ಈ ಸೇತುವೆ 20ನೇ ಶತಮಾನದ ಎಂಜಿನಿಯರಿಂಗ್ ಅದ್ಭುತ ಎಂದೇ ಬಣ್ಣಿಸಲಾಗಿದೆ. ಜಗತ್ತಿನ ಮೊದಲ ತೂಗು ಸೇತುವೆ ಎಂಬ ಖ್ಯಾತಿ ಗೋಲ್ಡನ್ ಗೇಟ್ ಬ್ರಿಡ್ಜ್ ನದ್ದು. 1.7 ಮೈಲಿ ಉದ್ದದ ಈ ಸೇತುವೆ ಸ್ಯಾನ್ಫ್ರಾನ್ಸಿಸ್ಕೋ ಉತ್ತರ ತುದಿಯನ್ನು ಮರೀನ್ ಕೌಂಟಿಯ ಸಸಲಿಟೋದೊಂದಿಗೆ ಸೇರಿಸುತ್ತದೆ. ಆಧುನಿಕ ಜಗತ್ತಿನ ಏಳು ಅದ್ಭುತಗಳಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡ ಒಂದು.
ಎರಡು ಗೋಪುರಗಳೇ ಆಧಾರ:
ಈ ಸ್ಯಾನ್ಫ್ರಾಸ್ಸಿಸ್ಕೊ ಕೊಲ್ಲಿಯ ಮೇಲಿರುವ ಈ ತೂಗು ಸೇತುವೆ ಎರಡು ಗೋಪುರಗಳ ಆಧಾರದ ಮೇಲೆ ನಿಂತುಕೊಂಡಿದೆ. ಗೋಪುರದ ತುದಿಯಿಂದ ಇಳಿಬಿಡಲಾದ ಎರಡು ಉಕ್ಕಿನ ಕೇಬಲ್ಗಳು ಸೇತುವೆಯ ಭಾರವನ್ನು ತಡೆದುಕೊಳ್ಳುತ್ತದೆ. ಉಕ್ಕಿನ ಕೇಬಲ್ಗಳ ಒಳಗೆ ಸುಮಾರು 88 ಸಾವಿರ ಮೈಲಿ ಉದ್ದದ ವೈರ್ಗಳನ್ನು ಬಳಸಲಾಗಿದೆ. ಸೇತುವೆಯನ್ನು ಹಿಡಿದಿಟ್ಟುಕೊಂಡಿರುವ ಗೋಪುರಗಳು ನೀರಿನಿಂದ 726 ಅಡಿ ಎತ್ತರವಾಗಿವೆ. ಈ ಎರಡು ಗೋಪುರಗಳ ಮಧ್ಯೆ 4200 ಅಡಿ ಅಂತರವಿದೆ.
ಈ ಸೇತುವೆಯ ನಿರ್ಮಾಣಕ್ಕೆ 88 ಸಾವಿರ ಟನ್ ಉಕ್ಕನ್ನು ಬಳಕೆಯಾಗಿದೆ. ಅಲ್ಲದೆ ಸಿಮೆಂಟ್ ಕಾಂಕ್ರೀಟ್ಅನ್ನು ಬಳಸಲಾಗಿದೆ. ಸೇತುವೆ ಒಟ್ಟು 887,000 ಟನ್ ಭಾರವಿದೆ. ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿದ್ದು 1933ರಲ್ಲಿ. 4 ವರ್ಷಗಳ ಸತತ ಪರಿಶ್ರಮದ ಬಳಿಕ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಜೋಸೆಫ್ ಬೈರ್ಮನ್ ಸ್ಟ್ರಾಸ್ ಎಂಬಾತ ಸೇತುವೆ ನಿರ್ಮಾಣದ ಮುಖ್ಯ ಎಂಜಿನಿಯರ್ ಆಗಿದ್ದ. ಸೇತುವೆಯ ನಿರ್ಮಾಣದ ವೇಳೆ 11 ಮಂದಿ ಕಾರ್ಮಿಕರು ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದರು.
ಪ್ರತಿನಿತ್ಯ 1 ಲಕ್ಷ ವಾಹನ ಸಂಚಾರ:
1937ರ ಮೇ 27ರಂದು ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸಲಾಯಿತು. ಅಂದು 2 ಲಕ್ಷ ಜನರು ಸೇತುವೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಸಂಚರಿಸುವ ಮೂಲಕ ಸೇತುವೆಯನ್ನು ಅದ್ಧೂರಿಯಾಗಿ ಸೇತುವೆ ಉದ್ಘಾಟನೆಗೊಂಡಿತ್ತು. ಸೇತುವೆ 90 ಅಡಿಯಷ್ಟು ಅಗಲವಾಗಿದ್ದು, ಆರು ಪಥದ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಒಳಗೊಂಡಿದೆ. ಪ್ರತಿದಿ ಈ ಸೇತುವೆಯ ಮೇಲೆ 1,10,000 ವಾಹನಗಳು ಸಂಚರಿಸುತ್ತವೆ.
