ಗೂಡು ಹೆಣೆಯುವುದರಲ್ಲಿ ಗೀಜಗನನಿಗೆ ಎಷ್ಟೊಂದು ಶೃದ್ಧೆ, ಆಸಕ್ತಿ. ನಿಗಕ್ಕೂ ಆಶ್ಚರ್ಯಮೂಡಿಸುತ್ತದೆ. ಅಷ್ಟಕ್ಕೂ ಇದು ಗೂಡು ಕಟ್ಟುವುದು ತನ್ನ ಸಂಗಾತಿಯನ್ನು ಆಕರ್ಶಿಸಲು. ತನ್ನದಾದ ಒಂದು ಪುಟ್ಟ ಸಂಸಾರ ಹೂಡಲು. ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅದಮ್ಯ ಆಸೆ ಈ ಹಕ್ಕಿಗೆ. ಹಾಗೆಯೇ ಭವಿಷ್ಯ ರೂಪಿಸುವ ಕಾಳಜಿ. ಇಕ್ಕಳದಂಹ ತನ್ನ ಚಿಕ್ಕ ಚುಂಚಿನಲ್ಲಿ ಸಟಸಟನೆ ನೇಯುವ ಇದರ ಕಸೂತಿ ಕೆಲಸ ಯಾವುದೇ ಯಂತ್ರಕ್ಕೂ ಸರಿಸಾಟಿಯಾಗಲಾರದು. ಗೂಡು ಕಟ್ಟುವ ಕಾಯಕದಲ್ಲಿ ಒಂದೊಂದು ಎಳೆಯೂ ಕಲಾತ್ಮಕವಾಗಿ ಬಿಗಿದು ಕೊಳ್ಳುತ್ತದೆ. ಇದರ ರಚನೆಯನ್ನು ಅರ್ಥ ಮಾಡಿಕೊಳ್ಳಲು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ.
ಆಫ್ರಿಕ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುವ ಗೀಜಗ
ನೋಡಲಿಕ್ಕೆ ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ತೀರಾ ಹತ್ತಿರ ಕೂಡಾ. ಆದರೆ ಇದರ ಗೂಡು 30 ರಿಂದ 60 ಸೆಂಟಿಮೀಟರ್ನಷ್ಟು ಉದ್ದವಿರುತ್ತದೆ. ಈ ಹಕ್ಕಿಗಳು ಸಂಘ ಜೀವನ ನಡೆಸುತ್ತವೆ.
ನೋಡಲಿಕ್ಕೆ ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ತೀರಾ ಹತ್ತಿರ ಕೂಡಾ. ಆದರೆ ಇದರ ಗೂಡು 30 ರಿಂದ 60 ಸೆಂಟಿಮೀಟರ್ನಷ್ಟು ಉದ್ದವಿರುತ್ತದೆ. ಈ ಹಕ್ಕಿಗಳು ಸಂಘ ಜೀವನ ನಡೆಸುತ್ತವೆ.
ಸಾಮಾನ್ಯವಾಗಿ ಭತ್ತದ ತೆನೆಕಟ್ಟುವ ಸಮಯದಲ್ಲಿ ಚಿ..ಚಿ...ಚಿವ್...ಚಿವ್ ಎಂದು ಹಾಡಿಕೊಂಡು ಗಂಡು ಹಕ್ಕಿಗಳು ಒಟ್ಟಾಗಿ ಗೂಡು ಕಟ್ಟುತ್ತವೆ. ಜೌಗು ಪ್ರದೇಶ, ಕೃಷಿ ಭೂಮಿಗಳ ಸುತ್ತಮುತ್ತ ಜಾಲಿ-ಮುಳ್ಳುಕೊಂಬೆ, ತಾಳೆಮರದ ಎಲೆಗಳಿಗೆ ಜೋಕಾಲಿಯಂತೆ ಗೂಡುಗಳು ತೇಲಾಡುತ್ತಿರುತ್ತವೆ. ಜೊಂಡು ಹುಲ್ಲು, ತೆಂಗಿನನಾರು ಮುಂತಾದ ಕಸಕಡ್ಡಿಗಳನ್ನು ಬಳಸಿ ಕಟ್ಟಿದ ಎರಡು ಅಂತಸ್ತಿನ ಈ ಗೂಡು ಎಂಥಾ ಬಿಸಿಲು ಮಳೆಗೂ ಜಗ್ಗದೇ ಮರದ ಕೊಂಬೆಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಕೆಲವೊಮ್ಮ ಒಂದೇ ಮರಕ್ಕೆ ಹತ್ತಾರು ಗೂಡುಗಳು ನೇತಾಡುತ್ತಾ ಅಲ್ಲಿ ಗೀಜಗನ ಕಾಲೋನಿಯೇ ನಿರ್ಮಾಣವಾಗಿರುತ್ತದೆ.
ಗೂಡು ಕಟ್ಟುವ ಬಗೆ ಹೇಗೆ?
