ಸಾಂಚಿ ಸ್ತೂಪ ಭಾರತದ ಅತ್ಯಂತ ಪುರಾತನ ಕಲ್ಲಿನ ರಚನೆ ಎನಿಸಿಕೊಂಡಿವೆ. ಇದು ಗುಮ್ಮಟದ ಆಕಾರದಲ್ಲಿದೆ. ಇದರ ಕೇಂದ್ರ ಬಿಂದುವಿನಲ್ಲಿ ಇಟ್ಟಂಗಿಯಿಂದ ಮಾಡಲಾದ ಬುದ್ಧನ ಸ್ಮಾರಕವಿದೆ. ಸಾಮ್ರಾಟ ಅಶೋಕ ಚಕ್ರವತರ್ಿ ಕ್ರಿ.ಶ. ಪೂರ್ವ 3ನೇ ಶತಮಾನದಲ್ಲಿ ನಿರ್ಮಿಸಿದ ಎಂಬ ಪ್ರತೀತಿ ಇದೆ. ಗುಮ್ಮಟದ ಸುತ್ತಲೂ ಓಡಾಡಲು ಮಾರ್ಗವಿದ್ದು, ಮೇಲಕ್ಕೆ ತೆರಳಲು ಮೆಟ್ಟುಲುಗಳನ್ನು ಕೊರೆಯಲಾಗಿದೆ. ಬುದ್ಧನ ಅವಶೇಷಗಳನ್ನು ಇಡಲಾದ ಹಲವು ಕೋಣೆಗಳು ಸ್ತೂಪದಲ್ಲಿದೆ. ಸ್ತೂಪ 54 ಅಡಿ ಎತ್ತರವಿದೆ. ಬೌದ್ಧರ ಕಾಲದಲ್ಲಿ ನಿಮರ್ಮಾಣಗೊಂಡ ಕಟ್ಟಡಗಳಲ್ಲಿ ಸಾಂಚಿ ಸ್ತೂಪ ಅತಿ ಹಳೆಯ ಅವಶೇಷವಾಗಿ ಇಂದಿಗೂ ಉಳಿದುಕೊಂಡಿದೆ.
ಹಲವು ಶತಮಾನಗಳ ರಚನೆ:
ಸಾಂಚಿಯ ಬೌದ್ಧ ಸ್ಮಾರಕಗಳು ಮಧ್ಯಪ್ರದೇಶದ ರಾಯ್ಸೇನ್ ಜಿಲ್ಲೆಯಲ್ಲಿವೆ. ಸಾಂಚಿ ಎಂಬುದು ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಒಂದು ಹಳ್ಳಿ. ಸಾಂಚಿ ಹಲವಾರು ಬೌದ್ಧ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಕ್ರಿ.ಪೂ. ಮೂರನೇ ಶತಮಾನದಿಂದ 4ನೇ ಶತಮಾನದರೆಗಿನ ಸ್ತೂಪಗಳು, ಗುಡಿಗಳು, ಮಠಗಳು ಹಾಗೂ ಸ್ಥಂಬಳನ್ನು ಇಲ್ಲಿ ನಿರ್ಮಿಸಲಾಗಿದೆ. ಇದು ಇದು ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ.
600 ವರ್ಷ ಅಜ್ಞಾತ ವಾಸ:
ಆದರೆ, ಭಾರತದಲ್ಲಿ ಬೌದ್ಧ ಧರ್ಮ ಅವನತಿಯತ್ತ ಸಾಗಿದ ಬಳಿಕ ಈ ಸ್ತೂಪಗಳು ನಿಧಾನವಾಗಿ ಜನರ ಮನಸ್ಸಿನಿಂದ ಮರೆಯಾದವು. 1818ರಲ್ಲಿ ಜನರಲ್ಲಿ ಟೇಲರ್ ಎಂಬ ಬ್ರಿಟಿಷ್ ಅಧಿಕಾರಿ ಸಾಂಚಿಯಲ್ಲಿ ಬೌದ್ಧ ಸ್ತೂಪಗಳ ಇರುವಿಕೆಯನ್ನು ಪತ್ತೆ ಮಾಡಿದ. ಬಳಿಕ ಇಲ್ಲಿ ಉತ್ಖನನಗಳು ಆರಂಭವಾದವು. ಮಧ್ಯಕಾಲಿನ ಇತಿಹಾದಲ್ಲಿ ಭಾರತದ ಮೇಲೆ ಹಲವಾರು ದಾಳಿಗಳು ನಡೆದಿದ್ದರೂ, ಬೌದ್ಧ ಸ್ತೂಪಗಳು ಯಾವುದೇ ಹಾನಿಗೆ ಒಳಗಾಗದೇ ಇದ್ದ ಸ್ಥಿತಿಯಲ್ಲೇ ಇದ್ದವು. 600 ವರ್ಷಗಳ ಕಾಲ ಇಲ್ಲಿನ ಸ್ಮಾರಕಗಳು ಅಜ್ಞಾತವಾಗಿ ಇದ್ದಿದ್ದವು.
