ಕತ್ತಲ ರಾತ್ರಿಯಲ್ಲಿ ಮೆಲ್ಲನೆ ಹಾರಾಡುತ್ತಾ ಕತ್ತಲ ತೆರೆಯನ್ನು ಸರಿಸುವ ಹುಳಗಳಿವು. ತನ್ನ ಬೆಳಕಿನಿಂದ ಕಾಡನ್ನೆಲ್ಲಾ ಬೆಳಗುತ್ತವೆ. ಕಾಡಿನ ತುಂಬೆಲ್ಲಾ ಬೆಳಕಿನ ಚಿತ್ತಾರ ಮೂಡಿಸಿ ಒಮ್ಮಲೇ ಮೆರೆಯಾಗುತ್ತವೆ. ರಾತ್ರಿಯಾಗುತ್ತಿದಂತೆ ಬ್ಯಾಟರಿ ಹಿಡಿದು ಹಾಜರಾಗುವ ಈ ಅತಿಥಿಯೇ ಮಿಣುಕುಹುಳ.
ದೇಹದಿಂದ ಬೆಳಕನ್ನು ಉತ್ಪಾದಿಸುವುದರಿಂದ ಇವುಗಳಿಗೆ ಮಿಣುಕುಹುಳ ಎನ್ನುವ ಹೆಸರು ಬಂದಿದೆ. ಮಿಣುಕುಹುಳ ಬೆಳಕನ್ನು ಉತ್ಪತ್ತಿಮಾಡುವ ಪ್ರಕ್ರಿಯೆಯೇ ಅದ್ಭುತ. ಉಷ್ಣತೆಯನ್ನು ಉತ್ಪಾದಿಸದೇ ಶಕ್ತಿಯನ್ನು ಪೂರ್ತಿಯಾಗಿ ಬೆಳಕನ್ನಾಗಿ ಪರಿವರ್ತಿಸುವ ಮಿಣುಕು ಹುಳಗಳ ರಹಸ್ಯವನ್ನು ಆಧುನಿಕ ಜಗತ್ತು ಇನ್ನೂ ಬೇಧಿಸಿಲ್ಲ. ಮಿಣುಕು ಹುಳಗಳು ತಾವು ವ್ಯಯಿಸುವ ಶಕ್ತಿಯ ಸುಮಾರು ಶೇ. 10 ರಷ್ಟನ್ನು ಬೆಳಕನ್ನಾಗಿ ಪರಿವರ್ತಿಸುತ್ತವೆ. ಇವುಗಳ ಈ ಪ್ರಕ್ರಿಯೆ ಇಂದಿಗೂ ಒಂದು ಅಚ್ಚರಿಯಾಗಿಯೇ ಉಳೀದುಕೊಂಡಿದೆ. ಒಂದು ವೇಳೆ ಈ ರಹಸ್ಯ ಬೇಧಿಸಿದರೆ ಈಗಿರುವ ಬಲ್ಬು, ಟ್ಯೂಬ್ಲೈಟುಗಳು ಬೀರುರ ಬೆಳಕನ್ನು ಇನ್ನಷ್ಟು ಉತ್ತಮಗೊಳಿಸಬಹುದು.
ಮಿಣುಕು ಹುಳಗಳು ಜೀರುಂಡೆಯ ಜಾತಿಗೆ ಸೇರಿದ ಕೀಟಗಳಾಗಿವೆ. ಇದರಲ್ಲಿ 2 ಸಾವಿರಕ್ಕೂ ಹೆಚ್ಚಿನ ಜಾತಿಗಳಿವೆ. ಅಧಿಕ ಉಷ್ಣಾಂಶವಿರುವ ಏಷ್ಯಾ ಮತ್ತು ಉತ್ತರ ಅಮೆರಿಕಗಳಲ್ಲಿ ಇವು ಕಂಡುಬರುತ್ತವೆ. ಮಳೆಗಾಲದಲ್ಲಿ ಇವುಗಳ ಹಾರಾಟ ಸರ್ವೇಸಾಮಾನ್ಯ. ಇವುಗಳ ಗಾತ್ರ ಕೇವಲ ಒಂದು ಇಂಚು.

- ಬೆಳಕು ಹೇಗೆ ಉತ್ಪತ್ತಿಯಾಗುತ್ತದೆ?
