ಜಗತ್ತಿನಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಏಕೈಕ ನಗರ ಅಥೆನ್ಸ್. ಈ ನಗರದ ಮೂಲವನ್ನು ಅರಸುತ್ತಾ ಹೊರಟರೆ ಅದು ನಮ್ಮನ್ನು ಕ್ರಿಸ್ತ ಪೂರ್ವ 3000 ವರ್ಷಗಳ ಹಿಂದೆಕ್ಕೆ ಒಯ್ಯುತ್ತದೆ. ಅಥೆನ್ಸ್ ಅನ್ನು ಜಗತ್ತಿನ ನಾಗರಿಕತೆಯ ಉಗಮಸ್ಥಾನ ಎಂತಲೂ ಕರೆಯುತ್ತಾರೆ.
ಪ್ರಜಾಪ್ರಭುತ್ವ, ಪಾಶ್ಚಾತ್ಯ ತತ್ವಶಾಸ್ತ್ರ, ಒಲಿಂಪಿಕ್ಸ್ ಕ್ರೀಡಾಕೂಟ, ರಾಜ್ಯಶಾಸ್ತ್ರ, ಪಾಶ್ಚಾತ್ಯ ಸಾಹಿತ್ಯ, ಥಿಯೇಟರ್ (ರಂಗಭೂಮಿ) ಇವೆಲ್ಲವೂ ಜನ್ಮತಳೆದಿದ್ದು ಅಥೆನ್ಸ್ ನಲ್ಲಿ. ಸಾಕ್ರೆಟಿಸ್ ಅರಿಸ್ಟಾಟಲ್, ಪ್ಲೆಟೋ, ಪೆರಿಕ್ಲಸ್ ಮುಂತಾದ ತತ್ವಜ್ಞಾನಿಗಳು ಮತ್ತು ಅಲೆಕ್ಸಾಂಡರ್ ದಿ ಗ್ರೇಟ್ ಇದೇ ಭವ್ಯ ಸಾಮ್ರಾಜ್ಯಕ್ಕೆ ಸೇರಿದವರು.
ಅಥೆನಾ ದೇವತೆಯ ಹೆಸರು:
ಅಥೆನಾ ಅಥೆನ್ಸ್ನ ಜ್ಞಾನದ ದೇವತೆಯಾಗಿತ್ತು. ಹೀಗಾಗಿ ಅಥೆನ್ಸ್ಗೆ ಆಕೆಯ ಹೆಸರನ್ನು ಇಡಲಾಗಿದೆ. ಆಕ್ರೋಪೊಲೀಸ್ ಬೆಟ್ಟದ ಮೇಲಿರುವ ಪಾರ್ಥೆನಾನ್ ದೇವಾಲಯ ಅಥೆನಾ ದೇವತೆಯನ್ನು ವರ್ಣಿಸುತ್ತದೆ. ಅಲೆಕ್ಸಾಂಡ್ರ್ನ ಆಡಳಿತ ಕಾಲದಲ್ಲಿ ಗ್ರೀಕ್ ನಾಗಿರಕತೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆತನ ಸಾಮ್ರಾಜ್ಯ ಯುರೋಪಿನ ಸಂಪೂರ್ಣ ಭಾಗಗಳನ್ನು ಮತ್ತು ಪಶ್ಚಿಮ ಏಷ್ಯಾವನ್ನು ಒಳಗೊಂಡಿತ್ತು. ಅಥೆನ್ಸ್ ಮತ್ತು ಸ್ಪಾರ್ಟಾ ಪುರಾತನ ಗ್ರೀಕ್ ನಾಗರಿಕತೆಯ ಎರಡು ಪ್ರಮುಖ ನಗರ ರಾಜ್ಯಗಳಾಗಿದ್ದು. ಅವೆರಡೂ ಪರಸ್ಪರ ವೈರಿಗಳಾಗಿ ಕಾದಾಡುತ್ತಿದ್ದವು. ಎರಡೂ ರಾಜ್ಯಗಳ ಸಂಸ್ಕೃತಿ ಭಿನ್ನವಾಗಿತ್ತು. ಸ್ಪಾರ್ಟಾ ಸಂಪೂರ್ಣವಾಗಿ ಯುದ್ಧಕ್ಕೆ ಮಹತ್ವ ನೀಡಿದರೆ, ಅಥೆನ್ಸ್ ಕಲೆ ಮತ್ತು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಿತ್ತು.
ನ್ಯಾಯ ವ್ಯವಸ್ಥೆ:
ಸುಮಾರು 4000 ವರ್ಷಗಳ ಹಿಂದೆ (ಕ್ರಿಸ್ತ ಪೂರ್ವ 1600) ಪುರಾತನ ಗ್ರೀಕ್ ನಾಗರಿಕತೆ ಆರಂಭವಾಯಿತು. ಗ್ರೀಕ್ ಸಾಮ್ರಾಜ್ಯ ಗ್ರೀಸ್ನಿಂದ್ ಯುರೋಪ್ವರೆಗೆ ಹಬ್ಬಿಕೊಂಡಿತ್ತು. ಇಷ್ಟೊಂದು ವಿಶಾಲ ಸಾಮ್ರಾಜ್ಯವನ್ನು ಸಣ್ಣಪುಟ್ಟ ನಗರ- ರಾಜ್ಯಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ನಗರಗಳು ತನ್ನದೇ ಆದ ಕಾನೂನು ಮತ್ತು ನಿಯಮಗಳನ್ನು ಹೊಂದಿತ್ತು.