ಸ್ತೂಪದ ವಿಶೇಷತೆಗಳು:
ಗೋಪುರದ ಮಧ್ಯದಲ್ಲಿ ಮೂರು ಪದರದ ಕೊಡೆಯನ್ನು ಇಡಲಾಗಿದ್ದು ಇದನ್ನು ಛತ್ರ ಎಂದು ಕರೆಯಲಾಗಿದೆ. ಗುಮ್ಮಟ ಧರ್ಮದ ಸಂಕೇತವಾಗಿದೆ. ಇಲ್ಲಿನ ರಚನೆಗಳಿಗೆ ಮೌರ್ಯರ ಕಾಲದ ಬಣ್ಣವನ್ನು ಬಳಿಯಲಾಗಿದ್ದು, ಅವರು ಅಂದಿನ ಕಾಲದಲ್ಲಿ ಇವು ಗಾಜಿನಂತೆ ಹೊಳೆಯುತ್ತಿದ್ದವು. ಇದಕ್ಕೆ ಬಳಿಯಲಾದ ಕೆಂಪು ಬಣ್ಣಗಳು ಇಂದಿಗೂ ಕಾಣಬಹುದು. ಕ್ರಿ.ಶ 450ನೇ ಇಸವಿಯಲ್ಲಿ ಇಲ್ಲಿ ಕೊನೆಯ ಸ್ತೂಪವನ್ನು ನಿಮರ್ಾಣಮಾಡಲಾಗಿದೆ. ಸ್ತೂಪದ ಇನ್ನೊಂದು ವಿಶೇಷತೆ ಅಶೋಕ ಸ್ಥಂಭ. ಇದರಲ್ಲಿರುವ ನಾಲ್ಕುಮುಖದ ಸಿಂಹದ ಗುರುತನ್ನು ರಾಷ್ಟ್ರೀಯ ಲಾಂಛನವನ್ನಾಗಿ ಸ್ವೀಕರಿಸಲಾಗಿದೆ.
ನಾಲ್ಕು ದಿಕ್ಕಿಗೆ ಹೆಬ್ಬಾಗಿಲು:
ಸ್ತೂಪದ ನಾಲ್ಕೂ ಹೆಬ್ಬಾಗಿಲುಗಳಲ್ಲಿ ಪ್ರತಿ ಸ್ಥಂಬದ ಮೇಲೂ ನಾಲ್ಕು ಜೊತೆ ಸಿಂಹಗಳಿವೆ. ಆನೆಗಳು ಅವುಗಳನ್ನು ಹೊತ್ತುನಿಂತ ರೀತಿಯಲ್ಲಿ ಕೆತ್ತಲಾಗಿದೆ. ಸಂಚಿಯ ನಾಲ್ಕೂ ಪ್ರವೇಶದ್ವಾರಗಳು ಕ್ರಿ.ಪೂ. 1ನೇ ಶತಮಾನಕ್ಕೆ ಸೇರಿವೆ. ದಕ್ಷಿಣ ದ್ವಾರವು ಪ್ರಧಾನವಾಗಿದ್ದು, ಇದನ್ನು ಮೊದಲು ಕಟ್ಟಲಾಯಿತು. ತದನಂತರ ಉತ್ತರ ಪಶ್ಚಿಮ ಹಾಗೂ ಪೂರ್ವ ಬಾಗಿಲನ್ನು ನಿರ್ಮಾಣ ಮಾಡಲಾಗಿದೆ. ದಕ್ಷಿಣ ದ್ವಾರದಲ್ಲಿ ಗೌತಮ ಬುದ್ಧನ ಜನನ ಮತ್ತು ಬೌದ್ಧ ಧಮರ್ೀಯನಾದ ಸಾಮ್ರಾಟ್ ಅಶೋಕನ ಜೀವನವನ್ನು ಕೆತ್ತಲಾಗಿದೆ. ಅಲ್ಲದೆ, ಕಲಾತ್ಮಕ ಕೆತ್ತನೆಗಳನ್ನು ಕಾಣಬಹುದು. ಇಲ್ಲಿ ಪ್ರತಿಯೊಂದು ರಚನೆಗಳಿಗೂ ಒಂದೊಂದು ಅರ್ಥವಿದೆ.
ಗುಪ್ತರ ದೇವಸ್ಥಾನ:
ಸಾಂಚಿಯಲ್ಲಿರುವ ಪ್ರಮುಖವಾದ ಇನ್ನೊಂದು ಸ್ಥಳ ಗುಪ್ತರ ದೇವಸ್ಥಾನ. ಗುಪ್ತರ ವಾಸ್ತುಶಿಲ್ಪಕ್ಕೆ ಇದೊಂದು ಉದಾಹರಣೆಯಾಗಿ ನಿಂತಿದೆ. ಸಾಂಚಿ ಬೆಟ್ಟದ ಮಧ್ಯ ಭಾಗದಲ್ಲಿರುವ ಇದು ಕ್ರಿ.ಶ 5ನೇ ಶತಮಾದಲ್ಲಿ ನಿಮರ್ಾಣಗೊಂಡಿದೆ ಎನ್ನಲಾಗಿದೆ.