ಮಿಂಚು ಹುಳುಗಳಿಗೆ ಹೊಟ್ಟೆಯ ಕೆಳ ಭಾಗದಲ್ಲಿ ಬೆಳಕನ್ನು ಉತ್ಪಾದಿಸುವ ಒಂದು ವಿಶಿಷ್ಟವಾದ ಅಂಗವಿದೆ. ಇದರಲ್ಲಿರುವ ವಿಶೇಷ ಕೋಶಗಳು ಆಮ್ಲಜನಕ ಮತ್ತು ಶಕ್ತಿಯನ್ನು ಶಾಖರಹಿತ ಬೆಳಕನ್ನಾಗಿ ಪರಿವರ್ತಿಸುತ್ತವೆ. ಇವುಗಳ ದೇಹದಿಂದ ಹಳದಿ ಬಣ್ಣದ ಬೆಳಕು ಮಿನುಗುತ್ತಿರುತ್ತದೆ. ಮಿಣುಕುಹುಳುಗಳು ದೇಹದ ಆಂತರ್ಯದಿಂದಲೇ ಬೆಳಕನ್ನು ಉತ್ಪತ್ತಿ ಮಾಡುತ್ತವೆ. ಈ ಕ್ರಮ ಒಂದೊಂದು ಜಾತಿಯ ಮಿಣುಕು ಹುಳುಗಳಲ್ಲಿ ಒಂದೊಂದು ತೆರನಾಗಿರುತ್ತದೆ. ತಮಗೆ ಬೇಕಾದಾಗ ಮಾತ್ರ ಬೆಳಕನ್ನು ಬೀರಿ ಬೇಡವೆನಿಸಿದಾಗ ಬ್ಯಾಟರಿಯಂತೆ ಸ್ವಿಚ್ ಆಫ್ ಮಾಡತ್ತವೆ. ಇದು ಹೇಗೆ ಸಾಧ್ಯ ಎನ್ನುವ ಬಗ್ಗೆ ವಿಜ್ಞಾನಿಗಳು ಇನ್ನೂ ತಲೆ ಕೆಡಿಸಿಕೊಂಡಿದ್ದಾರೆ. ಇದರ ದೇಹದಿಂದ 50 ರಿಂದ 70 ಸೆಕೆಂಡ್ಗಳ ಕಾಲ ಬೆಳಕು ಕಾಣಿಸುತ್ತದೆ. ಗಾಳಿಯಲ್ಲಿ ಹಾರಾಡುವ ಚಿಕ್ಕ ಚಿಕ್ಕ ಕೀಟಗಳಾದ ಮಿಂಚುಹುಳಗಳು ನಮಗೆಲ್ಲಾ ಹೆಚ್ಚು ಪರಿಚಿತ. ನೆಲದ ಮೇಲೆ ವಾಸಿಸುವ ಮಿಂಚುಹುಳಗಳೂ ಹಲವು ಇವೆ.
ಬೆಳಕು ಉತ್ಪಾದಿಸಬಲ್ಲ ಇತರ ಜೀವಿಗಳು
ಮಿಂಚುಹುಳಗಳಂತೆಯೇ ಬೆಳಕನ್ನು ಉತ್ಪಾದಿಸಬಲ್ಲ ಇನ್ನೂ ಹಲವಾರು ಜೀವಿಗಳು ಕರ್ನಾಟಕದ ಸೈಹಾದ್ರಿಯ ಕಾಡುಗಳಲ್ಲಿವೆ ಅಂದರೆ ಅಚ್ಚರಿಯೇ? ಕೆಲವು ಅಣಬೆಗಳೂ ಬೆಳಕನ್ನು ಬೀರುತ್ತವೆ. ತುಂಬಾ ಹಳೆಯ ಮರದ ಮೇಲೆ ಬೆಳೆಯಬಲ್ಲ ಅಣಬೆಗಳು ಕೆವೊಮ್ಮೆ ಇಡೀ ಮರವನ್ನು ಆಕ್ರಮಿಸಿ ಮರಕ್ಕೆ ಮರವೇ ಜಗಮಗನೆ ಹೊಳೆಯುವ ಭ್ರಮೆ ಮೂಡಿಸುತ್ತವೆ. ಲಡ್ಡು ಮರದ ಮೇಲೆ ಬೆಳೆದ ನೂರಾರು ಅಣಬೆಗಳಿಂದಾಗಿ ಈ ಬೆಳಕು ಎಂದು ಅರಿವಾಗಲು ಬೆಳಗಿನ ತನಕ ಕಾಯಬೇಕು.
ಬೆಳಕನ್ನು ಉತ್ಪಾದಿಸಬಲ್ಲ ಇನ್ನೊಂದು ಜೀವಿಯೆಂದರೆ ಸರಸ್ವತಿ ಚೇಳು. ನಾಲ್ಕಾರು ಸೆಂಟಿಮೀಟರ್ ಉದ್ದವಿರುವ ದಟ್ಟ ಹಸಿರು ಬಣ್ಣದ ತೆಳ್ಳನೆಯ ಈ ಹುಳು ನೋಡಲು ಎರೆಹುಳುಗಳನ್ನು ಹೋಲುತ್ತದೆ. ರಾತ್ರಿ ಹೊತ್ತು ಮನೆಯೊಳಗೆ ಬಂದ ಈ ಅತಿಥಿಯನ್ನು ಅಕಸ್ಮಾತ್ ಮುಟ್ಟಿದರೆ ಅಥವಾ ಕಡ್ಡಿಯಿಂದ ದೂಡಿದರೆ ಅದರ ದೇಹ ಬೆಳಕು ಬೀರಲು ಆರಂಭಿಸುತ್ತದೆ. ಇದೊಂದು ಸಂರಕ್ಷಣೆಯ ತಂತ್ರ. ವಿದ್ಯುತ್ ದೀಪಗಳ ಬಳಕೆ ಬಂದನತರ ಹೊಳೆಯುವ ಮೈನ ಸರಸ್ವತಿ ಚೇಳಿನ ನೋಟ ಅಪರೂಪವಾಗುತ್ತಿದೆ. ಸಮುದ್ರದಲ್ಲಿ ಕೂಡಾ ಕೆಲವು ಜೀವಿಗಳು ಬೆಳಕು ಬೀರಬಲ್ಲವು. ಒಂದು ಜಾತಿಯ ಪಾಚಿ, ಕೆಲವು ಮೀನುಗಳು ಬೆಳಕು ಬೀರುವ ಜಲವಾಸಿಗಳು.

No comments:
Post a Comment