ಅಂದು ಈ ಸೇತುವೆ ನಿಮರ್ಾಣಕ್ಕೆ 210 ಕೋಟಿ ರೂ. (3.5 ಕೋಟಿ ಡಾಲರ್) ವೆಚ್ಚವಾಗಿತ್ತಂತೆ. ಒಂದು ವೇಳೆ ಇಂದು ಈ ಸೇತುವೆಯನ್ನು ನಿರ್ಮಿಸಬೇಕೆಂದರೆ 7,200 ಕೋಟಿ ರೂ. ವೆಚ್ಚವಾಗಲಿದೆ.
ಗೊಲ್ಡನ್ ಗೇಟ್ ಎಂದು ಏಕೆ ಕರೆಯುತ್ತಾರೆ?
1846ರಲ್ಲೇ ಯುಸ್ಆಮರ್ಿಯ ಲೆಫ್ಟನೆಂಟ್ ಜಾನ್.ಸಿ. ಫ್ರಿಮಾಂಟ್ ಈಗ ಬ್ರಿಡ್ಜ್ ಇರುವ ಜಾಗಕ್ಕೆ ಗೋಲ್ಡನ್ ಗೇಟ್ ಅಂತ ಕರೆದಿದ್ದ. ಪೆಸಿಫಿಕ್ ಸಾಗರದಿಂದ ಸ್ಯಾನ್ಫ್ರಾನ್ಸಿಸ್ಕೋ ಕೊಲ್ಲಿಗೆ ದ್ವಾರದಂತಿದ್ದ ಈ ಕಿರಿದಾದ ಜಲಸಂಧಿಯನ್ನು ನೋಡಿ ಲೆಫ್ಟನೆಂಟ್ ಫ್ರಿಮಾಂಟ್ ಗೋಲ್ಡನ್ ಗೇಟ್ ಎಂದು ಹೆಸರಿಟ್ಟಿದ್ದ. ಆ ಬಳಿಕ ಇಲ್ಲಿ ಸೇತುವೆ ನಿರ್ಮಾಣಗೊಂಡಾಗಲೂ ಗೋಲ್ಡನ್ ಗೇಟ್ ಎಂಬ ಹೆಸರೇ ಉಳಿದುಕೊಂಡಿತು. ಸೇತುವೆಗೆ ಗೋಲ್ಡನ್ ಗೇಟ್ ಎಂಬ ಹೆಸರಿದ್ದರೂ ಅದಕ್ಕೆ ಕಡು ಕಿತ್ತಳೆ ಬಣ್ಣವನ್ನು ಬಳಿಯಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವವರ ನೆಚ್ಚಿನ ತಾಣ:
ಗೋಲ್ಡನ್ ಗೇಟ್ ಸೇತುವೆ ಆತ್ಮಹತ್ಯೆ ಮಾಡಿಕೊಳ್ಳುವವರ ಇಷ್ಟದ ತಾಣ ಕೂಡ ಹೌದು. ಸಾವಿರಾರು ಮಂದಿ ಸೇತುವೆಯ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ಸೇತುವೆಯನ್ನು ಫೋಟೋಗ್ರಾಫರಗಳ ಸ್ವರ್ಗ ಎನಿಸಿಕೊಂಡಿದೆ. ಜಗತ್ತಿನ ಅತಿಹೆಚ್ಚು ಫೋಟೊಗಳನ್ನು ಈ ಸೇತುವೆಯ ಮೇಲೆ ನಿಂತು ತೆಗೆಯಲಾಗಿದೆ. ಈಗ ಸೇರತುವೆಯ ಉಸ್ತುವಾರಿಗೆಂದೇ 12 ಜನ ಕಮ್ಮಾರರು 38 ಮಂದಿ ಪೇಂಟರ್ಗಳು ನೇಮಿಸಲಾಗಿದೆ. ಅವರು ವರ್ಷವಿಡೀ ಸೇತುವೆಯ ನಟ್- ಬೋಲ್ಟ್ಗಳ ಕಾಳಜಿ ವಹಿಸುತ್ತಾರೆ.