ಈ ಗೂಡು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತುಬಿದ್ದರುತ್ತದೆ. ಹಾಗಾಗಿ ಕೆಳಗಿನಿಂದ ಗೂಡನ್ನು ಪ್ರವೇಶಬೇಕು. ಗೂಡಿನ ಪ್ರವೇಶ ದ್ವಾರ ಕಿರಿದಾಗಿರುತ್ತದೆ. ಹಾವುಗಳಿಂದ ಮರಿಗಳನ್ನು ರಕ್ಷಣೆ ಮಾಡುವ ಸಲುವಾಗಿ ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಗೂಡು ಕಟ್ಟುತ್ತವೆ. ಗೀಜಗ ಗೂಡನ್ನು ಹಸಿರಾದ ಎಳೆಗಳಿಂದ ನಿರ್ಮಾಣ ಮಾಡುತ್ತದೆ. ಅವು ಒಣಗಿದ ನಂತರ ಕೆಂಪು ಬಣ್ಣಕ್ಕೆ ತಿರುತ್ತದೆ. ಗೂಡು ಕೊಂಬೆಗಳಿಗೆ ಭದ್ರವಾಗಿ ಹೆಣೆದಿರುತ್ತದೆ. ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಒಂದೊಂದೇ ತನ್ನ ಚೊಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿ ತಂದು ಪರೀಕ್ಷೀಸಿದ ನಂತರವೇ ಗೂಡಿಗೆ ಸೇರಿಸುತ್ತದೆ. ಗಂಡುಹಕ್ಕಿ ಗೂಡನ್ನು ಅರ್ಧನಿರ್ಮಿಸಿದ ನಂತರ ಗೂಡಿನ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದು ವೇಳೆ ಗೂಡು ಸಂಗಾತಿಗೆ ಇಷ್ಟವಾಗದಿದ್ದರೆ ಪುನಃ ಹೊಸದಾಗಿ ಗೂಡನನ್ನು ಹೆಣೆಯುತ್ತದೆ ಬಡ ಗಂಡು ಹಕ್ಕಿ. ಗೂಡು ಹೆಣ್ಣುಹಕ್ಕಿಗೆ ಇಷ್ಟವಾದರೆ ಅದನ್ನು ಮುಂದುವರಿಸುತ್ತದೆ. ಗೂಡ ಅಪೂರ್ಣವಾಗಿರುವಾಗಲೇ ಹೆಣ್ಣು ಹಕ್ಕಿ ಗೂಡನ್ನು ಪ್ರವೇಶಿಸಿ ಮೊಟ್ಟೆಗಳನ್ನು ಇಡುತ್ತದೆ. ನಂತರ ಗಂಡು ಹಕ್ಕಿ ಗೂಡಿನಲ್ಲಿ ಇತರರು ಪ್ರವೇಶಿಸದ ಹಾಗೆ ಕೆಳಗಿನ ಬಾಯಿಯವರೆಗೆ ಗೂಡನ್ನು ಮುಚ್ಚಿಬಿಡುತ್ತದೆ. ವಿಚಿತ್ರವೆಂದರೆ ಗಂಡುಹಕ್ಕಿ ಗೂಡನ್ನು ಹೆಣೆದ ನಂತರ ಅದನ್ನು ಮರಿಗಳ ಪೋಷಣೆಗೇ ಮೀಸಲಿಟ್ಟು ತನಗಾಗಿ ಇನ್ನೊಂದು ಗೂಡನ್ನು ಹೆಣೆದುಕೊಳ್ಳುತ್ತದೆ. ತಾಯಿ ಮತ್ತು ಮರಿಗಳಿಗೆ ಆಹಾರವನ್ನು ಚುಂಚಿಲ್ಲಿ ಕಚ್ಚಿಕೊಂಡು ಬಂದು ಹೊರಗಿನಿಂದ ನೀಡುವ ಕೆಲಸವನ್ನಷ್ಟೇ ಮಾಡುತ್ತದೆ. ಗೂಡಿನಲ್ಲಿ ಮರಿಗಳನ್ನು ಬೆಳೆಸಲು ಪ್ರತ್ಯೇಕ ಕೋಣೆಯನ್ನೇ ನಿರ್ಮಾಸುತ್ತದೆ. ಕೆಲವೊಮ್ಮೆ ಗೂಡನ್ನು ಗಟ್ಟುಮುಟ್ಟುಗೊಳಿಸುವ ಸಲುವಾಗಿ ಒದ್ದೆ ಮಣ್ಣುಗಳನ್ನು ತಂದು ಅಂಟಿಸುತ್ತದೆ. ಎಲ್ಲಾ ಕಾಲಕ್ಕೂ ಹವಾನಿಂತ್ರಿತ ವ್ಯವಸ್ಥೆ ಇದರ ಗೂಡಿನಲ್ಲಿರುತ್ತದೆ.