ಅಥೆನ್ಸ್ನಲ್ಲಿ ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ನೀಡಲಾಗುತ್ತಿತ್ತು. 500 ಮಂದಿ ಜ್ಯೂರಿಗಳು ಸೇರಿ ಅಪರಾಧಿಗೆ ಶಿಕ್ಷೆ ಪ್ರಮಾಣವನ್ನು ತೀಮರ್ಾನಿಸುತ್ತಿದ್ದರು. ಜನರು ತೆರಿಗೆಗಳನ್ನು ಪಾವತಿಸುತ್ತಿದ್ದರು. ಈ ಹಣವನ್ನು ಉತ್ಸವಗಳ ಆಚರಣೆ ಮತ್ತು ನಗರಗಳ ನಿಮರ್ಾಣಕ್ಕೆ ಬಳಸುತ್ತಿದ್ದರು.
ಒಲಿಂಪಿಕ್ ಕ್ರೀಡಾಕೂಟ:
ಕ್ರಿಸ್ತ ಪೂರ್ವ 776ರಲ್ಲಿ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಅಥೆನ್ಸ್ನಲ್ಲಿ ಆಯೋಜಿಸಲಾಗಿತ್ತು. ಕುಸ್ತಿ, ಬಾಕ್ಸಿಂಗ್, ಉದ್ದಜಿಗಿತ, ಭರ್ಚಿ ಎಸೆತ, ಚಕ್ರ ಎಸೆತ, ರಥ ಓಡಿಸುವ ಸ್ಪರ್ಧಿಗಳು ಇದ್ದವು. ಕ್ರೀಡೆಯಲ್ಲಿ ಗೆದ್ದವರಿಗೆ ಆಲೀವ್ ಎಲೆಗಳನ್ನು ನೀಡಿ ಸನ್ಮಾನಿಸಲಾಗುತ್ತಿತ್ತು. ಥಿಯೇಟರ್ಗಳಲ್ಲಿ ಉತ್ತಮ ಆಸನ ವ್ಯವಸ್ಥೆ ಇರುತ್ತಿತ್ತು.
ಥಿಯೇಟರ್ಗಳು:
ಅಥೆನ್ಸ್ ಥಿಯೇಟರ್ಗಳಿಗೆ ಹೆಸರುವಾಸಿಯಾಗಿತ್ತು. ಅಲ್ಲಿ ಸುಮಾರು 148 ಥಿಯೇಟರ್ಗಳಿದ್ದವು. ಓಡ್ ಆಫ್ ಹಿರೋಡ್ ಅಟ್ಟಿಕಸ್ ಅಥೆನ್ಸ್ನ ಪ್ರಮುಖ ಥಿಯೇಟರ್ ಆಗಿತ್ತು. ಇಲ್ಲಿ ಮೇನಿಂದ ಅಕ್ಟೋಬರ್ ವರೆಗೆ ಉತ್ಸವ ನಡೆಯುತ್ತಿತ್ತು. ಥಿಯೇಟರ್ನಲ್ಲಿ ಪುರುಷರು ಮಾತ್ರ ಮುಖವಾಡ ಧರಿಸಿ ಪಾತ್ರಗಳ ನಿರೂಪಣೆ ಮಾಡುತ್ತಿದ್ದರು.
ಪುರಾತನ ಗ್ರೀಕರು ಉದ್ದನೆಯ ನಿಲುವಂಗಿಯನ್ನು ಧರಿಸುತ್ತಿದ್ದರು. ವಸ್ತ್ರಗಳನ್ನು ಹತ್ತಿಯಿಂದ ಮಾಡಲಾಗುತ್ತಿತ್ತು.
ಗ್ರೀಕರು ಕೆಲವೊಂದು ಆಹಾರದ ಬಗ್ಗೆ ಮೂಢನಂಬಿಕೆಯನ್ನು ತಳೆದಿದ್ದರು. ಕೆಲವರು ಬೀನ್ಸ್ಗಳನ್ನು ತಿನ್ನುತ್ತಿರಲಿಲ್ಲ. ಸಾವನ್ನಪ್ಪಿದವರ ಆತ್ಮಗಳು ಬೀನ್ಸ್ನಲ್ಲಿ ಇರುತ್ತವೆ ಎನ್ನುವ ನಂಬಿಕೆ ಅವರದ್ದಾಗಿತ್ತು.
ಪ್ರವಾಸಿ ತಾಣ:
ಇಂದು ಅಥೆನ್ಸ್ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇಲ್ಲಗೆ ಪ್ರತಿವರ್ಷ ಸುಮಾರು 1.7 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ.