಮಾಸಿದ್ದರು. ಚೋಳರು ಗಣೇಶ ದೇವರ ಆರಾಧ್ಯ ಭಕ್ತರಾಗಿದ್ದರು. ಆದರೆ ಅವು ಕಾಲಕ್ರಮೇಣ ನಾಶವಾಗಿ ಭೂಮಿಯ ಗರ್ಭಸೇರಿವೆ.
ಬರ್ಮಾದ ದೊರೆ ಅನವರತ ಮತ್ತು ಬದ್ಧನ ಅನುಯಾಯಿಗಳು 1057ನೇ ಇಸವಿಯಲ್ಲಿ ಬಗನ್ನಲ್ಲಿ ನಿರ್ಮಿಸಿದ ಗಣೇಶ ದೇವಾಲಯ. ಈ ದೇವಾಲಯದ ಪ್ರತಿಯೊಂದು ಮೂಲೆಯಲಲ್ಲಿಯೂ ಗಣೇಶನ ಮೂರ್ತಿ ಸ್ಥಾಪಿಸಲಾಗಿತ್ತು.
ಜಾವಾ-ಸುಮಾತ್ರಾ, ಬಾಲಿ ಮತ್ತು ಇಂಡೋನೇಶಿಯಾ ದೇಶಗಳು ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದವು. ಬಾಲಿ ದ್ವೀಪದಲ್ಲಿ ಈಗಲೂ ಸಹ ಅನೇಕ ಹಿಂದು ದೇವಾಲಯಗಳು ಉಳಿದುಕೊಂಡಿವೆ. ಜಾವಾದಲ್ಲಿ ಹಿಂದುಗಳು ಮತ್ತು ಬೌದ್ಧ ಧರ್ಮೀಯರು 12ನೇ ಶತಮಾನದಲ್ಲಿ 3 ಮೀಟರ್ ಎತ್ತರದ ಗಣೇಶ ಮೂರ್ತಿ ನಿರ್ಮಿಸಿದ್ದರು. ಇಂಡೋನೇಶಿಯಾ ಇಂದು ಸಂಪೂರ್ಣ ಇಸ್ಲಾಮಿಕ್ ದೇಶವಾಗಿ ಬದಲಾಗಿದೆ. ಒಂದು ಕಾಲದಲ್ಲಿ ಈ ದೇಶ ಹಿಂದು ದೇವಾಲಯಗಳಿಂದ ತುಂಬಿಕೊಂಡಿತ್ತು. ತೈಲ್ಯಾಂಡ್ ಈಗಲೂ ಹಿಂದು ಧರ್ಮದ ಪ್ರಭಾವ ಉಳಿಸಿಕೊಂಡಿದೆ. ಇಲ್ಲಿನ ಹೆಚ್ಚಿನವರು ಬೌದ್ಧರಾಗಿದ್ದರೂ ಬ್ಯಾಂಕಾಕ್ ನಲ್ಲಿನ ಗಣೇಶ ದೇವಾಲಯದಲ್ಲಿ ಎಂದಿನಂತೆ ಪೂಜೆ ನಡೆಯುತ್ತಿದೆ.
ಯುನೆಸ್ಕೊದ ಜಾಗತಿಕ ಪಾರಂಪರಿಕ ತಾಣದಲ್ಲಿ ಸೇರ್ಪಡೆಗೊಂಡಿರುವ ಕಾಂಬೋಡಿಯಾದ ಆಂಗ್ಕರ್ ವಾಟ್ ದೇವಾಲಯಗಳಲ್ಲಿ 14ನೇ ಶತಮಾನದ ನಿರ್ಮಾಣಗೊಂಡ ವಿಷ್ಣು, ಶಿವ ಮತ್ತು ಗಣೇಶ ದೇವರ ಮೂರ್ತಿಗಳನ್ನು ನೋಡಬಹುದು. ಆಂಗ್ಕರ್ ವಾಟ್ ಜಗತ್ತಿನ ಅತ್ಯಂತ ದೊಡ್ಡ ಹಿಂದು ದೇವಾಲಯ ಸಮುಚ್ಚಯ ಎನಿಸಿಕೊಂಡಿದೆ. ಈ ದೇವಾಲಯ 2800 ಅಡಿ ಉದ್ದ ಮತ್ತು 2800 ಅಡಿ ಅಗಲವಾಗಿದೆ.
ಪಾಶ್ಚಿಮಾತ್ಯ ದೇಶದಲ್ಲಿ
ಭಾರತದ ಸುತ್ತಮುತ್ತಲಿನ ದೇಶಗಳಷ್ಟೇ ಅಲ್ಲ ಮೆಕ್ಸಿಕೊ, ಗೌಟೆಮ್ಲಾ, ಪೆರು, ಬೊಲಿವಿಯಾ ದೇಶಗಲ್ಲಿಯೂ ಹಿಂದೂ ದೇವಾಲಯಗಳಿವೆ. ಮೆಕ್ಸಿಕೊದ ಡಿಜಿಗೊ ರಿವೆರಿಯಾ ನಗರ ಗಣೇಶ ಮೂರ್ತಿತಯಾರಿಕೆಗೆ ಪ್ರಸಿದ್ಧಿಪಡೆದಿತ್ತು ಎಂಬುದು ಉತ್ಕಲನದಿಂದ ತಿಳಿದುಬಂದಿದೆ. ಇಂಗ್ಲೆಂಡ್ನಲ್ಲಿ ನೆಲೆಸಿದ ಕೆಲವು ಭಾರತೀಯ ಕುಟುಂಬಗಳು 1979ರಲ್ಲಿ ವಿಂಬಲ್ಡನ್ನಲ್ಲಿನ ಗಣೇಶನ ಹಾಲ್ ನಿರ್ಮಿಸಿವೆ. ಎಲ್ಲರೂ ಅಲ್ಲಿ ಸೇರಿ ಪೂಜೆ ನಡೆಸುತ್ತಾರೆ. ಅಮೆರಕದ ನ್ಯಾಶ್ವಿಲ್ಲೆಯಲ್ಲಿ ಹಿಂದುಗಳ ಸಾಂಸ್ಕೃತಿಕ ಕೇಂದ್ರದ ಸಂಕೇತವಾಗಿ 1985ರಲ್ಲಿ ಗಣೇಶ ದೇವಾಲಯ ನಿರ್ಮಿಸಲಾಗಿದೆ.
ಆಯಾಯ ದೇಶ ಮತ್ತು ಸಂಸ್ಕೃತಿಗೆ ತಕ್ಕಂತೆ ಗಣೇಶ ಮರ್ತಿಯ ರೂಪ ಮತ್ತು ಆಕಾರದಲ್ಲಿಯೂ ಬದಲಾವಣೆಯಾಗಿದೆ. ಅಫ್ಘಾನಿಸ್ತಾನದ ಕಾಬೂಲ್ನಲ್ಲಿ 5ನೇ ಶತಮಾನದಲ್ಲಿ ನಿರ್ಮಾಣಗೊಂಡ ಗಣೇಶನ ವಿಗ್ರಹ ಗ್ರೀಕ್ ಶಿಲ್ಪಕಲೆಯ ಪ್ರಭಾವಕ್ಕೆ ಒಳಗಾಗಿದೆ.
No comments:
Post a Comment